ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಕೇಂದ್ರ ಸರ್ಕಾರವು 2022 ರ ಜನವರಿ 10 ರಿಂದ 16 ರವರೆಗೆ ಮೊಟ್ಟ ಮೊದಲ ಸ್ಟಾರ್ಟ್ಅಪ್ ಇಂಡಿಯಾ ಇನ್ನೋವೇಶನ್ ವೀಕ್ ಅನ್ನು ಆಯೋಜಿಸಲಿದೆ .


ಉದ್ಯಮಶೀಲತೆಯನ್ನು ಆಚರಿಸಲು ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ದೇಶದ ಪ್ರಮುಖ ನವೋದ್ಯಮಗಳು (ಸ್ಟಾರ್ಟ್ಅಪ್ಗಳು), ಉದ್ಯಮಿಗಳು, ಹೂಡಿಕೆದಾರರು, ಇನ್ಕ್ಯುಬೇಟರ್ಗಳು, ಧನಸಹಾಯ ಘಟಕಗಳು, ಬ್ಯಾಂಕುಗಳು, ನೀತಿ ನಿರೂಪಕರು ಇತ್ಯಾದಿಗಳನ್ನು ಒಂದು ವೇದಿಕೆಯಡಿಯಲ್ಲಿ ಒಟ್ಟುಗೂಡಿಸುವ ಕಾರ್ಯಕ್ರಮ

"ಸ್ಟಾರ್ಟ್ಅಪ್ ಇಂಡಿಯಾ ಇನ್ನೋವೇಶನ್ ವೀಕ್"

ಭಾರತದಾದ್ಯಂತ ಉದ್ಯಮಶೀಲತೆಯ ವಿಸ್ತಾರವನ್ನು ಪ್ರದರ್ಶಿಸಲು ವಿನ್ಯಾಸಗೊಳಿಸಲಾಗಿದೆ.

Posted On: 09 JAN 2022 4:01PM by PIB Bengaluru

ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ (ಡಿಪಿಐಐಟಿ) ಜನವರಿ 10 ರಿಂದ 16 ರವರೆಗೆ ಮೊಟ್ಟ ಮೊದಲ ಬಾರಿಗೆ ಸ್ಟಾರ್ಟ್‌ಅಪ್ ಇಂಡಿಯಾ ಇನ್ನೋವೇಶನ್ ವೀಕ್ ಅನ್ನು ಆಯೋಜಿಸುತ್ತಿದೆ. ಈ ವಾಸ್ತವೋಪಮ  (ವರ್ಚುವಲ್) ಒಂದು ವಾರದ ಅವಧಿಯ ನಾವೀನ್ಯತೆ ಆಚರಣೆಯು ಭಾರತದ ಸ್ವಾತಂತ್ರ್ಯದ 75 ನೇ ವರ್ಷದ 'ಸ್ವಾತಂತ್ರ್ಯದ ಅಮೃತ ಮಹೋತ್ಸವದ’ ಸ್ಮರಣಾರ್ಥದ ಉದ್ದೇಶವನ್ನು ಹೊಂದಿದೆ  ಮತ್ತು ಭಾರತದಾದ್ಯಂತ ಉದ್ಯಮಶೀಲತೆಯ ಹರಡುವಿಕೆ ಮತ್ತು ವಿಸ್ತಾರವನ್ನು ಪ್ರದರ್ಶಿಸಲು ವಿನ್ಯಾಸಗೊಳಿಸಲಾಗಿದೆ.

 ಸ್ಟಾರ್ಟಪ್ ಜಗತ್ತಿನಲ್ಲಿ, 2021 ಅನ್ನು 'ಯುನಿಕಾರ್ನ್‌ಗಳ ವರ್ಷ' ಎಂದು ಗುರುತಿಸಲಾಗಿದೆ, ಈ ವರ್ಷದಲ್ಲಿ 40+ ಯುನಿಕಾರ್ನ್‌ಗಳನ್ನು (1 ಶತಕೋಟಿ ಡಾಲರ್ ಮೌಲ್ಯವನ್ನು ತಲುಪುವ ನವೋದ್ಯಮ) ಸೇರಿಸಲಾಗಿದೆ.

 ಭಾರತವು ಜಾಗತಿಕ ನಾವೀನ್ಯತೆಯ ಕೇಂದ್ರವಾಗಿ ಹೊರಹೊಮ್ಮುತ್ತಿದೆ, ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆ ಹೊಂದಿರುವ ದೇಶವಾಗಿದೆ. ಡಿಪಿಐಐಟಿ ಯು ಇಲ್ಲಿಯವರೆಗೆ  61,000 ಕ್ಕೂ ಹೆಚ್ಚು ನವೋದ್ಯಮಗಳನ್ನು ಗುರುತಿಸಿದೆ. 55 ಕೈಗಾರಿಕೆಗಳನ್ನು ಪ್ರತಿನಿಧಿಸುವ ನಮ್ಮ ನವೋದ್ಯಮಗಳು, 633 ಜಿಲ್ಲೆಗಳಲ್ಲಿವೆ, ದೇಶದ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ  ಕನಿಷ್ಠ ಒಂದು ನವೋದ್ಯಮದೊಂದಿಗೆ  2016 ರಿಂದ 6 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿವೆ. 45% ನವೋದ್ಯಮಗಳು ಶ್ರೇಣಿ-2 ಮತ್ತು ಶ್ರೇಣಿ-3 ನಗರಗಳಿಂದ ಮತ್ತು ಅವುಗಳಲ್ಲಿ 45% ರಷ್ಟನ್ನು ಮಹಿಳಾ ಉದ್ಯಮಿಗಳು ಪ್ರತಿನಿಧಿಸುತ್ತಾರೆ. ನವೋದ್ಯಮಗಳು ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಭಾರತದ ಸೇರ್ಪಡಿಕೆಯನ್ನು ತೀವ್ರಗೊಳಿಸಲು ಮತ್ತು ಜಾಗತಿಕ ಪರಿಣಾಮವನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿವೆ.

