ಪ್ರಧಾನ ಮಂತ್ರಿಯವರ ಕಛೇರಿ

ಡಿಸೆಂಬರ್ 3ರಂದು ಇನ್ಫಿನಿಟಿ ಫೋರಂ ಉದ್ಘಾಟಿಸಲಿರುವ ಪ್ರಧಾನಮಂತ್ರಿ


'ಫಿನ್ ಟೆಕ್ ಬಿಯಾಂಡ್ ನೆಕ್ಸ್ಟ್', ಫಿನ್ ಟೆಕ್ ಬಿಯಾಂಡ್ ಫೈನಾನ್ಸ್ ಮತ್ತು ಫಿನೆ ಟೆಕ್ ಬಿಯಾಂಡ್ ಬೌಂಡರೀಸ್ ಸೇರಿದಂತೆ ಉಪ ಘೋಷಣೆಯನ್ನು ಒಳಗೊಂಡ ' ಬಿಯಾಂಡ್ ಮುಖ್ಯ ಘೋಷಣೆ ಕುರಿತು ಒತ್ತು ನೀಡಲಿರುವ ವೇದಿಕೆ

Posted On: 30 NOV 2021 10:28AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  2021 ಡಿಸೆಂಬರ್ 3ರಂದು  ಬೆಳಗ್ಗೆ 10 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಣಕಾಸು ತಂತ್ರಜ್ಞಾನ - ಫಿನ್ ಟೆಕ್ ಕುರಿತ ಚಿಂತನಾ ನಾಯಕತ್ವ ವೇದಿಕೆ - ಫಿನ್ ಟೆಕ್ ಫೋರಂ ಅನ್ನು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮವನ್ನು ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ  ಕೇಂದ್ರ ಪ್ರಾಧಿಕಾರ (ಐಎಫ್ ಎಸ್ ಸಿಎ) ಭಾರತ ಸರ್ಕಾರದ  ಸಹಭಾಗಿತ್ವದಲ್ಲಿ  ಗಿಫ್ಟ್ ಸಿಟಿ ಮತ್ತು  ಬ್ಲೂಮ್ ಬರ್ಗ್ ಸಹಯೋಗದಲ್ಲಿ  2021  ಡಿಸೆಂಬರ್ 3 ಮತ್ತು 4ರಂದು ಆಯೋಜಿಸಿದೆ.

ವೇದಿಕೆಯ ಮೊದಲನೇ ಆವೃತ್ತಿಯಲ್ಲಿ ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ ಮತ್ತು  ಯುಕೆ ಪಾಲುದಾರ ರಾಷ್ಟಗಳಾಗಿವೆ.

ಫಿನ್ ಟೆಕ್ ವೇದಿಕೆ  ನೀತಿ, ವ್ಯಾಪಾರ ಮತ್ತು  ತಂತ್ರಜ್ಞಾನಕ್ಕೆ ಸಂಬಂಧಿಸಿದ ಜಗತ್ತಿನ  ನೈಪುಣ್ಯತೆ ಹೊಂದಿರುವವರನ್ನು ಒಗ್ಗೂಡಿಸಲಿದೆ ಮತ್ತು ಅವರು  ಚರ್ಚೆ ನಡೆಸುವರು.

ಎಲ್ಲರನ್ನು ಒಳಗೊಂಡ ಪ್ರಗತಿಗಾಗಿ ಹಣಕಾಸು , ತಂತ್ರಜ್ಞಾನ ಉದ್ಯಮ ಮತ್ತು ಮುಖ್ಯವಾಗಿ ಮನುಕುಲಕ್ಕೆ ಸೇವೆ ಸಲ್ಲಿಸಲು ಹೇಗೆ  ತಂತ್ರಜ್ಞಾನ ಮತ್ತು ಆವಿಷ್ಕಾರಗಳ  ಒಳನೋಟವನ್ನು ಬಳಸಿಕೊಳ್ಳಬಹುದು ಎಂಬ ಕುರಿತು ಚರ್ಚೆ ನಡೆಸಿ, ರೂಪುರೇಷೆಗಳನ್ನು ಸಿದ್ಧಪಡಿಸುವರು.

