ಕೃಷಿ ಸಚಿವಾಲಯ

2021-22ರ ಪ್ರಮುಖ ಬೆಳೆಗಳ ಉತ್ಪಾದನೆಯ ಎರಡನೇ ಮುಂಗಡ ಅಂದಾಜುಗಳ ಬಿಡುಗಡೆ


ದೇಶದಲ್ಲಿ 316.06 ದಶಲಕ್ಷ ಟನ್‌ ಗಳ ದಾಖಲೆ ಆಹಾರ ಧಾನ್ಯ ಉತ್ಪಾದನೆ ಅಂದಾಜು

ರೈತರು ಮತ್ತು ವಿಜ್ಞಾನಿಗಳ ಕಠಿಣ ಪರಿಶ್ರಮ ಮತ್ತು ಸರ್ಕಾರದ ರೈತ ಸ್ನೇಹಿ ನೀತಿಗಳ ಉತ್ತಮ ಫಲಿತಾಂಶ - ಶ್ರೀ ತೋಮರ್

Posted On: 16 FEB 2022 6:39PM by PIB Bengaluru

2021-22ನೇ ಸಾಲಿನ ಪ್ರಮುಖ ಬೆಳೆಗಳ ಉತ್ಪಾದನೆಯ ಎರಡನೇ ಮುಂಗಡ ಅಂದಾಜುಗಳನ್ನು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದೆ. 316.06 ದಶಲಕ್ಷ ಟನ್‌ ಗಳಷ್ಟು ದಾಖಲೆಯ ಆಹಾರ ಧಾನ್ಯಗಳ ಉತ್ಪಾದನೆ ಆಗಬಹುದು ಎಂದು ಅಂದಾಜಿಸಲಾಗಿದೆ. ರೈತರ ಕಠಿಣ ಪರಿಶ್ರಮ, ವಿಜ್ಞಾನಿಗಳ ದಕ್ಷ ಸಂಶೋಧನೆ ಮತ್ತು ಸರ್ಕಾರದ ರೈತ ಸ್ನೇಹಿ ನೀತಿಗಳ ಫಲವಾಗಿ ದೇಶದಲ್ಲಿ ಆಹಾರ ಧಾನ್ಯ ಉತ್ಪಾದನೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಗಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ್ ಸಿಂಗ್ ತೋಮರ್ ತಿಳಿಸಿದ್ದಾರೆ.

2ನೇ ಮುಂಗಡ ಅಂದಾಜಿನ ಪ್ರಕಾರ, 2021-22ರಲ್ಲಿ ಪ್ರಮುಖ ಬೆಳೆಗಳ ಅಂದಾಜು ಉತ್ಪಾದನೆಯು ಈ ಕೆಳಕಂಡಂತಿದೆ:

• ಆಹಾರ ಧಾನ್ಯಗಳು –316.06 ದಶಲಕ್ಷ ಟನ್ ಗಳು. (ದಾಖಲೆ)

• ಭತ್ತ –127.93 ದಶಲಕ್ಷ ಟನ್ ಗಳು. (ದಾಖಲೆ)

• ಗೋಧಿ –111.32 ದಶಲಕ್ಷ ಟನ್ ಗಳು. (ದಾಖಲೆ)

• ಪೌಷ್ಟಿಕ/ ಸಿರಿ ಧಾನ್ಯಗಳು –49.86 ದಶಲಕ್ಷ ಟನ್ ಗಳು.

• ಮಕ್ಕೆ ಜೋಳ –32.42 ದಶಲಕ್ಷ ಟನ್ ಗಳು. (ದಾಖಲೆ)

• ಬೇಳೆಕಾಳುಗಳು –26.96 ದಶಲಕ್ಷ ಟನ್ ಗಳು. (ದಾಖಲೆ)

• ತೊಗರಿ –4.00 ದಶಲಕ್ಷ ಟನ್ ಗಳು.

• ಕಡಲೆಬೇಳೆ – 13.12 ದಶಲಕ್ಷ ಟನ್ ಗಳು. (ದಾಖಲೆ)

• ಎಣ್ಣೆ ಕಾಳುಗಳು –37.15 ದಶಲಕ್ಷ ಟನ್ ಗಳು.

• ಕಡಲೆಕಾಯಿಬೀಜ – 9.86 ದಶಲಕ್ಷ ಟನ್ ಗಳು.

