ಗಣಿ ಸಚಿವಾಲಯ
azadi ka amrit mahotsav

ಖನಿಜ ಸಂರಕ್ಷಣೆ ಮತ್ತು ಅಭಿವೃದ್ಧಿ (ತಿದ್ದುಪಡಿ) ನಿಯಮ 2021 ಅಧಿಸೂಚನೆ ಪ್ರಕಟ


ಗುತ್ತಿಗೆದಾರರು ಗಣಿಗಾರಿಕೆ ಪ್ರದೇಶದ ಡಿಜಿಟಲ್ ಚಿತ್ರಗಳು ಮತ್ತು ಉದ್ದೇಶದ ಪತ್ರವನ್ನು ಸಲ್ಲಿಸಲು ನಿಯಮಾವಳಿಯಲ್ಲಿ ಅವಕಾಶ

ಭಾರತೀಯ ಗಣಿ ಬ್ಯೂರೋ(ಐಬಿಎಂ)ಗೆ  ಸುಳ್ಳು ಮಾಹಿತಿ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ

Posted On: 10 NOV 2021 2:08PM by PIB Bengaluru

ಗಣಿ ಸಚಿವಾಲಯ 2021 ನವೆಂಬರ್ 3ರಂದು ಖನಿಜಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ನಿಯಮ (ಎಂಸಿಡಿಆರ್) 2017ಕ್ಕೆ  ತಿದ್ದುಪಡಿ ಮಾಡುವ ಖನಿಜಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ನಿಯಮ (ತಿದ್ದುಪಡಿ) 2021 ಕುರಿತು ಅಧಿಸೂಚನೆ ಹೊರಡಿಸಿದೆ

ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆ 1957 (ಎಂಎಂಡಿಆರ್ ಕಾಯಿದೆ) ಸೆಕ್ಷನ್ 18ರಡಿಯಲ್ಲಿ ಎಂಸಿಡಿಆರ್ ನಿಯಮಗಳನ್ನು ರೂಪಿಸಲಾಗಿದ್ದು, ಅದರಲ್ಲಿ ಖನಿಜಗಳ ಸಂರಕ್ಷಣೆಗ ಸಂಬಂಧಿಸಿದ ನಿಯಮಗಳು, ವೈಜ್ಞಾನಿಕ ಮತ್ತು ವ್ಯವಸ್ಥಿತ ರೀತಿಯಲ್ಲಿ ಗಣಿಗಾರಿಕೆ, ದೇಶದಲ್ಲಿ ಖನಿಜಗಳ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಅಂಶಗಳು ಒಳಗೊಂಡಿವೆ.

ರಾಜ್ಯ ಸರ್ಕಾರಗಳು, ಉದ್ಯಮದ ಸಂಘಟನೆಗಳು, ಗಣಿ ಮಾಲೀಕರು ಮತ್ತು ಇತರೆ ಭಾಗಿದಾರರು ಹಾಗೂ ಸಾರ್ವಜನಿಕರೊಂದಿಗೆ ವ್ಯಾಪಕ ಸಮಾಲೋಚನೆ ನಂತರ ತಿದ್ದುಪಡಿ ನಿಯಮಗಳನ್ನು ರೂಪಿಸಲಾಗಿದೆತಿದ್ದುಪಡಿಯ ಪ್ರಮುಖಾಂಶಗಳು ಕೆಳಗಿನಂತಿವೆ.

(i) ಗಣಿಗೆ ಸಂಬಂಧಿಸಿದ ಎಲ್ಲ ಯೋಜನೆಗಳು ಮತ್ತು ಗಣಿಗೆ ಸಂಬಂಧಿಸಿದ ವಿಭಾಗಗಳನ್ನು ಡಿಜಿಟಲ್ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ (ಡಿಜಿಪಿಎಸ್ ) ಅಥವಾ ಟೋಟಲ್ ಸ್ಟೇಷನ್ ಸಂಯೋಜನೆಯಿಂದ ಅಥವಾ ಭಾರತೀಯ ಗಣಿ ಬ್ಯೂರೋ(ಐಬಿಎಂ) ನಿರ್ದಿಷ್ಟಪಡಿಸಿರುವ ಮಾನದಂಡಗಳಂತೆ ಎಲ್ಲ ಗಣಿ ಗುತ್ತಿಗೆಗಳಿಗೆ  ಡ್ರೋಣ್ ಸಮೀಕ್ಷೆಯ ಮೂಲಕವೇ ಸಿದ್ಧಪಡಿಸಬೇಕು ಎಂದು ನಿಯಮಗಳು ಸೂಚಿಸುತ್ತವೆ.

