ಇಂಧನ ಸಚಿವಾಲಯ

3ನೇ ಭಾರತ - ಯುಕೆ ಬೆಳವಣಿಗೆಗಾಗಿ ಇಂಧನ ಪಾಲುದಾರಿಕೆ – ಸಚಿವಾಲಯದ ಮಟ್ಟದ ಮಾತುಕತೆ


ಎರಡೂ ದೇಶಗಳು  ಇಂಧನ ವಲಯದಲ್ಲಿ ಶುದ್ಧ ಇಂಧನ ಪರಿವರ್ತನೆಗೆ ಚಾಲನೆ ನೀಡಲು ಕ್ರಿಯಾ ಯೋಜನೆಗಳನ್ನು ರೂಪಿಸಲಿವೆ

Posted On: 09 OCT 2021 10:08AM by PIB Bengaluru

3 ನೇ ಭಾರತ-ಯುಕೆಯ  ಬೆಳವಣಿಗೆಗಾಗಿ ಇಂಧನ ಪಾಲುದಾರಿಕೆ  ವಿಷಯದ ಮೇಲೆ   ಸಚಿವಾಲಯದ ಮಟ್ಟದ ಮಾತುಕತೆಯ ಅಧ್ಯಕ್ಷತೆಯನ್ನು  ಕೇಂದ್ರ ಇಂಧನ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಆರ್. ಸಿಂಗ್ ರವರು ಭಾರತದ ಕಡೆಯಿಂದ ಮತ್ತು  ಯುಕೆ ಸಂಸತ್ ಸದಸ್ಯ ಹಾಗೂ ವ್ಯಾಪಾರ, ಇಂಧನ ಮತ್ತು ಕೈಗಾರಿಕಾ ಕಾರ್ಯತಂತ್ರದ ರಾಜ್ಯ ಕಾರ್ಯದರ್ಶಿ (ಬಿಇಐಎಸ್) ಗೌರವಾನ್ವಿತ ಶ್ರೀ ಕ್ವಾಸಿಕ್ವಾರ್ಟೆಂಗ್ ಯುಕೆ ಕಡೆಯಿಂದ ವಹಿಸಿದ್ದರು. ಸಂವಾದವನ್ನು ಕಳೆದ ಸಂಜೆ ವರ್ಚುವಲ್ ಆಗಿ ನಡೆಸಲಾಯಿತು.

ಸಂವಾದದಲ್ಲಿ ಇಂಧನ ಪರಿವರ್ತನೆಯು ಪ್ರಮುಖ ಚರ್ಚೆಯ ವಿಷಯವಾಗಿತ್ತು  ಮತ್ತು ಇಂಧನ ಸಚಿವರುಗಳು  ತಮ್ಮ ದೇಶಗಳಲ್ಲಿ ನಡೆಯುತ್ತಿರುವ ಇಂಧನ ಪರಿವರ್ತನೆ ಚಟುವಟಿಕೆಗಳ ಬಗ್ಗೆ ವಿವರವಾಗಿ ಮಾತನಾಡಿದರು, ಸೌರ, ಕಡಲ ಗಾಳಿ, ಸಂಗ್ರಹಣೆ, ಇವಿಗಳು, ಪರ್ಯಾಯ ಇಂಧನಗಳು ಸೇರಿದಂತೆ ನವೀಕರಿಸಬಹುದಾದ ವಸ್ತುಗಳ ಮೇಲೆ ಕೇಂದ್ರೀಕರಿಸಿ ಮಾತನಾಡಿದರು.

ಯುಕೆಯವರು ಕಳೆದ ಎರಡು ವರ್ಷಗಳಲ್ಲಿ ದ್ವಿಪಕ್ಷೀಯ ಸಹಕಾರದ ಅಡಿಯಲ್ಲಿ ನಡೆಯುತ್ತಿರುವ ಮಹತ್ವದ ಕೆಲಸ ಮತ್ತು ಹಿಂದಿನ ಕೆಲಸದ ವಿವರವಾದ ಸಾರಾಂಶವನ್ನು ಪ್ರಸ್ತುತಪಡಿಸಿದರು, ಇದನ್ನು ಎರಡೂ ಕಡೆಯಿಂದ ಪ್ರಶಂಸಿಸಲಾಯಿತು ಮತ್ತು ಅನುಮೋದಿಸಲಾಯಿತು.

