ಜಲ ಶಕ್ತಿ ಸಚಿವಾಲಯ

ಗ್ರಾಮೀಣ ಪ್ರದೇಶಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಮತ್ತು ಸೌರ ಶಕ್ತಿ ಬಳಕೆ ಕುರಿತು 18,000 ಮಹಿಳಾ ಸ್ವ ಸಹಾಯ ಗುಂಪುಗಳ ಸದಸ್ಯರಿಗೆ ತರಬೇತಿ ನೀಡಲಿರುವ ಕರ್ನಾಟಕ


ತರಬೇತಿ ಪಡೆದ ಮಹಿಳೆಯರನ್ನು ‘ಸ್ವಚ್ಛ ಕಾರ್ಮಿಕರ’ನ್ನಾಗಿ ತೊಡಗಿಸಿಕೊಳ್ಳಲಿರುವ ಗ್ರಾಮ ಪಂಚಾಯ್ತಿಗಳು

ಎಲ್ಲ 30 ಜಿಲ್ಲೆಗಳಲ್ಲಿ ತರಗತಿ ತರಬೇತಿ ನೀಡುವುದರಿಂದ 18,000 ಗ್ರಾಮೀಣ ಮಹಿಳೆಯರಿಗೆ ಪರ್ಯಾಯ ಆದಾಯ ಮೂಲ ಕಂಡುಕೊಳ್ಳಲು ಅನುಕೂಲ

Posted On: 09 NOV 2021 12:14PM by PIB Bengaluru

ಮಹಾತ್ಮ ಗಾಂಧಿ ಗ್ರಾಮೀಣ ಶಕ್ತಿ ಮತ್ತು ಅಭಿವೃದ್ಧಿ ಕೇಂದ್ರ (ಎಂಜಿಐಆರ್ ಇಡಿ), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನಿರ್ಮಲೀಕರಣ ಇಲಾಖೆ ಮತ್ತು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್ಆರ್ ಎಲ್ಎಂ) ಸಹಭಾಗಿತ್ವಲ್ಲಿ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ಸ್ವಸಹಾಯ ಗುಂಪುಗಳ 18 ಸಾವಿರ ಗ್ರಾಮೀಣ ಮಹಿಳೆಯರಿಗೆ ಘನತ್ಯಾಜ್ಯ ನಿರ್ವಹಣೆ ಮತ್ತು ಸೌರಶಕ್ತಿ ಬಳಕೆ ಮತ್ತಿತರ ವಿಷಯಗಳ ಕುರಿತು ತರಬೇತಿ ನೀಡುತ್ತಿದೆ. ಈ ತರಬೇತಿ ಪಡೆದ ಮಹಿಳೆಯರನ್ನು ಸ್ಥಳೀಯ ಗ್ರಾಮ ಪಂಚಾಯಿತಿಗಳು ದಿನ ನಿತ್ಯದ ಘನತ್ಯಾಜ್ಯ ನಿರ್ವಹಣಾ ಕರ್ತವ್ಯಗಳಾದ ತ್ಯಾಜ್ಯ ಸಂಗ್ರಹಣೆ, ತ್ಯಾಜ್ಯ ವಿಂಗಡಣೆ, ಸ್ವಚ್ಛ ವಾಹಿನಿ ಮುನ್ನಡೆಸುವುದು ಮತ್ತಿತರ ಕಾರ್ಯಗಳಿಗೆ ಸ್ವಚ್ಛ ಕಾರ್ಮಿಕರನ್ನಾಗಿ ತೊಡಗಿಸಿಕೊಳ್ಳಲಿದೆ.

