ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

2021ರ ನವೆಂಬರ್ 15ರಿಂದ 21ರವರೆಗೆ ‘ಆಜಾ಼ದಿ ಕಾ ಅಮೃತ ಮಹೋತ್ಸವ’ ಆಚರಿಸಲಿರುವ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆ


ಖರೀದಿ, ದಾಸ್ತಾನಿನ ಸಮಸ್ಯೆ ಕುರಿತಂತೆ ಕಬ್ಬು ಬೆಳೆಗಾರರೊಂದಿಗೆ ನೇರ ಸಂವಾದ

ವರ್ಚುವಲ್ ಮೂಲಕ ಕರ್ನಾಟಕದ ಹುಬ್ಬಳ್ಳಿಯ ಪ್ರಾದೇಶಿಕ ಕಚೇರಿ ಮತ್ತು ಚೆನ್ನೈನ ತಂಜಾವೂರಿನಲ್ಲಿ ಆಹಾರ ಭದ್ರತೆ ವಸ್ತುಸಂಗ್ರಹಾಲಯ ಉದ್ಘಾಟಿಸಲಿರುವ  ಕೇಂದ್ರ ವಾಣಿಜ್ಯ ಮತ್ತ ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ಜವಳಿ ಖಾತೆ ಸಚಿವ ಪೀಯೂಷ್ ಗೋಯೆಲ್

ಉತ್ತರ ಪ್ರದೇಶದ ವಾರಾಣಸಿಯಲ್ಲಿ ಅಂಗನವಾಡಿ ಮಕ್ಕಳು ಮತ್ತು ಮಹಿಳೆಯರಿಗೆ ಬಲವರ್ಧಿತ ಅಕ್ಕಿಯ ಮಹತ್ವದ ಕುರಿತು ಸಂವೇದನೆಗೊಳಿಸುವುದು

ಅಸ್ಸಾಂನ ಚಾಂಗ್ಸಾರಿಯಲ್ಲಿ ಆಧುನಿಕ ಹಗೇವು ಮತ್ತು ಹರ್ಯಾಣದ ಗುರುಗ್ರಾಮದಲ್ಲಿ ವಿಶ್ಲೇಷಣಾತ್ಮಕ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದ ಉದ್ಘಾಟನೆ

Posted On: 14 NOV 2021 11:28AM by PIB Bengaluru

75 ವರ್ಷಗಳ ಪ್ರಗತಿಪರ ಭಾರತ ಮತ್ತು ಅದರ ಭವ್ಯ ಇತಿಹಾಸವನ್ನು ಆಚರಿಸಲು ಮತ್ತು ಸ್ಮರಿಸಲು, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು 'ಆಜಾ಼ದಿ ಕಾ ಅಮೃತ್ ಮಹೋತ್ಸವ' ಆಚರಣೆಯ ಅಂಗವಾಗಿ ಒಂದು ವಾರ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಕಾರ್ಯಕ್ರಮವು ನವೆಂಬರ್ 15 ರಂದು ಪ್ರಾರಂಭವಾಗಿ 21 ನೇ ನವೆಂಬರ್, 2021 ರಂದು ಮುಕ್ತಾಯಗೊಳ್ಳುತ್ತದೆ.

ಈ ಅವಧಿಯಲ್ಲಿ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆ ದೇಶದ ವಿವಿಧ ಸ್ಥಳಗಳಲ್ಲಿ ವಿವಿಧ ಚಟುವಟಿಕೆಗಳು, ವಿಚಾರ ಸಂಕಿರಣಗಳು, ವೆಬಿನಾರ್ ಗಳು ಮತ್ತು ಇತರ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಸಾರವರ್ಧಿತ ಅಕ್ಕಿ ಅಪೌಷ್ಟಿಕತೆಯ ಅಡೆತಡೆಗಳನ್ನು ಮೆಟ್ಟಿನಿಲ್ಲಲು ಸಹಕಾರಿಯಾಗುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನದಂದು ತಿಳಿಸಿದ್ದರು. ಹೀಗಾಗಿ, ಇಲಾಖೆ ಸಾರವರ್ಧಿತ ಅಕ್ಕಿಗೆ ಸಂಬಂಧಿಸಿದಂತೆ ಅರಿವು ಮೂಡಿಸಿ ಸಂವೇದನಾತ್ಮಕಗೊಳಿಸುವ ಚಟುವಟಿಕೆಗಳನ್ನು ಕೈಗೆತ್ತಿಕೊಂಡಿದೆ.