ಉದ್ಯಮಶೀಲತೆಯನ್ನು ಆಚರಿಸಲು ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ದೇಶದ ಪ್ರಮುಖ ನವೋದ್ಯಮಗಳು, ಉದ್ಯಮಿಗಳು, ಹೂಡಿಕೆದಾರರು, ಇನ್‌ಕ್ಯುಬೇಟರ್‌ಗಳು, ಧನಸಹಾಯ ಸಂಸ್ಥೆಗಳು, ಬ್ಯಾಂಕುಗಳು, ನೀತಿ ನಿರೂಪಕರು ಮತ್ತು ಇತರ ರಾಷ್ಟ್ರೀಯ/ಅಂತರರಾಷ್ಟ್ರೀಯ ಮಧ್ಯಸ್ಥಗಾರರನ್ನು ಒಟ್ಟುಗೂಡಿಸುವುದು ಈ  ನವೋದ್ಯಮ ಮತ್ತು ನಾವೀನ್ಯತೆ ಉತ್ಸವದ ಮುಖ್ಯ ಗುರಿಯಾಗಿದೆ. ಇದಲ್ಲದೆ, ನವೋದ್ಯಮ ಪರಿಸರ ವ್ಯವಸ್ಥೆಗಳನ್ನು ಪೋಷಿಸುವ ಬಗ್ಗೆ ಜ್ಞಾನವನ್ನು ವಿನಿಮಯ ಮಾಡಿಕೊಳ್ಳಲು; ಉದ್ಯಮಶೀಲ ಪರಿಸರ ವ್ಯವಸ್ಥೆಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು; ಆರಂಭಿಕ ಹೂಡಿಕೆಗಳಿಗಾಗಿ ಜಾಗತಿಕ ಮತ್ತು ದೇಶೀಯ ಬಂಡವಾಳವನ್ನು ಸಜ್ಜುಗೊಳಿಸಲು; ನಾವೀನ್ಯತೆ ಮತ್ತು ಉದ್ಯಮಶೀಲತೆಗಾಗಿ ಯುವಕರನ್ನು ಪ್ರೋತ್ಸಾಹಿಸಲು ಮತ್ತು ಪ್ರೇರೇಪಿಸಲು; ನವೋದ್ಯಮಗಳಿಗೆ ಮಾರುಕಟ್ಟೆ ಪ್ರವೇಶ ಅವಕಾಶಗಳನ್ನು ಒದಗಿಸಲು; ಮತ್ತು ಭಾರತದಿಂದ ಉತ್ತಮ ಗುಣಮಟ್ಟದ, ಉನ್ನತ ತಂತ್ರಜ್ಞಾನ ಮತ್ತು ಮಿತವ್ಯಯದ ನಾವೀನ್ಯತೆಗಳನ್ನು ಪ್ರದರ್ಶಿಸುವುದು ಕೂಡ ಈ ಉತ್ಸವದ ಗುರಿಯಾಗಿದೆ.

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಮತ್ತು ಭಾರತ ಸರ್ಕಾರದ ವಿವಿಧ ಇಲಾಖೆಗಳ ಭಾಗವಹಿಸುವಿಕೆಯೊಂದಿಗೆ, ವಾರದ ಅವಧಿಯ ಕಾರ್ಯಕ್ರಮವು  ಸಂವಾದಾತ್ಮಕ ಅಧಿವೇಶನಗಳು, ಕಾರ್ಯಾಗಾರಗಳು ಮತ್ತು  ನವೋದ್ಯಮ (ಸ್ಟಾರ್ಟಪ್‌)ಗಳಿಗೆ ಅಕಾಡೆಮಿ ಮತ್ತು ಮೆಂಟರ್‌ಶಿಪ್ ಬೆಂಬಲ, ಬೆಳವಣಿಗೆ ಮತ್ತು ವೇಗವರ್ಧನೆಯಂತಹ ವಿಷಯಗಳ ಮೂಲಕ ಆರಂಭಿಕ ಪರಿಸರ ವ್ಯವಸ್ಥೆಯ ಪ್ರಮುಖ ಅಂಶಗಳನ್ನು ತಿಳಿಸುತ್ತದೆ. ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ, ಕಾರ್ಪೊರೇಟ್‌ಗಳ ಮೂಲಕ ಮಾರುಕಟ್ಟೆ ಪ್ರವೇಶ ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಸರ್ಕಾರ, ಮತ್ತು ಜಾಗತಿಕವಾಗಿ ಮುಟ್ಟಲು ಹಣಕಾಸು ಮತ್ತು ಅಂತರರಾಷ್ಟ್ರೀಯ ಮಾರ್ಗಗಳು ಇವುಗಳ ಬಗ್ಗೆ  ಪ್ರಸ್ತುತಿಗಳ ಮೂಲಕ ತಿಳಿಸಲಾಗುವುದು. ಹೆಚ್ಚುವರಿಯಾಗಿ, ಗುರುತಿಸಲಾದ ವಿಷಯ (ಥೀಮ್‌) ಗಳ ಆಧಾರದ ಮೇಲೆ,  ಅನುಭವದ  ಬೂತ್‌ಗಳು, ಪಿಚಿಂಗ್ ಅಥವಾ ರಿವರ್ಸ್ ಪಿಚಿಂಗ್ ಸೆಷನ್‌ಗಳು ಮತ್ತು ಇನ್ನೋವೇಶನ್ ಶೋಕೇಸ್‌ಗಳಂತಹ ವಿವಿಧ ಸಮಾನಾಂತರ ಚಟುವಟಿಕೆಗಳು ಇರುತ್ತವೆ.