ಈ ಕಾರ್ಯಕ್ರಮ ಐದು ದಿನಗಳ ತರಗತಿ ತರಬೇತಿ ಮತ್ತು ಪ್ರವಾಸವನ್ನು ಒಳಗೊಂಡಿದೆ. ಈ ಕಾರ್ಯಕ್ರಮದ ಉದ್ದೇಶ ಸ್ವಚ್ಛ ಸಂಕೀರ್ಣವನ್ನು ಒಂದು ವ್ಯಾವಹಾರಿಕ ಮಾದರಿಯನ್ನಾಗಿ ಸಮರ್ಥವಾಗಿ ನಿರ್ವಹಿಸಲು ಸ್ವಸಹಾಯ ಗುಂಪುಗಳ ಸದಸ್ಯರಿಗೆ ಅಗತ್ಯ ಜ್ಞಾನ ಮತ್ತು ಕೌಶಲ್ಯವನ್ನು ಒದಗಿಸುವುದಾಗಿದೆ ಹಾಗೂ ಘನತ್ಯಾಜ್ಯ ನಿರ್ವಹಣಾ ಘಟಕಗಳನ್ನು ಸುಸ್ಥಿರವನ್ನಾಗಿ ಹಾಗೂ ಎಸ್ಎಚ್ ಜಿ ಸದಸ್ಯರಿಗೆ ಆರ್ಥಿಕ ನೆರವಿನ ಮೂಲವನ್ನಾಗಿ ಮಾಡಲಾಗುವುದು.  

  ಶ್ರೀ ಪರಮೇಶ್ವರ ಹೆಗಡೆ (ಆರ್ ಡಿಡಬ್ಲ್ಯೂಎಸ್ ಡಿಯ ಐಎಸ್ಎ ನಿರ್ದೇಶಕರು) ಹೇಳುವಂತೆ ಈ ಹಣಕಾಸು ವರ್ಷದಲ್ಲಿ ಎಲ್ಲ 30 ಜಿಲ್ಲೆಗಳಲ್ಲಿ ತರಗತಿ ತರಬೇತಿಯನ್ನು ನೀಡುವುದರಿಂದ 18,000 ಗ್ರಾಮೀಣ ಮಹಿಳೆಯರಿಗೆ ಅನುಕೂಲವಾಗಲಿದ್ದು, ಅವರಿಗೆ ಆದಾಯಕ್ಕೆ ಪರ್ಯಾಯ ಮೂಲ  ಲಭ್ಯವಾಗಲಿದೆ ಎಂದರು. ಈ ಕಾರ್ಯಕ್ರಮ ಉಚಿತವಾಗಿದೆ ಮತ್ತು ಇದರಲ್ಲಿ ಪ್ರತಿ ಗ್ರಾಮ ಪಂಚಾಯಿತಿಯ ಮೂವರು ಮಹಿಳೆಯರಿಗೆ ಉಚಿತ ಪ್ರಯಾಣ, ವಾಸ್ತವ್ಯ ಮತ್ತು ಆತಿಥ್ಯ ಒಳಗೊಂಡಿದೆ. ಈ ವರ್ಷ ಪ್ರತಿ ಬ್ಯಾಚ್ ಗೆ 30 ಮಹಿಳೆಯರನ್ನೊಳಗೊಂಡಂತೆ 600 ಬ್ಯಾಚ್ ಗಳಲ್ಲಿ ತರಬೇತಿ ನೀಡಲಾಗುವುದು. ಪ್ರತಿ ಬ್ಯಾಚ್ ಗೆ 70,000 ದಿಂದ ಒಂದು ಲಕ್ಷ ರೂಪಾಯಿವರೆಗೆ ವೆಚ್ಚ ತಗುಲಲಿದೆ.