(ii) ಗುತ್ತಿಗೆದಾರರು ಅಥವಾ ಲೆಟರ್ ಆಫ್ ಇಟೆಂಟ್ ಹೊಂದಿರುವವರು ಗಣಿಗಾರಿಕೆ ಪ್ರದೇಶದ ಡಿಜಿಟಲ್ ಚಿತ್ರಗಳನ್ನು ಸಲ್ಲಿಸಲು ಹೊಸ ನಿಯಮಗಳನ್ನು ಸೇರ್ಪಡೆ ಮಾಡಲಾಗಿದೆ. 1 ಮಿಲಿಯನ್ ಟನ್ ಅಥವಾ ಅದಕ್ಕೂ ಅಧಿಕ ಉತ್ಖನನ ಯೋಜನೆಯನ್ನು ಹೊಂದಿರುವ ಅಥವಾ 50ಕ್ಕೂ ಅಧಿಕ ಎಕರೆ ಗುತ್ತಿಗೆ ಪಡೆದಿರುವ ಅಥವಾ ಅದಕ್ಕಿಂತ ಹೆಚ್ಚಿನ ಗುತ್ತಿಗೆ ಪ್ರದೇಶ ಹೊಂದಿರುವವರು ಪ್ರತಿವರ್ಷ ಡ್ರೋಣ್ ಮೂಲಕ ಸೆರಹಿಡಿಯಲಾದ ಗುತ್ತಿಗೆ ಪ್ರದೇಶದ ಮತ್ತು ಗಡಿಯ 100 ಮೀಟರ್ ಹೊರಗಿನ ಚಿತ್ರಗಳನ್ನು  ಸಲ್ಲಿಸಬೇಕು. ಇತರೆ ಗುತ್ತಿಗೆದಾರರೂ ಸಹ ಹೆಚ್ಚಿನ ರೆಸಲ್ಯೂಷನ್ ಇರುವ ಚಿತ್ರಗಳನ್ನು ಸಲ್ಲಿಸಬೇಕು. ಕ್ರಮದಿಂದಾಗಿ ಗಣಿ ಯೋಜನೆ ಪದ್ದತಿಗಳು, ಭದ್ರತೆ ಮತ್ತು ಗಣಿಗಳಲ್ಲಿ ಸುರಕ್ಷತೆಯನ್ನು ಸುಧಾರಿಸುತ್ತದೆ, ಜೊತೆಗೆ ಗಣಿಗಾರಿಕೆ ಕಾರ್ಯಾಚರಣೆಗಳ ಉತ್ತಮ ಮೇಲ್ವಿಚಾರಣೆಯನ್ನು ಖಾತ್ರಪಡಿಸುತ್ತದೆ.

(iii) ನಿಯಮ 34 ಪ್ರಕಾರ ಡ್ರೋನ್ ಸಮೀಕ್ಷೆಯಲ್ಲಿ ಬಳಸಲಾದ ಮತ್ತು ಹೆಚ್ಚಿನ ರೆಸಲ್ಯೂಷನ್ ಇರುವ ಜಿಯೋರೆಫರೆನ್ಸಡ್ ಅರ್ಥೋ-ರೆಕ್ಟಿಫೈಡ್ ಮಲ್ಪಿಸ್ಪೆಕ್ಟರಲ್ ಉಪಗ್ರಹದ ಚಿತ್ರವನ್ನು ಸಲ್ಲಿಸಲು ನಿಯಮನ್ನು ಸೇರ್ಪಡೆ ಮಾಡಲಾಗಿದ್ದು, ಅದರಂತೆ ಕಾರ್ಟೋಸ್ಯಾಟ್-2 ಉಪಗ್ರಹ ಎಲ್ ಐಎಸ್ ಎಸ್- IV ಸೆನ್ಸಾರ್ ನಿಂದ ಪಡೆದ ಚಿತ್ರಗಳನ್ನು ಸಲ್ಲಿಸಬಹುದಾಗಿದೆ.

