ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಕರ್ನಾಟಕದ ಹುಬ್ಬಳ್ಳಿಯಲ್ಲಿ ವಿಭಾಗೀಯ ಕಚೇರಿ  ಮತ್ತು ಚೆನ್ನೈನ ತಂಜಾವೂರ್ ನಲ್ಲಿ ಆಹಾರ ಭದ್ರತೆ ವಸ್ತುಸಂಗ್ರಹಾಲಯವನ್ನು ವರ್ಚುವಲ್ ಮೂಲಕ ಉದ್ಘಾಟಿಸಿದ ಶ್ರೀ ಪೀಯೂಷ್ ಗೋಯೆಲ್


‘ಆಹಾರ ಭದ್ರತೆ’ಯು ‘ರೈತರ ಭದ್ರತೆಗೆ’ ಸಮಾನಾರ್ಥಕವಾಗಿದ್ದು, ಇದು ಗ್ರಾಹಕರ ಸುರಕ್ಷತೆಯಿಂದ ಬರುತ್ತದೆ: ಶ್ರೀ ಪೀಯೂಷ್ ಗೋಯೆಲ್

 “ಆಹಾರ ಭದ್ರತೆಯ ನಿರ್ವಹಣೆಯಲ್ಲಿ ಅವಿಶ್ರಾಂತವಾಗಿ ದುಡಿಯುತ್ತಿರುವ ಜನರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಸರ್ಕಾರ ಸದಾ ಸಂವೇದನಾಶೀಲವಾಗಿದೆ: ಶ್ರೀ ಪೀಯೂಷ್ ಗೋಯೆಲ್

ಎಫ್.ಸಿ.ಐ. ಮತ್ತು ರೈಲ್ವೆ ದಾಖಲೆಯ ಆಹಾರ ಧಾನ್ಯವನ್ನು ದೇಶದಾದ್ಯಂತ ಸಾಗಿಸಿದ್ದು, ಪಿಎಂಜಿಕೆಎವೈ ಅಡಿಯಲ್ಲಿ ಉಚಿತವಾಗಿ  ದುರ್ಬಲರಿಗೆ ವಿತರಿಸಲು 180.83 ಎಲ್.ಎಂ.ಟಿ. ಆಹಾರ ಧಾನ್ಯವನ್ನು ಸಾಗಾಟ ಮಾಡಿದೆ

ಎಫ್.ಸಿ.ಐ ಮತ್ತು ಸಿಡಬ್ಲ್ಯುಸಿಯಂತಹ ಸಂಸ್ಥೆಗಳು ರಾಜ್ಯ ಸರ್ಕಾರಗಳ ದಾಸ್ತಾನು ಸಂಸ್ಥೆಗಳ ನೆರವಿನೊಂದಿಗೆ ಮುಚ್ಚಿದ ದಾಸ್ತಾನು ಪ್ರದೇಶವನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ 69 ಎಲ್.ಎಂ.ಟಿ. ಹೆಚ್ಚುವರಿ ದಾಸ್ತಾನು ಸಾಮರ್ಥ್ಯ ಸೃಷ್ಟಿಸುವಲ್ಲಿ ದಕ್ಷವಾಗಿವೆ

Posted On: 15 NOV 2021 4:45PM by PIB Bengaluru

ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ 75 ವರ್ಷಗಳ ಪ್ರಗತಿಪರ ಭಾರತ ಮತ್ತು ಅದರ ಭವ್ಯ ಇತಿಹಾಸವನ್ನು ಆಚರಿಸಲು ಮತ್ತು ಸ್ಮರಿಸಲು, ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಸೋಮವಾರ ಕರ್ನಾಟಕದ ಹುಬ್ಬಳ್ಳಿಯಲ್ಲಿ ವಿಭಾಗೀಯ ಕಚೇರಿ ಕಟ್ಟಡ ಮತ್ತು ಛಾಯಾಚಿತ್ರ ಪ್ರದರ್ಶನ ಸಹಿತ ತಮಿಳುನಾಡಿನ ತಂಜಾವೂರಿನಲ್ಲಿ ಆಹಾರ ಭದ್ರತಾ ವಸ್ತು ಸಂಗ್ರಹಾಲಯವನ್ನು ವರ್ಚುವಲ್ ಮಾದರಿಯಲ್ಲಿ ಉದ್ಘಾಟಿಸಿದರು.