ಕಾರ್ಯಕ್ರಮದ ನೋಂದಣಿಗೆ ಲಿಂಕ್ https://www.startupindiainnovationweek.in

 

ಒಂದು ವಾರದ ಆಚರಣೆಯ ಪ್ರಮುಖ ಅಂಶಗಳು:

ನವೋದ್ಯಮಗಳೊಂದಿಗೆ ಗೌರವಾನ್ವಿತ ಪ್ರಧಾನ ಮಂತ್ರಿಯವರ ಸಂವಾದ

ರಾಷ್ಟ್ರೀಯ ಸ್ಟಾರ್ಟ್ ಅಪ್ ಪ್ರಶಸ್ತಿಗಳು 2021 ರ ಫಲಿತಾಂಶ ಘೋಷಣೆ

 ದೂರದರ್ಶನ ಸ್ಟಾರ್ಟ್‌ಅಪ್ ಚಾಂಪಿಯನ್ಸ್ 2.0 ಶೋ  ಚಾಲನೆ 

 ಜಾಗತಿಕ ಹೂಡಿಕೆದಾರರು ಮತ್ತು ದೇಶೀಯ ನಿಧಿಗಳೊಂದಿಗೆ ದುಂಡುಮೇಜಿನ ಸಭೆ

 ಡಿಜಿಟಲ್ ಕಾಮರ್ಸ್ ಡಿಜಿಟಲ್ ಸ್ಟ್ರಾಟಜಿಗಾಗಿ ಮುಕ್ತ ಜಾಲದ ಚಾಲನೆ 

ವಿವಿಧ ಅವಧಿಗಳಲ್ಲಿ ಶಿಕ್ಷಣ ಸಚಿವಾಲಯ, ನೀತಿ ಆಯೋಗ, ಪಿಎಸ್‌ಎ ಕಚೇರಿ, ಡಿಬಿಟಿ, ಡಿಎಸ್‌ಟಿ, ಮಾಧ್ಯಮ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ, ರಕ್ಷಣಾ ಸಚಿವಾಲಯ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಮತ್ತು ಇತರ ಇಲಾಖೆಗಳ ಭಾಗವಹಿಸುವಿಕೆ.

ಮೀನುಗಾರಿಕೆ ಇಲಾಖೆಯಿಂದ 'ಫಿಶರೀಸ್ ಸ್ಟಾರ್ಟ್ಅಪ್ ಗ್ರ್ಯಾಂಡ್ ಚಾಲೆಂಜ್' ಪ್ರಾರಂಭ

ಪಿಚಿಂಗ್ ಸೆಷನ್‌ಗಳು ಮತ್ತು ದೇಶದಾದ್ಯಂತ ಸ್ಟಾರ್ಟ್‌ಅಪ್‌ಗಳಿಗಾಗಿ ಕಾರ್ಪೊರೇಟ್ ಸಂಪರ್ಕ ಕಾರ್ಯಕ್ರಮಗಳು.

 

 ವಾರದ ಆಚರಣೆಯ ಪ್ರಮುಖ ದಿನವಾರು ಮುಖ್ಯಾಂಶಗಳು:

ದಿನ 1 (ಜನವರಿ 10)

*

ಒಂದು ವಾರ ಕಾಲ ನಡೆಯುವ ಕಾರ್ಯಕ್ರಮಕ್ಕೆ   2022 ರ ಜನವರಿ 1, 10 ರಂದು ಗೌರವಾನ್ವಿತ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವರಾದ ಶ್ರೀ ಸೋಮ್ ಪ್ರಕಾಶ್ ಮತ್ತು ಶ್ರೀಮತಿ ಅನುಪ್ರಿಯಾ ಪಟೇಲ್ ಸಮ್ಮುಖದಲ್ಲಿ ಚಾಲನೆ ನೀಡಲಿದ್ದಾರೆ. ಉದ್ಘಾಟನಾ ಅಧಿವೇಶನದಲ್ಲಿ ಈ ಕೆಳಗಿನ ಇತರ ಪ್ರಖ್ಯಾತ ಭಾಷಣಕಾರರು ಒಳಗೊಂಡಿರುತ್ತಾರೆ :

ಶ್ರೀ ಅನುರಾಗ್ ಜೈನ್, ಕಾರ್ಯದರ್ಶಿ, ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ

 ಶ್ರೀ ಸಂಜೀವ್ ಬಿಖ್ಚಂದಾನಿ, ಸ್ಥಾಪಕ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ, ಇನ್ಫೋ ಎಡ್ಜ್ ಇಂಡಿಯಾ ಲಿಮಿಟೆಡ್

ಶ್ರೀ ಅಭಿರಾಜ್ ಸಿಂಗ್ ಭಾಲ್, ಸಹ-ಸ್ಥಾಪಕ ಮತ್ತು ಸಿಇಒ, ಅರ್ಬನ್ ಕಂಪನಿ.

