ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ವರ್ಷಾಂತ್ಯದ ವಿಮರ್ಶೆ 2021: ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಡಿಜಿಟಲ್ ಗುರುತು - ಆಧಾರ್ ಅನ್ನು 31 ಅಕ್ಟೋಬರ್, 2021 ರವರೆಗೆ 126 ಕೋಟಿ ಜನರಿಗೆ ಒದಗಿಸಲಾಗಿದೆ
ಪಿಎಮ್‌ಜಿಡಿಐಎಸ್‌ಹೆಚ್‌ಎ ಯೋಜನೆಯಡಿಯಲ್ಲಿ ಸುಮಾರು 5.36 ಕೋಟಿ ಅಭ್ಯರ್ಥಿಗಳು ದಾಖಲಾಗಿದ್ದಾರೆ ಮತ್ತು 4.54 ಕೋಟಿ ಮಂದಿ ತರಬೇತಿ ಪಡೆದಿದ್ದಾರೆ
ದೇಶದಾದ್ಯಂತ 60 ಸಂಸ್ಥೆಗಳಲ್ಲಿ ಅತ್ಯಾಧುನಿಕ ವಿಎಲ್‌ಎಸ್‌ಐ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ
ಚಿಪ್ಸ್ ಟು ಸಿಸ್ಟಮ್ ಡಿಸೈನ್ (ಎಸ್‌ಎಮ್‌ಡಿಪಿ-ಸಿ2ಎಸ್‌ಡಿ) ಗಾಗಿ ವಿಶೇಷ ಜನಬಲದ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಸುಮಾರು 52,000ರಷ್ಟು ವಿಶೇಷ ಜನಬಲದ ತರಬೇತಿ ನೀಡಲಾಗಿದೆ
2016-17ನೇ ಹಣಕಾಸು ವರ್ಷದಲ್ಲಿ 1085 ಕೋಟಿಯಿಂದ 2020-21 ರಲ್ಲಿ ಸಂಯುಕ್ತ ವಾರ್ಷಿಕ ಬೆಳವಣಿಗೆ ದರ (ಸಿಎಜಿಆರ್) 50.42%ರಂತೆ 5,554 ಕೋಟಿಗೆ ಡಿಜಿಟಲ್ ವಹಿವಾಟುಗಳ ಸಂಖ್ಯೆ ಹೆಚ್ಚಾಗಿದೆ
ಸಚಿವಾಲಯದ ಬಿಪಿಒ ಪ್ರಚಾರ ಯೋಜನೆಯಡಿ 45,500 ವ್ಯಕ್ತಿಗಳು ನೇರ ಉದ್ಯೋಗವನ್ನು ಪಡೆದಿದ್ದಾರೆ
2021-22ರ ಹಣಕಾಸಿನ ವರ್ಷದಲ್ಲಿ, ಸಿ-ಡಾಕ್ ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಮಿಷನ್‌ನ ಹಂತ-II ಅಡಿಯಲ್ಲಿ ಐಐಟಿ ಹೈದರಾಬಾದ್ ಮತ್ತು ಸಿ-ಡಾಕ್ ಬೆಂಗಳೂರಿನಲ್ಲಿ ತಲಾ 650 ಟಿಎಫ್ (800 ಟಿಎಫ್ ಪೀಕ್) ಎರಡು ವ್ಯವಸ್ಥೆಗಳನ್ನು ಸ್ಥಾಪಿಸಿತು
ಐಐಎಸ್‍ಸಿ ಬೆಂಗಳೂರಿನಲ್ಲಿ 3ಪಿಎಫ್ ಪೀಕ್, ಐಐಟಿ ರೂರ್ಕಿಯಲ್ಲಿ 1.66 ಪಿಎಫ್ ಪೀಕ್ ಮತ್ತು ಐಐಟಿ ಗುವಾಹಟಿ, ಎನ್‍ಎಬಿಐ ಮೊಹಾಲಿ, ಐಐಟಿ ಗಾಂ
Posted On:
31 DEC 2021 3:22PM by PIB Bengaluru
ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ವು 2021 ರಲ್ಲಿ ಹಲವಾರು ಹೊಸ / ಪ್ರಮುಖ ಉಪಕ್ರಮಗಳನ್ನು ಕೈಗೊಂಡಿದೆ. ಈ ಕೆಳಗಿನ ವಿವರಗಳಲ್ಲಿ 2021 ರ ಸಮಯದಲ್ಲಿ ಸಚಿವಾಲಯದ ವಿವಿಧ ಉಪಕ್ರಮಗಳ ಒಂದು ನೋಟ:
I ಎಲ್ಲರಿಗೂ ಡಿಜಿಟಲ್ ಪ್ರವೇಶ
1. ಡಿಜಿಟಲ್ ಮೂಲಸೌಕರ್ಯ
i) ಡಿಜಿಟಲ್ ಗುರುತು: ಆಧಾರ್
- ಆಧಾರ್ ವಿಶ್ವದ ಅತಿದೊಡ್ಡ ಡಿಜಿಟಲ್ ಗುರುತಿನ ಕಾರ್ಯಕ್ರಮವಾಗಿದ್ದು ಅದು ಬಯೋಮೆಟ್ರಿಕ್ ಮತ್ತು ಜನಸಂಖ್ಯಾ ಆಧಾರಿತ ಅನನ್ಯ ಡಿಜಿಟಲ್ ಗುರುತನ್ನು ಒದಗಿಸುತ್ತದೆ. ಅದನ್ನು ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ದೃಢೀಕರಿಸಬಹುದು ಮತ್ತು ನಕಲಿ ಮತ್ತು ಖೋಟಾ ಗುರುತನ್ನು ನಿವಾರಿಸುತ್ತದೆ. ಇದು ವಿವಿಧ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ವಿತರಣೆಗಾಗಿ ಗುರುತಿನ ಮೂಲಸೌಕರ್ಯವನ್ನು ಒದಗಿಸುತ್ತದೆ.
- 31 ಅಕ್ಟೋಬರ್, 2021 ರಂತೆ, 126.09 ಕೋಟಿ [ಲೈವ್] ಆಧಾರ್ ನೀಡಲಾಗಿದೆ.
- ಜನರಿಗೆ ಆಧಾರ್ ನೋಂದಣಿ ಮತ್ತು ನವೀಕರಣ ಸೇವೆಗಳನ್ನು ಅನುಕೂಲಕರವಾಗಿ ಒದಗಿಸಲು, ಯುಐಡಿಎಐ ನ ಪರಿಷ್ಕೃತ ಗುರಿಯ ಪ್ರಕಾರ ದೇಶದಾದ್ಯಂತ 122 ನಗರಗಳಲ್ಲಿ 166 ಆಧಾರ್ ಸೇವಾ ಕೇಂದ್ರಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು 2 ಸೇವಾ ಪೂರೈಕೆದಾರರನ್ನು ನೇಮಿಸಿದೆ. 31 ಅಕ್ಟೋಬರ್ 2021 ರಂತೆ, 57 ಆಧಾರ್ ಸೇವಾ ಕೇಂದ್ರಗಳನ್ನು ಕಾರ್ಯಗತಗೊಳಿಸಲಾಗಿದೆ.
2. ಸೇವೆಗಳ ಡಿಜಿಟಲ್ ವಿತರಣೆ
- ಸಾಮಾನ್ಯ ಸೇವಾ ಕೇಂದ್ರಗಳು (CSC ಗಳು): ಸಾಮಾನ್ಯ ಸೇವಾ ಕೇಂದ್ರಗಳು ಪ್ರಪಂಚದ ಅತಿದೊಡ್ಡ ಡಿಜಿಟಲ್ ಸೇವಾ ವಿತರಣಾ ಜಾಲವಾಗಿದ್ದು, ಗ್ರಾಮ ಪಂಚಾಯತ್ ಮತ್ತು ಬ್ಲಾಕ್ ಮಟ್ಟದವರೆಗೆ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕ ವ್ಯಾಪ್ತಿಯನ್ನು ಹೊಂದಿದೆ. ಬ್ರಾಡ್ ಬ್ಯಾಂಡ್ ಸಂಪರ್ಕದೊಂದಿಗೆ ಈ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಸಕ್ರಿಯಗೊಳಿಸಿದ ಕಿಯೋಸ್ಕ್ಗಳು ನಾಗರಿಕರಿಗೆ ವಿವಿಧ ಸರ್ಕಾರಗಳು, ಖಾಸಗಿ ಮತ್ತು ಸಾಮಾಜಿಕ ಸೇವೆಗಳನ್ನು ಒದಗಿಸುತ್ತಿವೆ. 1ನೇ ಜನವರಿ 2020 ರಿಂದ 31 ಅಕ್ಟೋಬರ್ 2020 ರವರೆಗೆ 6,467 ಹೆಚ್ಚುವರಿ ಕಾರ್ಯಾತ್ಮಕ ಸಿಎಸ್ಸಿ ಗಳನ್ನು (ನಗರ ಮತ್ತು ಗ್ರಾಮೀಣ ಸೇರಿದಂತೆ) ಸೇರಿಸಲಾಗಿದೆ, ಹಾಗಯೇ, ಗ್ರಾಮ ಪಂಚಾಯತಿ ಮಟ್ಟದಲ್ಲಿ 10,339 ಕಾರ್ಯಾತ್ಮಕ ಸಿಎಸ್ಸಿ ಗಳನ್ನು ಸೇರಿಸಲಾಗಿದೆ.
- ವಿಡಿಯೋ ಕಾನ್ಫರೆನ್ಸಿಂಗ್ (VC) ವರ್ಚುವಲ್: ಎನ್ ಐ ಸಿಯ ವಿಸಿ ವಿಸಿ ಸೇವೆಗಳನ್ನು ಪ್ರಧಾನ ಮಂತ್ರಿಗಳು, ಕೇಂದ್ರ ಮಂತ್ರಿಗಳು, ರಾಜ್ಯಪಾಲರು, ರಾಜ್ಯಗಳ ಮುಖ್ಯಮಂತ್ರಿಗಳು, ಕ್ಯಾಬಿನೆಟ್ ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯದರ್ಶಿಗಳು, ಮುಖ್ಯ ಮಾಹಿತಿ ಆಯುಕ್ತರು ಮತ್ತು ದೇಶಾದ್ಯಂತ ವಿವಿಧ ಹಿರಿಯ ಅಧಿಕಾರಿಗಳು ವ್ಯಾಪಕವಾಗಿ ಬಳಸುತ್ತಿದ್ದಾರೆ. ಎನ್ ಐ ಸಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ಬಳಕೆದಾರರಿಗೆ ವೆಬ್ ಆಧಾರಿತ ಡೆಸ್ಕ್ಟಾಪ್ ವೀಡಿಯೊ ಕಾನ್ಫರೆನ್ಸಿಂಗ್ ಸೇವೆಗಳನ್ನು ಸಹ ಒದಗಿಸುತ್ತಿದೆ.
- ವರ್ಚುವಲ್ ನ್ಯಾಯಾಲಯಗಳು (ವಾಸ್ತವೋಪಮ ನ್ಯಾಯಾಲಯಗಳು)
- ಇದು ಕಾನೂನು ಉಲ್ಲಂಘಿಸುವವರ ಅಥವಾ ನ್ಯಾಯಾಲಯದಲ್ಲಿ ವಕೀಲರ ಭೌತಿಕ ಉಪಸ್ಥಿತಿಯನ್ನು ತೆಗೆದುಹಾಕುವ ಮೂಲಕ ನ್ಯಾಯಾಲಯಗಳಲ್ಲಿ ಖುದ್ದು ಹಾಜರಿಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ವರ್ಚುವಲ್ ನ್ಯಾಯಾಲಯವನ್ನು ವರ್ಚುವಲ್ ನ್ಯಾಯಾಧೀಶರು ನಿರ್ವಹಿಸಬಹುದು, ಅವರ ಅಧಿಕಾರ ವ್ಯಾಪ್ತಿಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸಬಹುದು ಮತ್ತು ಕೆಲಸದ ಸಮಯ 24X7 ಆಗಿರಬಹುದು. ದಾವೆದಾರರು ನ್ಯಾಯಾಲಯಕ್ಕೆ ಭೇಟಿ ನೀಡುವ ಅಗತ್ಯವಿಲ್ಲ ಅಥವಾ ನ್ಯಾಯಾಧೀಶರು ಭೌತಿಕವಾಗಿ ನ್ಯಾಯಾಲಯದಲ್ಲಿ ಇರಬೇಕಾಗಿಲ್ಲ ಹೀಗಾಗಿ ಅಮೂಲ್ಯವಾದ ನ್ಯಾಯಾಲಯದ ಸಮಯವನ್ನು ಉಳಿಸುತ್ತದೆ.
- ರಾಜ್ಯದಾದ್ಯಂತ ಟ್ರಾಫಿಕ್ ಚಲನ್ಗಳನ್ನು ನಿರ್ಣಯಿಸಲು ಅಗತ್ಯವಿರುವ ನ್ಯಾಯಾಧೀಶರ ಸಂಖ್ಯೆಯನ್ನು ಒಂದೇ ಸಂಖ್ಯೆಗೆ ಇಳಿಸಬಹುದು. ನ್ಯಾಯಾಲಯದಲ್ಲಿ ಸಲ್ಲಿಸಬೇಕಾದ ಇ ಚಲನ್ಗಳನ್ನು ಸ್ವಯಂಚಾಲಿತವಾಗಿ ತೀರ್ಪಿಗಾಗಿ ವರ್ಚುವಲ್ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ. ವರ್ಚುವಲ್ ನ್ಯಾಯಾಧೀಶರು ಎಲ್ಲಿಂದಲಾದರೂ ವರ್ಚುವಲ್ ಕೋರ್ಟ್ ಅಪ್ಲಿಕೇಶನ್ ಅನ್ನು ಪ್ರವೇಶಿಸಬಹುದು, ಪ್ರಕರಣಗಳನ್ನು ವೀಕ್ಷಿಸಬಹುದು ಮತ್ತು ಆನ್ಲೈನ್ನಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸಬಹುದು.
iv. ಆರೋಗ್ಯ ಸೇತು: ಇದು ಸರ್ಕಾರದ ಕೋವಿಡ್-19 ರ ಕಾರ್ಯಗಳಿಗೆ ಅನುಕೂಲವಾಗಲು 2ನೇ ಏಪ್ರಿಲ್, 2020 ರಂದು ಭಾರತ ಸರ್ಕಾರವು ಪ್ರಾರಂಭಿಸಿದ ಮೊಬೈಲ್ ಆ್ಯಪ್ ಆಗಿದೆ. ಈ ಆ್ಯಪ್ ಸಂಪರ್ಕ ಪತ್ತೆಹಚ್ಚುವ ವಿಧಾನವನ್ನು ಆಧರಿಸಿ ಕಾರ್ಯನಿರ್ವಹಿಸುತ್ತದೆ ಮತ್ತು ದೇಶಾದ್ಯಂತ ಕೋವಿಡ್-19 ಹರಡುವಿಕೆಯನ್ನು ಗುರುತಿಸಲು, ಮೇಲ್ವಿಚಾರಣೆ ಮಾಡಲು ಮತ್ತು ತಗ್ಗಿಸಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ.
v. ಆರ್ಟಿ-ಪಿಸಿಆರ್ ಮತ್ತು ರಟಿ ಮೊಬೈಲ್ ಆ್ಯಪ್ ಗಳು: ಎನ್ ಐ ಸಿಯು ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್ಫಾರ್ಮ್ಗಳಲ್ಲಿ ಹಾಗು ವೆಬ್ ಪೋರ್ಟಲ್ಗಳಲ್ಲಿ ಆರ್ಟಿ-ಪಿಸಿಆರ್ ಮತ್ತು ರಟಿ ಮೊಬೈಲ್ ಆ್ಯಪ್ ಗಳನ್ನು ಅಭಿವೃದ್ಧಿಪಡಿಸಿದೆ ಮತ್ತು ಕಣ್ಗಾವಲುಗಾಗಿ ಸ್ಥಳದಲ್ಲಿರುವ ರೋಗಿಗಳ ಗುಣಮಟ್ಟ ಮತ್ತು ನಿಖರವಾದ ದತ್ತಾಂಶವನ್ನು ಖಚಿತಪಡಿಸಿಕೊಳ್ಳಲು ಅಧಿಕೃತ ಪ್ರಯೋಗಾಲಯಗಳ ಬಳಕೆಗಾಗಿ, ಮಾದರಿ ವಿವರಗಳನ್ನು ಐಸಿಎಮ್ಆರ್ ಗೆ ತಕ್ಷಣ ವರ್ಗಾಯಿಸುತ್ತದೆ.
vi. ಜಿಎಸ್ಟಿ ಪ್ರೈಮ್: ಜಿಎಸ್ಟಿ ಪ್ರೈಮ್ ಎನ್ನುವುದು ತೆರಿಗೆ ನಿರ್ವಾಹಕರು ತಮ್ಮ ಅಧಿಕಾರ ವ್ಯಾಪ್ತಿಯೊಳಗೆ ತೆರಿಗೆ ಸಂಗ್ರಹಣೆ ಮತ್ತು ಅನುಸರಣೆಯನ್ನು ವಿಶ್ಲೇಷಿಸಲು ಮತ್ತು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುವ ಉತ್ಪನ್ನವಾಗಿದೆ. ಜಿಎಸ್ಟಿ ಪ್ರೈಮ್ ಜಿಎಸ್ಟಿ ಅನುಸರಣೆಯನ್ನು ಸುಧಾರಿಸುತ್ತದೆ, ತೆರಿಗೆ ಸಂಗ್ರಹವನ್ನು ಹೆಚ್ಚಿಸುತ್ತದೆ, ತೆರಿಗೆ ಮೂಲವನ್ನು ಹೆಚ್ಚಿಸುತ್ತದೆ, ತೆರಿಗೆ ವಂಚನೆಯನ್ನು ಪತ್ತೆಹಚ್ಚುತ್ತದೆ ಮತ್ತು ವಂಚನೆ ಮತ್ತು ನೀತಿ ಬದಲಾವಣೆಯ ಪರಿಣಾಮವನ್ನು ಊಹಿಸುತ್ತದೆ.
vii. ಇ-ತಾಲ್ (ಎಲೆಕ್ಟ್ರಾನಿಕ್ ಟ್ರಾನ್ಸಾಕ್ಷನ್ ಅಗ್ರಿಗೇಷನ್ ಮತ್ತು ಅನಾಲಿಸಿಸ್ ಲೇಯರ್): ವಿವಿಧ ಇ-ಆಡಳಿತ ಸೇವೆಗಳಲ್ಲಿ ಎಲೆಕ್ಟ್ರಾನಿಕ್ ವಹಿವಾಟುಗಳಲ್ಲಿ (ಇ-ವಹಿವಾಟುಗಳು) ಅದ್ಭುತ ಬೆಳವಣಿಗೆ ಕಂಡುಬಂದಿದೆ. ಜನವರಿ, 2020 ರಿಂದ ಡಿಸೆಂಬರ್ 8, 2020 ರವರೆಗೆ, ಸುಮಾರು 6,456 ಕೋಟಿ ಇ-ವಹಿವಾಟುಗಳನ್ನು ದಾಖಲಿಸಲಾಗಿದೆ ಮತ್ತು 122 ಹೆಚ್ಚುವರಿ ಇ-ಸೇವೆಗಳನ್ನು ಇ-ತಾಲ್ ಪ್ಲಾಟ್ಫಾರ್ಮ್ನೊಂದಿಗೆ ಸಂಯೋಜಿಸಲಾಗಿದೆ.
viii. ಇ-ಡಿಸ್ಟ್ರಿಕ್ಟ್ ಮಿಷನ್ ಮೋಡ್ ಪ್ರಾಜೆಕ್ಟ್ (ಎಮ್ಎಮ್ಪಿ): ಇ-ಡಿಸ್ಟ್ರಿಕ್ಟ್ ಎನ್ನುವುದು ಮಿಷನ್ ಮೋಡ್ ಯೋಜನೆ (MMP) ಆಗಿದ್ದು, ಇದು ಜಿಲ್ಲೆ ಅಥವಾ ಉಪ-ಜಿಲ್ಲಾ ಮಟ್ಟದಲ್ಲಿ ಗುರುತಿಸಲಾದ ಹೆಚ್ಚಿನ ಪ್ರಮಾಣದ ನಾಗರಿಕ ಕೇಂದ್ರಿತ ಸೇವೆಗಳ ವಿದ್ಯುನ್ಮಾನ ವಿತರಣೆಯ ಗುರಿಯನ್ನು ಹೊಂದಿದೆ. 1ನೇ ಜನವರಿ 2020 ರಿಂದ 30ನೇ ನವೆಂಬರ್ 2020 ರವರೆಗೆ, ನಾಗರಿಕರಿಗಾಗಿ 931 ಕ್ಕೂ ಹೆಚ್ಚು ಇ-ಸೇವೆಗಳನ್ನು ದಾಖಲಿಸಲಾಗಿದೆ ಮತ್ತು 33 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 15 ಜಿಲ್ಲೆಗಳಲ್ಲಿ ಹೊಸ ಸೇವೆಗಳನ್ನು ಹೆಚ್ಚಿಸಲಾಗಿದೆ.
ix. ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ ಸಿಸ್ಟಮ್ (ವಿಎಲ್ಟಿಎಸ್): ವಾಹನಗಳಲ್ಲಿ ಅಳವಡಿಸಲಾಗಿರುವ ಜಿಪಿಎಸ್ ಆಧಾರಿತ ಟ್ರ್ಯಾಕಿಂಗ್ ಸಾಧನಗಳ ಸಹಾಯದಿಂದ ಸಾರ್ವಜನಿಕ ವಾಹನಗಳನ್ನು ಟ್ರ್ಯಾಕ್ ಮಾಡಲು ಮತ್ತು ಮೇಲ್ವಿಚಾರಣೆ ಮಾಡಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಕಮಾಂಡ್ ಕಂಟ್ರೋಲ್ ಸೆಂಟರ್ (ಸಿಸಿಸಿ) ಬಳಸಿಕೊಂಡು ಪರಿಣಾಮಕಾರಿ ಮೇಲ್ವಿಚಾರಣೆಯ ಸಹಾಯದಿಂದ ತೊಂದರೆಯಲ್ಲಿರುವ ಪ್ರಯಾಣಿಕರಿಗೆ ಸಹಾಯಕವಾಗಲು, ತುರ್ತು ಪ್ರತಿಕ್ರಿಯೆ ಕಾರ್ಯವಿಧಾನವನ್ನು ಪ್ರಚೋದಿಸುವ ಪ್ಯಾನಿಕ್ ಅಲರ್ಟ್ ಅನ್ನು ಕಳುಹಿಸುವ ಸೌಲಭ್ಯವನ್ನು ಇದು ಹೊಂದಿದೆ.
