ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯಲ್ಲಿ ಹೊಸ  ಸೀಮಾರೇಖೆಗಳು: ನವೀಕರಿಸಬಹುದಾದ  ಇಂಧನದ  ಕಾರ್ಯಕ್ರಮ”ವನ್ನು ನಡೆಸಿತು


ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಮತ್ತು ಎಫ್ ಐಸಿಸಿಐ  "2070 ರ ವೇಳೆಗೆ ನಿವ್ವಳ ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ಸಾಧಿಸಲು ಮಾರ್ಗಸೂಚಿ" ಕುರಿತು ಚಿಂತನ್ ಬೈಠಕ್  ಕಾರ್ಯಕ್ರಮವನ್ನು ಆಯೋಜಿಸಿದೆ

ಇಂಧನ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವರು ಮುಖ್ಯ ಭಾಷಣ ಮಾಡಿದರು

Posted On: 18 FEB 2022 8:32PM by PIB Bengaluru

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಮ್ ಎನ್ ಆರ್ ) ಮತ್ತು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ  (ಎಫ್ಐಸಿಸಿಐ) ಜಂಟಿಯಾಗಿ "2070 ವೇಳೆಗೆ ನಿವ್ವಳ ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ಸಾಧಿಸುವ ಮಾರ್ಗಸೂಚಿ" ಕುರಿತು ಚಿಂತನ್ ಬೈಠಕ್ ಕಾರ್ಯಕ್ರಮವನ್ನು ಇಂದು ಆಯೋಜಿಸಿತು. 2070 ವೇಳೆಗೆ ನಿವ್ವಳ ಶೂನ್ಯ ಇಂಗಾಲದ ಹೊರಸೂಸುವಿಕೆಯ ಗುರಿ. ಚಿಂತನ್ ಬೈಠಕ್ ಕಾರ್ಯಕ್ರಮವು ಸಚಿವಾಲಯದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಗಳ ಒಂದು ಭಾಗವಾಗಿತ್ತು.

ಕೇಂದ್ರ ಇಂಧನ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವರಾದ ಶ್ರೀ ಆರ್.ಕೆ. ಸಿಂಗ್  ಮುಖ್ಯ ಭಾಷಣ ಮಾಡಿದರು ಮತ್ತು ಭಾರತದ ಎಲ್ಲಾ ವಲಯಗಳ  ನಿವ್ವಳ ಶೂನ್ಯ ಮತ್ತು ಇಂಧನ ಪರಿವರ್ತನೆ ಯೋಜನೆಗಳ ಬಗ್ಗೆ ವಿವರವಾಗಿ ಮಾತನಾಡಿದರು, ಆದ್ಯತೆಗಳು, ಸಮಸ್ಯೆಗಳು ಮತ್ತು ಜಾಗತಿಕ ಇಂಧನ ಪರಿವರ್ತನೆಗೆ ಅನುಕೂಲವಾಗುವಂತೆ ಹವಾಮಾನ ಹಣಕಾಸು ಅಗತ್ಯವನ್ನು ಎತ್ತಿ ತೋರಿಸಿದರು.

ಬೈಠಕ್ ಕಾರ್ಯಕ್ರಮದಲ್ಲಿ ನಡೆದ ಚಿಂತನ ಮಂಥನದ ಅಧ್ಯಕ್ಷತೆಯನ್ನು ಎಂಎನ್ಆರ್ಇ ಕಾರ್ಯದರ್ಶಿ ಶ್ರೀ ಇಂದು ಶೇಖರ್ ಚತುರ್ವೇದಿ ವಹಿಸಿದ್ದರು. ಇಂಧನ ಕಾರ್ಯದರ್ಶಿ ಶ್ರೀ ಅಲೋಕ್ ಕುಮಾರ್ ಅವರು ಆರಂಭಿಕ ಹೇಳಿಕೆಗಳನ್ನು ನೀಡಿದರು ಮತ್ತು ಪ್ರಸ್ತುತಿಗಳನ್ನು ಮುಖ್ಯ ಕಾರ್ಯದರ್ಶಿ, ರಾಜಸ್ಥಾನ; ಮುಖ್ಯ ಕಾರ್ಯದರ್ಶಿ, ಗುಜರಾತ್; ಅಧ್ಯಕ್ಷರು, ಕೇಂದ್ರ ವಿದ್ಯುತ್ ಪ್ರಾಧಿಕಾರ; ಭಾರತೀಯ ಸೌರಶಕ್ತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ; ಎಫ್ಐಸಿಸಿಐ ನವೀಕರಿಸಬಹುದಾದ ಇಂಧನ ಮಂಡಳಿಯ ಅಧ್ಯಕ್ಷ ಮತ್ತು ಸಹ-ಅಧ್ಯಕ್ಷರು ಮಾಡಿದರು.

ಎಫ್ಐಸಿಸಿಐ ಮಹಾನಿರ್ದೇಶಕರಾದ ಶ್ರೀ. ಅರುಣ್ ಚಾವ್ಲಾ  ಸ್ವಾಗತಿಸಿದರು ಮತ್ತು ಬೈಠಕ್ ಕಾರ್ಯಕ್ರಮಕ್ಕೆ ಸಮಯವನ್ನು ನಿಗದಿಪಡಿಸಿದರು. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀಮತಿ ರಿಚಾ ಶರ್ಮಾ ಅವರು ನಿವ್ವಳ ಶೂನ್ಯ ಕಾರ್ಯಸೂಚಿಯ ವಿಕಾಸ, ವಿವಿಧ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ನಿಲುವು ಮತ್ತು 2070 ವೇಳೆಗೆ ನಿವ್ವಳ-ಶೂನ್ಯವನ್ನು ಸಾಧಿಸುವ ಸಂಭಾವ್ಯ ಮಾರ್ಗಗಳ ಕುರಿತು ಭಾಗವಹಿಸುವವರಿಗೆ ವಿವರಿಸಿದರು.

ಇದರ ನಂತರ ಉದ್ಯಮದ ಮುಖಂಡರು ಉದ್ಯಮ ಎದುರಿಸುತ್ತಿರುವ ಹಲವಾರು ಸಮಸ್ಯೆಗಳು ಮತ್ತು ಸಲಹೆಗಳನ್ನು ಹಂಚಿಕೊಂಡ ಮುಕ್ತ ಚರ್ಚೆಗಳು ನಡೆದವು. ಸಚಿವಾಲಯ ಕಾರ್ಯದರ್ಶಿಯವರು ಭಾರತ ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಉದ್ಯಮದ ಪ್ರಮುಖರು ಎತ್ತಿದ ಸಮಸ್ಯೆಗಳ ಕುರಿತು ತಮ್ಮ ಒಳನೋಟಗಳನ್ನು ಒದಗಿಸಿದರು. ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

***



(Release ID: 1799586) Visitor Counter : 253


Read this release in: English , Urdu , Hindi