1ನೇ ದಿನವು "ಸಹ-ಸೃಷ್ಟಿಯ ಮೂಲಕ ವ್ಯವಹಾರಗಳನ್ನು ಪರಿವರ್ತಿಸುವುದು"  ಎನ್ನುವ ವಿಷಯದ ಬಗ್ಗೆ  ಈ ಭಾಷಣಕಾರರೊಂದಿಗೆ ಚರ್ಚೆಯನ್ನು ಸಹ ಆಯೋಜಿಸುತ್ತದೆ

ಡಾ.ರಾಜೇಶ್ ಎಸ್.ಗೋಖಲೆ, ಕಾರ್ಯದರ್ಶಿ, ಜೈವಿಕ ತಂತ್ರಜ್ಞಾನ ಇಲಾಖೆ

ಶ್ರೀ ಅಜಯ್ ಕುಮಾರ್, ಕಾರ್ಯದರ್ಶಿ, ರಕ್ಷಣಾ ಉತ್ಪಾದನಾ ಇಲಾಖೆ

 ಶ್ರೀ ಕ್ರಿಸ್ ಗೋಪಾಲಕೃಷ್ಣನ್, ಅಧ್ಯಕ್ಷರು, ಆಕ್ಸಿಲರ್ ವೆಂಚರ್ಸ್

 ಶ್ರೀ ಆದಿತ್ಯ ನಟರಾಜ್, ಸಿಇಒ, ಪಿರಮಲ್ ಫೌಂಡೇಶನ್

 ಶ್ರೀ ಸಂಜೀವ್ ಕಪೂರ್, ಪ್ರಸಿದ್ಧ ಬಾಣಸಿಗರು, ವಾಣಿಜ್ಯೋದ್ಯಮಿ ಮತ್ತು ದೂರದರ್ಶನದ ಹೆಸರಾಂತ ವ್ಯಕ್ತಿ

ಶ್ರೀಮತಿ ಶೋಬನಾ ಕಾಮಿನೇನಿ, ಕಾರ್ಯನಿರ್ವಾಹಕ ಉಪಾಧ್ಯಕ್ಷರು, ಅಪೋಲೋ ಆಸ್ಪತ್ರೆಗಳು.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಮತ್ತು ಡಿಜಿಟಲ್ ವಾಣಿಜ್ಯಕ್ಕಾಗಿ ಮುಕ್ತ ನೆಟ್‌ವರ್ಕ್ ನಿಂದ ಸೆಷನ್ ಅನ್ನು ಸಹ  ದಿನ 1ರಂದು ಆಯೋಜಿಸಲಾಗುತ್ತದೆ.

 

ದಿನ 2 (ಜನವರಿ 11)

*

ದಿನ 2ಅನ್ನು ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ (AICTE) ಸಂಯೋಜಿಸುತ್ತದೆ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಾವೀನ್ಯತೆ, ಮಾನವ ಮೌಲ್ಯಗಳು ಮತ್ತು ಸುಸ್ಥಿರತೆ ಮತ್ತು ಹೈಲೈಟ್ ಇನ್ನೋವೇಶನ್ ಅಭ್ಯಾಸಗಳ ಕುರಿತು ಸೆಷನ್‌ಗಳನ್ನು ಒಳಗೊಂಡಿರುತ್ತದೆ. ದಿನದ 2 ​​ರ ಉದ್ಘಾಟನಾ ಸಮಾರಂಭವು ಗೌರವಾನ್ವಿತ ಮಧ್ಯಸ್ಥಗಾರರಿಂದ ಭಾಷಣಗಳನ್ನು ಆಯೋಜಿಸುತ್ತದೆ.

ಶ್ರೀಮತಿ. ಅನಿತಾ ಕರ್ವಾಲ್, ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ

 ಶ್ರೀ ಕೆ. ಸಂಜಯ್ ಮೂರ್ತಿ, ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ

ಡಾ. ಅಭಯ್ ಜೆರೆ, ಮುಖ್ಯ ನಾವೀನ್ಯತೆ ಅಧಿಕಾರಿ, ಇನ್ನೋವೇಶನ್ ಸೆಲ್, ಶಿಕ್ಷಣ ಸಚಿವಾಲಯ, ಭಾರತ ಸರ್ಕಾರ.

 

ಝೋಹೋ ಕಾರ್ಪೊರೇಶನ್‌ನ ಸಂಸ್ಥಾಪಕರಾದ ಶ್ರೀ ಶ್ರೀಧರ್ ವೆಂಬು ಮತ್ತು ಫೇರ್ ಐ   ನ ಸಂಸ್ಥಾಪಕರಾದ ಶ್ರೀ ಗೌತಮ್ ಅವರು ಪ್ರಮುಖ ಭಾಷಣಗಳನ್ನು ಮಾಡುತ್ತಾರೆ.

