ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಸತ್ಯ v/s ಮಿಥ್ಯಗಳು
ʻಕೋ-ವಿನ್ʼ ಪೋರ್ಟಲ್ನಿಂದ ಯಾವುದೇ ದತ್ತಾಂಶ ಸೋರಿಕೆಯಾಗಿಲ್ಲ
ʻಕೋ-ವಿನ್ʼನಲ್ಲಿ ಸಂಗ್ರಹಿಸಲಾದ ಸಂಪೂರ್ಣ ದತ್ತಾಂಶ ಈ ಡಿಜಿಟಲ್ ವೇದಿಕೆಯಲ್ಲಿ ಸುರಕ್ಷಿತ ಮತ್ತು ಸುಭದ್ರವಾಗಿದೆ
Posted On:
21 JAN 2022 8:28PM by PIB Bengaluru
ʻಕೋ-ವಿನ್ʼ ಪೋರ್ಟಲ್ನಲ್ಲಿ ಸಂಗ್ರಹಿಸಲಾದ ದತ್ತಾಂಶ ಆನ್ಲೈನ್ನಲ್ಲಿ ಸೋರಿಕೆಯಾಗಿದೆ ಎಂದು ಹಲವಾರು ಮಾಧ್ಯಮ ವರದಿಗಳು ತಿಳಿಸಿವೆ.
ʻಕೋ-ವಿನ್ʼ ಪೋರ್ಟಲ್ನಿಂದ ಯಾವುದೇ ದತ್ತಾಂಶ ಸೋರಿಕೆಯಾಗಿಲ್ಲ ಮತ್ತು ನಿವಾಸಿಗಳ ಸಂಪೂರ್ಣ ದತ್ತಾಂಶವು ಈ ಡಿಜಿಟಲ್ ವೇದಿಕೆಯಲ್ಲಿ ಸುರಕ್ಷಿತ ಮತ್ತು ಸುಭದ್ರವಾಗಿದೆ ಎಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಈ ಸುದ್ದಿಯ ಅಂಶಗಳ ಪರಿಶೀಲನೆ ನಡೆಸುತ್ತದೆಯಾದರೂ ಪ್ರಾಥಮಿಕವಾಗಿ ಈ ಪ್ರತಿಪಾದನೆ ಸರಿಯಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಏಕೆಂದರೆ ಲಸಿಕೆಗಾಗಿ ವ್ಯಕ್ತಿಯ ವಿಳಾಸವನ್ನಾಗಲೀ ಅಥವಾ ಕೋವಿಡ್-19 ಆರ್ಟಿ-ಪಿಸಿಆರ್ ಪರೀಕ್ಷಾ ಫಲಿತಾಂಶಗಳನ್ನಾಗಲೀ ʻಕೋ-ವಿನ್ʼ ಸಂಗ್ರಹಿಸುವುದಿಲ್ಲ.
***
(Release ID: 1791841)
Visitor Counter : 235