ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ

ಭಾರತದ ಅತಿದೊಡ್ಡ ರಾಷ್ಟ್ರೀಯ ಕೌಶಲ್ಯ ಸ್ಪರ್ಧೆ– ಇಂಡಿಯಾ ಸ್ಕಿಲ್ಸ್ 2021 ನವದೆಹಲಿಯಲ್ಲಿಂದು ಆರಂಭ


ಭಾರತೀಯ ರಾಷ್ಟ್ರೀಯ ಕೌಶಲ್ಯ ಸ್ಪರ್ಧೆಯಲ್ಲಿ ವಿಜೇತರಾಗುವವರಿಗೆ 2022 ರ ಅಕ್ಟೋಬರ್ ನಲ್ಲಿ ಚೀನಾದ ಶಾಂಘೈ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವಿಶ್ವಕೌಶಲ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಅವಕಾಶ

Posted On: 06 JAN 2022 9:16PM by PIB Bengaluru

ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ (ಎಂಎಸ್ ಡಿಇ) ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೌಶಲ್ಯ ಮತ್ತು ಉದ್ಯಮಶೀಲತೆ ಅಭಿವೃದ್ಧಿ ನೋಡಲ್ ಎಜೆನ್ಸಿ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ (ಎನ್ ಎಸ್ ಡಿಸಿ) ಆಯೋಜಿಸಿರುವ ಇಂಡಿಯಾ ಸ್ಕಿಲ್ಸ್ ರಾಷ್ಟ್ರೀಯ ಸ್ಪರ್ಧೆ ನವದೆಹಯಲ್ಲಿಂದು ಆರಂಭವಾಯಿತು. ಈ ಒಳಾಂಗಣ ಕಾರ್ಯಕ್ರಮದಲ್ಲಿ 26 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 50ಕ್ಕೂ ಅಧಿಕ ಕೌಶಲ್ಯ ಹೊಂದಿದವರು ಭಾಗವಹಿಸುತ್ತಿದ್ದು, ಅವರು ಕಾರ್ ಪೇಯಿಂಟಿಂಗ್ ,ಪ್ಯಾಟಿಸ್ಸೆರಿ ಮತ್ತು ಕನ್ಫೆಕ್ಷನರಿ , ವೆಲ್ಡಿಂಗ್, ಆಡಿಕ್ಟಿವ್ ಮ್ಯಾನುಫ್ಯಾಕ್ಚರಿಂಗ್ , ಸೈಬರ್ ಭದ್ರತೆ, ಹೂಗಾರಿಕೆ ಮತ್ತಿತರ ಕೌಶಲ್ಯ ಹೊಂದಿದವರು ಸಾಕ್ಷಿಯಾಗುತ್ತಾರೆ.

ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಪ್ರಾಧಿಕಾರಗಳು ಕಡ್ಡಾಯಗೊಳಿಸಿರುವ ಕೋವಿಡ್ 19 ಶಿಷ್ಟಾಚಾರದ ಪಾಲನೆಯೊಂದಿಗೆ ಜನವರಿ 7ರಿಂದ 9 ರವರೆಗೆ ಪ್ರಗತಿ ಮೈದಾನ ಸೇರಿದಂತೆ ಹಲವು ಕಡೆ ಸ್ಪರ್ಧೆ ಗಳು ನಡೆಯಲಿವೆ. ಹೆಚ್ಚುವರಿಯಾಗಿ ವೀಕ್ಷಕರಿಗೆ ಮತ್ತು ಸಂದರ್ಶಕರಿಗೆ ಪ್ರವೇಶವಿಲ್ಲ, ಸೂಕ್ತ ದೈಹಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಸ್ಪರ್ಧೆ ನಡೆಯುವ ಜಾಗಗಳಲ್ಲಿ ಪದೇ ಪದೇ ಸ್ಯಾನಿಟೈಸ್ ಮಾಡುವುದು ಸೇರಿದಂತೆ ಎಲ್ಲ ಹೆಚ್ಚುವರಿ ಸುರಕ್ಷಿತ ಶಿಷ್ಟಾಚಾರಗಳನ್ನು ಪಾಲಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವವರನ್ನು ಚದುರಿಸಲು ಜನವರಿ 3 ರಿಂದ 5 ರವರೆಗೆ ಬೆಂಗಳೂರು ಮತ್ತು ಮುಂಬೈ 8 ಕೌಶಲ್ಯಗಳಿಗೆ ಸ್ಪರ್ಧೆಗಳನ್ನು ನಡೆಸಲಾಯಿತು. ಜನವರಿ 10 ರಂದು ಎಲ್ಲ ಕೌಶಲ್ಯ ಗಳ ಸ್ಪರ್ಧೆಯಲ್ಲಿ ವಿಜೇತರಾದರವನ್ನು ನವದೆಹಲಿಯಲ್ಲಿ ಸನ್ಮಾನಿಸಲಾಗುವುದು.

