ಸಂಪುಟ
azadi ka amrit mahotsav

2020-21ನೇ ಹಣಕಾಸು ವರ್ಷದಲ್ಲಿ ರೈಲ್ವೆ ಉದ್ಯೋಗಿಗಳಿಗೆ ʻಉತ್ಪಾದಕತೆ ಆಧರಿತ ಬೋನಸ್‌ʼ ನೀಡಲು ಸಚಿವ ಸಂಪುಟ ಅನುಮೋದನೆ

Posted On: 06 OCT 2021 3:40PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 2020-21ನೇ ಹಣಕಾಸು ವರ್ಷದಲ್ಲಿ ಎಲ್ಲ ಅರ್ಹ ನಾನ್‌-ಗೆಜೆಟೆಡ್ ರೈಲ್ವೆ ನೌಕರರಿಗೆ (ಆರ್‌ಪಿಎಫ್/ಆರ್‌ಪಿಎಸ್‌ಎಫ್ ಸಿಬ್ಬಂದಿಯನ್ನು ಹೊರತುಪಡಿಸಿ) 78 ದಿನಗಳ ವೇತನಕ್ಕೆ ಸಮನಾದ ʻಉತ್ಪಾದಕತೆ ಆಧರಿತ ಬೋನಸ್ʼ(ಪಿಎಲ್‌ಬಿ) ನೀಡಲು ಅನುಮೋದನೆ ನೀಡಿದೆ.

ರೈಲ್ವೆ ನೌಕರರಿಗೆ 78 ದಿನಗಳ ʻಪಿಎಲ್‌ಬಿʼ ಪಾವತಿಯಿಂದ 1984.73 ಕೋಟಿ ರೂ.ಗಳ ಆರ್ಥಿಕ ಪರಿಣಾಮ ಉಂಟಾಗಬಹುದೆಂದು ಅಂದಾಜಿಸಲಾಗಿದೆ. ಅರ್ಹ ನಾನ್‌-ಗೆಜೆಟೆಡ್ ರೈಲ್ವೆ ನೌಕರರಿಗೆ ʻಪಿಎಲ್‌ಬಿʼ ಪಾವತಿಸಲು ಮಾಸಿಕ 7000/- ರೂ.ಗಳ ವೇತನ ಮಿತಿಯನ್ನು ನಿಗದಿಪಡಿಸಲಾಗಿದೆ. ಅರ್ಹ ರೈಲ್ವೆ ಉದ್ಯೋಗಿಗೆ 78 ದಿನಗಳಿಗೆ ಪಾವತಿಸುವ ಗರಿಷ್ಠ ಮೊತ್ತ 17,951 ರೂಪಾಯಿಗಳು.

ನಿರ್ಧಾರದಿಂದ ಸುಮಾರು 11.56 ಲಕ್ಷ ಗೆಜೆಟೆಡೇತರ ರೈಲ್ವೆ ಉದ್ಯೋಗಿಗಳು ಪ್ರಯೋಜನ ಪಡೆಯುವ ಸಾಧ್ಯತೆಯಿದೆ. ಪ್ರತಿ ವರ್ಷ ದಸರಾ/ ಪೂಜಾ ರಜಾದಿನಗಳಿಗೆ ಮೊದಲು ಅರ್ಹ ರೈಲ್ವೆ ಉದ್ಯೋಗಿಗಳಿಗೆ ʻಪಿಎಲ್‌ಬಿʼ ಪಾವತಿ ಮಾಡಲಾಗುತ್ತದೆ. ವರ್ಷವೂ ರಜಾದಿನಗಳಿಗೆ ಮುನ್ನ ಸಂಪುಟದ ನಿರ್ಧಾರವನ್ನು ಜಾರಿಗೊಳಿಸಲಾಗುವುದು.

2010-11ರಿಂದ 2019-20 ವರೆಗಿನ ಆರ್ಥಿಕ ವರ್ಷಗಳಲ್ಲಿ 78 ದಿನಗಳ ವೇತನದ ʻಪಿಎಲ್‌ಬಿʼ ಮೊತ್ತವನ್ನು ಪಾವತಿಸಲಾಗಿದೆ. 2020-21ನೇ ವರ್ಷವೂ 78 ದಿನಗಳ ವೇತನಕ್ಕೆ ಸಮಾನವಾದ ʻಪಿಎಲ್‌ಬಿʼ ನೀಡಲಾಗುವುದು. ಕ್ರಮವು ರೈಲ್ವೆಯ ಕಾರ್ಯಕ್ಷಮತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಉದ್ಯೋಗಿಗಳನ್ನು ಉತ್ತೇಜಿಸಬಹುದೆಂಬ ನಿರೀಕ್ಷೆ ಹೊಂದಲಾಗಿದೆ.

