ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಕೇಂದ್ರಾಡಳಿತ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರಗಳಲ್ಲಿ ಸುಸಜ್ಜಿತ ಕ್ರೀಡಾಂಗಣ ಹಾಗೂ ಕ್ರೀಡಾ ಸೌಲಭ್ಯ ಒದಗಿಸಲು 200 ಕೋಟಿ ಅನುದಾನ

Posted On: 27 SEP 2021 9:24PM by PIB Bengaluru

ಮುಖ್ಯಾಂಶಗಳು

  • ಕೇಂದ್ರ ಕ್ರೀಡಾ ಸಚಿವರು ಬದಗಮ್, ಪುಲ್ವಾಮಾ ಮತ್ತು ಅನಂತ್‌ನಾಗ್‌ ಜಿಲ್ಲೆಗಳ  ಉನ್ನತ ದರ್ಜೆಯ ಒಳಾಂಗಣ ಕ್ರೀಡಾಂಗಣಗಳನ್ನು ಉದ್ಘಾಟನೆ ಮಾಡಿದರು

ವಾರ್ತಾ ಮತ್ತು ಪ್ರಸಾರ, ಹಾಗೂ ಯುವ ಮತ್ತು ಕ್ರೀಡಾ ಇಲಾಖೆಯ ಕೇಂದ್ರ ಸಚಿವರಾದ ಶ್ರೀ ಅನುರಾಗ್‌ ಸಿಂಗ್‌ ಠಾಕುರ್‌ ಸಂದರ್ಭದಲ್ಲಿ ಕೇಂದ್ರ ಆಡಳಿತ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರೀಡಾ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು 200 ಕೋಟಿ ರೂಪಾಯಿ ಅನುದಾನವನ್ನು ಮೀಸಲರಿಸಿದೆ ಎಂದು ಹೇಳಿದರುಆಧುನಿಕ ಹಾಗೂ ನೂತನ ಬಗೆಯ ಕ್ರೀಡಾ ಉಪಕರಣಗಳಿರುವ, ಎಲ್ಲ ಕ್ರೀಡಾ ಸೌಲಭ್ಯ ಇರುವ ಸುಸಜ್ಜಿತ ಕ್ರೀಡಾಂಗಣಗಳನ್ನು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಆರಂಭಿಸಲಾಗುವುದು ಎಂದು ಅವರು ತಿಳಿಸಿದರು. ಕ್ರೀಡಾಪಟುಗಳು, ಕ್ರೀಡಾಳುಗಳು, ಆಟಗಾರರು, ಪಿಆರ್‌ಐ ಸದಸ್ಯರು, ಡಿಡಿಸಿಗಳು, ಬಿಡಿಸಿಗಳು ಉಪಸ್ಥಿತರಿದ್ದ ಸಮಾರಂಭದಲ್ಲಿ ಸಚಿವರು ಮಾತನಾಡುತ್ತಿದ್ದರು. ಕೇಂದ್ರ ಸರ್ಕಾರದ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮದ ಮೂಲಕ ಸಂಪರ್ಕಕ್ಕೆ ಬಂದ ಜಮ್ಮು ಮತ್ತು ಕಾಶ್ಮೀರದ ಕ್ರೀಡಾಳುಗಳು ಕುರಿತು ಬೇಡಿಕೆ ಇತ್ತಿದ್ದರು ಎಂದು ಸಚಿವರು ವಿವರಿಸಿದರು

ಸಚಿವರು ಬದ್ಗಮ್‌, ಫುಲ್ವಾಮಾ ಹಾಗೂ ಅನಂತ್‌ನಾಗ್‌ ಮೂರು ಜಿಲ್ಲೆಗಳಲ್ಲಿ ಸುಸಜ್ಜಿತ ಸರ್ವ ಸೌಲಭ್ಯ ಇರುವ ಉನ್ನತ ದರ್ಜೆಯ ಒಳಾಂಗಣ ಕ್ರೀಡಾಂಗಣಗಳನ್ನು ಉದ್ಘಾಟಿಸಿದರು. ಈಗ ಕ್ರೀಡಾಂಗಣದಲ್ಲಿ ವರ್ಷದ ಎಲ್ಲ ದಿನಗಳಲ್ಲಿಯೂ ಕ್ರೀಡಾಚಟುವಟಿಕೆಗಳು ನಿರಂತರವಾಗಿರುತ್ತವೆ. ಹವಾಮಾನ ಕಾರಣದಿಂದಾಗಿ ಅಥವಾ ಇನ್ನಾವುದೇ ಕಾರಣದಿಂದಾಗಿ ಕ್ರೀಡಾ ಚಟುವಟಿಕೆಗಳಿಗೆ ತಡೆಬೀಳುವುದಿಲ್ಲ ಎಂದು ಆಶಿಸಿದರು.

