ಬುಡಕಟ್ಟು ವ್ಯವಹಾರಗಳ ಸಚಿವಾಲಯ
ಶಿಕ್ಷಣ ಸಚಿವಾಲಯ ಹಾಗೂ ಯುಜಿಸಿ ಸಹಭಾಗಿತ್ವದಲ್ಲಿ ವೆಬಿನಾರ್: ಖಚಿತವಾದ ಸಂಘಟಿತ ಆಡಳಿತ: ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣ ಮುಖ್ಯವಾಗಿಸುವುದು
ರಾಷ್ಟ್ರೀಯ ಶಿಕ್ಷಣ ನೀತಿ 2020 ಸಮಾನತೆ, ಸಮಗ್ರತೆ, ಉತ್ತಮ ಆಡಳಿತದ ಖಾತ್ರಿ – ಶ್ರೀ ಅರ್ಜುನ್ ಮುಂಡಾ
Posted On:
21 SEP 2021 7:27PM by PIB Bengaluru
ಶಿಕ್ಷಣ ಸಚಿವಾಲಯವು ಯುಜಿಸಿ ಜೊತೆಗೂಡಿ ಒಂದು ವೆಬಿನಾರ್ ಅನ್ನು ಆಯೋಜಿಸಿತ್ತು. ಸಮಗ್ರವಾದ ಉತ್ತಮ ಆಡಳಿತ: ಪ್ರತಿ ಪ್ರಜೆಯೂ ಮುಖ್ಯ ಎಂಬ ವಿಷಯದ ಬಗ್ಗೆ ಹಲವಾರು ಚರ್ಚೆಗಳು ಈ ವೆಬಿನಾರಿನಲ್ಲಿ ಕೈಗೊಳ್ಳಲಾಯಿತು. ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಎಂಬ ಉದ್ದೇಶದೊಂದಿಗೆ ಈ ವೆಬಿನಾರ್ ಹಮ್ಮಿಕೊಳ್ಳಲಾಗಿತ್ತು. ಬುಟಕಟ್ಟು ವ್ಯವಹಾರದ ಕೇಂದ್ರ ಸಚಿವರಾದ ಶ್ರೀ ಅರ್ಜುನ್ ಮುಂಡಾ ಅವರು ಮುಖ್ಯ ಅತಿಥಿಗಳಾಗಿ ವೆಬಿನಾರ್‌ನಲ್ಲಿ ಮಾತನಾಡಿದರು. ಉನ್ನತ ಶಿಕ್ಷಣದ ಕಾರ್ಯದರ್ಶಿ ಶ್ರೀ ಅಮಿತ್ ಖರೆ, ಯುಜಿಸಿ ಅಧ್ಯಕ್ಷರಾದ ಶರ್ರೀ ಡಿ.ಪಿ. ಸಿಂಗ್, ಉನ್ನತ ಶಿಕ್ಷಣದ ಜಂಟಿ ಕಾರ್ಯದರ್ಶಿ ಶ್ರೀಮತಿ ನೀತಾ ಪ್ರಸಾದ್ ಮತ್ತು ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಗಳು ವೆಬಿಬಾರ್‌ನಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಅರ್ಜುನ್ ಮುಂಡಾ ತಮ್ಮ ಭಾಷಣದಲ್ಲಿ ಏಕಲವ್ಯ ಮಾದರಿ ವಸತಿ ಶಾಲೆ ಯೋಜನೆಯು ಪ್ರಧಾನಂತ್ರಿಯವರ ಸಮಗ್ರ ಮತ್ತು ಸರ್ವರಿಗೆ ಶಿಕ್ಷಣ ಎಂಬ ದೂರದೃಷ್ಟಿಯ ಫಲವಾಗಿದೆ. ಏಕಲವ್ಯ ಮಾದರಿ ವಸತಿ ಶಾಲೆಯು ಬುಡಕಟ್ಟು ಜನಾಂಗ ವಾಸವಾಗಿರುವ ಪ್ರದೇಶಗಳಲ್ಲಿ, ಕಟ್ಟಕಡೆಯ ಮಕ್ಕಳೂ ಸಹ ಓದುವಂತೆ ಮಾಡುತ್ತದೆ ಎಂದು ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ 2020 ಬುಡಕಟ್ಟು ಜನಾಂಗದ ಸರ್ವಾಂಗೀಣ ಮತ್ತು ಸಮಗ್ರ ಶಿಕ್ಷಣಕ್ಕೆ ಒತ್ತು ನೀಡಿದೆ. ಮತ್ತು ಇದು ಉತ್ತಮ ಆಡಳಿತದ ನಿಜವಾದ ಉದಾಹರಣೆಯಾಗಿದೆ ಎಂದು ಶ್ರೀ ಮುಂಡಾ ಅವರು ಪ್ರತಿಪಾದಿಸಿದರು. ಡಿಜಿಟಲ್ ಇಂಡಿಯಾ, ಸಮಗ್ರಶಿಕ್ಷಣದಂಥ ಕಾರ್ಯಕ್ರಮಗಳು ಬುಡಕಟ್ಟು ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯವನ್ನು ನೀಡುತ್ತಿವೆ ಎಂದು ಹೇಳಿದರು.
