ರಕ್ಷಣಾ ಸಚಿವಾಲಯ
azadi ka amrit mahotsav

ಸರಕಾರಿ ಮತ್ತು ಖಾಸಗಿ ವಲಯದ 100 ಶಾಲೆಗಳನ್ನು ಸೈನಿಕ್ ಸ್ಕೂಲ್ ಸೊಸೈಟಿ ಅಡಿಯಲ್ಲಿ ಸೇರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ


2022-23ನೇ ಶೈಕ್ಷಣಿಕ ವರ್ಷದಿಂದ 5,000 ವಿದ್ಯಾರ್ಥಿಗಳಿಗೆ 6ನೇ ತರಗತಿ ಪ್ರವೇಶ ಕಲ್ಪಿಸಲಿರುವ ನೂತನ ಶಾಲೆಗಳು

Posted On: 12 OCT 2021 8:31PM by PIB Bengaluru

`ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್ಇಪಿ) ಅನುಗುಣವಾಗಿ ಮುನ್ನಡೆಯುತ್ತಿರುವ ಭಾರತ ಸರಕಾರವು, ಮಕ್ಕಳಲ್ಲಿ ರಾಷ್ಟ್ರದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಹೆಮ್ಮೆ, ಸತ್ಚಾರಿತ್ರ್ಯಶಿಸ್ತು, ರಾಷ್ಟ್ರೀಯ ಕರ್ತವ್ಯಪ್ರಜ್ಞೆದೇಶಭಕ್ತಿ ಹಾಗೂ ಪರಿಣಾಮಕಾರಿ ನಾಯಕತ್ವವನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುವ ಮೌಲ್ಯಾಧಾರಿತ ಶಿಕ್ಷಣದತ್ತ ಹೆಚ್ಚಿನ ಗಮನ ಹರಿಸಲು ನಿರ್ಧರಿಸಿದೆ.

ನಿಟ್ಟಿನಲ್ಲಿ  ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತುತ ಸೈನಿಕ ಶಾಲೆಗಳ ವ್ಯವಸ್ಥೆಗೆ ಕ್ರಾಂತಿಕಾರಿ ಬದಲಾವಣೆ ತರುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ರಕ್ಷಣಾ ಸಚಿವಾಲಯದ ʻಸೈನಿಕ್ ಸ್ಕೂಲ್ಸ್ ಸೊಸೈಟಿʼ ಅಡಿಯಲ್ಲಿ ಅಧೀನ ಸೈನಿಕ್ ಶಾಲೆಗಳನ್ನು ಪ್ರಾರಂಭಿಸುವ ಪ್ರಸ್ತಾಪಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಶಾಲೆಗಳು ಪ್ರಸ್ತುತ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಸೈನಿಕ ಶಾಲೆಗಳಿಗಿಂತ ವಿಭಿನ್ನವಾಗಿರುತ್ತವೆ. ಮೊದಲ ಹಂತದಲ್ಲಿ, ರಾಜ್ಯಗಳು/ ಸರ್ಕಾರೇತರ ಸಂಸ್ಥೆಗಳು/ ಖಾಸಗಿ ಪಾಲುದಾರರಿಂದ 100 ಅಧೀನ ಶಾಲೆಗಳನ್ನು ಇದಕ್ಕೆ ಸೇರ್ಪಡೆಮಾಡಲು ಪ್ರಸ್ತಾಪಿಸಲಾಗಿದೆ.

ಪ್ರಯೋಜನಗಳು:

ದೇಶದ ಎಲ್ಲಾ ಪ್ರದೇಶಗಳಲ್ಲಿ ಹೆಚ್ಚಿನ ಜನರನ್ನು ತಲುಪಲು ವೆಚ್ಚ-ಪರಿಣಾಮಕಾರಿ ಮಾರ್ಗಗಳನ್ನು ಒದಗಿಸುವುದು

ಸೈನಿಕ್ ಶಾಲೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವುದು ಮತ್ತು ಮಕ್ಕಳಿಗೆ ಪರಿಣಾಮಕಾರಿ ದೈಹಿಕ, ಮನೋ-ಸಾಮಾಜಿಕ, ಆಧ್ಯಾತ್ಮಿಕ, ಬೌದ್ಧಿಕ, ಭಾವನಾತ್ಮಕ ಮತ್ತು ಅರಿವಿನ ಅಭಿವೃದ್ಧಿಯನ್ನು ಒದಗಿಸುವುದು.