X. ಇ ಚಲನ್: ಸಿಸಿಟಿವ / ಎಎನ್ಇಆರ್ (ಸ್ವಯಂಚಾಲಿತ ನಂಬರ್ ಪ್ಲೇಟ್ ರೀಡಿಂಗ್) ಕ್ಯಾಮೆರಾಗಳು, ಆರ್ ಎಲ್ವಿಡಿ/ ಒಎಸ್ವಿಡಿ (ರೆಡ್ ಲೈಟ್/ಓವರ್ ಸ್ಪೀಡ್ ಉಲ್ಲಂಘನೆ) ಸಾಧನಗಳು, ಇತ್ಯಾದಿಗಳೊಂದಿಗೆ ಸಂಯೋಜಿತವಾಗಿರುವ ಮೊಬೈಲ್ ಆಧಾರಿತ ಆ್ಯಪ್ ಮತ್ತು ಕಾಂಪ್ಲಿಮೆಂಟರಿ ವೆಬ್ ಆ್ಯಪ್ ಅನ್ನು ಬಳಸಿಕೊಂಡು ಸಮಗ್ರ ಸಂಚಾರ ನಿರ್ವಹಣೆ ಪರಿಹಾರ ಚಲನ್/ನೋಟಿಸ್ಗಳನ್ನು ನೀಡುವುದು.
xi ಎಲೆಕ್ಟ್ರಾನಿಕ್ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (ಇಹೆಚ್ಆರ್ಎಮ್ಎಸ್): ಇಹೆಚ್ಆರ್ಎಮ್ಎಸ್ ಆ್ಯಪ್ ನೇಮಕಾತಿಯಿಂದ ನಿವೃತ್ತಿಯಾಗುವವರೆಗೆ ಎಲೆಕ್ಟ್ರಾನಿಕ್ ರೂಪದಲ್ಲಿ ಉದ್ಯೋಗಿಯ ದಾಖಲೆಯ ನಿರ್ವಹಣೆಯ ಜವಾಬ್ದಾರಿ ಹೊಂದಿರುತ್ತದೆ. ಲೆಗಸಿ ಡೇಟಾವನ್ನು ಸೆರೆಹಿಡಿಯಲು ಸೇವಾ ಪುಸ್ತಕದ ಸ್ಕ್ಯಾನಿಂಗ್/ಡಿಜಿಟೈಸೇಶನ್ ಮತ್ತು ವಿವಿಧ ಮಾಡ್ಯೂಲ್ಗಳ ಮೂಲಕ 28 ಆನ್ಲೈನ್ ಸೇವೆಗಳನ್ನು ಒದಗಿಸುವುದನ್ನು ಯೋಜನೆಯು ಒಳಗೊಂಡಿದೆ; ಅವುಗಳೆಂದರೆ ಸೇವಾ ಪುಸ್ತಕ, ರಜೆ, ಎಲ್ ಟಿ ಸಿ, ವೈಯಕ್ತಿಕ ಮಾಹಿತಿ, ಮರುಪಾವತಿಗಳು, ಮುಂಗಡಗಳು, ಪ್ರವಾಸ, ಸಹಾಯವಾಣಿ, ಇತ್ಯಾದಿ
xii ಸರ್ವಿಸ್ ಪ್ಲಸ್: ಇದು ಮೆಟಾ ಡೇಟಾ ಆಧಾರಿತ ಇ-ಸೇವಾ ವಿತರಣಾ ಫ್ರೇಮ್ವರ್ಕ್ ಆಗಿದ್ದು, ಸಾಮಾನ್ಯ ಸೇವಾ ವಿತರಣಾ ಔಟ್ಲೆಟ್ಗಳ ಮೂಲಕ ಎಲ್ಲಾ ಸರ್ಕಾರಿ ಸೇವೆಗಳನ್ನು ಅವರ ಪ್ರದೇಶದಲ್ಲಿ ಸಾಮಾನ್ಯ ಜನರಿಗೆ ಪ್ರವೇಶಿಸಲು ಸಹಾಯ ಮಾಡುತ್ತದೆ. ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸರ್ಕಾರದ 2,299 ಕ್ಕೂ ಹೆಚ್ಚು ಸೇವೆಗಳಿಗೆ ಅನುಕೂಲವಾಗುವಂತೆ 33 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಫ್ರೇಮ್ವರ್ಕ್ ಯಶಸ್ವಿಯಾಗಿ ಚಾಲನೆಯಲ್ಲಿದೆ.
xiii. ಕ್ಷಿಪ್ರ ಮೌಲ್ಯಮಾಪನ ವ್ಯವಸ್ಥೆ - ರಾಪಿಡ್ ಅಸೆಸ್ಮೆಂಟ್ ಸಿಸ್ಟಮ್ (ಆರ್ ಎ ಎಸ್): ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ನೀಡುವ ಇ-ಸೇವೆಗಳ ಕುರಿತು ನಿರಂತರ ಪ್ರತಿಕ್ರಿಯೆ ವ್ಯವಸ್ಥೆ. ಆರ್ ಎ ಎಸ್ ಸ್ಥಳೀಯ ಪ್ರತಿಕ್ರಿಯೆ ಫಾರ್ಮ್ಗಳನ್ನು 9 ಭಾಷೆಗಳಲ್ಲಿ ನೀಡುತ್ತದೆ, ಅಂದರೆ ಹಿಂದಿ, ಗುಜರಾತಿ, ಬೆಂಗಾಲಿ, ಕನ್ನಡ, ಮಲಯಾಳಂ, ಮರಾಠಿ, ಪಂಜಾಬಿ, ತಮಿಳು ಮತ್ತು ತೆಲುಗು. 1ನೇ ಜನವರಿ 2020 ರಿಂದ 30ನೇ ನವೆಂಬರ್ 2020 ರವರೆಗೆ, ಆರ್ ಎ ಎಸ್ ಅನ್ನು ಭಾರತದ 21 ಇಲಾಖೆಗಳ 97 ಇ-ಸೇವೆಗಳೊಂದಿಗೆ ಸಂಯೋಜಿಸಲಾಗಿದೆ ಮತ್ತು 3.31 ಕೋಟಿ ಪ್ರತಿಕ್ರಿಯೆ ವಿನಂತಿಗಳನ್ನು ಕಳುಹಿಸಲಾಗಿದೆ.
xiv. ಮುಕ್ತ ಸರಕಾರಿ ದತ್ತಾಂಶ ಓಪನ್ ಗವರ್ನಮೆಂಟ್ ಡೇಟಾ (ಒಜಿಡಿ 2.0): ಒಜಿಡಿ ಪ್ಲಾಟ್ಫಾರ್ಮ್ ಇಂಡಿಯಾ (https://data.gov.in) ಅನ್ನು ಭಾರತದ ಮುಕ್ತ ದತ್ತಾಂಶ ನೀತಿ (ಎನ್ಡಿಎಸ್ಎಪಿ) ಗೆ ಅನುಗುಣವಾಗಿ ರಾಷ್ಟ್ರೀಯ ಮಾಹಿತಿ ಕೇಂದ್ರದಿಂದ (ಎನ್ಐಸಿ) ಸ್ಥಾಪಿಸಲಾಗಿದೆ. ನೀತಿಯ ಉದ್ದೇಶವು ಸರ್ಕಾರಿ ಸ್ವಾಮ್ಯದ ಹಂಚಿಕೊಳ್ಳಬಹುದಾದ ದತ್ತಾಂಶಕ್ಕೆ ಪೂರ್ವಭಾವಿ ಪ್ರವೇಶವನ್ನು ಒದಗಿಸುವುದು, ಅದರ ಬಳಕೆಯ ಮಾಹಿತಿಯನ್ನು ತೆರೆದ /ಯಂತ್ರ ಓದಬಲ್ಲ ಸ್ವರೂಪದಲ್ಲಿ, ದೇಶಾದ್ಯಂತ ವ್ಯಾಪಕವಾದ ನೆಟ್ವರ್ಕ್ ಮೂಲಕ, ನಿಯತಕಾಲಿಕವಾಗಿ ನವೀಕರಿಸಿದ ರೀತಿಯಲ್ಲಿ, ವಿವಿಧ ಸಂಬಂಧಿತ ಚೌಕಟ್ಟಿನೊಳಗೆ ಒದಗಿಸುವುದು. ಸರ್ಕಾರದ ನೀತಿಗಳು, ನಿಯಮಗಳು ಮತ್ತು ಕಾರ್ಯಗಳು. 1ನೇ ಜನವರಿ 2020 ರಿಂದ 30ನೇ ನವೆಂಬರ್ 2020 ವರೆಗೆ, ಒಜಿಡಿ ಭಾರತವು 87,974 ಡೇಟಾಸೆಟ್ ಸಂಪನ್ಮೂಲಗಳನ್ನು ಹೊಂದಿದೆ, 1,118 ಕ್ಯಾಟಲಾಗ್ಗಳನ್ನು 9 ಸಚಿವಾಲಯ/ಇಲಾಖೆಗಳು ಕೊಡುಗೆಯಾಗಿ ನೀಡಿವೆ, 242 ದೃಶ್ಯೀಕರಣಗಳನ್ನು ರಚಿಸಲಾಗಿದೆ, 39,112 ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ಗಳನ್ನು (ಎಪಿಐ ಗಳು) ರಚಿಸಲಾಗಿದೆ. ಒಜಿಡಿ ಇಂಡಿಯಾವನ್ನು 30.40 ಲಕ್ಷ ಬಾರಿ ವೀಕ್ಷಿಸಲಾಗಿದೆ ಮತ್ತು 5.50 ಲಕ್ಷ ಡೇಟಾಸೆಟ್ಗಳನ್ನು ಡೌನ್ಲೋಡ್ ಮಾಡಲಾಗಿದೆ.
xv ಜಾಗತಿಕ ಸೂಚ್ಯಂಕಗಳು: ಇ-ಸರ್ಕಾರಿ ಅಭಿವೃದ್ಧಿ ಸೂಚ್ಯಂಕ (ಇಜಿಡಿಐ) ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಇ-ಸರ್ಕಾರದ ಅಭಿವೃದ್ಧಿಯ ಸ್ಥಿತಿಯನ್ನು ಪ್ರಸ್ತುತಪಡಿಸುತ್ತದೆ. ಒಂದು ದೇಶದಲ್ಲಿ ವೆಬ್ಸೈಟ್ ಅಭಿವೃದ್ಧಿ ಮಾದರಿಗಳ ಮೌಲ್ಯಮಾಪನದ ಜೊತೆಗೆ, ಇ-ಸರ್ಕಾರ ಅಭಿವೃದ್ಧಿ ಸೂಚ್ಯಂಕವು ತನ್ನ ಜನರ ಪ್ರವೇಶ ಮತ್ತು ಸೇರ್ಪಡೆಯನ್ನು ಉತ್ತೇಜಿಸಲು ಒಂದು ದೇಶವು ಮಾಹಿತಿ ತಂತ್ರಜ್ಞಾನಗಳನ್ನು ಹೇಗೆ ಬಳಸುತ್ತಿದೆ ಎಂಬುದನ್ನು ಪ್ರತಿಬಿಂಬಿಸಲು ಮೂಲಸೌಕರ್ಯ ಮತ್ತು ಶೈಕ್ಷಣಿಕ ಮಟ್ಟಗಳಂತಹ ಪ್ರವೇಶ ಗುಣಲಕ್ಷಣಗಳನ್ನು ಸಂಯೋಜಿಸುತ್ತದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಇಜಿಡಿಐಗಾಗಿ ಇರುವ ನೋಡಲ್ ಸಚಿವಾಲಯವಾಗಿದೆ.
ಇಜಿಡಿಐ, ಇ-ಸರ್ಕಾರದ ಮೂರು ಪ್ರಮುಖ ಆಯಾಮಗಳ ಸಂಯೋಜಿತ ಅಳತೆಯಾಗಿದೆ, ಅವುಗಳೆಂದರೆ: ಆನ್ಲೈನ್ ಸೇವಾ ಸೂಚ್ಯಂಕ, ದೂರಸಂಪರ್ಕ ಮೂಲಸೌಕರ್ಯ ಸೂಚ್ಯಂಕ ಮತ್ತು ಮಾನವ ಬಂಡವಾಳ ಸೂಚ್ಯಂಕ.
- ಆನ್ಲೈನ್ ಸೇವಾ ಸೂಚ್ಯಂಕ (ಒಎಸ್ಐ) ಸರ್ಕಾರದ ಸಾಮರ್ಥ್ಯ ಮತ್ತು ಸೇವೆಗಳನ್ನು ಒದಗಿಸಲು ಮತ್ತು ಅದರ ನಾಗರಿಕರೊಂದಿಗೆ ವಿದ್ಯುನ್ಮಾನವಾಗಿ ಸಂವಹನ ನಡೆಸುವ ಇಚ್ಛೆಯನ್ನು ಅಳೆಯುತ್ತದೆ. ಉದಾ: ವಹಿವಾಟು ಸೇವೆಗಳು: ರಾಷ್ಟ್ರೀಯ ವೆಬ್ಸೈಟ್ಗಳ ಮೂಲಕ ಆದಾಯ ತೆರಿಗೆಗಳು - ಸಚಿವಾಲಯ.
- ದೂರಸಂಪರ್ಕ ಮೂಲಸೌಕರ್ಯ ಸೂಚ್ಯಂಕ (ಟಿಐಐ) ನಾಗರಿಕರು ಇ-ಸರ್ಕಾರದಲ್ಲಿ ಭಾಗವಹಿಸಲು ಅಗತ್ಯವಿರುವ ಅಸ್ತಿತ್ವದಲ್ಲಿರುವ ಮೂಲಸೌಕರ್ಯವನ್ನು ಅಳೆಯುತ್ತದೆ- ದೂರಸಂಪರ್ಕ ಇಲಾಖೆ
- ಮಾನವ ಬಂಡವಾಳ ಸೂಚ್ಯಂಕವನ್ನು (ಹೆಚ್ಸಿಐ) ಇ-ಸರ್ಕಾರಿ ಸೇವೆಗಳನ್ನು ಬಳಸುವ ನಾಗರಿಕರ ಸಾಮರ್ಥ್ಯವನ್ನು ಅಳೆಯಲು ಬಳಸಲಾಗುತ್ತದೆ - ಉನ್ನತ ಶಿಕ್ಷಣ ಇಲಾಖೆ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ (DoSEL)
ಜನವರಿ, 2021 ರಿಂದ ಅಕ್ಟೋಬರ್, 2021 ರವರೆಗೆ ಕೈಗೊಂಡ ಕಾರ್ಯಗಳು
- ಇ-ಸರ್ಕಾರದ ಸೂಚ್ಯಂಕ ಮಾನಿಟರಿಂಗ್ ಸಮಿತಿಯನ್ನು (eGIMC) ಸ್ಥಾಪಿಸಲಾಯಿತು ಮತ್ತು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ, ಅವರ ಅಧ್ಯಕ್ಷತೆಯಲ್ಲಿ ಇ-ಸರ್ಕಾರ ಅಭಿವೃದ್ಧಿ ಸೂಚ್ಯಂಕ (EGDI) ದ ಉಪ-ಸೂಚ್ಯಂಕಗಳ ಸ್ಥಿತಿಯನ್ನು ಪರಿಶೀಲಿಸಲು ಆವರ್ತಕ ಸಭೆಗಳನ್ನು ನಡೆಸಲಾಗುತ್ತದೆ.
- ಯುನೈಟೆಡ್ ನೇಷನ್ಸ್ ಡಿಪಾರ್ಟ್ಮೆಂಟ್ ಆಫ್ ಎಕನಾಮಿಕ್ ಅಂಡ್ ಸೋಶಿಯಲ್ ಅಫೇರ್ಸ್ (UNDESA) ಮೂಲಕ ಹಂಚಿಕೊಂಡಿರುವ ಸದಸ್ಯ ರಾಷ್ಟ್ರ ಪ್ರಶ್ನಾವಳಿ (MSQ) 2022 ಅನ್ನು ಸರಿಯಾಗಿ ಭರ್ತಿ ಮಾಡಲಾಗಿದೆ ಮತ್ತು ನಿಗದಿತ ಸಮಯದೊಳಗೆ ಹಂಚಿಕೊಳ್ಳಲಾಗಿದೆ.
- ಕಾರ್ಯಗತಗೊಳಿಸಬೇಕಾದ ನಿಯತಾಂಕಗಳನ್ನು ಗುರುತಿಸಲು 51 ಪೋರ್ಟಲ್ಗಳ ಮೌಲ್ಯಮಾಪನವನ್ನು ಮಾಡಲಾಯಿತು ಮತ್ತು ಸಂಬಂಧಿಸಿದ ಇಲಾಖೆಗಳು/ಸಚಿವಾಲಯಗಳು ಒಎಸ್ಐ ಕ್ರಿಯಾ ಯೋಜನೆಯನ್ನು ಅನುಷ್ಠಾನಗೊಳಿಸುವುದನ್ನು ಖಾತ್ರಿಪಡಿಸಲಾಗಿದೆ.
- ಒಎಸ್ಐ, ಟಿಐಐ, ಹೆಚ್ಸಿಐ ಮತ್ತು ಸಚಿವಾಲಯದ ವಾಗಿರುವ ಇತರ ಸೂಚ್ಯಂಕಗಳಿಗಾಗಿ ಜಿಆರ್ಜಿ ಡ್ಯಾಶ್ಬೋರ್ಡ್ನಲ್ಲಿ ದತ್ತಾಂಶವನ್ನು ತುಂಬಿಸುವುದು
- ಒಎಸ್ಐ ಕ್ರಿಯಾ ಯೋಜನೆಯಲ್ಲಿ ತಿಳಿಸಿರುವಂತೆ ಕಾರ್ಯಗಳ ಅನುಸರಣೆಗಾಗಿ 51 ಪೋರ್ಟಲ್ಗಳ ನೋಡಲ್ ಅಧಿಕಾರಿಗಳೊಂದಿಗೆ ನಿಯಮಿತ ಅನುಸರಣೆಗಳು
- ದೂರಸಂಪರ್ಕ ಇಲಾಖೆಯಿಂದ ಹಂಚಿಕೊಳ್ಳಲಾದ ಇಗಿಡಿಐ ಟಿಐಐ ದತ್ತಾಂಶದ ವಿಶ್ಲೇಷಣೆಯನ್ನು ಮಾಡಲಾಗಿದೆ ಮತ್ತು ಸಂಸ್ಕರಿಸಿದ ಡೇಟಾವನ್ನು ಹಂಚಿಕೊಳ್ಳಲು ದೂರಸಂಪರ್ಕ ಇಲಾಖೆಯೊಂದಿಗೆ ನಿರಂತರ ಅನುಸರಣೆ ಮಾಡಲಾಗಿದೆ
- ನೀತಿ ಆಯೋಗದ ಆದೇಶದಂತೆ ರಾಜ್ಯ ಮಟ್ಟದ ಮೇಲ್ವಿಚಾರಣೆಗಾಗಿ ರಾಷ್ಟ್ರೀಯ ಆನ್ಲೈನ್ ಸೇವಾ ಸೂಚ್ಯಂಕ ಚೌಕಟ್ಟನ್ನು ಸಿದ್ಧಪಡಿಸಲಾಗಿದೆ.
- ರಾಷ್ಟ್ರೀಯ ಇ-ಆಡಳಿತ ಸೇವೆಯ ವಿತರಣಾ ಮೌಲ್ಯಮಾಪನ (NeSDA) ಮತ್ತು ರಾಷ್ಟ್ರೀಯ ಆನ್ಲೈನ್ ಸೇವಾ ಸೂಚ್ಯಂಕ (NOSI) ಚೌಕಟ್ಟಿನ ತುಲನಾತ್ಮಕ ವಿಶ್ಲೇಷಣೆ ಮತ್ತು ಒಎಸ್ಐ ನ ರಾಜ್ಯ ಮಟ್ಟದ ಮೇಲ್ವಿಚಾರಣೆ ಮತ್ತು ಅನುಷ್ಠಾನಕ್ಕಾಗಿ ಒಂದೇ ಚೌಕಟ್ಟನ್ನು ರಚಿಸಲು ಹೆಚ್ಚಿನ ಸಹಯೋಗದ ಪ್ರಯತ್ನಗಳನ್ನು ಮಾಡಲಾಗಿದೆ.
- ಇದರ ಹೊರತಾಗಿ, 7 ಜಾಗತಿಕ ಸೂಚ್ಯಂಕಗಳು ಸಚಿವಾಲಯದ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಕೆಳಗಿನ ಸೂಚ್ಯಂಕಗಳಲ್ಲಿ ಸಂಬಂಧಿಸಿದ ನೋಡಲ್ ಸಚಿವಾಲಯಗಳೊಂದಿಗೆ ಸಂಬಂಧಿತ ದತ್ತಾಂಶವನ್ನು ಹಂಚಿಕೊಳ್ಳುತ್ತಿದೆ ಮತ್ತು ಈ ಕೆಳಗಿನವುಗಳನ್ನು ಜಿಐಆರ್ಜಿ ಜಾಲತಾಣದಲ್ಲಿ ಮತ್ತಷ್ಟು ಹೊಸ ಮಾಹಿತಿ ಒದಗಿಸುತ್ತಿದೆ
- ನೆಟ್ವರ್ಕ್ ರೆಡಿನೆಸ್ ಇಂಡೆಕ್ಸ್ (ಸಂಪರ್ಕ ಜಾಲ ಸಿದ್ಧತೆ ಸೂಚ್ಯಂಕ)
- ಸುರಕ್ಷಿತ ನಗರ ಸೂಚ್ಯಂಕ
- ಸೇವೆಗಳ ವ್ಯಾಪಾರ ನಿರ್ಬಂಧಿತ ಸೂಚ್ಯಂಕ
- ಜಾಗತಿಕ ನಾವೀನ್ಯತೆ ಸೂಚ್ಯಂಕ
- ಕಾನೂನಿನ ನಿಯಮ ಸೂಚ್ಯಂಕ
- ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಂಕ
- ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ
II. ಡಿಜಿಟಲ್ ಸೇರ್ಪಡೆ ಮೂಲಕ ಡಿಜಿಟಲ್ ಸಬಲೀಕರಣ
1. ಡಿಜಿಟಲ್ ಸ್ಕಿಲ್ಲಿಂಗ್
i. ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷಾರ್ಥ ಅಭಿಯಾನ (ಪಿಎಮ್‌ಜಿಡಿಐಎಸ್‌ಹೆಚ್‌ಎ): 31.03.2022 ರೊಳಗೆ 6 ಕೋಟಿ ಗ್ರಾಮೀಣ ಕುಟುಂಬಗಳನ್ನು (ಪ್ರತಿ ಮನೆಗೆ ಒಬ್ಬ ವ್ಯಕ್ತಿ) ಒಳಗೊಳ್ಳುವ ಮೂಲಕ ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಸಾಕ್ಷರತೆಯನ್ನು ಒದಗಿಸುವ ಗುರಿಯನ್ನು ಪಿಎಮ್ಜಿ ಡಿಐಎಸ್ಹೆಚ್ಎ (ಪಿಎಮ್ ದಿಶಾ) ಹೊಂದಿದೆ. ಇಲ್ಲಿಯವರೆಗೆ, ಒಟ್ಟು ಸುಮಾರು 5.36 ಕೋಟಿ ಅಭ್ಯರ್ಥಿಗಳು ದಾಖಲಾಗಿದ್ದಾರೆ ಮತ್ತು 4.54 ಕೋಟಿ ತರಬೇತಿ ಪಡೆದಿದ್ದಾರೆ, ಈ ಪೈಕಿ 3.37 ಕೋಟಿ ಅಭ್ಯರ್ಥಿಗಳು ಪಿಎಮ್‌ಜಿಡಿಐಎಸ್‌ಹೆಚ್‌ಎ ಯೋಜನೆಯಡಿ ಪ್ರಮಾಣ ಪತ್ರ ಪಡೆದಿದ್ದಾರೆ.
