ಹಣಕಾಸು ಸಚಿವಾಲಯ
ಏರ್ ಇಂಡಿಯಾ ಬಂಡವಾಳ ಹಿಂದೆಗೆತಕ್ಕೆ ಸರ್ಕಾರದ ಅನುಮೋದನೆ
ಏರ್ ಇಂಡಿಯಾ ಬಿಡ್ ಗೆದ್ದ ಟಾಟಾಸನ್ಸ್ ಎಸ್‌ಪಿವಿ - ಟ್ಯಾಲೇಸ್ ಪ್ರೈವೇಟ್ ಲಿಮಿಟೆಡ್
Posted On:
08 OCT 2021 4:51PM by PIB Bengaluru
ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ, ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್; ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಮತ್ತು ನಾಗರಿಕ ವಿಮಾನಯಾನ ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನೊಳಗೊಂಡ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಯ ಏರ್ ಇಂಡಿಯಾ ನಿರ್ದಿಷ್ಟ ಪರ್ಯಾಯ ವ್ಯವಸ್ಥೆಯು (ಎ ಎಸ್ ಎ ಎಂ) ಏರ್ ಇಂಡಿಯಾದಲ್ಲಿರುವ ಭಾರತದ ಸರ್ಕಾರದ ಶೇ.100 ಇಕ್ವಿಟಿ ಷೇರುಗಳು ಜೊತೆಗೆ ಎ ಐ ಎಕ್ಸ್ ಎಲ್ ಮತ್ತು ಎ ಎಸ್ ಎ ಟಿ ಎಸ್ ನಲ್ಲಿರುವ ಏರ್ ಇಂಡಿಯಾದ ಇಕ್ವಿಟಿ ಷೇರುಗಳನ್ನು ಅತಿ ಹೆಚ್ಚಿನ ದರ ಸಲ್ಲಿಸಿದ್ದ ಟಾಟಾ ಸನ್ಸ್ ಸ್ವಾಮ್ಯದ ಅಂಗಸಂಸ್ಥೆಯಾದ ಟ್ಯಾಲೇಸ್ ಪ್ರೈವೇಟ್ ಲಿಮಿಟೆಡ್ ಗೆ ಮಾರಾಟ ಮಾಡಲು ಅನುಮೋದನೆ ನೀಡಿದೆ. ಏರ್ ಇಂಡಿಯಾಕ್ಕೆ ಟ್ಯಾಲೇಸ್ ಪ್ರೈವೇಟ್ ಲಿಮಿಟೆಡ್ 18,000 ಕೋಟಿ ರೂ.ಗಳ ಉದ್ಯಮ ಬೆಲೆಯ (ಇವಿ)ಬಿಡ್ ಸಲ್ಲಿಸಿತ್ತು. ಈ ವಹಿವಾಟಿನಲ್ಲಿ ಭೂಮಿ ಮತ್ತು ಕಟ್ಟಡ ಸೇರಿದಂತೆ 14,718 ಕೋಟಿ ರೂ. ಮೌಲ್ಯದ ಸ್ವತ್ತುಗಳು ಒಳಗೊಂಡಿಲ್ಲ, ಇವುಗಳನ್ನು ಭಾರತ ಸರ್ಕಾರದ ಏರ್ ಇಂಡಿಯಾ ಅಸೆಟ್ ಹೋಲ್ಡಿಂಗ್ ಲಿಮಿಟೆಡ್ (ಎ ಐ ಎ ಹೆಚ್ ಎಲ್) ಗೆ ವರ್ಗಾಯಿಸಲಾಗುವುದು.

