ನೌಕಾ ಸಚಿವಾಲಯ

ಶ್ರೀ ಸರ್ಬಾನಂದ ಸೋನೋವಾಲ್‌ ಅವರಿಂದ ಇಂಡೋ ಬಾಂಗ್ಲಾದೇಶ ಪ್ರೋಟೋಕಾಲ್‌ ರೂಟ್‌ (ಐಬಿಪಿ ಮಾರ್ಗ) ಮೂಲಕ ಹಲ್ದಿಯಾದಿಂದ ಪಾಂಡುವಿಗೆ ಉಕ್ಕಿನ ರವಾನೆಯ ಮೊದಲ ಸಂಚಾರಕ್ಕೆ ಚಾಲನೆ

Posted On: 16 FEB 2022 5:45PM by PIB Bengaluru

ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಮತ್ತು ಆಯುಷ್‌ ಸಚಿವ ಶ್ರೀ ಸರ್ಬಾನಂದ ಸೋನೊವಾಲ್‌ ಅವರು ಇಂಡೋ-ಬಾಂಗ್ಲಾದೇಶ ಪ್ರೋಟೋಕಾಲ್‌ ಮಾರ್ಗದ ಮೂಲಕ ಹಲ್ದಿಯಾದಿಂದ ಪಾಂಡು (ಅಸ್ಸಾಂನಲ್ಲಿ) ಟಾಟಾ ಸ್ಟೀಲ್‌ ಲಿಮಿಟೆಡ್‌ನ 1798 ಎಮ್‌ಟಿ ಸಿದ್ಧಪಡಿಸಿದ ಉಕ್ಕಿನ ಉತ್ಪನ್ನಗಳ ಸರಕುಗಳನ್ನು ದೋಣಿಗಳ ಚೊಚ್ಚಲ ಪ್ರಯಾಣಕ್ಕೆ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ರಾಜ್ಯ ಸಚಿವ ಶ್ರೀ ಶಂತನು ಠಾಕೂರ್‌ ಅವರ ಉಪಸ್ಥಿತಿಯಲ್ಲಿಇಂದು ಚಾಲನೆ ನೀಡಿದರು.

ಈ ಚೊಚ್ಚಲ ಪ್ರಯಾಣವು ನದಿ-ಸಮುದ್ರ ಸಂಯೋಜನೆಯ ಶಕ್ತಿಯನ್ನು ಬಳಸಿಕೊಳ್ಳುವುದರ ಜೊತೆಗೆ ಸರಕುಗಳ ಬಹುಮಾದರಿಯ ಚಲನೆಯನ್ನು ಪ್ರದರ್ಶಿಸುತ್ತದೆ. ಟಾಟಾ ಸ್ಟೀಲ್‌ ಲಿಮಿಟೆಡ್‌ನ ಉಕ್ಕಿನ ಉತ್ಪನ್ನಗಳ ರವಾನೆಯು ರೈಲ್ವೆ ಮೂಲಕ ಹಲ್ದಿಯಾ ಡಾಕ್‌ ಕಾಂಪ್ಲೆಕ್ಸ್‌ಗೆ ಆಗಮಿಸಿದೆ; ತಮ್ಮ ಬರ್ತ್‌ನಲ್ಲಿ(ಬಂದರಿನಲ್ಲಿನಿಲ್ಲುವ) ಸರಕು ಸಾಗಣೆ ಮತ್ತು ಲೋಡ್‌ಗಳನ್ನು ನಿರ್ವಹಿಸುವ ಟಿಎಂಐಎಲ್‌ಎಲ್‌, ಬಂದರಿನಲ್ಲಿನಿಲ್ಲುವ ನಂಬರ್‌ 11ರಲ್ಲಿ(ಡಿಬಿ ಅಬ್ದುಲ್‌ ಕಲಾಂ ಮತ್ತು ಡಿಬಿ ಕಲ್ಪನಾ ಚಾವ್ಲಾಎಸ್‌ಎಂಪಿಕೆ) ಚಾರ್ಟರ್ಡ್‌ ಬಾರ್ಜ್‌ಗಳಿಗೆ (ದೋಣಿಗಳಿಗೆ) ಮಾಡಲಾಗಿರುವ ಲೋಡ್‌ಗಳನ್ನು ನಿರ್ವಹಿಸಲಿದೆ. ಓಷಿಯನ್‌ ವೇಲ್‌ ಸರ್ವಿಸಸ್‌, ದೋಣಿಗಳನ್ನು ಪ್ರಯಾಣಕ್ಕಾಗಿ ನಿರ್ವಹಿಸುತ್ತದೆ.

