ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಇತ್ತೀಚಿನ ಡೇಲೈಟ್ ಹಾರ್ವೆಸ್ಟಿಂಗ್ ತಂತ್ರಜ್ಞಾನದಲ್ಲಿ ವಿಶಿಷ್ಟವಾದ, ಬಹುಶಃ ಭಾರತದ ಮೊದಲ ಸ್ಟಾರ್ಟ್-ಅಪ್ ಅನ್ನು ಉತ್ತೇಜಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ನಿರ್ಧರಿಸಿದೆ : ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್ 


ಇಂಗಾಲದ ಪ್ರಮಾಣವನ್ನು   ಕಡಿಮೆ ಮಾಡಲು ಮತ್ತು ಕಟ್ಟಡದ ಶಕ್ತಿಯ ದಕ್ಷತೆಯನ್ನು ಸುಧಾರಿಸಲು  ವಿಜ್ಞಾನ ಮತ್ತು ತಂತ್ತಜ್ಞಾನ ಇಲಾಖೆಯು ಡೇಲೈಟ್ ಹಾರ್ವೆಸ್ಟಿಂಗ್ ತಂತ್ರಜ್ಞಾನದಲ್ಲಿ  ನವೋದ್ಯಮವನ್ನು ಉತ್ತೇಜಿಸುತ್ತದೆ

"ಸ್ಕೈ ಶೇಡ್‌ ಡೇಲೈಟ್ಸ್‌ ಪ್ರೈವೇಟ್‌ ಲಿಮಿಟೆಡ್ " ಹೈದರಾಬಾದ್, ಡಾ ಜಿತೇಂದ್ರ ಸಿಂಗ್ ಅವರ ಉಪಸ್ಥಿತಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಶಾಸನಬದ್ಧ ಸಂಸ್ಥೆಯಾದ ತಂತ್ರಜ್ಞಾನ ಅಭಿವೃದ್ಧಿ ಮಂಡಳಿಯೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ  ಸಹಿ ಹಾಕಿತು.

24x7 ಆಧಾರದ ಮೇಲೆ ನೆಲಮಾಳಿಗೆಯ ದೀಪದ ವ್ಯವಸ್ಥೆಗಾಗಿ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಸ್ಕೈಶೇಡ್‌ಗೆ 5 ಕೋಟಿ ರೂಪಾಯಿಗಳನ್ನು ನೀಡುತ್ತದೆ ಎಂದು ಸಚಿವರು ಹೇಳಿದರು

Posted On: 03 MAR 2022 5:23PM by PIB Bengaluru

ವಿಜ್ಞಾನ ಮತ್ತು ತಂತ್ರಜ್ಞಾನ; ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ಭೂ ವಿಜ್ಞಾನ;   ಪಿಎಂಒ ರಾಜ್ಯ ಸಚಿವ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿಗಳು, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಸಚಿವರಾದ  ಡಾ ಜಿತೇಂದ್ರ ಸಿಂಗ್ ಅವರು ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಇಂಧನ ದಕ್ಷತೆಯನ್ನು ಸುಧಾರಿಸಲು ಇತ್ತೀಚಿನ ಡೇಲೈಟ್ ಹಾರ್ವೆಸ್ಟಿಂಗ್ ತಂತ್ರಜ್ಞಾನದಲ್ಲಿ ವಿಶಿಷ್ಟವಾದ ನವೋದ್ಯಮವನ್ನು ಉತ್ತೇಜಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ನಿರ್ಧರಿಸಿದೆ ಎಂದು ಹೇಳಿದರು.

