ಆಯುಷ್

ಅಮೃತ ಬಳ್ಳಿಯು ಸುರಕ್ಷಿತ ಮತ್ತು ಯಾವುದೇ ವಿಷಕಾರಿ ಪರಿಣಾಮಗಳನ್ನು ಉಂಟುಮಾಡುವುದಿಲ್ಲ


ಅಮೃತ ಬಳ್ಳಿಯನ್ನು ಯಕೃತ್ತಿನ ಹಾನಿಯೊಂದಿಗೆ ನಂಟು ಮಾಡುವುದು ದಾರಿ ತಪ್ಪಿಸುವಂತಹ ಕೃತ್ಯ

Posted On: 16 FEB 2022 11:19AM by PIB Bengaluru

ಕೆಲವು ಮಾಧ್ಯಮಗಳು ಅಮೃತ ಬಳ್ಳಿಯನ್ನು ಯಕೃತ್ತಿನ ಹಾನಿಯೊಂದಿಗೆ ತಪ್ಪಾಗಿ ನಂಟು ಮಾಡಿವೆ. ಅಮೃತ ಬಳ್ಳಿಯು (ಟಿನೋಸ್ಪೋರಾ ಕಾರ್ಡಿಫೋಲಿಯಾ) ಸುರಕ್ಷಿತವಾಗಿದೆ ಮತ್ತು ಲಭ್ಯವಿರುವ ದತ್ತಾಂಶದ ಪ್ರಕಾರ, ಇದು ಯಾವುದೇ ವಿಷಕಾರಿ ಪರಿಣಾಮವನ್ನು ಉಂಟುಮಾಡುವುದಿಲ್ಲ ಎಂದು ಆಯುಷ್ ಸಚಿವಾಲಯವು ಮೂಲಕ ಪುನರುಚ್ಚರಿಸುತ್ತದೆ.

ಆಯುರ್ವೇದದಲ್ಲಿ ಅಮೃತ ಬಳ್ಳಿಯನ್ನು ಅತ್ಯುತ್ತಮ ಪುನಶ್ಚೇತನಕಾರಿ ಗಿಡಮೂಲಿಕೆ ಎಂದು ಹೇಳಲಾಗುತ್ತದೆಅಮೃತ ಬಳ್ಳಿಯು ಯಾವುದೇ ವಿಷಕಾರಿ ಪರಿಣಾಮವನ್ನು ಉಂಟುಮಾಡುವುದಿಲ್ಲ ಎಂದು ಅದರ ಜಲೀಯ ಸಾರದ ಅಧ್ಯಯನಗಳು ಸಾರಿವೆ. ಆದಾಗ್ಯೂ, ಔಷಧದ ಸುರಕ್ಷತೆಯು ಅದನ್ನು ಹೇಗೆ ಬಳಸಲಾಗುತ್ತಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಒಂದು ನಿರ್ದಿಷ್ಟ ಔಷಧದ ಸುರಕ್ಷತೆಯನ್ನು ನಿರ್ಧರಿಸುವ ಪ್ರಮುಖ ಅಂಶಗಳಲ್ಲಿ ಡೋಸೇಜ್ ಸಹ ಒಂದಾಗಿದೆ. ಒಂದು ಅಧ್ಯಯನದ ಪ್ರಕಾರ, ಕಡಿಮೆ ಸಾಂದ್ರತೆಯ ಅಮೃತ ಬಳ್ಳಿಯ ಪುಡಿಯು ಹಣ್ಣಿನ ನೊಣಗಳ (ಡ್ರೊಸೊಫಿಲಾ ಮೆಲನೊಗಾಸ್ಟರ್) ಜೀವಿತಾವಧಿಯನ್ನು ಹೆಚ್ಚಿಸುತ್ತದೆ. ಇದೇ ವೇಳೆ, ಗಿಡದ ಹೆಚ್ಚಿನ ಸಾಂದ್ರತೆಯ ಪುಡಿಯು ನೊಣಗಳ ಜೀವಿತಾವಧಿಯನ್ನು ಹಂತಹಂತವಾಗಿ ಕಡಿಮೆ ಮಾಡಿರುವುದು ಕಂಡು ಬಂದಿದೆ. ಅಪೇಕ್ಷಿತ ಪರಿಣಾಮಗಳನ್ನು ಪಡೆಯಲು ಗರಿಷ್ಠ ಡೋಸೇಜ್ ಅನ್ನು ಬಳಸಬೇಕು ಎಂಬುದನ್ನು ಎಂದು ಸ್ಪಷ್ಟವಾಗಿ ಸೂಚಿಸುತ್ತದೆ. ಔಷಧೀಯ ಪರಿಣಾಮಗಳನ್ನು ಪಡೆಯಲು ಅರ್ಹ ವೈದ್ಯರು ಸೂಚಿಸಿದಂತೆ ಔಷಧೀಯ ಗಿಡಮೂಲಿಕೆಯನ್ನು ಸೂಕ್ತ ಪ್ರಮಾಣದಲ್ಲಿ ಬಳಸಬೇಕಾಗುತ್ತದೆ ಎಂದು ಇದು ಸೂಚಿಸುತ್ತದೆ. ವ್ಯಾಪಕ ಶ್ರೇಣಿಯ ಕ್ರಿಯೆಗಳು(ಪರಿಣಾಮಗಳು) ಮತ್ತು ಹೇರಳವಾದ ಅಂಶಗಳನ್ನು ಒಳಗೊಂಡಿರುವ ಅಮೃತ ಬಳ್ಳಿಯು ಔಷಧ ಮೂಲದಲ್ಲಿ ನೈಜ ನಿಧಿ ಎನಿಸಿದೆ.   ವಿವಿಧ ಅಸ್ವಸ್ಥತೆಗಳನ್ನು ಎದುರಿಸುವಲ್ಲಿ ಇದರ ಔಷಧೀಯ ಅನ್ವಯಗಳ ಜೊತೆಗೆ ಆ್ಯಂಟಿ-ಆಕ್ಸಿಡೆಂಟ್, ಆ್ಯಂಟಿ-ಹೈಪರ್ ಗ್ಲೈಸೆಮಿಕ್, ಆ್ಯಂಟಿ-ಹೈಪರ್ಲಿಪಿಡೆಮಿಕ್, ಹೆಪಟೋಪ್ರೊಟೆಕ್ಟಿವ್, ಹೃದಯರಕ್ತನಾಳದ ಸಂರಕ್ಷಕ, ನರ ಸಂರಕ್ಷಕ, ಆಸ್ಟಿಯೋಪ್ರೊಟೆಕ್ಟಿವ್, ರೇಡಿಯೋಪ್ರೊಟೆಕ್ಟಿವ್, ಒತ್ತಡ ನಿವಾರಕ, ಅಡಾಪ್ಟೋಜೆನಿಕ್, ನೋವು ನಿವಾರಕ, ಉರಿಯೂತ-ಪ್ರತಿರೋಧಕ, ಪೈರೆಟಿಕ್ ಪ್ರತಿರೋಧಕ, ಅತಿಸಾರ-ಪ್ರತಿರೋಧಕ, ಹುಣ್ಣು-ಪ್ರತಿರೋಧಕ, ಸೂಕ್ಷ್ಮಜೀವಿ-ಪ್ರತಿರೋಧಕ ಮತ್ತು ಕ್ಯಾನ್ಸರ್-ಪ್ರತಿರೋಧಿಯಾಗಿ ಇದು ಅತ್ಯುತ್ತಮ ಪರಿಣಾಮಗಳನ್ನು ಹೊಂದಿದೆ ಎಂದು ಸಾಬೀತಾಗಿದೆ.

