ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಆಹಾರ ಮತ್ತು ಪಡಿತರ ಸರಬರಾಜು ಇಲಾಖೆಗೆ ಇದು ಸಾಧನೆಯ ವರ್ಷ


ಕೋವಿಡ್‌ನ ಪಿಡುಗಿನ ಸಮಯದಲ್ಲಿ 80 ಕೋಟಿ ಭಾರತೀಯರಿಗೆ ಆಹಾರ ಸುರಕ್ಷೆ

PMGKAY I- V ಹಂತದ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರವು 2.60 ಲಕ್ಷಕೋಟಿ ವೆಚ್ಚವನ್ನು ನಿರ್ವಹಿಸಿದೆ

ಪಡಿತರ ಚೀಟಿಗಳಲ್ಲಿ ಶೇ 100ರಷ್ಟು ಡಿಜಿಟಲೀಕರಣ ಮಾಡಲಾಗಿದೆ. ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಡಿಜಿಟಲ್‌ ಪಡಿತರ ಕಾರ್ಡುಗಳು ಲಭ್ಯ ಇವೆ

88% ಆಧಾರ್‌ ಕಾರ್ಡುಗಳು ಬಯೊಮೆಟ್ರಿಕ್‌ ಮೂಲಕ ಅಧಿಕೃತಗೊಳಿಸಲಾಗಿದೆ. ಮಾಸಿಕ ಪಡಿತರ ವಿತರಣೆಯನ್ನೂ ಈಗ ಡಿಜಿಟಲೀಕರಣಗೊಳಿಸಲಾಗಿದೆ.

20-21ರ ಖಾರಿಫ್‌ ಮಾರುಕಟ್ಟೆಯ ಋತುಮಾನದಲ್ಲಿ 396.77 ಮೆಟ್ರಿಕ್‌ ಲಕ್ಷ ಟನ್‌ ನಷ್ಟು ಭತ್ತದ ುತ್ಪಾದನೆಯಾಗಿದೆ. 21–22ನೇ ಸಾಲಿನ ಖಾರಿಫ್‌ ಮಾರುಕಟ್ಟೆಯ ಋತುವಿನಲ್ಲಿ 38.40 ಲಕ್ಷ ಕೃಷಿಕರು 77, 766.76 ಕೋಟಿ ಮೊತ್ತದ ಗರಿಷ್ಠಬೆಂಬಲಬೆಲೆಯ ಫಲಾನುಭವಿಗಳಾಗಿದ್ದಾರೆ.

2021-22ರ ಸಾಲಿನ ರಬಿ ಮಾರುಕಟ್ಟೆಯ ಋತುವಿನಲ್ಲಿ 433.44 ಲಕ್ಷ ಮೆಟ್ರಿಕ್‌ ಟನ್‌ ಗೋದಿಯನ್ನು ಉತ್ಪಾದಿಸಲಾಗಿದೆ. ಇದು ಸದ್ಯದ ಮಟ್ಟಿಗೆ ಅತಿಹೆಚ್ಚಿನ ಉತ್ಪಾದನೆಯ ದಾಖಲೆಯಾಗಿದೆ. 49.20 ಲಕ್ಷ ಕೃಷಿಕರು 85,603.57 ಕೋಟಿ ರೂಪಾಯಿಗಳ ಗರಿಷ್ಠ ಬೆಂಬಲ ಬೆಲೆಯನ್ನು ಪಡೆದ ಫಲಾನುಭವಿಗಳಾಗಿದ್ದಾರೆ.

ಕೇಂದ್ರವು ಸಾವಿರ ಮಿಲಿಯನ್‌ ಟನ್‌ ಬಾಸ್ಮತಿಯಲ್ಲದ ಅಕ್ಕಿಯನ್ನು ಮಡಗಾಸ್ಕರ್‌ಗೆ ರಫ್ತು ಮಾಡಿತು. ಕೊಮರೊಸ್‌ ದೇಶಕ್ಕೂ ಸಾವಿರ ಮಿಲಿಯನ್‌ ಟನ್‌ ಬಾಸ್ಮತಿಯಲ್ಲದ ಅಕ್ಕಿಯ

Posted On: 27 DEC 2021 6:54PM by PIB Bengaluru

ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಅನ್ನ ಯೋಜನೆಯು ಸಮಯ ಪಲ್ಲಟದ ಯೋಜನೆಯಾಗಿ ಪರಿಣಮಿಸಿತು. ಕೋವಿಡ್‌ನಂಥ ದುರಿತ ಕಾಲದಲ್ಲಿ ಬಡವರಿಗೆ ಹಾಗೂ ದುರ್ಬಲರಿಗೆ ಆಹಾರ ಸುರಕ್ಷೆಯನ್ನು ನೀಡಿದ ಯೋಜನೆಯಾಗಿ ಮಾರ್ಪಾಟಾಯಿತು. 

ಕಳೆದ ಒಂದು ವರ್ಷದಲ್ಲಿ ಆಹಾರ ಹಾಗು ಸಾರ್ವಜನಿಕ ಪಡಿತರ ಸಚಿವಾಲಯ, ಗ್ರಾಹಕರ ಸಚಿವಾಲಯ, ಆಹಾರ ಹಾಗೂ ಸಾರ್ವಜನಿಕೆ ಸರಬರಾಜು ಇಲಾಖೆಗಳು ಒಟ್ಟಾಗಿ ದುರ್ಬಲರಿಗೆ, ದೀನರಿಗೆ ಸತತವಾಗಿ ಆಹಾರ ಪೂರೈಸಲು ಶ್ರಮಿಸುತ್ತಿವೆ. ಕೋವಿಡ್‌ 19 ದುರಿತ ಕಾಲದಲ್ಲಿ ಪ್ರಧಾನ್‌ ಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆ ಅಡಿಯಲ್ಲಿ ಈ ಕಾರ್ಯವನ್ನು ಅನುಷ್ಠಾನಕ್ಕೆ ತರಲಾಗಿದೆ. 

ಪಿಎಂಜಿಕೆಎವೈ1–v ನೇ ಹಂತದಲ್ಲಿ ದೇಶದ 80 ಕೋಟಿ ಜನಸಂಖ್ಯೆಗೆ ಆಹಾರ ಧಾನ್ಯವನ್ನು ಪೂರೈಸಲಾಗಿದೆ. ರಾಷ್ಟ್ರೀಯ ಆಹಾರ ಸುರಕ್ಷಾ ಯೋಜನೆಯಲ್ಲಿ ಇಷ್ಟು ಆಹಾರ ಭದ್ರತೆಯನ್ನು ಒದಗಿಸುವಲ್ಲಿ ಈ ಯೋಜನೆಯು ಕಾರ್ಯನಿರತವಾಗಿದೆ.

ಈ ಮಹತ್ವದ ಯೋಜನೆಯನ್ನು ಕಾರ್ಯಗತಗೊಳಿಸಲು ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆಯು ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಈ ಇಲಾಖೆಯು ಕೈಗೊಂಡ ಕೆಲವು ಪ್ರಮುಖ ಕ್ರಮಗಳು:

 2021ರಲ್ಲಿ ಕೋವಿಡ್‌19ರ ಸುದೀರ್ಘ ಮತ್ತು ತೀಕ್ಷ್ಣವಾದ ಪರಿಣಾಮದಿಂದಾಗಿ ದೇಶದಾದ್ಯಂತ ಆರ್ಥಿಕ ಚಟುವಟಿಕೆಗಳು ನೆಲಕಚ್ಚಿದವು. ಈ ಕಾಲದಲ್ಲಿ ದೀನದುರ್ಬಲರಿಗೆ ಅನುಕೂಲವಾಗಲಿ ಎಂದು ಪ್ರಧಾನ ಮಂತ್ರಿಯವರು ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಅನ್ನ ಯೋಜನೆ ಅನುಷ್ಠಾನಗೊಳಿಸುವುದಾಗಿ ಘೋಷಿಸಿದರು. ಎರಡು ತಿಂಗಳ ಅವಧಿಗಾಗಿ 2021ರ ಏಪ್ರಿಲ್‌ ಮತ್ತು ಮೇ ತಿಂಗಳ ಅವಧಿಯ ನಿರೀಕ್ಷಿತ ವೆಚ್ಚವು 26,602 ಕೋಟಿ

 2020ರಲ್ಲಿ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನಯೆಲ್ಲಿ 79 ಲಕ್ಷ ಮೆಟ್ರಿಕ್‌ ಟನ್‌ ಆಹಾರ ಧಾನ್ಯಗಳನ್ನು ಹಂಚುವ ಉದ್ದೇಶಕ್ಕಾಗಿ ಮೀಸಲಿಡಲಾಗಿತ್ತು. 80 ಕೋಟಿ ಜನ ಫಲಾನುಭವಿಗಳು ರಾಷ್ಟ್ರೀಯ ಆಹಾರ ಸುರಕ್ಷಾ ನಿಯಮದ ಅಡಿಯಲ್ಲಿ 5 ಕೆ.ಜಿ. ಹೆಚ್ಚುವರಿ ಆಹಾರಧಾನ್ಯಗಳನ್ನು ಉಚಿತವಾಗಿ ಹಂಚಲಾಗಿತ್ತು.

