ನೀತಿ ಆಯೋಗ
azadi ka amrit mahotsav

ಭಾರತದಲ್ಲಿ ಡಿಜಿಟಲ್ ಹೊಸತನ ಶೋಧದ ವೇಗವರ್ಧನೆಗೆ ನೀತಿ ಆಯೋಗ, ಎ.ಡಬ್ಲ್ಯು.ಎಸ್ ಮತ್ತು ಇಂಟೆಲ್ ಸಹಯೋಗ


ನೀತಿ ಆಯೋಗದ ಕ್ಲೌಡ್ ಹೊಸತನದ ಶೋಧ ಕೇಂದ್ರದಲ್ಲಿನ ಹೊಸ ಎಕ್ಸ್ ಪೀರಿಯನ್ಸ್ ಸ್ಟುಡಿಯೋ ಸಹಯೋಗ ಮತ್ತು ಪ್ರಯೋಗದ ತಾಣವಾಗಲಿದ್ದು, ಆರಂಭದಲ್ಲಿ ಆರೋಗ್ಯ ರಕ್ಷಣೆ, ಕೃಷಿ ಮತ್ತು ಸ್ಮಾರ್ಟ್ ಮೂಲಸೌಕರ್ಯ ವಿಷಯಗಳ ಮೇಲೆ ಕೇಂದ್ರೀಕರಿಸಲಿದೆ

Posted On: 30 SEP 2021 4:35PM by PIB Bengaluru

ಭಾರತ ಪರಿವರ್ತನೆಯ ರಾಷ್ಟ್ರೀಯ ಸಂಸ್ಥೆ (ನೀತಿ ಆಯೋಗ), ಭಾರತ ಸರ್ಕಾರದ ರಾಷ್ಟ್ರೀಯ ನೀತಿಗಳ ಚಿಂತಕರ ಚಾವಡಿ, ಅಮೆಜಾನ್ ವೆಬ್ ಸರ್ವೀಸಸ್ (ಎಡಬ್ಲ್ಯುಎಸ್) ಮತ್ತು ಇಂಟೆಲ್ ಗಳು ಒಗ್ಗೂಡಿ ನೀತಿ ಆಯೋಗದ ಫ್ರಾಂಟಿಯರ್ ಟೆಕ್ನಾಲಜೀಸ್ ಕ್ಲೌಡ್ ಇನ್ನೋವೇಶನ್ ಸೆಂಟರ್ (ಸಿಐಸಿ)ನಲ್ಲಿ ಹೊಸ ಎಕ್ಸ್ ಪೀರಿಯನ್ಸ್  ಸ್ಟುಡಿಯೋವನ್ನು ಸ್ಥಾಪಿಸಿವೆ. ನವದೆಹಲಿಯ ನೀತಿ ಆಯೋಗದ ಆವರಣದಲ್ಲಿ ಸ್ಥಾಪಿಸಲಾಗಿರುವ ಈ ಸ್ಟುಡಿಯೋ, ಸರ್ಕಾರಿ ಬಾಧ್ಯಸ್ಥರು, ನವೋದ್ಯಮಗಳು, ಉದ್ಯಮಗಳು ಮತ್ತು ಉದ್ಯಮ ಕ್ಷೇತ್ರದ ತಜ್ಞರ ನಡುವೆ ಸಮಸ್ಯೆಗಳ ಪರಿಹಾರ ಮತ್ತು ಹೊಸತನದಶೋಧವನ್ನು ಸಕ್ರಿಯಗೊಳಿಸಲು ಸಹಯೋಗ ಮತ್ತು ಪ್ರಯೋಗಶೀಲತೆಯ ತಾಣವಾಗಲಿದೆ.

