ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಆಹಾರ ಮತ್ತು ಪಡಿತರ ಇಲಾಖೆಯಲ್ಲಿ ಆಜಾದಿ ಕಾ ಅಮೃತ್‌ ಮಹೋತ್ಸವ ಆಚರಣೆ


ಆಹಾರ ಹಾಗೂ ಪಡಿತರ ಹಂಚಿಕೆಯಿಂದ ಆಹಾರ ಸುರಕ್ಷೆಯ ವ್ಯವಸ್ಥೆಯಲ್ಲಿ ಸುಧಾರಣೆ, ಭಾರತದ ಯಾನ ವಿಷಯ ಆಧರಿಸಿ ವೆಬಿನಾರ್‌

ಹಲವಾರು ಅಡಚಣೆಗಳ ನಡುವೆಯೂ 600 ಲಕ್ಷ ಮೆಟ್ರಿಕ್‌ ಟನ್‌ ದವಸಧಾನ್ಯಗಳನ್ನು, ಸುಮಾರು 2 ಲಕ್ಷ ಕೋಟಿ ಮೌಲ್ಯದ ಧಾನ್ಯಗಳನ್ನು 2020–2021ರ ಅವಧಿಯ ಹದಿನೈದು ಮಾಸಗಳಲ್ಲಿ 80 ಕೋಟಿ ಫಲಾನುಭವಿಗಳಿಗೆ ಹಂಚಲಾಗಿದೆ

ಭಾರತದಿಂದ ಜಾಗತಿಕ ಪಾಠಳ ಬಿಶೊ ಪಾರಾಜುಲಿ ನಿರ್ದೇಶಕರು ವಿಶ್ವಸಂಸ್ಥೆ ವಿಶ್ವ ಆಹಾರ ಕಾರ್ಯಕ್ರಮ

ಆಹಾರ ಮತ್ತು ಪಡಿತರ ವಿತರಣೆ ಇಲಾಖೆಯಿಂದ ಸ್ವಾತಂತ್ರ್ಯೋತ್ತರ ಭಾರತ, ಸ್ವತಂತ್ರ ಭಾರತ ಹಾಗೂ 21ನೇ ಶತಮಾನದ ಭಾರತೀಯ ಯಾನದ ಕುರಿತು ಹಿರಿಯ ಅಧಿಕಾರಿಗಳಿಂದ ಅನುಭವ ಹಂಚಿಕೆ

ಹಸಿವು ಮತ್ತು ಬಡತನ ನಿವಾರಣೆಯಲ್ಲಿ ಆಹಾರ ಹಾಗೂ ಪಡಿತರ ನಿವಾರಣೆ ಇಲಾಖೆಯ ಪಾತ್ರ

Posted On: 15 NOV 2021 4:48PM by PIB Bengaluru

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅಭಿವೃದ್ಧಿಪರ ಭಾರತದ ಸುವರ್ಣ ಇತಿಹಾಸದ ಚರ್ಚೆಯು ಸೋಮವಾರ ಆಹಾರ ಹಾಗೂ ಸಾರ್ವಜನಿಕ ವಿತರಣೆಯ ಇಲಾಖೆಯು ಗ್ರಾಹಕ ವ್ಯವಹಾರ ಹಾಗೂ ಆಹಾರ ಮತ್ತು ಪಡಿತರ ಇಲಾಖೆಯೊಂದಿಗೆ ಆಯೋಜಿಸಿದ ಕಾರ್ಯಕ್ರಮದಲ್ಲಿ ವಿಷಯದ ಮೆಲುಕು ಆರಂಭವಾಯಿತು.  

