ಕೃಷಿ ಸಚಿವಾಲಯ
azadi ka amrit mahotsav

2022ರ ಹಂಗಾಮಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ [ಎಂ.ಎಸ್.ಪಿ]ಗೆ ಸಂಪುಟ ಅನುಮೋದನೆ


ಎಂ.ಎಸ್.ಪಿಯಲ್ಲಿ ಕನಿಷ್ಠ ಶೇ 50 ರಷ್ಟು ಲಾಭ ದೊರೆಯಲಿದೆ

Posted On: 22 DEC 2021 5:21PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಸಭೆ 2022 ಮುಂಗಾರು ಹಂಗಾಮಿನಲ್ಲಿ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ [ಎಂ.ಎಸ್.ಪಿ]ಗೆ ಅನುಮೋದನೆ ದೊರೆತಿದೆ

ನ್ಯಾಯೋಚಿತ ಸಾರಾಸರಿ ಗುಣಮಟ್ಟದಲ್ಲಿ [ಎಫ್..ಕ್ಯೂ] ಗಿರಣಿ ಮಾಡಿದ ಕೊಬ್ಬರಿಗೆ ಪ್ರತಿ ಕ್ವಿಂಟಾಲ್ ಗೆ 2022 ಹಂಗಾಮಿನಲ್ಲಿ 10,590 ರೂಪಾಯಿಗೆ ಏರಿಸಲಾಗಿದೆ. 2021 ಸಾಲಿನಲ್ಲಿ ಮೊತ್ತ 10,335 ರೂಪಾಯಿ ಇತ್ತು, ದುಂಡು ಕೊಬ್ಬರಿಗೆ 2022 ಸಾಲಿಗೆ 11,000 ರೂಪಾಯಿಗೆ ಹೆಚ್ಚಳ ಮಾಡಲಾಗಿದ್ದು, ಇದು 2021 ರಲ್ಲಿ ಪ್ರತಿ ಕ್ವಿಂಟಾಲ್ ಗೆ 10,600 ರೂಪಾಯಿ ಇತ್ತು. ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ಮಿಲ್ ಮಾಡಿದ ಕೊಬ್ಬರಿಗೆ ಶೇ 51.85 ರಷ್ಟು ಮತ್ತು ದುಂಡು ಕೊಬ್ಬರಿಗೆ ಶೇ 57.73 ರಷ್ಟು ಲಾಭವನ್ನು ಇದು ಖಚಿತಪಡಿಸಿದೆ2022 ಋತುವಿನಲ್ಲಿ ಕೊಬ್ಬರಿಗೆ ಎಂ.ಎಸ್.ಪಿಯಲ್ಲಿನ ಹೆಚ್ಚಳ 2018-19 ಬಜೆಟ್ ನಲ್ಲಿ ಸರ್ಕಾರ ಘೋಷಿಸಿದಂತೆ ಅಖಿಲ ಭಾರತ ಮಟ್ಟದಲ್ಲಿ ಕನಿಷ್ಠ 1.5 ಪಟ್ಟು ಹೆಚ್ಚು ಎಂ.ಎಸ್.ಪಿಯನ್ನು ನಿಗದಿಪಡಿಸುವ ತತ್ವಕ್ಕೆ ಅನುಗುಣವಾಗಿದೆ.

ಕೃಷಿ ವೆಚ್ಚ ಮತ್ತು ದರ [ಸಿ..ಸಿ.ಪಿ] ಕುರಿತ ಆಯೋಗದ ಶಿಫಾರಸ್ಸಿನನ್ವಯ ತೀರ್ಮಾನ ಕೈಗೊಳ್ಳಲಾಗಿದೆ.

ಇದು 2022 ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಮತ್ತು ಪ್ರಗತಿಪರ ಹಂತಗಳಲ್ಲಿ ಒಂದಾದ ಕನಿಷ್ಠ ಶೇ 50 ರಷ್ಟು ಲಾಭದ ಮಾರ್ಜಿನ್ ಅನ್ನು ಇದು ಖಾತರಿಪಡಿಸುತ್ತದೆ.

ತೆಂಗು ಬೆಳೆಯುವ ರಾಜ್ಯಗಳಲ್ಲಿ ಎಂ.ಎಸ್.ಪಿಯಲ್ಲಿ ಬೆಂಬಲ ಬೆಲೆ ಕಾರ್ಯಾಚರಣೆ ಕೈಗೊಳ್ಳಲು ಕೇಂದ್ರೀಯ ನೋಡೆಲ್ ಸಂಸ್ಥೆಯಾಗಿ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ ಮತ್ತು ರಾಷ್ಟ್ರೀಯ ಗ್ರಾಹಕರ ಸಹಕಾರ ಒಕ್ಕೂಟಗಳು ಕಾರ್ಯನಿರ್ವಹಣೆಯನ್ನು ಮುಂದುವರೆಸಲಿವೆ

***


(Release ID: 1784485) Visitor Counter : 564