ಆದ್ಯತೆ ಮೇರೆಗೆ ಈ ಮಾರ್ಗದಲ್ಲಿಈ ಸರಕು ಸಾಗಣೆ ಮಾಡಲು ಕಸ್ಟಮ್ಸ್‌ ವಿಶೇಷ ಅನುಮತಿ ನೀಡಿದೆ. ಹಸಿರು ನಿಶಾನೆ ತೋರಲಾಗುವ ಬಾರ್ಜ್‌ಗಳು ಹಲ್ದಿಯಾದಿಂದ ಅಸ್ಸಾಂನ ಐಡಬ್ಲ್ಯುಎಐ ಪಾಂಡು ಟರ್ಮಿನಲ್‌ಗೆ ಚಲಿಸಲಿವೆ. ಬಾರ್ಜ್‌ಗಳು ಎನ್‌ಡಬ್ಲ್ಯು-1 ಇಂಡೋ-ಬಾಂಗ್ಲಾದೇಶ ಪೋಟೋಕಾಲ್‌ ಮಾರ್ಗ - ಎನ್‌ಡಬ್ಲ್ಲ್ಯು -2 ಉದ್ದಕ್ಕೂ ಚಲಿಸುತ್ತವೆ. ಹಿಂದಿರುಗುವಾಗ, ದೋಣಿಗಳು ಫ್ಯೂಯಲ್‌ ಸೋರ್ಸಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಒದಗಿಸಿದ ಕಲ್ಲಿದ್ದಲನ್ನು ಲೋಡ್‌ ಮಾಡುತ್ತವೆ. ಎಲ್‌ಎಸ್‌ಸಿ ಸೊಲ್ಯೂಷನ್ಸ್‌ ಲಾಸ್ಟ್‌ ಮೈಲ್‌ ಡೆಲಿವರಿ ಜೊತೆಗೆ ಗ್ರೌಂಡ್‌ ಲಾಜಿಸ್ಟಿಕ್‌ ಬೆಂಬಲವನ್ನು ಒದಗಿಸುತ್ತಿದ್ದು, ಕೋಲ್ಕೊತಾದ ಎಸ್‌ಎಂಪಿಕೆಯಲ್ಲಿಇಳಿಸಲು ಉದ್ದೇಶಿಸಲಾಗಿದೆ.

ಒಳನಾಡಿನ ಜಲಮಾರ್ಗಗಳನ್ನು ಹತೋಟಿಗೆ ತರಲು ಮತ್ತು ದೃಢವಾದ ಮಲ್ಟಿ-ಮೋಡಲ್‌ ಲಾಜಿಸ್ಟಿಕ್ಸ್‌ ಸರಪಳಿಗಾಗಿ ಬಂದರುಗಳೊಂದಿಗೆ ಒಡಂಬಡಿಕೆ ಸ್ಥಾಪಿಸಲು ಸರ್ಕಾರವು ಯೋಜಿಸಿದೆ. ಇದಲ್ಲದೆ, ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ (ಎಂಒಪಿಎಸ್‌ಡಬ್ಲ್ಯು) ರಾಷ್ಟ್ರೀಯ ಜಲಮಾರ್ಗಗಳು-1, ಇಂಡೋ-ಬಾಂಗ್ಲಾದೇಶ ಪ್ರೋಟೋಕಾಲ್‌ ಮಾರ್ಗ ಮತ್ತು ಎನ್‌ಡಬ್ಲ್ಯು-2 (ಬ್ರಹ್ಮಪುತ್ರ ನದಿ) ಭಾರತದ ಒಳನಾಡು ಜಲಮಾರ್ಗಗಳ ಪ್ರಾಧಿಕಾರದ ಮೂಲಕ ಹಲವಾರು ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಂಡಿದೆ.