ಸಾರ್ವಜನಿಕ ವಲಯದ ಯೂಸ್ ಕೇಸಸ್ ಗಳಲ್ಲಿ ತಮ್ಮ ಆನ್ವಯಿಕಗಳನ್ನು ಹೆಚ್ಚಿಸಲು  ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಮೆಷಿನ್ ಲರ್ನಿಂಗ್ (ಎಂಎಲ್), ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ), ಅಗುಮೆಂಟೆಡ್ ರಿಯಾಲಿಟಿ ಮತ್ತು ವರ್ಚುವಲ್ ರಿಯಾಲಿಟಿ (ಎಆರ್ / ವಿಆರ್), ಬ್ಲಾಕ್ ಚೈನ್ ಮತ್ತು ರೋಬೋಟಿಕ್ಸ್ ನಂತಹ ತಂತ್ರಜ್ಞಾನಗಳ ಸಾಮರ್ಥ್ಯವನ್ನು ಪ್ರದರ್ಶಿಸಲು ಸ್ಟುಡಿಯೋ ಸಹಾಯ ಮಾಡುತ್ತದೆ. ಈ ಸ್ಟುಡಿಯೋ ಮುಕ್ತ ಹೊಸತನದಶೋಧವನ್ನು ಪ್ರೋತ್ಸಾಹಿಸುತ್ತದೆ ಮತ್ತು ಸರ್ಕಾರಕ್ಕೆ, ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಭಾರತದ ಲಾಭ ರಹಿತ ನವೋದ್ಯಮಗಳಿಗೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಇದು ನವೋದ್ಯಮಗಳಿಗೆ ತಮ್ಮ ಪರಿಹಾರಗಳನ್ನು ಹೆಚ್ಚಿಸಿಕೊಳ್ಳಲು ಮತ್ತು ಮಾಪನ ಮಾಡಲು ಅಗತ್ಯ ಬೆಂಬಲವನ್ನು ಪಡೆಯುವ ಆಯ್ಕೆಯನ್ನು ಒದಗಿಸುತ್ತದೆ.
ನೀತಿ ಆಯೋಗವು ಆರೋಗ್ಯ ರಕ್ಷಣೆ, ಕೃಷಿ ಮತ್ತು ಸ್ಮಾರ್ಟ್ ಮೂಲಸೌಕರ್ಯದಂತಹ ಕ್ಷೇತ್ರಗಳಲ್ಲಿ ಸ್ಥಳೀಯ ಭೌಗೋಳಿಕ ಪ್ರದೇಶದ (geospatial), ಎಆರ್/ವಿಆರ್, ಡ್ರೋನ್ ಮತ್ತು ಐಒಟಿ ಪರಿಹಾರಗಳ ಆನ್ವಯಿಕಗಳನ್ನು ಪ್ರದರ್ಶಿಸಲು ಸ್ಟುಡಿಯೋವನ್ನು ಬಳಸಿಕೊಳ್ಳುತ್ತದೆ. ತಂತ್ರಜ್ಞಾನ ಮತ್ತು ಸಂಶೋಧನೆಯ ಆಯಾ ಕ್ಷೇತ್ರಗಳಲ್ಲಿ ಪ್ರಮುಖ ದೇಶೀಯ ಉದ್ಯಮದ ನಾಯಕರು – ಸ್ಥಳೀಯ ಭೌಗೋಳಿಕ ಪ್ರದೇಶದ ಪರಿಹಾರಗಳಲ್ಲಿ ಮ್ಯಾಪ್ ಮೈಇಂಡಿಯಾ, ರಾಫೆ ಎಂಫಿಬ್ರ್ ಪ್ರೈವೇಟ್ ಲಿಮಿಟೆಡ್ ನ ಮಾನವ ರಹಿತ ವೈಮಾನಿಕ ವಾಹನಗಳಲ್ಲಿ (ಯುಎವಿಗಳು), ಮತ್ತು