ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav g20-india-2023

2020 ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ವಿಜೇತರಿಗೆ ಕ್ರೀಡಾ ಸಚಿವಾಲಯದಿಂದ ಭೌತಿಕವಾಗಿ ಟ್ರೋಫಿಗಳ ಪ್ರದಾನ, ಕಾರ್ಯಕ್ರಮದಲ್ಲಿ ಕೇಂದ್ರ ಕ್ರೀಡಾ ಸಚಿವರ ಉಪಸ್ಥಿತಿ


ಭವಿಷ್ಯದಲ್ಲಿ ಭಾರತಕ್ಕೆ ಪದಕಗಳನ್ನು ಗೆಲ್ಲಬಲ್ಲ ಕನಿಷ್ಠ ಐದು ಅಥ್ಲೀಟ್‌ಗಳನ್ನು ಸಿದ್ಧಗೊಳಿಸುವ ಮತ್ತು ತರಬೇತಿ ನೀಡುವ ಪ್ರತಿಜ್ಞೆಯನ್ನು ಎಲ್ಲಾ ಅಥ್ಲೀಟ್‌ಗಳು ಮಾಡಬೇಕು: ಶ್ರೀ ಅನುರಾಗ್ ಠಾಕೂರ್

Posted On: 01 NOV 2021 6:32PM by PIB Bengaluru

ದೆಹಲಿಯ ಅಶೋಕ ಹೋಟೆಲ್‌ನಲ್ಲಿ ಇಂದು ನಡೆದ ಸಮಾರಂಭದಲ್ಲಿ ಕಳೆದ ವರ್ಷದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ವಿಜೇತರಿಗೆ ಕ್ರೀಡಾ ಸಚಿವಾಲಯವು ಭೌತಿಕವಾಗಿ ಟ್ರೋಫಿಗಳನ್ನು ಪ್ರದಾನ ಮಾಡಲಾಯಿತು. 2020 ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳು ಎಲ್ಲಾ ವಿಜೇತರು ಈಗಾಗಲೇ ನಗದು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಆದರೆ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಕಳೆದ ವರ್ಷದ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವರ್ಚುವಲ್ ಮಾದರಿಯಲ್ಲಿ ನಡೆಸಿದಾಗ ಅವರ ಟ್ರೋಫಿಗಳು ಮತ್ತು ಪ್ರಶಸ್ತಿಪತ್ರಗಳನ್ನು ನೀಡಲು ಸಾಧ್ಯವಾಗಿರಲಿಲ್ಲ. ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಮತ್ತು ಕ್ರೀಡಾ ಕಾರ್ಯದರ್ಶಿ ಶ್ರೀಮತಿ ಸುಜಾತಾ ಚತುರ್ವೇದಿ, ಯುವ ವ್ಯವಹಾರಗಳ ಕಾರ್ಯದರ್ಶಿ ಶ್ರೀಮತಿ ಉಷಾ ಶರ್ಮಾ ಮತ್ತು ಇತರ ಉನ್ನತ ಸಚಿವಾಲಯ ಮತ್ತು ಭಾರತ ಕ್ರೀಡ ಪ್ರಾಧಿಕಾರದ (ಎಸ್ ಎ ಐ)  ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

29 ಆಗಸ್ಟ್ 2020 ರಂದು, ಕ್ರೀಡಾ ಸಚಿವಾಲಯವು 5 ರಾಜೀವ್ ಗಾಂಧಿ ಖೇಲ್ ರತ್ನ ಮತ್ತು 27 ಅರ್ಜುನ ಪ್ರಶಸ್ತಿಗಳು ಸೇರಿದಂತೆ ಒಟ್ಟು 74 ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡಿತು.  ಸೋಮವಾರದ ಸಮಾರಂಭದಲ್ಲಿ ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿ ಪಡೆದ ರಾಣಿ ರಾಂಪಾಲ್, ವಿನೇಶ್ ಫೋಗಟ್ ಮತ್ತು ಮರಿಯಪ್ಪನ್ ತಂಗವೇಲು ಮತ್ತು ಅರ್ಜುನ ಪ್ರಶಸ್ತಿ ವಿಜೇತರಾದ ಲವ್ಲಿನಾ ಬೊರ್ಗೊಹೈನ್, ಇಶಾಂತ್ ಶರ್ಮಾ, ಅತಾನು ದಾಸ್, ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ, ಚಿರಾಗ್ ಚಂದ್ರಶೇಖರ್ ಶೆಟ್ಟಿ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕೃತರು ಭಾಗವಹಿಸಿದ್ದರು.