ಹಲ್ದಿಯಾ ಡಾಕ್‌ ಕಾಂಪ್ಲೆಂಕ್ಸ್‌ ನ ಅನುಕೂಲಕರ ಸ್ಥಾನದೊಂದಿಗೆ ದೇಶದ ಪೂರ್ವ ಭಾಗದಲ್ಲಿಲಭ್ಯವಿರುವ ನದಿಗಳ ಸುಸಜ್ಜಿತ ಅಪಧಮನಿ ಜಾಲವು ಎಸ್‌ಎಂಪಿಕೆ ರೈಲು, ರಸ್ತೆ ಮತ್ತು ಒಳನಾಡಿನ ಜಲ ಮಾರ್ಗಗಳ ಮೂಲಕ ಒಳನಾಡಿನ ಆಳವಾದ ಸಂಪರ್ಕವನ್ನು ಹೊಂದಿದೆ. ಈ ಪ್ರದೇಶದಲ್ಲಿಬಹುಮಾದರಿಯ ಲಾಜಿಸ್ಟಿಕ್‌ ಸರಪಳಿಯ ಸಂಪೂರ್ಣ ಸಾಮರ್ಥ್ಯ‌ವನ್ನು ಅತ್ಯುತ್ತಮವಾಗಿ ಅರಿತುಕೊಳ್ಳಲು ಉತ್ತೇಜಿಸುತ್ತದೆ.

ಒಳನಾಡಿನ ಜಲಮಾರ್ಗಗಳು ಮತ್ತು ಐಬಿಪಿ ಮಾರ್ಗವನ್ನು ಹೆಚ್ಚು ವೆಚ್ಚದಾಯಕ ಮತ್ತು ಪರಿಸರ ಸ್ನೇಹಿ ರೀತಿಯಲ್ಲಿಬಳಸಿಕೊಳ್ಳುವ ನಿಟ್ಟಿನಲ್ಲಿತಡೆ ರಹಿತ ಮತ್ತು ದೃಢವಾದ ಸಂಯೋಜಿತ ಲಾಜಿಸ್ಟಿಕ್ಸ್‌ ಪರಿಹಾರಗಳಿಗೆ ಇದು ದಾರಿ ಮಾಡಿಕೊಡುತ್ತದೆ, ಇದರಿಂದಾಗಿ ಪ್ರದೇಶ ಮತ್ತು ಇಡೀ ದೇಶಕ್ಕೆ ಪ್ರಯೋಜನವಾಗುತ್ತದೆ.

ನ್ಯಾಪ್ತಾ, ಪ್ರೊಪೇನ್‌, ಪೆಂಟೇನ್‌ ಮುಂತಾದ ಫೀಡ್‌ ಸ್ಟಾಕ್‌ ಚಲನೆಗಾಗಿ ಸುವ್ಯವಸ್ಥಿತ ಲಾಜಿಸ್ಟಿಕ್ಸ್‌ ಸರಪಳಿಯನ್ನು ಅಭಿವೃದ್ಧಿಪಡಿಸಲು ಬ್ರಹ್ಮಪುತ್ರ ಕ್ರ್ಯಾಕರ್‌ ಮತ್ತು ಪಾಲಿಮರ್‌ ಲಿಮಿಟೆಡ್‌ (ಬಿಸಿಪಿಎಲ್‌), ಭಾರತ ಸರ್ಕಾರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಡಿಯಲ್ಲಿಭಾರತ ಸರ್ಕಾರದ ಸಾರ್ವಜನಿಕ ವಲಯ ಉದ್ಯಮ ಮತ್ತು ಕೋಲ್ಕೊತಾದ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಬಂದರು ನಡುವಿನ ಒಪ್ಪಂದಗಳಿಗೆ ಇದು ಅವಕಾಶ ಕಲ್ಪಿಸಿದೆ.