ಕೋವಿಡ್‌ನ ದುರಿತ ಕಾಲ ಮುಂದುವರಿಯುತ್ತಿರುವ ಈ ಕಾಲಘಟ್ಟದಲ್ಲಿ ಬಡವರಿಗೆ ಸಹಾಯ ಮಾಡುವ ಮಾರ್ಗವನ್ನು ಮುಂದುವರಿಸಲಾಯಿತು. ಮಾನ್ಯ ಪ್ರಧಾನಮಂತ್ರಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ತಮ್ಮ ಭಾಷಣದಲ್ಲಿ ಜೂನ್‌ 62021ರಂದು ಈ ಯೋಜನೆಯನ್ನು ನವೆಂಬರ್‌ ತಿಂಗಳಿನವರೆಗೆ ವಿಸ್ತರಿಸುವುದಾಗಿ ಘೋಷಿಸಿದ್ದರು. 

ಅದರಂತೆ ಈ ಯೋಜನೆಯನ್ನು ಮತ್ತೆ ಐದು ತಿಂಗಳ ಅವಧಿಗೆ ವಿಸ್ತರಿಸಲಾಯಿತು. ಜುಲೈಯಿಂದ ನವೆಂಬರ್‌ವರೆಗೆ ಐದು ತಿಂಗಳ ಅವಧಿಗೆ ವಿಸ್ತರಿಸಿದ್ದು 67266 .44 ಕೋಟಿ ರೂಪಾಯಿಗಳಷ್ಟು ವೆಚ್ಚ ಮಾಡಲಾಯಿತು.  ಒಟ್ಟು 198.78 ಲಕ್ಷ ಮೆಟ್ರಿಕ್‌ ಟನ್‌ ಆಹಾರ ಧಾನ್ಯಗಳನ್ನು ಈ ಯೋಜನೆಗಾಗಿಯೇ ಮೀಸಲಿಡಲಾಯಿತು.  80 ಕೋಟಿ ಫಲಾನುಭವಿಗಳು ಹೆಚ್ಚುವರಿಯಾಗಿ ಐದು ಕೇಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ಈ ಯೋಜನೆಯಲ್ಲಿ ಪಡೆದರು. 

ಕೋವಿಡ್‌ ದುರಿತ ಕಾಲ ಮುಗಿಯದೇ ಇರುವುದರಿಂದ ಈ ಯೋಜನೆಯನ್ನು ಮತ್ತೆ ನಾಲ್ಕು ತಿಂಗಳ ಅವಧಿಗೆ ವಿಸ್ತರಿಸಲಾಗಿದೆ. ಡಿಸೆಂಬರ್‌ 2021ರಿಂದ ಮಾರ್ಚ್‌ 2022ರವರೆಗೆ ಮುಂದುವರಿಸಲಾಗಿದೆ. ಇದಕ್ಕೆ ತಕ್ಕಂತೆ 163 ಲಕ್ಷ ಮೆಟ್ರಿಕ್‌ ಟನ್‌ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ. ರಾಜ್ಯಗಳಿಗೆ 53344.52 ಕೋಟಿ ರೂಪಾಯಿಗಳಷ್ಟು ಅನುದಾನವನ್ನು ನೀಡಲಾಗುತ್ತಿದೆ.

75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಆ.15ರಂದು ಭಾಷಣದಲ್ಲಿ ಅಕ್ಕಿ ಬಲವರ್ಧನೆಗೆ ಹೆಚ್ಚಿನ ಮಹತ್ವ ನೀಡಲಾಯಿತು.  ಅಕ್ಕಿ ಬಲವರ್ಧನೆಗೆ ಕೈಗೊಂಡ ಕ್ರಮಗಳು:

ಪ್ರತಿ ದುರ್ಬಲ ಮತ್ತು ಬಡವನಿಗೆ ಪೌಷ್ಟಿಕಾಂಶವಿರುವ ಆಹಾರ ಧಾನ್ಯವನ್ನು ನೀಡುವುದು ಪೂರೈಸುವುದು ಈ ಸರ್ಕಾರದ ಆದ್ಯತೆಯಾಗಿದೆ. ಬಡ ಮಹಿಳೆಯರು ಮತ್ತು ಮಕ್ಕಳಿಗೆ ಪೌಷ್ಟಿಕಾಂಶದ ಕೊರತೆಯಿಂದ ಮತ್ತು ಅಪೌಷ್ಟಿಕಾಂಶ ಕಾಡುವುದರಿಂದ ಅವರ ಅಭಿವೃದ್ಧಿಯಲ್ಲಿ ಅಡೆತಡೆ ಉಂಟಾಗುತ್ತಿದೆ.  ಈ ನಿಟ್ಟಿನಲ್ಲಿ ವಿವಿಧ ಯೋಜನೆಯಲ್ಲಿ ನೀಡಲಾಗುತ್ತಿರುವ ಅಕ್ಕಿಗೆ ಬಲವರ್ಧನೆ ಮಾಡುವತ್ತ ಹೆಚ್ಚು ಗಮನವಹಿಸುತ್ತಿದೆ. ಬಲವರ್ಥಿತ, ಶಕ್ತಿಯುತ ಅಕ್ಕಿಯನ್ನು ಬಡವರಿಗೆ ಪೌಷ್ಟಿಕಾಂಶವನ್ನು ಹೆಚ್ಚಿಸಲು ನೀಡಲಾಗುತ್ತಿದೆ. ಪಡಿತರದಲ್ಲಿ ನೀಡುವ ಅಕ್ಕಿಗೆ, ಮಧ್ಯಾಹ್ನದೂಟಕ್ಕೆ ಬಳಸಲು ಸಹ ಈ ಬಲವರ್ಧಿತ ಅಕ್ಕಿಯನ್ನೇ ನೀಡಲಾಗುವುದು. 2024ರವರೆಗೆ ಎಲ್ಲರಿಗೂ ಬಲವರ್ಧಿತ ಅಕ್ಕಿಯನ್ನು ನೀಡುವ ಗುರಿ ತಲುಪುವ ನಿರೀಕ್ಷೆ ಇದೆ.