ಸಮಾರಂಭದ ಮೊದಲ ದಿನ ಇಲಾಖೆಯು ವಿಶ್ವಸಂಸ್ಥೆಯು ಜಾಗತಿಕ ಆಹಾರ ಕಾರ್ಯಕ್ರಮದ ಜೊತೆ ಜಂಟಿಯಾಗಿ ಆಹಾರ ಹಾಗೂ ಪಡಿತರ ಹಂಚಿಕೆಯ ಉಸಧಾರಣೆಗಳ ಕುರಿತು ವೆಬಿನಾರ್‌ ಆಯೋಜಿಸಲಾಗಿತ್ತು. ಆಹಾರ ಭದ್ರತೆಗಾಗಿ ಆಹಾರ ಹಾಗೂ ಪಡಿತರ ಹಂಚಿಕೆಯಲ್ಲಿ ಭಾರತದ ಯಾನ ಎಂಬ ವಿಷಯದ ಕುರಿತು ಹಲವಾರು ಹಿರಿಯ ಅಧಿಕಾರಿಗಳು ತಮ್ಮ ಉಪನ್ಯಾಸವನ್ನು ಹಂಚಿಕೊಂಡರು. ಅತ್ಯುನ್ನತ ಶ್ರೇಣಿಯ ಅಧಿಕಾರಿಗಳು ಆಹಾರ ಸುರಕ್ಷೆ ಹಾಗೂ ಸುಭದ್ರತೆಗೆ ಸಂಬಂಧಿಸಿದಂತೆ ತಂತ್ರಜ್ಞಾನದ ಬಳಕೆ ಮಾಡಿಕೊಂಡಿರುವ ಬಗೆ, ಕೋವಿಡ್‌ 19 ಪಿಡುಗಿನ ಸಮಯದಲ್ಲಿ ನಿರ್ವಹಿಸಿದ ಬಗೆ, ಕಾರ್ಯಾನುಷ್ಠಾನದ ಅಧ್ಯಯ, ಕೃತಕ ಬುದ್ಧಿಮತ್ತೆಯ ಬಳಕೆ, ನವ್ಯ ತಂತ್ರಜ್ಞಾನದ ಬಳಕೆ ಮುಂತಾದವುಗಳನ್ನು ಚರ್ಚಿಸಲಾಗಿದೆ.

ಭಾರತದಲ್ಲಿ ಸಾರ್ವಜನಿಕ ಪಡಿತರ ವಿತರಣೆಗೆ ಸಂಬಂಧಿಸಿದಂತೆ ಸುದೀರ್ಘವಾದ ಇತಿಹಾಸವಿದೆ. ದವಸ ಧಾನ್ಯಗಳ ಹಂಚಿಕೆಯನ್ನು ಸ್ವಾತಂತ್ರ್ಯೋತ್ತರ ಭಾರತದಲ್ಲಿಯೇ ಆರಂಭಿಸಲಾಗಿತ್ತು. ನಮ್ಮಲ್ಲಿ ಹಸಿವಿನಿಂದಾಗಿ, ಬರದಿಂದಾಗಿ ಸಾಲು ಸಾಲು ಸಾವುಗಳಾಗಿದ್ದು, ಸಾಮೂಹಿಕ ಸಾವುಗಳಾಗಿದ್ದ ನೆನಪುಗಳು ಈಗಲೂ ಹಸಿಹಸಿಯಾಗಿವೆ. ಕ್ಷಾಮದಿಂದಾಗಿ ಆದ ಸಾವುಗಳ ಅಧ್ಯಾಯ ಈಗಾಗಲೇ ಭಾರತೀಯ ಇತಿಹಾಸದ ಪುಟಗಳಲ್ಲಿ ಸೇರ್ಪಡೆಯಾಗಿದೆ. ಆಹಾರ ಸುರಕ್ಷೆಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗಳಾಗಿವೆ. ಬದಲಾವಣೆಯ ಪರ್ವದಲ್ಲಿ ಭಾರತವು ದಾಪುಗಾಲು ಹಾಕಬೇಕಾಯಿತು. ಆಹಾರ ಭದ್ರತೆ, ಅಪೌಷ್ಟಿಕಾಂಶ, ಬಡತನ ಮುಂತಾದವುಗಳ ನಿವಾರಣೆಯಲ್ಲಿ ಆಹಾರ ಹಾಗೂ ಪಡಿತರ ಇಲಾಖೆಯ ಮೂಲಕ ನೂತನ ನೀತಿಗಳನ್ನು ನಿರೂಪಿಸಿ, ಪಡಿತರ ವ್ಯವಸ್ಥೆ ಎಲ್ಲರ ಗಮನ ಸೆಳೆಯುವಂತಾಗಿದೆ.

