ಗೃಹ ವ್ಯವಹಾರಗಳ ಸಚಿವಾಲಯ

ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ಇಂದು ಮುಖ್ಯಮಂತ್ರಿ ಘಸಿಯಾರಿ ಕಲ್ಯಾಣ್ ಯೋಜನೆ ಮತ್ತು ಸಹಕಾರ ಸಂಸ್ಥೆಗಳ ಕಂಪ್ಯೂಟರಿಕರಣ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಚಾಲನೆ


ಉತ್ತರಾಖಂಡದ ಬೇಡಿಕೆಯ ಹೋರಾಟದಲ್ಲಿ ಅನೇಕ ಯವ ಸಮೂಹ ಹುತಾತ್ಮರಾದರು ಮತ್ತು ಉತ್ತರಾಖಂಡದ ದೇವಭೂಮಿಯನ್ನು ರಚಿಸಿದವರು ಶ್ರೀ ಅಟಲ್ ಬಿಹಾರಿ ವಾಜಪೇಯಿ

ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಉತ್ತರಾಖಂಡವನ್ನು ರಚಿಸಿದರು ಮತ್ತು ಶ‍್ರೀ ನರೇಂದ್ರ ಮೋದಿ ಇದನ್ನು ಅಭಿವೃದ್ಧಿಪಡಿಸಿದ್ದಾರೆ ಹಾಗೂ ರಾಜ್ಯ ಸರ್ವಾಂಗೀಣ ಅಭಿವೃದ್ಧಿಯಾಗುತ್ತಿದೆ

ಪ್ರಧಾನಮಂತ್ರಿ ಶ‍್ರೀ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶದ ಪಿ.ಎ.ಸಿ.ಎಸ್ ಗಳನ್ನು ಕಂಪ್ಯೂಟರೀಕರಣಗೊಳಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಇದಕ್ಕಾಗಿ ಕ್ರಿಯಾ ಯೋಜನೆ ರೂಪಿಸಲಾಗಿದೆ ಹಾಗೂ ನಬಾರ್ಡ್ ನೊಂದಿಗೆ ಜಿಲ್ಲಾ, ರಾಜ್ಯಮಟ್ಟದ ಸಹಕಾರಿ ಬ್ಯಾಂಕ್ ಗಳನ್ನು ಸಂಪರ್ಕಿಸಲಾಗುತ್ತಿದೆ.

ಹಿಂದಿನ ಸರ್ಕಾರಗಳು ಸಹಕಾರಿ ಚಳವಳಿಯನ್ನು ದುರ್ಬಲಗೊಳಿಸಿದ್ದವು, ಆಜಾದಿ ಕಾ ಅಮೃತ್ ಮಹೋತ್ಸವ್ ವರ್ಷಾಚರಣೆ ಸಂದರ್ಭದಲ್ಲಿ ಕೋಟ್ಯಂತರ ರೈತರು, ಮಹಿಳೆಯರು, ಕಾರ್ಮಿಕರು, ಮೀನುಗಾರರ ಕಲ್ಯಾಣಕ್ಕಾಗಿ ಹೊಸ ಸಹಕಾರ ಸಚಿವಾಲಯವನ್ನು ಪ್ರಧಾನಮಂತ್ರಿ ಸ್ಥಾಪಿಸಿದ್ದಾರೆ.

ಇಂದು ಎಲ್ಲಾ ಪಿ.ಎ.ಸಿ.ಎಸ್ [ಪ್ರಾಥಮಿಕ ಕೃಷಿ ಪತ್ತಿನ ಸೊಸೈಟಿ] ಗಳನ್ನು ಕಂಪ್ಯೂಟರೀಕರಣಗೊಳಿಸುವ, ಮುಖ್ಯಮಂತ್ರಿ ಘಸಿಯಾರಿ ಕಲ್ಯಾಣ ಯೋಜನೆ ಮತ್ತು ಸಹಕಾರಿ ವಲಯದ ತರಬೇತಿ ಕೇಂದ್ರಗಳು ಸೇರಿ ಮೂರು ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತಿದೆ

ಶ್ರೀ ನರೇಂದ್ರ ಮೋದಿ ಅವರು ಬಡ ಕುಟುಂಬಕ್ಕೆ ಸೇರಿದವರು ಮತ್ತು ಬಡವರ ನೋವು ಅವರ ಹೃದಯಕ್ಕೆ ಹ

Posted On: 30 OCT 2021 6:34PM by PIB Bengaluru

ಸಹಕಾರ ಸಂಸ್ಥೆಗಳ ಮೂಲಕ ಗಂಗಾಜಲ ವಿತರಣೆ ಕಾರ್ಯಕ್ರಮ ಆರಂಭಗೊಂಡಿದ್ದು, ದೇಶಾದ್ಯಂತ ಭಕ್ತರು ಮನೆಯಲ್ಲಿಯೆ ಗಂಗಾಜಲ ಸ್ವೀಕರಿಸಬಹುದಾಗಿದೆ. ಇದರಿಂದ ಅಭ್ಯುದಯಕ್ಕೆ ಕಾರಣವಾಗಲಿದೆ
ಕೇದಾರನಾಥ್ ತೀವ್ರವಾಗಿ ಹಾನಿಗೊಳಗಾಗಿದ್ದು, ಪ್ರಧಾನಮಂತ್ರಿ ಅವರು ನವೆಂಬರ್ 5 ರಂದು ಭಗವಾನ್ ಆದಿ ಶಂಕರಾಚಾರ್ಯರ ಬೃಹತ್ ಪುತ್ಥಳಿ ಅನಾವರಣಗೊಳಿಸಲಿದ್ದಾರೆ
11,680 ಕೋಟಿ ರೂಪಾಯಿ ವೆಚ್ಚದಲ್ಲಿ ಚಾರ್ ಧಾಮ್ ಗೆ 890 ಕಿಲೋಮೀಟರ್ ಉದ್ದದ ಸರ್ವಋತು ಚತುಷ್ಪಥ ರಸ್ತೆ ನಿರ್ಮಾಣ ಕಾರ್ಯ ಮುಕ್ತಾಯದ ಹಂತದಲ್ಲಿದೆ
ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ ಜನವಾನರಿಲ್ಲದ ಮನೆಯೇ ಉತ್ತರಾಖಂಡದಲ್ಲಿಲ್ಲ. ದೇಶ ರಕ್ಷಣೆಯಲ್ಲಿ ಉತ್ತರಾಖಂಡದ ಸೇನಾನಿಗಳು ಪರಮೋಚ್ಛ ತ್ಯಾಗ ಮಾಡುತ್ತಿದ್ದಾರೆ 
70 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಹಿಂದಿನ ಸರ್ಕಾರ ಜವಾನರಿಗೆ ಒಂದು ಶ್ರೇಣಿ – ಒಂದು ಪಿಂಚಣಿ ಬಗ್ಗೆ ಎಂದಿಗೂ ಮಾತನಾಡಲಿಲ್ಲ. ನೀವು ಶ್ರೀ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿದಾಗ ಅವರು 2016 ರಲ್ಲಿ ತಕ್ಷಣವೇ ಒಂದು ಶ‍್ರೇಣಿ ಒಂದು ಪಿಂಚಣಿ ಕಾರ್ಯಕ್ರಮ ಜಾರಿಗೊಳಿಸಿದರು ಮತ್ತು ಲಕ್ಷಾಂತರ ಜವಾನರಿಗೆ ಅವರ ಹಕ್ಕುಗಳನ್ನು ಒದಗಿಸಿದರು
ನಾವು ಅಭಿವೃದ್ದಿಯಲ್ಲಿ ನಂಬಿಕೆ ಇರಿಸಿದ್ದೇವೆ, ಬಡವರ ನೋವು ನಮಗೆ ತಿಳಿದಿದೆ, ಏಕೆಂದರೆ ಚಹಾ ಮಾರುವ ಬಡ ಕುಟುಂಬದಿಂದ ಈ ಹಂತಕ್ಕೆ ಬಂದವರು ನಮ್ಮ ನಾಯಕ
ಉತ್ತಾರಖಂಡದ ಡೆಹ್ರಾಡೂನ್ ನಲ್ಲಿ ಸಹಕಾರ ಸಂಸ್ಥೆಗಳನ್ನು ಕಂಪ್ಯೂಟರೀಕರಣಗೊಳಿಸುವ ಮತ್ತು ಮುಖ್ಯಮಂತ್ರಿ ಘಸಿಯಾರಿ ಕಲ್ಯಾಣ್ ಯೋಜನೆಗೆ ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಚಾಲನೆ ನೀಡಿದರು. ಉತ್ತರಾಖಂಡದ ಮುಖ್ಯಮಂತ್ರಿ ಶ್ರೀ ಪುಷ್ಕರ್ ಸಿಂಗ್ ಧಮಿ ಮತ್ತು ಕೇಂದ್ರ ಸಚಿವರಾದ ಶ್ರೀ ಅಜಯ್ ಭಟ್ಟಾ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಸಮಾರಂಭ ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವರು, ಉತ್ತರಾಖಂಡವನ್ನು ರಚಿಸಿದವರು ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಮತ್ತು ಉತ್ತರಾಖಂಡದ ಬೇಡಿಕೆಗಾಗಿ ನಡೆದ ಹೋರಾಟದಲ್ಲಿ ಹಲವು ಯಜ ಜನ ಹುತಾತ್ಮರಾದರು. ಆಗಿನ ಸಂದರ್ಭದಲ್ಲಿ ಯುವ ಜನರ ಹೋರಾಟಕ್ಕೆ ನಮ್ಮ ಪಕ್ಷ ಬೆಂಬಲ ನೀಡಿತ್ತು. ಶ‍್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಕೊನೆಯ ಬಾರಿಗೆ ಇಲ್ಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಉತ್ತರಾಖಂಡ ರಚನೆಯಾಯಿತು ಮತ್ತು ಶ್ರೀ ನರೇಂದ್ರ ಮೋದಿ ಅವರು ಇದನ್ನು ಅಭಿವೃದ್ಧಿಪಡಿಸಿದರು, ರಾಜ್ಯ ಈಗ ಸರ್ವಾಂಗೀಣ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು.