ಶ್ರೀ ರಾಜೇಶ್ ಅಗರವಾಲ್ ಅವರು, ಈ ಇಂಡಿಯಾ ಸ್ಕಿಲ್ಸ್ ಸ್ಪರ್ಧೆ ಗಳು ಯುವ ಜನಾಂಗಕ್ಕೆ ತಮ್ಮ ಆಸಕ್ತಿಯ ವಿಷಯಗಳನ್ನು ಮುಂದುರಿಸಲು ಮಾರ್ಗಗಳನ್ನು ಒದಗಿಸುವ ಮೂಲಕ ಆತ್ಮವಿಶ್ವಾಸ ಮತ್ತು ಭರವಸೆಯನ್ನು ಮೂಡಿಸುತ್ತದೆ. ಈ ಸ್ಪರ್ಧೆಗಳು ಜಗತ್ತಿಗೆ ದೇಶದ ಸಾಮರ್ಥ್ಯವನ್ನು ಎತ್ತಿ ತೋರಿಸಿಕೊಡುತ್ತದೆ ಮತ್ತು ಜಾಗತಿಕ ವೇದಿಕೆಗಳಲ್ಲಿ ಪ್ರತಿಭೆ ಪ್ರದರ್ಶನಕ್ಕೆ ದಾರಿ ಮಾಡಿಕೊಡುತ್ತದೆ. ಈ ವರ್ಷದ ಇಂಡಿಯಾ ಸ್ಕಿಲ್ಸ್ ಸ್ಪರ್ಧೆ ಗೆ ಏಳು ಹೊಸ ತಲೆಮಾರಿನ‌ ಕೌಶಲಗಳನ್ನು ಪರಿಚಯಿಸಲಾಗಿದ್ದು, ಅದು ನಾವು 21ನೇ ಶತಮಾನದಲ್ಲಿ ಬೆಳವಣಿಗೆ ಹೊಂದುತ್ತಿರುವ ತಂತ್ರಜ್ಞಾನದ ವೇಗಕ್ಕೆ ತಕ್ಕಂತೆ ಸಾಗುತ್ತಿದ್ದೇವೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಭಾಗವಹಿಸಿದ ಎಲ್ಲ ಅಭ್ಯರ್ಥಿಗಳಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದಕ್ಕೆ ಅವರು ಅಭಿನಂದನೆಗಳನ್ನು ಸಲ್ಲಿಸಿದರು. “ಭಾರತವನ್ನು ಜಗತ್ತಿನ ಕೌಶಲ್ಯತಾಣ" ವನ್ನಾಗಿ ಮಾಡುವ ಪ್ರಧಾನಮಂತ್ರಿ ಅವರ ಕನಸು ನನಸು ಮಾಡುವ ನಿಟ್ಟಿನಲ್ಲಿ ಯುವಜನರ ಪರಿಶ್ರಮ ಮತ್ತು ಬದ್ದತೆ ಕಾಣುತ್ತಿರುವುದಕ್ಕೆ ಅವರು ಹರ್ಷ ವ್ಯಕ್ತಪಡಿಸಿದರು.

