ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಕೋವಿಡ್-19 ಅಪ್ ಡೇಟ್- ಒಮಿಕ್ರೊನ್ ರೂಪಾಂತರಿ


ಸಾರ್ಸ್ಸಿ-ಒವಿ-2 ರೂಪಾಂತರಿ ಒಮಿಕ್ರೊನ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು

Posted On: 03 DEC 2021 1:49PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, 2021 ನವೆಂಬರ್ 26ರಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಎಚ್ ) ವರ್ಗೀಕರಿಸಿರುವ ಹೊಸ ಕೋವಿಡ್ ರೂಪಾಂತರಿ ಒಮಿಕ್ರೊನ್ (ಬಿ.11.529) ಕುರಿತಂತೆ ಪದೇ ಪದೇ ಕೇಳಲಾಗುವ ಪ್ರಶ್ನೆ (ಎಫ್ ಕ್ಯೂ) ಗಳಿಗೆ ಉತ್ತರಗಳನ್ನು ಬಿಡುಗಡೆ ಮಾಡಿದೆ.

ಎಫ್ ಕ್ಯೂಗಳನ್ನು ಆರೋಗ್ಯ ಸಚಿವಾಲಯದ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲಾಗಿದೆhttps://www.mohfw.gov.in/pdf/FAQsonOmicron.pdf

ಒಮಿಕ್ರೊನ್ ಎಂದರೇನು? ಮತ್ತು ರೂಪಾಂತರಿ  ಆಂತಕ (ವಿಒಸಿ) ಏಕೆ ಉಂಟು ಮಾಡುತ್ತದೆ ?

ದಕ್ಷಿಣ ಆಫ್ರಿಕಾದಲ್ಲಿ 2021 ನವೆಂಬರ್ 24ರಂದು ಪತ್ತೆಯಾದ ಹೊಸ ರೂಪಾಂತರಿ ಸಾರ್ಸ್ ಸಿಒವಿ-2 ಗೆ ಬಿ.1.1.529 ಅಥವಾ ಒಮಿಕ್ರೊನ್ (ಗ್ರೀಕ್ ಅಕ್ಷರಮಾಲೆಯ ಆಲ್ಫಾ, ಬೀಟಾ, ಡೆಲ್ಟಾ ಇತ್ಯಾದಿಗಳ ರೀತಿ) ಎಂದು ಕರೆಯಲಾಗುತ್ತಿದೆ. ರೂಪಾಂತರಿ ಬಹಳಷ್ಟು ಬಾರಿ ರೂಪಾಂತರ ಹೊಂದಿದೆ ಮತ್ತು ವಿಶೇಷವಾಗಿ ವೈರಲ್ ಸ್ಪೈಕ್ ಪ್ರೋಟೀನ್ ನಲ್ಲಿ 30ಕ್ಕೂ ಹೆಚ್ಚು ಸಲ ರೂಪಾಂತರಗೊಂಡಿದೆ ಮತ್ತು ಅದು ಮುಖ್ಯವಾಗಿ ರೋಗ ನಿರೋಧಕ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡಿದೆ. ಒಮಿಕ್ರೊನ್ ನಲ್ಲಿನ ರೂಪಾಂತರ ಸಂಗ್ರಹಗಳನ್ನು ನೀಡಲಾಗಿದೆ, ಇದು ಮೊದಲು ಪ್ರತ್ಯೇಕವಾಗಿ ಹೆಚ್ಚಿದ ಸೋಂಕು ಮತ್ತು ಅಥವಾ ರೋಗ ನಿರೋಧಕ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲಿದೆ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಇದ್ದಕ್ಕಿದ್ದಂತೆಯೇ ಪಾಸಿಟಿವ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಒಮಿಕ್ರೊನ್   ಆತಂಕಕಾರಿ ರೂಪಾಂತರಿ(ವಿಒಸಿ) ಎಂದು ಘೋಷಣೆ ಮಾಡಿತು.