ಪ್ರಶಸ್ತಿ ಪುರಸ್ಕೃತರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಅನುರಾಗ್ ಠಾಕೂರ್, "ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳು ಪ್ರತಿಷ್ಠಿತ ಪ್ರಶಸ್ತಿಗಳಾಗಿವೆ, ಇದು ಹಲವಾರು ವರ್ಷಗಳ ಶ್ರದ್ಧೆ ಮತ್ತು ಕಠಿಣ ಪರಿಶ್ರಮಕ್ಕಾಗಿ ಕ್ರೀಡಾಪಟುಗಳಿಗೆ ದಕ್ಕುತ್ತವೆ. ಎಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಗಳು ಮತ್ತು ಅವರ ಮುಂದಿನ ಸ್ಪರ್ಧೆಗಳಿಗೆ ಶುಭಾಶಯಗಳು” ಎಂದರು. ಪ್ರಶಸ್ತಿ ಪುರಸ್ಕೃತರ ಪ್ರಯಾಣವು ಇಲ್ಲಿಗೆ ಮುಗಿಯುವುದಿಲ್ಲ, ಸಾಧಿಸಲು ಇನ್ನೂ ಸಾಕಷ್ಟಿದೆ. ನಾವು ಪ್ರತಿಭಾವಂತ ಕ್ರೀಡಾಪಟುಗಳನ್ನು ಹುಡುಕುವುದನ್ನು ಮುಂದುವರಿಸಬೇಕು, ಅವರನ್ನು ಸಿದ್ಧಪಡಿಸಬೇಕು ಮತ್ತು ಅವರಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆಲ್ಲುವ ಸಾಮರ್ಥ್ಯವನ್ನು ಸೃಷ್ಟಿಸಬೇಕು. ಆದ್ದರಿಂದ, ಎಲ್ಲಾ ಕ್ರೀಡಾಪಟುಗಳು ಭವಿಷ್ಯದಲ್ಲಿ ಭಾರತಕ್ಕೆ ಪದಕಗಳನ್ನು ಗೆಲ್ಲಬಲ್ಲ ಕನಿಷ್ಠ ಐದು ಕ್ರೀಡಾಪಟುಗಳನ್ನು ಸಿದ್ಧಗೊಳಿಸಿ ಅವರಿಗೆ ತರಬೇತಿ ನೀಡುವ ಪ್ರತಿಜ್ಞೆಯನ್ನು ಮಾಡುವಂತೆ ನಾನು ವಿನಂತಿಸುತ್ತೇನೆ ಎಂದು ಸಚಿವರು ಹೇಳಿದರು.