ಕಾರ್ಯಕ್ರಮದ ಮೊದಲ ದಿನ ಪಿಡಿಎಸ್ ನಲ್ಲಿ ತಂತ್ರಜ್ಞಾನದ ಪರಿಣಾಮ ಮತ್ತು ಮಹತ್ವವನ್ನು ಪ್ರತಿಪಾದಿಸುವ ಮತ್ತು ಕೋವಿಡ್ -19 ಸಾಂಕ್ರಾಮಿಕದ ಸಮಯದಲ್ಲಿ ಆಹಾರ ಭದ್ರತೆಯನ್ನು ಖಾತ್ರಿಪಡಿಸುವಲ್ಲಿ ಭಾರತದ ಅನುಭವವನ್ನು ಒತ್ತಿಹೇಳುವ  ‘ಆಹಾರ ಭದ್ರತೆಯನ್ನು ಖಾತ್ರಿಪಡಿಸಲು ಪಿಡಿಎಸ್  ಸುಧಾರಣೆಯಲ್ಲಿ ಭಾರತದ ಪಯಣ’ ಕುರಿತಂತೆ ಪ್ರಾತ್ಯಕ್ಷಿಕೆ ಪ್ರಸ್ತುತಪಡಿಸಲಾಗುವುದು

ಇದರ ಜೊತೆಗೆ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ಜವಳಿ ಖಾತೆ ಸಚಿವ ಶ್ರೀ ಪೀಯೂಷ್ ಗೋಯೆಲ್ ಅವರು ವರ್ಚುವಲ್ ಮೂಲಕ ಕರ್ನಾಟಕದ ಹುಬ್ಬಳ್ಳಿಯ ಪ್ರಾದೇಶಿಕ ಕಚೇರಿ ಮತ್ತು ಚೆನ್ನೈನ ತಂಜಾವೂರಿನ ಆಹಾರ ಭದ್ರತೆ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಲಿದ್ದಾರೆ.

ಐ.ಜಿ.ಎಂ.ಆರ್.ಐ, ಹರ್ಪುರ್,  ಕೃಷಿ ವಿಜ್ಞಾನವನ್ನು ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಲ್ಲಿ ಆಹಾರ ಭದ್ರತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಸ್ವತಂತ್ರವಾಗಿ ಕೈಗೊಳ್ಳಲಿದೆ. ಎರಡನೇ ದಿನ ಡಿಬಿಟಿ ಸೇರಿದಂತೆ ಖರೀದಿ ಕಾರ್ಯಾಚರಣೆಗೆ ಮೀಸಲಿಡಲಾಗಿದ್ದು, ಕಿರುಚಿತ್ರ ಪ್ರದರ್ಶನ ನಡೆಯಲಿದೆ. ಖರೀದಿ ಕೇಂದ್ರಗಳಲ್ಲಿ ರೈತರು ಮತ್ತು ಫಲಾನುಭವಿಗಳ ಸಂವಾದ ನಡೆಸಲಾಗುತ್ತದೆ. ರಾಷ್ಟ್ರೀಯ ಸಕ್ಕರೆ ಸಂಸ್ಥೆ (ಎನ್.ಎಸ್.ಐ) ಕಾನ್ಪುರ 50ನೇ ಘಟಿಕೋತ್ಸವ ಸಮಾರಂಭವನ್ನು ಆಯೋಜಿಸುತ್ತಿದೆ.