ಡೇಲೈಟ್ ಹಾರ್ವೆಸ್ಟಿಂಗ್ ತಂತ್ರಜ್ಞಾನಕ್ಕಾಗಿ  ಭಾರತದಲ್ಲಿನ ಏಕೈಕ ನವೋದ್ಯಮ  ಕಂಪನಿ ಹೈದರಾಬಾದಿನ “ಸ್ಕೈಶೇಡ್ ಡೇಲೈಟ್ಸ್ ಪ್ರೈವೇಟ್ ಲಿಮಿಟೆಡ್”, ಡಾ ಜಿತೇಂದ್ರ ಸಿಂಗ್ ಅವರ ಉಪಸ್ಥಿತಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಶಾಸನಬದ್ಧ ಸಂಸ್ಥೆಯಾದ ತಂತ್ರಜ್ಞಾನ ಅಭಿವೃದ್ಧಿ ಮಂಡಳಿಯೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿತು.

 
24x7 ಆಧಾರದ ಮೇಲೆ ನೆಲಮಾಳಿಗೆಯ ನೆಲಮಾಳಿಗೆಯ ದೀಪದ ವ್ಯವಸ್ಥೆಗಾಗಿ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಸ್ಕೈಶೇಡ್ ಕಂಪನಿಗೆ ತಂತ್ರಜ್ಞಾನ ಅಭಿವೃದ್ಧಿ ಮಂಡಳಿಯು (ಟಿಡಿಬಿ) 10 ಕೋಟಿಯ ಯೋಜನೆಯಲ್ಲಿ 5 ಕೋಟಿ ರೂಪಾಯಿಗಳನ್ನು ನೀಡುತ್ತದೆ ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು. ಸೌರ ಉಷ್ಣ ತಂತ್ರಜ್ಞಾನಗಳು ಮತ್ತು ಕಟ್ಟಡಗಳ ಆವರಣಗಳಿಗೆ ದೊಡ್ಡ ಸ್ಕೈಲೈಟ್ ಗುಮ್ಮಟಗಳ ವಿನ್ಯಾಸ ಮತ್ತು ನಿರ್ಮಾಣ ಕಾರ್ಯಾಚರಣೆಗಳಲ್ಲಿ ಕಂಪನಿಯು ತೊಡಗಿಸಿಕೊಂಡಿದೆ ಎಂದು ಅವರು ಹೇಳಿದರು.  ಈ ನವೋದ್ಯಮವು ಈಗ ಮಾನವ ಕೇಂದ್ರಿತ-ಹವಾಮಾನ ಹೊಂದಾಣಿಕೆಯ ಕಟ್ಟಡದ ಮುಂಭಾಗಗಳು ಮತ್ತು ಸೆಂಟ್ರಲ್ ಇಂಟಿಗ್ರೇಟೆಡ್ ಡೇಲೈಟಿಂಗ್ ಸಿಸ್ಟಮ್ ಎಂದು ಹೆಸರಿಸಿದ ಎರಡು ನವೀನ ವ್ಯವಸ್ಥೆಗಳನ್ನು ಹೊರತಂದಿದೆ ಎಂದು  ಹೇಳಿದರು. ಈ ಎರಡು ವ್ಯವಸ್ಥೆಗಳು ಹಗಲಿನ ಬೆಳಕಿಗೆ ಹೊಸ ವ್ಯಾಪ್ತಿಯನ್ನು ನೀಡುತ್ತವೆ ಮತ್ತು ಈ ಉತ್ಪನ್ನಗಳು ಸುಲಭವಾಗಿ ಕೈಗೆಟುಕುವ ಬೆಲೆಗೆ, ಹೊಂದಿಕೊಳ್ಳುವ ಮತ್ತು ಮಿತವ್ಯಯವಾಗಿವೆ ಎಂದು ಹೇಳಿದರು.

