ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಪ್ರಧಾನಿ ಮೋದಿಯವರ ‘ಮೀಟ್ ದಿ ಚಾಂಪಿಯನ್ಸ್’ ಉಪಕ್ರಮದ ಅಂಗವಾಗಿ ಬೆಂಗಳೂರು ಶಾಲೆಗೆ ಭೇಟಿ ನೀಡಿದ ಒಲಿಂಪಿಕ್ ಈಜುಪಟು ಶ್ರೀಹರಿ ನಟರಾಜ್
“ಈ ಉಪಕ್ರಮವು ಪ್ರತಿ ಮಗುವಿನ ಆರೋಗ್ಯಕ್ಕೆ ಮಾತ್ರವಲ್ಲದೆ, ದೇಶದಲ್ಲಿ ಕ್ರೀಡೆಗಳ ಬೆಳವಣಿಗೆಗೆ ಉತ್ತೇಜನ ನೀಡಲಿದೆ” - ಶ್ರೀಹರಿ ನಟರಾಜ್
Posted On:
19 FEB 2022 6:44PM by PIB Bengaluru
ಭಾರತದ ಈಜುಪಟು ಹಾಗೂ ಟೋಕಿಯೊ ಒಲಿಂಪಿಯನ್ ಶ್ರೀಹರಿ ನಟರಾಜ್ ಅವರು ಟೋಕಿಯೊ ಒಲಿಂಪಿಯನ್‌ಗಳು ಮತ್ತು ಪ್ಯಾರಾಲಿಂಪಿಯನ್‌ಗಳಿಗಾಗಿ ಪ್ರಧಾನಿ ಮೋದಿಯವರ ಶಾಲಾ ಭೇಟಿ ಅಭಿಯಾನ 'ಮೀಟ್ ದಿ ಚಾಂಪಿಯನ್ಸ್' ಉಪಕ್ರಮದ ಅಂಗವಾಗಿ ಶನಿವಾರ ಬೆಂಗಳೂರಿನ ಆರ್.ವಿ. ಬಾಲಕಿಯರ ಪ್ರೌಢಶಾಲೆಗೆ ಭೇಟಿ ನೀಡಿದರು.

ಕರ್ನಾಟಕ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಈ ವಿಶಿಷ್ಟ ಶಾಲಾ ಭೇಟಿ ಅಭಿಯಾನವನ್ನು ನಡೆಸಲಾಯಿತು. ಒಲಂಪಿಕ್ ಪದಕ ವಿಜೇತರಾದ ನೀರಜ್ ಚೋಪ್ರಾ, ಬಜರಂಗ್ ಪುನಿಯಾ ಕ್ರಮವಾಗಿ ಗುಜರಾತ್ ಮತ್ತು ಹರಿಯಾಣದ ಶಾಲೆಗಳಿಗೆ ಭೇಟಿ ನೀಡಿದ್ದು, ಒಲಂಪಿಕ್ ಸೇಲಿಂಗ್ ಸ್ಪರ್ಧಿಗಳಾದ ವರುಣ್ ಠಕ್ಕರ್ ಮತ್ತು ಕೆ.ಸಿ. ಗಣಪತಿ ತಮಿಳುನಾಡು ಶಾಲೆಗಳಿಗೆ ಭೇಟಿ ನೀಡಿದ್ದಾರೆ.

ಯುವ ಒಲಿಂಪಿಕ್ ಈಜುಪಟು ಶ್ರೀಹರಿ ನಟರಾಜ್ ಅವರು ದೇಶದಲ್ಲಿ ಇಂತಹ ಉಪಕ್ರಮಗಳನ್ನು ನಡೆಸಬೇಕಾದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು, ಇದು ದೇಶದಲ್ಲಿ ಕ್ರೀಡೆಗಳನ್ನು ಉತ್ತೇಜಿಸಲು ನೆರವಾಗುತ್ತದೆ ಎಂದರು.