70 ಹಾಗೂ 80 ದಶಕದಲ್ಲಿ ಪಡಿತರ ವಿತರಣೆಯನ್ನು ಗ್ರಾಮೀಣ ಭಾರತಕ್ಕೆ ವಿಸ್ತರಿಸಲಾಯಿತು. ಇದಕ್ಕೆ ಅನುಗುಣವಾಗಿ 1997ರಲ್ಲಿ ಉದ್ದೇಶಿತ ಸಮುದಾಯಗಳಿಗೆಂದೇ ಪಡಿತರ ವಿತರಣೆಯ ವ್ಯವಸ್ಥೆ ಆರಂಭಿಸಿದ್ದು, ರಾಷ್ಟ್ರೀಯ ಆಹಾರ ಸುರಕ್ಷೆ ಮಸೂದೆಯ ಅಡಿಯಲ್ಲಿ ಕಾರ್ಯಾನುಷ್ಠಾನಕ್ಕೆ ತರಲಾದ ಕ್ರಮವಾಗಿತ್ತು. ಇದನ್ನು 2016ರಲ್ಲಿ ಪೂರೈಸಲಾಯಿತು ಎಂದು ಆಹಾರ ಹಾಗೂ ವಿತರಣೆ ಇಲಾಖೆಯ ಜಂಟಿ ಕಾರ್ಯದರ್ಶ ಜಗನ್ನಾಥನ್‌ ಅವರು ಗಮನಸೆಳೆದರು. ಭಾರತದಲ್ಲಿ ತಂತ್ರಜ್ಞಾನ ಆಧಾರಿತ ಪಡಿತರ ವಿತರಣೆ ಮತ್ತು ಪರಿಣಾಮ ಎಂಬ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು.

ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುವಾಗ ಉದ್ದೇಶಿತ ಸಾರ್ವಜನಿಕ ಹಂಚಿಕೆ ವ್ಯವಸ್ಥೆಯು ಪಾರದರ್ಶಕ ವ್ಯವಸ್ಥೆಯನ್ನು ಅಳವಡಿಸಿಕೊಂಡು, ಪರಿಣಾಮಕಾರಿಯಾಗಿ ಕಾರ್ಯಾನುಷ್ಠಾನಕ್ಕೆ ತರಲಾಗಿದೆ. ಆಹಾರ ಧಾನ್ಯಗಳ ವಿತರಣೆಯಲ್ಲಿ ತಂತ್ರಜ್ಞಾನದ ಬಳಕೆಯಿಂದಾಗಿ ಫಲಾನುಭವಿಗಳಿಗೆ ತಲುಪಿಸುವಲ್ಲಿ ಪಾರದರ್ಶಕ ವ್ಯವಸ್ಥೆಯನ್ನು ತರಲಾಗಿದೆ. ಸರ್ಕಾರವು ಕಳೆದ ಆರೇಳು ವರ್ಷಗಳಲ್ಲಿ ರಾಷ್ಟ್ರೀಯ ಆಹಾರ ಭದ್ರತೆ ಮಸೂದೆ 2013 ಅಡಿಯಲ್ಲಿ ಇದು ಪರಿಣಾಮಕಾರಿಯಾಗಿ ಜಾರಿತರಲಾಗಿದೆ. ಒಂದು ದೇಶ, ಒಂದು ಪಡಿತರ ಚೀಟಿ ಎಂಬ ಪರಿಕಲ್ಪನೆಯಲ್ಲಿ ಆರಂಭವಾದ ಯೋಜನೆಯು 34 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಇ ಜಾರಿಗೆ ತರಲಾಯಿತು. ರಾಷ್ಟ್ರೀಯ ಆಹಾರ ಭಧ್ರತೆ ಮಸೂದೆ ಅಡಿಯ ಫಲಾನುಭವಿಗಳಿಗೆ ಸಮರ್ಪಕವಾಗಿ ದೊರೆಯುವಂತಾಯಿತು. ವಿಶೇಷವಾಗಿ ವಲಸೆ ಹೋಗುವ ಫಲಾನುಭವಿಗಳನ್ನು ಗಮನದಲ್ಲಿರಿಸಿಕೊಂಡು ಯೋಜನೆಯನ್ನು ಜಾರಿಗೆ ತರಲಾಯಿತು. ಕೋವಿಡ್‌ 19 ಪಿಡುಗಿನ ಕಾಲದಲ್ಲಿ ರೂ.2 ಲಕ್ಷ ಕೋಟಿ ಮೌಲ್ಯದ ಆಹಾರ ಧಾನ್ಯಗಳನ್ನು ಉಚಿತವಾಗಿ ಹಂಚಲಾಯಿತು. 2020–2021 ಹದಿನೈದು ತಿಂಗಳ ಅವಧಿಯಲ್ಲಿ 80 ಕೋಟಿ ಫಲಾನುಭವಿಗಳು ಇದರ ಅನುಕೂಲ ಪಡೆದರು. ಇಂಥ ಪರೀಕ್ಷೆಯ ಸಮಯದಲ್ಲಿಯೂ ಭಾರತವು ಆಹಾರ ಭದ್ರತೆಯ ವಿಷಯಗದಲ್ಲಿ ಹೊಳೆಯುವಂತಾಯಿತು.