 

ಭವಿಷ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಪ್ರತಿ ಜಿಲ್ಲೆಗಳಿಗೂ ಭೇಟಿ ನೀಡಬೇಕು. ಅಲ್ಲಿಯ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳಲು ಪ್ರತಿ ಕ್ರೀಡಾಂಗಣಕ್ಕೂ ಭೇಟಿ ನೀಡುವೆ ಎಂದು ಸ್ಪಷ್ಟಪಡಿಸಿದರು. ಸದ್ಯಕ್ಕೆ ಇರುವ ಎಲ್ಲ ಕ್ರೀಡಾಗ್ರಾಮ, ಕ್ರೀಡಾಂಗಣಗಳನ್ನೂ ಮೇಲ್ದರ್ಜೆಗೆ ಏರಿಸಲಾಗುವುದು. ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ನವೀಕರಣಗೊಳಿಸಲಾಗುವುದು. ಆಧುನೀಕರಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಅವರು ತಮ್ಮ ಭಾಷಣದಲ್ಲಿ ದೇಶದ ಜನತೆ ಒಮ್ಮೆಯಾದರೂ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಬೇಕು. ಇಲ್ಲಿಯ ಭೂರಮೆಯ ಸೌಂದರ್ಯ, ಸ್ವಚ್ಛ ಊರುಗಳು, ಕಾಶ್ಮೀರಿಗಳ ಆತಿಥ್ಯವನ್ನು ಸ್ವೀಕರಿಸಬೇಕು ಎಂದೂ ಕರೆನೀಡಿದರು.

ಯುವಜನಾಂಗವು ಮಾದಕ ವಸ್ತು ವ್ಯಸನಿಗಳಾಗಬಾರದು. ಮಾದಕ ದ್ರವ್ಯಗಳನ್ನು ನಿರಾಕರಿಸಬೇಕು ಎಂದು ಒತ್ತಿ ಹೇಳಿದರು. ವೈಯಕ್ತಿಕ ಬೆಳವಣಿಗಾಗಿ ಕ್ರೀಡಯನ್ನು ಸಾಧನವಾಗಿಸಿಕೊಳ್ಳಬೇಕು, ಕ್ರೀಡಾಂಗಣದಲ್ಲಿ ಸಾಧನೆ ತೋರಬೇಕು ಎಂದು ಪ್ರೇರಣೆಯ ಮಾತುಗಳನ್ನಾಡಿದರು. ಅವರ ಸಾಮರ್ಥ್ಯ ಮತ್ತು ಪ್ರತಿಭೆಯ ಜಗತ್ತಿನ ಪ್ರತಿ ಸ್ಪರ್ಧೆಗಳನ್ನು ಎದುರಿಸುವ ಸ್ಥೈರ್ಯ ನೀಡುತ್ತದೆ ಎಂದು ಕರೆನೀಡಿದರು

ಕೋವಿಡ್‌–19ರಂಥ ದುರಿತ ದಿನಗಳು ಮತ್ತಿತರ ಅಡೆತಡೆಗಳಿದ್ದರೂ ಜಮ್ಮು ಮತ್ತು ಕಾಶ್ಮೀರದ ಕ್ರೀಡಾ ಮಂಡಳಿ ಹಾಗೂ ಜಿಲ್ಲಾಡಳಿತಗಳು ನೀಡಿದ ಗಡುವಿನಲ್ಲಿ ಪ್ರತಿಷ್ಠಿತ ಯೋಜನೆಗಳನ್ನು ಪೂರ್ಣಗೊಳಿಸಿರುವುದು ಶ್ಲಾಘನೀಯವಾಗಿದೆ ಎಂದು ಕಾರ್ಯದಲ್ಲಿ ಪಾಲ್ಗೊಂಡವರನ್ನೆಲ್ಲ ಅವರು ಮೆಚ್ಚುಗೆ ವ್ಯಕ್ತಪಡಿಸಿದರು

