ಗೃಹ ವ್ಯವಹಾರಗಳ ಸಚಿವಾಲಯ

ಆರು ರಾಜ್ಯಗಳಿಗೆ ಹೆಚ್ಚುವರಿಯಾಗಿ 3,063.21 ಕೋಟಿ ರೂ. ಕೇಂದ್ರೀಯ ನೆರವು ಅನುಮೋದಿಸಿದ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿ


2021ರ ಸಾಲಿನಲ್ಲಿ ಪ್ರವಾಹ/ ಭೂಕುಸಿತ/ ಚಂಡಮಾರುತ ಬಾಧಿತ ಅಸ್ಸಾಂ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ಉತ್ತರಾಖಂಡ್ ಮತ್ತು ಪಶ್ಚಿಮ ಬಂಗಾಳಕ್ಕೆ ಹಣ

Posted On: 30 DEC 2021 5:20PM by PIB Bengaluru

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆ (ಎಚ್.ಎಲ್.ಸಿ.) ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ (ಎನ್.ಡಿ.ಆರ್.ಎಫ್) ಅಡಿಯಲ್ಲಿ 2021 ಸಾಲಿನಲ್ಲಿ ಪ್ರವಾಹ, ಭೂಕುಸಿತ ಮತ್ತು ಚಂಡಮಾರುತದಿಂದ ಬಾಧಿತವಾದ ಆರು ರಾಜ್ಯಗಳಿಗೆ ಹೆಚ್ಚುವರಿ ಕೇಂದ್ರೀಯ ನೆರವನ್ನು ಅನುಮೋದಿಸಿದೆ. ಪ್ರಕೃತಿ ವಿಕೋಪವನ್ನು ಎದುರಿಸಿದ ಆರು ರಾಜ್ಯಗಳ ಜನರಿಗೆ ನೆರವಾಗುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ದೃಢ ನಿಶ್ಚಯವನ್ನು ಇದು ತೋರಿಸುತ್ತದೆ.

ಎಚ್.ಎಲ್.ಸಿ. 3,063.21 ಕೋಟಿ ರೂ. ಹೆಚ್ಚುವರಿ ಕೇಂದ್ರೀಯ ನೆರವನ್ನು ಎನ್.ಡಿ.ಆರ್.ಎಫ್.ನಿಂದ ಅನುಮೋದಿಸಿದೆ:

  • ಚಂಡಮಾರುತತೌಕ್ತೆ’ – 2021ರಲ್ಲಿ, ರೂ.1,133.35 ಕೋಟಿಯನ್ನು ಗುಜರಾತ್ ಗೆ;
  • ಚಂಡಮಾರುತಯಾಸ್’- 2021ರೂ.586.59 ಕೋಟಿ ಪಶ್ಚಿಮ ಬಂಗಾಳಕ್ಕೆ;
  • 2021 ಮುಂಗಾರು ಋತುವಿನಲ್ಲಿ ಪ್ರವಾಹ /ಭೂಕುಸಿತಕ್ಕೆ ರೂ. 51.53 ಕೋಟಿ ಅಸ್ಸಾಂಗೆ, ರೂ. 504.06 ಕೋಟಿಯನ್ನು ಕರ್ನಾಟಕಕ್ಕೆ, ರೂ. 600.50 ಕೋಟಿ ಮಧ್ಯಪ್ರದೇಶಕ್ಕೆ ಮತ್ತು ರೂ. 187.18 ಕೋಟಿಯನ್ನು ಉತ್ತರಖಂಡಕ್ಕೆ ಅನುಮೋದಿಸಲಾಗಿದೆ.

ಹೆಚ್ಚುವರಿ ನೆರವು, ಈಗಾಗಲೇ ರಾಜ್ಯಗಳಿಗೆ ರಾಜ್ಯ ವಿಪತ್ತು ಸ್ಪಂದನಾ ನಿಧಿ (ಎಸ್.ಡಿ.ಆರ್.ಎಫ್)ನಡಿ ರಾಜ್ಯಗಳಿಗೆ ಕೇಂದ್ರವು ಬಿಡುಗಡೆ ಮಾಡಲಾಗಿರುವ ನಿಧಿಗಿಂತ ಹೆಚ್ಚುವರಿಯಾದುದಾಗಿದೆ. 2021-22 ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರ 28 ರಾಜ್ಯಗಳಿಗೆ ಎಸ್‌.ಡಿ.ಆರ್‌.ಎಫ್‌.ನಡಿ 17,747.20 ಕೋಟಿ ರೂ. ಬಿಡುಗಡೆ ಮಾಡಿದ್ದರೆ, ಎನ್.ಡಿ.ಆರ್.ಎಫ್.ನಿಂದ 7 ರಾಜ್ಯಗಳಿಗೆ 3,543.54 ಕೋಟಿ ರೂ. ಬಿಡುಗಡೆ ಮಾಡಿದೆ.

ತೌಕ್ತೆಮತ್ತುಯಾಸ್ಚಂಡಮಾರುತದ ತರುವಾಯ 20.05.2021ರಂದು ಎನ್.ಡಿ.ಆರ್.ಎಫ್. ನಿಂದ ಗುಜರಾತ್‌ ಗೆ 1,000 ಕೋಟಿ ರೂ. ಮತ್ತು  29.05.2021 ರಂದು ಪಶ್ಚಿಮ ಬಂಗಾಳಕ್ಕೆ 300 ಕೋಟಿ ರೂ.ಗಳನ್ನು ಮುಂಗಡವಾಗಿ ಬಿಡುಗಡೆ ಮಾಡಲಾಗಿತ್ತು.

2021-22 ಸಾಲಿನಲ್ಲಿ, ಕೇಂದ್ರ ಸರ್ಕಾರವು ಪ್ರಕೃತಿ ವಿಕೋಪ ಪೀಡಿತ ರಾಜ್ಯ ಸರ್ಕಾರಗಳಿಂದ ಜ್ಞಾಪನಾ ಪತ್ರದ ಸ್ವೀಕೃತಿಗೆ ಕಾಯದೆ, ಪ್ರಕೃತಿ ವಿಕೋಪಗಳಾದ ನಂತರ ತಕ್ಷಣವೇ 22 ಅಂತರ-ಸಚಿವಾಲಯದ ಕೇಂದ್ರೀಯ ತಂಡಗಳನ್ನು (.ಎಂ.ಸಿ.ಟಿ.ಗಳು) ನಿಯುಕ್ತಿಗೊಳಿಸಿತ್ತು.

***



(Release ID: 1786353) Visitor Counter : 317