ಬಿಷೊ ಪಾರಜುಲಿ, ದೇಶದ ವಿಶ್ವಸಂಸ್ಥೆಯ ವಿಶ್ವ ಆಹಾರ ಯೋಜನೆಯ ನಿರ್ದೇಶಕಿಯಾಗಿರುವ ಬಿಷೊ ಪಾರಾಜುಲಿ ಅವರು ಕೋವಿಡ್‌ 19 ಪಿಡುಗಿನ ಸಮಯದಲ್ಲಿ ಆಹಾರ ಭದ್ರತೆಯ ತಲ್ಲಣಗಳು ವಿಷಯದ ಕುರಿತು ಮಾತನಾಡುತ್ತ ಭಾರತವು ಆರೋಗ್ಯ ಸೇವೆಯಲ್ಲಷ್ಟೇ ಅಲ್ಲ, ಆಹಾರ ವಿತರಣೆಯಲ್ಲಿಯೂ ಭಾರತದ ಸ್ಪಂದಿಸಿದ್ದು ಅಮೋಘವಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹಸಿರುಕ್ರಾಂತಿಯ ಮೂಲಕ ಆಹಾರ ಉತ್ಪಾದನೆಯಲ್ಲಿ ಭಾರತವು ಅತ್ಯುತ್ತಮ ಸಾಧನೆ ತೋರಿದೆ. ಆಹಾರ ಭದ್ರತೆಯನ್ನು ಉತ್ತಮಪಡಿಸುವಲ್ಲಿ ಶಾಲಾಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಮಕ್ಕಳ ಅಭಿವೃದ್ಧಿಗೆ ಸಮಗ್ರ ಯೋಜನೆ ಮತ್ತಿತರ ಯೋಜನೆಗಳ ಮೂಲಕ ದೇಶವು ಜಾಗತಿಕ ಪಾಠಗಳನ್ನು ನೀಡುತ್ತಿದೆ ಎಂದರು.