ವಿವಿಧ ಚಯಾಪಚಯ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡುವಲ್ಲಿ ಇದರ ಆರೋಗ್ಯ ಪ್ರಯೋಜನಗಳು ಹಾಗೂ ರೋಗನಿರೋಧಕ ವರ್ಧಕವಾಗಿ ಅಮೃತದ ಬಳ್ಳಿಯ ಸಾಮರ್ಥ್ಯದ ಮೇಲೆ ವಿಶೇಷ ಗಮನ ಹರಿಸಲಾಗಿದೆ. ಚಯಾಪಚಯ, ಎಂಡೋಕ್ರಿನಲ್ ಮತ್ತು ಇತರ ಹಲವಾರು ಕಾಯಿಲೆಗಳ ಚಿಕಿತ್ಸೆಯಲ್ಲಿ ಪ್ರಮುಖ ಅಂಶವಾಗಿ ಇದನ್ನು ಬಳಸಲಾಗುತ್ತದೆ. ಇದು ಮಾನವನ ಜೀವಿತಾವಧಿಯ ಸುಧಾರಣೆಯಲ್ಲಿ ಸಹಾಯ ಮಾಡುತ್ತದೆ. ಇದು ಸಾಂಪ್ರದಾಯಿಕ ವೈದ್ಯಕೀಯ ವ್ಯವಸ್ಥೆಗಳಲ್ಲಿ ಅಪಾರ ಚಿಕಿತ್ಸಕ ಅನ್ವಯಗಳಿಗೆ ಜನಪ್ರಿಯವಾಗಿ ಹೆಸರುವಾಸಿಯಾದ ಗಿಡಮೂಲಿಕೆಯಾಗಿದೆ. ಇದನ್ನು ಕೋವಿಡ್-19 ಸಾಂಕ್ರಾಮಿಕ ನಿರ್ವಹಣೆಯಲ್ಲಿ ಬಳಸಲಾಗಿದೆ. ಇದರ ಒಟ್ಟಾರೆ ಆರೋಗ್ಯ ಪ್ರಯೋಜನಗಳನ್ನು ಪರಿಗಣಿಸಿದರೆ, ಗಿಡಮೂಲಿಕೆ ವಿಷಕಾರಿ ಎಂದು ಹೇಳಲಾಗದು.

***



(Release ID: 1798753) Visitor Counter : 259