ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ನವಭಾರತ@100 ಬಗ್ಗೆ ವಿಶ್ವಾಸ ಮೂಡಲು ಮತ್ತು ಆಕಾಂಕ್ಷೆಗಳನ್ನು ಈಡೇರಿಸಲು ಬಜೆಟ್ ನೀಲ ನಕ್ಷೆಯಾಗಲಿದೆ: ಶ್ರೀ ಅನುರಾಗ್ ಠಾಕೂರ್


2022-23ರ ಸಾಲಿನ ಬಜೆಟ್ ನಲ್ಲಿ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯಕ್ಕೆ 3062.60 ಕೋಟಿ ರೂಪಾಯಿ ಮಂಜೂರಾಗಿದ್ದು, 2021-22 ರ ಸಾಲಿಗೆ ಹೋಲಿಸಿದರೆ ಶೇ 11.08 ಹೆಚ್ಚುವರಿ ಅನುದಾನ ಮಂಜೂರು

ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ಭಾಗದಲ್ಲಿ ಕ್ರೀಡಾ ಸೌಲಭ್ಯಗಳು ಮತ್ತು ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಬಜೆಟ್ ವೆಚ್ಚದಲ್ಲಿ ಹೆಚ್ಚಳ

ಯುವ ಮತ್ತು ಯುವಶಕ್ತಿ ಅಭಿವೃದ್ಧಿಗಾಗಿ ಬಜೆಟ್ ಅನುದಾನ ಹಂಚಿಕೆಯಲ್ಲಿ ಏರಿಕೆ

प्रविष्टि तिथि: 01 FEB 2022 7:13PM by PIB Bengaluru

2022-23 ಸಾಲಿನ ಕೇಂದ್ರ ಬಜೆಟ್ ನಲ್ಲಿ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯಕ್ಕೆ 3062.60 ಕೋಟಿ ರೂಪಾಯಿ ಅನುದಾನ ಹಂಚಿಕೆಯಾಗಿದ್ದು, 2021-2022 ಸಾಲಿಗೆ ಹೋಲಿಕೆ ಮಾಡಿದರೆ ಶೇ 11.08 ಕೋಟಿ ರೂಪಾಯಿ (305.58 ಕೋಟಿ ರೂಪಾಯಿ) ಅಂದಾಜು ಏರಿಕೆಯಾಗಿದೆ.

ಯುವ ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಆಶ್ರಯವಾಗಿರುವ ಯುವ ವ್ಯವಹಾರಗಳ ಇಲಾಖೆಗೆ 138  ಕೋಟಿ ರೂಪಾಯಿ ಮಂಜೂರಾಗಿದ್ದು, 2022-23 ಸಾಲಿಗೆ ಹೋಲಿಕೆ ಮಾಡಿದರೆ 29 ಕೋಟಿ ರೂಪಾಯಿ ಏರಿಕೆಯಾಗಿದೆ. ರಾಷ್ಟ್ರೀಯ ಸೇವಾ ಕಾರ್ಯಕ್ರಮ [ಎನ್.ಎಸ್.ಎಸ್]ಗೆ 283.50 ಕೋಟಿ ರೂಪಾಯಿ, ಕೇಂದ್ರದ ಮಹತ್ವಾಕಾಂಕ್ಷಿಯ ರಾಷ್ಟ್ರೀಯ ಯುವ ನಿರ್ಮಾಣ ಚಟುವಟಿಕೆಗಳಿಗಾಗಿ 75 ಕೋಟಿ ರೂಪಾಯಿ ಮಂಜೂರಾಗಿದ್ದು, ಯುವ ಶಕ್ತಿ ಸಬಲೀಕರಣಕ್ಕೆ 18 ಕೋಟಿ ರೂಪಾಯಿ ಹೆಚ್ಚುವರಿಯಾಗಿ ನೀಡಲಾಗಿದೆ. ತಳಮಟ್ಟದಲ್ಲಿ ಕ್ರೀಡೆಯನ್ನು ಅಭಿವೃದ್ಧಿಪಡಿಸುವ ಖೇಲೋ ಇಂಡಿಯಾ ಕಾರ್ಯಕ್ರಮಕ್ಕೆ 974 ಕೋಟಿ ರೂಪಾಯಿ ನಿಗದಿ ಮಾಡಿದ್ದು, 2021-22 ಸಾಲಿಗೆ ಹೋಲಿಕೆ ಮಾಡಿದರೆ 48.09% ರಷ್ಟು ಏರಿಕೆಯಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರೀಡಾ ಸೌಲಭ್ಯಗಳನ್ನು ವೃದ್ದಿಸಲು 2022-23 ರಲ್ಲಿ 15 ಕೋಟಿ ರೂಪಾಯಿಯಿಂದ 50 ಕೋಟಿ ರೂಪಾಯಿಗೆ ಏರಿಕೆ ಮಾಡಲಾಗಿದೆ. ಈಶಾನ್ಯ ರಾಜ್ಯಗಳಿಗೆ ಹಿಂದಿನ ವರ್ಷ 276.19 ಕೋಟಿ ರೂಪಾಯಿ ನೀಡಿದ್ದು, ಬಾರಿ 330.94 ಕೋಟಿ ರೂಪಾಯಿಗೆ ಅನುದಾನ ಹೆಚ್ಚಿಸಲಾಗಿದೆ