ಭಾರತದ ಸ್ವಾತಂತ್ರ್ಯೋತ್ಸವ ಹಾಗೂ ಆಹಾರ ಸುರಕ್ಷೆಯ ಪ್ರಯಾಣವು ಅತ್ಯಂತ ಪ್ರೇರಣಾದಾಯಕವಾಗಿದೆ. ದೇಶವು ಆಹಾರ ಸುರಕ್ಷೆಗೆ ಸಂಬಂಧಿಸಿದ ಮೂರೂ ಹಂತಗಳಲ್ಲಿ ಗಮನೀಯವಾದ ಸುಧಾರಣೆ ಹಾಗೂ ಬೆಳವಣಿಗೆಯನ್ನು ಸಾಧಿಸಿದೆಮೊದಲನೆಯದು: ಆಹಾರ ಉತ್ಪಾನೆ, ಆಹಾರ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ, ಎರಡನೆಯದ್ದು ಪೌಷ್ಟಿಕಾಂಶದ ಕೊರತೆ ನೀಗಿಸಿದ್ದು, ಸುಸ್ಥಿರ ಕೃಷಿ ಮತ್ತು ಅಭಿವೃದ್ದಿಯ ಮೂಲಕ ಜನರಜೀವನದಲ್ಲಿ ಆಹಾರ ಭದ್ರತೆ, ಆಹಾರ ಸುರಕ್ಷೆಯ ಜಾಲ ನಿರ್ಮಿಸಿದ್ದು. ಕೋವಿಡ್‌ 19 ಮಹಾಪಿಡುಗಿನ ಸಂದರ್ಭದಲ್ಲಿ ವಿಶ್ವಕ್ಕೆ ಪಾಠಗಳನ್ನು ನೀಡಿತುನಾವೀಗ ಎಲ್ಲರನ್ನೂ ಒಳಗೊಂಡಂತೆ ನ್ಯಾಯ, ಒಳಗೊಳ್ಳುವಿಕೆ ಹಾಗೂ ದೊರೆಯುವಿಕೆಯ ಕುರಿತು ನೀತಿಗಳನ್ನು ರೂಪಿಸಲಾಗಿದೆ. ಇಷ್ಟೆಲ್ಲ ಸಾಧಿಸಿದ ಮೇಲೂ ಭಾರತದಲ್ಲಿ ಹಲವಾರು ತೊಂದರೆಗಳಿವೆ. ಈಗಲೂ ಬಡತನದಂಚಿನಲ್ಲಿರುವ ಕುಟುಂಬಗಳಿವೆ. ರಕ್ತಹೀನತೆ, ಪೌಷ್ಟಿಕಾಂಶಗಳ ಕೊರತೆ ಮುಂತಾದ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಪ್ರಯತ್ನಿಸಲಾಗುತ್ತಿದೆ.   ಪ್ರಧಾನಿ ಮೋದಿ ಅವರು ಈಚೆಗೆ ನೀಡಿರುವ ಕೆಲವು ಯೋಜನೆಗಳು ಹಾಗೂ ಘೋಷಿಸಿದ ನೂತನ ಯೋಜನೆಗಳು ಇವುಗಳಿಗೆ ಸಮರ್ಪಕ ಪರಿಹಾರ ನೀಡಬಹುದಾಗಿದೆ. ಒಂದು ದೇಶ, ಒಂದು ಪಡಿತರ ಚೀಟಿ, ಪೋಷಣ್‌ ಪ್ಲಸ್‌ ಮುಂತಾದವು ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುತ್ತವೆ

ಎಫ್‌ಸಿಐನ ಸಿಎಂಡಿ ಆಗಿರುವ ಅತಿಶ್‌ ಚಂದ್ರ ಅವರು ಪೂರೈಕೆಯ ಸರಣಿಯ ಸುಧಾರಣೆ, ಬದಲಾವಣೆ ಹಾಗೂ ನವೀನ ತಂತ್ರಜ್ಞಾನಗಳ ಕುರಿತು  ಚರ್ಚಿಸಿದರು. ಆಹಾರ ತ್ಯಾಜ್ಯ, ಆಹಾರ ವ್ಯಯ, ಸೋರಿಕೆ ಮತ್ತು ಸಂಗ್ರಹಾಗಾರಗಳಿಲ್ಲದೆ ಆಗುವ ಹಾನಿಗಳ ಕುರಿತು ಚರ್ಚಿಸಿದರು. ದೇಶದಲ್ಲಿ ಎಫ್‌ಸಿಐನ 22000 ಗೋಡೌನುಗಳಿವೆ. ರಾಜ್ಯ ಸರ್ಕಾರಗಳಿಂದ 12000 ದಾಸ್ತಾನುಗಳಿಗೆ ಅನುಕೂಲವಾಗುವ ಗೋಡೌನುಗಳಿವೆ ಎಂದು ತಿಳಿಸಿದರು.