ಸದ್ಯ ಬಳಕೆ ಮಾಡುತ್ತಿರುವ ಪರೀಕ್ಷಾ ವಿಧಾನಗಳಿಂದ ಒಮಿಕ್ರೊನ್ ಪತ್ತೆ ಹೆಚ್ಚಬಹುದೇ?

SARS-CoV- 2 ರೂಪಾಂತರಕ್ಕಾಗಿ ಹೆಚ್ಚು ಒಪ್ಪಿತ ಮತ್ತು ಸಾಮಾನ್ಯವಾಗಿ ಬಳಕೆಯಲ್ಲಿರುವ ವಿಧಾನವೆಂದರೆ RT-PCR ವಿಧಾನ. ವಿಧಾನದಲ್ಲಿ ವೈರಾಣುವಿನಲ್ಲಿರುವ ನಿರ್ದಿಷ್ಟ ಜೀನ್ ಗಳನ್ನು ಅಂದರೆ ಸ್ಪೈಕ್ (ಎಸ್) ಎನ್ವಲಪ್ಪಡ್ () ಮತ್ತು ನ್ಯೂಕ್ಲಿಯೋಕ್ಯಾಪ್ಸಿಡ್ (ಎನ್ ) ಇತ್ಯಾದಿ ವೈರಾಣುಗಳು ಇರುವಿಕೆಯನ್ನು ದೃಢಪಡಿಸುತ್ತದೆಆದರೂ ಒಮಿಕ್ರೂನ್ ಸಂದರ್ಭದಲ್ಲಿ ಎಸ್ ವಂಶವಾಹಿ ಹೆಚ್ಚು ರೂಪಾಂತರಗೊಂಡಿರುವುದರಿಂದ ಕೆಲವು ಪ್ರಮೈರ್ ಗಳು ಎಸ್ ವಂಶವಾಹಿಯ ಅನುಪಸ್ಥಿತಿಯನ್ನು ಸೂಚಿಸುವ ಫಲಿತಾಂಶಗಳಿಗೆ ಕಾರಣವಾಗಬಹುದು (ಅದನ್ನು ಎಸ್ ಜೀನ್ ಡ್ರಾಪ್ ಔಟ್ ಎಂದು ಕರೆಯಲಾಗುತ್ತದೆ). ನಿರ್ದಿಷ್ಟ ಎಸ್ ಜೀನ್ ಡ್ರಾಪ್ ಔಟ್ ಜೊತೆಗೆ ಇತರ ವೈರಾಣು ವಂಶವಾಹಿ ಪತ್ತೆಯನ್ನು ಒಮಿಕ್ರೊನ್ ರೋಗ ನಿರ್ಣಯದ ಗುಣಲಕ್ಷಣವನ್ನಾಗಿ ಬಳಕೆ ಮಾಡಬಹುದು. ಆದರೆ ಒಮಿಕ್ರೊನ್ ರೂಪಾಂತರವನ್ನು ಅಂತಿಮವಾಗಿ ದೃಢಪಡಿಸಲು ಒಮಿಕ್ರೊನ್ ರೂಪಾಂತರದ ಜಿನೋಮ್ ಸೀಕ್ವೆನ್ಸಿಂಗ್ ಅಗತ್ಯವಿದೆ.

ಹೊಸ ಆಂತಕಕಾರಿ ರೂಪಾಂತರಿ ಬಗ್ಗೆ ನಾವು ಎಷ್ಟು ಕಾಳಜಿ ವಹಿಸಬೇಕು?