 ರಕ್ತಹೀನತೆ ಹಾಗೂ ಅಪೌಷ್ಟಿಕಾಂಶವನ್ನು ಮತ್ತು ಪೌಷ್ಠಿಕ ಅಂಶಗಳ ಕೊರತೆಯನ್ನು ನೀಗಲು, ರಾಷ್ಟ್ರದಲ್ಲಿರುವ ಈ ಸಮಸ್ಯೆಯನ್ನು ನಿರ್ವಹಿಸಲು ಸರ್ಕಾರವು ಪ್ರಾಯೋಗಿಕ ಯೋಜನೆಯನ್ನು ಪರಿಚಯಿಸಲಾಗುತ್ತಿದೆ. ಅಕ್ಕಿಯ ಬಲವರ್ಧನೆ ಮತ್ತು ನಾಗರಿಕ ಸರಬರಾಜು ವ್ಯವಸ್ಥೆಯ ಮೂಲಕ ಪೂರೈಕೆ ಈ ಉದ್ದೇಶದಿಂದ ಪ್ರಾಯೋಗಿಕವಾಗಿ ಯೋಜನೆಯನ್ನು ಆರಂಭಿಸಲಾಗಿದೆ. ಮೂರು ವರ್ಷಗಳ ಆರಂಭಿಕ ಯೋಜನೆಯಲ್ಲಿ ಆಂಧ್ರ‍ಪ್ರದೇಶ, ಕೇರಳಾ, ಕರ್ನಾಟಕ, ಮಹಾರಾಷ್ಟ್ರ, ಒಡಿಶಾ, ಗುಜರಾತ್‌, ಉತ್ತರಪ್ರದೇಶ, ಆಸ್ಸಾಮ್‌, ತಮಿಳುನಾಡು, ತೆಲಂಗಾಣ, ಪಂಜಾಬ್‌, ಛತ್ತೀಸ್‌ಗಢ, ಜಾರ್ಖಂಡ್‌, ಉತ್ತರಾಖಂಡ ಮತ್ತು ಮಧ್ಯಪ್ರದೇಶ ರಾಜ್ಯಗಳನ್ನು ಗುರುತಿಸಲಾಗಿದೆ. ಈ ರಾಜ್ಯ ಸರ್ಕಾರಗಳು ತಮ್ಮ ವ್ಯಾಪ್ತಿಯ ಕೆಲವು ಜಿಲ್ಲೆಗಳನ್ನು ಗುರುತಿಸಲು ಸೂಚಿಸಲಾಗಿದೆ. ಈ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಎರಡನೆಯ ಹಂತದಲ್ಲಿ ಆಂಧ್ರಪ್ರದೇಶ, ಗುಜರಾತ್‌, ಮಹಾರಾಷ್ಟ್ರ, ತಮಿಳುನಾಡು, ಛತ್ತೀಸ್‌ಗಢ, ಉತ್ತರ ಪ್ರದೇಶ, ಒರಿಸ್ಸಾ, ತೆಲಂಗಾಣ, ಉತ್ತರಾಖಂಡ, ಮಧ್ಯಪ್ರದೇಶ ಮತ್ತು ಜಾರ್ಖಂಡ್‌ ರಾಜ್ಯಗಳಲ್ಲಿ ಬಲವರ್ಧಿತ ಅಕ್ಕಿಯನ್ನು ಹಂಚಲು ಆರಂಭಿಸಲಾಗಿದೆ.

  ಆಹಾರ ಮತ್ತು ಸರಬರಾಜು ಇಲಾಖೆಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಶಾಲಾಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಗಳು ಬಲವರ್ಧಿತ ಅಕ್ಕಿಯನ್ನು ಐಸಿಡಿಎಸ್‌ ಮತ್ತು ಪಿಎಂ ಪೋಷಣ್‌ ಯೋಜನೆಯ ಅಡಿಯಲ್ಲಿ ವಿತರಿಸಲಾಗುತ್ತಿದೆ. ಮಧ್ಯಾಹ್ನದ ಬಿಸಿಯೂಟಕ್ಕಾಗಿ ಈ ಸಂದರ್ಭದಲ್ಲಿ ದೇಶದಾದ್ಯಂತ ತೃಣ ಪೌಷ್ಠಿಕಾಂಶಗಳನ್ನು ನೀಗಿಸಲು ಬಲವರ್ಧಿತ ಅಕ್ಕಿ ನೀಡಲಾಗುತ್ತಿದೆ. ಫೋಲಿಕ್‌ ಆ್ಯಸಿಡ್‌, ವಿಟಾಮಿನ್‌ ಬಿ 12 ಹಾಗೂ ಕಬ್ಬಿಣಾಂಶವನ್ನು ನಿರ್ವಹಿಸಲು ಇವು ಸಹಾಯ ಮಾಡುತ್ತವೆ.

 ಈ ನಡುವೆ ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಸುಧಾರಣೆಯನ್ನೂ ಕೈಗೊಳ್ಳಲಾಯಿತು.

 * ಶೇ 100ರಷ್ಟು ಡಿಜಿಟಲೀಕೃತ ಪಡಿತರ ಚೀಟಿ ವ್ಯವಸ್ಥೆ, ರಾಷ್ಟ್ರೀಯ ಆಹಾರ ಸುರಕ್ಷೆ ನಿಯಮದ ಅಡಿ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 2.5 ಕೋಟಿ ಪಡಿತರ ಕಾರ್ಡುಗಳು, 80 ಕೋಟಿ ಫಲಾನುಭವಿಗಳ ಮಾಹಿತಿಯು ಪಾರದರ್ಶಕ ವ್ಯವಸ್ಥೆಯಡಿ, ಒಂದೇ ಪೋರ್ಟಲ್ ನಲ್ಲಿ ತರಲಾಗಿದೆ.

  • ಶೇ 93ಕ್ಕೂ ಹೆಚ್ಚು ಜನರು ಪಡಿತರ ಚೀಟಿಗಳೊಂದಿಗೆ ಆಧಾರ್‌ ಕಾರ್ಡುಗಳನ್ನು ಜೋಡಣೆ ಮಾಡಲಾಗಿದೆ. ಕನಿಷ್ಠಪಕ್ಷ ಕುಟುಂಬದ ಒಬ್ಬ ಸದಸ್ಯರ ಆಧಾರ್‌ ಕಾರ್ಡನ್ನು ಪಡಿತರದೊಂದಿಗೆ ಜೋಡಿಸಲಾಗಿದೆ. ಹತ್ತಿರಹತ್ತಿರ ಶೇ 90ರಷ್ಟು ಫಲಾನುಭವಿಗಳ ಪಡಿತರ ಚೀಟಿಗಳಿಗೆ ಆಧಾರ್‌ ಜೋಡಣೆ ಮಾಡಲಾಗಿದೆ.
  • ಶೇ 95ಕ್ಕೂ ಹೆಚ್ಚು (ಒಟ್ಟು 5.33 ಲಕ್ಷ ಮಳಿಗೆಗಳ ಪೈಕಿ 5.09 ಲಕ್ಷ ಮಳಿಗೆಗಳು) ನ್ಯಾಯಬೆಲೆ ಅಂಗಡಿಗಳಲ್ಲಿ ವಿದ್ಯುದೀಕರಣ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ರಿಯಾಯ್ತಿದರದ ಮಾರಾಟದಲ್ಲಿ ಪಾರದರ್ಶಕ ವ್ಯವಸ್ಥೆ ತರುವ ಉದ್ದೇಶ ಈ ಮೂಲಕ ಸಾಧಿಸಲಾಗಿದೆ.
  • ರಾಷ್ಟ್ರದಾದ್ಯಂತ ಶೇ 85ರಷ್ಟು ಡಿಜಿಟಲೀಕೃತ ಪಡಿತರ ವ್ಯವಸ್ಥೆ ಹಾಗೂ ಆಧಾರ ಜೋಡಣೆಯನ್ನು ಪೂರೈಸಲಾಗಿದೆ.ಮಾಸಿಕ ವಿತರಣೆಯ ಆಹಾರ ಧಾನ್ಯಗಳನ್ನು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಈ ವ್ಯವಸ್ಥೆಯನ್ನು ರಾಷ್ಟ್ರೀಯ ಆಹಾರ ಸುರಕ್ಷಾ ಕಾಯ್ದೆ ಅಡಿ ಜಾರಿಗೆ ತರಲಾಗಿದೆ.

ಇದಲ್ಲದೆ ಉದ್ದೇಶಿತ ನಾಗರಿಕರ ವಿತರಣಾ ವ್ಯವಸ್ಥೆಯಲ್ಲಿ 2013ರಿಂದ ತಂತ್ರಜ್ಞಾನವನ್ನು ಜಾರಿಗೆ ತರಲಾಗಿದೆ. ಪಡಿತರ ಚೀಟಿಗಳ ಡಿಜಿಟಲೀಕರಣ, ಫಲಾನುಭವಿಗಳ ಮಾಹಿತಿ ಸಂಗ್ರಹ, ಆಧಾರ್‌ ಸಂಖ್ಯೆಯ ಅಳವಡಿಕೆ ದಾಖಲೆಗಳ ನಕಲು ಆಗುವುದನ್ನೂ ತಡೆಯಲಾಗುತ್ತಿದೆ. ಅನರ್ಹ ಕಾರ್ಡುಗಳು ಹಾಗೂ ಸೂಕ್ತವಲ್ಲದ ಫಲಾನುಭವಿಗಳಿದ್ದರೆ ಅವರನ್ನು ಗುರುತಿಸಿ, ಅವುಗಳನ್ನು ನಿಷ್ಕ್ರಿಯಗೊಳಿಸುವುದು, ಇಡೀ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಆಹಾರಸುರಕ್ಷಾ ಕಾಯ್ದೆ ಅಡಿಯಲ್ಲಿ ಪಾರದರ್ಶಕ ವ್ಯವಸ್ಥೆಯನ್ನು ತರಬೇಕಿದೆ.  ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಿಂದ 2013–2021ರ ಈ ವರೆಗೆ 4.74 ಕೋಟಿ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ. ಉದ್ದೇಶಿತ ಹಾಗೂ ಸೂಕ್ತ ಫಲಾನುಭವಿಗಳಿಗೆ ಪಡಿತರ ಚೀಟಿಗಳ ಲಾಭ ದೊರೆಯಲಿ ಎಂಬ ಕಾರಣಕ್ಕೆ ಪೋರ್ಟಬಲಿಟಿ ವ್ಯವಸ್ಥೆ ತರಲಾಯಿತು