ಎನ್ಎಸ್ ಡಿಸಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ವೇದ ಮಣಿ ತಿವಾರಿ , ಇಂಡಿಯಾ ಸ್ಕಿಲ್ಸ್ ಸ್ಪರ್ಧೆಯ ಉದ್ದೇಶ ಪ್ರತಿಭಾವಂತ ಮತ್ತು ಕೌಶಲ್ಯ ಹೊಂದಿದ ದುಡಿಯುವ ಶಕ್ತಿಯನ್ನು ಸೃಷ್ಟಿಸುವುದು, ಅವರು ಭವಿಷ್ಯದಲ್ಲಿ ದೇಶದ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಲಿದ್ದಾರೆ ಎಂದರು. ಈ ಸ್ಪರ್ಧೆ ಯುವಕರಿಗೆ ರಾಷ್ಟ್ರೀಯ ವೇದಿಕೆ ಒದಗಿಸುವ ಜೊತೆಗೆ ಜಾಗತಿಕ ತರಬೇತಿ ಮಾನದಂಡಗಳಿಗೆ ತೆರೆದುಕೊಳ್ಖುವಂತೆ ಮಾಡುತ್ತದೆ. ಇಂಡಿಯಾ ಸ್ಕಿಲ್ಸ್ ನ ಯಶಸ್ಸು ತೀರ್ಪುಗಾರರು, ತರಬೇತಿದಾರರು, ಸೆಕ್ಟರ್ ಸ್ಕಿಲ್ ಮಂಡಳಿಗಳು, ಪಾಲುದಾರ ಸಂಸ್ಥೆಗಳು ಮತ್ತು ದೇಶದ ಬಹುದೊಡ್ಡ ಕೌಶಲ್ಯ ಸ್ಪರ್ಧೆಯನ್ನು ನಡೆಸಲು ಎನ್ ಎಸ್ ಡಿಸಿಯನ್ನು ಬೆಂಬಲಿಸಿರುವ ರಾಜ್ಯಗಳ ಸಾಮೂಹಿಕ ಪ್ರಯತ್ನವಾಗಿದೆ ಎಂದು ಹೇಳಿದರು.

ಈ ಸ್ಪರ್ಧೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಕಾರ್ಯದರ್ಶಿ ಶ್ರೀ ರಾಜೇಶ್ ಅಗರವಾಲ್, ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಅತುಲ್ ಕುಮಾರ್, ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ವೇದ ಮಣಿ ತಿವಾರಿ, ಒಡಿಶಾ ಕೌಶಲ್ಯಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಮೈಂಡ್ ಟ್ರೀಯ ಸಹಸಂಸ್ಥಾಪಕ ಶ್ರೀ ಸುಬ್ರತೋ ಬಾಗ್ಚಿ, ವೃತ್ತಿಪರ ಶಿಕ್ಷಣ ಮತ್ತು ತರಬೇತಿ ರಾಷ್ಟ್ರೀಯ ಮಂಡಳಿ ಅಧ್ಯಕ್ಷ ಡಾ.ನಿರ್ಮಲ್ ಜೀತ್ ಸಿಂಗ್ ಕಲ್ಸಿ ಮತ್ತಿತರರು ಉಪಸ್ಥಿತರಿದ್ದರು.

ಇಂಡಿಯಾ ಸ್ಕಿಲ್ಸ್ 2021 ರಾಷ್ಟ್ರೀಯ ಸ್ಪರ್ಧೆಯ ಪ್ರಮುಖಾಂಶಗಳು

ಎ. ಅಬಿಲಿಂಪಿಕ್ಸ್- ದಿವ್ಯಾಂಗರಿಂದ ಕೌಶಲ್ಯ ಪ್ರದರ್ಶನ

ಇಂಡಿಯಾ ಸ್ಕಿಲ್ಸ್ 2021 ರಾಷ್ಟ್ರೀಯ ಸ್ಪರ್ಧೆಯಲ್ಲಿ ಕಂಪ್ಯೂಟರ್ ಪ್ರೋಗ್ರಾಮಿಂಗ್, ಪೇಂಟಿಂಗ್, ಕಸೂತಿ ಮತ್ತು ಪೋಸ್ಟರ್ ಡಿಸೈನಿಂಗ್ ಸೇರಿದಂತೆ 16 ಬಗೆಯ ಕೌಶಲ್ಯಗಳಲ್ಲಿ ದಿವ್ಯಾಂಗರ (ಪಿಡಬ್ಲ್ಯೂಡಿ) ಕೌಶಲ್ಯಗಳ ಪ್ರದರ್ಶನವಾದ ಅಬಿಲಿಂಪಿಕ್ಸ್ ಸಹ ಒಳಗೊಂಡಿರುತ್ತದೆ. ಅಂತಹವರು ಭಾಗವಹಿಸುವುದರಿಂದಾಗಿ, ಇಂಡಿಯಾಸ್ಕಿಲ್ಸ್ ತಳಮಟ್ಟದ ಮಟ್ಟವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಇದರಿಂದ ನುರಿತ ಉದ್ಯೋಗಿಗಳ ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರವನ್ನು ನೀಗಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ.