Ii ಡಿಜಿಟಲ್ ಇಂಡಿಯಾಕ್ಕಾಗಿ ಇಎಸ್ಡಿಎಮ್ ನಲ್ಲಿ ಕೌಶಲ್ಯ ಅಭಿವೃದ್ಧಿ: ಇಲ್ಲಿಯವರೆಗೆ, ಯೋಜನೆಯಡಿಯಲ್ಲಿ, ಒಟ್ಟು 4.14 ಲಕ್ಷ ಅಭ್ಯರ್ಥಿಗಳು ದಾಖಲಾಗಿದ್ದಾರೆ, ಅದರಲ್ಲಿ 4.06 ಲಕ್ಷ ಅಭ್ಯರ್ಥಿಗಳು ವಿವಿಧ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ತರಬೇತಿ ಪಡೆದಿದ್ದಾರೆ, ಅದರಲ್ಲಿ 2.77 ಲಕ್ಷ ಅಭ್ಯರ್ಥಿಗಳು ಪ್ರಮಾಣ ಪತ್ರ ಪಡೆದಿದ್ದಾರೆ.
iii ಶುಲ್ಕ ಮರುಪಾವತಿ ಕಾರ್ಯಕ್ರಮ: ಕಾರ್ಯಕ್ರಮದ ಅಡಿಯಲ್ಲಿ ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ಎನ್ಐಇಎಲ್ಐಟಿಯಲ್ಲಿ ವಿವಿಧ ಔಪಚಾರಿಕ, ಅನೌಪಚಾರಿಕ ಮತ್ತು ಐಟಿ ಸಾಕ್ಷರತಾ ಕೋರ್ಸ್ಗಳಲ್ಲಿ ಉಚಿತ ತರಬೇತಿಯನ್ನು ನೀಡಲಾಗುತ್ತಿದೆ. 2020-2021 ರ ಹಣಕಾಸು ವರ್ಷದಲ್ಲಿ, ಒಟ್ಟು 15,329 ಎಸ್ಸಿ/ಎಸ್ಟಿ ಅಭ್ಯರ್ಥಿಗಳು ತರಬೇತಿ ಪಡೆದಿದ್ದಾರೆ.
iv. ಫ್ಯೂಚರ್ ಸ್ಕಿಲ್ ಪ್ರೈಮ್: ಹೊಸ ಮತ್ತು ಉದಯೋನ್ಮುಖ ಐಟಿ ತಂತ್ರಜ್ಞಾನಗಳಲ್ಲಿ 'ಒನ್ ಸ್ಟಾಪ್ ರೀ-ಸ್ಕಿಲ್ಲಿಂಗ್/ಅಪ್-ಕೌಶಲ್ಯ ಪರಿಹಾರ'ವನ್ನು "ಅಗ್ರಿಗೇಟರ್ ಫ್ರೇಮ್ವರ್ಕ್ನ ಅಗ್ರಿಗೇಟರ್" ಒದಗಿಸುವುದು. ಇದು 4.12 ಲಕ್ಷ, ಐಟಿ ವೃತ್ತಿಪರರನ್ನು ಒಳಗೊಳ್ಳುವ ಗುರಿ ಹೊಂದಿದೆ. ಇಲ್ಲಿಯವರೆಗೆ, ಸುಮಾರು 3.68 ಲಕ್ಷ ಅಭ್ಯರ್ಥಿಗಳು ಫ್ಯೂಚರ್ ಸ್ಕಿಲ್ಸ್ ಪ್ರೈಮ್ ಪೋರ್ಟಲ್ನ ಬೀಟಾ-ಆವೃತ್ತಿಗೆ ಸೇರಿದ್ದಾರೆ; 76,437 ಅಭ್ಯರ್ಥಿಗಳು ಫೌಂಡೇಶನ್/ಡೀಪ್-ಸ್ಕಿಲ್ಲಿಂಗ್ ಕೋರ್ಸ್ಗಳಿಗೆ ದಾಖಲಾಗಿದ್ದಾರೆ, ಅವರಲ್ಲಿ ಸುಮಾರು 65,463 ಅಭ್ಯರ್ಥಿಗಳು ಕೋರ್ಸ್ಗಳನ್ನು ಪೂರ್ಣಗೊಳಿಸಿದ್ದಾರೆ; ಮತ್ತು ಸಂಯೋಜಿತ ಕಲಿಕೆ ಕಾರ್ಯಕ್ರಮದ ಅಡಿಯಲ್ಲಿ, ಸಂಪನ್ಮೂಲ ಕೇಂದ್ರಗಳು 397 ತರಬೇತುದಾರರು ಮತ್ತು 2,700 ಸರ್ಕಾರಿ ಅಧಿಕಾರಿಗಳಿಗೆ ತರಬೇತಿ ನೀಡಿವೆ.
v. ಚಿಪ್ಸ್ ಟು ಸಿಸ್ಟಮ್ ಡಿಸೈನ್ಗಾಗಿ ವಿಶೇಷ ಮಾನವಬಲ ಅಭಿವೃದ್ಧಿ ಕಾರ್ಯಕ್ರಮ (ಎಸ್ಎಮ್ಡಿಪಿ-ಸಿ2ಎಸ್ಡಿ)
ಎಸ್ಎಮ್ಡಿಪಿ-ಸಿ2ಎಸ್ಡಿ ಇಂಡಿಯಾ ಪ್ರೋಗ್ರಾಂ' ಅಡಿಯಲ್ಲಿ ಡಿಸೆಂಬರ್ 2014 ರಲ್ಲಿ 60 ಶೈಕ್ಷಣಿಕ/ಆರ್ & ಡಿ ಸಂಸ್ಥೆಗಳಲ್ಲಿ ಐಐಟಿಗಳು, ಎನ್ಐಟಿಗಳು, ಐಐಎಸ್ಸಿ, ಐಐಐಟಿಗಳು ಮತ್ತು ಇತರ ಇಂಜಿನಿಯರಿಂಗ್ ಕಾಲೇಜುಗಳು ಸೇರಿದಂತೆ 50,000 ಸಂಖ್ಯೆಯ ವಿಶೇಷ ಮಾನವಬಲಕ್ಕೆ ತರಬೇತಿ ನೀಡುವ ಗುರಿಯೊಂದಿಗೆ ದೇಶಾದ್ಯಂತ ಹರಡಿದೆ. ಇವರು ವಿಎಲ್ಎಸ್ಐ ವಿನ್ಯಾಸದ ಪ್ರದೇಶದಲ್ಲಿ 6 ವರ್ಷಗಳು ಮತ್ತು ಪದವಿ, ಸ್ನಾತಕೋತ್ತರ ಮತ್ತು ಸಂಶೋಧನಾ ಮಟ್ಟದಲ್ಲಿ ಸಿಸ್ಟಮ್-ಆನ್-ಚಿಪ್ ಸಿಸ್ಟಮ್ ಮಟ್ಟದ ವಿನ್ಯಾಸದ ಸಂಸ್ಕೃತಿಯನ್ನು ಒಳಗೂಡಿಸಿಕೊಳ್ಳುವರು.
ಎಸ್ಎಮ್ಡಿಪಿ-ಸಿ2ಎಸ್ಡಿ ಕಾರ್ಯಕ್ರಮದ ಅಡಿಯಲ್ಲಿ ಈ ಕೆಳಗಿನ ಮೈಲಿಗಲ್ಲುಗಳನ್ನು ಸಾಧಿಸಲಾಗಿದೆ:
- ಅತ್ಯಾಧುನಿಕ ವಿಎಲ್ಎಸ್ಐ ಪ್ರಯೋಗಾಲಯಗಳು ಸುಧಾರಿತ ಇಡಿಎ ಪರಿಕರಗಳನ್ನು 60 ಸಂಸ್ಥೆಗಳಲ್ಲಿ ಹೊಂದಿಸಲಾಗಿದೆ.
- ಬಿ.ಟೆಕ್, ಎಮ್ ಟೆಕ್ ಮತ್ತು ಪಿಹೆಚ್ಡಿ ಹಂತಗಳಲ್ಲಿ ತರಬೇತಿ ಪಡೆದ ವಿಶೇಷ ಮಾನವಬಲ ಸಂಖ್ಯೆಯು ಸುಮಾರು 52,000
- ದೇಶದ ಹೊರಗಿನ ಎಸ್ಸಿಎಲ್ ಮೊಹಾಲಿ ಫೌಂಡ್ರಿ ಮತ್ತು ಫೌಂಡರಿಗಳಲ್ಲಿ 60 ಶೈಕ್ಷಣಿಕ ಸಂಸ್ಥೆಗಳಿಂದ ಸುಮಾರು 150 ವಿನ್ಯಾಸಗಳನ್ನು ರಚಿಸಲಾಗಿದೆ. ಮೊದಲಿನಿಂದಲೂ ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ ಈ 150 ಚಿಪ್ಗಳನ್ನು 15 ವರ್ಕಿಂಗ್ ಪ್ರೊಟೊಟೈಪ್ / ಸಿಸ್ಟಮ್ಗಳಲ್ಲಿ ಬಳಸಲಾಗುವುದು, ಇದನ್ನು ಕಾರ್ಯತಂತ್ರ ಮತ್ತು ಸಾಮಾಜಿಕ ವಲಯಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ.
- ಸಿಡಿಎಸಿ-ಬೆಂಗಳೂರಿನಲ್ಲಿ ಚಿಪ್ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇಲ್ಲಿಯವರೆಗೆ, ಚಿಪ್ ಸೆಂಟರ್ ಮೂಲಕ ಎಮ್ಪಿಡಬ್ಲ್ಯೂ ರೀತಿಯಲ್ಲಿ ಎಸ್ಸಿಎಲ್ ನಲ್ಲಿ 71 ಎಎಸ್ಐಸಿ ಚಿಪ್ಗಳನ್ನು ತಯಾರಿಸಲಾಗಿದೆ ಮತ್ತು 2021 ರಲ್ಲಿ 29 ಚಿಪ್ಗಳನ್ನು ತಯಾರಿಸಲಾಗುವುದು.
- 15 ಸೂಚನಾ ವರ್ಧನೆ ಕಾರ್ಯಕ್ರಮ (ಐಇಪಿಎಸ್) ವಿಎಲ್ಎಸ್ಐ / ಸಿಸ್ಟಮ್ ವಿನ್ಯಾಸದ ಪ್ರದೇಶದಲ್ಲಿ 60 ಪಿಐ ಗಳ ಅಧ್ಯಾಪಕರಿಗೆ ತರಬೇತಿ ನೀಡಲು ಆಯೋಜಿಸಲಾಗಿದೆ
- 21 ಸ್ವಾಮ್ಯದ ಸನ್ನದು (ಪೇಟೆಂಟ್)ಗಳನ್ನು ಸಲ್ಲಿಸಲಾಗಿದೆ ಮತ್ತು ಸುಮಾರು 1500 ಸಂಶೋಧನಾ ಪ್ರಬಂಧಗಳನ್ನು ಕಾನ್ಫರೆನ್ಸ್ ಪ್ರೊಸೀಡಿಂಗ್ಸ್ / ಜರ್ನಲ್ಗಳಲ್ಲಿ ಪ್ರಕಟಿಸಲಾಗಿದೆ.
2. ಡಿಜಿಟಲ್ ಪಾವತಿಗಳು
i. ಡಿಜಿಟಲ್ ಪಾವತಿಗಳ ಪ್ರಚಾರ – ಭೀಮ್, ಯುಪಿಐ, ಭಾರತ್, ಕ್ಯೂ ಆರ್, ಆಧಾರ್ ಪಾವತಿಗಳು
- 2017-18 ಹಣಕಾಸು ವರ್ಷದಲ್ಲಿ ನಗದು ರಹಿತ ಆರ್ಥಿಕತೆಯ ಪ್ರಾಮುಖ್ಯತೆಯನ್ನು ಗುರುತಿಸಿ, ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯನ್ನು ರಚಿಸುವುದು ಬಜೆಟ್ ಪ್ರಕಟಣೆಗಳಲ್ಲಿ ಒತ್ತು ನೀಡುವ ಕ್ಷೇತ್ರಗಳಲ್ಲಿ ಒಂದಾಗಿ ಗುರುತಿಸಲಾಗಿದೆ. ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ), ಅನ್ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸರ್ವಿಸ್ ಡೇಟಾ (ಯುಎಸ್ಎಸ್ಡಿ), ಆಧಾರ್ ಪೇ, ತಕ್ಷಣದ ಪಾವತಿ ಸೇವೆ (IMPS) ಮತ್ತು ಡೆಬಿಟ್ ಕಾರ್ಡ್ಗಳ. ಮೂಲಕ 2017-18ರ ಹಣಕಾಸು ವರ್ಷದಲ್ಲಿ 2,500 ಕೋಟಿ ಡಿಜಿಟಲ್ ಪಾವತಿ ವಹಿವಾಟಿನ ಗುರಿಯೊಂದಿಗೆ ಈಗ ಡಿಜಿಧನ್ ಮಿಷನ್ ಎಂದು ಹೆಸರಿಸಲಾದ ಮೀಸಲಾದ ಮಿಷನ್ ಅನ್ನು ಸ್ಥಾಪಿಸುವುದನ್ನು ಘೋಷಿಸಲಾಗಿದೆ. ಎಲ್ಲಾ ಪಾಲುದಾರರ ಸಂಘಟಿತ ಪ್ರಯತ್ನಗಳ ಪರಿಣಾಮವಾಗಿ, ಡಿಜಿಟಲ್ ವಹಿವಾಟಿನ ಸಂಖ್ಯೆಯು 2016-17ರ ಹಣಕಾಸು ವರ್ಷದಲ್ಲಿ 1085 ಕೋಟಿಯಿಂದ 2020-21 ರಲ್ಲಿ 5,554 ಕೋಟಿಗೆ 50.42% ನ ಸಿಎಜಿಆರ್ ನಲ್ಲಿ ಹೆಚ್ಚಾಗಿದೆ. 2020-21 ಹಣಕಾಸು ವರ್ಷದಲ್ಲಿ, ಮಿಷನ್ಗೆ 5,500 ಕೋಟಿ ಡಿಜಿಟಲ್ ಪಾವತಿ ವಹಿವಾಟುಗಳ ಗುರಿಯನ್ನು ನೀಡಲಾಯಿತು, ಅದನ್ನು ಮೀರಿದೆ ಅಂದರೆ 5,554 ಕೋಟಿ ಆಗಿದೆ.
- ಸ್ಥಿತಿ:
ಹಣಕಾಸು ವರ್ಷ
|
ವಹಿವಾಟುಗಳ ಪ್ರಮಾಣ (ಕೋಟಿಯಲ್ಲಿ)
|
2016-17
|
1,085
|
2021-22
|
3,623*
|
* 21-22 ರ ದತ್ತಾಂಶವನ್ನು ಆಗಸ್ಟ್ 31, 2021 ರವರೆಗೆ ನೀಡಲಾಗಿದೆ.
III. ಡಿಜಿಟಲ್ ಉದ್ಯಮಶೀಲತೆ ಮತ್ತು ಉದ್ಯಮ
1. ಎಲೆಕ್ಟ್ರಾನಿಕ್ಸ್ ತಯಾರಿಕೆಗೆ ಉತ್ತೇಜನ
ಎಲೆಕ್ಟ್ರಾನಿಕ್ಸ್ ಉದ್ಯಮವು ವಿಶ್ವದ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿದೆ ಮತ್ತು ಆರ್ಥಿಕತೆಯ ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚು ಅನ್ವಯವಾಗುತ್ತಿವೆ. ಎಲೆಕ್ಟ್ರಾನಿಕ್ಸ್ ಹಾರ್ಡ್ವೇರ್ಗಾಗಿ ದೇಶೀಯ ಬೇಡಿಕೆಯು 2025 ರ ವೇಳೆಗೆ ಸುಮಾರು 400 ಶತಕೋಟಿ ಡಾಲರ್ಗೆ ವೇಗವಾಗಿ ಏರುವ ನಿರೀಕ್ಷೆಯಿದೆ. ಸರ್ಕಾರವು ಎಲೆಕ್ಟ್ರಾನಿಕ್ಸ್ ಹಾರ್ಡ್ವೇರ್ ಉತ್ಪಾದನೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ ಮತ್ತು ಇದು ಭಾರತ ಸರ್ಕಾರದ "ಮೇಕ್ ಇನ್ ಇಂಡಿಯಾ" ಮತ್ತು "ಡಿಜಿಟಲ್ ಇಂಡಿಯಾ" ಕಾರ್ಯಕ್ರಮದ ಪ್ರಮುಖ ಸ್ತಂಭಗಳಲ್ಲಿ ಒಂದಾಗಿದೆ.
ಇತ್ತೀಚಿನ ವರ್ಷಗಳಲ್ಲಿ, ದೇಶದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು ಉತ್ತೇಜಿಸಲು ಸರ್ಕಾರವು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ, ಮೊಬೈಲ್ ಮತ್ತು ಮೊಬೈಲ್ ಬಿಡಿಭಾಗಗಳ ಉತ್ಪಾದನಾ ಕಂಪನಿಗಳು 2014 ರಲ್ಲಿ 2 ಘಟಕಗಳಿಂದ 256 ಘಟಕಗಳಿಗೆ ಏರಿದೆ ಮತ್ತು ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಉತ್ಪಾದನಾ ರಾಷ್ಟ್ರವಾಗಿ ಹೊರಹೊಮ್ಮಿದೆ. ಮೊಬೈಲ್ ಫೋನ್ ಉತ್ಪಾದನೆಯ ಮೌಲ್ಯವು 2014-15 ರಲ್ಲಿ 18,900 ಕೋಟಿ ರೂಪಾಯಿಗಳಿಂದ 2018-19 ರಲ್ಲಿ 1,70,000 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಅಲ್ಲದೆ, ಕೈಗಾರಿಕಾ ಎಲೆಕ್ಟ್ರಾನಿಕ್ಸ್, ಎಲ್ಇಡಿ ಉತ್ಪಾದನೆ, ಗ್ರಾಹಕ ಎಲೆಕ್ಟ್ರಾನಿಕ್ಸ್ ಉತ್ಪಾದನೆಯು ಗಮನಾರ್ಹ ಜಿಗಿತವನ್ನು ಕಂಡಿದೆ.
ಎಲೆಕ್ಟ್ರಾನಿಕ್ಸ್ನ ರಾಷ್ಟ್ರೀಯ ನೀತಿ 2019 (NPE 2019) ಚಿಪ್ಸೆಟ್ಗಳನ್ನು ಒಳಗೊಂಡಂತೆ ಮೂಲ. ಮುಖ್ಯ ಘಟಕಗಳನ್ನು ಅಭಿವೃದ್ಧಿಪಡಿಸಲು ಮತ್ತು ಸಕ್ರಿಯಗೊಳಿಸುವ ವಾತಾವರಣವನ್ನು ಸೃಷ್ಟಿಸಲು ದೇಶದಲ್ಲಿ ಸಾಮರ್ಥ್ಯಗಳನ್ನು ಉತ್ತೇಜಿಸುವ ಮತ್ತು ಚಾಲನೆ ಮಾಡುವ ಮೂಲಕ, ಜಾಗತಿಕವಾಗಿ ಸ್ಪರ್ಧಿಸಲು ಎಲೆಕ್ಟ್ರಾನಿಕ್ಸ್ ಸಿಸ್ಟಮ್ ವಿನ್ಯಾಸ ಮತ್ತು ಉತ್ಪಾದನೆಗೆ (ESDM) ಜಾಗತಿಕ ಕೇಂದ್ರವನ್ನಾಗಿ ಭಾರತವನ್ನು ಇರಿಸುವ ಉದ್ದೇಶ ಹೊಂದಿದೆ.
ಜಾಗತಿಕ ಆರ್ಥಿಕತೆಯ ಆಸ್ತಿಯಾಗಿರುವ ದೃಢವಾದ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ದೃಷ್ಟಿಯಿಂದ ಸರ್ಕಾರವು ಮೌಲ್ಯ ಸರಪಳಿಯಾದ್ಯಂತ ಬಲವಾದ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಮತ್ತು ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ ಸಂಯೋಜಿಸಲು ಎದುರು ನೋಡುತ್ತಿದೆ. ಇದು ಈ ನಾಲ್ಕು ಯೋಜನೆಗಳ ಮೂಲತತ್ವವಾಗಿದೆ, ಅವುಗಳೆಂದರೆ, (i) ದೊಡ್ಡ ಪ್ರಮಾಣದ ಎಲೆಕ್ಟ್ರಾನಿಕ್ಸ್ ತಯಾರಿಕೆಗಾಗಿ ಉತ್ಪಾದನಾ ಆಧಾರಿತ ಪ್ರೋತ್ಸಾಹ ಯೋಜನೆ (PLI), (ii) ಎಲೆಕ್ಟ್ರಾನಿಕ್ ಘಟಕಗಳು ಮತ್ತು ಸೆಮಿಕಂಡಕ್ಟರ್ಗಳ ಉತ್ಪಾದನೆಯನ್ನು ಉತ್ತೇಜಿಸುವ ಯೋಜನೆ (SPECS) (iii) ವಿದ್ಯುನ್ಮಾನ ಪರಿವರ್ತಕ ಉತ್ಪಾದಕಗಳು (EMC 2.0) ಯೋಜನೆ ಮತ್ತು (iv) ಐಟಿ ಹಾರ್ಡ್ವೇರ್ಗಾಗಿ ಉತ್ಪಾದನಾ ಆಧಾರಿತ ಪ್ರೋತ್ಸಾಹ ಯೋಜನೆ (PLI).
ಯೋಜನೆಗಳ ಸ್ಥಿತಿ :
(i) ದೊಡ್ಡ ಪ್ರಮಾಣದ ಎಲೆಕ್ಟ್ರಾನಿಕ್ಸ್ ತಯಾರಿಕೆಗಾಗಿ ಉತ್ಪಾದನಾ ಆಧಾರಿತ ಪ್ರೋತ್ಸಾಹ ಯೋಜನೆ (PLI)
- ಮೊದಲ ಸುತ್ತಿನ ಪಿಎಲ್ಐ ಯೋಜನೆಗಾಗಿ 36,440 ಕೋಟಿ ರೂಪಾಯಿಗಳನ್ನು (ಆಡಳಿತಾತ್ಮಕ ವೆಚ್ಚಗಳನ್ನು ಹೊರತುಪಡಿಸಿ) ಬಜೆಟ್ ಅನ್ನು ಸಕ್ಷಮ ಪ್ರಾಧಿಕಾರವು ಅನುಮೋದಿಸಿದೆ.
- ಯೋಜನೆಯಡಿಯಲ್ಲಿ ಸಕ್ಷಮ ಪ್ರಾಧಿಕಾರದಿಂದ 16 ಅರ್ಜಿಗಳನ್ನು ಅನುಮೋದಿಸಲಾಗಿದೆ.
- ಎರಡನೇ ಸುತ್ತಿನ ಪಿಎಲ್ಐ ಯೋಜನೆಯನ್ನು 11.03.2021ರಂದು ಪ್ರಾರಂಭಿಸಲಾಗಿದೆ. ಅರ್ಜಿಗಳನ್ನು ಸ್ವೀಕರಿಸಲು ಇದ್ದ ಕೊನೆಯ ದಿನಾಂಕ 31.03.2021. ಸ್ವೀಕರಿಸಿದ ಅರ್ಜಿಗಳು ಪರಿಶೀಲನಾ ಪ್ರಕ್ರಿಯೆಯಲ್ಲಿವೆ.
(ii) ಎಲೆಕ್ಟ್ರಾನಿಕ್ ಘಟಕಗಳು ಮತ್ತು ಸೆಮಿಕಂಡಕ್ಟರ್ಗಳ ಉತ್ಪಾದನೆಯನ್ನು ಉತ್ತೇಜಿಸುವ ಯೋಜನೆ (SPECS)
- 24 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಮತ್ತು ಅಂಗೀಕರಿಸಲಾಗಿದೆ ಮತ್ತು 11 ಅರ್ಜಿಗಳು ಅಂತಿಮ ಹಂತದಲ್ಲಿವೆ, 2 ಅರ್ಜಿಗಳನ್ನು ಅನುಮೋದಿಸಲಾಗಿದೆ.
- SPECS ಯೋಜನೆಗಾಗಿ ಕಾರ್ಯಕಾರಿ ಸಮಿತಿಯ (EC) 3 ನೇ ಸಭೆಯು 05.03.2021 ರಂದು ನಡೆಯಿತು, ಇದರಲ್ಲಿ 6 ಅರ್ಜಿಗಳನ್ನು ಸಮಿತಿಯ ಪರಿಗಣನೆಗೆ ಸಲ್ಲಿಸಲಾಯಿತು ಮತ್ತು 5 ಅರ್ಜಿಗಳನ್ನು ಸಮಿತಿಯು ಅನುಮೋದಿಸಿತು.
- SPECS ಯೋಜನೆಗಾಗಿ ಕಾರ್ಯಕಾರಿ ಸಮಿತಿಯ (EC) 2 ನೇ ಸಭೆಯು 28.12.2020 ರಂದು ನಡೆಯಿತು, ಇದರಲ್ಲಿ EC ಯ ಪರಿಗಣನೆಗೆ 2 ಅರ್ಜಿಗಳನ್ನು ಸಲ್ಲಿಸಲಾಯಿತು ಮತ್ತು 1 ಅರ್ಜಿಯನ್ನು EC ಅನುಮೋದಿಸಿದೆ.
