ಕಲ್ಲಿದ್ದಲು ಸಚಿವಾಲಯ
azadi ka amrit mahotsav

"ಎ.ಕೆ.ಎ.ಎಂ. ಐಕಾನಿಕ್ ವೀಕ್" ಆಚರಣೆಗಳ ಭಾಗವಾಗಿ "ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಪರಿಸರ ಮತ್ತು ಸಾಮಾಜಿಕ ಸುಸ್ಥಿರತೆ" ಎಂಬ ವಿಷಯದಲ್ಲಿ ಕೇಂದ್ರ ಕಲ್ಲಿದ್ದಲು ಸಚಿವಾಲಯವು ಚರ್ಚೆಯನ್ನು ಆಯೋಜಿಸುತ್ತಿದೆ

Posted On: 08 MAR 2022 4:46PM by PIB Bengaluru

ಸ್ವಾತಂತ್ರ್ಯದ 75 ವರ್ಷಗಳನ್ನು ಆಚರಿಸಲು ಮತ್ತು ಸ್ಮರಣಾರ್ಥವಾಗಿ ಮತ್ತು ಭಾರತವು ಅಮೃತ ವರ್ಷದ ಕಾಲಘಟ್ಟವನ್ನು ಪ್ರವೇಶಿಸುತ್ತಿರುವ ಸಂದರ್ಭದಲ್ಲಿ “ಆಜಾದಿ ಕಾ ಅಮೃತ್ ಮಹೋತ್ಸವ” ಇದರ ಸಾಂಪ್ರದಾಯಿಕ ವಾರದ ಆಚರಣೆಯ ಭಾಗವಾಗಿ ಕಲ್ಲಿದ್ದಲು ಸಚಿವಾಲಯವು 7 ರಿಂದ 11 ನೇ ಮಾರ್ಚ್ 2022 ರವರೆಗೆ ದೇಶಾದ್ಯಂತ ವಿಶೇಷ ಕಾರ್ಯಕ್ರಮಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

ಐಡಿಯಾಸ್ @75 ಎಂಬ ಥೀಮ್ ನೊಂದಿಗೆ ಐಕಾನಿಕ್ ವೀಕ್ನ ಆಚರಣೆಯು ಇಂದು ಎರಡನೇ ದಿನಕ್ಕೆ ಕಾಲಿಟ್ಟಿವೆ. ಈ ಸಂದರ್ಭದಲ್ಲಿ ಡಾ. ಅಶೋಕ್ ಜೈನ್, ಸಲಹೆಗಾರ (ಜಿ.ಹೆಚ್.ಡಿ), ಎನ್.ಹೆಚ್.ಎ.ಐ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಇವರು ವರ್ಚುವಲ್ ಮೋಡ್ ಮೂಲಕ "ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಪರಿಸರ ಮತ್ತು ಸಾಮಾಜಿಕ ಸುಸ್ಥಿರತೆ" ಕುರಿತು ಮಾತನಾಡಿದರು. ಕಾರ್ಯದರ್ಶಿ, ಕೇಂದ್ರ ಕಲ್ಲಿದ್ದಲು ಸಚಿವಾಲಯ ಮತ್ತು ಸಚಿವಾಲಯದ ಹಿರಿಯ ಅಧಕಾರಿಗಳು ಹಾಗೂ ಸಿ.ಪಿ.ಎಸ್.ಯು. ಗಳ ಇತರ ಹಿರಿಯ ಅಧಿಕಾರಿಗಳು ವರ್ಚುವಲ್ ಮೋಡ್ ಮೂಲಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಇಂದು, ದಿನದ ಎರಡನೇ ಹಂತದ ಕಾರ್ಯಕ್ರಮದಲ್ಲಿ, ಐಡಿಯಾಸ್ @75 ಎಂಬ ಥೀಮ್ ಕುರಿತು ಘೋಷವಾಕ್ಯ ಬರವಣಿಗೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು, ಹಾಗೂ ಈ ಕಾರ್ಯಕ್ರಮದಲ್ಲಿ ಸಚಿವಾಲಯದ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ, ವಿವಿಧ ಕಾರ್ಯಕ್ರಮಗಳು 11ನೇ ಮಾರ್ಚ್ 2022 ರವರೆಗೆ ಮುಂದುವರಿಯುತ್ತದೆ ಮತ್ತು ವಾರ ಪೂರ್ತಿ ವಿವಿಧ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳ ಸರಣಿಯನ್ನು ಯೋಜಿಸಲಾಗಿದೆ.

75 ವರ್ಷಗಳ ಪ್ರಗತಿಪರ ಭಾರತ ಮತ್ತು ಅದರ ಸೊಗಸಾದ ಇತಿಹಾಸವನ್ನು ಗುರುತಿಸಲು ಭಾರತ ಸರ್ಕಾರವು 75 ವರ್ಷಗಳ ಭಾರತೀಯ ಸ್ವಾತಂತ್ರ್ಯ "ಆಜಾದಿ ಕಾ ಅಮೃತ್ ಮಹೋತ್ಸವ" ವನ್ನು ಆಚರಿಸುತ್ತಿದೆ. ಕಳೆದ ವರ್ಷ, ಮಾರ್ಚ್ 12, 2021 ರಂದು ಎ.ಕೆ.ಎ.ಎಂ. ನ ವಿವಿಧ ಕಾರ್ಯಕ್ರಮಗಳ ಅಧಿಕೃತ ಪ್ರಯಾಣ ಪ್ರಾರಂಭವಾಯಿತು, ಹಾಗೂ ಇದು ನಮ್ಮ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವಕ್ಕೆ 75 ವಾರಗಳ ಕಾರ್ಯಕ್ರಮಗಳ ಕೌಂಟ್ಡೌನ್ ಅನ್ನು ಕೂಡಾ ಜೊತೆಗೆ ಪ್ರಾರಂಭಿಸಿತು ಮತ್ತು 15 ಆಗಸ್ಟ್ 2023 ರಂದು ಈ ಕಾರ್ಯಕ್ರಮಗಳು ಕೊನೆಗೊಳ್ಳುತ್ತವೆ.

***


(Release ID: 1804141)
Read this release in: English , Urdu , Hindi