ಆರೋಗ್ಯ ರಕ್ಷಣೆಯಲ್ಲಿ ಎಐ ಅನ್ನು ಪೂರೈಸುವ ಇಮೇಜಿಂಗ್, ನರವಿಜ್ಞಾನ ಮತ್ತು ಜೀನೋಮಿಕ್ಸ್ (ಕಾಳಜಿ) ಗಳಲ್ಲಿ ಮುಂದುವರಿದ ಸಂಶೋಧನಾ ಕೇಂದ್ರ - ಮತ್ತು ಡಸಾಲ್ಟ್ ಸಿಸ್ಟಮ್ಸ್ ನಂತಹ ಜಾಗತಿಕ ನಾಯಕರು ಸ್ಟುಡಿಯೋದಲ್ಲಿ ತಮ್ಮ ಪರಿಹಾರಗಳನ್ನು ಪ್ರದರ್ಶಿಸಲಿದ್ದಾರೆ. ವಿಜಾರಾ ಟೆಕ್ನಾಲಜೀಸ್ ಮತ್ತು ಅಗತ್ಸ ಸಾಫ್ಟ್ ವೇರ್ ಪ್ರೈವೇಟ್ ಲಿಮಿಟೆಡ್ ನಂತಹ ನವೋದ್ಯಮಗಳು ತಮ್ಮ ನಾವೀನ್ಯಪೂರ್ಣ ಉತ್ಪನ್ನಗಳನ್ನು ಪ್ರದರ್ಶಿಸಲಿವೆ. ಅಟಲ್ ಇನ್ನೊವೇಶನ್  ಮಿಷನ್ (ಎಐಎಂ) ಮತ್ತು ಅಟಲ್ ಇನ್ ಕ್ಯುಬೇಷನ್ ಕೇಂದ್ರಗಳ(ಎಐಸಿ) ಸಹಯೋಗದೊಂದಿಗೆ ಹ್ಯಾಕಥಾನ್ ಗಳು, ಬೃಹತ್ ಸವಾಲುಗಳು ಮತ್ತು ಇತರ ಸಾಮರ್ಥ್ಯ ವರ್ಧನೆ ಉಪಕ್ರಮಗಳ ಮೂಲಕ ಸ್ಟುಡಿಯೊದಲ್ಲಿ ಸಕ್ರಿಯವಾಗಿ ಭಾಗವಹಿಸಲು ನವೋದ್ಯಮಗಳನ್ನು ಪ್ರೋತ್ಸಾಹಿಸಲಾಗುವುದು.
ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್ ಅವರ ಸಮ್ಮುಖದಲ್ಲಿ ಇಂದು ನೀತಿ ಆಯೋಗದ ಸಿಇಒ ಶ್ರೀ ಅಮಿತಾಬ್ ಕಾಂತ್ ಮತ್ತು  ಅಮೆಜಾನ್ ಇಂಟರ್ನೆಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (ಎಐಎಸ್.ಪಿಎಲ್)- ಎಡಬ್ಲ್ಯುಎಸ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾ ಸಾರ್ವಜನಿಕ ವಲಯದ ಅಧ್ಯಕ್ಷ ರಾಹುಲ್ ಶರ್ಮಾ ಅವರು ಈ ಸ್ಟುಡಿಯೋವನ್ನು ಉದ್ಘಾಟಿಸಿದರು. ಇಂಟೆಲ್ ಇಂಡಿಯಾದ, ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಖ - ಮಾರಾಟ, ಮಾರುಕಟ್ಟೆ ಮತ್ತು ಸಂವಹನ ಗುಂಪು - ಪ್ರಕಾಶ್ ಮಲ್ಯ, ಉದ್ಘಾಟನಾ ಸಮಾರಂಭದಲ್ಲಿ ವರ್ಚುವಲ್ ಮಾಧ್ಯಮದ ಮೂಲಕ ಭಾಗವಹಿಸಿದ್ದರು.