- SPECS ಯೋಜನೆಗಾಗಿ ಕಾರ್ಯಕಾರಿ ಸಮಿತಿಯ (EC) 1 ನೇ ಸಭೆಯು 03.11.2020 ರಂದು ನಡೆಯಿತು, ಇದರಲ್ಲಿ ಸಮಿತಿಯು ಪರಿಗಣನೆಗೆ 5 ಅರ್ಜಿಗಳನ್ನು ಸಲ್ಲಿಸಲಾಗಿದೆ ಮತ್ತು 1 ಅರ್ಜಿಯನ್ನು EC ಅನುಮೋದಿಸಿದೆ.
(iii). ವಿದ್ಯುನ್ಮಾನ ಪರಿವರ್ತಕ ಉತ್ಪಾದಕಗಳು (EMC 2.0)
- ಹರಿಯಾಣ ಮತ್ತು ಆಂಧ್ರಪ್ರದೇಶದಲ್ಲಿ EMC ಗಳನ್ನು ಸ್ಥಾಪಿಸಲು 2 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇವುಗಳಲ್ಲಿ, ಆಂದ್ರ ಪ್ರದೇಶದ EMC ಅರ್ಜಿಯನ್ನು 18.03.2021 ರಂದು ಅನುಮೋದಿಸಲಾಗಿದೆ ಸಚಿವಾಲಯದ ಆರ್ಥಿಕ ನೆರವು 350 ಕೋಟಿ ರೂ. ಸೇರಿದಂತೆ ಯೋಜನಾ ವೆಚ್ಚ 748.76 ಕೋಟಿ ರೂಪಾಯಿ ಇರುವುದು. ಹರಿಯಾಣದ ಇ ಎಮ್ ಸಿ ಅರ್ಜಿಯು ಪರಿಶೀಲನೆಯಲ್ಲಿದೆ.
- ಇದರ ಜೊತೆಗೆ, 6 ರಾಜ್ಯಗಳು ಅಂದರೆ; ತೆಲಂಗಾಣ, ಉತ್ತರಾಖಂಡ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಪಂಜಾಬ್ ಮತ್ತು ಬಿಹಾರ ಇಎಂಸಿ ಯೋಜನೆಗಳನ್ನು ಸ್ಥಾಪಿಸಲು ಆಸಕ್ತಿ ತೋರಿಸಿವೆ.
2. ಮಾಹಿತಿ ತಂತ್ರಜ್ಞಾನ (ಐಟಿ) / ಮಾಹಿತಿ ತಂತ್ರಜ್ಞಾನ ಸಕ್ರಿಯಗೊಳಿಸಿದ ಸೇವೆಗಳ (ಐಟಿಇಎಸ್) ಉತ್ತೇಜನ
i. ನೆಕ್ಸ್ಟ್ ಜನರೇಷನ್ ಇನ್ಕ್ಯುಬೇಶನ್ ಸ್ಕೀಮ್ (NGIS) ದೇಶೀಯ ಸಾಫ್ಟ್ವೇರ್ ಉತ್ಪನ್ನ ಪರಿಸರ ವ್ಯವಸ್ಥೆಯನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ ಮತ್ತು ಸಾಫ್ಟ್ವೇರ್ ಉತ್ಪನ್ನದ ರಾಷ್ಟ್ರೀಯ ನೀತಿಯ (NPSP) ಗಮನಾರ್ಹ ಉದ್ದೇಶಗಳನ್ನು ಪರಿಹರಿಸುತ್ತದೆ. ಎನ್ಜಿಐಎಸ್ ಅನ್ನು 12 ಶ್ರೇಣಿ-II ಸ್ಥಳಗಳಲ್ಲಿ ಅಂದರೆ ಅಗರ್ತಲಾ, ಭಿಲಾಯಿ, ಭೋಪಾಲ್, ಭುವನೇಶ್ವರ, ಡೆಹ್ರಾಡೂನ್, ಗುವಾಹಟಿ, ಜೈಪುರ, ಮೊಹಾಲಿ, ಪಾಟ್ನಾ, ವಿಜಯವಾಡ, ಲಕ್ನೋ ಮತ್ತು ಪ್ರಯಾಗ್ ರಾಜ್ಗಳನ್ನು ಗಮನದಲ್ಲಿರಿಸಿ ಪ್ರಾರಂಭಿಸಲಾಗಿದೆ. ಎನ್ಜಿಐಎಸ್ ಒಟ್ಟು ಬಜೆಟ್ ವೆಚ್ಚ ರೂ. 95.03 ಕೋಟಿಗಳು ಮತ್ತು 3 ವರ್ಷಗಳ ಅವಧಿಯಲ್ಲಿ ಈ ಸ್ಥಳಗಳಿಂದ 300 ಟೆಕ್ ಸ್ಟಾರ್ಟ್-ಅಪ್ಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.
ಎನ್ಜಿಐಎಸ್ ಅಡಿಯಲ್ಲಿ ಮೊದಲನೇ ಸ್ಟಾರ್ಟ್-ಅಪ್ ಚಾಲೆಂಜ್, CHUNAUTI (ಎನ್ಜಿಐಎಸ್ ಅಡಿಯಲ್ಲಿ ಸುಧಾರಿತ ತಡೆರಹಿತ ತಂತ್ರಜ್ಞಾನ ಹಸ್ತಕ್ಷೇಪಕ್ಕಾಗಿ ಚಾಲೆಂಜ್ ಹಂಟ್) ಅನ್ನು 10 ಆಗಸ್ಟ್ 2020 ರಂದು ಪ್ರಾರಂಭಿಸಲಾಗಿದೆ. CHUNAUTI 1.0 ಗೆ 1820 ಅರ್ಜಿಗಳ ಮೂಲಕ ಅಗಾಧ ಪ್ರತಿಕ್ರಿಯೆಯನ್ನು ಸ್ವೀಕರಿಸಲಾಗಿದೆ, ಅವುಗಳಲ್ಲಿ 42 ನವೋದ್ಯಮಗಳನ್ನು ಬಹು-ಹಂತದ ಕಠಿಣ ಆಯ್ಕೆ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲಾಗಿದೆ. ಮತ್ತು 38 ನವೋದ್ಯಮಗಳನ್ನು ಆನ್-ಬೋರ್ಡ್ ಮಾಡಲಾಗಿದೆ. CHUNAUTI 2.0 ಅನ್ನು 6ನೇ ಆಗಸ್ಟ್ 2021 ರಂದು ಮಹಿಳಾ ಉದ್ಯಮಿಗಳ ಮೇಲೆ ವಿಶೇಷ ಗಮನಹರಿಸುವ ಮೂಲಕ ಪ್ರಾರಂಭಿಸಲಾಯಿತು. ಮಹಿಳಾ ನೇತೃತ್ವದ/ಸಂಯೋಜಿತ ನವೋದ್ಯಮಗಳಿಂದ 316 ಅರ್ಜಿಗಳನ್ನು ಒಳಗೊಂಡಂತೆ ಒಟ್ಟು 537 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಪರಿಶೀಲನೆ ನಡೆಯುತ್ತಿದೆ.
ನಾರ್ಡಿಕ್ಸ್ ಮತ್ತು ಆಫ್ರಿಕಾ ಪ್ರದೇಶದಲ್ಲಿ ಮಾರುಕಟ್ಟೆ ಅಭಿವೃದ್ಧಿ ಉಪಕ್ರಮ: ಭಾರತೀಯ ಐಟಿ/ಐಟಿಇಎಸ್ ಉದ್ಯಮದ ಜಾಗತಿಕ ಹೆಜ್ಜೆಗುರುತನ್ನು ಹೆಚ್ಚಿಸಲು ಆಫ್ರಿಕಾ ಮತ್ತು ನಾರ್ಡಿಕ್ಸ್ ಪ್ರದೇಶ - ಹೆಚ್ಚಿನ ಸಾಮರ್ಥ್ಯದಲ್ಲಿ ಐಟಿ/ಐಟಿಇಎಸ್ ಮಾರುಕಟ್ಟೆ ಅಭಿವೃದ್ಧಿಗಾಗಿ ಸಮಗ್ರ ಮತ್ತು ನಿರಂತರ ವಿಧಾನವನ್ನು ಹೊಂದಲು ನಿರ್ದಿಷ್ಟವಾಗಿ NASSCOM ಮೂಲಕ ಸಣ್ಣ ಮತ್ತು ಮಧ್ಯಮ ಉದ್ಯಮಗಳು (SMEಗಳು) ಮತ್ತು ನವೋದ್ಯಮಗಳಿಗಾಗಿ ಸಚಿವಾಲಯವು ಯೋಜನೆಯನ್ನು ಪ್ರಾರಂಭಿಸಿದೆ.
ii ಬಿಪಿಒ ಉತ್ತೇಜನ ಯೋಜನೆಗಳು:
- ಸಚಿವಾಲಯವು ಭಾರತ ಬಿಪಿಒ ಉತ್ತೇಜನ ಯೋಜನೆ (ಐಬಿಪಿಎಸ್) ಮತ್ತು ಈಶಾನ್ಯ ಬಿಪಿಒ ಉತ್ತೇಜನ ಯೋಜನೆ (ಎನ್ಇಬಿಪಿಎಸ್)ಯನ್ನು ಪ್ರಾರಂಭಿಸಿದೆ. ಇದರ ಉದ್ದೇಶವು ಉದ್ಯೋಗ ಅವಕಾಶಗಳನ್ನು ಮತ್ತು 53,300 ಸ್ಥಾನಗಳ ಸಣ್ಣ ನಗರಗಳು ಮತ್ತು ಪಟ್ಟಣಗಳಲ್ಲಿ ಬಿಪಿಒ ಮತ್ತು ಐಟಿಇಎಸ್ ಉದ್ಯಮಗಳನ್ನು ಸ್ಥಾಪಿಸಲು ಬೆಂಬಲ, ವಿಶೇಷ ಪ್ರೋತ್ಸಾಹಗಳ ಜೊತೆಗೆ ಬಂಡವಾಳ ಮತ್ತು ಕಾರ್ಯಾಚರಣೆಯ ವೆಚ್ಚಕ್ಕೆ ಕಾರ್ಯಸಾಧ್ಯತೆಯ ಅಂತರ ನಿಧಿಯ ರೂಪದಲ್ಲಿ ಪ್ರತಿ ಸ್ಥಾನಕ್ಕೆ 1 ಲಕ್ಷ ರೂ.1 ಲಕ್ಷದವರೆಗೆ ಧನಸಹಾಯ ನೀಡುವುದು. ಈ ಅವಧಿಯು ಕ್ರಮವಾಗಿ 31.03.2019 ಮತ್ತು 31.03.2020 ವರೆಗೆ ಇತ್ತು ಆದರೆ ಹಣಕಾಸಿನ ಬೆಂಬಲದ ವಿತರಣೆಯು ಈ ಅವಧಿಯನ್ನು ಮೀರಬಹುದು. ಈ ಯೋಜನೆಗಳ ಅಡಿಯಲ್ಲಿ ಹಣಕಾಸಿನ ಬೆಂಬಲದ ವಿತರಣೆಯು ಮರುಪಾವತಿ ಆಧಾರದ ಮೇಲೆ ನೇರವಾಗಿ ಉದ್ದೇಶದೊಂದಿಗೆ ಅಂದರೆ ಘಟಕಗಳಿಂದ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದೆ.
- ಪ್ರಸ್ತುತ, ಸುಮಾರು 247 ಬಿಪಿಒ ಮತ್ತು ಐಟಿಇಎಸ್ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಅಥವಾ ಎನ್ಇಬಿಪಿಎಸ್ ಮತ್ತು ಐಬಿಪಿಎಸ್ ಅಡಿಯಲ್ಲಿ ಸುಮಾರು 45,500 ವ್ಯಕ್ತಿಗಳಿಗೆ ನೇರ ಉದ್ಯೋಗವನ್ನು ಒದಗಿಸುವ ಮೂಲಕ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿವೆ.
iii ರಫ್ತು ಉತ್ತೇಜನ ಯೋಜನೆಗಳು
ದೇಶದಿಂದ ಸಾಫ್ಟ್ವೇರ್ ರಫ್ತುಗಳನ್ನು ಉತ್ತೇಜಿಸಲು, ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್ಟಿಪಿಐ) ಅನ್ನು 1991 ರಲ್ಲಿ ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಸ್ಥಾಪಿಸಲಾಯಿತು. ಸಾಫ್ಟ್ವೇರ್ ರಫ್ತುದಾರರಿಗೆ ಸೇವೆಗಳನ್ನು ಒದಗಿಸುವಲ್ಲಿ ಎಸ್ಟಿಪಿಐ 'ಏಕ-ಗವಾಕ್ಷಿ' ಆಗಿ ಕಾರ್ಯನಿರ್ವಹಿಸುತ್ತದೆ. ಎಸ್ಟಿಪಿ ಯೋಜನೆಯು ಸಾಫ್ಟ್ವೇರ್ ಕಂಪನಿಗಳಿಗೆ ಅನುಕೂಲಕರ ಮತ್ತು ಅಗ್ಗದ ಸ್ಥಳಗಳಲ್ಲಿ ಕಾರ್ಯಾಚರಣೆಗಳನ್ನು ಸ್ಥಾಪಿಸಲು ಅನುಮತಿಸುತ್ತದೆ ಮತ್ತು ವ್ಯಾಪಾರದ ಅಗತ್ಯಗಳ ಆಧಾರದ ಮೇಲೆ ತಮ್ಮ ಹೂಡಿಕೆ ಮತ್ತು ಬೆಳವಣಿಗೆಯನ್ನು ಯೋಜಿಸುತ್ತದೆ.
ಐಜಿಎಸ್ಟಿ ವಿನಾಯಿತಿ ಹೊಂದಿರುವ ಬಂಡವಾಳ ಸರಕುಗಳ ಸುಂಕ ರಹಿತ ಆಮದು ಮುಂತಾದ ಎಸ್ಟಿಪಿ ಯೋಜನೆಯಡಿಯಲ್ಲಿ ಅನೇಕ ಪ್ರಯೋಜನಗಳಿವೆ, ಡಿಟಿಎ ನಿಂದ ಖರೀದಿಸಿದ ಬಂಡವಾಳ ಸರಕುಗಳು ಜಿಎಸ್ಟಿ ಯ ಮರುಪಾವತಿಗೆ ಅರ್ಹವಾಗಿವೆ, 100% ಎಫ್ಡಿಐ (ವಿದೇಶಿ ಬಂಡವಾಳ) ಅನ್ನು ಅನುಮತಿಸಲಾಗಿದೆ, ಡಿಟಿಎ ನಲ್ಲಿ ಮಾರಾಟವನ್ನು ಅನುಮತಿಸಲಾಗಿದೆ, ಬಂಡವಾಳದ ಮೇಲೆ 100% ಸವಕಳಿ 5 ವರ್ಷಗಳ ಅವಧಿಯಲ್ಲಿ ಸರಕುಗಳು ಇತ್ಯಾದಿ.
ಎಲೆಕ್ಟ್ರಾನಿಕ್ಸ್ ಹಾರ್ಡ್ವೇರ್ ಟೆಕ್ನಾಲಜಿ ಪಾರ್ಕ್ (ಇಹೆಚ್ಟಿಪಿ) ಯೋಜನೆಯು ಎಲೆಕ್ಟ್ರಾನಿಕ್ ಸರಕುಗಳ ಉತ್ಪಾದನೆಯನ್ನು ಕೈಗೊಳ್ಳಲು ರಫ್ತು ಆಧಾರಿತ ಯೋಜನೆಯಾಗಿದೆ.
ಪ್ರಸಕ್ತ ಸ್ಥಿತಿ :
- ಎಸ್ಟಿಪಿಐ ದೇಶಾದ್ಯಂತ ಒಟ್ಟು 61 ಎಸ್ಟಿಪಿಐ ಕಾರ್ಯಾಚರಣಾ ಕೇಂದ್ರಗಳು/ಉಪ-ಕೇಂದ್ರಗಳನ್ನು ಸ್ಥಾಪಿಸಿದೆ, ಇವುಗಳಲ್ಲಿ 53 ಕೇಂದ್ರಗಳು ಶ್ರೇಣಿ II ಮತ್ತು ಶ್ರೇಣಿ III ನಗರಗಳಲ್ಲಿದ್ದು, ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಗಾಗಿ ಸಣ್ಣ ನಗರಗಳಲ್ಲಿ ಐಟಿ/ಐಟಿಇಎಸ್/ ಇಎಸ್ಡಿಎಮ್ ಉದ್ಯಮವನ್ನು ವಿಸ್ತರಿಸುವ ಉದ್ದೇಶವನ್ನು ಹೊಂದಿದೆ.
- ಎಸ್ಟಿಪಿ/ಇಹೆಚ್ಟಿಪಿ ಯೋಜನೆಗಳ ಅಡಿಯಲ್ಲಿ ನೋಂದಾಯಿಸಲಾದ ಘಟಕಗಳು ವರದಿ ಮಾಡಿರುವಂತೆ 2021-21ರ ಆರ್ಥಿಕ ವರ್ಷಕ್ಕೆ ರಫ್ತುಗಳು (ತಾತ್ಕಾಲಿಕ) 5,03,260.69 ಕೋಟಿ ರೂಪಾಯಿಗಳಷ್ಟಾಗಿವೆ.
IV. ನಾವೀನ್ಯತೆ ಮತ್ತು ಸ್ಟಾರ್ಟ್ಅಪ್ಗಳು
- ಸಚಿವಾಯದ ಸ್ಟಾರ್ಟ್ಅಪ್ ಹಬ್ (ಎಮ್ಎಸ್ಹೆಚ್): ಎಮ್ಎಸ್ಹೆಚ್ ಭಾರತೀಯ ನವೋದ್ಯಮ ಕ್ಷೇತ್ರದಲ್ಲಿ ಅರ್ಥಪೂರ್ಣ ಸಹಯೋಗಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಟೆಕ್ ಸ್ಟಾರ್ಟ್ಅಪ್ ಸಮುದಾಯಕ್ಕೆ ಕ್ರಿಯಾತ್ಮಕ, ಏಕೀಕೃತ ಮತ್ತು ಸಹಯೋಗದ ವೇದಿಕೆಯಾಗಿದೆ. ಅಭಿವೃದ್ಧಿಶೀಲ, ಮಾರುಕಟ್ಟೆ ಪ್ರಭಾವ ಮತ್ತು ದೇಶೀಯ ಮೌಲ್ಯ ಸೇರ್ಪಡೆ ಮತ್ತು ವಿವಿಧ ಪಾಲುದಾರರೊಂದಿಗೆ ನವೀನ ಪಾಲುದಾರಿಕೆಗಳನ್ನು ಸ್ಥಾಪಿಸುವ ವಿಷಯದಲ್ಲಿ ದೇಶೀಯ ಟೆಕ್ ಸ್ಟಾರ್ಟ್ಅಪ್ಗಳಿಗೆ ಎಮ್ಎಸ್ಹೆಚ್ ನ ತ್ವರಿತ ಮೌಲ್ಯ ಸೇರ್ಪಡೆಗಳು ದೇಶದಲ್ಲಿ ಟೆಕ್ ಸ್ಟಾರ್ಟಪ್ ಪರಿಸರ ವ್ಯವಸ್ಥೆಯನ್ನು ಪ್ರಾರಂಭಿಸಲು ಎಮ್ಎಸ್ಹೆಚ್ ನ ಪ್ರಯತ್ನಗಳಲ್ಲಿ ಪ್ರಮುಖ ಅಂಶಗಳಾಗಿ. ಎಮ್ಎಸ್ಹೆಚ್ 2,650 ಕ್ಕೂ ಹೆಚ್ಚು ನವೋದ್ಯಮಗಳು, 418 ಇನ್ಕ್ಯುಬೇಟರ್ಗಳು, 347 ಮೆಂಟರ್ಗಳು ಮತ್ತು 22 ಉತ್ಕೃಷ್ಟತೆಯ ಕೇಂದ್ರಗಳು (ಸಿಒಇ) ಅಲ್ಪಾವಧಿಯಲ್ಲಿಯೇ ಒಟ್ಟಾಗಿ ಸ್ಥಾಪನೆಯಾಗಿವೆ.
- ಟಿಐಡಿಐ (ಉದ್ಯಮಿಗಳಿಗೆ ತಂತ್ರಜ್ಞಾನ ಆವಿಷ್ಕಾರ ಅಭಿವೃದ್ಧಿ) 2.0 - ಟಿಐಡಿಐ 2.0 ಅನ್ನು ಸ್ಟಾರ್ಟ್ಅಪ್ಗಳಿಗೆ ಮೊದಲಿನಿಂದಲೂ ಕಡೆಯವರೆಗೂ ಸ್ಥಿರವಾದ ನಿಧಿಯನ್ನು ಒದಗಿಸಲು ರೂಪಿಸಲಾಗಿದೆ. ರಾಷ್ಟ್ರೀಯ ಕಾಳಜಿಯ ಆಯ್ದ ವಿಷಯಾಧಾರಿತ ಕ್ಷೇತ್ರಗಳಲ್ಲಿ ವ್ಯಾಪಾರ ಮಾದರಿಗಳನ್ನು ವ್ಯಾಪಕವಾದ ಯೋಜನೆಯು 2000 ತಂತ್ರಜ್ಞಾನದ ಸ್ಟಾರ್ಟ್ಅಪ್ಗಳನ್ನು ಪೋಷಿಸುವ ಗುರಿಯನ್ನು ಹೊಂದಿದೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ಮತ್ತು ಆರ್ಥಿಕ ಸಂಪತ್ತನ್ನು ಸೃಷ್ಟಿಸಲು 51 ತಂತ್ರಜ್ಞಾನ ಇನ್ಕ್ಯುಬೇಶನ್ ಕೇಂದ್ರಗಳ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಡಿಯಲ್ಲಿ, 51 ಇನ್ಕ್ಯುಬೇಶನ್ ಕೇಂದ್ರಗಳಲ್ಲಿ 300+ ಸ್ಟಾರ್ಟ್ಅಪ್ಗಳನ್ನು ಪ್ರಾರಂಭಿಸಲಾಗಿದೆ.
- ಬ್ಲಾಕ್ಚೈನ್ ತಂತ್ರಜ್ಞಾನಕ್ಕಾಗಿ ಉತ್ಕೃಷ್ಟತೆಯ ಕೇಂದ್ರಗಳು (CoE): ಆಡಳಿತದ ವಿವಿಧ ಆಯಾಮಗಳಲ್ಲಿ ಬ್ಲಾಕ್ಚೈನ್ ತಂತ್ರಜ್ಞಾನದ ಬಳಕೆಗಾಗಿ ಪರಿಕಲ್ಪನೆಗಳ ಪುರಾವೆಗಳನ್ನು ನಿರ್ಮಿಸಲು ಸಿಒಇ ವಿವಿಧ ಸರ್ಕಾರಿ ಇಲಾಖೆಗಳಿಗೆ ಅನುಕೂಲ ಮಾಡಿಕೊಡುತ್ತವೆ, ಇದು ಅಂತಹ ಕೆಲವು ಅಪ್ಲಿಕೇಶನ್ಗಳ ದೊಡ್ಡ ಪ್ರಮಾಣದ ನಿಯೋಜನೆಗೆ ಕಾರಣವಾಗುತ್ತದೆ.