• ಸೋಯಾಬೀನ್ –13.12 ದಶಲಕ್ಷ ಟನ್ ಗಳು.

• ರೇಪ್ಸೀಡ್ ಮತ್ತು ಸಾಸಿವೆ–11.46 ದಶಲಕ್ಷ ಟನ್ ಗಳು. (ದಾಖಲೆ)

• ಕಬ್ಬು – 414.04 ದಶಲಕ್ಷ ಟನ್ ಗಳು. (ದಾಖಲೆ)

• ಹತ್ತಿ –34.06 ದಶಲಕ್ಷ ಬೇಲ್ಸ್ (ಪ್ರತಿಯೊಂದು 170 ಕೆ.ಜಿ).

• ಸೆಣಬು ಮತ್ತು ಮೇಸ್ತಾ –9.57 ದಶಲಕ್ಷ ಬೇಲ್ಸ್ (ಪ್ರತಿಯೊಂದು 180 ಕೆಜಿ).

2021-22ರ 2ನೇ ಮುಂಗಡ ಅಂದಾಜಿನ ಪ್ರಕಾರ, ದೇಶದಲ್ಲಿ ಒಟ್ಟು ಆಹಾರ ಧಾನ್ಯಗಳ ಉತ್ಪಾದನೆಯು ದಾಖಲೆಯ 316.06 ದಶಲಕ್ಷ ಟನ್‌ ಗಳು ಎಂದು ಅಂದಾಜಿಸಲಾಗಿದೆ, ಇದು 2020-21ರಲ್ಲಿ ಆಹಾರ ಧಾನ್ಯದ ಉತ್ಪಾದನೆಗಿಂತ 5.32 ದಶಲಕ್ಷ ಟನ್‌ ಗಳಷ್ಟು ಹೆಚ್ಚಾಗಿದೆ. ಇದಲ್ಲದೆ, 2021-22ರಲ್ಲಿ ಉತ್ಪಾದನೆಯು ಹಿಂದಿನ ಐದು ವರ್ಷಗಳ (2016-17 ರಿಂದ 2020-21ರವರೆಗೆ) ಆಹಾರ ಧಾನ್ಯಗಳ ಸರಾಸರಿ ಉತ್ಪಾದನೆಗಿಂತ 25.35 ದಶಲಕ್ಷ ಟನ್‌ ಗಳಷ್ಟು ಹೆಚ್ಚಾಗಿದೆ.

2021-22ರಲ್ಲಿ ಅಕ್ಕಿಯ ಒಟ್ಟು ಉತ್ಪಾದನೆಯು ದಾಖಲೆಯ 127.93 ದಶಲಕ್ಷ ಟನ್‌ ಗಳೆಂದು ಅಂದಾಜಿಸಲಾಗಿದೆ. ಇದು ಕಳೆದ ಐದು ವರ್ಷಗಳ ಸರಾಸರಿ ಉತ್ಪಾದನೆಯಾದ 116.44 ದಶಲಕ್ಷ ಟನ್‌ ಗಳಿಗಿಂತ 11.49 ದಶಲಕ್ಷ ಟನ್‌ ಗಳಷ್ಟು ಹೆಚ್ಚಾಗಿದೆ.

2021-22ರಲ್ಲಿ ಗೋಧಿ ಉತ್ಪಾದನೆಯು ದಾಖಲೆಯ 111.32 ದಶಲಕ್ಷ ಟನ್‌ ಗಳೆಂದು ಅಂದಾಜಿಸಲಾಗಿದೆ. ಇದು ಸರಾಸರಿ ಗೋಧಿ ಉತ್ಪಾದನೆಯಾದ 103.88 ದಶಲಕ್ಷ ಟನ್‌ ಗಳಿಗಿಂತ 7.44 ದಶಲಕ್ಷ ಟನ್‌ ಗಳಷ್ಟು ಹೆಚ್ಚಾಗಿದೆ.

ಪೌಷ್ಟಿಕ/ ಸಿರಿ ಧಾನ್ಯಗಳು ಉತ್ಪಾದನೆ 49.86 ದಶಲಕ್ಷ ಟನ್ ಎಂದು ಅಂದಾಜಿಸಲಾಗಿದೆ, ಇದು ಸರಾಸರಿ ಉತ್ಪಾದನೆಗಿಂತ 3.28 ದಶಲಕ್ಷ ಟನ್ ಹೆಚ್ಚಾಗಿದೆ.