 ಡಾ ಜಿತೇಂದ್ರ ಸಿಂಗ್, ಹಗಲಿನ ಬೆಳಕು ಮೂಲತಃ ಕೋಣೆಯೊಳಗೆ ನೈಸರ್ಗಿಕ ಸೂರ್ಯನ ಬೆಳಕನ್ನು ತರುತ್ತದೆ. ಸೌರ ಶಕ್ತಿಯು  ಗೋಚರ ಬೆಳಕಿನಂತೆ 45% ಶಕ್ತಿಯನ್ನು ಹೊಂದಿದೆ ಮತ್ತು ಇದನ್ನು ದಿನಕ್ಕೆ ಸುಮಾರು 9-11 ಗಂಟೆಗಳ ಕಾಲ ಕಟ್ಟಡದ ಬೆಳಕನ್ನು ಕೊಯ್ಲು ಮಾಡಲು ಬಳಸಬಹುದು ಎಂದು ಅವರು ಹೇಳಿದರು. ಬಳಸಿದ ತಂತ್ರಜ್ಞಾನವು ಸಂಪೂರ್ಣವಾಗಿ ಸ್ಥಳೀಯವಾಗಿದೆ, ಆರ್ಥಿಕವಾಗಿ ಲಾಭದಾಯಕವಾಗಿದೆ ಮತ್ತು ವ್ಯವಸ್ಥೆಗೊಳಿಸುವುದು ಸುಲಭವಾಗಿದೆ ಮತ್ತು ದೀರ್ಘಾಕಾಲದವರೆಗೆಗೆ ಕನಿಷ್ಠ ನಿರ್ವಹಣೆಯ ಅಗತ್ಯವಿದೆ ಎಂದು ಸಚಿವರು ಹೇಳಿದರು. ಇದಲ್ಲದೆ, ಪ್ರಸ್ತಾವಿತ ತಂತ್ರಜ್ಞಾನಗಳು, ಕಟ್ಟಡಕ್ಕೆ ಹೆಚ್ಚಿನ ಪ್ರಮಾಣದ ಸೂರ್ಯನ ಬೆಳಕಿನ ಶೇಖರಣೆ ಮತ್ತು ಕಟ್ಟಡದ ದೀಪಗಳ ವ್ಯವಸ್ಥೆಗೆ ಲಭ್ಯವಾಗುವಂತೆ ಮಾಡುತ್ತದೆ, ಇದು ದೀಪಗಳ ವಿದ್ಯುತ್ ಶಕ್ತಿಯ ಬಳಕೆಯನ್ನು 70-80% ರಷ್ಟು ಕಡಿಮೆ ಮಾಡುತ್ತದೆ, ಜೊತೆಗೆ ಹವಾನಿಯಂತ್ರಣ (ಕೂಲಿಂಗ್ ಲೋಡ್) ಬಳಕೆಯನ್ನು ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದರು.

ಸ್ಕೈಶೇಡ್ ಡೇಲೈಟ್ಸ್ ಪ್ರೈವೇಟ್ ಲಿಮಿಟೆಡ್ 2014 ರಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ ಮತ್ತು ಸರ್ಕಾರಿ ಸಂಸ್ಥೆಗಳು, ಸರ್ಕಾರದ ಉದ್ದಿಮೆಗಳು, ಕಾರ್ಪೊರೇಟ್‌ಗಳಿಂದ ಹಿಡಿದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ-ಚೆನ್ನೈ, ತೆಲಂಗಾಣ ಸೆಕ್ರೆಟರಿಯೇಟ್, ಪ್ರಧಾನಮಂತ್ರಿಯವರ ಕಚೇರಿ ಸೇರಿದಂತೆ  ಎನ್‌ಟಿಪಿಸಿ, ಅಮೆಜಾನ್, ಕ್ಯಾಟರ್ಪಿಲ್ಲರ್, ಐಕೆಇಎ, ಮಹೀಂದ್ರಾ, ಟಾಟಾ ಮೋಟಾರ್ಸ್ ಹೀರೋ ಮೋಟಾರ್ಸ್,  ಕೆಲವು ಧಾರ್ಮಿಕ ಕಟ್ಟಡಗಳಿಗೆ ದೇವಸ್ಥಾನ, ಶ್ರೀ ರಂಗನಾಥ ಸ್ವಾಮಿ ದೇವಾಲಯ, ಶಿವ ದೇವಾಲಯ, ಬೋಹ್ರಾ ಮಸೀದಿ ಇತ್ಯಾದಿಗಳಿಗೆ ವಿವಿಧ ಶ್ರೇಣಿಯ ಗ್ರಾಹಕರಿಗೆ ಹಗಲಿನ ಬೆಳಕಿನ ವ್ಯವಸ್ಥೆಯನ್ನು  ನೀಡಿದೆ ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು.   ಕಂಪನಿಯವರು ಅಯೋಧ್ಯೆ ದೇವಾಲಯದಲ್ಲೂ ಹಗಲು ಬೆಳಕಿನ ವ್ಯವಸ್ಥೆಯನ್ನು ಯೋಜಿಸಿದ್ದಾರೆ ಎಂದು ಹೇಳಿದರು.
 