- ಮೇಟಿ-ಇಆರ್ನೆಟ್–ನಾಸ್ಕಾಮ್-ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಇಂಟರ್ನೆಟ್ ಆಫ್ ಥಿಂಗ್ಸ್ (IoT), ಬೆಂಗಳೂರು: ಈ ಉತ್ಕೃಷ್ಟತೆಯ ಕೇಂದ್ರದಲ್ಲಿ ತನ್ನ ಉದ್ಯಮ ಪಾಲುದಾರರ ಮೂಲಕ ಸಚಿವಾಲಯ (MeitY) ಮತ್ತು ನಾಸ್ಕಾಮ್ (NASSCOM) ನಡುವೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ 50:50 ಹಣವನ್ನು ಹೂಡಲಾಗಿದೆ. ಸಿಒಇ-ಐಒಟಿ ಬೆಂಗಳೂರಿನ ಅಡಿಯಲ್ಲಿ, ಹಲವಾರು ನವೋದ್ಯಮಗಳು ಬೆಳವಣಿಗೆ ಹೊಂದಿದ್ದು ಮತ್ತು ಸುಧಾರಿತ ಸಾಧನಗಳಿಗೆ ಅಡಚಣೆಯಿಲ್ಲದೆ ಪ್ರವೇಶವನ್ನು ಪಡೆಯುತ್ತಿವೆ. ಬೆಂಗಳೂರಿನ ಸಿಒಇ-ಐಒಟಿ ಸಂಸ್ಥೆಯ ಪ್ರಮುಖ ಮುಖ್ಯಾಂಶಗಳು ಈ ಕೆಳಗಿನಂತಿವೆ :
- 91 ನವೋದ್ಯಮಗಳು ಸಂಸ್ಥೆಯೊಳಗೆ ದಾಖಲಾಗಿವೆ, ಭಾರತದಲ್ಲಿ 1,463 ನವೋದ್ಯಮಗಳೊಂದಿಗೆ ಸಂಪರ್ಕ ಹೊಂದಿವೆ
- 117 ಐಒಟಿ ಸಂಶೋಧಕರ ಅಭಿವೃದ್ಧಿ
- 74 ಮಾದರಿಗಳನ್ನು ಪ್ರದರ್ಶಿಸಲಾಗಿದೆ
- ಐ ಪಿಗಳು -19, ಸ್ವೀಕರಿಸಲಾಗಿರುವುದು- 7
- 34 ಸಾಮಾಜಿಕ ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ
- ಉದ್ಯೋಗ ಸೃಷ್ಟಿ- 1,076
- ಸಹಿ ಮಾಡಿರುವ ಪಾಲುದಾರರು: ಕಾರ್ಯತಂತ್ರ -18, ಸಹ-ರಚಿಸುವಿಕೆ-2, ನಾವೀನ್ಯತೆ-8, ಮೂಲಸೌಕರ್ಯ-6, ತಂತ್ರಜ್ಞಾನ-3, ಪರಿಸರ ವ್ಯವಸ್ಥೆ-3, ಅಂತರರಾಷ್ಟ್ರೀಯ -2.
V. ದೆಹಲಿ-ಎನ್ಸಿಆರ್ನಲ್ಲಿ ಎಸ್ಟಿಪಿಐ ಯಿಂದ ಎಲೆಕ್ಟ್ರೋಪ್ರೆನಿಯರ್ ಪಾರ್ಕ್: ಇಎಸ್ಡಿಎಂ ಡೊಮೇನ್ನಲ್ಲಿ ನಾವೀನ್ಯತೆ, ಆರ್&ಡಿ ಮತ್ತು ಭಾರತೀಯ ಐಪಿಗಳನ್ನು ರಚಿಸಲು, ಎಲೆಕ್ಟ್ರೋಪ್ರೆನಿಯರ್ ಪಾರ್ಕ್ (ಇಪಿ) ಅನ್ನು ಇಂಡಿಯಾ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಅಸೋಸಿಯೇಷನ್ (ಐಇಎಸ್ಎ) ಸಹಯೋಗದೊಂದಿಗೆ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್ಟಿಪಿಐ) ಸ್ಥಾಪಿಸಿದೆ. ಮತ್ತು ದೆಹಲಿ ವಿಶ್ವವಿದ್ಯಾಲಯ (DU) ಸೌತ್ ಕ್ಯಾಂಪಸ್, ದೆಹಲಿ ವಿಶ್ವವಿದ್ಯಾಲಯ. ಇಪಿ ದೆಹಲಿಯನ್ನು 10,000 ಚದರ ಅಡಿಗಿಂತ ಹೆಚ್ಚು ಪ್ರದೇಶದಲ್ಲಿ ಸ್ಥಾಪಿಸಲಾಗಿದೆ. ಪ್ರಯೋಗಾಲಯಗಳು (ಆರ್ ಎಫ್ ಮತ್ತು ಪವರ್ ಲ್ಯಾಬ್ಸ್) ಸೇರಿದಂತೆ ಸೌಲಭ್ಯಗಳೊಂದಿಗೆ ಜಾಗವನ್ನು ನಿರ್ಮಿಸಲಾಗಿದೆ. ಆರಂಭದಲ್ಲಿ, ಅದರ ಅವಧಿಯು 5 ವರ್ಷಗಳಿದ್ದವು ಈಗ ಅದನ್ನು ಜೂನ್ 2022 ರವರೆಗೆ ವಿಸ್ತರಿಸಲಾಗಿದೆ. ಇಪಿ-ದೆಹಲಿ 51 ನವೋದ್ಯಮಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.
ಪ್ರಸ್ತುತ, ಇಪಿ-ದೆಹಲಿ 50 ನವೋದ್ಯಮಗಳನ್ನು ಬೆಂಬಲಿಸಿದೆ. ಇಪಿ-ದೆಹಲಿಯ ಕೆಲವು ಪ್ರಮುಖ ಫಲಿತಾಂಶಗಳೆಂದರೆ: 43 ಹೊಸ ಉತ್ಪನ್ನಗಳು ಮತ್ತು 33 ಕೆಲಸದ ಮೂಲಮಾದರಿಗಳನ್ನು ಅಭಿವೃದ್ಧಿಪಡಿಸಲಾಗಿದೆ, 51 ಐಪಿಗಳನ್ನು ಸಲ್ಲಿಸಲಾಗಿದೆ, 34 ನವೋದ್ಯಮಗಳು ಬಾಹ್ಯ ನಿಧಿ / ಅನುದಾನವನ್ನು ಪಡೆದಿವೆ, ನವೋದ್ಯಮಗಳಿಂದ ಉತ್ಪತ್ತಿಯಾದಒಟ್ಟು ಆದಾಯ ರೂ.65 ಕೋಟಿ, ಅಂದಾಜು ಮಾಡಿದ ಒಟ್ಟು ಮೌಲ್ಯ ರೂ. 310 ಕೋಟಿ ಮತ್ತು 558 ಜನರಿಗೆ ಉದ್ಯೋಗ ಸೃಷ್ಟಿಯಾಗಿದೆ.
vi. ಫ್ಯಾಬ್ ಲ್ಯಾಬ್, ಎಸ್ಟಿಪಿಐ ಭುವನೇಶ್ವರ,ಒಡಿಶಾ: ಫ್ಯಾಬ್ ಫೌಂಡೇಶನ್, ಅಮೆರಿಕ ಮತ್ತು ಒಡಿಶಾ ಸರ್ಕಾರದ ಬೆಂಬಲದೊಂದಿಗೆ ಎಸ್ಟಿಪಿಐ ಭುವನೇಶ್ವರದಲ್ಲಿ ಮೊದಲನೇ ಫ್ಯಾಬ್ ಲ್ಯಾಬ್ ಆರಂಭಿಸಿದೆ. ಲ್ಯಾಬ್ ಮುಖ್ಯವಾಗಿ ಲೇಸರ್ ಕಟ್ಟರ್, ಲಾರ್ಜ್ ಸ್ಕೇಲ್ ಸಿಎನ್ಸಿ ಮಿಲ್, ಮಿನಿ ಸಿಎನ್ಸಿ ಮಿಲ್, 3ಡಿ ಪ್ರಿಂಟರ್ಗಳು, ವಿನೈಲ್ಕಟರ್, ಸ್ಯಾಂಡ್ ಬ್ಲಾಸ್ಟರ್, ಎಲೆಕ್ಟ್ರಾನಿಕ್ ಕಾಂಪೊನೆಂಟ್ಸ್ ಮತ್ತು ಟೂಲ್ಸ್, ಮೌಲ್ಡಿಂಗ್ ಮತ್ತು ಕಾಸ್ಟಿಂಗ್ ಟೂಲ್ಸ್, ಮತ್ತು ಎಲೆಕ್ಟ್ರಾನಿಕ್ಸ್ ಟೆಸ್ಟ್ ಎಕ್ವಿಪ್ಮೆಂಟ್ಗಳಂತಹ ದಾಸ್ತಾನುಗಳನ್ನು ಒಳಗೊಂಡಿದೆ.
vii. ಡೊಮೈನ್ ಸ್ಪೆಸಿಫಿಕ್ ಸೆಂಟರ್ಸ್ ಆಫ್ ಎಕ್ಸಲೆನ್ಸ್ (ಸಿಒಇ): ತಾಂತ್ರಿಕ ಆವಿಷ್ಕಾರವನ್ನು ಉತ್ತೇಜಿಸಲು ಮತ್ತು ಮೂಲಸೌಕರ್ಯ ಉತ್ಕೃಷ್ಟತೆಯನ್ನು ಸೃಷ್ಟಿಸಲು ಫಿನ್ಟೆಕ್, ಮೆಡ್ಟೆಕ್, ಐಒಟಿ, ಆಟೋಮೋಟಿವ್ ಎಲೆಕ್ಟ್ರಾನಿಕ್ಸ್ನಂತಹ ವಿವಿಧ ಕ್ಷೇತ್ರಗಳಲ್ಲಿ 20 ಡೊಮೇನ್ ನಿರ್ದಿಷ್ಟ ಉತ್ಕೃಷ್ಟತೆಯ ಕೇಂದ್ರಗಳನ್ನು ರಚಿಸುವುದು ಇದರ ಉದ್ದೇಶ. ಇಲ್ಲಿಯವರೆಗೆ, 16 ಉತ್ಕೃಷ್ಟತೆಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
V. ಸಂಶೋಧನೆ ಮತ್ತು ಅಭಿವೃದ್ಧಿ
i. ರಾಷ್ಟ್ರೀಯ ಭಾಷಾ ಅನುವಾದ ಮಿಷನ್ (ಎನ್ ಟಿ ಎಲ್ ಎಮ್) ಅನ್ನು ಪ್ರಾರಂಭಿಸಲಾಗಿದೆ, ಇದು ಜಾಲತಾಣದಲ್ಲಿ ಆಡಳಿತ ಮತ್ತು ನೀತಿ ಸಂಬಂಧಿತ ಜ್ಞಾನದ ಸಂಪತ್ತನ್ನು ಪ್ರಮುಖ ಭಾರತೀಯ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡುತ್ತದೆ. ಭಾಷಾ ಅಡೆತಡೆಗಳನ್ನು ಮೀರುವ ಉದ್ದೇಶಕ್ಕಾಗಿ ಕೊಡುಗೆದಾರರು, ಪಾಲುದಾರ ಘಟಕಗಳು ಮತ್ತು ನಾಗರಿಕರ ವೈವಿಧ್ಯಮಯ ಪರಿಸರ ವ್ಯವಸ್ಥೆಯನ್ನು ಸಕ್ರಿಯಗೊಳಿಸಲು ನೈಸರ್ಗಿಕ ಭಾಷಾ ತಂತ್ರಜ್ಞಾನಗಳನ್ನು ಮಿಷನ್ ಬಳಸಿಕೊಳ್ಳುತ್ತದೆ, ಇದರಿಂದಾಗಿ "ಆತ್ಮನಿರ್ಭರ್ ಭಾರತ್" ನಲ್ಲಿ ಡಿಜಿಟಲ್ ಸೇರ್ಪಡೆ ಮತ್ತು ಡಿಜಿಟಲ್ ಸಬಲೀಕರಣವನ್ನು ಖಚಿತಪಡಿಸುತ್ತದೆ. ಮಿಷನ್ ಅಡಿಯಲ್ಲಿ ರಾಷ್ಟ್ರೀಯ ಸಾರ್ವಜನಿಕ ಡಿಜಿಟಲ್ ಪ್ಲಾಟ್ಫಾರ್ಮ್ ಅನ್ನು ಹೋಸ್ಟಿಂಗ್ ಭಾಷಾ ಡೇಟಾಸೆಟ್ಗಳು, ತಂತ್ರಜ್ಞಾನ ಪರಿಹಾರಗಳು ಮತ್ತು ಉದ್ಯಮ ಮತ್ತು ಸ್ಟಾರ್ಟ್ಅಪ್ಗಳನ್ನು ಒಳಗೊಂಡ ಸೇವೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಪ್ರಸ್ತುತ ಸಚಿವಾಲಯದ ಪೋರ್ಟಲ್ನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಸ್ತಾವನೆಗಳಿಗೆ ಕರೆ ಮಾಡಲಾಗಿದೆ: ಸಚಿವಾಲಯದ ಜಾಲತಾಣ: https://www.meity.gov.in/national-language-translation-mission
ii ಕ್ವಾಂಟಮ್ ಕಂಪ್ಯೂಟಿಂಗ್: ಕ್ವಾಂಟಮ್ ಕಂಪ್ಯೂಟಿಂಗ್ನಲ್ಲಿ ಸುಧಾರಿತ ಸಂಶೋಧನೆಯನ್ನು ಕೈಗೊಳ್ಳಲು ಉತ್ತಮ ಯಂತ್ರಾಂಶವನ್ನು ವಿನ್ಯಾಸಗೊಳಿಸಲು ಸಹಾಯ ಮಾಡಲು "ಕ್ವಾಂಟಮ್ ಕಂಪ್ಯೂಟರ್ ಸಿಮ್ಯುಲೇಟರ್" ಅನ್ನು ಅಭಿವೃದ್ಧಿಪಡಿಸಲಾಗಿದೆ, ಕ್ವಾಂಟಮ್ ಕಂಪ್ಯೂಟಿಂಗ್ ಅಲ್ಗಾರಿದಮ್ಗಳು/ಪ್ರೋಗ್ರಾಮ್ಗಳ ಪರೀಕ್ಷೆ ಮತ್ತು ತರಬೇತಿಯನ್ನು ಸುಲಭಗೊಳಿಸುತ್ತದೆ. ಪರಮ್ ಶವಕ್ ಮತ್ತು ಪರಮ್ ಸಿದ್ಧಿಯಂತಹ ಹೆಚ್ ಪಿ ಸಿ ಮೂಲಸೌಕರ್ಯದಲ್ಲಿ ಸಿಮ್ಯುಲೇಟರ್ ಅನ್ನು ಪೋರ್ಟ್ ಮಾಡಲಾಗಿದೆ.
iii ರಾಷ್ಟ್ರೀಯ ಸೂಪರ್ಕಂಪ್ಯೂಟಿಂಗ್ ಮಿಷನ್ (ಎನ್ಎಸ್ಎಮ್): 2021-22 ಹಣಕಾಸು ವರ್ಷದಲ್ಲಿ, ಎನ್ಎಸ್ಎಮ್ ನ ಹಂತ-II ಅಡಿಯಲ್ಲಿ, ಸಿ-ಡಾಕ್ ಈಗಾಗಲೇ ಐಐಟಿ ಹೈದರಾಬಾದ್ ಮತ್ತು ಸಿ-ಡಾಕ್ ಬೆಂಗಳೂರಿನಲ್ಲಿ ತಲಾ 650 ಟಿಎಫ್ (800 ಟಿಎಫ್ ಪೀಕ್) ಎರಡು ವ್ಯವಸ್ಥೆಗಳನ್ನು ನಿಯೋಜಿಸಿದೆ. ಐಐಎಸ್ಸಿ ಬೆಂಗಳೂರಿನಲ್ಲಿ 3ಪಿಎಫ್PF ಪೀಕ್, ಐಐಟಿ ರೂರ್ಕಿಯಲ್ಲಿ 1.66 ಪಿಎಫ್ ಪೀಕ್ ಮತ್ತು ಐಐಟಿ ಗುವಾಹಟಿ, ಎನ್ ಎ ಬಿಐ ಮೊಹಾಲಿ, ಐಐಟಿ ಗಾಂಧಿನಗರ, ಎನ್ಐಟಿ ತಿರುಚ್ಚಿ ಮತ್ತು ಐಐಟಿ ಮಂಡಿಯಲ್ಲಿ ತಲಾ 833 ಟಿಎಪ್ ಪೀಕ್ ಸೇರಿದಂತೆ ವ್ಯವಸ್ಥೆಗಳನ್ನು ಮಾರ್ಚ್ 2022 ರೊಳಗೆ ಸ್ಥಾಪಿಸಲಾಗುವುದು.
iv. ಪರಮ್ ಸಿದ್ಧಿ - 210 ಎಐ ಪೆಟಾಫ್ಲಾಪ್ಗಳ ಎಐ, ಸೂಪರ್ಕಂಪ್ಯೂಟರ್: ಇದನ್ನು ಸ-ಡಾಕ್ ಅಭಿವೃದ್ಧಿಪಡಿಸಿದೆ. ಈ ಅತ್ಯಾಧುನಿಕ-ದೊಡ್ಡ-ಪ್ರಮಾಣದ ಹೆಚ್ಪಿಸಿ-ಎಐ ಸ್ಕೇಲೆಬಲ್ ಮೂಲಸೌಕರ್ಯವು ವಿಜ್ಞಾನ ಮತ್ತು ಎಂಜಿನಿಯರಿಂಗ್ನಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಾಗಿ ಅನುಕೂಲಕರ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪರಮ್ ಸಿದ್ಧಿ - ಎಐ (“PARAM Siddhi – AI) ಸೂಪರ್ಕಂಪ್ಯೂಟರ್ ಭಾರತದಲ್ಲಿ ಅತಿ ದೊಡ್ಡ ಮತ್ತು ವೇಗದ ಸೂಪರ್ಕಂಪ್ಯೂಟರ್ ಆಗಿದೆ ಮತ್ತು ಅಮೆರಿಕದಲ್ಲಿ ಸೂಪರ್ಕಂಪ್ಯೂಟಿಂಗ್ ಸಮ್ಮೇಳನ 2020 ರಲ್ಲಿ ಘೋಷಿಸಲಾದ 'ಟಾಪ್ 500 ಸೂಪರ್ಕಂಪ್ಯೂಟರ್ ಪಟ್ಟಿ - ನವೆಂಬರ್ 2020' ನಲ್ಲಿ 62 ನೇ ಸ್ಥಾನದಲ್ಲಿದೆ.
v. ಸರ್ವರ್ ಪ್ಲಾಟ್ಫಾರ್ಮ್ ರುದ್ರ: C-DAC ತನ್ನ ಸ್ಥಳೀಯ ಸರ್ವರ್ ಪ್ಲಾಟ್ಫಾರ್ಮ್ ರುದ್ರ ವನ್ನು 2 ನೇ ತಲೆಮಾರಿನ ಇಂಟೆಲ್ ಕ್ಸಿಯಾನ್ ಸ್ಕೇಲೆಬಲ್ ಪ್ರೊಸೆಸರ್ ಕ್ಯಾಸ್ಕೇಡ್ ಲೇಕ್ ಅನ್ನು ಆಧರಿಸಿ ಅಭಿವೃದ್ಧಿಪಡಿಸಿದೆ. ಸರ್ಕಾರಗಳು ಮತ್ತು ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಹೆಚ್ ಪಿ ಸಿ ಅವಶ್ಯಕತೆಗಳನ್ನು ಪೂರೈಸಲು ಸಿ-ಡಾಕ್ ನಿಂದ ಸಂಪೂರ್ಣ ಸಾಫ್ಟ್ವೇರ್ ಸ್ಟಾಕ್ ಜೊತೆಗೆ ರುದ್ರ ಆಧಾರಿತ ಸರ್ವರ್ ಸಿಸ್ಟಮ್ ಅನ್ನು ಭಾರತದಲ್ಲಿ ಮೊದಲ ಬಾರಿಗೆ ತಯಾರಿಸಲಾಗುತ್ತದೆ. ರುದ್ರ ಸರ್ವರ್ ಆಧಾರಿತ 1ಪಿಎಫ್ ವ್ಯವಸ್ಥೆಯನ್ನು ಶೀಘ್ರದಲ್ಲೇ ನಿರ್ಮಿಸಿ ನಿಯೋಜಿಸಲಾಗುವುದು. ಎನ್ಎಸ್ಎಮ್ ಅಡಿಯಲ್ಲಿ ಹಂತ-3 ವ್ಯವಸ್ಥೆಗಳನ್ನು ರುದ್ರ ಸರ್ವರ್ನೊಂದಿಗೆ ನಿಯೋಜಿಸಲಾಗುವುದು. ಫ್ಯೂಚರ್ ಸರ್ವರ್ ಪ್ಲಾಟ್ಫಾರ್ಮ್ ಅನ್ನು ಇಂಟೆಲ್ನ ನೆಕ್ಸ್ಟ್ ಜನ್ ಪ್ರೊಸೆಸರ್ ಬಳಸಿ ಅಭಿವೃದ್ಧಿಪಡಿಸಲಾಗುತ್ತಿದೆ.
vi. ಮೈಕ್ರೊಪ್ರೊಸೆಸರ್ ಅಭಿವೃದ್ಧಿ ಕಾರ್ಯಕ್ರಮ (ಎಮ್ಡಿಪಿ): ಈ ಕಾರ್ಯಕ್ರಮದ ಅಡಿಯಲ್ಲಿ 32-ಬಿಟ್/64-ಬಿಟ್ ಮೈಕ್ರೊಪ್ರೊಸೆಸರ್ಗಳ ಸಾದನ ಮತ್ತು ಸಂಬಂಧಿತ ಸಾಫ್ಟ್ವೇರ್ ಟೂಲ್-ಚೈನ್ ಮತ್ತು ಐಪಿ ಕೋರ್ಗಳನ್ನು ಮುಕ್ತ ಮೂಲ (ಓಪನ್ ಸೋರ್ಸ್) ಐಎಸ್ಎ (ಇನ್ಸ್ಟ್ರಕ್ಷನ್ ಸೆಟ್ ಆರ್ಕಿಟೆಕ್ಚರ್) ಬಳಸಿ ಸ್ಥಳೀಯವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಎಸ್ಸಿಎಲ್ ಫೌಂಡ್ರಿ ಮತ್ತು ವಿದೇಶಿ ಫೌಂಡರಿಗಳಲ್ಲಿ ಕಾರ್ಯತಂತ್ರ ಮತ್ತು ವಾಣಿಜ್ಯ ಅವಶ್ಯಕತೆಗಳಿಗಾಗಿ ತಯಾರಿಸಲಾಗಿದೆ.
- 32-ಬಿಟ್/ 64-ಬಿಟ್ ಶಕ್ತಿ ಪ್ರೊಸೆಸರ್ ಅನ್ನು ಐಐಟಿ ಮದ್ರಾಸ್ ವಿನ್ಯಾಸಗೊಳಿಸಿದೆ. ಇದನ್ನು 180ಎನ್ಎಮ್, ಎಸ್ಸಿಎಲ್ ಮೊಹಾಲಿ ಮತ್ತು 220ಎನ್ಎಮ್, ಇಂಟೆಲ್ ಫೌಂಡ್ರಿ ಬಳಸಿ ತಯಾರಿಸಲಾಗಿದೆ.
- ವಿಇಜಿಎ ಪ್ರೊಸೆಸರ್ಗಳ 64-ಬಿಟ್ ಸಿಂಗಲ್/ಡ್ಯುಯಲ್/ಕ್ವಾಡ್-ಕೋರ್ ರೂಪಾಂತರಗಳನ್ನು ಸಿ-ಡಾಕ್ ವಿನ್ಯಾಸಗೊಳಿಸಿದೆ ಮತ್ತು 130 ಎನ್ಎಮ್ ಸಿಲ್ಟೆರಾ ಫೌಂಡ್ರಿ ಮತ್ತು 180 ಎನ್ಎಮ್, ಎಸ್ಸಿಎಲ್ ಫೌಂಡ್ರಿಯಲ್ಲಿ ಫ್ಯಾಬ್ರಿಕೇಶನ್ಗಾಗಿ ಕಳುಹಿಸಲಾಗಿದೆ.
- 64-ಬಿಟ್ ಕ್ವಾಡ್-ಕೋರ್ ಎಜೆಐಟಿ (ಅಜಿತ್) ಪ್ರೊಸೆಸರ್ ಅನ್ನು ಐಐಟಿ ಬಾಂಬೆ ವಿನ್ಯಾಸಗೊಳಿಸುತ್ತಿದೆ.