"ಕೋವಿಡ್-19 ಸಾಂಕ್ರಾಮಿಕ ರೋಗವು ದೇಶದಲ್ಲಿ ಸಮಸ್ಯೆಗಳನ್ನು ಪರಿಹರಿಸಲು ನಾವೀನ್ಯಪೂರ್ಣ ಪರಿಹಾರಗಳನ್ನು ಅಭಿವೃದ್ಧಿಪಡಿಸುವಾಗ ಪರಿಣಾಮಕಾರಿ ಸಹಯೋಗ ಮತ್ತು ಪ್ರಯೋಗಗಳು ಗಮನಾರ್ಹವಾಗಿ ಮುಖ್ಯ ಎಂಬುದನ್ನು ತೋರಿಸಿದೆ. ನೀತಿ ಆಯೋಗ ಫ್ರಾಂಟಿಯರ್ ಟೆಕ್ನಾಲಜೀಸ್ ಸಿಐಸಿ ಪರಿಹಾರಕ್ಕಾಗಿ ಸಾಮಾಜಿಕ ಸವಾಲುಗಳನ್ನು ಗುರುತಿಸುವ, ಮುಕ್ತ ನಾವಿನ್ಯತೆಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ಮತ್ತು ಸಮಸ್ಯೆಯ ಹೇಳಿಕೆಗಳಿಂದ ಕಾರ್ಯನಿರ್ವಹಿಸುವುದು ಮಹತ್ವದ್ದಾಗಿದೆ. ಎಡಬ್ಲ್ಯುಎಸ್ ಮತ್ತು ಇಂಟೆಲ್ ನೊಂದಿಗೆ ಹೊಸ ಎಕ್ಸ್ ಪೀರಿಯನ್ಸ್ ಸ್ಟುಡಿಯೋ ನಾಗರಿಕ ಸೇವೆಗಳನ್ನು ತಲುಪಿಸುವಲ್ಲಿ ನಿರಂತರ ಹೊಸತನದ ಶೋಧಕ್ಕೆ ಚಾಲನೆ ನೀಡಲು ಲೀಡಿಂಗ್ ಎಡ್ಜ್ ತಂತ್ರಜ್ಞಾನಗಳನ್ನು ಗುರುತಿಸುವ ಮತ್ತು ನಿಯೋಜಿಸುವ ನಮ್ಮ ಅಭಿಯಾನಕ್ಕೆ ಮತ್ತಷ್ಟು ಬೆಂಬಲ ನೀಡುತ್ತವೆ" ಎಂದು ನೀತಿ ಆಯೋಗದ ಸಿಇಒ ಶ್ರೀ ಅಮಿತಾಬ್ ಕಾಂತ್ ಹೇಳಿದರು.
"ಎಡಬ್ಲ್ಯುಎಸ್ ಕ್ಲೌಡ್ ಇನ್ನೋವೇಶನ್ ಸೆಂಟರ್ಸ್ ಕಾರ್ಯಕ್ರಮವನ್ನು ಆಧರಿಸಿದ ನೀತಿ ಆಯೋಗ ಫ್ರಾಂಟಿಯರ್ ಟೆಕ್ನಾಲಜೀಸ್ ಸಿಐಸಿಯ ಹೊಸ ಎಕ್ಸ್ ಪೀರಿಯನ್ಸ್  ಸ್ಟುಡಿಯೋ, ಸಹಯೋಗದ ಮೂಲಕ ಸಾರ್ವಜನಿಕ ವಲಯದ ಸವಾಲುಗಳನ್ನು ತ್ವರಿತವಾಗಿ ಪರಿಹರಿಸುವ ಮತ್ತು ಪ್ರಯೋಗ ಮತ್ತು ಮೂಲ ಮಾದರಿಗಳಿಂದ ಆವಿಷ್ಕಾರಗಳನ್ನು ನೈಜಗೊಳಿಸುವ ಗುರಿಯನ್ನು ಹೊಂದಿದೆ. ಈ ಸ್ಟುಡಿಯೊ ವಿವಿಧ ಕ್ಷೇತ್ರಗಳು, ಸರ್ಕಾರಿ ಭಾಧ್ಯಸ್ಥರು ಮತ್ತು ನವೋದ್ಯಮಗಳ ವಿಷಯ ತಜ್ಞರಿಗೆ ಸಮಸ್ಯೆಯ ಕ್ಷೇತ್ರಗಳಿಗೆ ಆಳವಾಗಿ ಹೋಗಲು ಮತ್ತು ಡಿಜಿಟಲ್ ಆರೋಗ್ಯ ಆರೈಕೆಗೆ ಅನುವು