ಪ್ರಧಾನ ಮಂತ್ರಿಯವರ ಕಛೇರಿ

100 ಕೋಟಿ ಲಸಿಕೆ ಮೈಲುಗಲ್ಲು ದಾಟಿದ ಭಾರತಕ್ಕೆ ಶುಭಾಶಯ ಕೋರಿದ ವಿಶ್ವ ನಾಯಕರಿಗೆ  ಧನ್ಯವಾದ ಅರ್ಪಿಸಿದ ಪ್ರಧಾನಿ ಮೋದಿ

Posted On: 21 OCT 2021 10:08PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶತಕೋಟಿ ಲಸಿಕೆ ಮೈಲಿಗಲ್ಲು ದಾಖಲಿಸಿದ ಭಾರತಕ್ಕೆ ಶುಭ ಹಾರೈಸಿದ ವಿಶ್ವ ನಾಯಕರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಭೂತಾನ್ ಪ್ರಧಾನಿ ಮಾಡಿದ ಟ್ವೀಟ್‌ಗೆ ಉತ್ತರಿಸಿದ ಪ್ರಧಾನಿ"ಲಿಯಾಂಚ್ ಡಾ. ಲೋಟೆ ಶೆರಿಂಗ್ ಅವರೇ, ಐತಿಹಾಸಿಕ ಸಂದರ್ಭದಲ್ಲಿ ನಿಮ್ಮ ಪ್ರೀತಿಯ ಮಾತುಗಳಿಗಾಗಿ ಧನ್ಯವಾದಗಳು.

ಭೂತಾನ್‌ ಜೊತೆಗಿನ ನಮ್ಮ ಸ್ನೇಹವನ್ನು ನಾವು ಆಳವಾಗಿ ಪ್ರೀತಿಸುತ್ತೇವೆ!

ಕೋವಿಡ್-19 ವಿರುದ್ಧದ ನಮ್ಮ ಹೋರಾಟದಲ್ಲಿ ಪ್ರಾದೇಶಿಕ ದೇಶಗಳು ಮತ್ತು ವಿಶ್ವದೊಂದಿಗೆ ಕೈಜೋಡಿಸಲು ಭಾರತ ಬದ್ಧವಾಗಿದೆ." ಎಂದಿದ್ದಾರೆ.

 

ಶ್ರೀಲಂಕಾ ಅಧ್ಯಕ್ಷರ ಟ್ವೀಟ್‌ಗೆ ಉತ್ತರಿಸಿದ ಪ್ರಧಾನಿ, "ಸ್ನೇಹಿತ ರಾಜಪಕ್ಸೆ@PresRajapaksa ಅವರಿಗೆ ಧನ್ಯವಾದಗಳು. ಶ್ರೀಲಂಕಾದಿಂದ ಕುಶಿನಗರಕ್ಕೆ ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನು ಪ್ರಾರಂಭಿಸುವುದು ಮತ್ತು ಉಭಯ ದೇಶಗಳ ಲಸಿಕೆ ಅಭಿಯಾನಗಳಂತಹ ಇತ್ತೀಚಿನ ಉಪಕ್ರಮಗಳು ನಮ್ಮ ವೈವಿಧ್ಯಮಯ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತವೆ ಮತ್ತು ನಮ್ಮ ಸಹೋದರ ಜನರ ನಡುವಿನ ಸಂವಹನವನ್ನು ಹೆಚ್ಚಿಸುತ್ತವೆ.” ಎಂದಿದ್ದಾರೆ.

 

ಮಾಲ್ಡೀವ್ಸ್ ಅಧ್ಯಕ್ಷರ ಟ್ವೀಟ್‌ಗೆ ಉತ್ತರಿಸಿದ ಪ್ರಧಾನಮಂತ್ರಿಯವರು, "ಪ್ರೀತಿಯ ಹಾರೈಕೆಗಳಿಗಾಗಿ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್‌ ಸೊಲಿಹ್‌@ibusolih ಅವರಿಗೆ ಧನ್ಯವಾದಗಳು.