ಬಿ. ಪ್ರದರ್ಶನ ಕೌಶಲ್ಯಗಳು

ಇಂಡಿಯಾಸ್ಕಿಲ್ 2021 ಮೂರು ಹೊಸ ಕೌಶಲ್ಯಗಳನ್ನು ಪರಿಚಯಿಸುತ್ತಿದೆ - ಯೋಗ, ಶೂ ಮೇಕಿಂಗ್ (ಚರ್ಮ) ಮತ್ತು ಗಾರ್ಮೆಂಟ್ ಮೇಕಿಂಗ್ (ಚರ್ಮ) ಇವುಗಳನ್ನು ಅಭ್ಯರ್ಥಿಗಳಿಗೆ ಲಭಯವಿರುವ ಅವಕಾಶಗಳನ್ನು ಪ್ರದರ್ಶಿಸಲಾಗುತ್ತದೆ.

ಸಿ. ಹೊಸ ಯುಗದ ಕೌಶಲ್ಯಗಳು

ಏಳು ಹೊಸ-ಯುಗದ ಕೌಶಲ್ಯಗಳು--ರೋಬೋಟ್ ಸಿಸ್ಟಮ್ಸ್ ಏಕೀಕರಣ, ಸಂಯೋಜಕ ಉತ್ಪಾದನೆ, ಡಿಜಿಟಲ್ ನಿರ್ಮಾಣ, ಉದ್ಯಮ 4.0, ನವೀಕರಿಸಬಹುದಾದ ಇಂಧನ, ಮೊಬೈಲ್ ಅಪ್ಲಿಕೇಶನ್‌ಗಳ ಅಭಿವೃದ್ಧಿ ಮತ್ತು ಕೈಗಾರಿಕಾ ವಿನ್ಯಾಸ ತಂತ್ರಜ್ಞಾನ - ಈ ವರ್ಷದ ಸ್ಪರ್ಧೆಯಲ್ಲಿ ಬದಲಾಗುತ್ತಿರುವ ಉದಯೋನ್ಮುಖ ತಂತ್ರಜ್ಞಾನಗಳ ವೇಗಕ್ಕೆ ತಕ್ಕಂತೆ ಕಾಯ್ದುಕೊಳ್ಳಲಾಗಿದೆ.

ಡಿ. ಉದ್ಯಮ ಬೆಂಬಲಿತ ಇಂಡಿಯಾ ಸ್ಕಿಲ್ಸ್

ಸ್ಪರ್ಧೆಗಳ ಸಮಯದಲ್ಲಿ ಅಭ್ಯರ್ಥಿಗಳ ಕೌಶಲ್ಯ ತರಬೇತಿಗಾಗಿ ನಡೆಸಿದ ಶಿಬಿರಗಳು ಮತ್ತು ಕಾರ್ಯಾಗಾರಗಳ ವೇಳೆ ಮೂಲಸೌಕರ್ಯ, ತಜ್ಞರು ಮತ್ತು ಸಲಕರಣೆಗಳನ್ನು ಬೆಂಬಲಿಸುವ ಉದ್ಯಮದಿಂದ ಸ್ಪರ್ಧೆಗಳಿಗೆ ಅದ್ಭುತ ಪ್ರತಿಕ್ರಿಯೆಯನ್ನು ಪಡೆದಿದೆ.

ಪಾಲುದಾರ ಸಂಸ್ಥೆಗಳಲ್ಲಿ ಮಾರುತಿ ಸುಜುಕಿ, ಲಾರ್ಸೆನ್ ಮತ್ತು ಟೂಬ್ರೊ, ಫೆಸ್ಟೊ ಇಂಡಿಯಾ, ಹೋಟೆಲ್ ಲೀಲಾ, ಟೊಯೋಟಾ ಇಂಡಿಯಾ, ಸಿಬಿಐಪಿ, ಕಾನ್ಸೆಪ್ಟ್ ಮಹಿಂದ್ರಾ, ಪೇಸ್ಟ್ರಿ ಮತ್ತು ಪಾಕಶಾಲೆಯ ಅಕಾಡೆಮಿ, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ), ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಗಳು (ಕೆಜಿಟಿಟಿಐ) ಸೇರಿವೆ ಮತ್ತು ಇಂಡಿಯನ್ ಮೆಷಿನ್ ಟೂಲ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ (ಐಎಂಟಿಎಂಎ), ಬೆಂಗಳೂರು, ಐಸಿಟಿ ಸೆಂಟರ್ ಆಫ್ ಎಕ್ಸಲೆನ್ಸ್, ಮುಂಬೈ, ಇಂಡಿಯಾಟಿವಿ ನ್ಯೂಸ್, ಪ್ಲೇಟೋನಿಯಾ ಇತರರು ಪಾಲುದಾರಿಕೆ ಹೊಂದಿದ್ದಾರೆ.