ತಮ್ಮ ಭಾಷಣದ ವೇಳೆ ಅವರು ಕರ್ನಾಟಕದ ಹುಬ್ಬಳ್ಳಿಯಲ್ಲಿರುವ ವಿಭಾಗೀಯ ಕಚೇರಿಯ ಹೊಸ ಕಟ್ಟಡವನ್ನು ಉದ್ಘಾಟನೆಗಾಗಿ ಎಫ್.ಸಿ.ಐಗೆ ಅಭಿನಂದನೆ ಸಲ್ಲಿಸಿದರು. "ಆಹಾರ ಭದ್ರತೆಗಾಗಿ ತಾಳಿಕೊಳ್ಳುವ ಮೂಲಸೌಕರ್ಯವನ್ನು ಸೃಷ್ಟಿಸುವ ಪ್ರಧಾನಮಂತ್ರಿಯವರ ದೃಷ್ಟಿಕೋನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇದು ಒಂದು ಹೆಜ್ಜೆಯಾಗಿದೆ.  ಹತ್ತಿಯ ವ್ಯಾಪಾರ ಕೇಂದ್ರವಾಗಿರುವುದರಿಂದ ಹಿಡಿದು ಆಹಾರ ಭದ್ರತೆಯ ಕೇಂದ್ರದವರೆಗೆ-  ಹುಬ್ಬಳ್ಳಿ ನವ ಭಾರತದ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ." ಎಂದರು.

ಅವಲಂಬನೆಯಿಂದ ಸ್ವಾವಲಂಬನೆಯೆಡೆಗೆ ಭಾರತದ ಕೃಷಿ ವಿಕಾಸವನ್ನು ಪ್ರದರ್ಶಿಸುವ ತಂಜಾವೂರಿನ ಆಹಾರ ಭದ್ರತಾ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಿದ್ದಕ್ಕಾಗಿ ಅವರು ಎಲ್ಲರನ್ನೂ ಅಭಿನಂದಿಸಿದರು.  ಆಹಾರ ಭದ್ರತಾ ವಸ್ತು ಸಂಗ್ರಹಾಲಯವು ಭಾರತದ ಆಹಾರ ಭದ್ರತಾ ಗಾಥೆಯನ್ನು "ಸಾಗಣೆಯಿಂದ ತುತ್ತಿನವರೆಗಿನ" ( ಶಿಪ್ ಟು ಮೌತ್) ಅಸ್ತಿತ್ವದಿಂದ ಅತಿದೊಡ್ಡ ಆಹಾರ  ಧಾನ್ಯ ರಫ್ತು ಮಾಡುವ ರಾಷ್ಟ್ರಗಳಲ್ಲಿ ಒಂದಾಗುವವರೆಗಿನ ಚಿತ್ರಣ ಕಟ್ಟಿಕೊಡುವ ಭಾರತದ ಮೊದಲ ವಸ್ತು ಸಂಗ್ರಹಾಲಯವಾಗಿದೆ ಎಂದು ಅವರು ಹೇಳಿದರು. ತಮಿಳುನಾಡಿನ ಸಾಂಸ್ಕೃತಿಕ ರಾಜಧಾನಿ ಈಗ ಭಾರತದ ಕೃಷಿ ಇತಿಹಾಸಕ್ಕೆ ನೆಲೆಯಾಗಲಿದೆ ಎಂದು ಅವರು ಹೇಳಿದರು.