ಮಾಲ್ಡೀವ್ಸ್‌ನಲ್ಲಿ ಲಸಿಕೆ ಕಾರ್ಯಕ್ರಮದ ಪ್ರಗತಿಯ ಬಗ್ಗೆ ನನಗೆ ಸಂತೋಷವಾಗಿದೆ.

ನೆರೆಹೊರೆಯವರಾಗಿ ಮತ್ತು ಆಪ್ತ ಸ್ನೇಹಿತರಾಗಿ, ಕೋವಿಡ್-19 ಅನ್ನು ಜಯಿಸಲು ನಮ್ಮ ನಡುವಿನ ಪಾಲುದಾರಿಕೆಯು ಫಲ ನೀಡಿದೆ," ಎಂದು ಹೇಳಿದ್ದಾರೆ.

 

ಇಸ್ರೇಲ್ ಪ್ರಧಾನಿ ಮಾಡಿದ ನಫ್ತಾಲಿ ಬೆನೆಟ್‌ ಅವರ ಟ್ವೀಟ್‌ಗೆ ಉತ್ತರಿಸಿದ ಪ್ರಧಾನಿ, "ಪ್ರಧಾನಿ ನಫ್ತಾಲಿ ಬೆನೆಟ್‌@naftalibennett ಅವರೇ ನಿಮ್ಮ ಹಿತನುಡಿಗಳಿಗೆ ನನ್ನ ಕಾರ್ಯನಿರ್ವಹಿಸುತ್ತಿದ್ದ. ಭಾರತದ ವಿಜ್ಞಾನಿಗಳು, ಆರೋಗ್ಯ ಕಾರ್ಯಕರ್ತರು ಮತ್ತು ನವೋದ್ಯಮಿಗಳು ಮೈಲಿಗಲ್ಲನ್ನು ಸಾಧ್ಯವಾಗಿಸಿದ್ದಾರೆ. ಅವರು ತಮ್ಮ ಇಸ್ರೇಲಿ ಸಹವರ್ತಿಗಳೊಂದಿಗೆ ನಮ್ಮ ಜ್ಞಾನಾಧಾರಿತ ತಂತ್ರ ಕುಶಲತೆಯ ಪಾಲುದಾರಿಕೆಯ ಅಡಿಪಾಯವನ್ನು ನಿರ್ಮಿಸುತ್ತಿದ್ದಾರೆ.” ಎಂದಿದ್ದಾರೆ.

 

ಮಲಾವಿ ಅಧ್ಯಕ್ಷರ ಟ್ವೀಟ್‌ಗೆ ಉತ್ತರಿಸಿದ ಪ್ರಧಾನಮಂತ್ರಿಯವರು, "ಭಾರತ ಶತಕೋಟಿ ಲಸಿಕೆ ಮೈಲಿಗಲ್ಲು #VaccineCentury ದಾಟಿದ ಸಂದರ್ಭದಲ್ಲಿ ಹಾರೈಕೆಗಳಿಗಾಗಿ ಘನತೆವೆತ್ತ ಲಜಾರಸ್‌ ಚಕ್ವೇರಾ@LAZARUSCHAKWERA ಅವರಿಗೆ ಧನ್ಯವಾದಗಳು.

ಸಾಂಕ್ರಾಮಿಕದ ವಿರುದ್ಧ ಹೋರಾಡಲು ಲಸಿಕೆ ಲಭ್ಯತೆಯು ಅತ್ಯಂತ ನಿರ್ಣಾಯಕವಾಗಿದೆ. ವಿಚಾರದಲ್ಲಿ ನಾವು ನಿಮ್ಮೊಟ್ಟಿಗಿದ್ದೇವೆ.” ಎಂದಿದ್ದಾರೆ.

***



(Release ID: 1765777) Visitor Counter : 148