ಇ. ಇಂಡಿಯಾ ಸ್ಕಿಲ್ಸ್ ನಿಂದ ವರ್ಲ್ಡ್ ಸ್ಕಿಲ್ಸ್ ವರೆಗೆ ಪಯಣ

ಇಂಡಿಯಾ ಸ್ಕಿಲ್ಸ್ 2021 ರಾಷ್ಟ್ರೀಯ ಸ್ಪರ್ಧೆಯನ್ನು ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ನಾಲ್ಕು ಪ್ರಾದೇಶಿಕ ಸ್ಪರ್ಧೆಗಳನ್ನು ಪೂರ್ವ (ಪಾಟ್ನಾ), ಪಶ್ಚಿಮ (ಗಾಂಧಿನಗರ), ಉತ್ತರ (ಚಂಡೀಗಢ) ಮತ್ತು ದಕ್ಷಿಣ (ವಿಶಾಖಪಟ್ಟಣಂ) ನಲ್ಲಿ ನಡೆಸಲಾಯಿತು. ಆಗಸ್ಟ್ ಮತ್ತು ಸೆಪ್ಟೆಂಬರ್ 2021 ರ ನಡುವೆ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಆಯೋಜಿಸಲಾದ ಸ್ಪರ್ಧೆಗಳ ಮೂಲಕ ಪ್ರಾದೇಶಿಕ ಮಟ್ಟದಲ್ಲಿ ಭಾಗವಹಿಸುವವರನ್ನು ಆಯ್ಕೆ ಮಾಡಲಾಯಿತು, ಇದಕ್ಕೆ ದಾಖಲೆಯ 250,000 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು.

ಇಂಡಿಯಾ ಸ್ಕಿಲ್ಸ್ 2021 ರಾಷ್ಟ್ರೀಯ ಸ್ಪರ್ಧೆಯಲ್ಲಿ ವಿಜೇತರಾದವರು 2022ರ ಅಕ್ಟೋಬರ್ ನಲ್ಲಿ ಚೀನಾದ ಶಾಂಘೈನಲ್ಲಿ ನಡೆಯಲಿರುವ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಕಠಿಣ ತರಬೇತಿಯನ್ನು ಎದುರಿಸಬೇಕಾಗುತ್ತದೆ.

ಇಂಡಿಯಾಸ್ಕಿಲ್ಸ್ ರಾಷ್ಟ್ರೀಯ ವಿಜೇತರು ಬೂಟ್ ಕ್ಯಾಂಪ್‌ಗಳು ಮತ್ತು ಪ್ರಾಜೆಕ್ಟ್ ಆಧಾರಿತ ತರಬೇತಿ, ಉದ್ಯಮ ಮತ್ತು ಕಾರ್ಪೊರೇಟ್ ತರಬೇತಿ, ಕೈಗಾರಿಕೆಗಳಿಗೆ ಭೇಟಿ ನೀಡುವುದು, ಮೈಂಡ್ ಕೋಚಿಂಗ್ ಮತ್ತು ವ್ಯಕ್ತಿತ್ವ ವಿಕಸನದಂತಹ ಕಾರ್ಯಕ್ರಮಗಳ ಮೂಲಕ ಬಹು-ಹಂತದ ಉದ್ಯಮ ತರಬೇತಿಯನ್ನು ಪಡೆಯುತ್ತಾರೆ. ಎನ್ ಎಸ್ ಡಿಸಿ ತನ್ನ ಸೆಕ್ಟರ್ ಸ್ಕಿಲ್ ಕೌನ್ಸಿಲ್‌ಗಳು (ಎಸ್ ಎಸ್ ಸಿ ಗಳು) ಮತ್ತು ಪಾಲುದಾರ ಸಂಸ್ಥೆಗಳ ಮೂಲಕ, ಸ್ಪರ್ಧೆಗಳಿಗೆ ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸಲು ಅಭ್ಯರ್ಥಿಗಳಿಗೆ ಅಗತ್ಯ ತರಬೇತಿ ನೀಡಿ ಸಜ್ಜುಗೊಳಿಸುತ್ತದೆ.

***

 



(Release ID: 1788469) Visitor Counter : 145


Read this release in: English , Urdu , Hindi