ಶ್ರೀ ಅರ್ಜುನ್ ಮುಂಡಾ ಅವರು ಸ್ವಯಂ ಆಡಳಿತವು ಸಬ್‌ಕಾ ಸಾಥ್ ಸಬಕ್ ವಿಕಾಸ, ಸಬ್‌ಕಾ ವಿಶ್ವಾಸ, ಸಬ್‌ಕಾ ಪ್ರಯಾಸ್ ಎಂಬ ಘೋಷಣೆಗಳನ್ನು ಎತ್ತಿ ಹಿಡಿಯುತ್ತದೆ ಎಂದರು. ಸರ್ವರ ಸಾಂಗತ್ಯ, ಸರ್ವರ ವಿಕಾಸ, ಸರ್ವರ ವಿಶ್ವಾಸ, ಸರ್ವರ ಪ್ರಯಾಸ ಎಂಬುದು ಈ ಯೋಜನೆಯ ಚೇತನವಾಗಿದೆ ಎಂದು ಅಭಿಪ್ರಾಯ ಪಟ್ಟರು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿರುವ ಈ ಮಂತ್ರವು ಜನರ ಸಹಭಾಗಿತ್ವವನ್ನು ಬಯಸುತ್ತದೆ. ಎಲ್ಲರೂ ಒಡಗೂಡಿ, ಎಲ್ಲ ಅಭಿವೃದ್ಧಿಗಾಗಿ ಶ್ರಮಿಸುವ ಈ ಮಂತ್ರವು ನಿಜವಾದ ಪ್ರಜಾಪ್ರಭುತ್ವವಾಗಿದೆ ಎಂದು ಹೇಳಿದರು.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಪ್ರತಿಯೊಬ್ಬರನ್ನೂ ಸಬಲೀಕರಣಗೊಳಿಸುವ ಈ ಯೋಜನೆಗಳ ಫಲ ಪಡೆಯಬೇಕು. ಸಾಂವಿಧಾನಿಕವಾಗಿ ಎಲ್ಲರಿಗೂ ನೀಡಲಾಗುತ್ತಿರುವ ಸಮಾನ ಹಕ್ಕುಗಳನ್ನು, ಸಮಾನ ಅವಕಾಶಗಳನ್ನು ಪಡೆಯಲು ಮುಂದಾಗಬೇಕು ಎಂದು ಸಚಿವ ಶ್ರೀ ಮುಂಡಾ ಅವರು ಆಶಿಸಿದರು.