"ನಾವೀನ್ಯತೆ, ಮಾನವ ಮೌಲ್ಯಗಳು ಮತ್ತು ಸುಸ್ಥಿರತೆ" ಮತ್ತು "ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅತ್ಯುತ್ತಮ ನಾವೀನ್ಯತೆ ಮತ್ತು ಆರಂಭಿಕ ಅಭ್ಯಾಸಗಳು" ಕುರಿತು ಹಲವಾರು  ಚರ್ಚೆಗಳನ್ನು ಕೈಗೊಳ್ಳಲಾಗುತ್ತದೆ. ಚರ್ಚೆಗಳು ಪ್ರಖ್ಯಾತ ಭಾಷಣಕಾರರನ್ನು ಹೊಂದಿರುತ್ತದೆ :

ಶ್ರೀ ಹರ್ಷಿತ್ ರಾಥೋರ್, ಸಹ-ಸ್ಥಾಪಕ ಮತ್ತು ಸಿಇಒ, ನಾಕ್ಕಾರ್ಕ್ ರೊಬೊಟಿಕ್ಸ್

 ಶ್ರೀ ವಿಕಾಶ್ ಮಿಟ್ಟರ್ಸೇನ್, ನಜಾರಾ ಟೆಕ್ನಾಲಜೀಸ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ

 ಶ್ರೀ ಶ್ರೀಕಾಂತ್ ಬಡ್ವೆ, ಆಡಳಿತ ನಿರ್ದೇಶಕರು, ಬದ್ವೆ ಇಂಡಸ್ಟ್ರೀಸ್

 ಪ್ರೊ. ಅಭಯ್ ಕರಂಡಿಕರ್, ನಿರ್ದೇಶಕ, ಐಐಟಿ ಕಾನ್ಪುರ

 ಪ್ರೊ. ಎಬಿ ಪಂಡಿತ್, ಉಪಕುಲಪತಿ, ಐಸಿಟಿ ಮುಂಬೈ.

ಇದಲ್ಲದೆ, ಚರ್ಚೆಗಳನ್ನು ನಡೆಸುವವರು  ನಾವೀನ್ಯತೆಯ ಕ್ಷೇತ್ರದಲ್ಲಿ  ಪ್ರಮುಖರಾದ ಪ್ರೊ. ಅನಿಲ್ ಡಿ ಸಹಸ್ರಬುಧೆ, ಅಧ್ಯಕ್ಷರು, ಎಐಸಿಟಿಇ ಮತ್ತು ಡಾ. ಕೆ. ರಾಧಾಕೃಷ್ಣನ್, ಮಾಜಿ ಅಧ್ಯಕ್ಷರು, ಇಸ್ರೊ.

 

ದಿನ 3 (ಜನವರಿ 12)

*

ಒಂದು ವಾರದ ಅವಧಿಯ  ಕಾರ್ಯುಕ್ರಮದ 3 ನೇ ದಿನವನ್ನು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಸಹ ಸಂಯೋಜಿಸುತ್ತದೆ ಮತ್ತು ನವೋದ್ಯಮ  ಮತ್ತು ವಿದ್ಯಾರ್ಥಿ ಉದ್ಯಮಿಗಳಿಗೆ ಶೈಕ್ಷಣಿಕ ಮತ್ತು ಮಾರ್ಗದರ್ಶನದ ವಿಷಯದಲ್ಲಿ  ಕಾರ್ಯಗಾರ ನಡೆಯಲಿದೆ  ಖ್ಯಾತ ಭಾಷಣಕಾರರಿಂದ ಈ ದಿನ ಪ್ರಮುಖ ಭಾಷಣವಿರಲಿದೆ : 

ಪ್ರೊ. ಕೆ ವಿಜಯರಾಘವನ್, ಪ್ರಧಾನ ವೈಜ್ಞಾನಿಕ ಸಲಹೆಗಾರ, ಭಾರತ ಸರ್ಕಾರ

ಶ್ರೀ. ಅಂಕಿತ್ ಅಗರ್ವಾಲ್, ಸ್ಥಾಪಕ ಮತ್ತು ಸಿಇಒ, ಫೂಲ್.ಕೊ

ಶ್ರೀಮತಿ. ಅರುಂಧತಿ ಭಟ್ಟಾಚಾರ್ಯ, ಅಧ್ಯಕ್ಷರು ಮತ್ತು ಸಿಇಒ, ಸೇಲ್ಸ್‌ಫೋರ್ಸ್.

 

 "ಶ್ರೇಷ್ಠ ಉದ್ಯಮಗಳನ್ನು ನಿರ್ಮಿಸಲು ನೆರತ ಕೂದಲು ಕಡ್ಡಾಯವಲ್ಲ" ಮತ್ತು "ಶಾಲೆಗಳು, ನಾವೀನ್ಯತೆ, ಆಟಗಳು ಮತ್ತು ಪಠ್ಯಕ್ರಮ" ನಂತಹ ಆಸಕ್ತಿದಾಯಕ ವಿಷಯಗಳ ಕುರಿತು 3 ನೇ ದಿನದಂದು ಹಲವಾರು ಪ್ಯಾನೆಲ್ ಚರ್ಚೆಗಳನ್ನು ಸಹ ನಡೆಸಲಾಗುತ್ತದೆ. 3 ನೇ ದಿನವು ಸಮಾರೋಪ ಸಮಾರಂಭದೊಂದಿಗೆ ಎರಡು ದಿನಗಳ ಎಐಸಿಟಿಇ  ಕಾರ್ಯಕ್ರಮದ ಮುಕ್ತಾಯವಾಗುತ್ತದೆ.  ಈ ಕೆಳಗಿನ ಗಣ್ಯರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ:

ಡಾ. ರಾಜಕುಮಾರ್ ರಂಜನ್ ಸಿಂಗ್, ಮಾನ್ಯ ಶಿಕ್ಷಣ ರಾಜ್ಯ ಸಚಿವರು

ಡಾ. ಸುಭಾಸ್ ಸರ್ಕಾರ್, ಮಾನ್ಯ ಶಿಕ್ಷಣ ರಾಜ್ಯ ಸಚಿವರು

ಶ್ರೀಮತಿ. ಅನ್ನಪೂರ್ಣ ದೇವಿ, ಮಾನ್ಯ ಶಿಕ್ಷಣ ರಾಜ್ಯ ಸಚಿವರು

 ಪ್ರೊ.ರಾಜೀವ್ ಕುಮಾರ್, ಸದಸ್ಯ ಕಾರ್ಯದರ್ಶಿ, ಎಐಸಿಟಿಇ

ಪ್ರೊ.ಎಂ.ಪಿ.ಪೂನಿಯಾ, ಎಐಸಿಟಿಇ ಉಪಾಧ್ಯಕ್ಷರು

ಡಾ. ಅಭಯ್ ಜೇರೆ,ಸಿಐಒ, ಎಮ್‍ಐಸಿ.