ಐಐಟಿ ದೆಹಲಿಯ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥರಾಗಿರುವ ಪ್ರೊ. ಎಸ್‌.ಜಿ. ದೇಶಮುಖ್‌ಅವರು ಕಾರ್ಯಾನುಷ್ಠಾನದ ಕುರಿತ ಅಧ್ಯಯನ, ಕೃತಕ ಬುದ್ಧಿಮತ್ತೆಯ ಬಳಕೆ ಹಾಗೂ ನೂತನ ತಂತ್ರಜ್ಞಾನಗಳ ಬದಲಾವಣೆ ಮತ್ತು ರೂಪಾಂತರಗಳ ಕುರಿತು ಚರ್ಚಿಸಿದರು. ಆಹಾರ ವಿತರಣೆ, ಪಡಿತರ ಹಂಚಿಕೆಯ ವ್ಯವಸ್ಥೆಯನ್ನು ಹಸಿವು ಹಾಗೂ ಬಡತನ ನಿವಾರಣೆಯಲ್ಲಿ ಹೇಗೆ ಬಳಸಬಹುದು ಎಂಬ ಕುರಿತು ಚರ್ಚಿಸಿದರು.

ಹಸಿರು ಕ್ರಾಂತಿಯ ನೀತಿಯ ಪ್ಯಾಕೇಜು, ಆಹಾರ ಧಾನ್ಯಗಳ ಉತ್ಪಾದನೆ, ರೈತರಿಗೆ ಕನಿಷ್ಠ ಬೆಂಬಲ ಬಲೆ, ಸಂಗ್ರಹದ ನೀತಿ ಇವೆಲ್ಲವೂ ಕ್ಷಾಮ ಮತ್ತು ಆಹಾರ ಕೊರತೆಯ ಸಮಸ್ಯೆಗೆ ಪರಿಹಾರ ಒದಗಿಸಿವೆ. ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿ, ರಫ್ತು ಹಾಗೂ ಹೆಚ್ಚುವರಿ ಉತ್ಪಾದನೆಯ ರಾಷ್ಟ್ರವಾಗಿ ಬದಲಾಗಿದೆ. ನೀತಿನಿಯಮಗಳು ಅಭಿವೃದ್ಧಿಪರ ಆಹಾರೋತ್ಪಾದನೆಯ ಎಲ್ಲ ಸಾಧ್ಯತೆಗಳನ್ನು ಹೆಚ್ಚಿಸಿವೆ. ಇದೇ ಕಾರಣದಿಂದಾಗಿ ರಿಯಾಯಿತಿ ದರದಲ್ಲಿ ಆಹಾರ ಧಾನ್ಯಗಳನ್ನು ವಿತರಿಸುತ್ತ, ರಾಷ್ಟ್ರೀಯ ಆಹಾರ ಸುರಕ್ಷಾ ಮಸೂದೆಯ ಅಡಿಯಲ್ಲಿ 80 ಕೋಟಿ ಜನರಿಗೆ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ.