 ಪಡಿತರ ಚೀಟಿಯ ಮಾನ್ಯತೆ : ಅಂತರರಾಜ್ಯದಲ್ಲಿ ಪಡಿತರ ಚೀಟಿಗಳ ಚಲಾವಣೆಗೆ ಅನುಕೂಲವಾಗುವಂತೆ ಪೋರ್ಟಬಲಿಟಿ ವ್ಯವಸ್ಥೆಯನ್ನು ಆರಂಭಿಸಲಾಯಿತು. 2019ರ ಆಗಸ್ಟ್‌ ತಿಂಗಳಿನಿಂದ ಎಂಟು ರಾಜ್ಯಗಳಲ್ಲಿ ಈ ಸೇವೆಯನ್ನು ಪರಿಚಯಿಸಲಾಯಿತು. ಇಲ್ಲಿಯ ಕಾರ್ಯಾಚರಣೆಯನ್ನು ಗಮನಿಸಿ ಜನೆವರಿ2020ರವರೆಗೆ ಇಡೀ ಯೋಜನೆಯನ್ನು 12 ರಾಜ್ಯಗಳಿಗೆ ವಿಸ್ತರಿಸಲಾಯಿತು. ಆ ನಂತರ ನವೆಂಬರ್‌ 2021ರವರೆಗೆ ರಾಷ್ಟ್ರದಾದ್ಯತಂತ ಒಂದು ದೇಶ, ಒಂದು ಪಡಿತರ ಚೀಟಿ ಯೋಜನೆಯನ್ನು ಪರಿಚಯಿಸಿದ ನಂತರ 34 ರಾಜ್ಯಗಳಲ್ಲಿ ಈ ಸೌಲಭ್ಯ ಲಾಗೂ ಆಗುತ್ತಿದೆ. 75 ಕೋಟಿ ಫಲಾನುಭವಿಗಳು ಈ ಸೌಲಭ್ಯವಬನ್ನು ಅನುಭವಿಸುತ್ತಿದ್ದಾರೆ. ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ, ಅಂಗಡಿಯಿಂದ ತಮ್ಮ ದಿನಸಿ, ಪಡಿತರವನ್ನು ತೆಗೆದುಕೊಳ್ಳಬಹುದಾಗಿದೆ. ಛತ್ತಿಸ್‌ಗಡ ಮತ್ತು ಆಸ್ಸಾಮ್‌ ಎರಡೂ ರಾಜ್ಯದ ಪಡಿತರ ಚೀಟಿಗಳು ರಾಷ್ಟ್ರದ ಒಂದು ರಾಷ್ಟ್ರ, ಒಂದು ಪಡಿತರ ಚೀಟಿ ಎಂಬ ಪರಿಕಲ್ಪನೆಗೆ ಒಳಪಡಲಿವೆ. 

ಕೋವಿಡ್‌ ದುರಿತ ಕಾಲದಲ್ಲಿ ಆಹಾರ ಸುರಕ್ಷೆ:ಕೋವಿಡ್‌ 19ರ ದುರಿತ ಕಾಲದಲ್ಲಿ

Food security response to COVID-19 pandemic: During COVID-19 crisis, the technology driven TPDS ಉದ್ದೇಶಿತ ನಾಗರಿಕ ವಿತರಣಾ ವ್ಯವಸ್ಥೆಯಲ್ಲಿ  ಮಾಸಿಕ ವಿತರಣೆಯನ್ನು ದ್ವಿಗುಣಗೊಳಿಸಲಾಯಿತು. 80 ಕೋಟಿ ಫಲಾನುಭವಿಗಳಿಗೂ ಈ ಸಂದರ್ಭದಲ್ಲಿ ಮೇ 2021ರಿಂದ ಡಿಸೆಂಬರ್‌ 2021ರವರೆಗೂ ಈ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಇಲಾಖೆಯಿಂದ 665 ಲಕ್ಷ ಮೆಟ್ರಿಕ್‌ ಟನ್‌ ದವಸ ಧಾನ್ಯಗಳನ್ನು ವಿತರಿಸಲಾಗಿದೆ.  347 ಲಕ್ಷ ಮೆಟ್ರಿಕ್‌ ಟನ್‌ ಧಾನ್ಯಗಳನ್ನು ರಾಷ್ಟ್ರೀಯ ಆಹಾರ ಸುರಕ್ಷಾ ಕಾಯ್ದೆ ಅಡಿಯಲ್ಲಿ 318 ಲಕ್ಷ ಮೆಟ್ರಿಕ್‌ ಟನ್‌ನಷ್ಟು ಆಹಾರವನ್ನು ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆಯ ಅಡಿಯಲ್ಲಿ ವಿತರಿಸಲಾಗಿದೆ.  

ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆಯು ಪ್ರತಿ ತಿಂಗಳು, ಪ್ರತಿ ವ್ಯಕ್ತಿಗೆ 5 ಕೆ.ಜಿ. ಹೆಚ್ಚುವರಿ ದವಸಧಾನ್ಯಗಳನ್ನು ಹಂಚಲಾಯಿತು. ರಾಷ್ಟ್ರೀಯ ಆಹಾರ ಸುರಕ್ಷಾ ಕಾಯ್ದೆ ಅಡಿಯಲ್ಲಿಯೂ ಎಂಟು ತಿಂಗಳ ಅವಧಿಗೆ ಇದೇ ಪ್ರಮಾಣದ ಆಹಾರವನ್ನು ವಿತರಿಸಲಾಯಿತು.

 ನವೆಂಬರ್‌ 2021ರಲ್ಲಿ ಶೇ 94ರಷ್ಟು 261 ಲಕ್ಷ ಮೆಟ್ರಿಕ್ಟ್‌ ಟನ್‌ ನವೆಂಬರ್‌ 2021ರವರೆಗೆ ದವಸ ಮತ್ತು ಪಡಿತರವನ್ನು ಈ ಯೋಜನೆಯಲ್ಲಿ ಹಂಚಲಾಗಿದೆ. ಡಿಸೆಂಬರ್‌ ತಿಂಗಳ ಹಂಚಿಕೆ ಪ್ರಗತಿಯಲ್ಲಿದೆ.

 ಭಾರತೀಯ ಆಹಾರ ನಿಗಮವು ಆಹಾರ ಸರಬರಾಜು ಸರಾಗವಾಗುವಂತೆ ಹಲವು ಕ್ರಮಗಳನ್ನು ಕೈಗೊಂಡಿದೆ.

* 2021ರಲ್ಲಿ ( ಮಾರ್ಚ್‌ 2021ರಿಂದ ನವೆಂಬರ್‌ 302021ರವರೆಗೆ) 258 ಸರಕು ಸಾಗಣೆ ವ್ವವಸ್ಥೆಯಿಂದ ಸರಕು ಸಾಗಣೆ ಮಾಡಿ, 433 ಲಕ್ಷ ರೂಪಾಯಿಗಳನ್ನು ಉಳಿತಾಯ ಮಾಡಲಾಗಿದೆ.