VI. ಸೈಬರ್ ಭದ್ರತೆ
i. ಸೈಬರ್ ಸುರಕ್ಷಿತ್ ಭಾರತ್ (ಸಿಎಸ್ಬಿ): ಸೈಬರ್ ಭದ್ರತೆಯ ಸವಾಲುಗಳನ್ನು ಎದುರಿಸಲು ಕೇಂದ್ರ/ರಾಜ್ಯ ಸರ್ಕಾರಗಳು, ಬ್ಯಾಂಕುಗಳು ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಮತ್ತು ಮುಖ್ಯ ಮಾಹಿತಿ ಭದ್ರತಾ ಅಧಿಕಾರಿಗಳು (ಸಿಐಎಸ್ಒ) ಮತ್ತು ವಿಶಾಲವಾದ ಐಟಿ ಸಮುದಾಯಕ್ಕೆ ಕಲಿಸುವ ಮತ್ತು ಸಕ್ರಿಯಗೊಳಿಸುವ ಉದ್ದೇಶದಿಂದ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ವಿಧಾನದಲ್ಲಿ ಉದ್ಯಮ ಒಕ್ಕೂಟದ ಸಹಭಾಗಿತ್ವದಲ್ಲಿ ಇದನ್ನು ಪ್ರಾರಂಭಿಸಲಾಗಿದೆ. ಸುಮಾರು 1200 ಅಧಿಕಾರಿಗಳಿಗೆ ತರಬೇತಿ ನೀಡಲು ಮತ್ತು ಸಕ್ರಿಯಗೊಳಿಸಲು 6 ನಗರಗಳಲ್ಲಿ ತರಬೇತಿಯನ್ನು ನಡೆಸಲಾಯಿತು. ಅಕ್ಟೋಬರ್ 2021 ರಂತೆ, ಒಟ್ಟು 23 ಬ್ಯಾಚ್ಗಳನ್ನು (16 ದೈಹಿಕ ಮತ್ತು ಆನ್ಲೈನ್ ಮೋಡ್ನಲ್ಲಿ 7) ಡೀಪ್ ಡೈವ್ ತರಬೇತಿಯನ್ನು ಆಯೋಜಿಸಲಾಗಿದೆ ಮತ್ತು ಸರ್ಕಾರ, ಸರ್ಕಾರಿ ಉದ್ದಿಮೆಗಳು, ಬ್ಯಾಂಕುಗಳು ಮತ್ತು ಸರ್ಕಾರಿ ಸಂಸ್ಥೆಗಳಿಂದ 931 ಸಿಐಎಸ್ಒ /ಐಟಿ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ.
ii ಸ್ಟಾರ್ಟ್-ಅಪ್ಗಳಿಗಾಗಿ ಸೈಬರ್ ಸೆಕ್ಯುರಿಟಿ ಗ್ರ್ಯಾಂಡ್ ಚಾಲೆಂಜ್: ಸೈಬರ್ ಕ್ಷೇತ್ರದ ಪರಿಸರ ವ್ಯವಸ್ಥೆಯಲ್ಲಿ ಎದುರಿಸುತ್ತಿರುವ ಪ್ರಸ್ತುತ ಸವಾಲುಗಳಿಗೆ ಹೆಚ್ಚು ಸೂಕ್ತವಾದ 6 ಗುರುತಿಸಲಾದ ಅನನ್ಯ ಸೈಬರ್ ಭದ್ರತಾ ಸಮಸ್ಯೆಗಳ ಹೇಳಿಕೆ(ಗಳು) ಮೇಲೆ ಸೈಬರ್ ಭದ್ರತಾ ಉತ್ಪನ್ನವನ್ನು ಅಭಿವೃದ್ಧಿಪಡಿಸಲು ಇದನ್ನು ಜನವರಿ 2020 ರಲ್ಲಿ ನವೋದ್ಯಮ (ಸ್ಟಾರ್ಟ್-ಅಪ್) ಗಳಿಗಾಗಿ ಪ್ರಾರಂಭಿಸಲಾಯಿತು. ಚಾಲೆಂಜ್ ಮೂರು ಹಂತಗಳನ್ನು ಹೊಂದಿದೆ ಅವುಗಳೆಂದರೆ ಪರಿಕಲ್ಪನೆ (ಐಡಿಯಾ) ಹಂತ, ಕನಿಷ್ಠ ಕಾರ್ಯಸಾಧ್ಯ ಉತ್ಪನ್ನ (ಮಿನಿಮಮ್ ವೈಯಬಲ್ ಪ್ರಾಡಕ್ಟ್ – ಎಮ್ವಿಪಿ) ಹಂತ ಮತ್ತು ಅಂತಿಮ ಹಂತ. ಪರಿಕಲ್ಪನೆಯ ಹಂತದಲ್ಲಿ, ಪರಿಕಲ್ಪನೆಯ ಆಧಾರದ ಮೇಲೆ, 6 ಸಮಸ್ಯೆಗಳ ಆಧಾರದ ಮೇಲೆ ಉತ್ಪನ್ನವನ್ನು ನಿರ್ಮಿಸಲು ಪ್ರಸ್ತಾಪಿಸಿದ ವಿಧಾನ, ತೀರ್ಪುಗಾರರು 12 ತಂಡಗಳನ್ನು ಅಯ್ಕೆ ಮಾಡಿದ್ದು, ಅವರಿಗೆ ರೂ. 5 ಲಕ್ಷ ಮತ್ತು ಮಾರ್ಗದರ್ಶನ ಬೆಂಬಲ ನೀಡಲಾಯಿತು. ಎಮ್ವಿಪಿ ಹಂತದಲ್ಲಿ, ಅವರ ವಿಧಾನದ ಆಧಾರದ ಮೇಲೆ, ಯುಎಸ್ಪಿ ಗಳು ಮತ್ತು ಮೌಲ್ಯದ ಪ್ರತಿಪಾದನೆ, ನಿಯೋಜನೆ ಮತ್ತು ಉತ್ಪನ್ನ ಮಾರುಕಟ್ಟೆ ಅರ್ಹತೆ, ತೀರ್ಪುಗಾರರು ಆಯ್ಕೆ ಮಾಡಿದ 6 ತಂಡಗಳಿಗೆ ರೂ. ತಲಾ 10 ಲಕ್ಷ ರೂ. ನೀಡಲಾಯಿತು. ಅಂತಿಮ ಫಲಿತಾಂಶವನ್ನು 18ನೇ ನವೆಂಬರ್ 2021 ರಂದು ಪ್ರಕಟಿಸಲಾಯಿತು ಮತ್ತು ವಿಜೇತರು ರೂ 1 ಕೋಟಿ ನಗದು ಬಹುಮಾನವನ್ನು ಪಡೆದರು. 1ನೇ ರನ್ನರ್ಸ್ ಅಪ್ ಮೊದಲ ನಗದು ಬಹುಮಾನ ರೂ. 60 ಲಕ್ಷ ಮತ್ತು 2ನೇ ರನ್ನರ್ ಅಪ್ ರೂ. 40 ಲಕ್ಷ.ನಗದು ಬಹುಮಾನ ಪಡೆದರು
iii ಕೇಂದ್ರ ಸರ್ಕಾರದ ಸಚಿವಾಲಯಗಳು/ಇಲಾಖೆಗಳ ಅಧಿಕಾರಿಗಳ ಆನ್ಲೈನ್ ಸೈಬರ್ ಭದ್ರತಾ ತರಬೇತಿ:
- ಭಾರತ ಸರ್ಕಾರದ ಎಲ್ಲಾ ಅಧಿಕಾರಿಗಳು/ಸಿಬ್ಬಂದಿಗಳಿಗೆ ಸುಮಾರು 6-8 ಗಂಟೆಗಳ ಅವಧಿಯ ಸೈಬರ್ ಭದ್ರತೆಯಲ್ಲಿ (ಜಾಗೃತಿ ತರಬೇತಿ) ಸಾಮಾನ್ಯ ಆನ್ಲೈನ್ ತರಬೇತಿ. 31 ಅಕ್ಟೋಬರ್, 2021 ರಂತೆ 76 ಸಚಿವಾಲಯಗಳು/ಇಲಾಖೆಗಳಿಂದ 9,145 ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡ 25 ಬ್ಯಾಚ್ಗಳಿಗೆ ನೀಡಲಾಗಿದೆ.
- ಸೈಬರ್ ಭದ್ರತೆಯಲ್ಲಿ ಆನ್ಲೈನ್ ಫೌಂಡೇಶನ್ ತರಬೇತಿ (60 ಗಂಟೆಗಳ ಥಿಯರಿ + 40 ಗಂಟೆಗಳ ಪ್ರಯೋಗಾಲಯಗಳು) ತಾಂತ್ರಿಕವಾಗಿ ಅರ್ಹತೆ ಅಥವಾ ಸೈಬರ್ ಸೆಕ್ಯುರಿಟಿ / ಐಟಿ. 31 ಅಕ್ಟೋಬರ್, 2021ರಂತೆ ಅಗತ್ಯವಿರುವ ಅರ್ಹತೆಯೊಂದಿಗೆ 76 ಸಚಿವಾಲಯಗಳು / ಇಲಾಖೆಗಳಿಂದ 605 ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡಿರುವ 9 ಬ್ಯಾಚ್ಗಳ ತರಬೇತಿಯನ್ನು ಪೂರ್ಣಗೊಳಿಸಲಾಗಿದೆ
iv. ಸೈಬರ್ ಭದ್ರತೆಯಲ್ಲಿ ರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರ(ಎನ್ಸಿಒಇ ):
ಸೈಬರ್ ಸೆಕ್ಯುರಿಟಿ ಅರ್ & ಡಿ ಕಾರ್ಯಕ್ರಮದ ಅಡಿಯಲ್ಲಿ, ಭಾರತೀಯ ಡೇಟಾ ಸೆಕ್ಯುರಿಟಿ ಕೌನ್ಸಿಲ್ನ ಸಹಯೋಗದೊಂದಿಗೆ ಸೈಬರ್ ಭದ್ರತೆಯಲ್ಲಿ ರಾಷ್ಟ್ರೀಯ ಉತ್ಕೃಷ್ಟತೆಯ ಕೇಂದ್ರ (ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಸೈಬರ್ ಸೆಕ್ಯುರಿಟಿ (ಎನ್ಸಿಒಇ) ಅನ್ನು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಯೋಜನೆಯಡಿಯಲ್ಲಿ ಸ್ಥಾಪಿಸಲಾಗಿದೆ. ಮೇಲಿನ ಉಪಕ್ರಮವು ದೇಶದಾದ್ಯಂತ ಸುಸ್ಥಿರ ಸೈಬರ್ ಭದ್ರತಾ ತಂತ್ರಜ್ಞಾನ ಮತ್ತು ಉದ್ಯಮ ಅಭಿವೃದ್ಧಿಯ ಆವೇಗವನ್ನು ನಿರ್ಮಿಸುವ ಪ್ರಯತ್ನವಾಗಿದೆ. ಕೇಂದ್ರದ ಪ್ರಮುಖ ಉದ್ದೇಶಗಳು: (i) ಸೈಬರ್ ಸೆಕ್ಯುರಿಟಿ ತಂತ್ರಜ್ಞಾನ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು (ii) ಆರ್ & ಡಿ ಅನ್ನು ಭದ್ರತಾ ಉತ್ಪನ್ನಗಳಿಗೆ ಪರಿವರ್ತಿಸುವುದು (iii) ಭದ್ರತಾ ಉತ್ಪನ್ನಗಳ ತಂತ್ರಜ್ಞಾನದ ರಾಶಿಯನ್ನು ಸಮಕಾಲೀನ ಮತ್ತು ಅತ್ಯಾಧುನಿಕಗೊಳಿಸುವಿಕೆ ಮತ್ತು (iv) ಹಣಕಾಸು ಕ್ಷೇತ್ರಗಳು ಸೇರಿದಂತೆ ಸೈಬರ್ ಭದ್ರತೆಯ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿದ ಉತ್ಪನ್ನಗಳ ಮಾರುಕಟ್ಟೆ ಅಳವಡಿಕೆ. ಇದುವರೆಗೆ ಎನ್ಸಿಒಇ ಅಡಿಯಲ್ಲಿ 27 ಸ್ಟಾರ್ಟ್ಅಪ್ಗಳು ಸೈಬರ್ ಸೆಕ್ಯುರಿಟಿಯ ವಿವಿಧ ಪ್ರಮುಖ ಕ್ಷೇತ್ರಗಳಲ್ಲಿ ಉತ್ಪನ್ನಗಳು/ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಸಿದ್ಧಪಡಿಸಲಾಗಿದೆ. 20 ಹೆಚ್ಚಿನ ಸ್ಟಾರ್ಟ್ಅಪ್ಗಳು ಮಾರ್ಗದರ್ಶನ ಪ್ರಕ್ರಿಯೆಯಲ್ಲಿವೆ.
v. ಈಶಾನ್ಯ ಪ್ರದೇಶದಲ್ಲಿ ಸೈಬರ್ ಭದ್ರತೆಗಾಗಿ ಸಾಮರ್ಥ್ಯ ನಿರ್ಮಾಣ:
ಈಶಾನ್ಯ ರಾಜ್ಯಗಳಲ್ಲಿ ಸೈಬರ್ ಫೋರೆನ್ಸಿಕ್ ತರಬೇತಿ ಮತ್ತು ತನಿಖಾ ಪ್ರಯೋಗಾಲಯಗಳ ಅಭಿವೃದ್ಧಿ ಮತ್ತು ಕ್ಲೌಡ್ ಆಧಾರಿತ ಕೇಂದ್ರೀಕೃತ ಸೈಬರ್ ಫೋರೆನ್ಸಿಕ್ಸ್ ಲ್ಯಾಬ್ ಮೂಲಸೌಕರ್ಯ (ಎನ್ಐಇಎಲ್ಐಟಿ) - ಈ ಯೋಜನೆಯಡಿಯಲ್ಲಿ, ಈಶಾನ್ಯ ರಾಜ್ಯಗಳ 8 ಎನ್ಐಇಎಲ್ಐಟಿ ಕೇಂದ್ರದಲ್ಲಿ ಸೈಬರ್ ಫೋರೆನ್ಸಿಕ್ಸ್ ತರಬೇತಿ ಮತ್ತು ತನಿಖಾ ಪ್ರಯೋಗಾಲಯಗಳು. ಈ ಕಾರ್ಯಕ್ರಮದಡಿ ಇದುವರೆಗೆ 1290 ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಹೆಚ್ಚುವರಿಯಾಗಿ, ಎನ್ಐಇಎಲ್ಐಟಿ ಕೊಹಿಮಾದಲ್ಲಿ ಆಯೋಜಿಸಲಾದ ಕ್ಲೌಡ್ ಆಧಾರಿತ ಮೂಲಸೌಕರ್ಯವು ಎಲ್ಲಾ ಎಂಟು ಈಶಾನ್ಯ ರಾಜ್ಯಗಳ ಕೇಂದ್ರಗಳಿಗೆ ಸೈಬರ್ ಫೋರೆನ್ಸಿಕ್ ಉಪಕರಣಗಳು, ವಿಷಯ ವಿತರಣೆ ಮತ್ತು ಸೈಬರ್ ಫೋರೆನ್ಸಿಕ್ಸ್ನಲ್ಲಿ ಕ್ಲೌಡ್ ಆಧಾರಿತ ವರ್ಚುವಲ್ ತರಬೇತಿಯನ್ನು ಹಂಚಿಕೊಳ್ಳಲು ಬಳಸುತ್ತದೆ.
vi. ಮಾಹಿತಿ ತಂತ್ರಜ್ಞಾನ ಕಾಯಿದೆ 2000 ರ ಸೆಕ್ಷನ್ 79A ಅಡಿಯಲ್ಲಿ ಫೋರೆನ್ಸಿಕ್ ಲ್ಯಾಬ್ಗಳನ್ನು 'ಎಲೆಕ್ಟ್ರಾನಿಕ್ ಎವಿಡೆನ್ಸ್ ಪರೀಕ್ಷಕ' ಎಂದು ಅಧಿಸೂಚನೆ
ಮಾಹಿತಿ ತಂತ್ರಜ್ಞಾನ ಕಾಯಿದೆ 2000 ಸೆಕ್ಷನ್ 79A ರ ಪ್ರಕಾರ ಯಾವುದೇ ನ್ಯಾಯಾಲಯ ಅಥವಾ ಇತರ ಪ್ರಾಧಿಕಾರದ ಮುಂದೆ ಎಲೆಕ್ಟ್ರಾನಿಕ್ ರೂಪದ ಸಾಕ್ಷ್ಯದ ಕುರಿತು ತಜ್ಞರ ಅಭಿಪ್ರಾಯವನ್ನು ನೀಡುವ ಉದ್ದೇಶಗಳಿಗಾಗಿ ಎಲೆಕ್ಟ್ರಾನಿಕ್ ಸಾಕ್ಷ್ಯಗಳ ಪರೀಕ್ಷಕರಿಗೆ ಸೂಚಿಸಲು ಕೇಂದ್ರ ಸರ್ಕಾರವನ್ನು ಕಡ್ಡಾಯಗೊಳಿಸುತ್ತದೆ. ಎಲೆಕ್ಟ್ರಾನಿಕ್ ಎವಿಡೆನ್ಸ್ನ ಪರೀಕ್ಷಕರ ಗುರುತಿಸುವಿಕೆ ಮತ್ತು ಆಯ್ಕೆಗಾಗಿ, ಆರಂಭದಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಎಲೆಕ್ಟ್ರಾನಿಕ್ ಎವಿಡೆನ್ಸ್ನ ಪರೀಕ್ಷಕರನ್ನು ಪ್ರವೇಶಿಸಲು ಮತ್ತು ತಿಳಿಸಲು ಸಚಿವಾಲಯವು (MeitY) ಒಂದು ಯೋಜನೆಯನ್ನು ವಿನ್ಯಾಸಗೊಳಿಸಿದೆ ಮತ್ತು ಅಭಿವೃದ್ಧಿಪಡಿಸಿದೆ, ಇಲ್ಲಿಯವರೆಗೆ, ಹತ್ತು ಸೈಬರ್ ಫೋರೆನ್ಸಿಕ್ಸ್ ಲ್ಯಾಬ್ಗಳನ್ನು ಸಚಿವಾಲಯದಿಂದ ಸೂಚಿಸಲಾಗಿದೆ.
VII. ಶಿಕ್ಷಣ ಮತ್ತು ಸಂಶೋಧನಾ ಜಾಲ (ಇಆರ್ಎನ್ಇಟಿ)
i. ದೇಶದ ಈಶಾನ್ಯ ರಾಜ್ಯಗಳಲ್ಲಿ ಇಂಟರ್ನೆಟ್/ಇಂಟ್ರಾನೆಟ್ ಸಿಗುವಿಕೆಗಾಗಿ ಇಆರ್ಎನ್ಇಟಿ ವಿಎಸ್ಎಟಿ (ಇಆರ್ನೆಟ್ ವಿಸಾಟ್) ಸಂಪರ್ಕ: 22.2.2020 ರವರೆಗೆ ಈಶಾನ್ಯ ರಾಜ್ಯಗಳಲ್ಲಿ 60 ಶಿಕ್ಷಣ ಸಂಸ್ಥೆಗಳು/ಶಾಲೆಗಳಲ್ಲಿ 3 ವರ್ಷಗಳ ಅವಧಿಗೆ ವಿಸಾಟ್ ಸಂಪರ್ಕವನ್ನು ಒದಗಿಸಲಾಗಿದೆ. ಅದರ ನಂತರ, ಅದನ್ನು ಇನ್ನೂ 1 ವರ್ಷಕ್ಕೆ, ಅಂದರೆ 22.2.2021 ರವರೆಗೆ, 37 ಶಾಲೆಗಳಲ್ಲಿ ವಿಸ್ತರಿಸಲಾಯಿತು ಮತ್ತು ಇನ್ನೂ 6 ತಿಂಗಳವರೆಗೆ, ಅಂದರೆ 22.8.2021 ರವರೆಗೆ, ನೆಲದಲ್ಲಿ ಸಂಪರ್ಕದ ಆಯ್ಕೆಯು ಲಭ್ಯವಿಲ್ಲದ 26 ಶಾಲೆಗಳಲ್ಲಿ ವಿಸ್ತರಿಸಲಾಯಿತು. ಯೋಜನೆಯು 22.8.2021 ರಂದು ಯಶಸ್ವಿಯಾಗಿ ಪೂರ್ಣಗೊಂಡಿತು.
ii ಎನ್ಕೆಎನ್ ಗಾಗಿ ಹೆಚ್ಚಿನ ಸಾಮರ್ಥ್ಯದ ಎಸ್ಸಿಪಿಸಿವಿಎಸ್ಎಟಿ ಲಿಂಕ್: ಇಆರ್ಎನ್ಇಟಿ ಭಾರತವು 1.3.2017 ರಿಂದ (i) ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪ ದ್ವೀಪಗಳ ಎನ್ಕೆಎನ್ ಕವರಟ್ಟಿಯಲ್ಲಿ ನೆಲೆಗೊಂಡಿರುವ ಸಚಿವಾಲಯದ ಎನ್ಕೆಎನ್ ಯೋಜನೆಗಾಗಿ ಎರಡು ಹೆಚ್ಚಿನ ಸಾಮರ್ಥ್ಯದ ಎಸ್ಸಿಪಿಸಿವಿಎಸ್ಎಟಿ ಲಿಂಕ್ಗಳನ್ನು ಸ್ಥಾಪಿಸಿದೆ; ಮತ್ತು (ii) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಎನ್ಕೆಎನ್ ಪೋರ್ಟ್ ಬ್ಲೇರ್ ನಲ್ಲಿ 9.1.2018 ರಿಂದ ಕಾರ್ಯನಿರ್ವಹಿಸುತ್ತಿದೆ; ಎರಡೂ ಸ್ಥಳಗಳಲ್ಲಿ ಪ್ರತ್ಯೇಕವಾಗಿ 47 Mbps ಡೇಟಾ ಪ್ರಮಾಣದಲ್ಲಿ ಒದಗಿಸುತ್ತಿವೆ. ಈ ಪ್ರದೇಶದ ಶೈಕ್ಷಣಿಕ ಸಂಸ್ಥೆಗಳು ಇತ್ಯಾದಿಗಳಿಗೆ ಇಂಟರ್ನೆಟ್ ಸಂಪರ್ಕವನ್ನು ಒದಗಿಸಲು ಲಿಂಕ್ಗಳನ್ನು ಬಳಸಲಾಗುತ್ತದೆ.
iii ಎಲ್ಟಿಎಸ್ಎಸ್ ಲಕ್ಷದ್ವೀಪಕ್ಕೆ ಹೆಚ್ಚಿನ ಸಾಮರ್ಥ್ಯದ ಎಸ್ಸಿಪಿಸಿವಿಎಸ್ಎಟಿ ಲಿಂಕ್: ಇಆರ್ಎನ್ಇಟಿ ಭಾರತವು ಲಕ್ಷದ್ವೀಪದ 9 ದ್ವೀಪಗಳಲ್ಲಿ ಲಕ್ಷದ್ವೀಪ ಮಾಹಿತಿ ತಂತ್ರಜ್ಞಾನ ಸೇವೆಗಳ ಸೊಸೈಟಿ (ಎಲ್ಟಿಎಸ್ಎಸ್) ಗಾಗಿ ಒಂಬತ್ತು ಹೆಚ್ಚಿನ ಸಾಮರ್ಥ್ಯದ ಎಸ್ಸಿಪಿಸಿವಿಎಸ್ಎಟಿ ಲಿಂಕ್ಗಳನ್ನು ಅಗತ್ತಿ, ಅಮಿನಿ, ಆಂಡ್ರೊಟ್, ಚೆಟ್ಲಾಟ್, ಕದ್ಮತ್, ಕಲ್ಪೇನಿ, ಕವರಟ್ಟಿ, ಕಿಲ್ತಾನ್ ಮತ್ತು ಮಿನಿಕಾಯ್ ನಲ್ಲಿ ಸ್ಥಾಪಿಸಿದೆ. ಆರಂಭದಲ್ಲಿ, 31.10.2019ರಿಂದ 25.5 MHz ನ ಉಪಗ್ರಹ ಬ್ಯಾಂಡ್ವಿಡ್ತ್ ಅನ್ನು ಒದಗಿಸಲಾಗಿತ್ತು. ಈ 9 ಸ್ಥಳಗಳಲ್ಲಿ ಇದನ್ನು ಮೂರು ಬಾರಿ ಹೆಚ್ಚಿಸಲಾಗಿದೆ - (i) 42.6MHz , 23.2.2020ರಲ್ಲಿ, (ii) 44.00MHz,1.1.2021ರಲ್ಲಿ (iii) 48.5MHz 19.09.2021ರಲ್ಲಿ. ಪ್ರಸ್ತುತ, ಈ 9 ಲಿಂಕ್ಗಳು 48.5MHz ಉಪಗ್ರಹ ಬ್ಯಾಂಡ್ವಿಡ್ತ್ನೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ಲಿಂಕ್ಗಳು/ ಸಂಪರ್ಕಗಳು ಕಾರ್ಯಾಚರಣೆಯಲ್ಲಿವೆ ಮತ್ತು ಎಲ್ಟಿಎಸ್ಎಸ್ ನಿಂದ ಬಳಸಲಾಗುತ್ತಿದೆ.