ರೈಲ್ವೆಯ ʻಉತ್ಪಾದಕತೆ ಆಧರಿತ ಬೋನಸ್ʼ ದೇಶವ್ಯಾಪಿ ಎಲ್ಲಾ ನಾನ್‌-ಗೆಜೆಟೆಡ್ ರೈಲ್ವೆ ಉದ್ಯೋಗಿಗಳಿಗೆ (ಆರ್‌ಪಿಎಫ್/ಆರ್‌ಪಿಎಸ್‌ಎಫ್ ಸಿಬ್ಬಂದಿಯನ್ನು ಹೊರತುಪಡಿಸಿ) ಅನ್ವಯಿಸುತ್ತದೆ.

ʻಪಿಎಲ್‌ಬಿʼ ಲೆಕ್ಕಾಚಾರ ಮಾಡುವ ವಿಧಾನ:

) 23.9.2000ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿದ ಸೂತ್ರದ ಪ್ರಕಾರ 1998-99ರಿಂದ 2013-14ರವರೆಗಿನ ವರ್ಷಗಳಿಗೆ ʻಪಿಎಲ್‌ಬಿʼಯನ್ನು ಪಾವತಿಸಲಾಯಿತು.  (ಬಂಡವಾಳ ಮೌಲ್ಯ ಮತ್ತು ಸಿಬ್ಬಂದಿ ಬಲಕ್ಕೆ ಸಂಬಂಧಿಸಿದಂತೆ ಸ್ವಲ್ಪ ಬದಲಾವಣೆಗಳನ್ನು ಮಾಡಿದ 2002-03 ರಿಂದ 2004-05ರವರೆಗಿನ ಅವಧಿ ಹೊರತುಪಡಿಸಿ). ಸೂತ್ರವು ʻಇನ್‌ಪುಟ್ : ಔಟ್‌ಪುಟ್ʼ ಆಧಾರಿತವಾಗಿದ್ದು, ಇಲ್ಲಿ ಔಟ್‌ಪುಟ್ ಅನ್ನು ಸಮೀಕರಿಸಿದ ನಿವ್ವಳ ಟನ್ ಕಿಲೋಮೀಟರ್‌ಗಳ ಆಧಾರದ ಮೇಲೆ ಲೆಕ್ಕಹಾಕಲಾಗುತ್ತಿತ್ತು. ʻಇನ್‌ಪುಟ್ʼ ಅನ್ನು ಬಂಡವಾಳ ಮೌಲ್ಯ ಮಾರ್ಪಡಿಸಿದ ಗೆಜೆಟೆಡೇತರ ಸಿಬ್ಬಂದಿ ಸಂಖ್ಯೆ (ಆರ್‌ಪಿಎಫ್/ಆರ್‌ಪಿಎಸ್‌ಎಫ್ ಸಿಬ್ಬಂದಿಯನ್ನು ಹೊರತುಪಡಿಸಿ) ಆಧರಿತವಾಗಿ ಪರಿಗಣಿಸಲಾಗುತ್ತಿತ್ತು.

ಬಿ) 2012-13ನೇ ಹಣಕಾಸು ವರ್ಷದಲ್ಲಿ 78 ದಿನಗಳ ಅವಧಿಯ ʻಪಿಎಲ್‌ಬಿʼಯನ್ನು ವಿಶೇಷ ಪ್ರಕರಣವಾಗಿ ಅನುಮೋದಿಸಲಾಯಿತು. ಆರನೇ ಕೇಂದ್ರ ವೇತನ ಆಯೋಗದ (ಸಿಪಿಸಿ) ಶಿಫಾರಸುಗಳು ಮತ್ತು ಹಣಕಾಸು ಸಚಿವಾಲಯದ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು ʻಪಿಎಲ್‌ಬಿʼ ಲೆಕ್ಕಾಚಾರ ಸೂತ್ರವನ್ನು ಮರುಪರಿಶೀಲಿಸುವ ಷರತ್ತಿನೊಂದಿಗೆ ಅನುಮೋದನೆ ನೀಡಲಾಗಿತ್ತು. ಬಳಿಕ ರೈಲ್ವೆ ಸಚಿವಾಲಯವು ಹೊಸ ಸೂತ್ರವನ್ನು ರೂಪಿಸಲು ಒಂದು ಸಮಿತಿಯನ್ನು ರಚಿಸಿತು.