ಭಾರತೀಯ ಆಹಾರ ನಿಗಮವು ಬಹುಮಾದರಿ ಸರಕು ಸಾಗಣೆ ವ್ಯವಸ್ಥೆಯಿಂದ ಸಾಕಷ್ಟು ಉಳಿತಾಯ ಮಾಡಲಾಗುತ್ತಿದೆ. ಕರಾವಳಿ ಪ್ರದೇಶದ ಬಂದರುಗಳನ್ನು ಬಳಸಿಕೊಳ್ಳುವುದು, ಆಂಧ್ರಪ್ರದೇಶದ ಬಂದರುಗಳಿಂದ ಕೇರಳಾಗೆ (ಜನೆವರಿ 2021 ಹಾಗೂ ನವೆಂಬರ್‌ 2021ರ ಅವಧಿಯಲ್ಲಿ 40551 ಲಕ್ಷ ಮೆಟ್ರಿಕ್‌ ಟನ್‌ ಕರಾವಳಿ ಹಣಕಾಸಿನ ವ್ಯವಸ್ಥೆಯನ್ನು ಅವಲಂಬಿಸಿಯೇ ಸರಬರಾಜು ಮಾಡಿದ್ದು. ಸಾಂಪ್ರದಾಯಿಕ ಮಾದರಿಯನ್ನು ಅನುಸರಿಸದೇ ಇರುವುದರಿಂದ 

ಅಗತ್ಯವಿದ್ದವರಿಗೆ ಆಹಾರ ಪೂರೈಸುವಲ್ಲಿ ಭಾರತೀಯ ಆಹಾರ ನಿಗಮ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಅದೆಲ್ಲವನ್ನೂ ಮೀರಿಯೂ ನಿಗದಿತ ಪ್ರಮಾಣದ ಆಹಾರವನ್ನು 29230 ರೇಕಗುಳಷ್ಟು ದವಸಧಾನ್ಯಗಳನ್ನು ಅಂದರೆ ಅಜಮಾಸು 818.43 ಲಕ್ಷ ಮೆಟ್ರಿಕ್‌ ಟನ್‌ ಪ್ರಮಾಣದ ಾಹಾರವನ್ನು ಸಾಗಿಸಲಾಯಿತು.

 ಆಹಾರ ಧಾನ್ಯಗಳ 2021–22ರಲ್ಲಿಯೂ ಸರಬರಾಜು ವ್ಯವಸ್ಥೆ ಸರಾಗವಾಗಿತ್ತು.

ಖಾರಿಫ್ ಮಾರುಕಟ್ಟೆಯ ಋತುವಿನಲ್ಲಿ 2021–22ರಲ್ಲಿ 396.77 ಲಕ್ಷ ಮೆಟ್ರಿಕ್‌ ಟನ್‌ ಭತ್ತ (265.96 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ರೂಪದಲ್ಲಿ) 19–12–2021ರವರೆಗೆ ಖಾರಿಫ್‌ ಮಾರ್ಕೆಟಿಂಗ್‌ ಋತುವಿನಲ್ಲಿ 77,766.76 ಕೋಟಿ ಮೌಲ್ಯದ ಆಹಾರ ಧಾನ್ಯಗಳನ್ನು ಸರಬರಾಜುಗೊಳಿಸಲಾಗಿದೆ.

  ಆರ್‌ಎಂಎಸ್‌ ಸಮಯದಲ್ಲಿ 2021–2022ರಲ್ಲಿ 433.44 ಲಕ್ಷಮೆಟ್ರಿಕ್‌ ಟನ್‌ ನಷ್ಟು ಗೋದಿಯನ್ನು 2021–22ರ ಸಾಲಿನಲ್ಲಿ 49.20 ಲಕ್ಷ ಮೆಟ್ರಿಕ್‌ ಟನ್‌ ಗೋದಿ ಸರಬರಾಜು ಮಾಡಲಾಗಿದೆ.

 ಇದರಂತೆಯೇ ಉಳಿದ ದವಸ ಧಾನ್ಯಗಳನ್ನೂ ಸರಾಗವಾಗಿ ಸರಬರಾಜು ಮಾಡಲಾಯಿತು.

ಕೆಎಂಎಸ್‌2021ರಲ್ಲಿ ರಬಿ ಬೆಳೆಯಲ್ಲಿ 2021–22ರಲ್ಲಿ ಲಾಖೆಯು ಇತರ ದಿನಸಿ, ಪಡಿತರ ಧಾನ್ಯಗಳನ್ನು ಸರಬರಾಜು ಮಾಡಲು ಅನುಮೋದನೆ ನೀಡಲಾಯಿತು. 07–12–2021 ದಿನಾಂಕದ ಪತ್ರದನುಸಾರ ಹೊಸ ಮಾರ್ಗಸೂಚಿಯನ್ನು ಅನುಸರಿಸಿ, ಈ ಕ್ರಮಕೈಗೊಳ್ಳಲಾಯಿತು.

 

 ಕೆಎಂಎಸ್‌2021–22ರಲ್ಲಿ ಅನುಮೋದನೆ ನೀಡಿದ ದವಸಧಾನ್ಯಗಳ ವಿವರ:

ಮೆಟ್ರಿಕ್‌ ಟನ್‌ ಗಳಲ್ಲಿ ವಿವರಗಳಿವ

S.No.

ರಾಜ್ಯ

ಬೆಳೆ

Approved Qunatity

1.

ಹರಿಯಾಣ

ಸಜ್ಜೆ

150000

2.

ಉತ್ತರಪ್ರದೇಶ

ಮೆಕ್ಕೆಜೋಳ

50000

3.

ಗುಜರಾತ್‌

ಸಜ್ಜೆ

ಮೆಕ್ಕೆಜೋಳ

20000

10000

4.

ಮಧ್ಯಪ್ರದೇಶ

ಜೋಳ

ಸಜ್ಜೆ

179000

 

5.

ಒರಿಸ್ಸಾ

ರಾಗಿ

25000

6.

ಮಹಾರಾಷ್ಟ್ರ

ಜೋಳ

ಸಜ್ಜೆ

ಮೆಕ್ಕೆಜೋಳ

ರಾಗಿ

75337

37930

153526

1500

 

Total

 

7,02,293

 

KMS 2020-21 (Rabi)

S. No.

State

Commodity

Approved Quantity

1.

ಮಹಾರಾಷ್ಟ್ರ

ಜೋಳ

ಮೆಕ್ಕೆಜೋಳ

30000

140548.12

 

Total

 

1,70,548.12

ಆಹಾರ ಧಾನ್ಯ ಸಂಗ್ರಹ ಮತ್ತು ಸರಬರಾಜುಗೆ ಸಂಬಂಧಿಸಿದ ಹೊಸ ಮಾರ್ಗಸೂಚಿ ಸಂಗ್ರಹಣೆ, ವಿತರಣೆ ಹಾಗೂ ರವಾನೆಗೆ ಅನುಕೂಲ ಮಾಡಿಕೊಡುತ್ತದೆ.  ಆಹಾರ ಸಂಗ್ರಹ ಹಾಗೂ ಸರಬರಾಜುಗೆ ಸಂಬಂಧಿಸಿದ ಮಾರ್ಗಸೂಚಿಯನ್ನು ಪುನರ್‌ ರಚಿಸಲಾಯಿತು. ನೂತನ ಮಾರ್ಗಸೂಚಿಗಳು ಇಂತಿವೆ.

ಸಂಗ್ರಹ ಮತ್ತು ವಿತರಣೆಯ ಅವಧಿಯಲ್ಲಿ ಜೋಳ ಮತ್ತು ರಾಗಿ 9 ಅಥವಾ 10 ತಿಂಗಳ ಅವಧಿಯಲ್ಲಿ ಹೆಚ್ಚಳ ಕಂಡುಬಂದಿದೆ. ಇದಕ್ಕೆ ಆರು ತಿಂಗಳ ಮೊದಲಿನ ಅವಧಿಗೆ ಹೋಲಿಸಿದಾಗ ಈ ಹೆಚ್ಚಳ ಕಂಡುಬಂದಿದೆ.  ಇದರಿಂದ ಈ ಬೆಳೆಗಳ ಸಂಗ್ರಹ ಮತ್ತು ಬಳಕೆ ಎರಡೂ ಹೆಚ್ಚಳವಾಗುತ್ತಿದೆ. ಪಾಲ್ಗೊಳ್ಳುವಿಕೆದಾರರ ಹಂಚಿಕೆಯಾಗುತ್ತದೆ. 

ಅಂತರರಾಜ್ಯ ಸರಬರಾಜು ಸಾಗಾಣಿಕೆಯಲ್ಲಿ ಈ ಭಾರತೀಯ ಆಹಾರ ನಿಗಮದಲ್ಲಿ ರಾಜ್ಯದ ಆಹಾರ ಸಂಗ್ರಹಗಾರದಲ್ಲಿ ಸಂಗ್ರಹಿಸಿಟ್ಟಿರುವ ಕುರಿತು ನಿರ್ವಹಿಸಲಾಗುತ್ತದೆ. 

