ಉಕ್ಕು ಸಚಿವಾಲಯ
ಕೇಂದ್ರ ಉಕ್ಕು ಸಚಿವ ಶ್ರೀ ರಾಮಚಂದ್ರ ಪ್ರಸಾದ್ ಸಿಂಗ್ ಅಧ್ಯಕ್ಷತೆಯಲ್ಲಿ ರಾಜ್ಯಗಳ ಗಣಿ ಮತ್ತು ಕೈಗಾರಿಕೆ ಸಚಿವರ ಎರಡು ದಿನಗಳ ಸಮಾವೇಶ
Posted On:
24 FEB 2022 7:07PM by PIB Bengaluru
ಒಡಿಶಾದ ಕೊನಾರ್ಕ್‌ನಲ್ಲಿ ಫೆಬ್ರವರಿ 25-26 ರಂದು ನಡೆಯಲಿರುವ ದೇಶದ ಖನಿಜ ಸಮೃದ್ದ ರಾಜ್ಯಗಳ 'ಗಣಿ ಮತ್ತು ಕೈಗಾರಿಕಾ ಸಚಿವರ ಸಮ್ಮೇಳನ'ದ ಅಧ್ಯಕ್ಷತೆಯನ್ನು ಕೇಂದ್ರ ಉಕ್ಕು ಸಚಿವ ಶ್ರೀ ರಾಮಚಂದ್ರ ಪ್ರಸಾದ್ ಸಿಂಗ್ ಅವರು ವಹಿಸಲಿದ್ದಾರೆ. ಆಂಧ್ರ ಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ ಮತ್ತು ರಾಜಸ್ಥಾನ ರಾಜ್ಯಗಳು ಸಮ್ಮೇಳನದಲ್ಲಿ ಭಾಗವಹಿಸುವುದಾಗಿ ಹೇಳಿವೆ. ಉಕ್ಕು ಮತ್ತು ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವ ಶ್ರೀ ಫಗ್ಗನ್ ಸಿಂಗ್ ಕುಲಸ್ತೆ ಅವರು ಎರಡು ದಿನಗಳ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಉತ್ತಮ ಸಮನ್ವಯಕ್ಕಾಗಿ ಮತ್ತು ಚಾಲ್ತಿಯಲ್ಲಿರುವ ಹಾಗೂ ಹೊಸ ಗಣಿಗಾರಿಕೆ ಯೋಜನೆಗಳ ಗಣಿಗಾರಿಕೆ ಗುತ್ತಿಗೆಗಳು, ಪರಿಸರ ಮತ್ತು ಅರಣ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅನುಮತಿ ಕುರಿತು ಪ್ರಸ್ತುತಿ ಮತ್ತು ಸಂವಾದಕ್ಕೆ ಅವಕಾಶವನ್ನು ನೀಡುವ ಉದ್ದೇಶದಿಂದ ಭಾರತ ಸರ್ಕಾರದ ಉಕ್ಕು ಸಚಿವಾಲಯವು 'ಗಣಿ ಮತ್ತು ಕೈಗಾರಿಕಾ ಸಚಿವರೊಂದಿಗೆ ಸಮ್ಮೇಳನ'ವನ್ನು ಆಯೋಜಿಸುತ್ತಿದೆ.
ವ್ಯವಹಾರವನ್ನು ಪ್ರೋತ್ಸಾಹಿಸುವಲ್ಲಿ ರಾಜ್ಯ ಸರ್ಕಾರಗಳ ಪೂರಕ ಪಾತ್ರವನ್ನು ಪರಿಗಣಿಸಿ, ಭಾಗವಹಿಸುವ ರಾಜ್ಯಗಳಿಗೆ 6,322 ಕೋಟಿ ರೂ.ಗಳ ವಿಶೇಷ ಉಕ್ಕು ಪಿಎಲ್ಐ ಯೋಜನೆಯನ್ನು ಪ್ರದರ್ಶಿಸಲು ಸರ್ಕಾರವು ಅವಕಾಶವನ್ನು ಬಳಸಿಕೊಳ್ಳುತ್ತದೆ.
ಇದಲ್ಲದೆ, ದ್ವಿತೀಯ ದರ್ಜೆ ಉಕ್ಕು ಕ್ಷೇತ್ರದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಂವಾದಾತ್ಮಕ ಅಧಿವೇಶನವನ್ನು ಸಮಾವೇಶದಲ್ಲಿ ನಡೆಸಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಉಕ್ಕು, ಗಣಿ ಮತ್ತು ಕೈಗಾರಿಕೆಗಳ ಸಚಿವಾಲಯಗಳು, ರಾಜ್ಯ ಮತ್ತು ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳ ಹಿರಿಯ ಅಧಿಕಾರಿಗಳು ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ.
***
(Release ID: 1800912)
Visitor Counter : 211