ಮೇಲಿನ ವಿಸಾಟ್ ಲಿಂಕ್ಗಳು ದೇಶದ ಸಂಪರ್ಕವಿಲ್ಲದ ಭಾಗಗಳಲ್ಲಿನ ಮಾಹಿತಿ ಹರಿವಿನ ಅಡೆತಡೆಗಳನ್ನು ತೆಗೆದುಹಾಕಲು ಇಂಟರ್ನೆಟ್ ಸಂಪರ್ಕವನ್ನು ಒದಗಿಸುತ್ತಿವೆ.
iv. ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಿಗೆ ಡೊಮೇನ್ ಹೆಸರುಗಳು : AC.in, res.in, edu.in ಮತ್ತು ವಿದ್ಯಾ.ಭಾರತ್ ಡೊಮೇನ್ಗಳನ್ನು ಒದಗಿಸಲು ಇಆರ್ಎನ್ಇಟಿ ವಿಶೇಷ ರಿಜಿಸ್ಟ್ರಾರ್ ಆಗಿದೆ. ಪ್ರಸ್ತುತ ಇಆರ್ಎನ್ಇಟಿ ನಿಂದ 16000 ಕ್ಕೂ ಹೆಚ್ಚು ಡೊಮೇನ್ಗಳನ್ನು ಬೆಂಬಲಿಸಲಾಗುತ್ತಿದೆ.
v. ಶ್ರವಣ ಮತ್ತು ದೃಷ್ಟಿಹೀನರಿಗಾಗಿ ಸಿಗಬಹುದಾದ (ಪ್ರವೇಶಿಸಬಹುದಾದ) ಜಾಲತಾಣಗಳು (ದಿವ್ಯಾಂಗ್ ಜನ್): ಸಮಾಜದ ಎಲ್ಲಾ ವರ್ಗಗಳು ವಿಶೇಷವಾಗಿ ವಿಕಲಚೇತನರು (ದಿವ್ಯಾಂಗರು) ಡಿಜಿಟಲ್ ಮಾಹಿತಿಯನ್ನು ಪಡೆಯುವಲ್ಲಿ ತಡೆರಹಿತ ಮತ್ತು ಒಳಗೊಳ್ಳುವಿಕೆಯನ್ನು ಒದಗಿಸುವ ಉದ್ದೇಶದಿಂದ ಇಆರ್ಎನ್ಇಟಿ ದೇಶಾದ್ಯಂತ ರಾಜ್ಯ ಸರ್ಕಾರದ ಜಾಲತಾಣಗಳನ್ನು ಬಳಸಲು ಸುಲಭವಾಗುವಂತೆ ಮತ್ತು ಸಿಗುವಂತೆ ಅಭಿವೃದ್ಧಿಪಡಿಸುತ್ತಿದೆ / ಮಾರ್ಪಡಿಸುತ್ತಿದೆ. ಇಂಟರ್ನ್ಯಾಷನಲ್ ವೆಬ್ ಕಂಟೆಂಟ್ ಆಕ್ಸೆಸಿಬಿಲಿಟಿ ಗೈಡ್ಲೈನ್ಸ್ (ಡಬ್ಲ್ಯೂಸಿಎಜಿ) ಗೆ ಅನುಗುಣವಾಗಿ 500 ಕ್ಕೂ ಹೆಚ್ಚು ಜಾಲತಾಣಗಳನ್ನು ಅಭಿವೃದ್ಧಿಪಡಿಸಲಾಗಿದೆ.
vi. ಡಿಎನ್ಎಸ್ ರೂಟ್ ಸರ್ವರ್ ಟೆಸ್ಟ್ಬೆಡ್: ಭವಿಷ್ಯದ ಇಂಟರ್ನೆಟ್ ಪ್ರೋಟೋಕಾಲ್ ಐಪಿವಿ6ಅನ್ನು ಮಾತ್ರ ಬಳಸುವಾಗ ಸ್ಥಿತಿಸ್ಥಾಪಕತ್ವ ಮತ್ತು ಸ್ಥಿರತೆಯನ್ನು ಪರೀಕ್ಷಿಸಲು ಇಆರ್ಎನ್ಇಟಿ ಸಕ್ರಿಯ ಸಂಶೋಧನೆ ನಡೆಸುತ್ತಿದೆ. ವಿಶ್ವಾದ್ಯಂತ ನಿಯೋಜಿಸಲಾದ 25 ಸರ್ವರ್ಗಳಲ್ಲಿ 3 ಸರ್ವರ್ಗಳನ್ನು ಐಡಿಎನ್ ಹೆಸರಿನೊಂದಿಗೆ ಇಆರ್ಎನ್ಇಟಿ ನಲ್ಲಿ ನಿಯೋಜಿಸಲಾಗಿದೆ.
VIII. ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (C-DAC ಸಿ-ಡಾಕ್)
i. ಹೆಚ್ಪಿಸಿ ಅಪ್ಲಿಕೇಶನ್ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ
- ಭಾರತದ ನದಿಯ ಜಲಾನಯನ ಪ್ರದೇಶದಲ್ಲಿನ ಪ್ರವಾಹ ಮುನ್ಸೂಚನೆಗಾಗಿ ಆರಂಭಿಕ ಎಚ್ಚರಿಕೆ ವ್ಯವಸ್ಥೆ (ಇಡಬ್ಲ್ಯೂಎಸ್)
- ಪನೋರಮಾ - ಸಾಗರ ಮುನ್ಸೂಚನೆ ದೃಶ್ಯೀಕರಣ ವ್ಯವಸ್ಥೆ
- ತೈಲ ಮತ್ತು ಅನಿಲ ಅನ್ವೇಷಣೆಗೆ ಸಹಾಯ ಮಾಡಲು ಭೂಕಂಪನ ಚಿತ್ರಣಕ್ಕಾಗಿ ಹೆಚ್ಪಿಸಿ ಸಾಫ್ಟ್ವೇರ್ ಸೂಟ್
- ಜೆನೊವಾಲ್ಟ್ : ಒಂದು ಕ್ಲೌಡ್ ಆಧಾರಿತ ಜೀನೋಮಿಕ್ಸ್ ರೆಪೊಸಿಟರಿ
Ii C-DAC ಮೂಲಕ ಆರೋಗ್ಯ ಮಾಹಿತಿ ಪರಿಹಾರಗಳು
- ಔಷಧ ಉಗ್ರಾಣ ಪರಿಹಾರವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ 18 ರಾಜ್ಯಗಳು, 1 ಕೇಂದ್ರಾಡಳಿತ ಪ್ರದೇಶ ಮತ್ತು 5 ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಇ-ಔಷಧಿ ಮತ್ತು ಇ-ಉಪ್ಕಾರನ್ ಅನ್ನು ರಕ್ಷಣಾ ಸಚಿವಾಲಯದ ಅಡಿಯಲ್ಲಿ ಡೈರೆಕ್ಟರ್ ಜನರಲ್ ಆರ್ಮ್ಡ್ ಫೋರ್ಸ್ ವೈದ್ಯಕೀಯ ಸೇವೆಗಳಲ್ಲಿ (ಡಿಜಿಎಎಫ್ಎಮ್ಎಸ್) ಯಶಸ್ವಿಯಾಗಿ ಅಳವಡಿಸಲಾಗಿದೆ.
- ಇ-ರಕ್ತಕೋಶ್ - ರಕ್ತನಿಧಿ ನಿರ್ವಹಣಾ ವ್ಯವಸ್ಥೆಯು ದೇಶದ 34 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 2100+ ರಕ್ತನಿಧಿಗಳನ್ನು ಹೊಂದಿದೆ.
- ಭಾರತದಾದ್ಯಂತ ಏಮ್ಸ್ (AIIMS) ಗಳಲ್ಲಿ 10 ಸ್ಥಳಗಳಿಗೆ ಇ-ಸುಶ್ರುತ್ -ಆಸ್ಪತ್ರೆ ನಿರ್ವಹಣೆ ಮತ್ತು ಮಾಹಿತಿ ವ್ಯವಸ್ಥೆ ಜೊತೆಗೆ ದೇಶದಾದ್ಯಂತ ಇ-ಸುಶ್ರುತ್ ನಿಯೋಜನೆಯು ಭಾರತದಾದ್ಯಂತ 715+ ಭಾರತೀಯ ರೈಲ್ವೆ ಆಸ್ಪತ್ರೆಗಳನ್ನು ಒಳಗೊಳ್ಳುವ ಮೂಲಕ ಮತ್ತೊಂದು ಮಹತ್ತರ ಬೆಳವಣಿಗೆಯ ಕಡೆಗೆ ಸಾಗಿದೆ. ಹೆಚ್ಚುವರಿಯಾಗಿ, ಸಿ-ಡಾಕ್ ತನ್ನ ಬೊಕಾರೊ ಘಟಕಕ್ಕಾಗಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಭಾರತದ ಉಕ್ಕಿನ ಪ್ರಾಧಿಕಾರ - ಎಸ್ಎಐಎಲ್) ನಲ್ಲಿ ಹೆಚ್ಎಮ್ಐಎಸ್ ಅನುಷ್ಠಾನಕ್ಕೆ ಗುತ್ತಿಗೆಯನ್ನು ನೀಡಲಾಗಿದೆ ಮತ್ತು ಎಸ್ಎಐಎಲ್ ನ ಇತರ ಘಟಕಗಳಿಗೆ ವಿಸ್ತರಿಸಲು ಹೆಚ್ಚಿನ ಚರ್ಚೆಗಳು ನಡೆಯುತ್ತಿವೆ.
- ಆಕಾಂಕ್ಷ - ರೇಡಿಯೇಶನ್ ಟ್ರೀಟ್ಮೆಂಟ್ ಪ್ಲಾನಿಂಗ್ ಸಿಸ್ಟಮ್ (ಟಿಪಿಎಸ್) ಅನ್ನು ಟಾಟಾ ಸ್ಮಾರಕ ಕೇಂದ್ರದಲ್ಲಿ ನಿಯೋಜಿಸಲಾಗಿದೆ ಮತ್ತು ಸಿಸ್ಟಮ್ ಪರಿಶೀಲನೆ ಮತ್ತು ಬಳಕೆದಾರ ಸ್ವೀಕಾರದ ಮೌಲ್ಯೀಕರಣವು ಟಿಎಮ್ಸಿ ಯಲ್ಲಿ ಪ್ರಕ್ರಿಯೆಯಲ್ಲಿದೆ.
- ಇ-ಸಂಜೀವನಿ (ಆಯುಷ್ಮಾನ್ಭಾರತ) ಅನ್ನು 15 ರಾಜ್ಯಗಳಲ್ಲಿ ಹೊರತರಲಾಗಿದೆ.
iii ಸೈಬರ್ ಭದ್ರತಾ ಪರಿಹಾರಗಳು
- ಬ್ಲಾಕ್ಚೈನ್ ತಂತ್ರಜ್ಞಾನಕ್ಕಾಗಿ ವಿತರಣಾ ಕೇಂದ್ರ - ತೆಲಂಗಾಣದಲ್ಲಿ ಆಸ್ತಿ ನೋಂದಣಿ ಅಪ್ಲಿಕೇಶನ್ನ ಅಸ್ತಿತ್ವದಲ್ಲಿರುವ ಕೆಲಸ ಕಾರ್ಯಗಳಿ ಬ್ಲಾಕ್ಚೈನ್ ತಂತ್ರಜ್ಞಾನದ ಪ್ರಯೋಜನಗಳನ್ನು ತೆಗೆದುಕೊಳ್ಳುವ ಮೂಲಕ ಆಸ್ತಿ ದಾಖಲೆ ನಿರ್ವಹಣಾ ವ್ಯವಸ್ಥೆಯನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಲಾಗಿದೆ ಮತ್ತು ನಿಯೋಜಿಸಲಾಗಿದೆ. ಆಸ್ತಿ ನೋಂದಣಿ ವಹಿವಾಟುಗಳನ್ನು ಬ್ಲಾಕ್ಚೈನ್ನಲ್ಲಿ ರೆಕಾರ್ಡ್ ಮಾಡಲು ವ್ಯವಸ್ಥೆಯನ್ನು ಹತೋಟಿಗೆ ತರಲಾಯಿತು ಮತ್ತು ನಿಯೋಜನೆಯನ್ನು ಹೆಚ್ಚಿಸಲು ವಿಸ್ತರಣೆ ಯೋಜನೆಯನ್ನು ಸಹ ಸಲ್ಲಿಸಲಾಯಿತು. ಅಪ್ಲಿಕೇಶನ್ ಡೊಮೇನ್ಗಳಲ್ಲಿ ಶಿಕ್ಷಣ ಮತ್ತು ಕ್ಲೌಡ್ ಭದ್ರತೆಯಲ್ಲಿ ಪಿಒಸಿ ಗಳನ್ನು ಸಹ ಅಭಿವೃದ್ಧಿಪಡಿಸಲಾಗಿದೆ.
- ಮೆಷಿನ್ ಲರ್ನಿಂಗ್ ಸಿಸ್ಟಮ್ ಅನ್ನು ಬಳಸಿಕೊಂಡು ಮಲ್ಟಿಸ್ಟೇಜ್ ದಾಳಿಗಳನ್ನು ಊಹಿಸಲು ಮೂಲಮಾದರಿ ವ್ಯವಸ್ಥೆಯನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಮಲ್ಟಿಸ್ಟೇಜ್ ದಾಳಿಗಳನ್ನು ಪತ್ತೆಹಚ್ಚಲು ಈ ಪರಿಹಾರವು ಎಮ್ಎಲ್ ಮಾದರಿಗಳನ್ನು ನಿಯಂತ್ರಿಸುತ್ತದೆ. ಸೈಬರ್ ಕಿಲ್ ಚೈನ್ನ ಪ್ರತಿ ಹಂತಕ್ಕೂ ಮಾದರಿಗಳನ್ನು ನಿರ್ಮಿಸಲಾಗಿದೆ ಮತ್ತು ನಿಖರವಾದ ಫಲಿತಾಂಶಗಳನ್ನು ಪಡೆಯಲು ಎಲ್ಲಾ ಹಂತಗಳ ಫಲಿತಾಂಶಗಳು ಪರಸ್ಪರ ಸಂಬಂಧ ಹೊಂದಿದೆ. ಪರಿಹಾರವನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಪ್ರಾಯೋಗಿಕ ನಿಯೋಜನೆಯನ್ನು ಸಿ-ಡಾಕ್ನಲ್ಲಿ ಕೈಗೊಳ್ಳಲಾಗುತ್ತದೆ ಮತ್ತು ಸಿಇಆರ್ಟಿ-ಇನ್ ನಿಂದ ಹೆಚ್ಚಿನ ಮೌಲ್ಯಮಾಪನವನ್ನು ನಡೆಸಲಾಗುತ್ತಿದೆ.
- ಡಿಜಿಟಲ್ ಫೊರೆನ್ಸಿಕ್ಸ್ ಪ್ಲಾಟ್ಫಾರ್ಮ್ ಅನ್ನು ಫೊರೆನ್ಸಿಕ್ಸ್ ಉದ್ದೇಶಗಳಿಗಾಗಿ ಡಿಜಿಟಲ್ ಪುರಾವೆಗಳ ಸ್ವಯಂಚಾಲಿತ ವಿಶ್ಲೇಷಣೆಗಾಗಿ ಅಭಿವೃದ್ಧಿಪಡಿಸಲಾಗುತ್ತಿದೆ
- ಸೈಬರ್ ವ್ಯೂ ಸೈಬರ್ ಥ್ರೆಟ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಸಿಟಿಎಮ್ಎಸ್) ವ್ಯವಸ್ಥೆಯು ಪ್ರಸ್ತುತ ಕಾರ್ಯನಿರ್ವಹಿಸುತ್ತಿದೆ ಮತ್ತು ಸಂವೇದಕಗಳನ್ನು ವಿವಿಧ ವಲಯಗಳ 60 ವಿವಿಧ ಸಂಸ್ಥೆಗಳಲ್ಲಿ ನಿಯೋಜಿಸಲಾಗಿದೆ.
- ಮಾಹಿತಿ ಭದ್ರತೆ ಶಿಕ್ಷಣ ಮತ್ತು ಜಾಗೃತಿ (ಐಎಸ್ಇಎ) - ಈ ಉಪಕ್ರಮದ ಭಾಗವಾಗಿ, ಒಟ್ಟು 3,96,394 ಅಭ್ಯರ್ಥಿಗಳು 52 ಸಂಸ್ಥೆಗಳ ಮೂಲಕ ವಿವಿಧ ಔಪಚಾರಿಕ/ಔಪಚಾರಿಕವಲ್ಲದ ಕೋರ್ಸ್ಗಳ ಅಡಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ ಮತ್ತು ತರಬೇತಿಯನ್ನು ಪಡೆದಿದ್ದಾರೆ. 1340 ಜಾಗೃತಿ ಕಾರ್ಯಾಗಾರಗಳನ್ನು 2.27,239 ಮಂದಿ ನೇರ ಕಾರ್ಯಾಗಾರ/ವೆಬಿನಾರ್ಗಳಲ್ಲಿ ಭಾಗವಹಿಸುವ ಮೂಲಕ ಆಯೋಜಿಸಲಾಗಿದೆ.
- ಸಿ-ಡಾಕ್ ನ ಇಸೈನ್ (eSign) ಸೇವೆಯು ವಿವಿಧ ಸರ್ಕಾರಿ ಏಜೆನ್ಸಿಗಳಿಗೆ 2.02 ಕೋಟಿ ಸಹಿಗಳನ್ನು ನೀಡಿದೆ
iv. ಸಾರ್ಸ್-ಕೊವ್-2 (SARS-CoV-2) ಬಗ್ಗೆ ಕಂಪ್ಯೂಟೇಶನಲ್ ಡ್ರಗ್ ರಿಪರ್ಪೋಸಿಂಗ್ ಸ್ಟಡೀಸ್
- ಸಾರ್ಸ್-ಕೊವ್-2ರ ನಿರ್ಣಾಯಕ ಗುರಿಗಳ ಮೇಲೆ ಸಿ-ಡಾಕ್ ಔಷಧ ಮರುಬಳಕೆಯ ಅಧ್ಯಯನಗಳನ್ನು ನಡೆಸಿದೆ. ಎಫ್ಡಿಎ ಅನುಮೋದಿತ, ಸ್ವೀಟ್ಲೀಡ್ (SWEETLEAD) ಮತ್ತು ವಿವಿಧ ಭಾರತೀಯ ಔಷಧೀಯ ಸಸ್ಯಗಳ ಫೈಟೊಕೆಮಿಕಲ್ಸ್ ದತ್ತಾಂಶಗಳಿಂದ ಔಷಧಿಗಳನ್ನು ಕೋವಿಡ್=-19 ಪ್ರೋಟೀನ್ ಗುರಿಗಳಿಗೆ ಹೊಂದಿಸಲಾಗಿದೆ..
- ಆರ್ಎನ್ಎ ಅವಲಂಬಿತ ಸಾರ್ಸ್-ಕೊವ್-2ರ ಆರ್ಎನ್ಎ ಪಾಲಿಮರೇಸ್ ಪ್ರೋಟೀನ್ ಗಳಿಗಾಗಿ ಆಯುರ್ವೇದ ಪರಿಹಾರಗಳ ಪಾತ್ರವನ್ನು ಅಧ್ಯಯನ ಮಾಡಲಾಗಿದೆ. ಉಸಿರಾಟದ ಅಸ್ವಸ್ಥತೆಗಳ ಚಿಕಿತ್ಸೆಯಲ್ಲಿ ಪಾತ್ರವನ್ನು ಹೊಂದಿರುವ ಭಾರತೀಯ ಔಷಧೀಯ ಸಸ್ಯಗಳಿಂದ ಫೈಟೊಕೆಮಿಕಲ್ ಡೇಟಾಸೆಟ್ ತಯಾರಿಸಲಾಯಿತು. ಉತ್ತಮವಾದ ಹೆಚ್ಚಿನ ಫಲಿತಾಂಶಕ್ಕಾಗಿ ಡಾಕಿಂಗ್ ಮತ್ತು ಸಿಮ್ಯುಲೇಶನ್ಗಳನ್ನು ನಡೆಸಲಾಯಿತು. ಫೈಟೊಕೆಮಿಕಲ್ಗಳ ಮೇಲಿನ ಅಧ್ಯಯನಗಳು ವೈರಲ್ ಅನ್ನು ತಡೆಯುವ ಪ್ರಬಲ ಅಣುಗಳಾದ ಗಿಲೋಯ್ ಮತ್ತು ಅಶ್ವಗಂಧದ ಅಣುಗಳ ಗುರುತಿಸುವಿಕೆಗೆ ಕಾರಣವಾಗುತ್ತವೆ.
IX. ರಾಷ್ಟ್ರೀಯ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ (ಎನ್ ಐಇಎಲ್ಐಟಿ )
- ಇಲ್ಲಿಯವರೆಗೆ 2021-2022 ಹಣಕಾಸು ವರ್ಷದಲ್ಲಿ, 3.85 ಮತ್ತು 2.09 ಲಕ್ಷವನ್ನು ವಿವಿಧ ಔಪಚಾರಿಕ/ಔಪಚಾರಿಕವಲ್ಲದ/ಡಿಜಿಟಲ್ ಸಾಕ್ಷರತೆ ಕೋರ್ಸ್ಗಳ ಅಡಿಯಲ್ಲಿ (ಆನ್ಲೈನ್ / ದೂರದ ಶಿಕ್ಷಣ ತರಬೇತಿ ಸೇರಿದಂತೆ) ತರಬೇತಿ ನೀಡಲಾಗಿದೆ ಮತ್ತು ಪ್ರಮಾಣೀಕರಿಸಲಾಗಿದೆ.
- ಎನ್ಐಇಎಲ್ಐಟಿ ಯು ಪಜಾ / ಪ ಪಂಗಡ ಶುಲ್ಕ ಮರುಪಾವತಿ ಯೋಜನೆ [ಸಚಿವಾಲಯದ ಡಿಬಿಟಿ ಯೋಜನೆಯಲ್ಲಿ ಒಂದು]’ ಅನ್ನು ಅನುಷ್ಠಾನಗೊಳಿಸುತ್ತಿದೆ ಮತ್ತು 2020-21 ಹಣಕಾಸು ವರ್ಷದಲ್ಲಿ 1,978 ಪರಿಶಿಷ್ಷ ಜಾತಿಯ ಅಭ್ಯರ್ಥಿಗಳು ಮತ್ತು 13,351 ಪರಿಶಿಷ್ಷ ಪಂಗಡದ ಅಭ್ಯರ್ಥಿಗಳಿಗೆ ತರಬೇತಿ ನೀಡಿದೆ, 2021-2022 ಹಣಕಾಸು ವರ್ಷದ ಕ್ಲೈಮ್ ಪ್ರಕ್ರಿಯೆಯಲ್ಲಿದೆ.