2021 ರ ಮೇ 4 ರಂದು ಭಾರತ-ಯುಕೆ ವರ್ಚುವಲ್ ಶೃಂಗಸಭೆಯಲ್ಲಿ ಉಭಯದೇಶಗಳ ಪ್ರಧಾನಮಂತ್ರಿಗಳು ಚಾಲನೆ ನೀಡಿದ ಭಾರತ-ಯುಕೆ ಭವಿಷ್ಯದ ಸಂಬಂಧಗಳಿಗಾಗಿ ಮಾರ್ಗಸೂಚಿ 2030 ಅನ್ನು ಗಣ್ಯರು ಸ್ವಾಗತಿಸಿದರು ಮತ್ತು 2030 ರ ಮಾರ್ಗಸೂಚಿಗೆ ಅನುಗುಣವಾಗಿ ಭವಿಷ್ಯದ ವಿವಿಧ ಕ್ಷೇತ್ರಗಳನ್ನು ಗುರುತಿಸಿದರು.

ಇಂಧನ ಮತ್ತು ಸ್ವಚ್ಛ ಸಾರಿಗೆ, ನವೀಕರಿಸಬಹುದಾದ, ಹಸಿರು ಹಣಕಾಸು ಮತ್ತು ಸ್ವಚ್ಛ ಇಂಧನ ಸಂಶೋಧನೆಗಳ ಮಾರ್ಗಸೂಚಿ 2030ರ ಭಾಗವಾಗಿ ಸ್ಮಾರ್ಟ್ ಗ್ರಿಡ್ಗಳು, ಇಂಧನ ಸಂಗ್ರಹಣೆ, ಹಸಿರು ಜಲಜನಕ, ಚಾರ್ಜಿಂಗ್ ಮೂಲಸೌಕರ್ಯ, ಬ್ಯಾಟರಿ ಸಂಗ್ರಹಣೆ ಮತ್ತು ಬಹುಪಕ್ಷೀಯ ಸಹಯೋಗದ ಅಡಿಯಲ್ಲಿ ಇತರ ಪ್ರಸ್ತಾಪಗಳೊಂದಿಗೆ ನವೀಕರಿಸಬಹುದಾದ ಇಂಧನದಲ್ಲಿ ಹೂಡಿಕೆಗಳನ್ನು ಸಜ್ಜುಗೊಳಿಸುವ ಅವಶ್ಯಕತೆ ಸೇರಿದಂತೆ ಹಲವು ವಿಷಯಗಳನ್ನು ಒಳಗೊಂಡಿರುವ ಕ್ರಿಯಾ ಯೋಜನೆಗೆ  ಉಭಯ ದೇಶಗಳೂ ಒಪ್ಪಿಕೊಂಡಿವೆ.

ಕೈಗೆಟುಕುವ ಮತ್ತು ಸಮರ್ಥನೀಯ ಇಂದನವನ್ನು ಪಡೆಯುವುದರಲ್ಲಿ ಅಂತಾರಾಷ್ಟ್ರೀಯ ಸಹಕಾರದ ಪ್ರಾಮುಖ್ಯತೆ,  ಇಂಧನ ವಲಯದಲ್ಲಿ ಸ್ವಚ್ಛ ಇಂಧನ ಪರಿವರ್ತನೆಗೆ ಚಾಲನೆ ನೀಡುವ ಕ್ರಿಯಾ ಯೋಜನೆಗಳಿಗೆ ಒತ್ತು ನೀಡಿ   ಸಂವಾದವು ಎರಡೂ ಕಡೆಯಿಂದ ಮುಕ್ತಾಯಗೊಂಡಿತು. ಹಸಿರು ಜಲಜನಕ, ಸಂಗ್ರಹಣೆ, ಕಡಲ ಗಾಳಿ ಮತ್ತು ವಿದ್ಯುತ್ ಮಾರುಕಟ್ಟೆಯಾಗಿ. ಗೌರವಾನ್ವಿತ ಪ್ರಧಾನಮಂತ್ರಿಯವರು ಪ್ರಾರಂಭಿಸಿದ ಒನ್ ಸನ್ ಒನ್ ವರ್ಲ್ಡ್ ಒನ್ ಗ್ರಿಡ್ (ಒಎಸ್ ಒ ಡಬ್ ಒ ಜಿ) ಉಪಕ್ರಮವು ಗ್ರಿಡ್ನಲ್ಲಿ  ನವೀಕರಿಸಬಹುದಾದ ಇಂಧನದ ಕ್ರೋಡೀಕರಣವನ್ನು ಬೆಂಬಲಿಸಲು ಭರವಸೆಯ ಪರ್ಯಾಯವಾಗಿ ಕಾರ್ಯನಿರ್ವಹಿಸಬಹು ದೆಂದು  ಭಾರತದ ಸಚಿವರು ಆಶಿಸಿದರು.

***



(Release ID: 1762472) Visitor Counter : 278