ಇಂದು ಎಲ್ಲಾ ಪಿ.ಎ.ಸಿ.ಎಸ್ [ಪ್ರಾಥಮಿಕ ಕೃಷಿ ಪತ್ತಿನ ಸೊಸೈಟಿ]ಗಳನ್ನು ಕಂಪ್ಯೂಟರೀಕರಣಗೊಳಿಸುವ ಕಾರ್ಯ ಪೂರ್ಣಗೊಳ್ಳುತ್ತಿದೆ. ಕಂಪ್ಯೂಟರೀಕರಣಗೊಳಿಸುತ್ತಿರುವುದರಿಂದ ಪಿ.ಎ..ಸಿ.ಎಸ್ ಸದಸ್ಯರು ಇನ್ನು ಮುಂದೆ ಯಾವುದೇ ಹಗರಣದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ. ಇದರಿಂದ ಪಿ.ಎ..ಸಿ.ಎಸ್ ಗಳು ಜಿಲ್ಲಾ ಸಹಕಾರಿ ಬ್ಯಾಂಕ್ ಗಳೊಂದಿಗೆ, ನಂತರ ನಬಾರ್ಡ್ ನೊಂದಿಗೆ ಸಂಪರ್ಕ ಸಾಧಿಸಲಿವೆ. ಇದರಿಂದ ಕೃಷಿಕರ ಎಲ್ಲಾ ಕಾರ್ಯಕ್ರಮಗಳು ಪಿ.ಎ.ಸಿ.ಎಸ್ ಗಳ  ಮೂಲಕ ರೈತರಿಗೆ ತಲುಪಲಿವೆ. ಈವರೆಗೆ ಕೆಲವೇ ಕೆಲವು ರಾಜ್ಯಗಳಲ್ಲಿ ಮಾತ್ರ ಈ ರೀತಿಯ ಕಂಪ್ಯೂಟರೀಕರಣ  ಪೂರ್ಣಗೊಳಿಸಲಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ ಎಲ್ಲಾ ಪಿ.ಎ.ಸಿ.ಎಸ್ ಗಳನ್ನು ಕಂಪ್ಯೂಟರೀಕರಣಗೊಳಿಸುವ ಸಲುವಾಗಿ ನೀಲ ನಕ್ಷೆ ಸಿದ್ಧಪಡಿಸಲಾಗಿದೆ. ಈ ಮೂಲಕ ಜಿಲ್ಲಾ ಮತ್ತು ರಾಜ್ಯ ಸಹಕಾರಿ ಬ್ಯಾಂಕ್ ಗಳನ್ನು ನಬಾರ್ಡ್ ನೊಂದಿಗೆ ಜೋಡಿಸಲಾಗುತ್ತಿದೆ ಎಂದರು.