2020 ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪುರಸ್ಕೃತರ ಪಟ್ಟಿ 
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ: ರೋಹಿತ್ ಶರ್ಮಾ (ಕ್ರಿಕೆಟ್), ಮರಿಯಪ್ಪನ್ ತಂಗವೇಲು (ಪ್ಯಾರಾ ಅಥ್ಲೆಟಿಕ್ಸ್), ಮಣಿಕಾ ಬಾತ್ರಾ (ಟೇಬಲ್ ಟೆನಿಸ್), ವಿನೇಶ್ ಫೋಗಟ್ (ಕುಸ್ತಿ), ರಾಣಿ ರಾಂಪಾಲ್ (ಹಾಕಿ).
ಅರ್ಜುನ ಪ್ರಶಸ್ತಿ: ಅತಾನು ದಾಸ್ (ಆರ್ಚರಿ), ದ್ಯುತಿ ಚಾದ್ (ಅಥ್ಲೆಟಿಕ್ಸ್), ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ (ಬ್ಯಾಡ್ಮಿಂಟನ್), ಚಿರಾಗ್ ಚಂದ್ರಶೇಖರ್ ಶೆಟ್ಟಿ (ಬ್ಯಾಡ್ಮಿಂಟನ್), ವಿಶೇಷ್ ಭೃಗುವಂಶಿ (ಬ್ಯಾಸ್ಕೆಟ್‌ಬಾಲ್), ಮನೀಶ್ ಕೌಶಿಕ್ (ಬಾಕ್ಸಿಂಗ್), ಲವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್), ಇಶಾಂತ್ ಶರ್ಮಾ (ಕ್ರಿಕೆಟ್), ದೀಪ್ತಿ ಶರ್ಮಾ (ಕ್ರಿಕೆಟ್), ಸಾವಂತ್ ಅಜಯ್ ಅನಂತ್ (ಈಕ್ವೆಸ್ಟ್ರಿಯನ್), ಸಂದೇಶ್ ಜಿಂಗನ್ (ಫುಟ್‌ಬಾಲ್), ಅದಿತಿ ಅಶೋಕ್ (ಗಾಲ್ಫ್), ಆಕಾಶದೀಪ್ ಸಿಂಗ್ (ಹಾಕಿ), ದೀಪಿಕಾ (ಹಾಕಿ), ದೀಪಕ್ (ಕಬಡ್ಡಿ), ಕಾಳೆ ಸಾರಿಕಾ ಸುಧಾಕರ್ (ಖೋ ಖೋ), ದತ್ತುಬಾಬನ್ ಭೋಕನಲ್ ( ರೋಯಿಂಗ್), ಮನು ಭಾಕರ್ (ಶೂಟಿಂಗ್), ಸೌರಭ್ ಚೌಧರಿ (ಶೂಟಿಂಗ್), ಮಧುರಿಕಾ ಪಾಟ್ಕರ್ (ಟೇಬಲ್ ಟೆನಿಸ್), ದಿವಿಜ್ ಶರಣ್ (ಟೆನಿಸ್), ಶಿವ ಕೇಶವನ್ (ಚಳಿಗಾಲದ ಕ್ರೀಡೆ), ದಿವ್ಯಾ ಕಾಕ್ರನ್ (ಕುಸ್ತಿ), ರಾಹುಲ್ ಅವೇರ್ (ಕುಸ್ತಿ), ಸುಯಶ್ ನಾರಾಯಣ ಜಾಧವ್ (ಪ್ಯಾರಾ- ಈಜು), ಸಂದೀಪ್ (ಪ್ಯಾರಾ-ಅಥ್ಲೆಟಿಕ್ಸ್), ಮನೀಶ್ ನರ್ವಾಲ್ (ಪ್ಯಾರಾ ಶೂಟಿಂಗ್).