ಜಮ್ಮು ಮತ್ತು ಕಾಶ್ಮೀರದ ಯುವಜನಾಂಗ ಕ್ರೀಡೆಯಲ್ಲಿ ಆಸಕ್ತಿ ತೋರುತ್ತಿರುವುದು ಗಮನಿಸಿ ರೋಮಾಂಚನವಾಗಿದೆ ಎಂದರು. ನಮ್ಮ ಆಟಗಾರರು ಸೌಲಭ್ಯಗಳಿಲ್ಲದ ಕಾರಣದಿಂದ ಹಿಂದುಳಿಯಬಾರದು ಎಂಬ ಅಂಶದತ್ತ ಹೆಚ್ಚು ಒತ್ತು ನೀಡಿ ಹೇಳಿದರು. ಎಲ್ಲ ಕ್ರೀಡಾಚಳುವಳಿಗಳಲ್ಲಿಯೂ ಉತ್ತಮ ಫಲಿತಾಂಶ ಪಡೆಯಲು ನಮ್ಮ ಯುವಜನಾಂಗಕ್ಕೆ ಅಗತ್ಯವಿರುವ ತರಬೇತಿಯನ್ನು ವೈಜ್ಞಾನಿಕ ವಿಧಾನದಲ್ಲಿ ನೀಡಲಾಗುವುದು. ಜಾಗತಿಕ ಸ್ಪರ್ಧೆಗಳಿಗೆ ಅವರನ್ನು ಅಣಿಗೊಳಿಸಲಾಗುವುದು ಎಂಬ ಆಶಯ ವ್ಯಕ್ತಪಡಿಸಿದರು.

ಮೊದಲು ಶ್ರೀ ಫಾರೂಖ್‌ ಅಹ್ಮದ್‌ ಖಾನ್‌ ಪ್ರಧಾನ ಕಾರ್ಯದರ್ಶಿ ಯುವಜನ ಹಾಗೂ ಕ್ರೀಡಾ ಇಲಾಖೆ, ನಿರ್ದೇಶಕರು ವೈಎಸ್‌ಎಸ್‌ ಕಾಶ್ಮೀರ, ಬದ್ಗಮ್‌ನ ಜಿಲ್ಲಾಧಿಕಾರಿ ಶಾಹಬಾಝ್‌ ಅಹ್ಮದ್ಮಿರ್ಜಾ, ಎಸ್‌ಎಸ್‌ಪಿ ಬದ್ಗಮ್‌ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ತಮ್ಮ ಸ್ವಾಗತ ಭಾಷಣದಲ್ಲಿ ರ್ರೀ ಫಾರೂಕ್‌ ಅಹ್ಮದ್‌ ಖಾನ್‌ ಅವರು ಮಾತನಾಡುತ್ತ ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರದ ಇತಿಹಾಸದಲ್ಲಿ ದಿನವನ್ನು ಅತಿ ಮಹತ್ವದ ದಿನವೆಂದು ಸ್ಮರಿಸಲಾಗುವುದು. ವಿಶೇಷವಾಗಿ ಬದ್ಗಮ್‌, ಅನಂತನಾಗ್‌ ಹಾಗೂ ಫುಲ್ವಾಮಾದ ಕ್ರೀಡಾಸಕ್ತರಿಗಾಗಿ ಇದು ಅತಿ ಸಂತೋಷದ ಸಂಗತಿಯಾಗಿದೆ. ಅತ್ಯಾಧುನಿಕ ಸೌಲಭ್ಯಗಳಿರುವ ಸುಸಜ್ಜಿತ ಒಳಾಂಗಣ ಕ್ರೀಡಾಂಗಣಗಳನ್ನು ಕ್ರೀಡೆಗಾಗಿ ಸಮರ್ಪಿಸಲಾಗಿದೆ. ಕ್ರೀಡಾ ಚಟುವಟಿಕೆಗಳಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಅಭಿವೃದ್ಧಿಪರ ರಾಷ್ಟ್ರಗಳಲ್ಲಿ ಲಭ್ಯ ಇರುವ ಕ್ರೀಡಾ ಸೌಲಭ್ಯಗಳೆಲ್ಲವೂ ರಾಷ್ಟ್ರದ ಯುವಜನಾಂಗಕ್ಕೆ ಲಭ್ಯ ಇರಬೇಕು ಎಂಬುದು ಪ್ರಧಾನ ಮಂತ್ರಿ ಮೋದಿ ಅವರ ಕನಸಾಗಿದೆ. ಅವರ ದೂರದರ್ಶಿತ್ವದ ಯೋಜನೆಗಳಲ್ಲಿ ಇವೆಲ್ಲವೂ ಸಾಕಾರಗೊಳ್ಳುತ್ತಿವೆ. ಹೀಗೆ ಎಲ್ಲವೂ ವ್ಯವಸ್ಥಿತವಾಗಿ ಜಾರಿಗೆ ಬರಲು, ಕಾರ್ಯಾನುಷ್ಠಾನಕ್ಕೆ ತರಲು ಹಲವಾರು ಯೋಜನೆಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಯುವಜನಾಂಗವು ತರಬೇತಿ ಪಡೆದು, ಕ್ರೀಡೆಗಳಲ್ಲಿ ಆಸಕ್ತಿ ವಹಿಸಿ, ಶ್ರಮವಹಿಸಿ, ಒಲಿಂಪಿಕ್ಸ್‌ನಂಥ ಕ್ರೀಡಾಕೂಟಗಳಲ್ಲಿ ಪದಕ ಗೆದ್ದು ಭಾರತದ ಹೆಮ್ಮೆಯನ್ನು ಜಗತ್ತಿಗೆ ತೋರುವಂತೆ ಮಾಡುವುದೇ  ಪ್ರಧಾನ ಮಂತ್ರಿಗಳ ಗುರಿಯಾಗಿದೆ ಎಂದರು.