(iv) ನಿಯಮ ಅನುಸರಣೆ ಹೊರೆಯನ್ನು ತಗ್ಗಿಸಲು ಪ್ರತಿದಿನ ರಿಟರ್ನ್ಸ್ ಸಲ್ಲಿಕೆ ನಿಯಮವನ್ನು ತೆಗೆದುಹಾಕಲಾಗಿದೆ. ವಾರ್ಷಿಕ ಅಥವಾ ಮಾಸಿಕ ರಿಟರ್ನ್ಸ್ ಗಳಲ್ಲಿ ತಪ್ಪು ಅಥವಾ ಸುಳ್ಳು ಮಾಹಿತಿ ಅಥವಾ ಅಪೂರ್ಣ ಮಾಹಿತಿ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವನ್ನು ರಾಜ್ಯ ಸರ್ಕಾರದ ಜೊತೆಗೆ ಹೆಚ್ಚುವರಿಯಾಗಿ ಐಬಿಎಂಗೂ ನೀಡಲಾಗಿದೆ.

(v) 25 ಹೆಕ್ಟರ್ ಗೂ ಕಡಿಮೆ ಗುತ್ತಿಗೆ ಪ್ರದೇಶ ಹೊಂದಿರುವವರ್ಗದ ಗಣಿಗಳಿಗೆ ಅರೆಕಾಲಿಕ ಗಣಿಗಾರಿಕೆ ಎಂಜಿನಿಯರ್ ಮತ್ತು ಅರೆಕಾಲಿಕ ಭೂ ವಿಜ್ಞಾನಿಗಳನ್ನು ನಿಯೋಜಿಸಿಕೊಳ್ಳಬಹುದು. ಇದರಿಂದಾಗಿ ಸಣ್ಣ ಗಣಿಗಳ ಮಾಲೀಕರಿಗೆ ಅನುಪಾಲನಾ ಹೊರೆ ತಗ್ಗುತ್ತದೆ.

(vi) ಉದ್ಯೋಗವಕಾಶಗಳನ್ನು ಹೆಚ್ಚಿಸುವ ಸಲುವಾಗಿ, ಗಣಿಗಾರಿಕೆ ಮತ್ತು ಗಣಿ ಸಮೀಕ್ಷೆಯ ಡಿಪ್ಲೋಮಾವನ್ನು ಸೂಕ್ತ ಮಾನ್ಯತೆ ಪಡೆದ ಸಂಸ್ಥೆಗಳಿಗೆ ನೀಡಲಾಗಿದೆ, ಜೊತೆಗೆ ಗಣಿ ಸುರಕ್ಷತೆಯ ಮಹಾನಿರ್ದೇಶಕರು ನೀಡಿದ ಎರಡನೇ ದರ್ಜೆಯ ಸಾಮರ್ಥ್ಯದ ಪ್ರಮಾಣಪತ್ರದೊಂದಿಗೆ ಪೂರ್ಣ ಪ್ರಮಾಣದ ಗಣಿ ಎಂಜಿನಿಯರ್ ಅರ್ಹತೆಯಲ್ಲಿ ಸೇರಿಸಲಾಗಿದೆ. ಅಲ್ಲದೆ, ಅರೆಕಾಲಿಕ ಮೈನಿಂಗ್ ಎಂಜಿನಿಯರಿಂಗ್ ಅರ್ಹತೆಯನ್ನೂ ಸಹ ಸೇರ್ಪಡೆ ಮಾಡಲಾಗಿದೆ.