ಉತ್ತಮ ಆಡಳಿತಕ್ಕೆ ಹೆಚ್ಚಿನ ಒತ್ತು ನೀಡುತ್ತ ಸಚಿವ ಶ್ರೀ ಮುಂಡಾ ಅವರು ಸ್ವ ಆಡಳಿತ, ಸಮಗ್ರ ಆಡಳಿತವು ಸಮಗ್ರ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಹೇಳಿದರು. ಶ್ರೀ ಮುಂಡಾ ಅವರು ವಿಶ್ವವಿದ್ಯಾಲಯಗಳು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಮಹತ್ವಾಕಾಂಕ್ಷೆಯನ್ನು ನೀಡುವ, ಅದನ್ನು ಸಾಧಿಸುವ ಸಾಮರ್ಥ್ಯ ನೀಡುವ ಹೊಣೆಗಾರಿಕೆಯನ್ನು ಅರಿತುಕೊಂಡು ಶ್ರಮಿಸಬೇಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಶ್ರೀ ಅಮಿತ್ ಖರೆ ಅವರು ಸಮಾಜದ ಕೆಳಸ್ತರದ, ಹಿಂದುಳಿದ, ಗ್ರಾಮೀಣ ಹಾಗೂ ಬುಡಕಟ್ಟು ಪ್ರದೇಶದ ವಿದ್ಯಾರ್ಥಿಗಳ ಸಮಸ್ಯೆಗಳ ಬೆಳಕು ಚೆಲ್ಲಿದರು. ಹೀಗೆ ಗ್ರಾಮೀಣ ಪ್ರದೇಶದಿಂದ, ಹಿಂದುಳಿದ ವರ್ಗಗಳಿಂದ ಬಂದ ವಿದ್ಯಾರ್ಥಿಗಳು ಭಾಷಾ ಸಮಸ್ಯೆಯನ್ನು ಎದುರಿಸುತ್ತಾರೆ. ಈ ಕಾರಣಕ್ಕಾಗಿ ವಿದ್ಯಾರ್ಥಿಗಳು ಎಲ್ಲಿಯೂ ಹಿಂದೆ ಬೀಳದಂತೆ ನೋಡಿಕೊಳ್ಳಲು ಪ್ರಾದೇಶಿಕ ಭಾಷೆಯನ್ನು ಬಳಸಬೇಕು. ಜೊತೆಗೆ ಹಿಂದಿ ಭಾಷೆಯನ್ನೂ ಬಳಸಬೇಕು ಎಂದು ಅಭಿಪ್ರಾಯಪಟ್ಟರು.
ಪ್ರೊ. ಡಿ.ಪಿ ಸಿಂಗ್, ಯುಜಿಸಿಯ ಮುಖ್ಯಸ್ಥರು ತಮ್ಮ ಪ್ರಸ್ತಾವನೆಯ ಮಾತುಗಳಲ್ಲಿ ಸಾಂವಿಧಾನಿಕ ತತ್ವಗಳನ್ನು ಒತ್ತಿ ಹೇಳಿದರು. ಸಮಾನ ಅಂತಸ್ತು, ಸಮಾನ ಅವಕಾಶಗಳು ನಮ್ಮ ಪ್ರಜಾಪ್ರಭುತ್ವದ ಮೂಲ ಸ್ತಂಭಗಳಾಗಿವೆ. ಎಲ್ಲ ನಾಯಕರೂ ಉನ್ನತ ಶಿಕ್ಷಣವನ್ನು ಉತ್ತಮ ಆಡಳಿತಕ್ಕಾಗಿ ಎಂಬಂತೆ ಅಭಿವೃದ್ಧಿಪಡಿಸಬೇಕು. ಸಮಗ್ರ ಅಭಿವೃದ್ಧಿಗಾಗಿ ಸಂಘಟಿತ ಪ್ರಯತ್ನವನ್ನು ಮಾಡಬೇಕು. ಈ ಕಡೆ ನಿಗದಿತವಾಗಿ ಗಮನಹರಿಸುವಂತಾಗ ಬೇಕು ಎಂದು ಕರೆ ನೀಡಿದರು. ಸರ್ವರಿಗೂ ಸಮಾನ ಅವಕಾಶಗಳು ಎಂಬ ಸಾಂವಿಧಾನಿಕ ಆಶಯವು ಈಡೇರಬೇಕು ಎಂದು ಆಶಿಸಿದರು.