ರೈತರು ಭಾರತಕ್ಕೆ ಆಹಾರ ನೀಡಬೇಕು ಮತ್ತು ಉತ್ತಮ ಜೀವನೋಪಾಯವನ್ನೂ ಗಳಿಸಲು ಅನುವು ಮಾಡಿಕೊಡಬೇಕು ಎಂಬುದು ಪ್ರಧಾನಮಂತ್ರಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದು ಶ್ರೀ ಗೋಯಲ್ ಹೇಳಿದರು.  ಅತಿ ಹೆಚ್ಚು ಖರೀದಿಯಿಂದ ಹಿಡಿದು ಆಹಾರ ಧಾನ್ಯಗಳ ವಿತರಣೆವರೆಗೆ, ರೈತರು, ವಲಸೆ ಕಾರ್ಮಿಕರ ಬಗ್ಗೆ ಪ್ರಧಾನಮಂತ್ರಿಯವರಿಗೆ ಇರುವ ಬದ್ಧತೆ, ಸ್ಫೂರ್ತಿದಾಯಕವಾಗಿದೆ ಎಂದು ಅವರು ಹೇಳಿದರು.     ಸಾಂಕ್ರಾಮಿಕ ರೋಗ ಬಂದಾಗ, ಬಡ ಮತ್ತು ವಲಸೆ ಕಾರ್ಮಿಕ ಸಹೋದರ ಸಹೋದರಿಯರ ಯೋಗ ಕ್ಷೇಮವನ್ನು ಖಚಿತಪಡಿಸುವುದು ಪ್ರಧಾನಮಂತ್ರಿ ಮೋದಿ ಅವರ ಮೊದಲ ಆಲೋಚನೆಯಾಗಿತ್ತು ಎಂದು ಅವರು ಹೇಳಿದರು.  ಯಾವುದೇ ಬಡ ವ್ಯಕ್ತಿ ಹಸಿವಿನಿಂದ ಮಲಗಬಾರದು ಎಂಬುದನ್ನು ಖಾತ್ರಿಪಡಿಸಲು ಪಿಎಂಜಿಕೆಎವೈ ಅಡಿಯಲ್ಲಿ ಸುಮಾರು 2 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ  80  ಕೋಟಿ ಫಲಾನುಭವಿಗಳಿಗೆ ಆಹಾರ ವಿತರಣೆ ಮಾಡುವಲ್ಲಿ ಸಮರ್ಪಣೆ ಮತ್ತು ಪ್ರಯತ್ನಕ್ಕಾಗಿ ಅವರು ಎಫ್.ಸಿ.ಐ.ಗೆ ಧನ್ಯವಾದ ಅರ್ಪಿಸಿದರು.  ಪ್ರತಿಯೊಬ್ಬ ಫಲಾನುಭವಿಯೂ ಮಾಸಿಕ 5 ಕೆಜಿ ಅಕ್ಕಿ/ಗೋಧಿ ಮತ್ತು 1 ಕೆಜಿ ಬೇಳೆಕಾಳು ಪಡೆದಿದ್ದಾರೆ. "ಪ್ರಧಾನಿಮೋದಿ ಅವರ ಬದ್ಧತೆಗೆ ನಾನು ಧನ್ಯವಾದ ಅರ್ಪಿಸುತ್ತೇನೆ, ಅಂತಹ ಸವಾಲಿನ ಸಮಯದಲ್ಲಿ ಪ್ರಧಾನಮಂತ್ರಿಯವರು ನೀಡಿದ ಬೆಂಬಲಕ್ಕಾಗಿ ಇಡೀ ದೇಶ ಋಣಿಯಾಗಿದೆ. 'ಆಹಾರ ಭದ್ರತೆ' ಎಂಬ ಪದ ವಿಶ್ವದ ಪ್ರತಿಯೊಂದು ರಾಷ್ಟ್ರದ ಗಮನವನ್ನೂ ಸೆಳೆದಿದೆ. 'ಆಹಾರ ಭದ್ರತೆ' ಎಂಬುದು 'ರೈತ ಭದ್ರತೆ'ಗೆ ಸಮಾನಾರ್ಥಕವಾಗಿದೆ. 'ರೈತರ ಭದ್ರತೆ'ಯೊಂದಿಗೆ 'ಗ್ರಾಹಕರ ಭದ್ರತೆ' ಬರುತ್ತದೆ.  ಕೇಂದ್ರವು ಸುಧಾರಣಾತ್ಮಕ ಕ್ರಮಗಳನ್ನು ಕೈಗೊಂಡಿದ್ದು, ಇದು ಕನಿಷ್ಠ ಬೆಂಬಲ ಬೆಲೆಗೆ ರೈತರಿಂದ ಆಹಾರ ಧಾನ್ಯಗಳ ಅತಿ ಹೆಚ್ಚಿನ ಖರೀದಿಗೆ ಸಾಕ್ಷಿಯಾಗಿದೆ.  11,100  ಕೋಟಿ ರೂ. ಮೊತ್ತದ ಎಂ.ಎಸ್.ಪಿ.ಯೊಂದಿಗೆ  ಕೆಎಂಎಸ್  2021-22 ಇತ್ತೀಚೆಗೆ ಪ್ರಾರಂಭವಾಗಿದ್ದು, 3.7 ಲಕ್ಷ ರೈತರಿಗೆ ಲಾಭವಾಗಿದೆ.ಭಾರತವು ತನ್ನ ಸಂಕಲ್ಪ, ದಕ್ಷತೆ ಮತ್ತು ಸಾಮರ್ಥ್ಯದೊಂದಿಗೆ ವಿಶ್ವದ ವಿಶ್ವಾಸಾರ್ಹ ಪಾಲುದಾರನಾಗಿ ಹೊರಹೊಮ್ಮಿದೆ" ಎಂದು ಅವರು ಹೇಳಿದರು.