ಮುಖ್ಯಮಂತ್ರಿ ಘಸಿಯಾರಿ ಯೋಜನೆ ಎರಡನೇ ಪ್ರಮುಖ ಕಾರ್ಯಕ್ರಮವನ್ನು ಇಂದು ಜಾರಿಗೆ ತರಲಾಗಿದೆ. ಪ್ರತಿಕೂಲ ಪರಿಸ್ಥಿತಿ, ಗುಡ್ಡಗಾಡು ಪ್ರದೇಶಗಳಲ್ಲಿ ಜಾನುವಾರುಗಳಿಗೆ ಮೇವು ಒದಗಿಸಲು ಮಹಿಳೆಯರು ಅತೀವ ಸಂಕಷ್ಟ ಎದುರಿಸುತ್ತಿದ್ದಾರೆ. ಇಲ್ಲಿ ಸುಮಾರು 1,000 ಎಕರೆ ಪ್ರದೇಶದಲ್ಲಿ ಸುಮಾರು 2,000 ರೈತರು ಜೋಳವನ್ನು ಬೆಳೆಯುತ್ತಿದ್ದಾರೆ, ಜಾನುವಾರುಗಳಿಗೆ ವೈಜ್ಞಾನಿಕವಾಗಿ ಪೌಷ್ಠಿಕ ಆಹಾರ ಒದಗಿಸಲು ಯೋಜನೆ ರೂಪಿಸಿದ್ದು,. ಇದರಿಂದ ಸುಮಾರು ಒಂದು ಲಕ್ಷ ರೈತರಿಗೆ ಅನುಕೂಲವಾಗಲಿದೆ. ಜತೆಗೆ ಇಂದು ಮೂರನೇ ಕಾರ್ಯಕ್ರಮ ಜಾರಿಗೊಳಿಸಲಾಗಿದ್ದು, ಸಹಕಾರಿ ವಲಯದ ತರಬೇತಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಈ ಕೇಂದ್ರಗಳು ಸಹಕಾರಿ ಚಳವಳಿಯನ್ನು ಮುಂದಕ್ಕೆ ಕೊಂಡೊಯ್ಯಲು ಮಹತ್ವದ ಪಾತ್ರ ವಹಿಸಲಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು.

ಹಿಂದಿನ ಸರ್ಕಾರಗಳು ಸಹಕಾರಿ ಚಳವಳಿಯನ್ನು ದುರ್ಬಲಗೊಳಿಸಿದ್ದವು, ಆಜಾದಿ ಕಾ ಅಮೃತ್ ಮಹೋತ್ಸವ್ ವರ್ಷಾಚರಣೆ ಸಂದರ್ಭದಲ್ಲಿ ಕೋಟ್ಯಂತರ ರೈತರು, ಮಹಿಳೆಯರು, ಕಾರ್ಮಿಕರು, ಮೀನುಗಾರರ ಕಲ್ಯಾಣಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೊಸ ಸಹಕಾರ ಸಚಿವಾಲಯವನ್ನು ಸ್ಥಾಪಿಸಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಕಳೆದ ಕೆಲವು ವರ್ಷಗಳ ಹಿಂದೆ ಸಣ್ಣ ಮತ್ತು ಮದ್ಯಮ ರೈತರು, ಮೀನುಗಾರರು, ಮಹಿಳೆಯರು ಮತ್ತು ಪುರುಷರು ಪಶುಸಂಗೋಪನಾ ಚಟುವಟಿಕೆಯಲ್ಲಿ ತೊಡಗಿದ್ದರು. ಒಂದು ವೇಳೆ ಸಹಕಾರಿ ಚಳವಳಿ ಸೂಕ್ತ ಸ್ವರೂಪ ಪಡೆಯದಿದ್ದರೆ ಏನಾಗುತ್ತಿತ್ತು. ಶ್ರೀ ನರೇಂದ್ರ ಮೋದಿ ಅವರು ಬಡ ಕುಟುಂಬಕ್ಕೆ ಸೇರಿದವರು ಮತ್ತು ಬಡವರ ನೋವು ಅವರ ಹೃದಯಕ್ಕೆ ಹತ್ತಿರವಾಗಿದೆ. ಹೀಗಾಗಿ ಸೂಕ್ತ ತರಬೇತಿ ಇಲ್ಲದಿದ್ದರೆ ಸಹಕಾರಿ ವಲಯವನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಘಸಿಯಾರಿ ಕಲ್ಯಾಣ್ ಯೋಜನೆಯಡಿ ಜಾನುವಾರುಗಳಿಗೆ ಆಹಾರವನ್ನು ಪ್ರತಿ ಕೆ.ಜಿಗೆ 2 ರೂಪಾಯಿ ದರದಲ್ಲಿ ಅಂದರೆ ಶೇ 30 ರಷ್ಟು ಸಬ್ಸಿಡಿ ದರದಲ್ಲಿ ನೀಡಲಾಗುವುದು. ಇದರಿಂದ ಹಲವಾರು ನೈಸರ್ಗಿಕ ವಿಪತ್ತುಗಳಿಂದ ಮಹಿಳೆಯರನ್ನು ರಕ್ಷಿಸಬಹುದಾಗಿದೆ ಎಂದು ಹೇಳಿದರು. 