ಮಾರನೆಯ ದಿನ, ಐಜಿಎಂಆರ್.ಐ, ಹರ್ಪುರ್ ಸಮರ್ಥ ಸಂಗ್ರಹಣೆ ಮತ್ತು ಗುಣಮಟ್ಟ ನಿಯಂತ್ರಣ ಕುರಿತು ರೈತರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇದಲ್ಲದೆ, ಆಹಾರ ಧಾನ್ಯಗಳ ವಿವಿಧ ವಿಧಗಳು ಮತ್ತು ಬಲವರ್ಧಿತ ಅಕ್ಕಿಯ ಪ್ರಾಮುಖ್ಯದ ಕುರಿತು ಮತ್ತೊಂದು ಜಾಗೃತಿ ಕಾರ್ಯಕ್ರಮವನ್ನು ಸಂಸ್ಥೆಯು ಆಯೋಜಿಸುತ್ತಿದೆ. ‘ಈ 75 ವರ್ಷಗಳಲ್ಲಿ ಆಹಾರ ಭದ್ರತೆಯನ್ನು ಖಾತರಿಪಡಿಸುವ ಕ್ಷೇತ್ರದಲ್ಲಿ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಪಯಣ’ ಮತ್ತು ‘ಸಾರವರ್ಧಿತ ಅಕ್ಕಿಯ ಪ್ರಾಮುಖ್ಯತೆ’ ಕುರಿತು ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಗುವುದು.

ನಾಲ್ಕನೇ ದಿನವನ್ನು ಕಬ್ಬು ಬೆಳೆಯುವ ರೈತರಿಗೆ ಮೀಸಲಿಡಲಾಗುತ್ತದೆ. ರೈತರು, ಸ್ವ-ಸಹಾಯ ಗುಂಪುಗಳೊಂದಿಗೆ ‘ಕಬ್ಬು ಬೇಸಾಯದಲ್ಲಿ ಉತ್ತಮ ರೂಢಿಗಳು’ ಕುರಿತ ಸಂವಾದ ಆಯೋಜಿಸಲಾಗುವುದು. ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಕರ್ನಾಟಕ ಮತ್ತು ಪಂಜಾಬ್‌ ನ ರೈತರು, ಸ್ವಸಹಾಯ ಗುಂಪುಗಳು ಮತ್ತು ಸಕ್ಕರೆ ಕಾರ್ಖಾನೆಗಳೊಂದಿಗೆ ಕಬ್ಬಿನ ಕೃಷಿಯಲ್ಲಿ ಉತ್ತಮ ರೂಢಿಗಳ ಕುರಿತು ಸಂವಾದ ನಡೆಸುವಾಗ ಲಖನೌ ಮತ್ತು ಕಾನ್ಪುರದ ಸಂಬಂಧಿತ ಸಂಸ್ಥೆಗಳು ಭಾಗವಹಿಸುತ್ತವೆ.

ಐದನೇ ದಿನದ ಕಾರ್ಯಕ್ರಮಗಳನ್ನು ಅಸ್ಸಾಂನಲ್ಲಿ ನಿಗದಿಪಡಿಸಲಾಗಿದ್ದು, ಇದರಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಖಾತೆ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಚಾಂಗ್ಸಾರಿಯಲ್ಲಿ ಆಧುನಿಕ ಹಗೇವನ್ನು ಉದ್ಘಾಟಿಸಲಿದ್ದಾರೆ. ದಾಸ್ತಾನು ಕಾರ್ಯಾಚರಣೆ ಕುರಿತ ಕಿರುಚಿತ್ರವನ್ನೂ ಅವರು ಉದ್ಘಾಟಿಸಲಿದ್ದಾರೆ.

ಅದೇ ದಿನ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಪೌಷ್ಟಿಕಾಂಶಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಸಾರವರ್ಧಿತ ಅಕ್ಕಿಯ ಮಹತ್ವವನ್ನು ತಿಳಿಸಲು ಅಂಗನವಾಡಿ ಮಕ್ಕಳು ಮತ್ತು ತಾಯಂದಿರೊಂದಿಗೆ ಸಂವಾದದ ಸಾರ್ವಜನಿಕ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