ಒಳಾಂಗಣ ಕ್ರೀಡಾಂಗಣಗಳನ್ನು ಲೋಕಾರ್ಪಣೆಗೊಳಿಸಿದ ನಂತರ ವಾಲಿಬಾಲ್‌ ಆಟಗಾರರೊಂದಿಗೆ ಸಂವಾದದಲ್ಲಿ ಪಾಲ್ಗೊಂಡರು. ಎರಡು ಸ್ಥಳೀಯ ತಂಡಗಳು ಉದ್ಘಾಟನಾ ಸಮಾರಂಭದ ನಂತರ ವಾಲಿಬಾಲ್‌ ಆಟವಾಡಿದ್ದವು. ಕ್ರೀಡಾ ಸಚಿವರೂ ವಾಲಿಬಾಲ್‌ ಪ್ರಿಯರೂ ಕ್ರೀಡಾಪಟುವೂ ಆಗಿದ್ದರಿಂದ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಬಾಕ್ಸಿಂಗ್‌, ಜುಡೊ, ಫೆನ್ಸಿಂಗ್‌ಗೆ ಸಂಬಂಧಿಸಿದ ಕ್ರೀಡಾ ಚಟುವಟಿಕೆಗಳನ್ನೂ ಸಚಿವರು ವೀಕ್ಷಿಸಿದರು.

ಡಿಡಿಸಿ ಅಧ್ಯಕ್ಷರಾದ ನಾಜಿರ್‌ ಅಹ್ಮದ್‌ ಖಾನ್‌ ಅವರು ಒಂದಿಡೀ ದಿನದ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು. ತಮ್ಮ ಡಿಡಿಸಿ, ಬಿಡಿಸಿ ಹಾಗೂ ಪಿಆರ್‌ಐ ಸದಸ್ಯರೊಂದಿಗೆ ಹಾಗೂ ಇತರ ಜಿಲ್ಲೆಗಳ ಸಿಬ್ಬಂದಿ ಹಾಗೂ ವಿಭಾಗೀಯ ಅಧಿಕಾರಿಗಳೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

***



(Release ID: 1758868) Visitor Counter : 187