ಪ್ರವಾಹ ಮತ್ತು ಕೋವಿಡ್ – 19 ಸಂದರ್ಭದಲ್ಲಿ ರಾಜ್ಯದಲ್ಲಿ ಪ್ರತಿಪಕ್ಷಗಳು ಎಲ್ಲಿದ್ದವು? ಎಂದು ಪ್ರಶ್ನಿಸಿದ ಶ್ರೀ ಅಮಿತ್ ಶಾ, ಯಾವಾಗ ಚುನಾವಣೆ ಹತ್ತಿರವಾಯಿತೋ ಆಗ ವಿವಿಧ ವಿಷಯಗಳ ಕುರಿತು ಪ್ರತಿಭಟನೆ ಮತ್ತು ಸುದ್ದಿಗೋಷ್ಠಿಗಳನ್ನು ನಡೆಸುತ್ತಿದೆ. ಪ್ರತಿಪಕ್ಷಗಳು ಭ್ರಷ್ಟಚಾರ ಮತ್ತು ಹಗರಣಗಳಿಗೆ ಸಮಾನಾರ್ಥಕವಾಗಿದೆ ಮತ್ತು ಯಾವುದೇ ರಾಜ್ಯದ ಕಲ್ಯಾಣಕ್ಕಾಗಿ ಕೆಲಸ ಮಾಡಲು ಇವರಿಂದ ಸಾಧ್ಯವಿಲ್ಲ. ಇವರಿಂದ ಬಡವರ ಪರವಾಗಿ ಇಲ್ಲವೆ ಉತ್ತಮ ಆಡಳಿತದ ದೃಷ್ಟಿಯಿಂದ ಕೆಲಸ ಮಾಡಲು ಆಗುವುದಿಲ್ಲ. ಶ‍್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಮ್ಮ ಪಕ್ಷ ಮಾತ್ರ ಬಡವರ ಕಲ್ಯಾಣ ಮತ್ತು ಉತ್ತಮ ಆಡಳಿತ ನೀಡಲು ಸಾಧ್ಯ.  2017  ರ ಚುನಾವಣೆಗಾಗಿ ಇಲ್ಲಿಗೆ ಬಂದಿದ್ದೆ ಮತ್ತು ನಾವು ಆಗ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಶೇ 85 ರಷ್ಟು ಭರವಸೆಗಳನ್ನು ಈಡೇರಿಸಿದ್ದೇವೆ. ಪ್ರತಿಪಕ್ಷಗಳು ಅಭ್ಯಾಸಗಳನ್ನು ಮುರಿಯುವ ಪರಂಪರೆ ಹೊಂದಿದ್ದು, ಅಧಿಕಾರ ಕಸಿದುಕೊಳ್ಳುವ ಮೂಲಕ ಅವರು ಯಾವುದೇ ಕಲ್ಯಾಣ ಕಾರ್ಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಪ್ರತಿಪಕ್ಷಗಳು ಅಧಿಕಾರ ಹಿಡಿಯುವುದನ್ನು ಬಯಸುತ್ತವೆ ಮತ್ತು ಬಳಸುತ್ತವೆ. ಜನರ ಕಲ್ಯಾಣಕ್ಕಾಗಿ ಎಂದಿಗೂ ಕೆಲಸ ಮಾಡುವುದಿಲ್ಲ. ತುಷ್ಟೀಕರಣದಲ್ಲಿ ನಂಬಿಕೆ ಇರಿಸಿಕೊಂಡಿರುವವರಿಂದ ಉತ್ತರಾಖಂಡದ ಕಲ್ಯಾಣ ಎಂದಿಗೂ ಸಾಧ್ಯವಿಲ್ಲ. ಹಿಂದಿನ ಸರ್ಕಾರಗಳು ಉತ್ತರಾಖಂಡದ ಕಲ್ಯಾಣಕ್ಕಾಗಿ ಯಾವುದೇ ಒಳ್ಳೆಯ ಕೆಲಸ ಮಾಡಲಿಲ್ಲ ಹಾಗೂ ನಮ್ಮ ಪಕ್ಷ ಬಹುಮತ ಪಡೆದ ನಂತರ ಉತ್ತಮ ಕೆಲಸ ಮಾಡುವ ಪರಿಪಾಠ ಆರಂಭವಾಯಿತು. ಶ್ರೀ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತಿರುವುದರಿಂದ ನಾವು ಅಭಿವೃದ್ಧಿಯಲ್ಲಿ ಹೊಸ ಪಥದಲ್ಲಿ ಮುನ್ನಡೆಯಲು ಸಾಧ್ಯವಾಗಲಿದೆ ಮತ್ತು ಉತ್ತರಾಖಂಡ ಇದರಿಂದ ಪ್ರಗತಿ ಹಾದಿಯಲ್ಲಿ ಸಾಗುತ್ತಿದೆ ಎಂದರು.