ಭಾರತದ ಜನರ ಆಹಾರ ಭದ್ರತೆಯ ಬಗ್ಗೆ ಸರ್ಕಾರದ ಬದ್ಧತೆಗೆ ಎಣೆಯಿಲ್ಲ, ಇದು ಕನಿಷ್ಠ ಬೆಂಬಲ ಬೆಲೆಯಲ್ಲಿ ರೈತರಿಂದ ಆಹಾರ ಧಾನ್ಯಗಳ ಅತಿ ಹೆಚ್ಚಿನ ಖರೀದಿಗೂ ಕಾರಣವಾಗಿದೆ ಎಂದು ಅವರು ಹೇಳಿದರು. ಈ ಖರೀದಿಯನ್ನು ಹಿಮಾಚಲ ಪ್ರದೇಶ, ಅಸ್ಸಾಂ, ಬಿಹಾರ, ಜಾರ್ಖಂಡ್ ನಂತಹ ಇತರ ರಾಜ್ಯಗಳಿಗೂ ವಿಸ್ತರಿಸಲಾಗಿದೆ, ಅಲ್ಲಿ ರೈತರಿಗೆ ಈ ಮೊದಲು ಎಂಎಸ್.ಪಿ ಖರೀದಿಯ ಲಾಭ ಸಿಗುತ್ತಿರಲಿಲ್ಲ. ರೈತರ ಕಲ್ಯಾಣ ಮತ್ತು ಅವರ ಆದಾಯ ವರ್ಧನೆಗೆ ಪ್ರಧಾನಮಂತ್ರಿಯವರ ಬದ್ಧತೆಗೂ ಎಣೆಯಿಲ್ಲ ಮತ್ತು ಸರ್ಕಾರಿ ಸಂಸ್ಥೆಗಳಿಗೆ ಉತ್ಪಾದಿಸಲಾದ ಆಹಾರ ಧಾನ್ಯದ ಮಾರಾಟಕ್ಕಾಗಿ ಅವರ ಬ್ಯಾಂಕ್ ಖಾತೆಗಳಿಗೆ ಎಂ.ಎಸ್.ಪಿ.ಯ ಪ್ರಯೋಜನವನ್ನು ನೇರವಾಗಿ ಪಾವತಿಸುವುದನ್ನು ನಾವು ಖಾತ್ರಿಪಡಿಸಿದ್ದೇವೆ.  ಪ್ರಧಾನಮಂತ್ರಿಯವರ ಈ ದೃಷ್ಟಿಕೋನಕ್ಕೆ ದೊಡ್ಡ ಯಶಸ್ಸು ತಂದುಕೊಡಲು ಅದ್ಭುತ ಪ್ರಯತ್ನಗಳನ್ನು ಮಾಡಿದ ಎಫ್.ಸಿ.ಐ ಮತ್ತು ಇತರ ರಾಜ್ಯ ಸಂಸ್ಥೆಗಳ ಪ್ರಯತ್ನಗಳನ್ನು ನಿಜವಾಗಿಯೂ ಶ್ಲಾಘಿಸುತ್ತೇನೆ ಎಂದು ಅವರು ಹೇಳಿದರು.