ಒಟ್ಟು ಬೇಳೆಕಾಳುಗಳ ಉತ್ಪಾದನೆ 2021-22ರಲ್ಲಿ 26.96 ದಶಲಕ್ಷ ಟನ್ ಎಂದು ಅಂದಾಜಿಸಲಾಗಿದೆ, ಇದು ಕಳೆದ ಐದು ವರ್ಷಗಳ ಸರಾಸರಿ ಉತ್ಪಾದನೆಯಾದ 23.82 ದಶಲಕ್ಷ ಟನ್ ಗೆ ಹೋಲಿಸಿದರೆ 3.14 ದಶಲಕ್ಷ ಟನ್ ಗಳಷ್ಟು ಹೆಚ್ಚಳವಾಗಲಿದೆ.

ದೇಶದಲ್ಲಿ 2021-22ರಲ್ಲಿ ಒಟ್ಟು ಎಣ್ಣೆಕಾಳುಗಳ ಉತ್ಪಾದನೆ ದಾಖಲೆಯ 37.15 ದಶಲಕ್ಷ ಟನ್ ಗಳಾಗಲಿದೆ ಎಂದು ಅಂದಾಜಿಸಲಾಗಿದೆ. ಇದು 2020-21ನೇ ಸಾಲಿನಲ್ಲಿನ 35.95 ದಶಲಕ್ಷ ಟನ್ ಉತ್ಪಾದನೆಗೆ ಹೋಲಿಸಿದರೆ 1.20 ದಶಲಕ್ಷ ಟನ್ ಹೆಚ್ಚಳವಾಗಿದೆ. ಜೊತೆಗೆ ಎಣ್ಣೆ ಕಾಳುಗಳ ಉತ್ಪಾದನೆ 2021-22ರಲ್ಲಿ ಸರಾಸರಿ ಉತ್ಪಾದನೆಗಿಂತಲೂ 4.46 ದಶಲಕ್ಷ ಟನ್ ಹೆಚ್ಚಾಗಿರಲಿದೆ.

2021-22ರ ಸಾಲಿನಲ್ಲಿ ಕಬ್ಬಿನ ಉತ್ಪಾದನೆ 414.04 ದಶಲಕ್ಷ ಟನ್ ಎಂದು ಅಂದಾಜಿಸಲಾಗಿದೆ. ಇದು ಸರಾಸರಿ ಕಬ್ಬಿನ ಉತ್ಪಾದನೆಯಾದ 373.46 ದಶಲಕ್ಷ ಟನ್ ಗಳಿಗೆ ಹೋಲಿಸಿದರೆ 40.59 ದಶಲಕ್ಷ ಟನ್ ಹೆಚ್ಚಾಗಿದೆ.

ಹತ್ತಿಯ ಉತ್ಪಾದನೆಯನ್ನು 34.06 ದಶಲಕ್ಷ ಬೇಲ್ಸ್ ಎಂದು ಅಂದಾಜು ಮಾಡಲಾಗಿದೆ. (ಪ್ರತಿಯೊಂದು 170 ಕೆ.ಜಿ.) ಇದು ಸರಾಸರಿ ಹತ್ತಿಯ ಉತ್ಪಾದನೆಯಾದ 32.95 ದಶಲಕ್ಷ ಬೇಲ್ಸ್ ಗಳಿಗೆ ಹೋಲಿಸಿದರೆ 1.12 ದಶಲಕ್ಷ ಬೇಲ್ಸ್ ಹೆಚ್ಚಾಗಿರುತ್ತದೆ. ಸೆಣಬು ಮತ್ತು ಮೇಸ್ತಾ ಉತ್ಪಾದನೆಯನ್ನು 9.5 ಬೇಲ್ಸ್ ಎಂದು ಅಂದಾಜಿಸಲಾಗಿದೆ (ಪ್ರತಿಯೊಂದು 180 ಕೆ.ಜಿ.)

2021-22ನೇ ಸಾಲಿನ ಪ್ರಮುಖ ಬೆಳೆಗಳ ಉತ್ಪಾದನೆಯ ಎರಡನೇ ಮುಂಗಡ ಅಂದಾಜು

***



(Release ID: 1798912) Visitor Counter : 489


Read this release in: Hindi , English , Urdu