"ಶಾಲಾ ಭೇಟಿಯ ಅನುಭವವು ನಿಜವಾಗಿಯೂ ವಿಶಿಷ್ಟವಾಗಿದೆ ಮತ್ತು ಈ ಉಪಕ್ರಮವನ್ನು ಪ್ರಾರಂಭಿಸಿರುವುದು ಅದ್ಭುತವಾಗಿದೆ. ಇದು ಬಹಳಷ್ಟು ಮಕ್ಕಳಿಗೆ ಕ್ರೀಡೆ, ಫಿಟ್ನೆಸ್, ಪೋಷಣೆ ಮತ್ತು ಆರೋಗ್ಯದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಪ್ರಮುಖ ಉತ್ತೇಜನಕಾರಿಯಾಗಲಿದೆ, ಪ್ರತಿ ಮಗುವಿನ ಆರೋಗ್ಯಕ್ಕಾಗಿ ಮಾತ್ರವಲ್ಲದೆ, ದೇಶದಲ್ಲಿ ಕ್ರೀಡೆಯ ಬೆಳವಣಿಗೆಗೂ ಈ ಉಪಕ್ರಮವು ಮಕ್ಕಳಿಗೆ ಪ್ರೇರಣೆ ನೀಡಲಿದೆ. ಇದರೊಂದಿಗೆ ಹೆಚ್ಚಿನ ಯುವಜನರು ಕ್ರೀಡೆಗಳಲ್ಲಿ ಭಾಗವಹಿಸಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುತ್ತಾರೆ ಎಂದು ನಾವು ನಿರೀಕ್ಷಿಸಬಹುದು" ಎಂದು ಅವರು ಹೇಳಿದರು.

ಆತಿಥೇಯ ಶಾಲೆಯ ಮಕ್ಕಳಲ್ಲದೇ, ಕರ್ನಾಟಕದ ವಿವಿಧ ಜಿಲ್ಲೆಗಳ 75 ಶಾಲೆಗಳ ವಿದ್ಯಾರ್ಥಿ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ದಕ್ಷಿಣ ಏಷ್ಯಾ ಕ್ರೀಡಾಕೂಟದ ಚಿನ್ನದ ಪದಕ ವಿಜೇತರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಹಾಗೂ ಈಜು ಮತ್ತು ಸ್ಪರ್ಧಾತ್ಮಕ ಕ್ರೀಡಾ ವ್ಯಕ್ತಿಯಾಗಿ ಅವರ ಅನುಭವಗಳ ಬಗ್ಗೆ ಸಂವಾದ ನಡೆಸುವ ಅವಕಾಶವನ್ನು ಈ ವಿದ್ಯಾರ್ಥಿಗಳು ಪಡೆದರು.