ಕೋವಿಡ್ -19 ಸಾಂಕ್ರಾಮಿಕ ಸಂದರ್ಭದಲ್ಲಿ ದೂರದ ಪ್ರದೇಶಗಳಲ್ಲಿನ ಜನರ ಜೀವನ ರಕ್ಷಿಸಲು ಉತ್ತರಾಖಂಡ ಸರ್ಕಾರ ಕಾರ್ಯನಿರ್ವಹಿಸಿತು. ಇತರರಿಗಿಂತ ಮೊದಲು ಶೇ 100 ರಷ್ಟು ಲಸಿಕೆ ಸಾಧಿಸಿದ ರಾಜ್ಯಗಳಲ್ಲಿ ಉತ್ತರಾಖಂಡವೂ ಸೇರಿದೆ. ಆಮ್ಲಜನಕ ಘಟಕಗಳನ್ನು ಸ್ಥಾಪಿಸಿ, ಹೊಸ ಆಸ್ಪತ್ರೆಗಳನ್ನು ತೆರೆಯಲಾಯಿತು ಮತ್ತು ಹಾಸಿಗೆಗಳ ಸಾಮರ್ಥ್ಯವನ್ನು ಹೆಚ್ಚಿಸಲಾಯಿತು. ಮೂರನೇ ಅಲೆ ರಾಜ್ಯಕ್ಕೆ ಬಾಧಿಸಲಿಲ್ಲವಾದರೂ ಸರ್ಕಾರ ಇದಕ್ಕಾಗಿ ಸನ್ನದ್ಧವಾಗಿತ್ತು. ನೈಸರ್ಗಿಕ ವಿಪತ್ತು ಕುರಿತು ಮಾಹಿತಿ ಪಡೆದ ನಂತರ ಮುಖ್ಯಮಂತ್ರಿ ಅವರು ಅಯೋಧ್ಯೆಯಿಂದ ಹಿಂತಿರುಗಿದ ನಂತರ ಸೂಕ್ತ  ಕ್ರಮ ಕೈಗೊಂಡರು. ಒಬ್ಬೇ ಒಬ್ಬ ವ್ಯಕ್ತಿಯ ಜೀವ ಹಾನಿಯಾಗಲಿಲ್ಲ. ಎರಡನೇ ದಿನವೇ ರಕ್ಷಣಾ ಕಾರ್ಯ ಆರಂಭವಾಯಿತು ಮತ್ತು ಪ್ರಗತಿ ಪರಿಶೀಲನಾ ಸಭೆಯನ್ನೂ  ಸಹ ನಡೆಸಿದರು. ಬಹುತೇಕ ಪರಿಹಾರ ಕಾರ್ಯ ಆಗಲೇ ಆರಂಭಗೊಂಡಿತ್ತು.  ಯಾವುದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು ವೈಮಾನಿಕ ಸಮೀಕ್ಷೆಗೆ ತೆರಳುವ ಸಂದರ್ಭದಲ್ಲಿ ಅವರೊಂದಿಗೆ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾನಿರ್ದೇಶಕರು ಸಹ ತೆರಳುತ್ತಿದ್ದರು ಹಾಗೂ ಅವರಿಗೆ ಎಲ್ಲಾ ಮಾಹಿತಿಯೂ ಇರುತ್ತಿತ್ತು. ಈ ಸಂದರ್ಭದಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಲಾಗುತ್ತಿತ್ತು. ಇಂತಹ ಜಾಗೃತ ಸರ್ಕಾರ ಇರುವಲ್ಲಿ ಅಭಿವೃದ್ಧಿ ತಾನಾಗಿಯೇ ಆಗುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. 