(vii) ನಿಯಮಗಳಲ್ಲಿನ ದಂಡದ ನಿಬಂಧನೆಗಳನ್ನು ಏಕರೂಪಗೊಳಿಸಲಾಗಿದೆ. ಹಿಂದೆ ನಿಯಮಗಳನ್ನು ಉಲ್ಲಂಘಿಸಿದ ತೀವ್ರತೆಯನ್ನು ಲೆಕ್ಕಿಸದೆ ಪ್ರತಿಯೊಂದು ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಎರಡು ವರ್ಷಗಳವರೆಗೆ  ಜೈಲು ಶಿಕ್ಷೆ ಅಥವಾ 5ಲಕ್ಷ ರೂ.ಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿತ್ತು. ಆದರೆ ತಿದ್ದುಪಡಿ ನಿಯಮಗಳನ್ನು ಕೆಳಗಿನ ಪ್ರಮುಖ ವಿಭಾಗಗಳಲ್ಲಿ ವರ್ಗೀಕರಿಸಲಾಗಿದೆ.

a.      ಪ್ರಮುಖ ಉಲ್ಲಂಘನೆಗಳು: ಜೈಲು ಶಿಕ್ಷೆ, ದಂಡ ಅಥವಾ ಎರಡೂ.

b.     ಸಣ್ಣ ಪ್ರಮಾಣದ ಉಲ್ಲಂಘನೆ: ದಂಡದ ಮೊತ್ತ ಕಡಿತ. ನಿಯಮ ಉಲ್ಲಂಘನೆಗೆ ದಂಡವನ್ನು ನಿಗದಿಪಡಿಸಲಾಗಿದೆ.

c.      ಇತರೆ ನಿಯಮ ಉಲ್ಲಂಘನೆಯನ್ನು ಅಪರಾಧಮುಕ್ತಗೊಳಿಸಲಾಗಿದೆ. ನಿಯಮಗಳನ್ನು ವಿನಾಯಿತಿ ಹೊಂದಿರುವವರು ಅಥವಾ ಇತರೆ ಯಾವುದೇ ವ್ಯಕ್ತಿಗಳ ಮೇಲೆ ಮಹತ್ವದ ಹೊಣೆಗಾರಿಕೆ ನೀಡಿಲ್ಲ. ಹೀಗಾಗಿ 24 ನಿಯಮಗಳ ಉಲ್ಲಂಘನೆಯನ್ನು ಅಪರಾಧ ಮುಕ್ತಗೊಳಿಸಲಾಗಿದೆ.

(viii) ನಿರ್ದಿಷ್ಟಪಡಿಸಿದ ಅವಧಿಯೊಳಗೆ ಅಂತಿಮ ಗಣಿ ಮುಚ್ಚುವ ಯೋಜನೆಯನ್ನು ಸಲ್ಲಿಸದಿದ್ದರೆ ಗುತ್ತಿಗೆದಾರರ ಹಣಕಾಸು ಖಾತ್ರಿ ಅಥವಾ ಕಾರ್ಯಕ್ಷಮತೆಯ ಭದ್ರತೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

(ix) ಆರ್ಥಿಕ ಖಾತ್ರಿಯ ಮೊತ್ತದ ಪ್ರಮಾಣವನ್ನುವರ್ಗದ ಗಣಿಗಳಿಗೆ ಹಾಲಿ ಇರುವ 3 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಮತ್ತುಬಿವರ್ಗದ ಗಣಿಗಳಿಗೆ ಹಾಲಿ ಇರುವ 2 ಲಕ್ಷ ರೂ,ಗಳನ್ನು 3 ಲಕ್ಷ ರೂಗಳಿಗೆ ಕ್ರಮವಾಗಿ ಹೆಚ್ಚಿಸಲಾಗುವುದು.

ತಿದ್ದುಪಡಿ ನಿಯಮದ ಅಧಿಸೂಚನೆ ಗಣಿಗಾರಿಕೆ ಸಚಿವಾಲಯದ ವೆಬ್ ಸೈಟ್ (www.mines.gov.in) ನಲ್ಲಿ ಲಭ್ಯವಿದೆ

***


(Release ID: 1770601) Visitor Counter : 234