ತರಬೇತಿ ಅವಧಿ, ತರಬೇತುದಾರರ ನಿಯೋಜನೆ, ನಿರ್ವಹಣೆ ಮತ್ತು ಕಾರ್ಯಾಚರಣೆಗಳ ವೆಚ್ಚದಲ್ಲಿ ಉಳಿತಾಯ ಹಾಗೂ ಜೀವನದ ವಿವಿಧ ಹಂತಗಳನ್ನು ಪ್ರವೇಶಿಸುವ ಯುವಕರ ಗುಣಮಟ್ಟದ ಗಣನೀಯ ಸುಧಾರಣೆ

ವಿವರ:

ಸೈನಿಕ್ ಶಾಲೆಗಳು ಮಹತ್ವಾಕಾಂಕ್ಷಿ ಪೋಷಕರು ಮತ್ತು ಮಕ್ಕಳಿಗೆ ಉತ್ತಮ ಗುಣಮಟ್ಟದ ಮೌಲ್ಯಾಧಾರಿತ ಶಿಕ್ಷಣವನ್ನು ಕೈಗೆಟುಕುವಂತೆ ಮಾಡಿವೆ. ಮಾತ್ರವಲ್ಲದೆ, ಅತಿಸಾಮಾನ್ಯ ಹಿನ್ನೆಲೆಯ ವಿದ್ಯಾರ್ಥಿಗಳೂ ಮಿಲಿಟರಿ, ಆಡಳಿತ ಸೇವೆಗಳು, ನ್ಯಾಯಾಂಗ ಸೇವೆಗಳು ಮತ್ತು ವಿಜ್ಞಾನ, ತಂತ್ರಜ್ಞಾನ ಮತ್ತು ಉದ್ಯಮ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಅತ್ಯುನ್ನತ ಶ್ರೇಣಿಗಳನ್ನು ತಲುಪಿದ ಭವ್ಯ ಇತಿಹಾಸವನ್ನು ಸೃಷ್ಟಿಸಿವೆ. ಅಂಶಗಳಿಂದಾಗಿ ಅಧಿಕ ಸಂಖ್ಯೆಯಲ್ಲಿ ಹೊಸ ಸೈನಿಕ ಶಾಲೆಗಳನ್ನು ತೆರೆಯಲು ಬೇಡಿಕೆ ಹೆಚ್ಚುತ್ತಿದೆ.

ದೇಶಾದ್ಯಂತ 33 ಸೈನಿಕ್ ಶಾಲೆಗಳನ್ನು ನಿರ್ವಹಿಸುವ ಅನುಭವವನ್ನು ಬಳಸಿಕೊಳ್ಳುವ ಸಲುವಾಗಿ 100 ಹೊಸ ಅಧೀನ ಸೈನಿಕ್ ಶಾಲೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸೈನಿಕ್ ಸ್ಕೂಲ್ಸ್ ಸೊಸೈಟಿ ಅಡಿಯಲ್ಲಿ ಹಾಲಿ ಇರುವ ಅಥವಾ ಹೊಸ ಶಾಲೆಗಳ ಸೇರ್ಪಡೆಗೆ ಅರ್ಜಿ ಸಲ್ಲಿಸಲು ಸರಕಾರಿ/ ಖಾಸಗಿ ಶಾಲೆಗಳು / ʻಎನ್ಜಿಓʼಗಳಿಂದ ಪ್ರಸ್ತಾಪಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ತಮ್ಮ ಪ್ರಸ್ತಾಪಗಳನ್ನು https://sainikschool.ncog.gov.in ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ ಸಲ್ಲಿಸಬಹುದುಯೋಜನೆಯ ಪ್ರಮುಖ ವೈಶಿಷ್ಟ್ಯಗಳು ಮತ್ತು ಅರ್ಹತಾ ಮಾನದಂಡಗಳು; ಪಾಲುದಾರರು ಅಂದರೆ  ರಕ್ಷಣಾ ಇಲಾಖೆ ಮತ್ತು ಶಾಲಾ ಆಡಳಿತ ಮಂಡಳಿಯ ಜವಾಬ್ದಾರಿಗಳನ್ನು ಅಲ್ಲಿ ಪಟ್ಟಿ ಮಾಡಲಾಗಿದೆ.