ಏರ್ ಇಂಡಿಯಾ ಮತ್ತು ಅದರ ಅಂಗಸಂಸ್ಥೆಗಳ ಮರುಹೂಡಿಕೆ ಪ್ರಕ್ರಿಯೆಯು ಜೂನ್ 2017 ರಲ್ಲಿ ಸಿಸಿಇಎಯ ‘ತಾತ್ವಿಕ’ಅನುಮೋದನೆಯೊಂದಿಗೆ ಆರಂಭವಾಯಿತು. ಮೊದಲ ಸುತ್ತಿನಲ್ಲಿ ಆಸಕ್ತಿ ವ್ಯಕ್ತಪಡಿಸಿದ ಯಾವುದೇ ಬಿಡ್ ಬರಲಿಲ್ಲ. ಪ್ರಕ್ರಿಯೆಯು 27 ಜನವರಿ 2020 ರಂದು ಪ್ರಾಥಮಿಕ ಮಾಹಿತಿ ಜ್ಞಾಪನೆ (ಪಿಐಎಂ) ಮತ್ತು ಆಸಕ್ತಿ ವ್ಯಕ್ತಪಡಿಸುವ ಬಿಡ್ ಗಳ ವಿನಂತಿಯೊಂದಿಗೆ (ಇಒಐ) ಮರು ಆರಂಭವಾಯಿತು. ಜನವರಿ 2020 ರ ಪಿಐಎಂನ ಮೂಲ ನಿರ್ಮಾಣದ ಪ್ರಕಾರ (i) ಪೂರ್ವ ನಿರ್ಧಾರಿತ, ಸ್ಥಿರ ಸಾಲವನ್ನು ಏರ್ ಇಂಡಿಯಾದಲ್ಲಿ ಉಳಿಸಿಕೊಳ್ಳಬೇಕು (ಬಾಕಿಯನ್ನು ಏರ್ ಇಂಡಿಯಾ ಅಸೆಟ್ ಹೋಲ್ಡಿಂಗ್ ಲಿಮಿಟೆಡ್) ಗೆ ವರ್ಗಾಯಿಸಬೇಕು ಮತ್ತು (ii) ಏರ್ ಇಂಡಿಯಾ ಮತ್ತು ಎ ಐ ಎಕ್ಸ್ ಎಲ್ ನಲ್ಲಿ ಉಳಿಸಿಕೊಳ್ಳಬೇಕಾದ ಕರೆಂಟ್ ಮತ್ತು ನಾನ್ ಕರೆಂಟ್ ಹೊಣೆಗಾರಿಕೆಗಳು (ಸಾಲವನ್ನು ಹೊರತುಪಡಿಸಿ) ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಅಸೆಟ್ ಹೋಲ್ಡಿಂಗ್ ಲಿಮಿಟೆಡ್ ಕೆಲವು ಗುರುತಿಸಲಾದ ಸ್ವತ್ತುಗಳ ಮೊತ್ತಕ್ಕೆ ಸಮನಾಗಿರುತ್ತದೆ (ಹೆಚ್ಚುವರಿ ಹೊಣೆಗಾರಿಕೆಗಳನ್ನು ಏರ್ ಇಂಡಿಯಾ ಅಸೆಟ್ ಹೋಲ್ಡಿಂಗ್ ಲಿಮಿಟೆಡ್ ಗೆ ವರ್ಗಾಯಿಸಲಾಗುವುದು).