ಆಹಾರ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ಅಗತ್ಯವಿರುವ ಮೂಲಸೌಕರ್ಯವನ್ನು ಹೆಚ್ಚಿಸಲು, ಆಹಾರ ಧಾನ್ಯಗಳಿಗೆ ಸಾಕಷ್ಟು ದಾಸ್ತಾನು ರೂಪಿಸುವ ಸರ್ಕಾರದ ದೃಷ್ಟಿಕೋನವು   ವೈಜ್ಞಾನಿಕ ಗೋದಾಮುಗಳು ಮತ್ತು ಆಧುನಿಕ ಶೇಖರಣಾ ಹಗೇವುಗಳನ್ನು ರಚಿಸಲು  ಕಾರಣವಾಗಿದೆ. ಇದು ಚಾಲ್ತಿಯಲ್ಲಿರುವ ಪ್ರಕ್ರಿಯೆಯಾಗಿದ್ದು, ಎಫ್.ಸಿ.ಐ ಮತ್ತು ಸಿಡಬ್ಲ್ಯುಸಿಯಂತಹ ಸಂಸ್ಥೆಗಳು ರಾಜ್ಯ ಸರ್ಕಾರಗಳ ಶೇಖರಣಾ ಸಂಸ್ಥೆಗಳ ಸಹಾಯದಿಂದ ಮುಚ್ಚಿದ ಶೇಖರಣಾ ಸ್ಥಳವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ 69  ಎಲ್.ಎಂ.ಟಿ ಹೆಚ್ಚುವರಿ ಸಂಗ್ರಹಣೆಯನ್ನು ರೂಪಿಸಲು ಸಾಧ್ಯವಾಗಿದೆ. ಇದಲ್ಲದೆ, ಸರ್ಕಾರವು ಆಧುನಿಕ ಶೇಖರಣಾ ಹಗೇವುಗಳನ್ನು ರೂಪಿಸುತ್ತಿದೆ ಮತ್ತು ದೇಶಾದ್ಯಂತ 108  ಎಲ್.ಎಂ.ಟಿಗೆ ಹಬ್ ಮತ್ತು ಸ್ಪೋಕ್ ಮಾಡೆಲ್ ಆಗಿದೆ.