ಸಿ)  ಸಮಿತಿಯು, 2000ನೇ ವರ್ಷದ ಸೂತ್ರ ಮತ್ತು ಕಾರ್ಯಾಚರಣೆ ಅನುಪಾತ (ಓಆರ್‌) ಆಧರಿತ ನೂತನ ಸೂತ್ರ ಎರಡನ್ನೂ 50:50 ಅನುಪಾತದಲ್ಲಿ ಅನುಸರಿಸಬಹುದು ಎಂದು ಶಿಫಾರಸು ಸಲ್ಲಿಸಿತು. ಸೂತ್ರವು ಭೌತಿಕ ನಿಯತಾಂಕಗಳು ಮತ್ತು ಹಣಕಾಸು ನಿಯತಾಂಕಗಳು ಎರಡೂ ವಿಷಯಗಳಲ್ಲಿ ಉತ್ಪಾದಕತೆಗೆ ಸಮಾನ ಪ್ರಾತಿನಿಧ್ಯವನ್ನು ಖಚಿತಪಡಿಸಿತು. ಸಮಿತಿಯು ಶಿಫಾರಸು ಮಾಡಿದ ಸೂತ್ರವನ್ನು 2014-15 ರಿಂದ 2019-20 ರವರೆಗೆ ʻಪಿಎಲ್‌ಬಿʼ ಲೆಕ್ಕಾಚಾರಕ್ಕಾಗಿ ಬಳಸಲಾಗಿದೆ.

ಹಿನ್ನೆಲೆ:

ರೈಲ್ವೆಯು ʻಪಿಎಲ್‌ಬಿʼ ಪರಿಕಲ್ಪನೆಯನ್ನು ಪರಿಚಯಿಸಿದ ಭಾರತ ಸರಕಾರದ ಮೊದಲ ಇಲಾಖೆಯಾಗಿದೆ. 1979-80ರಲ್ಲೇ ರೈಲ್ವೆಯು ಇದನ್ನು ಜಾರಿಗೊಳಿಸಿತು. ಇಡೀ ಆರ್ಥಿಕತೆಯ ಕಾರ್ಯಕ್ಷಮತೆಗಾಗಿ ಮೂಲಸೌಕರ್ಯ ಬೆಂಬಲ ಒದಗಿಸಲು ರೈಲ್ವೆ ವಹಿಸುವ ಪಾತ್ರವನ್ನು ಸಮಯದಲ್ಲಿ ಮುಖ್ಯ ಪರಿಗಣನೆಯಾಗಿ ತೆಗೆದುಕೊಳ್ಳಲಾಗಿತ್ತು. ರೈಲ್ವೆ ನಿರ್ವಹಿಸುತ್ತಿದ್ದ ಒಟ್ಟಾರೆ ಕಾರ್ಯದ ಹಿನ್ನೆಲೆಯಲ್ಲಿ, ಇಲಾಖೆಯಲ್ಲಿ 'ಬೋನಸ್ ಪಾವತಿ ಕಾಯ್ದೆ-1965' ಅನುಸಾರ ಬೋನಸ್ ಪರಿಕಲ್ಪನೆಗೆ ಬದಲಾಗಿ ʻಪಿಎಲ್‌ಬಿʼ ಪರಿಕಲ್ಪನೆಯನ್ನು ಪರಿಚಯಿಸುವುದು ಅಪೇಕ್ಷಣೀಯ ಎಂದು ಪರಿಗಣಿಸಲಾಯಿತು. ʻಬೋನಸ್ ಪಾವತಿ ಕಾಯ್ದೆʼ ರೈಲ್ವೆಗೆ ಅನ್ವಯವಾಗದಿದ್ದರೂ, "ವೇತನ/ಪಾವತಿ ಮಿತಿ"ಯನ್ನು ನಿರ್ಧರಿಸಲು ಮತ್ತು 'ಸಂಬಳ'/'ವೇತನ' ವ್ಯಾಖ್ಯಾನ ಇತ್ಯಾದಿಗಳನ್ನು ನಿರ್ಧರಿಸುವ ಉದ್ದೇಶಕ್ಕಾಗಿ ಕಾಯ್ದೆಯಲ್ಲಿರುವ ವಿಶಾಲ ತತ್ವಗಳನ್ನು ಹಾಗೇ ಉಳಿಸಿಕೊಳ್ಳಲಾಯಿತು. ರೈಲ್ವೆಯಲ್ಲಿ ʻಪಿಎಲ್‌ಬಿʼ ಯೋಜನೆ 1979-80ನೇ ವರ್ಷದಿಂದ ಜಾರಿಗೆ ಬಂದಿತು. ʻಆಲ್‌ ಇಂಡಿಯಾ ರೈಲ್ವೆಮೆನ್ ಫೆಡರೇಷನ್‌ʼ ಮತ್ತು ʻನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ರೈಲ್ವೆಮೆನ್ʼ ಎಂಬ ಎರಡು ಮಾನ್ಯತೆ ಪಡೆದ ಒಕ್ಕೂಟಗಳೊಂದಿಗೆ ಸಮಾಲೋಚಿಸಿ ಮತ್ತು ಸಂಪುಟದ ಅನುಮೋದನೆಯೊಂದಿಗೆ ʻಪಿಎಲ್‌ಬಿʼ ಕ್ರಮೇಣ ವಿಕಸನಗೊಂಡಿತು. ಯೋಜನೆಯನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಪರಿಶೀಲನೆ ಮಾಡಲಾಗುತ್ತದೆ.

***(Release ID: 1761493) Visitor Counter : 244