ರೈಲು ಮತ್ತು/ಅಥವಾ ಕರಾವಳಿ ಶಿಪ್ಪಿಂಗ್‌ ಮೂಲಕ ಹಲ್ದಿಯಾ ಡಾಕ್‌ ಕಾಂಪ್ಲೆಕ್ಸ್‌ನಿಂದ ಲೆಪೆಟ್‌ಕಟಾದಲ್ಲಿ(ಅಸ್ಸಾಂನ ದಿಬ್ರುಗಢದಿಂದ ಸುಮಾರು 15 ಕಿಮೀ ದೂರದಲ್ಲಿದೆ) ಬಿಸಿಪಿಎಲ್‌ ನ ಪೆಟ್ರೋಕೆಮಿಕಲ್‌ ಕಾಂಪ್ಲೆಕ್ಸ್‌ಗೆ ಅಗತ್ಯವಿದೆ. ಹಿಂದಿರುಗುವ ಚರಣದಲ್ಲಿ, ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯ ಬಳಕೆಗಾಗಿ ಬಂದರಿನ ಮೂಲಕ ವಿತರಿಸಲು ಸಿದ್ಧಪಡಿಸಿದ ಉತ್ಪನ್ನಗಳು ಮತ್ತು ಉಪ-ಉತ್ಪನ್ನಗಳನ್ನು ರವಾನಿಸಲಾಗುತ್ತದೆ. ಈ ಉದ್ದೇಶಕ್ಕಾಗಿ, ಬಿಸಿಪಿಎಲ್‌ನ ಆಮದು ಮಾಡಿದ ಫೀಡ್‌ ಸ್ಟಾಕ್‌ಅನ್ನು ಸಂಗ್ರಹಿಸಲು ಟ್ಯಾಂಕ್‌ ಸೌಲಭ್ಯಗಳು ಮತ್ತು ಅದಕ್ಕೆ ಸಂಬಂಧಿಸಿದ ಸೌಲಭ್ಯಗಳನ್ನು ಹಲ್ದಿಯಾ ಡಾಕ್‌ ಕಾಂಪ್ಲೆಕ್ಸ್‌ನಲ್ಲಿಸ್ಥಾಪಿಸಲು ಯೋಜಿಸಲಾಗಿದೆ.

ಎಸ್‌ಎಂಪಿಕೆಯಲ್ಲಿನ್ಯಾಪ್ತಾ, ಪೊ›ಪೇನ್‌, ಪೆಂಟೇನ್‌ ಇತ್ಯಾದಿಗಳ ಹೆಚ್ಚಿದ ಸಂಪುಟಗಳನ್ನು ನಿರ್ವಹಿಸಲು ಎರಡೂ ಪಕ್ಷ ಗಳು ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡಿವೆ. ಸರ್ಕಾರದ ನೀತಿ ಮಾರ್ಗಸೂಚಿಗಳ ಪ್ರಕಾರ, ಪರಸ್ಪರ ಒಪ್ಪಿದ ನಿಯಮಗಳು ಮತ್ತು ಷರತ್ತುಗಳ ಮೇಲೆ ಭೂಮಿ, ರೈಲ್ವೆ ಸೈಡಿಂಗ್ಸ್‌ ಇತ್ಯಾದಿಗಳನ್ನು ಒಳಗೊಂಡಂತೆ ಬಿಸಿಪಿಎಲ್‌ಗೆ ಅಗತ್ಯವಿರುವ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳನ್ನು ವಿಸ್ತರಿಸಲು ಬಂದರು ತಾತ್ವಿಕವಾಗಿ ಒಪ್ಪಿಕೊಂಡಿದೆ.

***



(Release ID: 1798916) Visitor Counter : 179


Read this release in: English , Urdu , Hindi , Tamil