ಕೋವಿಡ್-19 ಸಾಂಕ್ರಾಮಿಕ ರೋಗದ ಪರಿಣಾಮ ಉದ್ಭವಿಸಿದ ಪರಿಸ್ಥಿತಿಯ ಕಾರಣದಿಂದ ಸಮಯಾವಧಿಯನ್ನು ವಿಸ್ತರಿಸಬೇಕಾಯಿತು. ಏರ್ ಇಂಡಿಯಾದ ಅತಿಯಾದ ಸಾಲ ಮತ್ತು ಇತರ ಹೊಣೆಗಾರಿಕೆಗಳ ದೃಷ್ಟಿಯಿಂದ ಬೃಹತ್ ಸಂಗ್ರಹವಾದ ನಷ್ಟ, ಬಿಡ್ಡಿಂಗ್ ಬ್ಯಾಲೆನ್ಸ್ ಶೀಟ್ ಅನ್ನು ಮರುಗಾತ್ರಗೊಳಿಸಲು ಮತ್ತು ಬಿಡ್‌ಗಳು ಮತ್ತು ಸ್ಪರ್ಧೆಯ ಅವಕಾಶಗಳನ್ನು ಹೆಚ್ಚಿಸಲು ನಿರೀಕ್ಷಿತ ಬಿಡ್ಡರ್‌ಗಳಿಗೆ ಅವಕಾಶ ನೀಡಲು ಬಿಡ್ಡಿಂಗ್ ರಚನೆಯನ್ನು 2020 ರ ಅಕ್ಟೋಬರ್‌ನಲ್ಲಿ ಉದ್ಯಮ ಮೌಲ್ಯಕ್ಕೆ (ಇವಿ) ಪರಿಷ್ಕರಿಸಲಾಯಿತು. ಇವಿ ರಚನೆಯು ಬಿಡ್ಡರ್‌ಗಳಿಗೆ ಈಕ್ವಿಟಿಯ ಕನಿಷ್ಠ ಶೇ.15 ರಷ್ಟು ನಗದು ಪರಿಗಣನೆಯೊಂದಿಗೆ ಪೂರ್ವನಿರ್ಧರಿತ, ಸ್ಥಿರ ಸಾಲದ ಬದಲಾಗಿ ಈಕ್ವಿಟಿ ಮತ್ತು ಸಾಲದ ಒಟ್ಟು ಪರಿಗಣನೆಗೆ ಬಿಡ್ ಮಾಡಲು ಅವಕಾಶ ನೀಡಿತು. ಮೂಲ ಮತ್ತು ಪರಿಷ್ಕೃತ ರಚನೆಯ ಪ್ರಕಾರ, ಎಲ್ಲಾ ಕೋರ್-ಅಲ್ಲದ ಸ್ವತ್ತುಗಳನ್ನು (ಭೂಮಿ, ಕಟ್ಟಡಗಳು, ಇತ್ಯಾದಿ) ಏರ್ ಇಂಡಿಯಾ ಅಸೆಟ್ ಹೋಲ್ಡಿಂಗ್ ಲಿಮಿಟೆಡ್ ಗೆ ವರ್ಗಾಯಿಸಲಾಗುವುದು. ಆದ್ದರಿಂದ ಅವು ವಹಿವಾಟಿನ ಭಾಗವಾಗಿರುವುದಿಲ್ಲ. ಉದ್ಯೋಗಿಗಳು ಮತ್ತು ನಿವೃತ್ತ ನೌಕರರ ಹಿತಾಸಕ್ತಿ ಕಾಪಾಡಲಾಗುವುದು.