ಮಾಡಿಕೊಡಲು ಪರಿಹಾರಗಳನ್ನು ಅಭಿವೃದ್ಧಿಪಡಿಸಲು, ಡಿಜಿಟಲ್ ಕೃಷಿ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಮತ್ತು ಭಾರತದಲ್ಲಿ ಸ್ಮಾರ್ಟ್ ಸಿಟಿಗಳಿಗೆ ಡಿಜಿಟಲ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ವಿನ್ಯಾಸ ಚಿಂತನೆಯನ್ನು ಅನ್ವಯಿಸಲು ಸಹಾಯ ಮಾಡುತ್ತದೆ. ಇದು ಸೃಜನಶೀಲತೆ, ಪ್ರಯೋಗ ಮತ್ತು ಸಮುದಾಯದಿಂದ ಪಡೆದ ಸವಾಲುಗಳನ್ನು ಪರಿಹರಿಸಲು ಹೊಸ ಆಲೋಚನೆಗಳನ್ನು ಪರೀಕ್ಷಿಸುವ ಕೇಂದ್ರವಾಗಲಿದೆ" ಎಂದು ಎಐಎಸ್.ಪಿಎಲ್, ಎಡಬ್ಲ್ಯುಎಸ್ ಭಾರತ ಮತ್ತು ದಕ್ಷಿಣ ಏಷ್ಯಾದ ಸಾರ್ವಜನಿಕ ವಲಯದ ಅಧ್ಯಕ್ಷ ರಾಹುಲ್ ಶರ್ಮಾ ಹೇಳಿದರು.
"ಕ್ಲೌಡ್ ಹೊಸತನದ ಶೋಧವು ಭವಿಷ್ಯದ ತಂತ್ರಜ್ಞಾನಗಳ ಸಾಮರ್ಥ್ಯವನ್ನು ಬಳಸಿಕೊಳ್ಳಲು ಮೂಲಭೂತವಾಗಿದೆ ಮತ್ತು ವಲಯಗಳಾದ್ಯಂತ ಔನ್ನತ್ಯದ ಪರಿಣಾಮವನ್ನು ಸೃಷ್ಟಿಸುತ್ತದೆ. ಭಾರತ ಮತ್ತು ವಿಶ್ವದಾದ್ಯಂತ ಜನರ ಜೀವನವನ್ನು ಶ್ರೀಮಂತಗೊಳಿಸಬಲ್ಲ ಕ್ಲೌಡ್ ಸೇವೆಗಳನ್ನು ಅಭಿವೃದ್ಧಿಪಡಿಸಲು, ನಿರ್ಮಿಸಲು ಮತ್ತು ಬೆಂಬಲಿಸಲು ನೀತಿ ಆಯೋಗ ಮತ್ತು ಎಡಬ್ಲ್ಯುಎಸ್ ನೊಂದಿಗೆ ನಮ್ಮ ಸಹಯೋಗದ ಮೂಲಕ ತಂತ್ರಜ್ಞಾನ ಸಂಪನ್ಮೂಲಗಳು ಮತ್ತು ಜ್ಞಾನದ ಪ್ರವೇಶವನ್ನು ವಿಸ್ತರಿಸಲು ಇಂಟೆಲ್ ಬದ್ಧವಾಗಿದೆ. ಅರ್ಥಪೂರ್ಣ ಸಾಮಾಜಿಕ ಪರಿಣಾಮಕ್ಕಾಗಿ ತಂತ್ರಜ್ಞಾನ ಪರಿಹಾರಗಳನ್ನು ತ್ವರಿತಗೊಳಿಸಲು ಉದ್ಯಮ ಸಹಯೋಗಕ್ಕೆ ನೀತಿ ಆಯೋಗದ ಸಿಐಸಿಯ ಹೊಸ ಎಕ್ಸ್ ಪೀರಿಯನ್ಸ್ ಸ್ಟುಡಿಯೋ ಒಂದು ಪ್ರಬಲ ಉದಾಹರಣೆಯಾಗಿದೆ" ಎಂದು ಇಂಟೆಲ್ ಇಂಡಿಯಾದ ಮಾರಾಟ, ಮಾರುಕಟ್ಟೆ ಮತ್ತು ಸಂವಹನ ಸಮೂಹ- ವಿಪಿ ಮತ್ತು ಎಂಡಿ ಪ್ರಕಾಶ್ ಮಲ್ಯ ಹೇಳಿದರು.
