ಪ್ರಧಾನ ಮಂತ್ರಿಯವರ ಕಛೇರಿ

ಶಾಂಘೈ ಸಹಕಾರ ಸಂಘಟನೆ ಮಂಡಳಿಯ ರಾಜ್ಯ ಮುಖ್ಯಸ್ಥರ 21 ನೇ ಸಭೆಯಲ್ಲಿ ವರ್ಚುವಲ್ ಮೂಲಕ ಪಾಲ್ಗೊಂಡ ಪ್ರಧಾನಮಂತ್ರಿ

Posted On: 17 SEP 2021 6:20PM by PIB Bengaluru

ಶಾಂಘೈ ಸಹಕಾರ ಸಂಘಟನೆ [ಸಿ.ಎಸ್.ಒ] ಮಂಡಳಿಯ ರಾಜ್ಯ ಮುಖ್ಯಸ್ಥರ 21 ನೇ ಸಭೆ ಮತ್ತು ಆಪ್ಘಾನಿಸ್ತಾನ  ಕುರಿತ ಜಂಟಿ ಎಸ್.ಸಿ.ಒ-ಸಿ.ಎಸ್.ಟಿ.ಒ  ಔಟ್ ರೀಚ್ ಅಧಿವೇಶನದಲ್ಲಿ ಪ್ರಧಾನಮಂತ್ರಿ ಅವರು ವಿಡಿಯೋ ಸಂದೇಶದ ಮೂಲಕ ಪಾಲ್ಗೊಂಡಿದ್ದರು.  

ಹೈಬ್ರಿಡ್ ಮಾದರಿಯಲ್ಲಿ 2021 ರ ಸೆಪ್ಟೆಂಬರ್ 17 ರಂದು ಸಿ.ಎಸ್.ಒ ಮಂಡಳಿ ರಾಜ್ಯ ಮುಖ್ಯಸ್ಥರ 21 ನೇ ಸಭೆ ದುಶಾಂಬೆಯಲ್ಲಿ ನಡೆಯಿತು.

ತಜಕಿಸ್ಥಾನದ ಅಧ್ಯಕ್ಷರಾದ ಗೌರವಾನ್ವಿತ ಎಮೊಮಾಲಿ ರೆಹ್ಮಾನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ದುಶಾಂಬೆಯಲ್ಲಿ ನಡೆದ ಸಭೆಯಲ್ಲಿ ವಿಡಿಯೋ ಲಿಂಕ್ ಮೂಲಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಭಾರತವನ್ನು ಪ್ರತಿನಿಧಿಸಿದ್ದರು.

ತಮ್ಮ ಭಾಷಣದಲ್ಲಿ ಪ್ರಧಾನಮಂತ್ರಿ ಅವರು ಎಸ್.ಸಿ.ಒ ವಲಯದ ಗಡಿಗಳಲ್ಲಿ ಬೆಳೆಯುತ್ತಿರುವ ಮೂಲಭೂತವಾದ ಮತ್ತು ಆತಂಕವಾದ ಕುರಿತು ಪ್ರಮುಖವಾಗಿ ಪ್ರಸ್ತಾಪಿಸಿದರು. ಇದು ಮಧ್ಯಮ ಮತ್ತು ಪ್ರಗತಿಪರ ಸಂಸ್ಕೃತಿಗಳು ಹಾಗೂ ಮೌಲ್ಯಗಳ ಭದ್ರಕೋಟೆಯಾಗಿರುವ ಈ ಪ್ರದೇಶದ ಇತಿಹಾಸಕ್ಕೆ ವಿರುದ್ಧವಾಗಿದೆ ಎಂದರು.  

ಆಪ್ಘಾನಿಸ್ತಾನದಲ್ಲಿನ ಇತ್ತೀಚಿನ ಬೆಳವಣಿಗೆಗಳು ಉಗ್ರವಾದದ ಕಡೆಗೆ ತನ್ನ ಪ್ರವೃತ್ತಿಯನ್ನು ಮತ್ತಷ್ಟು ಉಲ್ಬಣಗೊಳಿಸಬಹುದು ಎಂದು ಉಲ್ಲೇಖಿಸಿದರು.