ವಹಿವಾಟಿನಲ್ಲಿ ಏಳು ಇಒಐಗಳೊಂದಿಗೆ 2020 ರ ಡಿಸೆಂಬರ್‌ನಲ್ಲಿ ತೀವ್ರ ಪೈಪೋಟಿ ಕಂಡುಬಂದಿತು. ಆದಾಗ್ಯೂ, ಸ್ಪಷ್ಟೀಕರಣಕ್ಕೆ ಅವಕಾಶ ನೀಡಿದ ನಂತರವೂ ಪಿಐಎಂ/ಇಒಐನಲ್ಲಿ ನಿಗದಿಪಡಿಸಿದ ಅವಶ್ಯಕತೆಗಳನ್ನು ಪೂರೈಸದ ಕಾರಣ ಐದು ಬಿಡ್ಡರ್‌ಗಳು ಅನರ್ಹಗೊಂಡರು. ಪ್ರಸ್ತಾವನೆ (ಆರ್‌ಎಫ್‌ಪಿ) ಮತ್ತು ಷೇರು ಖರೀದಿ ಒಪ್ಪಂದದ ಕರಡನ್ನು (ಎಸ್‌ಪಿಎ) 30 ಮಾರ್ಚ್ 2021 ರಂದು ನೀಡಲಾಯಿತು. ಏರ್ ಇಂಡಿಯಾ ಅರ್ಹ ಬಿಡ್ಡರ್‌ಗಳಿಗೆ ವರ್ಚುವಲ್ ಡಾಟಾ ರೂಂ ಮೂಲಕ ಸಮಗ್ರ ಮಾಹಿತಿಯನ್ನು ಒದಗಿಸಿದೆ, ಅವರು ಸ್ವತ್ತುಗಳು ಮತ್ತು ನೀಡುತ್ತಿರುವ ಸೌಲಭ್ಯಗಳನ್ನು ಪರಿಶೀಲಿಸಲು ಅವಕಾಶ ನೀಡಲಾಯಿತು. ವಹಿವಾಟಿನ ಭಾಗವಾಗಿ. ಬಿಡ್ಡರ್‌ಗಳ ಹೆಚ್ಚಿನ ಸಂಖ್ಯೆಯ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲಾಗಿದೆ. ಬಿಡ್ಡರ್‌ಗಳ ಕೋರಿಕೆಯ ಮೇರೆಗೆ, ಬಿಡ್ ಸಲ್ಲಿಸುವ ದಿನಾಂಕವನ್ನು 15 ಸೆಪ್ಟೆಂಬರ್, 2021 ಕ್ಕೆ ವಿಸ್ತರಿಸಲಾಯಿತು, ಇದರಿಂದಾಗಿ ಅವರು ಬಿಡ್ ಸಲ್ಲಿಸುವ ಮೊದಲು ಮೌಲ್ಯಮಾಪನವನ್ನು ಕೈಗೊಳ್ಳಲು ಅವಕಾಶ ದೊರೆಯಿತು. ಅಂತಿಮ ಎಸ್‌ಪಿಎ ವಿವರವಾದ ನಿಯಮಗಳು ಮತ್ತು ಷರತ್ತುಗಳನ್ನು ಒಳಗೊಂಡಿತ್ತು ನಿಗದಿತ ದಿನಾಂಕದಂದು ಹಣಕಾಸೇತರ ಬಿಡ್ ದಾಖಲೆಗಳು ಮತ್ತು ಅರ್ಹ ಇಬ್ಬರು ಬಿಡ್ಡರ್‌ಗಳಿಂದ ಬಿಡ್ ಭದ್ರತೆಯೊಂದಿಗೆ ಎರಡು ಮೊಹರು ಮಾಡಿದ ಬಿಡ್‌ಗಳನ್ನು ಸ್ವೀಕರಿಸಲಾಯಿತು.
ಕಾರ್ಯತಂತ್ರದ ಬಂಡವಾಳ ಹಿಂದೆಗೆತದ ಅನುಮೋದಿತ ಕಾರ್ಯವಿಧಾನಕ್ಕೆ ಅನುಗುಣವಾಗಿ, ಪ್ರಕ್ರಿಯೆಯ ಮೌಲ್ಯಮಾಪನದ ಆಧಾರದ ಮೇಲೆ ವಹಿವಾಟಿನ ಮೊಹರು ಮಾಡಿದ ಹಣಕಾಸಿನ ಬಿಡ್‌ಗಳನ್ನು ಸ್ವೀಕರಿಸಿದ ನಂತರ ಮೂಲ ಬೆಲೆಯನ್ನು ನಿಗದಿಪಡಿಸಲಾಯಿತು. ಮೂಲ ಬೆಲೆಯ ಸ್ವತಂತ್ರ ಸ್ಥಿರೀಕರಣದ ನಂತರ, ಈಗಾಗಲೇ ಸ್ವೀಕರಿಸಿದ ಮೊಹರು ಮಾಡಿದ ಹಣಕಾಸು ಬಿಡ್‌ಗಳನ್ನು ಬಿಡ್ಡರ್‌ಗಳ ಸಮ್ಮುಖದಲ್ಲಿ ತೆರೆಯಲಾಯಿತು, ಅವರು ಈ ಕೆಳಗಿನಂತಿದ್ದರು:
1. ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ ನ ಸಂಪೂರ್ಣ ಒಡೆತನದ ಅಂಗಸಂಸ್ಥೆಯಾದ ಟ್ಯಾಲೇಸ್ ಪ್ರೈವೇಟ್ ಲಿಮಿಟೆಡ್ 18,000 ಕೋಟಿ ರೂ. ಇವಿಯೊಂದಿಗೆ
2. 15,100 ಕೋಟಿ ರೂ. ಇವಿಯ ಶ್ರೀ ಅಜಯ್ ಸಿಂಗ್ ನೇತೃತ್ವದ ಸಂಸ್ಥೆ
ಎರಡೂ ಬಿಡ್‌ಗಳು 12,906 ಕೋಟಿ ರೂ.ಗಳ ಮೂಲ ಬೆಲೆಗಿಂತ ಹೆಚ್ಚಾಗಿದ್ದವು.