ದಿನ 4 (ಜನವರಿ 13)

*

ಗ್ಲೋಬಲ್ ವೆಂಚರ್ ಕ್ಯಾಪಿಟಲ್ ರೌಂಡ್ ಟೇಬಲ್ ಅನ್ನು ಗೌರವಾನ್ವಿತ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು ನಡೆಸುತ್ತಾರೆ ಮತ್ತು ಅಧ್ಯಕ್ಷತೆ ವಹಿಸುತ್ತಾರೆ. ಹೆಚ್ಚುವರಿಯಾಗಿ, ಭಾರತೀಯ ಇನ್ಕ್ಯುಬೇಟರ್ ಲ್ಯಾಂಡ್‌ಸ್ಕೇಪ್ ಮತ್ತು ಇನ್‌ಕ್ಯುಬೇಟರ್ ಸಾಮರ್ಥ್ಯದ ನಿರ್ಮಾಣ, ಸ್ಟಾರ್ಟ್‌ಅಪ್ ಪಿಚಿಂಗ್ ಮತ್ತು “ಫಂಡಿಂಗ್ ಅವೆನ್ಯೂಸ್, ಬ್ಯಾಂಕ್‌ಗಳು, ಮಾರುಕಟ್ಟೆ ಪ್ರವೇಶ, ಸರ್ಕಾರದಿಂದ ಹಣಕಾಸು ಬೆಂಬಲ” ಕುರಿತು ಹಲವಾರು ಕಾರ್ಯಾಗಾರಗಳನ್ನು ಒಳಗೊಂಡಿರುತ್ತದೆ. ". ಈ ದಿನದಲ್ಲಿ ಫಿಶರೀಸ್ ಸ್ಟಾರ್ಟ್ಅಪ್ ಗ್ರ್ಯಾಂಡ್ ಚಾಲೆಂಜ್ ಅನ್ನು ಪ್ರಾರಂಭವಾಗುತ್ತದೆ. ಮೇಕ್‌-ಮೈಟ್ರಿಪ್‌ನ ಸಂಸ್ಥಾಪಕರಾದ ಶ್ರೀ ದೀಪ್ ಕಲ್ರಾ ಅವರಿಂದ ಅನುಭವವನ್ನು ಹಂಚಿಕೊಳ್ಳುವ ಫೈರ್‌ಸೈಡ್ ಚಾಟ್  ಸಹ ಒಂದು ಪ್ರಮುಖ ಅಂಶವಾಗಿರುತ್ತದೆ. ಮಾರುಕಟ್ಟೆ ಪ್ರವೇಶ, ಅಭಿವೃದ್ಧಿ ಮತ್ತು ಧನಸಹಾಯದಲ್ಲಿ 5 ರಾಜ್ಯಗಳಿಂದ ಉತ್ತಮ ಅಭ್ಯಾಸಗಳ ಕುರಿತು ಜ್ಞಾನ ಹಂಚಿಕೆ ಅಧಿವೇಶನವನ್ನು ಸಹ ನಡೆಸಲಾಗುತ್ತದೆ.  ಈ ಪ್ರಖ್ಯಾತ ಭಾಷಣಕಾರರು ಸೇರಿದ್ದಾರೆ :

ಶ್ರೀ ಪರಶೋತ್ತಮ್ ರೂಪಾಲಾ, ಮಾನ್ಯ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರು

 ಡಾ. ಚಿಂತನ್ ವೈಷ್ಣವ್, ಮಿಷನ್ ನಿರ್ದೇಶಕ, ಅಟಲ್ ಇನ್ನೋವೇಶನ್ ಮಿಷನ್

 ಶ್ರೀ ರಾಜನ್ ಆನಂದನ್, ವ್ಯವಸ್ಥಾಪಕ ನಿರ್ದೇಶಕ, ಸಿಕ್ವೊಯಾ ಕ್ಯಾಪಿಟಲ್

 ಶ್ರೀ ಸಂಜೀವ್ ಕೌಶಿಕ್, ಹಿರಿಯ ಉಪಾಧ್ಯಕ್ಷರು, ರಿಟೇಲ್ ಬ್ರಾಂಚ್ ಬ್ಯಾಂಕಿಂಗ್, ಹೆಚ್‍ಡಿಎಫ್‍ಸಿ

 ಶ್ರೀ ಪ್ರಕಾಶ್ ಜೈಸ್ವಾಲ್, ಉಪಾಧ್ಯಕ್ಷರು, ಕಾರ್ಪೊರೇಟ್ ಬ್ಯಾಂಕಿಂಗ್, ಹೆಚ್‍ಎಸ್‍ಬಿಸಿ

 ಶ್ರೀ ಶ್ರೀನಿವಾಸ್ ರಾಮಾನುಜಂ, ಸಿಇಒ, ವಿಲ್‍ಗ್ರೋ,

ಶ್ರೀ ಯಶಿಶ್ ದಹಿಯಾ, ಸಿಇಒ, ಪಾಲಿಸಿಬಜಾರ್.

