ಜಲ ಶಕ್ತಿ ಸಚಿವಾಲಯ

ಪ್ರಧಾನಮಂತ್ರಿಯವರಿಗೆ  ಉಡುಗೊರೆಯಾಗಿ ನೀಡಲಾದ ಸ್ಮರಣಿಕೆಗಳ ಇ-ಹರಾಜನ್ನು ಪರಿಶೀಲಿಸಲು ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ʻನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ʼಗೆ ಭೇಟಿ ನೀಡಿದರು


ಇ-ಹರಾಜು ಪ್ರಕ್ರಿಯೆಯು ಪ್ರಧಾನಮಂತ್ರಿಯವರಿಗೆ ಉಡುಗೊರೆಯಾಗಿ ನೀಡಿದ ಅಮೂಲ್ಯ ಸ್ಮರಣಿಕೆಗಳನ್ನು ಹೊಂದುವ ಅವಕಾಶವನ್ನು ಸಾಮಾನ್ಯ ಜನರಿಗೆ ಒದಗಿಸುವುದು ಮಾತ್ರವಲ್ಲದೆ, ಪವಿತ್ರ ಗಂಗಾ ನದಿಯನ್ನು ಸಂರಕ್ಷಿಸುವ ಉದ್ದೇಶಕ್ಕಾಗಿ ಕೊಡುಗೆ ನೀಡಲು ಸಹ ಅವಕಾಶ ನೀಡುತ್ತದೆ: ಶ್ರೀ ಪಟೇಲ್

Posted On: 30 SEP 2021 5:26PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ನೀಡಲಾದ ಪ್ರತಿಷ್ಠಿತ ಮತ್ತು ಸ್ಮರಣೀಯ ಉಡುಗೊರೆಗಳ 3ನೇಸುತ್ತಿನ ಇ-ಹರಾಜಿನ  ಪರಾಮರ್ಶೆಗಾಗಿ ಜಲಶಕ್ತಿ ರಾಜ್ಯ ಸಚಿವ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಇಂದು ʻನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ʼಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಪಟೇಲ್ ಅವರು, ದೇಶದ ಜೀವನಾಡಿ ಗಂಗಾ ನದಿಯನ್ನು "ನಮಾಮಿ ಗಂಗೆ" ಮೂಲಕ ಸಂರಕ್ಷಿಸುವ ಉದಾತ್ತ ಉದ್ದೇಶಕ್ಕಾಗಿ ತಮಗೆ ದೊರೆಯುವ ಎಲ್ಲಾ ಉಡುಗೊರೆಗಳನ್ನು ಹರಾಜು ಹಾಕಲು ನಿರ್ಧರಿಸಿದ ದೇಶದ ಮೊದಲ ಪ್ರಧಾನಿ ಶ್ರೀ ನರೇಂದ್ರ ಮೋದಿ ಎಂದುಹೇಳಿದರು.

ಇ-ಹರಾಜು ಪ್ರಕ್ರಿಯೆಯು ಗೌರವಾನ್ವಿತ ಪ್ರಧಾನಮಂತ್ರಿಗಳಿಗೆ ಉಡುಗೊರೆಯಾಗಿ ನೀಡಿದ ಅಮೂಲ್ಯ ಸ್ಮರಣಿಕೆಗಳನ್ನು ಹೊಂದಲು ಸಾಮಾನ್ಯ ಜನರಿಗೆ ಅವಕಾಶ ಒದಗಿಸುವುದು ಮಾತ್ರವಲ್ಲದೆ ಪವಿತ್ರ ಗಂಗಾ ನದಿಯನ್ನು ಸಂರಕ್ಷಿಸುವ ಉದ್ದೇಶಕ್ಕಾಗಿ ಕೊಡುಗೆ ನೀಡಲು ಅವಕಾಶ ಕಲ್ಪಿಸುತ್ತದೆ ಎಂದು ಸಚಿವರು ಹೇಳಿದರು. ಈ ವಿನೂತನ ಮತ್ತು ಉದಾತ್ತ ಉಪಕ್ರಮಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಅವರು ಧನ್ಯವಾದ ಅರ್ಪಿಸಿದರು.

ಇ-ಹರಾಜು  ಪ್ರಕ್ರಿಯೆಯು ಸೆಪ್ಟೆಂಬರ್ 17ರಿಂದ ಅಕ್ಟೋಬರ್ 7, 2021ರ ವರೆಗೆ www.pmmementos.gov.in ಪೋರ್ಟಲ್ ಮೂಲಕನಡೆಯುತ್ತಿದೆ. ಈ ಸುತ್ತಿನ ಇ-ಹರಾಜಿನಲ್ಲಿ, ಸುಮಾರು 1348 ಸ್ಮರಣಿಕೆಗಳನ್ನು ಇ-ಹರಾಜು ಮಾಡಲಾಗುತ್ತದೆ.  ಟೋಕಿಯೊ 2020 ಪ್ಯಾರಾಲಿಂಪಿಕ್ ಕ್ರೀಡಾಕೂಟ ಮತ್ತು ಟೋಕಿಯೊ 2020 ಒಲಿಂಪಿಕ್ ಕ್ರೀಡಾಕೂಟದ ವಿಜೇತರು ಪ್ರಧಾನಿಗೆ ಉಡುಗೊರೆಯಾಗಿ ನೀಡಿದ ಉಪಕರಣಗಳು ಸ್ಮರಣಿಕೆಗಳು ಇಲ್ಲಿ ಹರಾಜಿಗಿಡಲಾದ ವಸ್ತುಗಳ ಪಟ್ಟಿಯಲ್ಲಿ ಸೇರಿವೆ.

ಇ-ಹರಾಜಿನಲ್ಲಿ ಅತಿ ಹೆಚ್ಚು ಮೌಲ್ಯಹೊಂದಿರುವ ವಸ್ತುಗಳೆಂದರೆ  ಟೋಕಿಯೊ 2020 ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತ ಶ್ರೀ ಸುಮಿತ್ ಆಂಟಿಲ್  ಅವರು ಬಳಸಿದ ಜಾವೆಲಿನ್ ಮತ್ತು ಟೋಕಿಯೊ 2020 ಒಲಿಂಪಿಕ್ ಕ್ರೀಡಾಕೂಟದಲ್ಲಿ ಶ್ರೀ ನೀರಜ್ ಚೋಪ್ರಾ ಬಳಸಿದ ಜಾವೆಲಿನ್. ಇವೆರಡೂ ತಲಾ ಒಂದು ಕೋಟಿ ಮೂಲ ಬೆಲೆಯನ್ನು ಹೊಂದಿವೆ. ಹರಾಜುಕಟ್ಟೆಯಲ್ಲಿರುವ ಅತ್ಯಂತ ಕಡಿಮೆ ಮೌಲ್ಯದ ವಸ್ತುವೆಂದರೆ ಅದು ವಸ್ತು ಸಣ್ಣ ಗಾತ್ರದ ಅಲಂಕಾರಿಕ ಆನೆ, ಇದರ ಬೆಲೆ 200 ರೂಪಾಯಿಗಳು.

 
*******



(Release ID: 1759717) Visitor Counter : 187