ಗಂಗಾಜಲವನ್ನು ಸಹಕಾರಿ ಸಂಸ್ಥೆಗಳ ಮೂಲಕ ಪೂರೈಸುವ ಕೆಲಸ ನಡೆಯುತ್ತಿದೆ ಮತ್ತು ದೇಶಾದ್ಯಂತ ಭಕ್ತಾದಿಗಳು ಗಂಗಾ ಜಲವನ್ನು ತಮ್ಮ ಮನೆಗಳಲ್ಲಿಯೇ ಪಡೆಯುತ್ತಿದ್ದಾರೆ. ಇದು ಅವರ ಅಭ್ಯುದಯಕ್ಕೆ ಕಾರಣವಾಗಲಿದೆ. ಕೇದಾರನಾಥ್ ತೀವ್ರವಾಗಿ ಹಾನಿಗೊಳಗಾಗಿದ್ದು, ಪ್ರಧಾನಮಂತ್ರಿ ಅವರು ನವೆಂಬರ್ 5 ರಂದು ಭಗವಾನ್ ಆದಿ ಶಂಕರಾಚಾರ್ಯರ ಬೃಹತ್ ಪುತ್ಥಳಿಯನ್ನು ಅನಾವರಣಗೊಳಿಸಲಿದ್ದಾರೆ. ಇದು ಇಡೀ ದೇಶವನ್ನು ಸಂಪರ್ಕಿಸುವ ಕಾರ್ಯಕ್ರಮವಾಗಿದೆ. 11,680 ಕೋಟಿ ರೂಪಾಯಿ ವೆಚ್ಚದಲ್ಲಿ ಚಾರ್ ಧಾಮ್ ಗೆ 890 ಕಿಲೋಮೀಟರ್ ಉದ್ದದ ಸರ್ವಋತು ಚತುಷ್ಪಥ ರಸ್ತೆ ನಿರ್ಮಾಣ ಕಾರ್ಯ ಮುಕ್ತಾಯದ ಹಂತದಲ್ಲಿದೆ. ಬದ್ರಿವಿಶಾಲ್ ಮತ್ತು ಕೇದಾರ್ ಧಾಮ್ ಉತ್ತರಖಂಡ ಅಷ್ಟೇ ಅಲ್ಲದೇ ಇಡೀ ಭಾರತದ ಹೆಮ್ಮೆಯಾಗಿದೆ ಮತ್ತು ಇದನ್ನು ಮರು ನಿರ್ಮಾಣ ಮಾಡಲಾಗುವುದು.  20,000 ಕೋಟಿ ರೂಪಾಯಿ ವೆಚ್ಚದಲ್ಲಿ ಅಮೃತ್ – ಕೊಲ್ಕತ್ತಾ ಕಾರಿಡಾರ್, 24,659 ಕೋಟಿ ರೂಪಾಯಿ ವೆಚ್ಚದಲ್ಲಿ 125 ಕಿಲೋಮೀಟರ್ ಉದ್ದದ ರಿಷಿಕೇಷ್ ಮತ್ತು ಕರ್ನಾಪ್ರಯಾಗ್ ನಡುವಿನ ಹೊಸ ರೈಲ್ವೆ ಯೋಜನೆ, 2,500 ಕೋಟಿ ರೂಪಾಯಿ  ವೆಚ್ಚದಲ್ಲಿ ನಾಲ್ಕು ಪಥದ ನಾಗಿನ ಮತ್ತು ಕಾಶಿಪುರ್ ನಡುವಿನ ಹೆದ್ದಾರಿ, 757 ಕೋಟಿ ರೂಪಾಯಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ, 5,867 ಕೋಟಿ ರೂಪಾಯಿ ವೆಚ್ಚದ ವಿಷ್ಣುಗರ್ – ಪೀಪಲ್ಕೋಟಿ ಜಲ ವಿದ್ಯುತ್ ಯೋಜನೆ, ತೆಹ್ರಿಯಲ್ಲಿ 4,825 ಕೋಟಿ ರೂಪಾಯಿ ವೆಚ್ಚದ ಸಂಗ್ರಹಾಗಾರ ಘಟಕವನ್ನು ನಿರ್ಮಿಸಲಾಗಿದೆ. ಈ ಸಣ‍್ಣ ರಾಜ್ಯಕ್ಕೆ ಶ‍್ರೀ ನರೇಂದ್ರ ಮೋದಿ ಅವರು 85,000 ಕೋಟಿ ರೂಪಾಯಿ ಬಂಡವಾಳ ತಂದಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು.
ಹಿಂದಿನ 10 ವರ್ಷಗಳಲ್ಲಿ ಹಿಂದಿನ ಸರ್ಕಾರಗಳು ನೀಡಿದ ಕೊಡುಗೆ ಮತ್ತು ಸಾಧನೆಗಳನ್ನು ಹಾಲಿ ಸರ್ಕಾರ ಉತ್ತರಾಖಂಡಕ್ಕೆ ನೀಡಿವೆ. ಶ್ರೀ ನರೇಂದ್ರ ಮೋದಿ ಮತ್ತು ಶ್ರೀ ಪುಷ್ಕರ್ ಧಮಿ ಅವರ ನಾಯಕತ್ವದಲ್ಲಿ ಹಾಲಿ ಸರ್ಕಾರ ಮಾತ್ರ ಉತ್ತರಾಖಂಡದ ಉತ್ತಮ ಭವಿಷ್ಯಕ್ಕಾಗಿ ಕಾರ್ಯನಿರ್ವಹಿಸಲಿದೆ ಎನ್ನುವುದು ಸಾಬೀತಾಗಿದೆ. ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಉತ್ತರಾಖಂಡ ರಾಜ್ಯವನ್ನು ಸೃಷ್ಟಿಸಿದರು ಮತ್ತು ಈ ರಾಜ್ಯವನ್ನು ಅಭಿವೃದ್ದಿಪಡಿಸುವುದು ನಮ್ಮ ನೈತಿಕ ಜವಾಬ್ದಾರಿಯಾಗಿದೆ. ಈ ಹಿಂದೆ ಬಡ ಮಹಿಳೆಯರಿಗೆ ಅಡುಗೆ ಅನಿಲ, ವಿದ್ಯುತ್ ಮತ್ತು ಶೌಚಾಲಯ ವ್ಯವಸ್ಥೆ ಇರಲಿಲ್ಲ. ಇದೀಗ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇದೆಲ್ಲವನ್ನೂ ಒದಗಿಸಿದ್ದಾರೆ ಎಂದು ಹೇಳಿದರು.
ಉತ್ತರಾಖಂಡದ ಪ್ರತಿಯೊಂದು ಕುಟುಂಬಕ್ಕೆ 5 ಲಕ್ಷ ಆರೋಗ್ಯ ಚೀಟಿಯನ್ನು ನೀಡಿದೆ ಮತ್ತು ದುರ್ಗಮ ಪ್ರದೇಶ ಒಳಗೊಂಡಂತೆ ಪ್ರತಿಯೊಂದು ಮನೆಗೆ ಕೊಳಾಯಿ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. 2022 ರ ವೇಳೆಗೆ ಪ್ರತಿಯೊಂದು ಮನೆಗೆ ಕುಡಿಯುವ ನೀರು ದೊರೆಯಲಿದೆ ಮತ್ತು ಮಹಿಳೆಯರು ಶುದ್ಧ ಜಲ ಪಡೆಯಲಿದ್ದಾರೆ. 70 ವರ್ಷಗಳ ಅವಧಿಯಲ್ಲಿ ಬಡವರು ಬ್ಯಾಂಕ್ ಖಾತೆ ಪಡೆದಿರಲಿಲ್ಲ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 45 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯುವ ನಿಟ್ಟಿನಲ್ಲಿ ಕೆಲಸ ಮಾಡಿದ್ಧಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು.
ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ ಜನವಾನರಿಲ್ಲದ ಮನಯೇ ಉತ್ತರಾಖಂಡದಲ್ಲಿಲ್ಲ. ದೇಶ ರಕ್ಷಣೆಯಲ್ಲಿ ಉತ್ತರಾಖಂಡದ ಸೇನಾನಿಗಳು ಪರಮೋಚ್ಛ ತ್ಯಾಗ ಮಾಡುತ್ತಿದ್ದಾರೆ, 70 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಹಿಂದಿನ ಸರ್ಕಾರ ಜವಾನರಿಗೆ ಒಂದು ಶ್ರೇಣಿ – ಒಂದು ಪಿಂಚಣಿ ಬಗ್ಗೆ ಎಂದಿಗೂ ಮಾತನಾಡಲಿಲ್ಲ. ನೀವು ಶ್ರೀ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿದಾಗ ಅವರು 2016 ರಲ್ಲಿ ತಕ್ಷಣವೇ ಒಂದು ಶ‍್ರೇಣಿ ಒಂದು ಪಿಂಚಣಿ ಕಾರ್ಯಕ್ರಮ ಜಾರಿಗೊಳಿಸಿದರು ಮತ್ತು ಲಕ್ಷಾಂತರ ಜವಾನರಿಗೆ ಅವರ ಹಕ್ಕುಗಳನ್ನು ಒದಗಿಸಿದರು. ನಾವು ಅಭಿವೃದ್ದಿಯಲ್ಲಿ ನಂಬಿಕೆ ಇರಿಸಿದ್ದೇವೆ, ಬಡವರ ನೋವು ನಮಗೆ ತಿಳಿದಿದೆ, ಏಕೆಂದರೆ ಚಹಾ ಮಾರುವ ಬಡ ಕುಟುಂಬದಿಂದ ಈ ಹಂತಕ್ಕೆ ಬಂದವರು ನಮ್ಮ ನಾಯಕ ಎಂದರು.

***



(Release ID: 1768020) Visitor Counter : 194