ಸರ್ವರನ್ನೂ ಒಳಗೊಳ್ಳುವ ಆಡಳಿತ, ಪ್ರತಿಯೊಬ್ಬ ವ್ಯಕ್ತಿಯನ್ನೂ ಪ್ರಮುಖವಾಗಿಸುವುದು ಎಂಬ ವಿಷಯದ ವೆಬಿನಾರ್, ಶೈಕ್ಷಣಿಕ ನಾಯಕರಿಗೆ ವಿಚಾರ ವಿನಿಮಯಕ್ಕೆ ಒಂದು ಅವಕಾಶ ಮಾಡಿಕೊಟ್ಟಿತು. ಶಿಕ್ಷಣ ತಜ್ಞರು ಹಾಗೂ ಆಡಳಿತಗಾರರು ಒಂದೇ ವೇದಿಕೆಯ ಮೇಲೆ ಬಂದು ಚರ್ಚಿಸಲು ಲಖನೌನ ಬಾಬಾ ಸಾಹೇಬ್ ಅಂಬೇಡ್ಕರ್ ವಿಶ್ವವಿದ್ಯಾಲಯವು ಅವಕಾಶ ಮಾಡಿಕೊಟ್ಟಿತು. ವಿಶ್ವವಿದ್ಯಾಲಯ ಉಪಕುಲಪತಿ ಪ್ರೊ. ಸಂಜಯ್ ಸಿಂಗ್ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ವಿದ್ಯಾರ್ಥಿಗಳು ನಮ್ಮ ಶಿಕ್ಷಣ ವ್ಯವಸ್ಥೆಯ ಮೂಲ ಕೊಂಡಿಗಳಾಗಿದ್ದಾರೆ. ಸಮಾಜದ ಎಲ್ಲ ಸ್ತರಗಳ ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆಗಳ ಬಗ್ಗೆ ಅವರು ಹೆಚ್ಚಿನ ಬೆಳಕು ಚೆಲ್ಲಿದರು. ವಿದ್ಯಾರ್ಥಿನಿಯರು ಎದುರಿಸುವ ಸಾಮಾಜಿಕ ಸಮಸ್ಯೆಗಳು, ದಿವ್ಯಾಂಗ ವಿದ್ಯಾರ್ಥಿಗಳ ಸವಾಲುಗಳು, ಗ್ರಾಮೀಣ ಹಾಗೂ ಬುಡಕಟ್ಟು ವಿದ್ಯಾರ್ಥಿಗಳ ವಿಷಯಗಳ ಬಗ್ಗೆ ಹೆಚ್ಚಿನ ಮಹತ್ವ ನೀಡಿ ಚರ್ಚಿಸಿದರು. ವಿವಿಧ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳಿಗೆ ವಿಶೇಷ ಅವಕಾಶಗಳನ್ನು ಸೃಷ್ಟಿಸಬೇಕು ಎಂದು ಪ್ರೊ.ರಾಯ್ ಅವರು ಅಭಿಪ್ರಾಯಪಟ್ಟರು.
ಮುಖ್ಯ ಗೋಷ್ಠಿಯ ಅಧ್ಯಕ್ಷತೆಯನ್ನು ಪ್ರೊ.ಸುಷ್ಮಾ ಯಾದವ್, ಸೋನಪೇಟೆಯ ಭಗತ್ ಫೂಲ್ ಸಿಂಗ್, ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಹಾಗೂ ಯುಜಿಸಿ ಸದಸ್ಯರು; ಪುಣೆಯ ಭಾರತೀಯ ವಿದ್ಯಾಪೀಠದ ಉಪಕುಲಪತಿ ಎಂಎಂ ಸಾಲುಂಖೆ, ಪ್ರೊ. ಎಚ್.ಸಿ.ಎಸ್ ರಾಠೋಡ್ ದಕ್ಷಿಣ ಬಿಹಾರದ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಪ್ರೊ.ಭೀಮರಾಯಮೇತ್ರಿ, ನಾಗಪುರದ ಐಐಎಂ ನಿರ್ದೇಶಕರು ಹಾಜರಿದ್ದರು.
***
(Release ID: 1756862)
Visitor Counter : 254