ತಂತ್ರಜ್ಞಾನ ಅಭಿವೃದ್ಧಿ ಮಂಡಳಿಯು (ಟಿಡಿಬಿ), ಐಪಿ ಮತ್ತು ಟಿಎಎಫ್‌ಎಸ್ ಕಾರ್ಯದರ್ಶಿಯವರಾದ  ರಾಜೇಶ್ ಕುಮಾರ್ ಪಾಠಕ್ ಮಾತನಾಡಿ, “ಬೆಳಕು ನಮ್ಮ ದೈನಂದಿನ ಜೀವನದ ಮೂಲಭೂತ ಅವಶ್ಯಕತೆಯಾಗಿದೆ. ಹಗಲು ಬೆಳಕು ಸಾರ್ವತ್ರಿಕವಾಗಿ ಲಭ್ಯವಿದೆ ಮತ್ತು ಇದು ಶಕ್ತಿಯ ಅತ್ಯಂತ ಶುದ್ಧ ಮತ್ತು ಮಿತವ್ಯಯದ ಮೂಲವಾಗಿದೆ. ಹಗಲು ಬೆಳಕಿನ ಕೊಯ್ಲು ತಂತ್ರಜ್ಞಾನವನ್ನು ಬಳಸಿಕೊಂಡು ಹಗಲಿನಲ್ಲಿ ನಮ್ಮ ಶಕ್ತಿಯ ಅಗತ್ಯವನ್ನು ಪೂರೈಸುವುದು "ಪಂಚಾಮೃತ" ದ ಐದು ಅಮೃತಗಳ ಬದ್ಧತೆಗಳಲ್ಲಿ ಒಂದನ್ನು ಪೂರೈಸಲು, ಅಂದರೆ 2070 ರ ವೇಳೆಗೆ ಭಾರತವನ್ನು ನಿವ್ವಳ ಶೂನ್ಯ ತ್ಯಾಜ್ಯ ಹೊರಸೂಸುವಿಕೆ ದೇಶವನ್ನಾಗಿ ಮಾಡಲು ಅಪಾರ ಕೊಡುಗೆ ನೀಡುತ್ತದೆ. ಇದು ಕ್ರಾಂತಿಕಾರಿ ಬದಲಾವಣೆ ತರಬಹುದು ಮತ್ತು ಮುಂಬರುವ ವರ್ಷಗಳಲ್ಲಿ ಪರಿಸರ ಪ್ರಜ್ಞೆಯ ಜೀವನ ಶೈಲಿಗೆ ಸಾಮೂಹಿಕ ಸಂಘಟಿತ ಪ್ರಯತ್ನವಾಗಬಹುದು.