 

ದಿನ 5 (ಜನವರಿ 14)

**

5 ನೇ ದಿನವು ಒಎನ್‍ಡಿಸಿ  ಡಿಜಿಟಲ್ ಸ್ಟ್ರಾಟಜಿ (ಡಿಜಿಟಲ್ ವಾಣಿಜ್ಯಕ್ಕಾಗಿ ಮುಕ್ತ ಜಾಲ)  ಚಾಲನೆಯಂತಹ ಪ್ರಮುಖ ಘಟನೆಗಳನ್ನು ಒಳಗೊಂಡಿರುತ್ತದೆ, ಮಹಿಳಾ ಉದ್ಯಮಶೀಲತೆಯ ಮೇಲೆ ಕೇಂದ್ರೀಕರಿಸುವ ಪ್ಯಾನಲ್ ಚರ್ಚೆ, ಸ್ಟಾರ್ಟ್‌ಅಪ್ ಪಿಚಿಂಗ್ ಸೆಷನ್‌ಗಳು, ವಿಸ್ತರಣೆ ತಂತ್ರಗಳ ಕಾರ್ಯಾಗಾರ ಮತ್ತು ಜಾಗತಿಕ ಮಾರುಕಟ್ಟೆ ಪ್ರವೇಶ ತಂತ್ರಗಳು ಮತ್ತು ತಂತ್ರಜ್ಞಾನದ ವಾಣಿಜ್ಯೀಕರಣವನ್ನು ತೋರಿಸುವ ಫೈರ್‌ಸೈಡ್ ಚಾಟ್‌ಗಳು. ಅಧಿವೇಶನಗಳಾದ್ಯಂತ ಪ್ರಖ್ಯಾತ ಭಾಷಣಕಾರರನ್ನು ಒಳಗೊಂಡಿರುತ್ತದೆ

ಪ್ರೊ. ಕೆ. ವಿಜಯ್ ರಾಘವನ್, ಪ್ರಧಾನ ವೈಜ್ಞಾನಿಕ ಸಲಹೆಗಾರರು, ಭಾರತ ಸರ್ಕಾರ

 ಶ್ರೀ ಅಮಿತಾಬ್ ಕಾಂತ್, ಸಿಇಒ, ನೀತಿ ಆಯೋಗ್

 ಶ್ರೀ ನಂದನ್ ನಿಲೇಕಣಿ, ನಾನ್ ಎಕ್ಸಿಕ್ಯೂಟಿವ್ ಚೇರ್ಮನ್, ಇನ್ಫೋಸಿಸ್

 ಶ್ರೀಮತಿ. ಗಜಾಲ್ ಕಲ್ರಾ, ಸಹ-ಸಂಸ್ಥಾಪಕ ರಿವಿಗೊ

 ಶ್ರೀಮತಿ. ಪದ್ಮಜಾ ರೂಪಾರೆಲ್, ಸಹ-ಸಂಸ್ಥಾಪಕರು ಇಂಡಿಯನ್ ಏಂಜೆಲ್ ನೆಟ್‌ವರ್ಕ್

 ಶ್ರೀ ಫಲ್ಗುನ್ ಕೊಂಪಲ್ಲಿ, ಸಹ-ಸಂಸ್ಥಾಪಕರು, ಅಪ್‌ಗ್ರೇಡ್

 ಶ್ರೀ ರಾಹುಲ್ ಗರ್ಗ್, ಸಂಸ್ಥಾಪಕ ಮತ್ತು ಸಿಇಒ, ಮೋಗ್ಲಿಕ್ಸ್ 

ಶ್ರೀ. ಮನೋಜ್ ಕೊಹ್ಲಿ, ದೇಶದ ಮುಖ್ಯಸ್ಥ, ಸಾಫ್ಟ್‌ಬ್ಯಾಂಕ್ ಮತ್ತು

 ಶ್ರೀ ಪ್ರಶಾಂತ್ ಟಂಡನ್, ಸಹ-ಸಂಸ್ಥಾಪಕ ಮತ್ತು ಸಿಇಒ, 1ಎಂಜಿ .

 

ದಿನ 6 (ಜನವರಿ 15)