ತಂತ್ರಜ್ಞಾನ ಆಧಾರಿತ ಆಹಾರ ವಿತರಣೆ ವ್ಯವಸ್ಥೆಯಲ್ಲಿ ಮಾನವ ನಿರ್ಮಿತ ಹಂಚಿಕೆಯ ವ್ಯವಸ್ಥೆಯನ್ನು ಪರಿಪೂರ್ಣವಾಗಿ ಯಾಂತ್ರಿಕವಾಗಿ ಹಾಗೂ ಡಿಜಿಟಲೀಕರಣವಾಗಿ ಹೊಸ ವ್ಯವಸ್ಥೆಯೊಂದಿಗೆ ಬದಲಿಸಲಾಗಿದೆ. ಅದನ್ನು ಅತ್ಯುನ್ನತ ಪಾರದರ್ಶಕ ವ್ಯವಸ್ಥೆಯಾಗಿ ಬದಲಿಸಲಾಗಿದೆಎಲ್ಲ ಫಲಾನುಭವಿಗಳಿಗೂ ವರ್ಷ ಪೂರ್ತಿ, ಸೂಕ್ತವಾಗಿ ಹಾಗೂ ಘನತೆಯಿಂದ ಆಹಾರ ವಿತರಣೆಯಾಗುವಂತಾಗಿದೆ. ಇದು ಕೋವಿಡ್‌ 19 ಮಹಾಪಿಡುಗಿನ ಸಮಯದಲ್ಲಿ ಸಾಕಷ್ಟು ಬದಲಾವಣೆಯಾಗಿರುವುದು ಹಾಗೂ ಪಾರದರ್ಶಕವಾಗಿ ವ್ಯವಸ್ಥೆ ಕಾರ್ಯನಿರ್ವಹಿಸಿದ್ದು ಕಂಡುಬಂದಿದೆ.    ಭಾರತವು ಜಾಗತಿಕ ಮಟ್ಟದಲ್ಲಿ  ಆಹಾರ ಸುರಕ್ಷೆಯ ಸಂದರ್ಭದಲ್ಲಿ ಹೋಲಿಸಲಾಗದ ವೇಗದಲ್ಲಿ ಹಾಗೂ ಅಮಿತವಾದ ಪಾರದರ್ಶಕ ಮತ್ತು ಗುಣಾತ್ಮಕ ಬದಲಾವಣೆಗೆ ಉದಾಹರಣೆಯಾಗಿ ಪರಿಣಮಿಸಿದೆ

ನಿರಂತರ ಬದಲಾವಣೆಯ ಸಮಯದಲ್ಲಿ ಕಾಯಕಲ್ಪವಾಗುವಂತೆ ಸಾಕಷ್ಟು ನೀತಿನಿಯಮಗಳನ್ನು ರೂಪಿಸಿ, ಕ್ರಮಕೈಗೊಳ್ಳುತ್ತಿದೆ. ವಲಸೆ ಹೋಗುವವರಿಗೆ ಎಲ್ಲೆಡೆಯೂ ಪಡಿತರ ಲಭ್ಯ ಆಗುವ, ಪೌಷ್ಟಿಕಾಂಶ ಪೂರೈಸುವ ಯೋಜನೆಗಳನ್ನು ಘೋಷಿಸಿ, ಅವಿರತವಾಗಿ ಆಹಾರ, ದವಸ ಧಾನ್ಯಗಳು ಜನರಿಗೆ ದೊರಕುವಂತೆ ಪೂರೈಸುವ ವ್ಯವಸ್ಥೆಯು ಗಮನೀಯ  ಬದಲಾವಣೆಯನ್ನು ತಂದಿದೆ. ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಬಹುದಾಗಿರುವ ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆ ಕಾರ್ಯಾನುಷ್ಠಾನಕ್ಕೆ ಬರಲಿದೆ. ಆಹಾರ ವ್ಯಯ, ಸಂಗ್ರಹ, ಪೌಷ್ಟಿಕಾಂಶದ ಕೊರತೆ ಮುಂತಾದವುಗಳ ವಿರುದ್ಧ ಸಮರವಿನ್ನೂ ಜಾರಿಯಲ್ಲಿದೆ. ಅವನ್ನೂ ನಿವಾರಿಸುವ, ನಿಭಾಯಿಸುವ ಕೆಲಸವನ್ನು ಹಲವಾರು ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಮೂಲಕ ಸಾಧಿಸಲಾಗುವುದು.

***



(Release ID: 1772289) Visitor Counter : 207


Read this release in: English , Urdu , Hindi , Tamil