ನೀತಿ ಆಯೋಗದ ಫ್ರಾಂಟಿಯರ್ ಟೆಕ್ನಾಲಜೀಸ್ ಸಿಐಸಿಯ  ಹೊಸ ಎಕ್ಸ್ ಪೀರಿಯನ್ಸ್ ಸ್ಟುಡಿಯೋ  ಭೌತಿಕ ಮತ್ತು ವರ್ಚುವಲ್ ಕಾರ್ಯ ಪ್ರದೇಶಗಳನ್ನು ತಡೆರಹಿತವಾಗಿ ಸಹಕರಿಸಲು ಅನುವು ಮಾಡಿಕೊಡುವ ಹೈಬ್ರಿಡ್ ಮಾದರಿಯನ್ನು ಅಳವಡಿಸಿಕೊಳ್ಳಲಿದೆ. ಸ್ಟುಡಿಯೊದಲ್ಲಿನ ಭೌತಿಕ ಕಾರ್ಯಸ್ಥಳದ ವಿನ್ಯಾಸವು ಪರಿಹಾರಗಳ ಪ್ರದರ್ಶನ, ಸಂವಾದಾತ್ಮಕ ಪ್ರಾತ್ಯಕ್ಷಿಕೆಗಳು ಮತ್ತು ಬಾಧ್ಯಸ್ಥರ ನಡುವೆ ತ್ವರಿತ ಮೂಲ ಮಾದರಿಯನ್ನು ಮುಂದಿನ ಕ್ರಮಕ್ಕಾಗಿ ಆಲೋಚನೆಗಳ ಮೇಲೆ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ. ಸ್ಟುಡಿಯೋದ ಡಿಜಿಟಲ್ ಕಾರ್ಯ ಸ್ಥಳವು ವಿವಿಧ ಕ್ಷೇತ್ರಗಳು, ಸರ್ಕಾರಿ ಇಲಾಖೆಗಳು, ಸಂಶೋಧನಾ ಸಂಸ್ಥೆಗಳು ಮತ್ತು ಲಾಭರಹಿತ ಸಂಸ್ಥೆಗಳ ತಜ್ಞರನ್ನು ಹ್ಯಾಂಡ್-ಆನ್ ಕಾರ್ಯಾಗಾರಗಳಿಗೆ ಆಹ್ವಾನಿಸಲು ಅತ್ಯಾಧುನಿಕ ಸಹಯೋಗದ ಪರಿಸರಗಳಿಗೆ ಅನುವು ಮಾಡಿಕೊಡುತ್ತದೆ.
ನೀತಿ ಆಯೋಗ ಫ್ರಾಂಟಿಯರ್ ಟೆಕ್ನಾಲಜೀಸ್ ಸಿಐಸಿಯನ್ನು ಅಕ್ಟೋಬರ್ 2020ರಲ್ಲಿ ಎಡಬ್ಲ್ಯುಎಸ್ ಕ್ಲೌಡ್ ಇನ್ನೋವೇಶನ್ ಸೆಂಟರ್ಸ್ ಗ್ಲೋಬಲ್ ಪ್ರೋಗ್ರಾಂನ ಭಾಗವಾಗಿ ಸ್ಥಾಪಿಸಲಾಯಿತು. ಭಾರತದ ಸವಾಲುಗಳನ್ನು ನಿಭಾಯಿಸುವತ್ತ ಗಮನ ಹರಿಸಿದ ಸಿಐಸಿ ಇತ್ತೀಚೆಗೆ ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಸಮಯದಲ್ಲಿ COvAID ಅನ್ನು ಅಭಿವೃದ್ಧಿಪಡಿಸಿತು. ಐದು ದಿನಗಳಲ್ಲಿ ಅಭಿವೃದ್ಧಿಪಡಿಸಲಾದ COvAID, ಕೋವಿಡ್-19 ಬಾಧಿತ ಜನರಿಗೆ ನೆರವು ನೀಡಲು ಪಡೆದ ನೆರವಿನ ಅಂತಿಮ ಹರಿವನ್ನು ಕ್ರೋಡೀಕರಿಸಲು, ಪಾರದರ್ಶಕ ರೀತಿಯಲ್ಲಿ ಸಹಾಯವನ್ನು ವಿತರಿಸಲು ಮತ್ತು ಸಹಾಯವು ಫಲಾನುಭವಿಗಳಿಗೆ ತಲುಪುವ ವೇಗವನ್ನು ಮತ್ತಷ್ಟು ಹೆಚ್ಚಿಸಲು ಒಂದು ವೇದಿಕೆಯನ್ನು ಒದಗಿಸಿತು. ಮತ್ತೊಂದು ಉದಾಹರಣೆ ಎಂದರೆ, ಡಿಜಿ ಯಾತ್ರಾ ಫೌಂಡೇಶನ್ ನೊಂದಿಗೆ ಕಾರ್ಯ ನಿರ್ವಹಿಸುವ ಸಿಐಸಿ ಡಿಜಿಟಲ್ ಯಾತ್ರಾ ಕೇಂದ್ರೀಕೃತ ಪರಿಸರ ವ್ಯವಸ್ಥೆ (ಡಿವೈಸಿಇ) ಸವಾಲನ್ನು ಸಹ ಆರಂಭಿಸಿತು., ವಿಮಾನ ಪ್ರಯಾಣದ ಸಮಯದಲ್ಲಿ ಪ್ರಯಾಣಿಕರಿಗೆ ತಿಕ್ಕಾಟ ಹರಿತ, ತೊಡಕು-ಮುಕ್ತ, ಮುಖಾಮುಖಿ-ರಹಿತ ಮತ್ತು ಸುರಕ್ಷಿತ ಅನುಭವವನ್ನು ಒದಗಿಸಲು ತತ್ ಕ್ಷಣದ ಮುಖದ ಬಯೋಮೆಟ್ರಿಕ್ ಪ್ರಮಾಣೀಕರಣ ಪರಿಹಾರವನ್ನು ಅಭಿವೃದ್ಧಿಪಡಿಸಲು ನವೋದ್ಯಮಗಳನ್ನು ಆಹ್ವಾನಿಸಿತು.
ಆಸ್ಟ್ರೇಲಿಯಾ, ಬಹ್ರೇನ್, ಕೆನಡಾ, ಫ್ರಾನ್ಸ್, ಜರ್ಮನಿ, ದಕ್ಷಿಣ ಕೊರಿಯಾ ಮತ್ತು ಅಮೆರಿಕಾದ್ಯಂತ ಎಡಬ್ಲ್ಯುಎಸ್ ಸಾರ್ವಜನಿಕ ವಲಯದ ಸಿಐಸಿಗಳು ಸಹ ಇವೆ. ಈ ವರ್ಷದ ಆರಂಭದಲ್ಲಿ, ದೇಶದಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್ ಅಪ್ಲಿಕೇಶನ್ಸ್ ಲ್ಯಾಬ್ ಅನ್ನು ಸ್ಥಾಪಿಸಲು ಎಡಬ್ಲ್ಯುಎಸ್ ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದೊಂದಿಗೆ (ಎಂಇಐಟಿವೈ) ಸಹಯೋಗ ನೀಡಿತು, ಕ್ವಾಂಟಮ್ ಕಂಪ್ಯೂಟಿಂಗ್ ನೇತೃತ್ವದ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ತ್ವರಿತಗೊಳಿಸಲು ಮತ್ತು ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಆದ್ಯತೆಗಳಿಗೆ ಹೊಂದಿಕೆಯಾದ ಹೊಸ ವೈಜ್ಞಾನಿಕ ಆವಿಷ್ಕಾರಗಳನ್ನು ಸಕ್ರಿಯಗೊಳಿಸಲು ಗಮನ ಹರಿಸಿತು.

***


(Release ID: 1759718) Visitor Counter : 322


Read this release in: English , Urdu , Hindi , Punjabi