ಹೊಸ ಮಾರ್ಗಸೂಚಿಯು ಈ ದವಸಧಾನ್ಯಗಳ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನಾಗರಿಕ ಸರಬರಾಜು ಕೇಂದ್ರದ ಮೂಲಕ ಹಂಚಲು ಇವೆಲ್ಲ ಸಹಾಯ ಮಾಡುತ್ತವೆ. ಸಾಮಾನ್ಯವಾಗಿ ಈ ಬೆಳೆಗಳನ್ನು ಕೃಷಿಯೇತರ ಭೂಮಿಯಲ್ಲಿ, ಕನಿಷ್ಠಮಟ್ಟದ ನೀರಾವರಿ ಇರುವ ಜಮೀನಿನಲ್ಲಿ ಬೆಳೆಯಲಾಗುತ್ತದೆ. ಬೆಳೆವೈವಿಧ್ಯಮಯವನ್ನು ಗಮನದಲ್ಲಿರಿಸಿಕೊಂಡು ಬೆಳೆಗಾರರನ್ನು ಪ್ರೋತ್ಸಾಹಿಸಲಾಗುತ್ತದೆ. ಸಂಗ್ರಹಾಗಾರಗಳ ಮಾರ್ಗಸೂಚಿಯಿಂದ ಸಂಗ್ರಹ ಸಾಮರ್ಥ್ಯವೂ ಹೆಚ್ಚುತ್ತದೆ. ಈ ಸೌಲಭ್ಯಗಳನ್ನು ಬಳಸುವ ಕೃಷಿಕರ ಸಂಖ್ಯೆಯೂ ಹೆಚ್ಚಳವಾಗುತ್ತದೆ.

ಸಣ್ಣ ಹಿಡುವಳಿದಾರರು ಮತ್ತು ಕೃಷಿಕರು ಫಲಾನುಭವಿಗಳಾಗಿ ಸಂಗ್ರಹಾಗಾರ ಹಾಗೂ ಹಂಚಿಕೆದಾರರಾಗಿ ಸಿರಿಧಾನ್ಯಗಳನ್ನು ಕೆ.ಜಿಗೆ ಒಂದು ರೂಪಾಯಿಯಂತೆ ನಿಗದಿಗೊಳಿಸಲಾಗಿದೆ. ಕೆಲವು ಪ್ರಮಾಣದ ಬೆಳೆಗಳನ್ನು ಸ್ಥಳೀಯ ಬಳಕೆಗಾಗಿ ಬಳಸಲು ನಿಗದಿಗೊಳಿಸಲಾಗುತ್ತದೆ.

 ಈ ಧಾನ್ಯಗಳನ್ನುಆಮ್ಲರಹಿತ ಕೃಷಿ, ಗ್ಲುಟೆನ್‌ ರಹಿತ ಇರುವ ದವಸ ಧಾನ್ಯಗಳನ್ನು ನೀಡಲಾಗುತ್ತದೆ. ಅವುಗಳ ಗಣಗಳೊಂದಿಗೆ ನಮ್ಮ ಅಪೌಷ್ಟಿಕಾಂಶ ವಿರುದ್ಧದ ಸಮರವನ್ನು ಗೆಲ್ಲುವಲ್ಲಿಯೂ ಸಹಾಯವಾಗಲಿದೆ. ಸ್ವಾಸ್ಥ್ಯ ಮತ್ತು ಆರೋಗ್ಯಕ್ಕೆ ಇವು ಪೋಶಕಾಂಶಗಳನ್ನು ದೊರಕಿಸಿಕೊಡಲಿವೆ.

 

 ಇ‌ದಲ್ಲದೆ ಮುಕ್ತ ಮಾರುಕಟ್ಟೆ ಯೋಜನೆಯಡಿಯಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

Besides, steps were taken through Open Market Sale Scheme (Domestic)

 

ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಲ್ಲಿ 2021–22ರಲ್ಲಿ 60.88 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟಮಾಡಲಿದೆ. 02–12–2021ರ ಡಿಸೆಂಬರ್‌ನಲ್ಲಿ ಟೆಂಡರ್‌ ಮೂಲಕ ಮಾರಾಟ ಮಾಡಲಾಗಿತ್ತು.  ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯ ಅಡಿಯಲ್ಲಿ ಆಹಾರ ಧಾನ್ಯಗಳ ಪೂರೈಕೆಗಾಗಿ ಉಪಯೋಜನೆಗಳನ್ನುಮಾಡಲಾಗಿದೆ. ಪ್ರತಿಷ್ಠಾನಗಳು, ಸರ್ಕಾರೇತರ ಲಾಭರಹಿತ ಸಂಸ್ಥೆಗಳ ಮೂಲಕ ಸಾಮುದಾಯಿಕ ಅಡುಗೆಮನೆಗಳಿಗೆ, ವಲಸೆ ಕಾರ್ಮಿಕರಿಗೆ ತೊಂದರೆಯಾದಾಗ ಈ ವ್ಯವಸ್ಥೆಯನ್ನು ಮಾಡಲಾಗಿದೆ.

 

ವಿಶೇಷ ವಿತರಣೆಯನ್ನು ಜೂನ್‌ 2020ರವರೆಗೆ ನಿಗದಿಗೊಳಿಸಲಾಗಿತ್ತು. ನಂತರ ಅದೇ ದರದಲ್ಲಿ ಅದೇ ನಿಯಮ ಮತ್ತು ಶರತ್ತುಗಳಿಗೆ ಒಳಪಟ್ಟಂತೆ 2020– 2021ರ ಸಾಲಿಗೂ ಮುಂದುವರಿಸಲಾಯಿತು. 2020–2021ರಲ್ಲಿ ಈ ಯೋಜನೆಯಡಿಯಲ್ಲಿ 126 ಸಂಸ್ಥೆಗಳು 10422 ಮೆಟ್ರಿಕ್‌ ಟನ್‌ ಆಹಾರಧಾನ್ಯವನ್ನು ಬಳಸಿಕೊಂಡವು. ಅಕ್ಕಿಯನ್ನು 230 ಸಂಘಸಂಸ್ಥೆಗಳು 1,246 ಮೆಟ್ರಿಕ್‌ ಟನ್‌ ಅಕ್ಕಿಯನ್ನು ಪಡೆದುಕೊಂಡಿವೆ. 25–03–2021ರವರೆಗೆ ಈ ಸರಬರಾಜು ಮಾಡಲಾಗಿದೆ.  ಕೋವಿಡ್‌ನ ಕಾಲ ಮುಂದುವರಿಯುತ್ತಿರುವುದರಿಂದ ಈ ಯೋಜನೆಯನ್ನು ಮತ್ತೆ ಮುಂದುವರಿಸಲಾಗಿದೆ.   

ಈ ಹಣಕಾಸಿನ ವರ್ಷದಲ್ಲಿ 2021–2022ರಲ್ಲಿ ಸಂಸ್ಥೆಗಳು 847 ಮೆಟ್ರಿಕ್‌ ಟನ್‌ ಅಕ್ಕಿ ಮತ್ತು ಆರು ಸಂಸ್ಥೆಗಳು 10 ಮೆಟ್ರಿಕ್‌ ಟನ್‌ ಗೋದಿಯನ್ನು 08–12–2021ರಲ್ಲಿ ಪಡೆದಿವೆ.

 ಆಹಾರ ಧಾನ್ಯಗಳನ್ನು ಮಾನವೀಯ ಆಧಾರದ ಮೇಲೆ ಇತರ ರಾಷ್ಟ್ರಗಳಿಗೂ ಹಂಚಲಾಗಿದೆ.

 1000 ಮೆಟ್ರಿಕ್‌ ಟನ್‌ ಬಾಸ್ಮತಿಯಲ್ಲದ ಅಕ್ಕಿಯನ್ನು ಮಡಗಾಸ್ಕರ್‌ಗೆ ಮಾನವೀಯತೆಯ ಆಧಾರದ ಮೇಲೆ ಕಳುಹಿಸಲಾಗಿದೆ.

 1000 ಮೆಟ್ರಿಕ್‌ ಟನ್‌ ಬಾಸ್ಮತಿಯಲ್ಲದ ಅಕ್ಕಿಯನ್ನು ಕೊಮೊರೊಸ್‌ ದೇಶಕ್ಕೂ ಮಾನವೀಯತೆಯ ಆಧಾರದ ಮೇಲೆ ಸರಬರಾಜು ಮಾಡಲಾಗಿದೆ.

ಸಕ್ಕರೆ ಕ್ಷೇತ್ರ ಹಾಗೂ ಸಕ್ಕರೆ ಬೆಲೆ ನಿಯಂತ್ರಣಕ್ಕೂ ಹಲವಾರು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

 2018–2019, 2019–2020,2020–2021ರ ಸಾಲಿನಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯನ್ನು ಪಡೆಯಲಾಗಿದೆ.

 

 ಈ ಸಾಲಿನಲ್ಲಿ ಸಕ್ಕರೆ ಬೆಲೆಯು ಇಳಿಕೆ ಕಂಡಿತ್ತು.  ಇದರಿಂದಾಗಿ ಕಬ್ಬು ಬೆಳೆಗಾರರು ಕಂಗಲಾಗಿದ್ದರು. ಇದರ ದುಷ್ಪರಿಣಾಮವೇನೆಂದರೆ ಕಬ್ಬಿನ ಬೆಳೆಗಾರರು ಈ ಋತುಮಾನದಲ್ಲಿ ಬೆಲೆಯನ್ನು ಕಾಣದಂತಾಗಿತ್ತು. ಆದರೆ ಬೇಡಿಕೆ ಮತ್ತು ಪೂರೈಕೆಯಲ್ಲಿ ಸಮತೋಲನವನ್ನು ಕಾಪಾಡಲು, ಸಕ್ಕರೆ ಬೆಲೆಯನ್ನು ಸ್ಥಿರಗೊಳಿಸಲು, ಸಕ್ಕರೆ ಫ್ಯಾಕ್ಟರಿಗಳು ಲಿಕ್ವಿಡಿಟಿಯನ್ನು ಸಮತೋಲನಗೊಳಿಸಲು ಸರ್ಕಾರವು ಈ ಕೆಳಕಂಡ ಕೆಲವು ಕ್ರಮಗಳನ್ನು ಕೈಗೊಂಡಿತು. ಅಕ್ಟೋಬರ್‌ 2020ರಿಂದ ಸೆಪ್ಟೆಂಬರ್‌2021ರವರೆಗೆ ಸಕ್ಕರೆ ಕ್ಷೇತ್ರದ ಸುಸ್ಥಿರ ಬೆಳವಣಿಗೆಗೆ ಕೈಕೊಂಡ ಕ್ರಮಗಳು:

ಸರ್ಕಾರದ ಸುತ್ತೋಲೆ 29–122020ರ ನೋಟಿಫೈ ಮಾಡಿರುವ ಪ್ರಕಾರ ಸಕ್ಕರೆ ಫ್ಯಾಕ್ಟರಿಗಳಿಗೆ ನೀಡಲಾಗದ ಯೋಜನೆಗಳನ್ನು 29–122020ರವರೆಗೆ ಮುಂದುವರಿಸಲಾಯಿತು. 60 ಲಕ್ಷ ಮೆಟ್ರಿಕ್‌ ಟನ್‌ ಸಕ್ಕರೆಯನ್ನು ರಫ್ತು ಮಾಡಲಾಯಿತು. ಗರಿಷ್ಠಗುಣಮಟ್ಟದ ಅ   ಗರಿಷ್ಠ ಸ್ವೀಕಾರಾರ್ಹ ರಫ್ತು ಪ್ರಮಾಣದಲ್ಲಿ ಗಣನೀಯ ಸುಧಾರಣೆ ತರಲಾಯಿತು. ಸರ್ಕಾರವೂ ಒಟ್ಟು 6000/ಮೆಟ್ರಿಕ್‌ ಟನ್‌ ಒಟ್ಟು ಮೊತ್ತದ ನೆರವು ನೀಡಿತು.  ಇದು 20–05–2021ರ ಹೊತ್ತಿಗೆ 4000/ಮೆಟ್ರಿಕ್‌ಟನ್‌ಗೆ ಇಳಿಕೆ ಕಂಡಿತ್ತು.  ಇದಕ್ಕೆ ಅಗತ್ಯವಿದ್ದ 3500 ಕೋಟಿ ರೂಪಾಯಿಗಳನ್ನು ಸರ್ಕಾರ ಭರಿಸಿತು. ಈ ಕಾರಣದಿಂದಾಗಿ   60 ಲಕ್ಷ ಮೆಟ್ರಿಕ್‌ ಟನ್‌ ಬದಲಿಗೆ 70 ಲಕ್ಷ ಮೆಟ್ರಿಕ್‌ ಟನ್‌ ಸಕ್ಕರೆಯನ್ನು ರಫ್ತು ಮಾಡಲಾಯಿತು. ಈ ಋತುಮಾನದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ರಫ್ತು ಮಾಡಿದ ದಾಖಲೆ ಇದಾಗಿದೆ. 

ಸರ್ಕಾರವು ಎಥೆನಾಲ್‌ ಉತ್ಪಾದನೆಗೆ ಅನುಮತಿ ನೀಡಿದೆ. ಕಬ್ಬಿನ ರಸದ ಉತ್ಪಾದನೆಯೊಂದಿಗೆ ಈ ಎಥೆನಾಲ್‌ ಹೆಚ್ಚುವರಿಯಾಗಿ ಉತ್ಪಾದಿಸಿ, ಸಕ್ಕರೆ ಉತ್ಪಾದಕರಿಗೆ ಉತ್ತೇಜನ ನೀಡಲು ನಿರ್ಧರಿಸಲಾಯಿತು. ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಯಲು ಸರ್ಕಾರವು ಇದಕ್ಕಾಗಿ ಒಂದಷ್ಟು ಸಂಭಾವನೆಯನ್ನೂ ನೀಡುವಂತೆ ಉತ್ಪಾದಿಸಿ ಪ್ರತಿ ಲೀಟರ್‌ ಎಥೆನಾಲ್‌ಗೆ 46.66 ರೂಪಾಯಿ ದರವನ್ನು ನಿರ್ಧರಿಸಲಾಯಿತು. ವಿವಿಧ ಬಗೆಯ ಎಥೆನಾಲ್‌ಗೆ ರೂ.59.08/ಲೀಟರ್‌ ಕಬ್ಬಿನ ಹಾಲಿನಿಂದ ಉತ್ಪಾದಿಸಿದ ಎಥೆನಾಲ್‌ಗೆ 63.45 ರೂಪಾಯಿ ಬೆಲೆಲ ನಿಗದಿಗೊಳಿಸಲಾಯಿತು.

  ಇಂಥದನಕ್ಕಾಗಿ ಎಥೆನಾಲ್‌ ಬಳಸುವ ಗುಣಮಟ್ಟದ ಉತ್ಪಾದನೆಗಾಗಿ ಸರ್ಕಾರವು ಡಿಸ್ಟಿಲ್ಲರಿಗಳಿಗೆ, ಗೋವಿನ ಜೋಳ ಹಾಗೂ ಅಕ್ಕಿಯ ಎಥೆನಾಲ್‌ ಉತ್ಪಾದನೆಗೂ ಉತ್ತೇಜನ ನೀಡಲಾಗುತ್ತಿದೆ. 

ಸರ್ಕಾರವು ತೆಗೆದುಕೊಂಡಿರುವ ಈ ಕ್ರಮಗಳಿಂದಾಗಿ 09–12–2021ರಿಂದಾಗಿ ರೂಪಾಯಿ 88889 ಕೋಟಿ ರೂಪಾಯಿಗಳನ್ನು ಕಬ್ಬು ಬೆಳೆಗಾರರಿಗೆ ನೀಡಲಾಗಿದೆ. 92888 ರೂಪಾಯಿ ಬಾಕಿ ಇದ್ದ ಹಣದಲ್ಲಿ ಇಷ್ಟನ್ನು ತೀರಿಸಲಾಗಿದೆ. 2020–2021ರ ಸಾಲಿನಲ್ಲಿ ಶೇ 95ರಷ್ಟು ಲೆಕ್ಕವನ್ನು ಚುಕ್ತಾ ಮಾಡಲಾಗಿದೆ.