ಸಾಂಕ್ರಾಮಿಕ ರೋಗದ ಸಮಯದಲ್ಲಿ ಯಾವುದೇ ವ್ಯಕ್ತಿ ಹಸಿವಿನಿಂದ ಬಳಲುತ್ತಿಲ್ಲ ಎಂದು ಪ್ರಧಾನಮಂತ್ರಿಯವರು ಖಚಿತಪಡಿಸಿದ್ದರಿಂದಾಗಿ ದೇಶದ ಪ್ರತಿಯೊಬ್ಬ ನಾಗರಿಕನ ಆಹಾರ ಭದ್ರತೆಯ ಅಗತ್ಯಗಳನ್ನು ರಕ್ಷಿಸುವ ಸರ್ಕಾರದ ಪ್ರಯತ್ನಗಳು ಅಭೂತಪೂರ್ವವಾದವು. ಈ ಉದ್ದೇಶಕ್ಕಾಗಿ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಅಡಿಯಲ್ಲಿ ಎಲ್ಲಾ ಸಂಸ್ಥೆಗಳು ಅವಿಶ್ರಾಂತವಾಗಿ ಕೆಲಸ ಮಾಡುತ್ತಿವೆ. ಎಫ್.ಸಿ.ಐ ಮತ್ತು ರೈಲ್ವೆಗಳು ದೇಶದ ಮೂಲೆ ಮೂಲೆಗಳಿಗೆ ದಾಖಲೆಯ ಆಹಾರ ಧಾನ್ಯಗಳನ್ನು ಸಾಗಿಸಿದ್ದು, ಎನ್.ಎಫ್.ಎಸ್.ಎ ಅಡಿಯಲ್ಲಿ ವಿತರಿಸಲಾಗುವ ಆಹಾರ ಧಾನ್ಯಕ್ಕಿಂತಲೂ ಮಿಗಿಲಾಗಿ, ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಎಲ್ಲಾ ದುರ್ಬಲ ಜನರಿಗೆ ಪಿಎಂಜಿಕೆಎವೈ ಅಡಿಯಲ್ಲಿ  180.83  ಎಲ್.ಎಂ.ಟಿ  ಆಹಾರ ಧಾನ್ಯಗಳನ್ನು ಉಚಿತವಾಗಿ ಪೂರೈಸಲಾಗಿದೆ. 

"ನಮ್ಮ ದೇಶದಲ್ಲಿ ಆಹಾರ ಭದ್ರತೆ ನಿರ್ವಹಣೆಯ ವಿವಿಧ ಅಂಶಗಳ ಬಗ್ಗೆ ಕೆಲಸ ಮಾಡುವುದರ ಜೊತೆಗೆ, ಅದು ಜನರನ್ನು ತಲುಪಲು ಮತ್ತು ವಿವಿಧ ಕಾರ್ಯಕ್ರಮಗಳ ಮೂಲಕ, ಅದರಲ್ಲೂ ಆಜಾದಿ ಕಾ ಅಮೃತ ಮಹೋತ್ಸವ ಆಚರಣೆಯೊಂದಿಗೆ ಬಾಧ್ಯಸ್ಥರ ನಡುವೆ ಆ ಬಗ್ಗೆ ಅರಿವು ಮೂಡಿಸುವಲ್ಲಿ ಅಷ್ಟೇ ಒಲವು ಹೊಂದಿದ್ದಾರೆ ಎಂಬುದು ಅಷ್ಟೇ ಗಮನಾರ್ಹವಾಗಿದೆ ಎಂದು ತಿಳಿಸಲು ನಾನು ಹರ್ಷಿಸುತ್ತೇನೆ " ಎಂದು ಅವರು ಹೇಳಿದರು.

ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಶುಭಾಶಯಗಳನ್ನು ತಿಳಿಸಿದ ಅವರು, ಪ್ರಧಾನಮಂತ್ರಿಯವರು ನವೆಂಬರ್ 15ನ್ನು ಜನಜಾತೀಯ ಗೌರವ ದಿವಸ ಎಂದು  ಘೋಷಿಸಿದ್ದಾರೆ, ಇದರಿಂದ ಮುಂಬರುವ ಪೀಳಿಗೆ ದೇಶದ ಧೈರ್ಯಶಾಲಿ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಅವರ ತ್ಯಾಗದ ಬಗ್ಗೆ ತಿಳಿದುಕೊಳ್ಳಲು, ಸ್ಮರಿಸಲು ಸಮರ್ಪಿಸಲಾಗಿದೆ ಎಂದು ಒತ್ತಿ ಹೇಳಿದರು. ಇಂದು ಜಾರ್ಖಂಡ್ ನಲ್ಲಿ ದೇವರೆಂದು ಪರಿಗಣಿಸಲಾದ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ದಿನ ಆಚರಿಸಲಾಗುತ್ತಿದೆ ಎಂದು ಅವರು ಹೇಳಿದರು.