**

ಈ ದಿನದಂದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೋದ್ಯಮಗಳೊಂದಿಗೆ ಸಂವಾದ ನಡೆಸುವ ನಿರೀಕ್ಷೆಯಿದೆ ಮತ್ತು   ಈ ಕಾರ್ಯಕ್ರಮದಲ್ಲಿ  ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಬೆಳಿಗ್ಗೆ 10.30 ಗಂಟೆಗೆ ಸ್ಟಾರ್ಟ್‌ಅಪ್ ಇಂಡಿಯಾ ಇನ್ನೋವೇಶನ್ ವೀಕ್ ಅನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ. ಈ ಸಂವಾದಕ್ಕಾಗಿ, 150+ ನವೋದಯಮ(ಸ್ಟಾರ್ಟ್‌ಅಪ್‌)ಗಳನ್ನು ಆರು ಕಾರ್ಯ ಗುಂಪುಗಳಾಗಿ ವಿಂಗಡಿಸಲಾಗಿದೆ ಉದಾಹರಣೆಗೆ “ಮೂಲಗಳಿಂದ ಬೆಳೆಯುವುದು; ಡಿಎನ್ಎಯನ್ನು ಉತ್ತೇಜಿಸುವುದು; ಲೋಕಲ್  ಟು ಗ್ಲೋಬಲ್; ಭವಿಷ್ಯದ ತಂತ್ರಜ್ಞಾನ; ಉತ್ಪಾದನೆಯಲ್ಲಿ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಚಾಂಪಿಯನ್‍ಗಳನ್ನು ಬೆಳಸುವುದು. ದೇಶದಲ್ಲಿ ನಾವೀನ್ಯತೆಯನ್ನು ಚಾಲನೆ ಮಾಡುವ ಮೂಲಕ ಸ್ಟಾರ್ಟಪ್‌ಗಳು ರಾಷ್ಟ್ರೀಯ ಅಗತ್ಯಗಳಿಗೆ ಹೇಗೆ ಕೊಡುಗೆ ನೀಡಬಹುದು ಮತ್ತು ಸರ್ಕಾರವು ಅದಕ್ಕೆ ಹೇಗೆ ಸಹಾಯ ಮಾಡಬಹುದು ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಸಂವಾದದ ಗುರಿಯಾಗಿದೆ. ಈ ದಿನವು 2021 ರ ರಾಷ್ಟ್ರೀಯ ಸ್ಟಾರ್ಟ್‌ಅಪ್ ಪ್ರಶಸ್ತಿಗಳ ವಿಜೇತರ ಘೋಷಣೆಯನ್ನು ಒಳಗೊಂಡಿರುತ್ತದೆ, ಉದ್ಯೋಗ ಸೃಷ್ಟಿ, ಸಂಪತ್ತು ಸೃಷ್ಟಿ ಮತ್ತು ಸಾಮಾಜಿಕ ಪ್ರಭಾವದ ಹೆಚ್ಚಿನ ಸಾಮರ್ಥ್ಯದೊಂದಿಗೆ ಬೆಳೆಯುವ ಉದ್ಯಮಗಳನ್ನು ನಿರ್ಮಿಸುವ ಅತ್ಯುತ್ತಮ ಸ್ಟಾರ್ಟ್‌ಅಪ್‌ಗಳು ಮತ್ತು ಪರಿಸರ ವ್ಯವಸ್ಥೆಯನ್ನು ಸಕ್ರಿಯಗೊಳಿಸುವವರನ್ನು ಗುರುತಿಸುತ್ತದೆ. ಈ ಸಮಾರಂಭದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ಭಾಗವಹಿಸಲಿದ್ದಾರೆ. ಮುಂತಾದ ಹಿರಿಯ ಗಣ್ಯರು ಸಹ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ :

ಶ್ರೀ ಸೋಮ್ ಪ್ರಕಾಶ್, ಗೌರವಾನ್ವಿತ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕೆ ಸಚಿವರು

 ಶ್ರೀಮತಿ. ಅನುಪ್ರಿಯಾ ಸಿಂಗ್ ಪಟೇಲ್, ಗೌರವಾನ್ವಿತ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವರು

ಶ್ರೀ ಅನುರಾಗ್ ಜೈನ್, ಕಾರ್ಯದರ್ಶಿ, ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ.

 

ದಿನ 7 (ಜನವರಿ 16)

ಒಂದು ವಾರದ ಅವಧಿಯ ಆಚರಣೆಯ ಕೊನೆಯ ದಿನವು ಸ್ಟಾರ್ಟ್‌ಅಪ್‌ಗಳಿಗಾಗಿ ಕಾರ್ಪೊರೇಟ್ ಕನೆಕ್ಟ್, ಒಎನ್‍ಡಿಸಿ  ಯ ಮೇಡ್ ಇನ್ ಇಂಡಿಯಾ ವಿಧಾನ ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯದಲ್ಲಿ ನಾವೀನ್ಯತೆ ಮತ್ತು ಪ್ರಮಾಣ ಮತ್ತು ಸ್ಟಾರ್ಟ್‌ಅಪ್‌ಗಳು ಮತ್ತು ಸ್ಮಾರ್ಟ್ ಸಿಟೀಸ್ ಮಿಷನ್ ನಡುವಿನ ಸಹಯೋಗದ ಮೂಲಕ ನಗರ ನಾವೀನ್ಯತೆ ಕುರಿತು ಚರ್ಚೆಗಳನ್ನು ಒಳಗೊಂಡಿರುತ್ತದೆ. ಕೊನೆಯ ದಿನದ ವಿವಿಧ ಕಾರ್ಯಕ್ರಮಗಳನ್ನು ಉದ್ದೇಶಿಸಿ ಈ ಖ್ಯಾತ ಭಾಷಣಕಾರರು ಮಾತನಾಡುತ್ತಾರೆ:

ಶ್ರೀ ಅವ್ನಿಶ್ ಸಬರ್ವಾಲ್, ಎಮ್ ಡಿ, ಆಕ್ಸೆಂಚರ್ ವೆಂಚರ್ಸ್

 ಶ್ರೀಮತಿ. ಶ್ರುತಿ ಕಣ್ಣನ್, ಮುಖ್ಯಸ್ಥರು, ಸಿಸ್ಕೊ ಲಾಂಚ್‌ಪ್ಯಾಡ್

 ಶ್ರೀಮತಿ. ದೇಬ್ಜಾನಿ ಘೋಷ್, ಅಧ್ಯಕ್ಷರು, ನಾಸ್ಕಾಮ್  ಮತ್ತು

 ಶ್ರೀ ಸುರೇಶ್ ಸೇಥಿ, ಸಿಇಒ, ಪ್ರೊಟೀನ್ ಇ-ಗವ್.

***

 

 

 

 

 



(Release ID: 1788800) Visitor Counter : 296