 ಸ್ವಸಹಾಯ ಗುಂಪುಗಳ ಸದಸ್ಯರಿಗೆ ನವೀಕರಿಸಬಹುದಾದ ಇಂಧನ ಮೂಲಗಳು, ಘನತ್ಯಾಜ್ಯ ನಿರ್ವಹಣೆ, ಹಸಿ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಮಾಡುವ ನಾನಾ ತಂತ್ರಜ್ಞಾನಗಳು, ಜೈವಿಕವಾಗಿ ಕರಗುವ ತ್ಯಾಜ್ಯದಿಂದ ಜೈವಿಕ ಇಂಧನ ಉತ್ಪಾದನೆಯನ್ನು ಕಲಿತುಕೊಳ್ಳುತ್ತಾರೆ ಮತ್ತು ತರಬೇತಿ ನಂತರ ಋತುಚಕ್ರ ಆರೋಗ್ಯ ಮತ್ತು ನಿರ್ವಹಣೆ ಪ್ರಾಮುಖ್ಯತೆ ಕುರಿತು ತಿಳಿಸಿಕೊಡಲಾಗುವುದು. ತರಬೇತಿ ಪಡೆದ ಮಹಿಳಾ ಸದಸ್ಯರು ತಮ್ಮ ತಮ್ಮ ಗ್ರಾಮ ಪಂಚಾಯಿತಿಗಳಲ್ಲಿ ತ್ಯಾಜ್ಯ ವಿಂಗಡಣೆ, ಹಸಿ ತ್ಯಾಜ್ಯ ಗೊಬ್ಬರ ಮಾಡುವುದು ಮತ್ತು ಜೈವಿಕ ಘಟಕ ನಿರ್ವಹಣೆ ಮತ್ತಿತರ ಕರ್ತವ್ಯಗಳಲ್ಲಿ ತೊಡಗಿಸಿಕೊಳ್ಳುವರು. ಇವುಗಳನ್ನು ಅವರು ತರಬೇತಿ ವೇಳೆ ಪ್ರಾಯೋಗಿಕವಾಗಿ ತಿಳಿದುಕೊಂಡಿರುತ್ತಾರೆ.

ಅಲ್ಲದೆ ತರಬೇತಿ ಪಡೆದ ಮಹಿಳೆಯರನ್ನು  ಜಿಪಿಎಲ್ಎಫ್ (ಗ್ರಾಮಪಂಚಾಯತ್ ಮಟ್ಟದ ಫೆಡರೇಷನ್)ನೊಂದಿಗೆ – ವಿಲೀನಗೊಳಿಸಿಕೊಳ್ಳಲು (ಸೇರ್ಪಡೆ ಮಾಡಿಕೊಳ್ಳಲು) ಒಪ್ಪಂದಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

 

ಐದು ದಿನಗಳ ತರಬೇತಿಯ ಕಾರ್ಯಕ್ರಮ ಕಾರ್ಯಸೂಚಿಯಲ್ಲಿ ಈ ಅಂಶಗಳು ಒಳಗೊಂಡಿವೆ:

  • ಎಂಜಿಐಆರ್ ಇಡಿಯಲ್ಲಿ ಇಂಧನ, ನವೀಕರಿಸಬಹುದಾದ ಇಂಧನ, ಸೌರ, ಪವನ, ಸಣ್ಣ ಜಲವಿದ್ಯುತ್, ಜೈವಿಕ ವಿದ್ಯುತ್ ಕುರಿತು ಪರಿಚಯಿಸುವುದು.
  • ಚಟುವಟಿಕೆಗಳೊಂದಿಗೆ ತ್ಯಾಜ್ಯ ಮತ್ತು ಘನತ್ಯಾಜ್ಯ ನಿರ್ವಹಣೆ ಕುರಿತು ತಿಳಿಸಿಕೊಡುವುದು, ಎಂಜಿಐಆರ್ ಇಡಿಯಲ್ಲಿ ಗುಂಪು ಚರ್ಚೆ, ಚಿತ್ರ ಬಿಡಿಸುವುದು, ಕ್ಯಾಂಪಸ್ ಗಳಲ್ಲಿ ಸಮೀಕ್ಷೆ ನಡೆಸುವುದು ಸೇರಿದೆ.  
  • ಸಮೀಪದ ಗ್ರಾಮ ಪಂಚಾಯಿತಿಯ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿ, ವಾಸ್ತವವಾಗಿ ಮೂಲ ವಿಂಗಡಣೆ, ದ್ವಿತೀಯ ವಿಂಗಡಣೆ, ಟೆಂಡರಿಂಗ್ ಇತ್ಯಾದಿಗಳ ಬಗ್ಗೆ ಪ್ರಾಯೋಗಿಕವಾಗಿ ತಿಳಿದುಕೊಳ್ಳುವುದು.
  •  ಎಂಜಿಐಆರ್ ಇಡಿಯಲ್ಲಿ ಎರೆಹುಳುವಿನ ಗೊಬ್ಬರ ತಂತ್ರಜ್ಞಾನಗಳು(ಥಿಯರಿ ಮತ್ತು ಪ್ರಾಯೋಗಿಕ) ತಿಳಿದುಕೊಳ್ಳುವುದು.
  • ಜೈವಿಕ ಅನಿಲ ತಂತ್ರಜ್ಞಾನಗಳನ್ನು ಪರಿಚಯಿಸುವುದು ಮತ್ತು ನಾನಾ ವಿಧದ ಜೈವಿಕ ಅನಿಲ ಘಟಕಗಳನ್ನು ನಿರ್ವಹಿಸುವುದು, ಸರ್ಕಾರದ ಯೋಜನೆಗಳು, ಮಾರ್ಗಸೂಚಿಗಳು ಮತ್ತು ಜೈವಿಕ ಅನಿಲ ಘಟಕಗಳಿಗೆ ಸಬ್ಸಿಡಿ - ಎಂಜಿಐಆರ್ ಇಡಿ
  •  ಎಂಜಿಐಆರ್ ಇಡಿಯಲ್ಲಿ ಇಂಧನ ಪಾರ್ಕ್ ಪ್ರಾತ್ಯಕ್ಷಿಕೆ.
  • ಸ್ಯಾನಿಟರಿ ಪ್ಯಾಡ್ ಗಳ ನಿರ್ವಹಣೆ ಮತ್ತು ಅವುಗಳಿಗೆ ಪರ್ಯಾಯಗಳನ್ನು ಹುಡುಕುವುದು.
  •  ಎಂಜಿಐಆರ್ ಇಡಿಯಲ್ಲಿ ಪೈಪ್, ಕಾಂಪೋಸ್ಟಿಂಗ್ ಪ್ರಾಯೋಗಿಕ ಮತ್ತು ವಾಸ್ತವಿಕವಾಗಿ ತಿಳಿದುಕೊಳ್ಳುವುದು.
  • ಸಮೀಪದ ಗ್ರಾಮ ಪಂಚಾಯಿತಿಯ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ, ಅಲ್ಲಿ ಪ್ರಾಥಮಿಕ, ದ್ವಿತೀಯ ಹಂತದ ವಿಂಗಡಣೆ, ಟೆಂಡರಿಂಗ್ ಇತ್ಯಾದಿಗಳ ಬಗ್ಗೆ ತಿಳಿದುಕೊಳ್ಳುವುದು.
  • ಜೈವಿಕ ಅನಿಲ ಬಾಟ್ಲಿಂಗ್ ಘಟಕ ಮತ್ತು ಜೈವಿಕ ಅನಿಲದಿಂದ ವಿದ್ಯುತ್ ಘಟಕ, ಅಧ್ಯಯನ ಮತ್ತು ಸಮೀಪದ ಕೃಷಿ ಕಾಲೇಜಿನಲ್ಲಿ ವಾಣಿಜ್ಯ ಎರೆಹುಳುವಿನ ಗೊಬ್ಬರ ವಿಧಾನಗಳ ಅಧ್ಯಯನ ಮತ್ತು ಜೈವಿಕ ಅನಿಲದಿಂದ ವಿದ್ಯುತ್ ಘಟಕಗಳವರೆಗೆ ಭೇಟಿ.
  • ಎಂಜಿಐಆರ್ ಇಡಿಯಲ್ಲಿ ಮೌಲ್ಯಮಾಪನ ಮತ್ತು ಭಾಗವಹಿಸಿರುವವರ ಪ್ರತಿಕ್ರಿಯೆಗಳು

A picture containing groundDescription automatically generated

 

***                                          



(Release ID: 1770326) Visitor Counter : 494


Read this release in: English , Urdu , Hindi , Tamil , Telugu