ಉಕ್ಕು ಸಚಿವಾಲಯ
ಎನ್.ಎಂ.ಡಿ.ಸಿ. ಕಬ್ಬಿಣದ ಅದಿರು ಗಣಿಗೆ ಭೇಟಿ ನೀಡಿದ ಉಕ್ಕು ಸಚಿವರು, ಶೀಘ್ರವೇ 100 ದಶಲಕ್ಷ ಟನ್ ಉತ್ಪಾದನಾ ಸಾಮರ್ಥ್ಯ ತಲುಪುವ ಗುರಿ ಹೊಂದಿರುವಂತೆ ಉದ್ಯೋಗಿಗಳಿಗೆ ಸೂಚನೆ
Posted On:
08 JAN 2022 4:44PM by PIB Bengaluru
ಬಳ್ಳಾರಿ, 8 ಜನವರಿ 2022: ಭಾರತ ಸರ್ಕಾರದ ಉಕ್ಕು ಸಚಿವ ಮಾನ್ಯ ಶ್ರೀ ರಾಮಚಂದ್ರ ಪ್ರಸಾದ್ ಸಿಂಗ್ ಅವರು ಶುಕ್ರವಾರ ಎನ್.ಎಂ.ಡಿ.ಸಿ.ಯ ದೋಣಿಮಲೈ ಕಬ್ಬಿಣದ ಅದಿರು ಗಣಿಯಲ್ಲಿ 7.0 ಎಂ.ಟಿ.ಪಿ.ಎ. ಸ್ಕ್ರೀನಿಂಗ್ ಮತ್ತು ಬೆನಿಫಿಶಿಯೇಷನ್ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ದೋಣಿಮಲೈ ಮತ್ತು ಕುಮಾರಸ್ವಾಮಿ ಕಬ್ಬಿಣದ ಅದಿರು ಗಣಿಗಳ ಕಾರ್ಯಾಚರಣೆಯನ್ನು ಪರಿಶೀಲಿಸಿದ ಉಕ್ಕು ಸಚಿವರು, ಎನ್.ಎಂ.ಡಿ.ಸಿ. ಪೆಲೆಟ್ ಘಟಕಕ್ಕೂ ಭೇಟಿ ನೀಡಿದ್ದರು. ನಂತರ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “ಭಾರತದಲ್ಲಿ ಬೃಹತ್ ಕಬ್ಬಿಣದ ಅದಿರು ಉತ್ಪಾದಿಸುವ –ಎನ್.ಎಂ.ಡಿ.ಸಿ. ನಿರಂತರವಾಗಿ ದೇಶದ ಮೂಲಸೌಕರ್ಯದ ಅಗತ್ಯಗಳನ್ನು ಪೂರೈಸುತ್ತಿದೆ ಎಂದರು. ಭಾರತವು ಕಬ್ಬಿಣ ಮತ್ತು ಉಕ್ಕಿನ ಶಕ್ತಿಕೇಂದ್ರವಾಗಿ ಪರಿವರ್ತನೆಯಾಗಲೂ ಸಜ್ಜಾಗುತ್ತಿರುವಾಗ, ನಾವು ಉಕ್ಕಿನ ನೋಟ 2030ರ ಸಾಧನೆಗೆ ಹತ್ತಿರವಾಗಿದ್ದು, ಎನ್.ಎಂ.ಡಿ.ಸಿ ಮಹತ್ವದ ಪಾತ್ರ ವಹಿಸುತ್ತಿದೆ” ಎಂದರು. ಪ್ರಗತಿಯಲ್ಲಿರುವ ಯೋಜನೆಗಳ ಅನುಷ್ಠಾನ ಮತ್ತು ಕಾರ್ಯಾಚರಣೆಯ ಕುರಿತಂತೆ ಆಪ್ತವಾಗಿ ನಿಗಾ ವಹಿಸಲು ಮತ್ತು ಆ ಮೂಲಕ ಆದ್ಯತೆಯ ಮೇಲೆ ಪೂರ್ಣಗೊಳಿಸುವಂತೆ ಅವರು ನಿರ್ದೇಶಿಸಿದರು.
ಶನಿವಾರ, ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯ ಅಂಗವಾಗಿ ಎನ್.ಎಂ.ಡಿ.ಸಿ.ಯ ಸಸಿ ನೆಡುವ ಅಭಿಯಾನಕ್ಕೆ ಚಾಲನೆ ನೀಡಿದ ಉಕ್ಕು ಸಚಿವರು, ಹಸಿರು ಭಾರತದ ಕಡೆಗೆ ನಮ್ಮ ಸಾಮೂಹಿಕ ಜವಾಬ್ದಾರಿಯನ್ನು ಒತ್ತಿ ಹೇಳಿದರು. ತನ್ನ ಎಲ್ಲಾ ಗಣಿಗಾರಿಕೆ ಸಂಕೀರ್ಣಗಳಿಗೆ 5 ಸ್ಟಾರ್ ಶ್ರೇಣೀಕರಣವನ್ನು ಪಡೆದಿರುವುದಕ್ಕಾಗಿ ಎನ್.ಎಂ.ಡಿ.ಸಿ.ಯನ್ನು ಅಭಿನಂದಿಸಿದರು ಅವರು, "ಗಣಿಗಾರಿಕೆ ವಲಯವು ಸದಾ ಪರಿಸರದ ಮೇಲೆ ತನ್ನ ಪ್ರಭಾವದ ಬಗ್ಗೆ ಜಾಗೃತವಾಗಿರಬೇಕು. ಸುಸ್ಥಿರ ಗಣಿಗಾರಿಕೆ ರೂಢಿಗಳು ಮತ್ತು ಸಂರಕ್ಷಣಾ ಉಪಕ್ರಮಗಳು ಈ ಹೊತ್ತಿನ ಅಗತ್ಯವಾಗಿದೆ. ಎನ್.ಎಂ.ಡಿ.ಸಿ ಪರಿಸರ ಸ್ನೇಹಿ ಗಣಿಗಾರಿಕೆಗೆ ಬದ್ಧವಾಗಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ.” ಎಂದರು.