ಆರನೇ ದಿನ ಗುರುಗ್ರಾಮದ ಐ.ಎಫ್‌.ಎಸ್‌.ನಲ್ಲಿ ವಿಶ್ಲೇಷಣಾತ್ಮಕ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯವನ್ನು ಉದ್ಘಾಟಿಸಲಾಗುವುದು. ಮಿಥ್ಯ ಪ್ಲಾಸ್ಟಿಕ್ ಅಕ್ಕಿಯ ಸತ್ಯ ಹೊರಹಾಕುವ ಮತ್ತು ಐಇಸಿ ಪ್ಯಾಕೇಜ್ (ರೇಡಿಯೋ ಜಿಂಗಲ್ಸ್, ಸಾಮಾಜಿಕ ಮಾಧ್ಯಮದ ಕೊಲ್ಯಾಟರಲ್ಸ್) ಮತ್ತು ಅಕ್ಕಿಯ ಬಲವರ್ಧನೆ ಕುರಿತು ಕಿರುಚಿತ್ರಗಳನ್ನು ಬಿಡುಗಡೆ ಮಾಡಲಾಗುವುದು. ಜೊತೆಗೆ. ಸಿಡಬ್ಲ್ಯುಸಿಯ ಸಮನ್ವಯದಲ್ಲಿ ಬಲವರ್ಧಿತ ಅಕ್ಕಿ ವಿಷಯದ ಕುರಿತು ಬೀದಿ ನಾಟಕವನ್ನು ಆಯೋಜಿಸಲಾಗುವುದು. ಉತ್ತರ ಪ್ರದೇಶ, ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ವಿಶ್ವ ಆಹಾರ ಕಾರ್ಯಕ್ರಮದ ಸಹಯೋಗದಲ್ಲಿ ಬಲವರ್ಧಿತ ಅಕ್ಕಿಯನ್ನು ಬಳಸಿಕೊಂಡು ಅಡುಗೆ ಪ್ರಾತ್ಯಕ್ಷಿಕೆ ಮತ್ತು ಸಾಮಾಜಿಕ ಮಾಧ್ಯಮ ಪ್ರಚಾರ ಮತ್ತು ಜನರಿಗೆ ಸಾರವರ್ಧಿತ ಅಕ್ಕಿಯ ಬಗ್ಗೆ ಅರಿವು ಮೂಡಿಸಲು ಸಮುದಾಯ  ಸಂತರ್ಪಣೆಯನ್ನು ಸಹ ಆಯೋಜಿಸಲಾಗುತ್ತದೆ.

ಆಜಾ಼ದಿ ಕಾ ಅಮೃತ ಮಹೋತ್ಸವ ಆಚರಣೆಯ ಸಮಾರೋಪದ ದಿನ  ದಾಸ್ತಾನು ಮತ್ತು ಗೋದಾಮಿನ ಚರ್ಚೆಯಂತಹ ಇತರ ಮಹತ್ವದ ಚಟುವಟಿಕೆಗಳನ್ನು ವರದಿ ಮಾಡಲಾಗುತ್ತದೆ. ಕನಿಷ್ಠ 200 ರೈತ ಉತ್ಪಾದಕ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ರಾಜ್ಯ ಸಚಿವರುಗಳಾದ ಶ್ರೀ ಅಶ್ವಿನಿ ಕುಮಾರ್ ಚೌಬೆ ಮತ್ತು ಸಾಧ್ವಿ ನಿರಂಜನ್ ಜ್ಯೋತಿ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.

ಭಾರತೀಯ ಆಹಾರ ನಿಗಮ (ಎಫ್.ಸಿ.ಐ.), ದಾಸ್ತಾನು, ಸಕ್ಕರೆ, ರಾಷ್ಟ್ರೀಯ ಹಾರ ಭದ್ರತಾ ಕಾಯಿದೆ (ಎನ್.ಎಫ್.ಎಸ್.ಎ) ಗೋದಾಮು ಅಭಿವೃದ್ಧಿ ನಿಯಂತ್ರಣ ಪ್ರಾಧಿಕಾರ (ಡಬ್ಲ್ಯು.ಡಿ.ಆರ್.ಎ.), ಕೇಂದ್ರೀಯ ಗೋದಾಮು ನಿಗಮ (ಸಿಡಬ್ಲ್ಯುಸಿ.), ಭಾರತೀಯ ಆಹಾರಧಾನ್ಯ ದಾಸ್ತಾನು ನಿರ್ವಹಣೆ ಮತ್ತು ಸಂಶೋಧನಾ ಸಂಸ್ಥೆ (ಐ.ಜಿ.ಎಂ.ಆರ್.ಐ.)ಸೇರಿದಂತೆ ಡಿಎಫ್.ಡಿ.ಪಿ.ಯ ಎಲ್ಲ ವಿಭಾಗಗಳು ಮತ್ತು ಇತರ ಸಂಸ್ಥೆಗಳು ಈ ಆಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದೆ.

***



(Release ID: 1771665) Visitor Counter : 242