ಬಿಡ್‌ದಾರರ ಗೋಪ್ಯತೆಗೆ ಸಂಬಂಧಿಸಿದಂತೆ, ಅಂತರ ಸಚಿವಾಲಯ ತಂಡ (ಐಎಂಜಿ), ಬಂಡವಾಳ ಹಿಂದೆಗೆತ ಕುರಿತ ಕಾರ್ಯದರ್ಶಿಗಳ ತಂಡ (ಸಿಜಿಡಿ) ಮತ್ತು ಅತ್ಯುನ್ನತ ಸಚಿವರ ಮಟ್ಟದ ಏರ್ ಇಂಡಿಯಾ ನಿರ್ದಿಷ್ಟ ಪರ್ಯಾಯ ವ್ಯವಸ್ಥೆಯು ಬಹು-ಹಂತದಲ್ಲಿ ನಿರ್ಧಾರ ತೆಗೆದುಕೊಳ್ಳುವ ಮೂಲಕ ಬಿಡ್‌ದಾರರ ಗೋಪ್ಯತೆಗೆ ಸಂಬಂಧಿಸಿದಂತೆ ಬಂಡವಾಳ ಹಿಂದೆಗೆತ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪಾರದರ್ಶಕ ರೀತಿಯಲ್ಲಿ ನಡೆಸಲಾಗಿದೆ. ವಹಿವಾಟು ಸಲಹೆಗಾರ, ಕಾನೂನು ಸಲಹೆಗಾರ, ಆಸ್ತಿ ಮೌಲ್ಯಮಾಪಕರು, ಕ್ಷೇತ್ರಗಳ ವೃತ್ತಿಪರರು ಸಂಪೂರ್ಣ ಪ್ರಕ್ರಿಯೆಯನ್ನು ಬೆಂಬಲಿಸಿದ್ದಾರೆ.
ಮುಂದಿನ ಹಂತವು ಯಶಸ್ವಿಯಾಗಿ ಬಿಡ್ಡುದಾರರು ಕಂಪನಿ ಮತ್ತು ಸರ್ಕಾರದ ಷರತ್ತುಗಳನ್ನು ಪೂರೈಸಿದ ನಂತರ, ಒಪ್ಪಂದ ಬಾಧ್ಯತಾ ಪತ್ರವನ್ನು (ಎಲ್ ಒ ಐ) ನೀಡಲಾಗುವುದು ಮತ್ತು ನಂತರ ಷೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಲಾಗುವುದು, ಡಿಸೆಂಬರ್ 2021 ರೊಳಗೆ ವಹಿವಾಟು ಪೂರ್ಣಗೊಳ್ಳುವ ನಿರೀಕ್ಷೆಯಿದೆ.
***
(Release ID: 1762293)