ಕೋವಿಡ್-19 ಸಾಂಕ್ರಾಮಿಕ ರೋಗಶಾಸ್ತ್ರದಲ್ಲಿ ಪ್ರಸರಣ ಅಥವಾ ಹಾನಿಕಾರಕ ಬದಲಾವಣೆಯು ಹೆಚ್ಚಾದಾಗ ಮೌಲ್ಯಮಾಪನದ ನಂತರ ಡಬ್ಲೂ ಎಚ್ ರೂಪಾಂತರವನ್ನು ವಿಒಸಿ ಎಂದು ಘೋಷಿಸಿತು. ವೈರಾಣುಗಳ ಹೆಚ್ಚಳ ಮತ್ತು ರೋಗ ನಿರೋಧಕದಿಂದ ತಪ್ಪಿಸಿಕೊಳ್ಳುವುದು, ಕೋವಿಡ್-19 ಸಾಂಕ್ರಾಮಿಕ ರೋಗಶಾಸ್ತ್ರದಲ್ಲಿ ಪ್ರಾಥಮಿಕ ಸಾಕ್ಷಿಯಾಗಿ ಭಾರಿ ಬದಲಾವಣೆ, ಮರು ಸೋಂಕು ಪ್ರಕರಣಗಳ ಹೆಚ್ಚಳವಾಗುವುದು ಸೇರಿದೆ ಅಥವಾ ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಕ್ರಮಗಳು ಅಥವಾ ಲಭ್ಯವಿರುವ ರೋಗ ನಿರ್ಣಯಗಳು, ಲಭ್ಯವಿರುವ ರೋಗ ಪತ್ತೆ, ಲಸಿಕೆ ಹಾಗೂ ಚಿಕಿತ್ಸೆಗಳು.  (ಮೂಲ: ಡಬ್ಲೂ ಎಚ್ )

ಹೆಚ್ಚಿದ ರೂಪಾಂತರಗಳು, ಹೆಚ್ಚಿನ ಪ್ರಸರಣಾ ಮತ್ತು ಪ್ರತಿರಕ್ಷಣಾ  ತಪ್ಪಿಸಿಕೊಳ್ಳುವಿಕೆಯ ಅವರ ನಿರೀಕ್ಷಿತ ಲಕ್ಷಣಗಳು ಮತ್ತು ಹೆಚ್ಚಿನ ಮರು ಸೋಂಕು ಪ್ರಕರಣಗಳಂತಹ ಕೋವಿಡ್-19 ಸಾಂಕ್ರಾಮಿಕ ರೋಗಶಾಸ್ತ್ರದಲ್ಲಿನ ಹಾನಿಕಾರಕ ಬದಲಾವಣೆಯ ಪ್ರಾಥಮಿಕ ಪುರಾವೆಗಳ ಆಧಾರದ ಮೇಲೆ ಒಮಿಕ್ರೊನ್ ಅನ್ನು ಆಂತಕಕಾರಿ ರೂಪಾಂತರಿ ಎಂದು ಪ್ರಮುಖವಾಗಿ ಒತ್ತು ನೀಡಿ ಘೋಷಿಸಲಾಗಿದೆ. ಹೆಚ್ಚಿನ ಉಪಶಮನ  ಮತ್ತು  ರೋಗ ನಿರೋಧಕದ ತಪ್ಪಿಸಿಕೊಳ್ಳುವಿಕೆಗೆ ಖಚಿತ ಪುರಾವೆಗಳಿಗಾಗಿ ನಿರೀಕ್ಷಿಸಲಾಗುತ್ತಿದೆ.

ನಾವು ಯಾವ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು?

ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಮತ್ತು ಕ್ರಮಗಳು ಮೊದಲಿನಂತೆಯೇ ಇರುತ್ತವೆ. ನೀವು ಸರಿಯಾದ ರೀತಿಯಲ್ಲಿ ಮಾಸ್ಕ್ (ಮುಖಗವಸು) ಧರಿಸುವುದು ಅತ್ಯಗತ್ಯ, ಎರಡು ಡೋಸ್ ಲಸಿಕೆ ಪಡೆಯಿರಿ (ಒಂದು ವೇಳೆ ಲಸಿಕೆ ಪಡೆದಿಲ್ಲವಾದರೆ), ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಎಷ್ಟು ಸಾಧ್ಯವೋ ಅಷ್ಟು ಉತ್ತಮ ಗಾಳಿಯ ವ್ಯವಸ್ಥೆಯನ್ನು ಕಾಯ್ದುಕೊಳ್ಳಿ.

ಮೂರನೇ ಆಲೆ ಬರಲಿದೆಯೇ?