ಯೋಜನೆಯು ಶಿಕ್ಷಣ ಕ್ಷೇತ್ರದಲ್ಲಿ ಸಾರ್ವಜನಿಕ/ಖಾಸಗಿ ಪಾಲುದಾರಿಕೆಯನ್ನು ಸದ್ಬಳಕೆ ಮಾಡಿಕೊಳ್ಳಲು, ಹೆಸರಾಂತ ಖಾಸಗಿ ಮತ್ತು ಸರಕಾರಿ ಶಾಲೆಗಳಲ್ಲಿ ಲಭ್ಯವಿರುವ ಪ್ರಸ್ತುತ ಮೂಲಸೌಕರ್ಯಗಳನ್ನು ಬಳಸಿಕೊಳ್ಳಲು ಸಹಾಯಕವಾಗುತ್ತದೆ. ಜೊತೆಗೆ ಸೈನಿಕ್ ಶಾಲಾ ಪರಿಸರದಲ್ಲಿ ಶಿಕ್ಷಣ ಪಡೆಯಲು ಬಯಸುವ ಮಕ್ಕಳ ಆಕಾಂಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ಹೊಸ ಸಾಮರ್ಥ್ಯಗಳನ್ನು ತೆರೆಯಲು ಇದರಿಂದ ನೆರವಾಗುತ್ತದೆ.

2022-23 ಶೈಕ್ಷಣಿಕ ವರ್ಷದಿಂದ ಪ್ರಾರಂಭಗೊಂಡು  ಸುಮಾರು 5,000 ವಿದ್ಯಾರ್ಥಿಗಳು ಇಂತಹ 100 ಅಧೀನ ಸೈನಿಕ ಶಾಲೆಗಳಲ್ಲಿ ಆರನೇ ತರಗತಿಗೆ ಪ್ರವೇಶ ಪಡೆಯುವ ನಿರೀಕ್ಷೆಯಿದೆ. ಪ್ರಸ್ತುತ ಪ್ರಸ್ತುತ ಇರುವ 33 ಸೈನಿಕ ಶಾಲೆಗಳು 6ನೇ ತರಗತಿಗೆ ಸುಮಾರು 3,000 ವಿದ್ಯಾರ್ಥಿಗಳ ಪ್ರವೇಶ ಸಾಮರ್ಥ್ಯವನ್ನು ಹೊಂದಿವೆ.

ಪರಿಣಾಮ:

ಸಾಮಾನ್ಯ ಶಿಕ್ಷಣ ಮಂಡಳಿ ಪಠ್ಯಕ್ರಮದೊಂದಿಗೆ ಸೈನಿಕ್ ಶಾಲೆಗಳ ಶಿಕ್ಷಣ ವ್ಯವಸ್ಥೆಯ ಸಂಯೋಜನೆಯಿಂದಾಗಿ ಶೈಕ್ಷಣಿಕವಾಗಿ ಸಮರ್ಥ, ದೈಹಿಕವಾಗಿ ಸದೃಢ, ಸಾಂಸ್ಕೃತಿಕವಾಗಿ ಅರಿವು ಹೊಂದಿರುವ, ಬೌದ್ಧಿಕವಾಗಿ ಪ್ರವೀಣರಾದ, ಕೌಶಲ್ಯಯುತ ಯುವಕರು ಮತ್ತು ನಾಗರಿಕರನ್ನು ರೂಪಿಸಲು ನೆರವಾಗಲಿದೆ ಎಂದು ನಂಬಲಾಗಿದೆ. ಶಾಲೆಗಳ ವಿದ್ಯಾರ್ಥಿಗಳು ಅಗತ್ಯ ಜೀವನ ಕೌಶಲ್ಯಗಳನ್ನು ಹೊಂದಿರುತ್ತಾರೆ ಎಂಬ ನಂಬಿಕೆಯಿದೆ. ಇದು ಅವರನ್ನು ತಾವು ಆಯ್ಕೆ ಮಾಡಿದ ಕ್ಷೇತ್ರಗಳಲ್ಲಿ  ಪ್ರಜ್ವಲಿಸುವಂತೆ ಮಾಡುತ್ತದೆ. ಹೀಗಾಗಿ, ರಾಷ್ಟ್ರೀಯ ಉದ್ದೇಶಗಳಿಗೆ ಹೆಚ್ಚಿನ ಆದ್ಯತೆಯನ್ನು ಒದಗಿಸುವ ನಾಯಕತ್ವದ ಗುಣಗಳನ್ನು ಹೊಂದಿರುವ, ಹೆಚ್ಚು ಆತ್ಮಸ್ಥೈರ್ಯ ಹೊಂದಿರುವ, ನುರಿತ, ಬಹು ಆಯಾಮದ, ದೇಶಭಕ್ತ ಯುವ ಸಮುದಾಯವನ್ನು ರೂಪಿಸುವ ಗುರಿಯನ್ನು ಪ್ರಸ್ತಾಪವು ಹೊಂದಿದೆ.

***


(Release ID: 1763501) Visitor Counter : 228