ಉಕ್ಕು ಸಚಿವಾಲಯ
ಕೇಂದ್ರ ಉಕ್ಕು ಸಚಿವ ಶ್ರೀ ರಾಮ್ ಚಂದ್ರ ಪ್ರಸಾದ್ ಸಿಂಗ್ ಅವರಿಂದ ʻಕೆಐಒಸಿಎಲ್ʼ ಟೌನ್ಶಿಪ್ಗೆ ಶಂಕುಸ್ಥಾಪನೆ
ಪ್ರಕಟಣಾ ದಿನಾಂಕ:
19 FEB 2022 6:50PM by PIB Bengaluru
ಭಾರತ ಸರಕಾರದ ಉಕ್ಕು ಖಾತೆಯ ಗೌರವಾನ್ವಿತ ಸಚಿವರಾದ ಶ್ರೀ ರಾಮ್ ಚಂದ್ರ ಪ್ರಸಾದ್ ಸಿಂಗ್ ಅವರು ಕೆಐಒಸಿಎಲ್ ಟೌನ್‌ಶಿಪ್‌ನಲ್ಲಿ ವಸತಿ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ಇಂದು ಮಂಗಳೂರಿಗೆ ಭೇಟಿ ನೀಡಿದರು. ಈ ಟೌನ್‌ಶಿಪ್ ಅತಿಥಿಗೃಹ, ಶಾಪಿಂಗ್ ಕಾಂಪ್ಲೆಕ್ಸ್, ಸಮುದಾಯ ಭವನ, ಆಟದ ಮೈದಾನ, ಮತ್ತು ಫಿಟ್ನೆಸ್ ಪಾರ್ಕ್ ಅನ್ನು ಒಳಗೊಂಡಿದೆ. ಫ್ಲ್ಯಾಟ್‌ಗಳ ನಿರ್ಮಾಣ ಪೂರ್ಣಗೊಂಡ ನಂತರ ಟೌನ್‌ಶಿಪ್‌ನಲ್ಲಿ ವಾಸಿಸುವ ಉದ್ಯೋಗಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ.


ಟೌನ್‌ಶಿಪ್‌ನ ವಸತಿಗೃಹಗಳು 30 ವರ್ಷಗಳಿಗಿಂತ ಹಳೆಯವಾಗಿದ್ದು, ಹಲವಾರು ನಿರ್ವಹಣಾ ಸಮಸ್ಯೆಗಳನ್ನು ಹೊಂದಿವೆ. ಇದನ್ನು ಗಮನದಲ್ಲಿರಿಸಿಕೊಂಡು, 60 ಫ್ಲ್ಯಾಟ್‌ಗಳನ್ನು ಹೊಂದಿರುವ ವಸತಿ ಕಟ್ಟಡವನ್ನು ನಿರ್ಮಿಸಲು ಮತ್ತು ಹಂತ ಹಂತವಾಗಿ ಹೊಸ ಬ್ಲಾಕ್ ಗಳನ್ನು ಸೇರಿಸಲು ಆಡಳಿತ ಮಂಡಳಿ ಯೋಜಿಸಿದೆ.
ಈ ಸಂದರ್ಭದಲ್ಲಿ, ಭಾರತ ಸರಕಾರದ ಉಕ್ಕು ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಟಿ. ಶ್ರೀನಿವಾಸ್, ಉಕ್ಕು ಸಚಿವಾಲಯದ ಅಧಿಕಾರಿಗಳು, ಸಿಎಂಡಿ ಶ್ರೀ ಟಿ.ಸಾಮಿನಾಥನ್, ನಿರ್ದೇಶಕ (ಎಫ್) ಶ್ರೀ ಕೆ.ವಿ. ಭಾಸ್ಕರ ರೆಡ್ಡಿ, ಕೆಐಒಸಿಎಲ್‌ನ ಹಿರಿಯ ಅಧಿಕಾರಿಗಳು, ಟೌನ್‌ಶಿಪ್ ನಿವಾಸಿಗಳು ಉಪಸ್ಥಿತರಿದ್ದರು.
***
(ಪ್ರಕಟಣೆ ಐ.ಡಿ.: 1799652)
ವಿಸಿಟರ್ ಕೌಂಟರ್ : 216