ದಕ್ಷಿಣ ಆಫ್ರಿಕಾದ ಹೊರಗಿನ ದೇಶಗಳಲ್ಲಿ ಒಮಿಕ್ರೊನ್ ಪ್ರಕರಣಗಳು ಹೆಚ್ಚಾಗಿ ಕಾಣಿಸುತ್ತಿವೆ ಮತ್ತು ಅದರ ಗುಣಲಕ್ಷಣಗಳನ್ನು ಗಮನಿಸಿದರೆ ಭಾರತ ಸೇರಿದಂತೆ ಹೆಚ್ಚಿನ ದೇಶಗಳಿಗೆ ಹರಡುವ ಸಾಧ್ಯತೆ ಇದೆ. ಆದರೆ ಪ್ರಕರಣಗಳ ಏರಿಕೆ ಪ್ರಮಾಣ, ಪ್ರಕರಣ ಹೆಚ್ಚಳದ ತೀವ್ರತೆ ಮತ್ತು ಉಂಟಾಗುವ ರೋಗದ ತೀವ್ರತೆ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ. ಅಲ್ಲದೆ, ಭಾರತದಲ್ಲಿ ಲಸಿಕೀಕರಣ ಅತ್ಯಂತ ವೇಗವಾಗಿ ಸಾಗುತ್ತಿದೆ ಮತ್ತು ಹೆಚ್ಚಿನ ಸೆರೋ ಪಾಸಿಟಿವಿಟಿಯಿಂದ ಸಾಬೀತಾಗಿರುವಂತೆ ಡೆಲ್ಟಾ ರೂಪಾಂತರಕ್ಕೆ ಹೆಚ್ಚಿನ ಮಟ್ಟಿಗೆ ಒಡ್ಡಿಕೊಂಡರೆ ರೋಗದ ತೀವ್ರತೆಯು ಕಡಿಮೆ ಎಂದು ನಿರೀಕ್ಷಿಸಲಾಗುತ್ತಿದೆ. ಆದರೂ ವೈಜ್ಞಾನಿಗಳು ಪುರಾವೆಗಳನ್ನೂ ಇನ್ನೂ ಬೆಳವಣಿಗೆ ಹೊಂದುತ್ತಿವೆ.

ಹಾಲಿ ಇರುವ ಲಿಸಿಕೆ ಒಮಿಕ್ರೊನ್ ವಿರುದ್ಧ ಕಾರ್ಯನಿರ್ವಹಿಸಲಿದೆಯೇ?

ಹಾಲಿ ಬಳಸುತ್ತಿರುವ ಲಸಿಕೆಗಳು ಒಮಿಕ್ರೊನ್ ವಿರುದ್ಧ ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ, ಸ್ಪೈಕ್ ಜೀನ್ ನಲ್ಲಿ ವರದಿ ಮಾಡಲಾದ ಕೆಲವು ರೂಪಾಂತರಗಳು ಅಸ್ತಿತ್ವದಲ್ಲಿರುವ ಲಸಿಕೆಗಳ ಪರಿಣಾಮವನ್ನು ತಗ್ಗಿಸಬಹುದು. ಆದರೆ ಲಸಿಕೆ ರಕ್ಷಣೆಯು ಪ್ರತಿಕಾಯಗಳು ಸೆಲ್ಯುಲಾರ್ ಪ್ರತಿರಕ್ಷೆಯ ಮೂಲಕವೂ ಆಗಿದ್ದು, ಅದು ತುಲನಾತ್ಮಕವಾಗಿ ಉತ್ತಮ ರಕ್ಷಣೆ ಒದಗಿಸುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆಆದ್ದರಿಂದ ಲಸಿಕೆಗಳು ಈಗಲೂ ಗಂಭೀರ ಕಾಯಿಲೆಗಳ ವಿರುದ್ಧ ಉತ್ತಮ ರೀತಿಯಲ್ಲಿ ರಕ್ಷಣೆಯನ್ನು ಒದಗಿಸುತ್ತದೆ ಮತ್ತು ಲಭ್ಯವಿರುವ ಲಸಿಕೆ ಪಡೆಯುವುದು ನಿರ್ಣಾಯಕವಾಗಿದೆ. ಹಾಗಾಗಿ ಅರ್ಹರೆಲ್ಲರೂ ಯಾರು ಲಸಿಕೆ ಪಡೆದಿಲ್ಲವೋ ಅವು ಲಸಿಕೆ ಪಡೆಯುವುದು ಹೆಚ್ಚು ಸೂಕ್ತ.