ದ್ರೋಣಾಚಾರ್ಯ ಪ್ರಶಸ್ತಿ (ಜೀವಮಾನ ಸಾಧನೆ ವಿಭಾಗ): ಧರ್ಮೇಂದ್ರ ತಿವಾರಿ (ಆರ್ಚರಿ), ಪುರುಷೋತ್ತಮ ರೈ (ಅಥ್ಲೆಟಿಕ್ಸ್), ಶಿವ ಸಿಂಗ್ (ಬಾಕ್ಸಿಂಗ್), ರೋಮೇಶ್ ಪಠಾನಿಯಾ (ಹಾಕಿ), ಕ್ರಿಶನ್ ಕುಮಾರ್ ಹೂಡಾ (ಕಬಡ್ಡಿ), ವಿಜಯ್ ಭಾಲ್ಚಂದ್ರ ಮುನೀಶ್ವರ್ (ಪ್ಯಾರಾ ಪವರ್‌ಲಿಫ್ಟಿಂಗ್), ನರೇಶ್ ಕುಮಾರ್ (ಟ್ರೇನ್) , ಓಂ ಪ್ರಕಾಶ್ ದಹಿಯಾ (ಕುಸ್ತಿ).
ದ್ರೋಣಾಚಾರ್ಯ ಪ್ರಶಸ್ತಿ (ಸಾಮಾನ್ಯ ವಿಭಾಗ): ಜೂಡ್ ಫೆಲಿಕ್ಸ್ (ಹಾಕಿ), ಯೋಗೇಶ್ ಮಾಲ್ವಿಯಾ (ಮಲ್ಲಕಂಬ), ಜಸ್ಪಾಲ್ ರಾಣಾ (ಶೂಟಿಂಗ್), ಕುಲದೀಪ್ ಕುಮಾರ್ ಹಂಡೂ (ವುಶು), ಗೌರವ್ ಖನ್ನಾ (ಪ್ಯಾರಾ ಬ್ಯಾಡ್ಮಿಂಟನ್).
ಧ್ಯಾನ್ ಚಂದ್ ಪ್ರಶಸ್ತಿ: ಕುಲದೀಪ್ ಸಿಂಗ್ ಭುಲ್ಲರ್ (ಅಥ್ಲೆಟಿಕ್ಸ್), ಜಿನ್ಸಿ ಫಿಲಿಪ್ಸ್ (ಅಥ್ಲೆಟಿಕ್ಸ್), ಪ್ರದೀಪ್ ಶ್ರೀಕೃಷ್ಣ ಗಂಧೆ (ಬ್ಯಾಡ್ಮಿಂಟನ್), ತೃಪ್ತಿ ಮುರ್ಗುಂಡೆ (ಬ್ಯಾಡ್ಮಿಂಟನ್), ಎನ್ ಉಷಾ (ಬಾಕ್ಸಿಂಗ್), ಲಾಖಾ ಸಿಂಗ್ (ಬಾಕ್ಸಿಂಗ್), ಸುಖವಿಂದರ್ ಸಿಂಗ್ ಸಂಧು (ಫುಟ್‌ಬಾಲ್), ಅಜಿತ್ ಸಿಂಗ್ ( ಹಾಕಿ), ಮನ್‌ಪ್ರೀತ್ ಸಿಂಗ್ (ಕಬಡ್ಡಿ), ಜೆ ರಂಜಿತ್ ಕುಮಾರ್ (ಪ್ಯಾರಾ-ಅಥ್ಲೆಟಿಕ್ಸ್), ಸತ್ಯಪ್ರಕಾಶ್ ತಿವಾರಿ (ಪ್ಯಾರಾ ಬ್ಯಾಡ್ಮಿಂಟನ್), ಮಂಜೀತ್ ಸಿಂಗ್ (ರೋಯಿಂಗ್), ದಿವಂಗತ ಶ್ರೀ ಸಚಿನ್ ನಾಗ್ (ಈಜು), ನಂದನ್ ಬಾಲ್ (ಟೆನಿಸ್), ನೆತರ್‌ಪಾಲ್‌ ಹೂಡಾ (ಕುಸ್ತಿ).
ತೇನ್ಸಿಂಗ್ ನೋರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿಗಳು: ಅನಿತಾ ದೇವಿ (ಭೂ ಸಾಹಸ), ಕರ್ನಲ್ ಸರ್ಫ್ರಾಜ್ ಸಿಂಗ್ (ಭೂ ಸಾಹಸ), ಟಾಕಾ ತಮುತ್ (ಭೂ ಸಾಹಸ), ಕೇವಲ್ ಹಿರೇನ್ ಕಾಕ್ಕಾ (ಭೂ ಸಾಹಸ), ಸತೇಂದ್ರ ಸಿಂಗ್ (ಜಲ ಸಾಹಸ), ಗಜಾನಂದ್ ಯಾದವ (ವಾಯು ಸಾಹಸ), ದಿವಂಗತ ಮಗನ್ ಬಿಸ್ಸಾ (ಜೀವಮಾನ ಸಾಧನೆ).
ಮೌಲಾನಾ ಅಬುಲ್ ಕಲಾಂ ಆಜಾದ್ (ಎಂ ಎ ಕೆ ಎ) ಟ್ರೋಫಿ: ಪಂಜಾಬ್ ವಿಶ್ವವಿದ್ಯಾಲಯ, ಚಂಡೀಗಢ.
ರಾಷ್ಟ್ರೀಯ ಖೇಲ್ ಪ್ರೋತ್ಸಾಹ ಪುರಸ್ಕಾರ:
ಉದಯೋನ್ಮುಖ ಮತ್ತು ಯುವ ಪ್ರತಿಭೆಗಳ ಗುರುತಿಸುವಿಕೆ ಮತ್ತು ಪೋಷಣೆ: ಲಕ್ಷ್ಯ ಸಂಸ್ಥೆ, ಸೇನಾ ಕ್ರೀಡಾ ಸಂಸ್ಥೆ.
ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಮೂಲಕ ಕ್ರೀಡೆಗಳಿಗೆ ಪ್ರೋತ್ಸಾಹ: ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒ ಎನ್ ಜಿ ಸಿ) ಲಿಮಿಟೆಡ್.
ಕ್ರೀಡಾಪಟುಗಳ ಉದ್ಯೋಗ ಮತ್ತು ಕ್ರೀಡಾ ಕಲ್ಯಾಣ ಕ್ರಮಗಳು: ಏರ್ ಫೋರ್ಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್.
ಅಭಿವೃದ್ಧಿಗಾಗಿ ಕ್ರೀಡೆ: ಕ್ರೀಡಾ ನಿರ್ವಹಣೆಯ ಅಂತಾರಾಷ್ಟ್ರೀಯ ಸಂಸ್ಥೆ ( ಐ ಐ ಎಸ್ ಎಂ).

***



(Release ID: 1768778) Visitor Counter : 290