ವೇದಿಕೆಯ  ಕಾರ್ಯಸೂಚಿ ' ಬಿಯಾಂಡ್ ' ಎಂದರೆ  ಅದನ್ನು ಮೀರಿದ  ಎಂಬ  ಘೋಷಣೆ  ಮುಖ್ಯವಾಗಿದೆಜೊತೆಗೆ  ಆರ್ಥಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸಲು  ಜಾಗತಿಕ ಮಟ್ಟದಲ್ಲಿ ಆಗುತ್ತಿರುವ  ಬೆಳವಣಿಗೆಗಳು  ಭೌಗೋಳಿಕ ಗಡಿಯಾಚೆ ಸರ್ಕಾರ ಮತ್ತು  ವಾಣಿಜ್ಯೋದ್ಯಮಿಗಳು ಒತ್ತು ನೀಡುತ್ತಿರುವುದು  ಬಾಹ್ಯಾಕಾಶ ತಂತ್ರಜ್ಞಾನ, ಹಸಿರು ತಂತ್ರಜ್ಞಾನ, ಕೃಷಿ ತಂತ್ರಜ್ಞಾನದಿಂದ  ಸುಸ್ಥಿರ ಅಭಿವೃದ್ಧಿಯತ್ತ ಸಾಗುವುದು ಸೇರಿದಂತೆ  ಉದಯೋನ್ಮುಖ ವಲಯಗಳಲ್ಲಿ  ಹಣಕಾಸು  ಹೊರತುಪಡಿಸಿದ  ಫಿನ್ ಟೆಕ್ ಉದ್ಯಮ ಮತ್ತು  ಫಿನ್ ಟೆಕ್ ಬಿಯಾಂಡ್ ನೆಕ್ಸ್ಟ್ ನಲ್ಲಿ  ಕ್ವಾಂಟಮ್ , ಕಂಪ್ಯೂಟಿಂಗ್ ಕ್ಲೌಡ್ ಹೇಗೆ ಭವಿಷ್ಯದ ಫಿನ್ ಟೆಕ್ ಉದ್ಯಮದ  ಸ್ವರೂಪದ ಮೇಲೆ ಪರಿಣಾಮ ಬೀರುತ್ತದೆ ಮತ್ತು  ಹೊಸ ಅವಕಾಶಗಳನ್ನು ಉತ್ತೇಜಿಸುತ್ತದೆ ಎಂಬ ಕುರಿತು  ಚರ್ಚೆ ನಡೆಸಲಾಗುವುದು.

ವೇದಿಕೆಯಲ್ಲಿ  ಸುಮಾರು 70ಕ್ಕೂ ಅಧಿಕ ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಳ್ಳುವರು  ಫೋರಂನ  ಪ್ರಧಾನ ಭಾಷಣಕಾರರಾಗಿ  ಮಲೇಷ್ಯಾದ  ಹಣಕಾಸು ಸಚಿವರಾದ ಶ್ರೀ  ಝಾಫರುಲ್ಲಾ ಅಜೀಝ್ ಇಂಡೋನೇಷ್ಯಾದ ಹಣಕಾಸು ಸಚಿವ ಶ್ರೀಮತಿ  ಮುಲ್ಯಾನಿ  ಇಂದ್ರಾವತಿ ಇಂಡೋನೇಷ್ಯಾದ ಸೃಜನಾತ್ಮಕ ಆರ್ಥಿಕ ಸಚಿವ ಶ್ರೀ ಸ್ಯಾಂಡಿಯಾಗ ಎಸ್ ಯುನೊ, ರಿಲಯೆನ್ಸ್ ಉದ್ಯಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಮುಖೇಶ್ ಅಂಬಾನಿ, ಸಾಫ್ಟ್ ಬ್ಯಾಂಕ್ ಗ್ರೂಪ್ ಅಧ್ಯಕ್ಷ ಮತ್ತು ಸಿಇಓ ಶ್ರೀ  ಮಸಾಯೋಶಿ  ಸೋನ್ ಐಬಿಎಂ ಸಿಇಓ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಅರವಿಂದ ಕೃಷ್ಣ, ಕೊಟಕ್ ಮಹೇಂದ್ರ ಬ್ಯಾಂಕ್ ಲಿಮಿಟೆಡ್ ಸಿಇಓ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಉದಯ್ ಕೊಟಕ್ ಮತ್ತಿತರರು ಭಾಗವಹಿಸಲಿದ್ದಾರೆ.

ನೀತಿ ಆಯೋಗ, ಇನ್ವೆಸ್ಟ್ ಇಂಡಿಯಾ, ಫಿಕಿ ಮತ್ತು ನ್ಯಾಸ್ ಕಾಂ ಮತ್ತಿತರರು  ವರ್ಷದ ಪೋರಂನ ಪ್ರಮುಖ ಪಾಲುದಾರರಾಗಿದ್ದಾರೆ.

ಐಎಫ್ ಎಸ್ ಸಿಎ ಕುರಿತು

ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರ ಪ್ರಾಧಿಕಾರ - IFSCA

ಗುಜರಾತ್ ಗಾಂಧಿನಗರದ  ಗಿಫ್ಟ್ ಸಿಟಿಯಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಇದು  2019  ಅಂತಾರಾಷ್ಟ್ರೀಯ ಹಣಕಾಸು  ಸೇವೆಗಳ  ಕೇಂದ್ರ ಪ್ರಾಧಿಕಾರ ಕಾಯ್ದೆಯಡಿ  ಸ್ಥಾಪಿಸಲ್ಪಟ್ಟಿದೆ. ಇದು   ಭಾರತದಲ್ಲಿ ಹಣಕಾಸು  ಉತ್ಪನ್ನಗಳು, ಸೇವೆಗಳು ಮತ್ತು ಹಣಕಾಸು ಸಂಸ್ಥೆಗಳು ಅಂತಾರಾಷ್ಟ್ರೀಯ ಹಣಕಾಸು  ಕೇಂದ್ರದಡಿ  ನಿಯಂತ್ರಣ ಮತ್ತು ಅಭಿವೃದ್ಧಿಗಾಗಿ ಒಗ್ಗೂಡಿ ಕೆಲಸ ಮಾಡಲಿವೆ.

ಪ್ರಸ್ತುತ  ಗಿಫ್ಟ್ ಐಎಫ್ ಎಸ್ ಸಿಎ  ಭಾರತದಲ್ಲಿ ಮೊದಲ ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ  ಕೇಂದ್ರವಾಗಿದೆ.

***



(Release ID: 1776422) Visitor Counter : 222