X ಪ್ರಮಾಣೀಕರಣ ಪರೀಕ್ಷೆ ಮತ್ತು ಗುಣಮಟ್ಟ ಪ್ರಮಾಣೀಕರಣ ನಿರ್ದೇಶನಾಲಯ (STQC Directorate)
i. ಬಯೋಮೆಟ್ರಿಕ್ ಸಾಧನ ಪ್ರಮಾಣೀಕರಣ ಯೋಜನೆ (ಬಿಡಿಸಿಎಸ್ )
- ಪರೀಕ್ಷಾ ಸೌಲಭ್ಯವನ್ನು ದೆಹಲಿ, ಬೆಂಗಳೂರು ಮತ್ತು ಮೊಹಾಲಿಯಲ್ಲಿ ಸ್ಥಾಪಿಸಲಾಗಿದೆ.
- ಇಲ್ಲಿಯವರೆಗೆ ಪ್ರಮಾಣೀಕರಿಸಿದ ಒಟ್ಟು ಉತ್ಪನ್ನ 85+ ಬಯೋಮೆಟ್ರಿಕ್ ಸಾಧನ, 135+ ಆರ್ ಡಿ ಸೇವೆಗಳು, 4 ಪಿಸಿಹೆಚ್ 90+ ಮಾರಾಟಗಾರರಿಗೆ
- ಸುರಕ್ಷಿತ ಹಾರ್ಡ್ವೇರ್ ಆಧಾರಿತ ಟ್ರಸ್ಟೆಡ್ ಎಕ್ಸಿಕ್ಯೂಶನ್ ಎನ್ವಿರಾನ್ಮೆಂಟ್ ಮತ್ತು L1 ಬಯೋಮೆಟ್ರಿಕ್ ಸಾಧನವನ್ನು ಒಳಗೊಂಡ ಪಿಸಿಹೆಚ್ ಪರಿಹಾರದಿಂದ ಹಾರ್ಡ್ವೇರ್ ಭದ್ರತೆಯನ್ನು ಹೆಚ್ಚಿಸಲಾಗಿದೆ ಮತ್ತು ಪ್ರಸ್ತುತ 7 ಪಿಸಿಹೆಚ್ ಪರಿಹಾರ ಮತ್ತು 2 ಎಲ್1 ಸಾಧನಗಳು ಆಧಾರ್ ಪರಿಸರ ವ್ಯವಸ್ಥೆಗಾಗಿ ಪ್ರಮಾಣೀಕರಿಸಲ್ಪಟ್ಟಿವೆ.
ii ಎಯುಎ / ಕೆ ಯು ಎ ಪರಿಶೋಧನೆಗಾಗಿ ಬಾಹ್ಯ ಸಂಸ್ಥೆಯನ್ನು ವಿನಂತಿಸುವ ಏಜೆನ್ಸಿಗಳಿಗಾಗಿ
- ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರಕ್ಕಾಗಿ ಮೊದಲನೇ ಪರಿಶೋಧನೆಯನ್ನು ನಡೆಸಲಾಗಿದೆ ಮತ್ತು ಪೂರ್ಣಗೊಂಡಿದೆ.
iii ಎಸ್ ಟಿ ಕ್ಯೂ ಸಿ ಎಂಪನೆಲ್ಡ್ ಟೆಸ್ಟ್ ಲ್ಯಾಬೋರೇಟರೀಸ್ (ಎಸ್ಇಟಿಎಲ್)
- ಪ್ರಸ್ತುತ ಒಂಬತ್ತು ಖಾಸಗಿ ಲ್ಯಾಬ್ಗಳನ್ನು ಈ ಯೋಜನೆಯಡಿಯಲ್ಲಿ ಸೇರಿಸಲಾಗಿದೆ.
iv. ಭಾರತೀಯ ಸಾಮಾನ್ಯ ಮಾನದಂಡ ಪ್ರಮಾಣೀಕರಣ ಯೋಜನೆ (ಐಸಿ3ಎಸ್ )
- ಸಾಮಾನ್ಯ ಮಾನದಂಡ ಪರೀಕ್ಷಾ ಪ್ರಯೋಗಾಲಯ (ಸಿಸಿಟಿಎಲ್) - ಸಿಸಿಟಿಎಲ್ ದೆಹಲಿ, ಸಿಸಿಟಿಎಲ್ ಬೆಂಗಳೂರು, ಸಿಸಿಟಿಎಲ್ ಕೋಲ್ಕತ್ತಾ ಮತ್ತು ಸಿಸಿಟಿಎಲ್ ಮುಂಬೈ.
- ಪ್ರಮಾಣೀಕೃತ ಉತ್ಪನ್ನಗಳ ಸಂಖ್ಯೆ: 19
v. ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ (ಎನ್ಸಿಎಮ್ಸಿ)
- ಒಂದು ರಾಷ್ಟ್ರ ಒಂದು ಕಾರ್ಡ್ ಪರೀಕ್ಷಾ ಸೌಲಭ್ಯವನ್ನು ಎರಡು ಎಸ್ಟಿಕ್ಯೂಸಿ ಲ್ಯಾಬ್ಗಳಲ್ಲಿ ಅಂದರೆ ದೆಹಲಿ ಮತ್ತು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ.
- ಫೈಮ್ ಸಂಸ್ಥೆಯನ್ನು ಎಎಫ್ಸಿ ಪರೀಕ್ಷೆಗಾಗಿ ಎಸ್ಟಿಕ್ಯೂಸಿ ಲ್ಯಾಬ್ ಆಗಿ ಸೇರಿಸಲಾಗಿದೆ
- ಎನ್ಸಿಎಮ್ಸಿ ಘಟಕಗಳ ಪರೀಕ್ಷೆಯ ಮೌಲ್ಯಮಾಪನವು ಪ್ರಗತಿಯಲ್ಲಿದೆ.
vi. ಮಾನದಂಡಗಳು/ಮಾರ್ಗಸೂಚಿಗಳು/ಚೌಕಟ್ಟುಗಳ ಅಭಿವೃದ್ಧಿ
- ಪ್ರಕಟಿತ ಚೌಕಟ್ಟು/ ಸಾಂಸ್ಥಿಕ ಕಾರ್ಯವಿಧಾನ ಮತ್ತು ನೀತಿಗಳು: 18
- ಪ್ರಕಟಿಸಲಾದ ಅಧಿಸೂಚಿತ ಮಾನದಂಡಗಳು: 25
- ಪ್ರಕಟಿತ ಮಾರ್ಗಸೂಚಿಗಳು: 26
- ಮಾರ್ಗಸೂಚಿಗಳು/ ಚೌಕಟ್ಟುಗಳ ದಾಖಲೆಗಳು (ಪ್ರಗತಿಯಲ್ಲಿವೆ): 6
- ಮಾನದಂಡಗಳ ಅಭಿವೃದ್ಧಿಗಾಗಿ ವಿವಿಧ ಐಎಸ್ಒ/ಐಇಎಸ್ ಮತ್ತು ಬಿಐಎಸ್ ಸಮಿತಿಗಳಲ್ಲಿ ಭಾಗವಹಿಸುವಿಕೆ.
vii. ವಿಶ್ವಾಸಾರ್ಹ ಎಲೆಕ್ಟ್ರಾನಿಕ್ಸ್ ಮೌಲ್ಯ ಸರಣಿ ಪ್ರಮಾಣೀಕರಣ ಯೋಜನೆ (ಟಿಇವಿಸಿಸಿಎಸ್)
- ಯೋಜನೆಯನ್ನು ಅನುಮೋದಿಸಲಾಗಿದೆ ಮತ್ತು ಪ್ರಕಟಿಸಲಾಗಿದೆ.
- ಆ್ಯಪಲ್, ಸಿಸ್ಕೊ, ಡೆಲ್, ಸ್ಯಾಮ್ಸಂಗ್ ಇತ್ಯಾದಿ 13 ಸಂಸ್ಥೆಗಳಿಗೆ ಯೋಜನೆಯನ್ನು ಪರಿಚಯಿಸಲಾಗಿದೆ.
- ಪ್ರಮಾಣೀಕರಿಸಿದ ಸಾಧನಗಳ ಸಂಖ್ಯೆ : 1.
- ಎರಡು ಸಾಧನಗಳ ಪರೀಕ್ಷೆ ಪ್ರಗತಿಯಲ್ಲಿದೆ.
viii. ಇ-ಆಡಳಿತ ವ್ಯವಸ್ಥೆ
- ಕೋವಿಡ್ ಸಮಯದಲ್ಲಿ ಸಾರ್ವಜನಿಕರಿಗೆ ವಿಶೇಷ ಸಾಲಗಳ ವಿತರಣೆಗಾಗಿ ತಮಿಳುನಾಡು ಗ್ರಾಮೀಣ ಪರಿವರ್ತನೆ ಯೋಜನೆಯ ವೆಬ್ ಪೋರ್ಟಲ್
ix. ರಕ್ಷಣಾ ವ್ಯವಸ್ಥೆಗಳು
- ಪಿಎಮ್ಒಬಿಎಸ್ಎಸ್, ಐಎಸಿಸಿಎಸ್ ನ 4 ಮತ್ತು 5, 3ಡಿಟಿಸಿಆರ್ ಯೋಜನೆಗಳು, ಇತ್ಯಾದಿಗಳಂತಹ ರಕ್ಷಣಾ ಅಪ್ಲಿಕೇಶನ್ಗಳ ಮೌಲ್ಯಮಾಪನ.
X. ರೈಲ್ವೆಗೆ ಅನ್ವಯವಾಗುವ ಅಪ್ಲಿಕೇಶನ್ಗಳು
- ಡಿಕ್ಕಿ ನಿರೋಧಕ ಸಾದನ (ಆಂಟಿ-ಕೊಲಿಷನ್ ಡಿವೈಸ್ (ಎಸಿಡಿ) ಪರಿಶೀಲನೆ ಮತ್ತು ಮೌಲ್ಯೀಕರಣ - ರಕ್ಷಾ ಕವಚ. ಇದನ್ನು ಕೊಂಕಣ ರೈಲ್ವೇ ಅಭಿವೃದ್ಧಿಪಡಿಸಿದೆ
- ರೈಲ್ಟೆಲ್ಗಾಗಿ ಸಿಸಿಟಿವಿ ಕ್ಯಾಮೆರಾಗಳ ಮೌಲ್ಯಮಾಪನ.
xi ಇ-ಸಂಗ್ರಹಣೆ ವ್ಯವಸ್ಥೆಗಳು
- ಸ್ಪೆಕ್ಟ್ರಮ್ ಹರಾಜಿನ ಮೌಲ್ಯಮಾಪನ ಮತ್ತು ಪ್ರಮಾಣೀಕರಣ (ಟೆಲಿಕಾಂ ಇಲಾಖೆ), ಕಲ್ಲಿದ್ದಲು ಹರಾಜು, ಸರ್ಕಾರದ ಇ-ಪ್ರೊಕ್ಯೂರ್ಮೆಂಟ್ ಸಿಸ್ಟಮ್ (ಸಿಪಿಪಿಪಿ - ಎನ್ಐಸಿ), ಸರ್ಕಾರಿ ಇ-ಮಾರ್ಕೆಟ್ ವ್ಯವಸ್ಥೆ.
- ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ಇ-ಸಂಗ್ರಹಣೆ ವ್ಯವಸ್ಥೆ
xii ಸಮಾಜ ಕಲ್ಯಾಣ ಆಪ್ಗಳು
- "ಕನ್ಯಾಶ್ರೀ", "ಮಧ್ಯಾಹ್ನದ ಬಿಸಿಯೂಟ", "ಮನರೇಗಾ" ಮುಂತಾದ ವಿವಿಧ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ವೆಬ್ ಅಪ್ಲಿಕೇಶನ್ನ ಭದ್ರತಾ ಮೌಲ್ಯಮಾಪನ,
xiii. ಆರೋಗ್ಯ ಆ್ಯಪ್ಗಳು
- ಆರೋಗ್ಯ ಸೇತು ಆ್ಯಪ್
- ಕೋ-ವಿನ್ ವ್ಯವಸ್ಥೆ
- ತಮಿಳುನಾಡು ಆಸ್ಪತ್ರೆ ನಿರ್ವಹಣಾ ವ್ಯವಸ್ಥೆಯ (HMS) ಅನುಸರಣೆ ಮೌಲ್ಯಮಾಪನ
- ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರಕ್ಕಾಗಿ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್‌ನ ಅನುಸರಣೆ ಮೌಲ್ಯಮಾಪನ
xiv. ಉದಯೋನ್ಮುಖ ಕ್ಷೇತ್ರಗಳಲ್ಲಿ ಚಟುವಟಿಕೆಗಳು
- ಐಒಟಿ ಸಾಧನಗಳ ಲೇಬಲಿಂಗ್ ಯೋಜನೆ
- ಮೊಬೈಲ್ ಆ್ಯಪ್ಗಳು, ಸ್ಮಾರ್ಟ್ ಸಿಟಿಗಳು
- ಕರ್ನಾಟಕ ಸರ್ಕಾರಕ್ಕಾಗಿ ಬ್ಲಾಕ್ ಚೈನ್ ಆಧಾರಿತ ಆಸ್ತಿ ನೋಂದಣಿ ವ್ಯವಸ್ಥೆಯ ಅನುಸರಣೆ ಮೌಲ್ಯಮಾಪನ
- ಮೈಕ್ರೋಸರ್ವಿಸಸ್ ಆಧಾರಿತ ಆ್ಯಪ್ ಪರೀಕ್ಷೆ: ಸೇವಾ ಮೆಶ್ ಆರ್ಕಿಟೆಕ್ಚರ್ ಅನ್ನು ಬಳಸಿಕೊಂಡು ಮೈಕ್ರೋಸರ್ವಿಸ್ಗಳನ್ನು ಆಧರಿಸಿದ ಎಪಿಐ ಗಳ ಕಾರ್ಯಾತ್ಮಕತೆ, ಭದ್ರತೆ ಮತ್ತು ಕಾರ್ಯಕ್ಷಮತೆಗಾಗಿ ಎಸ್ಐಡಿ, ಐಐಎಸ್ಸಿ ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಿದ ಇಂಡಿಯಾ ಅರ್ಬನ್ ಡೇಟಾ ಎಕ್ಸ್ಚೇಂಜ್ ಸಿಸ್ಟಮ್ 2.0 ಪರೀಕ್ಷೆಯನ್ನು ನಡೆಸಲಾಗುತ್ತಿದೆ.
xv ಇ-ಲರ್ನಿಂಗ್ ಚಟುವಟಿಕೆಗಳು
- ವಿಡಿಯೋ ಕಾನ್ಫರೆನ್ಸಿಂಗ್ (ವಾಸ್ತವೋಪಮ) ಪರಿಹಾರಗಳು: ಭಾರತ್ ವಿಸಿ
xvi ವೆಬ್ಸೈಟ್ ಗುಣಮಟ್ಟ ಪ್ರಮಾಣೀಕರಣ ಯೋಜನೆ (ಸಿಕ್ಯೂಡಬ್ಲ್ಯೂ)
- ಸರ್ಕಾರದ 282 ಜಾಲತಾಣಗಳು . ಇಲ್ಲಿಯವರೆಗೆ ಜಿಐಜಿಡಬ್ಲ್ಯೂ ಅವಶ್ಯಕತೆಗಳ ಪ್ರಕಾರ ಸಚಿವಾಲಯಗಳು/ ಇಲಾಖೆಗಳು/ ಸಂಸ್ಥೆಗಳನ್ನು ಪ್ರಮಾಣೀಕರಿಸಲಾಗಿದೆ.
xvii. ಪ್ರಮಾಣೀಕರಣ ಚಟುವಟಿಕೆಗಳು
- ಇ-ಸಂಗ್ರಹಣೆ ವ್ಯವಸ್ಥೆ : 27 ಪ್ರಮಾಣೀಕರಿಸಲಾಗಿದೆ
- ಕ್ಲೌಡ್ ಎಂಪಾನೆಲ್ಮೆಂಟ್ : 11 ಮಾರಾಟಗಾರರು
- ಡಿಜಿಟಲ್ ಫೋರೆನ್ಸಿಕ್ಸ್ ಲ್ಯಾಬ್ಗಳು: ಈ ಯೋಜನೆಯಡಿಯಲ್ಲಿ ಇದುವರೆಗೆ 10 ಲ್ಯಾಬ್ಗಳನ್ನು ಎಲೆಕ್ಟ್ರಾನಿಕ್ ಎವಿಡೆನ್ಸ್ 2000 ರ ಮಾಹಿತಿ ತಂತ್ರಜ್ಞಾನ ಕಾಯಿದೆ 79A ರ ಪ್ರಕಾರ ಪರೀಕ್ಷಕರಾಗಿ ಸೂಚಿಸಲಾಗಿದೆ. ಜೈಪುರ ಮತ್ತು ಚೆನ್ನೈನಲ್ಲಿ ಎರಡು ಸ್ಥಳಗಳಲ್ಲಿ ಮತ್ತಷ್ಟು ಸಾಮರ್ಥ್ಯದ ನಿರ್ಮಾಣ ಕ್ರಮಗಳನ್ನು ಸ್ಥಾಪಿಸಲಾಗಿದೆ.
xviii ಇವಿಎಂಗಳು ಮತ್ತು ವಿವಿಪ್ಯಾಟ್ಗಳ ಗುಣಮಟ್ಟದ ಮೌಲ್ಯಮಾಪನಕ್ಕಾಗಿ ಭಾರತದ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆಯನ್ನು ಪ್ರಾರಂಭಿಸಲಾಗಿದೆ.
XI. ಮೈಗೌ (MyGov)
1. ಕೋವಿಡ್ 19 ಅಭಿಯಾನದ ಜಾಲತಾಣದ ಪುಟ:
https://www.mygov.in/covid-19/?utm_source=mygov_campaign
i. ನಿಯಮಗಳು ಮತ್ತು ನಿಬಂಧನೆಗಳು, ಮಾರ್ಗಸೂಚಿಗಳು, ಅಧಿಸೂಚನೆಗಳು, ಮಿಥ್ ಬಸ್ಟರ್ಗಳು, ಕೋವಿಡ್ ಲ್ಯಾಬ್ಗಳಲ್ಲಿನ ಸ್ಥಿತಿ, ಪರೀಕ್ಷೆ ಮತ್ತು ಸಂಬಂಧಿತ ಆರೋಗ್ಯ ಅಂಕಿಅಂಶಗಳು, ಮಾಹಿತಿ ಗ್ರಾಫಿಕ್ಸ್ ಮತ್ತು ವೀಡಿಯೊಗಳು ಮತ್ತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ಹೊಸ ಮಾಹಿತಿಗಳು ಮತ್ತು ಅಧಿಸೂಚನೆಗಳನ್ನು ಒಳಗೊಂಡಂತೆ ಆದರೆ ಸೀಮಿತವಾಗಿರದೆ ಎಲ್ಲಾ ಇತ್ತೀಚಿನ ಸಚಿವಾಲಯದ ಮಾಹಿತಿಗಾಗಿ ಡ್ಯಾಶ್ಬೋರ್ಡ್ ರಚಿಸಲಾಗಿದೆ..
ii ಜಾಗೃತಿ ಮೂಡಿಸಲು ಮತ್ತು ನಾಗರಿಕರಿಗೆ ಹೊಸ ಮಾಹಿತಿಯನ್ನು ಒದಗಿಸಲು MyGov CORONA Helpdesk ಎಂಬ WhatsApp ಚಾಟ್ಬಾಟ್ ಮತ್ತು ಟೆಲಿಗ್ರಾಮ್ನಲ್ಲಿ myGov ಕೊರೊನಾ ನ್ಯೂಸ್ಡೆಸ್ಕ್ ಚಾನೆಲ್ ಅನ್ನು ರಚಿಸಲಾಗಿದೆ. 21.11.2021 ರಂತೆ, WhatsApp ಚಾಟ್ಬಾಟ್ನಲ್ಲಿ 6.1 ಕೋಟಿ ಬಳಕೆದಾರರಿದ್ದಾರೆ ಮತ್ತು ಇಂಗ್ಲಿಷ್ ಟೆಲಿಗ್ರಾಮ್ ಚಾನೆಲ್ನಲ್ಲಿ ಸುಮಾರು 14.45 ಲಕ್ಷ ಬಳಕೆದಾರರು ಮತ್ತು ಹಿಂದಿ ಟೆಲಿಗ್ರಾಮ್ ಚಾನೆಲ್ನಲ್ಲಿ 48,000+ ಬಳಕೆದಾರರಿದ್ದಾರೆ. ಕೋವಿಡ್19 ಅನ್ನು ನಿಗ್ರಹಿಸುವ ನಿಟ್ಟಿನಲ್ಲಿ ನಾಗರಿಕರ ಪ್ರಯತ್ನಗಳ ಕುರಿತಾದ ಕಥೆಗಳ ಸಂಗ್ರಹ (ಕೊರೊನಾ ವಾರಿಯರ್ ಸ್ಟೋರೀಸ್) ಅನ್ನು ಸಹ ಇಲ್ಲಿ ಹಾಕಲಾಗಿದೆ - https://self4society.mygov.in/ 2,26,125 ವೈಯಕ್ತಿಕ ಮತ್ತು 7,306 ಸಂಸ್ಥೆಗಳ ನೋಂದಣಿಗಳೊಂದಿಗೆ 21.11.2021 ರಂತೆ 12,66,616 ಮಾಹಿತಿ ವಸ್ತುಗಳನ್ನು ನೀಡಿವೆ. ಕೋವಿಡ್19 ಸಮಯದಲ್ಲಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್ಸಿಸಿ) ಚಟುವಟಿಕೆಗಳ ಮಾಹಿತಿಯು ಸಹ https://www.mygov.in/campaigns/indiancc/ ನಲ್ಲಿ ಲಭ್ಯವಿವೆ.
2. ನಾವೀನ್ಯತೆ ಮತ್ತು ಸಂಶೋಧನಾ ಸಂಸ್ಕೃತಿಯನ್ನು ಉತ್ತೇಜಿಸಲು ಮೈಗವ್ (myGov) ನವೋದ್ಯಮಗಳು ಮತ್ತು ವ್ಯಕ್ತಿಗಳಿಗೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದೆ : ಇನ್ನೋವೇಟ್ ಇಂಡಿಯಾ, ಆಪ್ ಇನ್ನೋವೇಶನ್ ಚಾಲೆಂಜ್, ಶ್ರೀ ಶಕ್ತಿ ಚಾಲೆಂಜ್, ಐಡಿಯಾ ಫಾರ್ ನ್ಯೂ ಇಂಡಿಯಾ ಚಾಲೆಂಜ್ 2020, ಕೋವಿಡ್ 19 ಸೊಲ್ಯೂಷನ್ಸ್ ಚಾಲೆಂಜ್, ಅಟಲ್ ಟಿಂಕರಿಂಗ್ ಲ್ಯಾಬ್ 201 ಮ್ಯಾರಥಾನ್, ಮುಂತಾದ ವಿವಿಧ ಆವಿಷ್ಕಾರಗಳ ಸವಾಲುಗಳನ್ನು ಆಯೋಜಿಸಿದೆ. ಭಾರತೀಯ ಭಾಷಾ ಕಲಿಕೆ ಅಪ್ಲಿಕೇಶನ್ ಇನ್ನೋವೇಶನ್ ಚಾಲೆಂಜ್, ಪ್ಲಾನೆಟೇರಿಯಂ ಇನ್ನೋವೇಶನ್ ಚಾಲೆಂಜ್, ಟಾಯ್ಸ್ ಹ್ಯಾಕಥಾನ್, ಡ್ರಗ್ ಡಿಸ್ಕವರಿ ಹ್ಯಾಕಥಾನ್ 2020, ಅಮೃತ್ ಮಹೋತ್ಸವ್ ಆಪ್ ಇನ್ನೋವೇಶನ್ ಚಾಲೆಂಜ್, ಎಫ್ಒಎಸ್ಎಸ್4ಜಿಒವಿ (FOSS4GOV) ಇನ್ನೋವೇಶನ್ ಚಾಲೆಂಜ್, ಉದ್ಯಮಶೀಲತೆ ಕಾರ್ಯಕ್ರಮದ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವುದು, ಭಾರತ ಆವಿಷ್ಕಾರದ ವಿನ್ಯಾಸ ಇತ್ಯಾದಿ.
***
(Release ID: 1787329)
Visitor Counter : 431