ಇಂಗಾಲದ ಹೊರಸೂಸುವ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಕಟ್ಟಡದ ಶಕ್ತಿಯ ದಕ್ಷತೆಯನ್ನು ಸುಧಾರಿಸಲು ತಮ್ಮ ತಂತ್ರಜ್ಞಾನಗಳನ್ನು ಹೊಂದಿದ್ದರೂ ಕಂಪನಿಯು ಹಗಲು ಬೆಳಕಿನ ಕೊಯ್ಲಿಗೆ ಸಂಪೂರ್ಣ ಪರಿಹಾರವನ್ನು ಪ್ರಸ್ತಾಪಿಸಿದೆ. ಕಂಪನಿಯು ಹಸಿರು ಮತ್ತು ನಿವ್ವಳ ತಾಜ್ಯ ಶೂನ್ಯ ಕಟ್ಟಡಗಳನ್ನು ರಚಿಸಲು ಮತ್ತು ಹವಾಮಾನ ಬದಲಾವಣೆಯ ರಾಷ್ಟ್ರೀಯ ಕ್ರಿಯಾ ಯೋಜನೆ (ಎನ್‌ಎಪಿಸಿಸಿ) ಅಡಿಯಲ್ಲಿ ರಾಷ್ಟ್ರೀಯ ಕಾರ್ಯಾಚರಣೆಗಳಲ್ಲಿ ಭಾಗವಹಿಸುವ ಮತ್ತು ಕೊಡುಗೆ ನೀಡುವ ಗುರಿಯನ್ನು ಹೊಂದಿದೆ.

 ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ವಿಶ್ವದ ಅತಿದೊಡ್ಡ ವಿಸ್ತರಣಾ ಯೋಜನೆಯೊಂದಿಗೆ, ಭಾರತವು ಸುಸ್ಥಿರ ಇಂಧನ ಪರಿಹಾರಗಳಿಗೆ ಸಾರ್ವತ್ರಿಕವಾಗಿ ದೊರಕುವಿಕೆಯನ್ನು ಮತ್ತು ಗಮನಾರ್ಹ ಆರ್ಥಿಕ, ಪರಿಸರ ಮತ್ತು ಸಾಮಾಜಿಕ ಪ್ರಭಾವದೊಂದಿಗೆ ಕಡಿಮೆ ಇಂಗಾಲವಿರುವ ಭವಿಷ್ಯವನ್ನು ಸಕ್ರಿಯಗೊಳಿಸುವ ಗುರಿಯನ್ನು ಹೊಂದಿದೆ. 2022 ರ ಅಂತ್ಯದ ವೇಳೆಗೆ ನವೀಕರಿಸಬಹುದಾದ ಇಂಧನ ಮೂಲಗಳಿಂದ ತನ್ನ ಶಕ್ತಿಯ ಅಗತ್ಯದ 175GW ಸಾಮರ್ಥ್ಯವನ್ನು ಸಾಧಿಸಲು ದೇಶವು ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ ಮತ್ತು 2030 ರ ವೇಳೆಗೆ 500GW ಅನ್ನು ಸಾಧಿಸಲು ಬದ್ಧವಾಗಿದೆ ಎಂದು ಗ್ಲಾಸ್ಗೋದಲ್ಲಿ ಸಿಒಪಿ26 ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿಯವರು ಹೇಳಿದ್ದಾರೆ. ಭಾರತದ ಪರವಾಗಿ ಶ್ರೀ ನರೇಂದ್ರ ಮೋದಿಯವರು, ಹವಾಮಾನ ಬದಲಾವಣೆಯ ಸಮಸ್ಯೆಯನ್ನು ಎದುರಿಸಲು ಭಾರತದ ಬದ್ಧತೆಯಂತೆ ಐದು ಅಮೃತ ಅಂಶಗಳಾದ “ಪಂಚಾಮೃತ”ವನ್ನು ಜಗತ್ತಿಗೆ ಪ್ರಸ್ತುತಪಡಿಸಿದ್ದರು.


***(Release ID: 1802766) Visitor Counter : 226


Read this release in: English , Urdu , Hindi , Tamil , Telugu