ಕಲ್ಲಿದ್ದಲು ಸಚಿವಾಲಯ
ಪಿಪಿಟಿ, ಎಂ.ಸಿ.ಎಲ್. ಚಟುವಟಿಕೆ, ಯೋಜನೆಯನ್ನು ಪರಾಮರ್ಶಿಸಿದ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಶ್ರೀ ಪ್ರಹ್ಲಾದ್ ಜೋಶಿ
ಕಲ್ಲಿದ್ದಲ ತಾಣವಾಗಿ ಪರಾದೀಪ್ ಬಂದರು ಬಳಕೆಯ ಪರ ವಹಿಸಿದ ಶ್ರೀ ಜೋಶಿ
ಶ್ರಮಿಕ್ ಗೌರವ ಜಲ್ ಉದ್ಯಾನದ ಉದ್ಘಾಟಿಸಿದ ಸಚಿವರು, ಇದು ಪ್ರಮುಖ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಯಾಗುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿಕೆ
Posted On:
28 OCT 2021 5:46PM by PIB Bengaluru
ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಶ್ರೀ ಪ್ರಹ್ಲಾದ ಜೋಶಿ ಅವರು ಗುರುವಾರ ಪರಾದೀಪ್ ಬಂದರು ಟ್ರಸ್ಟ್ (ಪಿಪಿಟಿ) ಮತ್ತು ಮಹಾನದಿ ಕಲ್ಲಿದ್ದಲುಗಣಿ ನಿಯಮಿತ (ಎಂ.ಸಿ.ಎಲ್)ದ ಹಿಂಗುಲಾ ಪ್ರದೇಶಕ್ಕೆ ಭೇಟಿ ನೀಡಿ, ಅನುಕ್ರಮವಾಗಿ ಎರಡೂ ಕಾಯಗಳ ವಿವಿಧ ಚಟುವಟಿಕೆಗಳು ಮತ್ತು ಯೋಜನೆಗಳನ್ನು ಪರಾಮರ್ಶಿಸಿದರು.
ಇಂದು ತಮ್ಮ ಒಡಿಶಾ ಭೇಟಿಯನ್ನು ಆರಂಭಿಸಿದ ಕೇಂದ್ರ ಸಚಿವರು, ಕಲ್ಲಿದ್ದಲು ಮತ್ತು ಗಣಿ ಖಾತೆ ರಾಜ್ಯ ಸಚಿವ ಶ್ರೀ ರಾವ್ ಸಾಹೇಬ್ ಪಾಟೀಲ್ ಧನ್ವೆ ಅವರೊಂದಿಗೆ ಪರಾದೀಪ ಬಂದರಿನಲ್ಲಿ ಕಲ್ಲಿದ್ದಲು ತುಂಬುವ ವ್ಯವಸ್ಥೆಯನ್ನು ಪರಿಶೀಲಿಸಿದರು. ಸಮುದ್ರ ಮಾರ್ಗದ ಮೂಲಕ ಕಲ್ಲಿದ್ದಲು ಸಾಗಣೆಯನ್ನು ಹೆಚ್ಚಿಸಲು ಬಂದರಿನ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು. ಪರಾದೀಪ್ ಬಂದರನ್ನು ಕಲ್ಲಿದ್ದಲು ತಾಣವಾಗಿ ಬಳಕೆಮಾಡಿಕೊಳ್ಳುವ ಸಾಧ್ಯತೆಗಳ ಅನ್ವೇಷಣೆಗೂ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಶ್ರೀ ಜೋಶಿ ಅವರು ಪರಾದೀಪ್ ಬಂದರು ಬಳಿ ಇರುವ ವ್ಯಾಗನ್ ಟಿಪ್ಲರ್ಸ್ ನೆರವಿನಿಂದ ಕಲ್ಲಿದ್ದಲು ಇಳಿಸುವ ರೈಲ್ ರಿಸೀವಲ್ ವ್ಯವಸ್ಥೆಗೂ ಭೇಟಿ ನೀಡಿದರು. ಈ ಸರಕು ಇಳಿಸುವ ವ್ಯವಸ್ಥೆ ಸಮರ್ಥವಾಗಿದ್ದು, ಸಮಯ ಮತ್ತು ಮರುಪಾವತಿ ಶುಲ್ಕವನ್ನು ಉಳಿಸುತ್ತದೆ ಜೊತೆಗೆ ಕಲ್ಲಿದ್ದಲಿನ ಧೂಳು ಪಸರಿಸುವುದನ್ನು ತಗ್ಗಿಸುತ್ತದೆ ಎಂದೂ ಸಚಿವರು ಹೇಳಿದರು.