 ಹ್ಯಾಂಡ್‌ ಸ್ಯಾನಿಟೈಸರ್‌ ಉತ್ಪಾದನೆ:

 ಕೋವಿಡ್‌ ವಿರುದ್ಧದ ಸಮರದಲ್ಲಿ ಪ್ರಮುಖ ಪಾತ್ರವಹಿಸಲಿರುವ ಹ್ಯಾಂಡ್‌ ಸ್ಯಾನಿಟೈಸರ್‌ ಗಾಗಿ CoS ಮತ್ತು ಡಿಎಫ್‌ಪಿಡಿ ಸಂಯೋಜನೆಯಲ್ಲಿ ಕೈಗಾರಿಕೆ ಹಾಗೂ ರಾಜ್ಯ ಸರ್ಕಾರಗಳಿಗೆ ಈ ಕೈಗಾರಿಕೆಗಳಿಗೆ ಹ್ಯಾಂಡ್‌ ಸ್ಯಾನಿಟೈಸರ್‌ಗಳ ಉತ್ಪಾದನೆಗೆ ಉತ್ತೇಜನ ನೀಡಲಾಗಿದೆ.

 ಕೋವಿಡ್‌ 19ಕ್ಕೂ ಪೂರ್ವದಲ್ಲಿ ಕೇವಲ 10 ಲಕ್ಷ ಲೀಟರ್‌ ವಾರ್ಷಿಕವಾಗಿ ಬಳಕೆಯಾಗುತ್ತಿತ್ತು. ಹೆಚ್ಚಾಗಿ ಆಸ್ಪತ್ರೆಗಳ ಆವರಣದಲ್ಲಿ ಮಾತ್ರ ಹೆಚ್ಚು ಬಳಸಲಾಗುತ್ತಿತ್ತು.

ಈಗ ಸರ್ಕಾರ ಹಾಗೂ ಕೈಗಾರಿಕೆಗಳ ಜಂಟಿ ಸಹಾಯದಿಂದ ಡಿಎಫ್‌ಪಿಡಿ ಮತ್ತು ರಾಜ್ಯ ಸರ್ಕಾರದ ಪ್ರೋತ್ಸಾಹದಿಂದ 912 ಡಿಸ್ಟಿಲ್ಲರಿ ಹಾಗೂ ಸ್ವತಂತ್ರ ಉತ್ಪಾದಕರು ಹ್ಯಾಂಡ್‌ ಸ್ಯಾನಿಟೈಸರ್‌ ಉತ್ಪಾದನೆಗೆ ಅನುಮತಿ ಪಡೆದಿವೆ.

 ಹ್ಯಾಂಡ್‌ ಸ್ಯಾನಿಟೈಸರ್‌ ವಾರ್ಷಿಕ 30 ಲಕ್ಷ ಲೀಟರ್‌ ಪ್ರತಿದಿನ ಉತ್ಪಾದಿಸಲಾಗುತ್ತದೆ. 30–11–2021ರವರೆಗೆ 5 ಕೋಟಿ ಲೀಟರ್‌ ಹ್ಯಾಂಡ್‌ ಸ್ಯಾನಿಟೈಸರ್‌ ಉತ್ಪಾದಿಸಲಾಗುತ್ತಿದೆ.

 ಹ್ಯಾಂಡ್‌ ಸ್ಯಾನಿಟೈಸರ್‌ ಉತ್ಪಾದನೆ ಹಾಗೂ ರಫ್ತಿಗೂ ಅನುಮತಿ ನೀಡಲಾಗಿದೆ.

 ಹೆಚ್ಚುವರಿ ಸಕ್ಕರೆ ಆಧಾರಿತ ಎಥನೆಆಲ್‌ ಹಾಗೂ ಎಥೆನಾಲ್‌ ಉತ್ಪಾದನೆಯ ಸಾಮರ್ಥ್ಯವನ್ನು ಗಮನಿಸಿ ಅದನ್ನು ಇಂಧನವಾಗಿ ಬಳಸಲೂ ಯೋಚಿಸಲಾಗಿದೆ. ಎಥೆನಾಲ್‌ ಇಂಧನ ಕಾರ್ಯಕ್ರಮದ ಮುಖ್ಯಾಂಶಗಳು:

 ಸರ್ಕಾರವು ಪೆಟ್ರೋಲ್‌ ಜೊತೆಗೆ ಶೇ 10ರಷ್ಟು ಉತ್ತಮ ಗುಣಮಟ್ಟದ ಎಥೆನಾಲ್‌ಅನ್ನು ಇಂಧನವಾಗಿ ಬಳಸಲು ಯೋಜಿಸಿದೆ. 2022ರವರೆಗೆ ಈ ಪ್ರಮಾಣವನ್ನು ಶೇ 20ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ.

ಸರ್ಕಾರವು ಸಕ್ಕರೆ ಕಾರ್ಖಾನೆಗಳಿಗೆ ಹಾಗೂ ಡಿಸ್ಟಿಲ್ಲರಿಗಳಿಗೆ ಅವರ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಕೋರಿದೆ. ಇದಕ್ಕಾಗಿ ಬ್ಯಾಂಕಿನಿಂದ ಸಾಲ ಪಡೆಯಲು ಸಹ ಸಹಾಯ ಮಾಡುತ್ತಿದೆ.  ಒಟ್ಟು ಬಂಡವಾಳ ಹೂಡಿಕೆಗೆ ಶೇ 6ರ ಬಡ್ಡಿ ದರ ಅಥವಾ ಶೇ 50ಕ್ಕೆ ಬಡ್ಡಿದರ ನಿಗದಿಗೊಳಿಸಲು ಬ್ಯಾಂಕಿಗೆ ಸೂಚಿಸಿದೆ. ಇವೆರಡರಲ್ಲಿ ಯಾವ ಬಡ್ಡಿ ಕಡಿಮೆಯಾಗುವುದೋ ಅದನ್ನೇ ನಿಗದಿ ಪಡಿಸಲು ಸೂಚಿಸಿದೆ. 

2013ರಲ್ಲಿ ಎಥೆನಾಲ್‌ ಡಿಸ್ಟಿಲೇಷನ್‌ ಸಾಮರ್ಥ್ಯವು 215 ಕೋಟಿ ಲೀಟರ್‌ನಷ್ಟಿತ್ತು. ಕಳೆದ ಏಳೂವರೆ ವರ್ಷಗಳಲ್ಲಿ ಬದಲಾದ ನೀತಿನಿಯಮಗಳಿಂದಾಗಿ, ಉತ್ಪಾದನೆಯ ಸಾಮರ್ಥ್ಯ ಹೆಚ್ಚಾಗಿದೆ. 519 ಕೋಟಿ ಲೀಟರ್‌ನಷ್ಟು ಸಾಮರ್ಥ್ಯ ಹೆಚ್ಚಾಗಿದೆ. ಎಥೆನಾಲ್‌ ಒಎಂಸಿಗಳು ಕೇವಲ  ಎಥೆನಾಲ್‌ ಪೂರೈಕೆ ವರ್ಷ 2013 –2014ರಲ್ಲಿ   38 ಕೋಟಿ  ಲೀಟರ್‌ನಷ್ಟಿತ್ತು. ಬ್ಲೆಂಡ್‌ ಮಾಡುವ ಪ್ರಮಾಣ 1.53ರಷ್ಟು ಇತ್ತು. 2020–21ರ ಹೊತ್ತಿಗೆ ಈ ಪ್ರಮಾಣ 8 ಪಟ್ಟು ಹೆಚ್ಚಾಗಿದೆ.

2013ರಿಂದ ಬ್ಲೆಂಡಿಂಗ್‌ ದರ ವಿವರ ಹೀಗಿದೆ.

 

ಎಥೆನಾಲ್‌ ಪೂರೈಕೆ ವರ್ಷ

(ಡಿಸೆಂಬರ್‌ ನವೆಂಬರ್‌)

ಪೂರೈಸಿದ ಪ್ರಮಾಣ (ಕೋಟಿ ಲೀಟರ್‌ಗಳಲ್ಲಿ)res)

Blending Percentage

2013-14

 

38

1.53 %

2014-15

67.4

2.33 %

2015-16

111.4

3.51%

2016-17

66.5

2.07%

2017-18

150.5

4.22%

2018-19

188.6

5.00%

2019-20

173

5.00%

2020-21

302.30

8.10%

 

***



(Release ID: 1785987) Visitor Counter : 322


Read this release in: English , Urdu , Hindi , Malayalam