ಬುಡಕಟ್ಟು ಸಮುದಾಯಗಳ ಕಲ್ಯಾಣಕ್ಕಾಗಿ ಕೇಂದ್ರದ ಪ್ರಯತ್ನಗಳ ಬಗ್ಗೆ ಮಾತನಾಡಿದ ಅವರು, ಕಳೆದ 7 ವರ್ಷಗಳಲ್ಲಿ ಬುಡಕಟ್ಟು ಮಕ್ಕಳಿಗಾಗಿ 472  ಏಕಲವ್ಯ ಶಾಲೆಗಳನ್ನು ಮಂಜೂರು ಮಾಡಲಾಗಿದೆ ಎಂದು ಹೇಳಿದರು. ವಿದ್ಯಾರ್ಥಿ ವೇತನದ ಬಜೆಟ್ ಅನ್ನು ಸಹ ದ್ವಿಗುಣಗೊಳಿಸಲಾಗಿದೆ. ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯನ್ನು  ಜಾರಿಗೆ ತರಲಾಗಿದೆ. ಬುಡಕಟ್ಟು ಸಹೋದರರು ಮತ್ತು ಸಹೋದರಿಯರ ಕೊಡುಗೆಗಳನ್ನು ಅಂಗೀಕರಿಸಲು ಕನಿಷ್ಠ 1೦  ಬುಡಕಟ್ಟು ವಸ್ತುಸಂಗ್ರಹಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಆಹಾರ ಭದ್ರತೆಯ ಮಹತ್ವದ ಬಗ್ಗೆ ಜಗತ್ತು ಇಂದು ಮಾತನಾಡುತ್ತಿದೆ ಎಂದು ಶ್ರೀ ಗೋಯಲ್ ಹೇಳಿದರು. "ರೈತರು ಮತ್ತು ನಿಮ್ಮೆಲ್ಲರ ಶ್ರಮದಿಂದಾಗಿ, ನಾವು ನಮ್ಮ ದೇಶದ ಜನರಿಗೆ ಮತ್ತು ವಿಶ್ವದ ಇತರ ಕಡೆಗಳಲ್ಲಿ ಆಹಾರ ಧಾನ್ಯಗಳನ್ನು ಒದಗಿಸಲು ಸಾಧ್ಯವಾಯಿತು" ಎಂದು ಅವರು ಹೇಳಿದರು.

ತಂಜಾವೂರಿನ ಆಹಾರ ಭದ್ರತೆಯ ರಾಷ್ಟ್ರೀಯ ವಸ್ತುಸಂಗ್ರಹಾಲಯವು ದೇಶದ ಮೊದಲ ವಸ್ತು ಸಂಗ್ರಹಾಲಯವಾಗಿದ್ದು, ಆಹಾರ ಭದ್ರತೆ ನಿರ್ವಹಣೆಯ ಎಲ್ಲಾ ಬಾಧ್ಯಸ್ಥರ ಪ್ರಯತ್ನಗಳನ್ನು ಚಿತ್ರಿಸುವಲ್ಲಿ ಮುಂದೆಸಾಗುತ್ತದೆ ಎಂದು ಅವರು ಹೇಳಿದರು. "ಈ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುವುದರಿಂದ ಎಲ್ಲ ಭಾರತೀಯರು ಮತ್ತು ವಿಶೇಷವಾಗಿ ಯುವ ಭಾರತೀಯರು ಮತ್ತು ಮಕ್ಕಳಿಗೆ ಅಪಾರ ಪ್ರಯೋಜನವಾಗಲಿದೆ ಎಂಬ ವಿಶ್ವಾಸ ತಮಗಿದೆ" ಎಂದು ಅವರು ಹೇಳಿದರು.

"ಆಹಾರಭದ್ರತೆ ನಿರ್ವಹಣೆಯಲ್ಲಿ ಅವಿರತವಾಗಿ ಶ್ರಮಿಸುವ ಜನರ ಮೂಲಸೌಕರ್ಯ ಅಗತ್ಯಗಳ ಬಗ್ಗೆ ನಮ್ಮ ಸರ್ಕಾರ ಸದಾ ಸೂಕ್ಷ್ಮಸಂವೇದಿಯಾಗಿದೆ.  ಹುಬ್ಬಳ್ಳಿಯಲ್ಲಿರುವ ವಿಭಾಗೀಯ ಕಚೇರಿಯ ಹೊಸ ಕಟ್ಟಡವು ಎಫ್.ಸಿಐಗೆ ನಮ್ಮ ಬದ್ಧತೆ ಮತ್ತು ಬೆಂಬಲದ  ಪ್ರತಿಬಿಂಬವಾಗಿದೆ" ಎಂದು ಅವರು ಹೇಳಿದರು.