ಪ್ರಸ್ತುತ ಎನ್.ಎಂ.ಡಿ.ಸಿ. 7.0 ಎಂ.ಟಿ.ಪಿ.ಎ. ಕಬ್ಬಿಣದ ಅದಿರನ್ನು ದೋಣಿಮಲೈ ಗಣಿಯಿಂದ ಉತ್ಪಾದಿಸುತ್ತಿದೆ ಎಂಬುದು ಉಲ್ಲೇಖಾರ್ಹವಾಗಿದೆ, ಇದನ್ನು ಎಸ್.ಪಿ.-1 ರಿಂದ ಸಂಸ್ಕರಿಸಲಾಗುತ್ತದೆ. ಕುಮಾರಸ್ವಾಮಿ ಕಬ್ಬಿಣದ ಅದಿರು ಗಣಿ 7.0 ಎಂ.ಟಿ.ಪಿ.ಎ. ಸಾಮರ್ಥ್ಯವನ್ನು ಹೊಂದಿದ್ದು, ಭವಿಷ್ಯದಲ್ಲಿ 10.0 ಎಂ.ಟಿ.ಪಿ.ಎ. ಗೆ ಹೆಚ್ಚಿಸಲಾಗುವುದು. ಕುಮಾರಸ್ವಾಮಿ ಕಬ್ಬಿಣದ ಅದಿರು ಗಣಿಯಿಂದ ಕಬ್ಬಿಣದ ಅದಿರನ್ನು ಸಂಸ್ಕರಿಸಲು, 7.0 ಎಂ.ಟಿ.ಪಿ.ಎ. ಸಾಮರ್ಥ್ಯದ ಎಸ್.ಪಿ.-2 ಸ್ಕ್ರೀನಿಂಗ್ ಪ್ಲಾಂಟ್ ಸ್ಥಾಪನೆಯು ಪ್ರಗತಿಯಲ್ಲಿದ್ದು, ಇದರ ಸಾಮರ್ಥ್ಯವನ್ನು ಭವಿಷ್ಯದಲ್ಲಿ 10.0 ಎಂ.ಟಿ.ಪಿ.ಎ.ಗೆ ಹೆಚ್ಚಿಸಲು ಅವಕಾಶ ಮಾಡಿಕೊಳ್ಳಲಾಗಿದೆ. ಕೆ.ಐ.ಓ.ಎಂ. ಮತ್ತು ದೋಣಿಮಲೈ ಎರಡರಿಂದಲೂ ಕಬ್ಬಿಣದ ಅದಿರನ್ನು ಸಂಸ್ಕರಿಸಲು ಎಸ್.ಪಿ.-2 ಗಾಗಿ ಅವಕಾಶಗಳನ್ನು ಮಾಡಲಾಗುತ್ತಿದೆ.
ಈ ಸಂದರ್ಭದಲ್ಲಿ ಎನ್.ಎಂ.ಡಿ.ಸಿ.ಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷ ಶ್ರೀ ಸುಮಿತ್ ದೇವ್, ಉಕ್ಕು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಎನ್.ಎಂ.ಡಿ.ಸಿ. ನಿಯಮಿತದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ರಸಿಕಾ ಚೌಬೆ, ಹಣಕಾಸು ವಿಭಾಗದ ನಿರ್ದೇಶಕ ಶ್ರೀ ಅಮಿತಾವ್ ಮುಖರ್ಜಿ, ತಾಂತ್ರಿಕ ವಿಭಾಗದ ನಿರ್ದೇಶಕ ಶ್ರೀ ಸೋಮನಾಥ್ ನಂದಿ, ಉತ್ಪಾದನಾ ವಿಭಾಗದ ನಿರ್ದೇಶಕ ಶ್ರೀ ದಿಲೀಪ್ ಕುಮಾರ್ ಮೊಹಾಂತಿ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಮಾನ್ಯ ಸಚಿವರನ್ನು ಕಂಪನಿಯ ಗಣಿಗೆ ಸಿಎಂಡಿ ಶ್ರೀ ದೇಬ್ ಸ್ವಾಗತಿಸಿ, ಎನ್.ಎಂ.ಡಿ.ಸಿ. ಈ ವರ್ಷ ಮಾಡಿರುವ ಅದ್ಭುತ ಪ್ರದರ್ಶನದ, ಅದರ ವಿಸ್ತರಣೆ ಯೋಜನೆಗಳು ಮತ್ತು ಕೆಪೆಕ್ಸ್ ಔಟ್ ಲೇ ಬಗ್ಗೆ ಹಂಚಿಕೊಂಡರು ಮತ್ತು ಒಡಿಶಾ ಮತ್ತು ಜಾರ್ಖಂಡ್ ನಲ್ಲಿ ಮೀಸಲು ಮಾರ್ಗದಲ್ಲಿ ಗಣಿಗಳ ಹಂಚಿಕೆಯು 2030ರ ವೇಳೆಗೆ ಎನ್.ಎಂ.ಡಿ.ಸಿ. 100 ಎಂ.ಟಿ. ಕಬ್ಬಿಣದ ಅದಿರು ಗಣಿಗಾರಿಕೆ ಕಂಪನಿಯಾಗಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನೂ ವಿವರಿಸಿದರು.
***
(Release ID: 1788591)
Visitor Counter : 259