ನಂತರ ಕಲ್ಲಿದ್ದಲು ಸಚಿವರು ಎಂ.ಸಿ.ಎಲ್.ನ ಹಿಂಗುಲಾ ಪ್ರದೇಶದ ಬಲರಾಮ್ ಓಪನ್ ಕಾಸ್ಟ್ ಯೋಜನೆಯ ಸ್ಥಳಕ್ಕೆ ಭೇಟಿ ನೀಡಿದರು. "8 ಎಂ.ಟಿ ವಾರ್ಷಿಕ ಸಾಮರ್ಥ್ಯದೊಂದಿಗೆ, ಈ ಗಣಿ ಸ್ಫೋಟ ಕೆಲಸಕ್ಕಾಗಿ ಸಂಪೂರ್ಣ ಮಹಿಳಾ ಸಿಬ್ಬಂದಿಯಿಂದ ನಿರ್ವಹಿಸಲ್ಪಡುತ್ತದೆ ಎಂದು ಸಚಿವರು ಹೇಳಿದರು. ಅವರು ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು ಮತ್ತು ಕಲ್ಲಿದ್ದಲು ಉತ್ಪಾದನೆ ಮತ್ತು ಸಾಗಣೆಯನ್ನು ಹೆಚ್ಚಿಸಲು ಸ್ಥಳದಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಪ್ರೇರೇಪಿಸಿದರು.
ಶ್ರೀ ಜೋಶಿ ಅವರು ಬಲರಾಮ್ ಓಪನ್ ಕಾಸ್ಟ್ ಯೋಜನೆಯ ಬಳಿ ಶ್ರಮಿಕ್ ಗೌರವ ಜಲ ಉದ್ಯಾನಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. "ಕಲ್ಲಿದ್ದಲು ಗಣಿಯಿಂದ ಮರುಪಡೆಯಲಾದ ಜಮೀನಿನಲ್ಲಿ ಸುಂದರವಾದ ಸರೋವರದ ಪಕ್ಕದಲ್ಲಿ ನಿರ್ಮಿಸಲಾಗಿರುವ, ಈ ತಾಣವು ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ಹೊಂದಿದೆ" ಎಂದು ಸಚಿವರು ಹೇಳಿದರು.
ಹಿಂಗುಲಾ ಪ್ರದೇಶದ ಎಂ.ಸಿ.ಎನ್. ನ ರೈಲ್ವೆ ಸೈಡಿಂಗ್ ಗೂ ಅವರು ಭೇಟಿ ನೀಡಿದರು. ಬೋಗಿಗಳ ಸುತ್ತಾಟದ ಸಮಯವನ್ನು ತಗ್ಗಿಸಲು ಒತ್ತು ನೀಡುವಂತೆ ಸಚಿವರು ತಿಳಿಸಿದರು. ಕಲ್ಲಿದ್ದಲು ಸಾಗಣೆಯನ್ನು ಹೆಚ್ಚಿಸುವ ಕುರಿತಂತೆ ಅವರು ರೈಲ್ವೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ರೈಲ್ವೆ ಸೈಡಿಂಗ್ ನಲ್ಲಿ ಪೇಲೋಡರ್ ಕಾರ್ಯಾಚರಣೆ ಮಾಡುವವರನ್ನು ಸನ್ಮಾನಿಸಿದ ಸಚಿವರು, ಅವರ ಶ್ರಮವನ್ನು ಶ್ಲಾಘಿಸಿದರು ಮತ್ತು ಕಲ್ಲಿದ್ದಲು ತುಂಬುವುದನ್ನು ಹೆಚ್ಚಿಸಲು ಅವರನ್ನು ಪ್ರೋತ್ಸಾಹಿಸಿದರು.
***
(Release ID: 1767373)