ತಂಜಾವೂರಿನ ಆಹಾರ ವಸ್ತುಸಂಗ್ರಹಾಲಯವು ಅದರದೇ ಆದ ರೀತಿಯಲ್ಲಿ ಆಕರ್ಷಣೆಗಳಲ್ಲಿ ಒಂದಾಗಿದೆ. ವಸ್ತು ಸಂಗ್ರಹಾಲಯ ಧ್ಯೇಯ ಆಧಾರಿತವಾಗಿದ್ದು, ಮಧ್ಯ ಶಿಲಾಯುಗದಿಂದ ಆರಂಭಿಕ ಮನುಷ್ಯನ ಸಂಗ್ರಹಣೆ ಮತ್ತು ಅವನು ಎದುರಿಸಿದ ಸವಾಲುಗಳ ವಿವಿಧ ಅಂಶಗಳು ಏನು ಎಂಬುದನ್ನು ಹಂಚಿಕೊಳ್ಳುತ್ತದೆ. ಈ ವಸ್ತುಸಂಗ್ರಹಾಲಯವು ಭಾರತೀಯ ಆಹಾರ ನಿಗಮದ ಇತಿಹಾಸ, ದಾಸ್ತಾನು, ಸಂಗ್ರಹಣೆ ಮತ್ತು ಸಂರಕ್ಷಣೆ, ಸಾಗಣೆ ಮತ್ತು ವಿತರಣೆಗೆ ಸಂಬಂಧಿಸಿದ ಕೆಲವು ಪ್ರಮುಖ ಮಾಹಿತಿಯನ್ನು ಒಳಗೊಂಡಿದೆ.

ಎಫ್.ಸಿ.ಐ.ನಲ್ಲಿ 3ಡಿ ಚಲನಚಿತ್ರವು ವರ್ಚುವಲ್ ವಾಸ್ತವತೆಯಲ್ಲಿ ತೋರಿಸಲಾಗುತ್ತದೆ ಮತ್ತು ಮಕ್ಕಳಿಗಾಗಿ ರಸಪ್ರಶ್ನೆಗಳೂ ಇವೆ.  ಆಳೆತ್ತರದ ಪಿಡಿಎಸ್ ಮಾದರಿಯು ಇತರ ಗಮನಾರ್ಹ ಆಕರ್ಷಣೆಗಳಲ್ಲಿ ಒಂದಾಗಿದೆ.

ಕರ್ನಾಟಕದ ಹುಬ್ಬಳ್ಳಿಯಲ್ಲಿರುವ ವಿಭಾಗೀಯ ಕಚೇರಿಯೂ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಕರ್ನಾಟಕ ರಾಜ್ಯದಲ್ಲಿ  ಹುಬ್ಬಳ್ಳಿ ಸೇರಿದಂತೆ 5  ಎಫ್.ಸಿ.ಐ ವಿಭಾಗೀಯ ಕಚೇರಿಗಳಿವೆ, ಇದು 31 ಕಂದಾಯ ಜಿಲ್ಲೆಗಳನ್ನು ಒಳಗೊಂಡಿದೆ. 

ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಖಾತೆ ರಾಜ್ಯ ಸಚಿವ ಶ್ರೀ ಅಶ್ವಿನಿ ಕುಮಾರ್ ಚೌಬೆ ಮತ್ತು ಶ್ರೀಮತಿ ಸಾಧ್ವಿ  ನಿರಂಜನ್ ಜ್ಯೋತಿ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

***



(Release ID: 1772161) Visitor Counter : 239


Read this release in: English , Hindi , Marathi , Tamil