ಶ್ರೀಹರಿ ಅವರು 'ಸಂತುಲಿತ್ ಆಹಾರ' (ಸಮತೋಲಿತ ಆಹಾರ), ಫಿಟ್ನೆಸ್ ಹೊಂದುವುದರ ಮಹತ್ವದ ಕುರಿತು ಮಾತನಾಡಿದರು ಮತ್ತು ತಮ್ಮ ಆಹಾರ ಪದ್ಧತಿ ಮತ್ತು ಅನುಸರಿಸುವ ಆಹಾರದ ಬಗ್ಗೆ ವಿವರಗಳನ್ನು ಹಂಚಿಕೊಂಡರು.
ಸಂವಾದದ ನಂತರ, ಶ್ರೀಹರಿ ಅವರು ಬ್ಯಾಡ್ಮಿಂಟನ್ ಆಡಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ವಿದ್ಯಾರ್ಥಿಗಳೊಂದಿಗೆ ಕೆಲವು ಆಟಗಳನ್ನು ಆಡಿದರು.
'ಮೀಟ್ ದಿ ಚಾಂಪಿಯನ್ಸ್' ಉಪಕ್ರಮವು ಸರ್ಕಾರದ 'ಆಜಾದಿ ಕಾ ಅಮೃತ ಮಹೋತ್ಸವ'ದ ಭಾಗವಾಗಿದೆ, ಇದಕ್ಕೆ ಡಿಸೆಂಬರ್ 2021 ರಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಮತ್ತು ಜನವರಿ 2022 ರಲ್ಲಿ ಪ್ಯಾರಾಲಿಂಪಿಕ್ ಕಂಚಿನ ಪದಕ ವಿಜೇತ ಶರದ್ ಕುಮಾರ್ ಅವರು ಚಾಲನೆ ನೀಡಿದರು.
ತಮ್ಮ ಅನುಭವದ ಬಗ್ಗೆ ಮಾತನಾಡಿದ ಶ್ರೀಹರಿ, "ಮೀಟ್ ದಿ ಚಾಂಪಿಯನ್ಸ್ ಉಪಕ್ರಮದ ಭಾಗವಾಗಿರುವುದು ಅದ್ಭುತವಾಗಿದೆ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಲು ಮತ್ತು ಅವರೊಂದಿಗೆ ಸಲಹೆಗಳನ್ನು ಹಂಚಿಕೊಳ್ಳುವುದು ಸಂತಸ ಕೊಟ್ಟಿದೆ. ಅವರೊಂದಿಗೆ ಸ್ವಲ್ಪ ಸಮಯ ಕಳೆಯಲು ಸಾಧ್ಯವಾಗಿದ್ದಕ್ಕೆ ಮತ್ತು ಶಾಲೆ ಮತ್ತು ಬೆಳೆಯುತ್ತಿರುವ ಮಕ್ಕಳು ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಸಹಾಯ ಮಾಡಲು ಪ್ರಯತ್ನಿಸಿದ್ದಕ್ಕೆ ಸಂತೋಷವಾಗಿದೆ. ನಾನು ಅವರ ಮೇಲೆ ಬದಲಾವಣೆ ಅಥವಾ ಪ್ರಭಾವವನ್ನು ಬೀರಲು ಸಾಧ್ಯವಾಗಿದೆ ಎಂದು ಭಾವಿಸುತ್ತೇನೆ." ಎಂದರು.
ಶಾಲಾ ಭೇಟಿ ಅಭಿಯಾನವನ್ನು ಶಿಕ್ಷಣ ಸಚಿವಾಲಯ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಜಂಟಿಯಾಗಿ ಆಯೋಜಿಸಿದೆ, ಅಲ್ಲಿ ಒಲಿಂಪಿಯನ್‌ಗಳು ಮತ್ತು ಪ್ಯಾರಾಲಿಂಪಿಯನ್‌ಗಳು ತಮ್ಮ ಅನುಭವಗಳು, ಜೀವನ ಪಾಠಗಳು, ಸರಿಯಾದ ಆಹಾರ ಕುರಿತು ಸಲಹೆಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಒಟ್ಟಾರೆಯಾಗಿ ಶಾಲೆಯ ಮಕ್ಕಳಿಗೆ ಸ್ಫೂರ್ತಿ ತುಂಬುತ್ತಾರೆ.
ಮುಂದಿನ ದಿನಗಳಲ್ಲಿ, ಪ್ಯಾರಾಲಿಂಪಿಕ್ ಪದಕ ವಿಜೇತರಾದ ಅವನಿ ಲೇಖರಾ ಮತ್ತು ಮರಿಯಪ್ಪನ್ ತಂಗವೇಲು ಅವರು ಕ್ರಮವಾಗಿ ರಾಜಸ್ಥಾನ ಮತ್ತು ತಮಿಳುನಾಡು ರಾಜ್ಯಗಳಲ್ಲಿನ ಶಾಲೆಗಳಿಗೆ ಭೇಟಿ ನೀಡಲಿದ್ದಾರೆ.
***
(Release ID: 1799657)
Visitor Counter : 229