ಕ್ರೀಡಾ ಇಲಾಖೆಯಲ್ಲಿ ಕ್ರೀಡಾ ಪಟುಗಳಿಗೆ ದೇಶದಲ್ಲಿ ತರಬೇತಿ ಮತ್ತು ಸೌಲಭ್ಯಗಳನ್ನು ಕಲ್ಪಿಸುವ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ 2022-23 ನೇ ಸಾಲಿನ ಬಜೆಟ್ ನಲ್ಲಿ 653 ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ. ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ 2021-22 ಸಾಲಿನಲ್ಲಿ 181 ಕೋಟಿ ರೂಪಾಯಿ ನಿಗದಿಮಾಡಿದ್ದು, 2022-23 ರಲ್ಲಿ 280 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ, ಇದರಿಂದ ಕ್ರೀಡಾ ಇಲಾಖೆ ಮತ್ತು ಕ್ರೀಡಾ ಒಕ್ಕೂಟಗಳ ನಡುವೆ ಸಮನ್ವಯತೆ ಹೆಚ್ಚಾಗುವ ಜತೆಗೆ ಕ್ರೀಡಾಪಟುಗಳಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಕಲ್ಪಿಸಲು ಸಹಕಾರಿಯಾಗಲಿದೆ. ಇದರಿಂದ ಮುಂಬರುವ ಕಾಮನ್ ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಕ್ರೀಡಾಕೂಟಗಳಲ್ಲಿ ಭಾರತೀಯ ಅಥ್ಲೇಟ್ಸ್ ಗಳಿಗೆ ಸಜ್ಜಾಗಲು ನೆರವಾಗಲಿದೆ.

ಬಜೆಟ್ ಕುರಿತು ಮಾತನಾಡಿದ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್, “ನವಭಾರತದ@100 ವಿಶ್ವಾಸ ಮತ್ತು ನಿರೀಕ್ಷೆಗಳನ್ನು ಸಾಕಾರಗೊಳಿಸಲು ಬಜೆಟ್ ನೀಲ ನಕ್ಷೆಯಾಗಿದೆಎಂದು ಹೇಳಿದರು.  

ನಾಡಾ ಗೆ ಬಜೆಟ್ ನಲ್ಲಿ 70% ಅನುದಾನ ಮಂಜೂರು ಮಾಡಲಾಗಿದ್ದು, (17 ಕೋಟಿ ರೂಪಾಯಿ 2022-23) 2021-22 ಸಾಲಿನಲ್ಲಿ 10 ಕೋಟಿ ರೂಪಾಯಿ ಮಂಜೂರಾಗಿತ್ತು. ಇದರಿಂದ ದೇಶದಲ್ಲಿ ಉದ್ದೀಪನಾ ಮದ್ದು ಚಟುವಟಿಕೆಗಳನ್ನು ಬಲಗೊಳಿಸಲು ಮತ್ತು ಭಾರತದಲ್ಲಿ ಕ್ರೀಡಾ ಚಟುವಟಿಕೆಗಳನ್ನು ವಿಶ್ವದರ್ಜೆಗೇರಿಸುವ ಬದ್ಧತೆಯನ್ನು ಸಾಕಾರಗೊಳಿಸಲು ಸಹಕಾರಿಯಾಗಲಿದೆ ಎಂದರು.   

***


(रिलीज़ आईडी: 1794706) आगंतुक पटल : 221
इस विज्ञप्ति को इन भाषाओं में पढ़ें: English , Urdu , हिन्दी , Punjabi , Tamil