ಭಾರತ ಹೇಗೆ ಪ್ರತಿಕ್ರಿಯಿಸುತ್ತಿದೆ?

ಭಾರತ ಸರ್ಕಾರವು ಪರಿಸ್ಥಿತಿಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಕಾಲ ಕಾಲಕ್ಕೆ ಸೂಕ್ತ ಮಾರ್ಗಸೂಚಿಗಳನ್ನು ನೀಡುತ್ತಿದೆ. ಮಧ್ಯೆ, ವೈಜ್ಞಾನಿಕ ಮತ್ತು ವೈದ್ಯಕೀಯ ಸಮುದಾಯವು ರೋಗ ಪತ್ತೆ ವಿಧಾನವನ್ನು ಅಭಿವೃದ್ಧಿಪಡಿಸಲು ಮತ್ತು ಅದನ್ನು ಪರೀಕ್ಷೆಗಳಿಗೆ ನಿಯೋಜಿಸಲು, ಜಿನೋಮ್ ಸರ್ವೇಲೆನ್ಸ್ ಕೈಗೊಳ್ಳಲು, ವೈರಾಣು ಮತ್ತು ಸಾಂಕ್ರಾಮಿಕಗಳ ಗುಣಲಕ್ಷಣಗಳ ಪುರಾವೆಗಳನ್ನು ಕಂಡುಹಿಡಿಯಲು ಮತ್ತು ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸಲು ಸಜ್ಜಾಗಿದೆ.

ಮತ್ತೆ ರೂಪಾಂತರಿಗಳು ಬರಬಹುದೇ?

ರೂಪಾಂತರಗಳು ವಿಕಸನದ ಸಾಮಾನ್ಯ ಭಾಗವಾಗಿದೆ ಮತ್ತು ಎಲ್ಲಿಯವರೆಗೆ ವೈರಾಣು ಸೋಂಕು ಹರಡುತ್ತದೆಯೋ, ಎಲ್ಲಿಯವರೆಗೆ ಅದು ಪುನರಾವರ್ತಿಸಲು ಮತ್ತು ಪ್ರಸರಣ ಮಾಡಲು ಸಾಧ್ಯವಿರುತ್ತದೆಯೋ ಅಲ್ಲಿಯವರೆಗೆ ವಿಕಸನಗೊಳ್ಳುತ್ತಲೇ ಇರುತ್ತವೆ. ಎಲ್ಲ ರೂಪಾಂತರಿಗಳು ಅಪಾಯಕಾರಿಯಲ್ಲ, ಬಹುತೇಕವು ರೀತಿ ಇರುವುದಿಲ್ಲ, ಅದರೆ ನಾವು ಅದನ್ನು ಗಮನಿಸಿರುವುದಿಲ್ಲಜನರು ಹೆಚ್ಚು ಸೂಕ್ಷ್ಮವಾಗಿದ್ದಾಗ ಮತ್ತು ಹೆಚ್ಚು ಸಾಂಕ್ರಾಮಿಕಕ್ಕೆ ತೆರೆದುಕೊಳ್ಳುತ್ತಿದ್ದಾಗ ಮಾತ್ರ ಅಂತಹವರಿಗೆ ಪ್ರಾಮುಖ್ಯತೆ ಸಿಗಲಿದೆ. ರೂಪಾಂತರಿಗಳ ಉತ್ಪಾದನೆಯನ್ನು ತಪ್ಪಿಸುವ ಪ್ರಮುಖ ಹಂತವೆಂದರೆ ಸೋಂಕಿನ ಸಂಖ್ಯೆಯನ್ನು ಕಡಿಮೆ ಮಾಡುವುದು.

***


(Release ID: 1777659) Visitor Counter : 371