ಆಧುನೀಕರಣ, ವೈಜ್ಞಾನಿಕ, ತರ್ಕಬದ್ಧ ಚಿಂತನೆಯನ್ನು ಉತ್ತೇಜಿಸುವ ಕಾರ್ಯಸೂಚಿಯಲ್ಲಿ ಎಸ್.ಸಿ.ಒ ಕೆಲಸ ಮಾಡಬಹುದು ಎಂದು ಸಲಹೆ ನೀಡಿದರಲ್ಲದೇ ಇದು ಈ ಪ್ರದೇಶದ ಯುವ ಸಮೂಹಕ್ಕೆ ಅತ್ಯಂತ ವಿಶೇಷವಾಗಿದೆ ಎಂದು ಹೇಳಿದರು.

ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡಿರುವ ಭಾರತದ ಅನುಭವಗಳ ಕುರಿತು ಅವರು ಮಾತನಾಡಿದರು ಮತ್ತು ಈ ಮುಕ್ತ ಮೂಲ ಪರಿಹಾರಗಳನ್ನು ಇತರ ಎಸ್.ಸಿ.ಒ ಸದಸ್ಯರೊಂದಿಗೆ ಹಂಚಿಕೊಂಡರು.

ಈ  ಭಾಗದಲ್ಲಿ ಸಂಪರ್ಕ ವ್ಯವಸ್ಥೆ ನಿರ್ಮಿಸುವ ಮಹತ್ವದ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, ಪರಸ್ಪರ ನಂಬಿಕೆಯನ್ನು ಉತ್ತೇಜಿಸಲು ಸಂಪರ್ಕ ಯೋಜನೆಗಳು ಪಾರದರ್ಶಕವಾಗಿರಬೇಕು, ಸಮಾಲೋಚನೆ ಮತ್ತು ಪಾಲ್ಗೊಳ್ಳುವ ಅಂಶಗಳನ್ನು ಇದು ಹೊಂದಿರಬೇಕು ಎಂದರು.

ಎಸ್.ಸಿ.ಒ ಶೃಂಗಸಭೆಯ ನಂತರ ಎಸ್.ಸಿ.ಒ ಹಾಗೂ ಸಾಮೂಹಿಕ ಭದ್ರತಾ ಒಪ್ಪಂದ ಸಂಘಟನೆ [ಸಿ.ಎಸ್.ಟಿ.ಒ] ಯಿಂದ ಆಪ್ಘಾನಿಸ್ತಾನ ಕುರಿತು ಔಟ್ ರೀಚ್ ಅಧಿವೇಶನ ನಡೆಯಿತು.

ಈ ಸಭೆಯಲ್ಲಿ ವಿಡಿಯೋ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು, ಎಸ್.ಸಿ.ಒ ಪ್ರದೇಶದಲ್ಲಿ ಭಯೋತ್ಪಾದನೆ ವಿಚಾರದಲ್ಲಿ “ಶೂನ್ಯ ಸಹಿಷ್ಣುತೆ” ಕುರಿತ ನೀತಿ ಸಂಹಿತೆ ಅಭಿವೃದ್ಧಿಪಡಿಸಿಕೊಳ್ಳಬಹುದು ಎಂದು ಸೂಚಿಸಿದರು ಮತ್ತು ಆಪ್ಘಾನಿಸ್ತಾನದಿಂದ ಮಾದಕ ದ್ರವ್ಯ, ಶಸ್ತ್ತಾಸ್ತ್ರ ಮತ್ತು ಮಾನವ ಕಳ್ಳ ಸಾಗಾಣೆಯ ಅಪಾಯಗಳನ್ನು ಒತ್ತಿ ಹೇಳಿದರು.  ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಆಪ್ಘಾನ್ ಜನರೊಂದಿಗೆ ಭಾರತದ ಒಗ್ಗಟ್ಟನ್ನು ಪುನರುಚ್ಚರಿಸಿದರು.

***


 



(Release ID: 1756038) Visitor Counter : 277