ಭಾರೀ ಕೈಗಾರಿಕೆಗಳ ಸಚಿವಾಲಯ
azadi ka amrit mahotsav

ಭಾರತದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಆಟೋಮೊಬೈಲ್ ಮತ್ತು ಡ್ರೋನ್ ಉದ್ಯಮಕ್ಕೆ ಉತ್ಪಾದನೆ ಆಧಾರಿತ ಪ್ರೋತ್ಸಾಹಧನ (ಪಿ ಎಲ್ ಐ) ಯೋಜನೆಗೆ ಸರ್ಕಾರದ ಅನುಮೋದನೆ


ಆಟೋ ವಲಯದ ಪಿಎಲ್‌ಐ ಯೋಜನೆಯು ಭಾರತದಲ್ಲಿ ಅತ್ಯಾಧುನಿಕ ಆಟೋಮೋಟಿವ್ ತಂತ್ರಜ್ಞಾನ ಜಾಗತಿಕ ಪೂರೈಕೆ ಸರಪಳಿಯನ್ನು ಉತ್ತೇಜಿಸುತ್ತದೆ

7.6 ಲಕ್ಷಕ್ಕೂ ಅಧಿಕ ಹೆಚ್ಚುವರಿ ಉದ್ಯೋಗ ಸೃಷ್ಟಿ

ಐದು ವರ್ಷಗಳಲ್ಲಿ ಉದ್ಯಮಕ್ಕೆ 26,058 ಕೋಟಿ ರೂ. ಪ್ರೋತ್ಸಾಹಧನ

ಆಟೋ ವಲಯದ ಪಿಎಲ್‌ಐ ಯೋಜನೆಯು ಐದು ವರ್ಷಗಳಲ್ಲಿ 42,500 ಕೋಟಿ ರೂ.ಗಳಷ್ಟು ಹೊಸ ಹೂಡಿಕೆಗೆ ಮತ್ತು 2.3 ಲಕ್ಷ ಕೋಟಿ ರೂ.ಗಳಷ್ಟು ಹೆಚ್ಚಿನ ಉತ್ಪಾದನೆಗೆ ಕಾರಣವಾಗುತ್ತದೆ

ಡ್ರೋನ್ ಪಿಎಲ್‌ಐ ಯೋಜನೆಯು ಮೂರು ವರ್ಷಗಳಲ್ಲಿ 5,000 ಕೋಟಿ ರೂ.ಗಳಷ್ಟು ಹೊಸ ಹೂಡಿಕೆಗೆ ಮತ್ತು 1,500 ಕೋಟಿ ರೂ.ಗೂ ಅಧಿಕ ಉತ್ಪಾದನೆಗೆ ನೆರವಾಗುತ್ತದೆ

ಆಟೋ ವಲಯದ ಪಿಎಲ್‌ಐ ಯೋಜನೆಯ ಜೊತೆಗೆ ಈಗಾಗಲೇ ಆರಂಭಿಸಲಾಗಿರುವ ಸುಧಾರಿತ ಕೆಮಿಸ್ಟ್ರಿ ಸೆಲ್‌ (18,100 ಕೋಟಿ ರೂ.) ಮತ್ತು ಎಲೆಕ್ಟ್ರಿಕ್ ವಾಹನಗಳ ತಯಾರಿಕೆ (10,000 ಕೋಟಿ ರೂ.) ಪಿಎಲ್‌ಐ ಯೋಜನೆಯು ವಿದ್ಯುತ್ ವಾಹನಗಳ ತಯಾರಿಕೆಗೆ ದೊಡ್ಡ ಉತ್ತೇಜನ ನೀಡುತ್ತದೆ

ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳು ಮತ್ತು ಹೈಡ್ರೋಜನ್ ಇಂಧನ ಕೋಶ ವಾಹನಗಳತ್ತ ಭಾರತದ ಭಾರೀ ಜಿಗಿತಕ್ಕೆ ಕಾರಣವಾಗುತ್ತದೆ

Posted On: 15 SEP 2021 4:01PM by PIB Bengaluru

'ಆತ್ಮನಿರ್ಭರ ಭಾರತ' ಕಡೆಗೆ ಪ್ರಮುಖ ಹೆಜ್ಜೆಯಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರವು ಆಟೋಮೊಬೈಲ್ ಮತ್ತು ಡ್ರೋನ್ ಉದ್ಯಮಕ್ಕೆ 26,058 ಕೋಟಿ ರೂ.ಗಳ ಉತ್ಪಾದನೆ ಆಧಾರಿತ ಪ್ರೋತ್ಸಾಹಧನ (ಪಿಎಲ್) ಯೋಜನೆಯನ್ನು ಅನುಮೋದಿಸಿದೆ. ಆಟೋ ವಲಯದ ಪಿಎಲ್ ಯೋಜನೆಯು ಹೆಚ್ಚಿನ ಮೌಲ್ಯದ ಸುಧಾರಿತ ಆಟೋಮೋಟಿವ್ ತಂತ್ರಜ್ಞಾನ ವಾಹನಗಳು ಮತ್ತು ಉತ್ಪನ್ನಗಳನ್ನು ಪ್ರೋತ್ಸಾಹಿಸುತ್ತದೆ. ಇದು ಉನ್ನತ ತಂತ್ರಜ್ಞಾನ, ಹೆಚ್ಚು ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ವಾಹನಗಳ ತಯಾರಿಕೆಯಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಲಿದೆ.

ಆಟೋಮೊಬೈಲ್ ಮತ್ತು ಡ್ರೋನ್ ಉದ್ಯಮದ ಪಿಎಲ್ ಯೋಜನೆಯು 2021-22 ಕೇಂದ್ರ ಬಜೆಟ್ ನಲ್ಲಿ 13 ವಲಯಗಳಿಗೆ 1.97 ಲಕ್ಷ ಕೋಟಿ ರೂ. ವೆಚ್ಚದ ಪಿಎಲ್ ಯೋಜನೆಗಳ ಘೋಷಣೆಯ ಭಾಗವಾಗಿದೆ. 13 ವಲಯಗಳಿಗೆ ಪಿಎಲ್ ಯೋಜನೆಗಳ ಘೋಷಣೆಯೊಂದಿಗೆ, ಭಾರತದಲ್ಲಿ 5 ವರ್ಷಗಳಲ್ಲಿ ಸುಮಾರು 37.5 ಲಕ್ಷ ಕೋಟಿ ರೂ.ಗಳಷ್ಟು ಹೆಚ್ಚುವರಿ ಉತ್ಪಾದನೆಯಾಗಲಿದೆ ಮತ್ತು 5 ವರ್ಷಗಳಲ್ಲಿ ಸುಮಾರು 1 ಕೋಟಿ ಹೆಚ್ಚುವರಿ ಉದ್ಯೋಗ ಸೃಷ್ಟಿಯಾಗಲಿದೆ.

ಭಾರತದಲ್ಲಿ ಸುಧಾರಿತ ಆಟೋಮೋಟಿವ್ ತಂತ್ರಜ್ಞಾನ ಉತ್ಪನ್ನಗಳ ತಯಾರಿಕೆಗಾಗಿ ಉದ್ಯಮದ ವೆಚ್ಚಗಳನ್ನು ಸರಿದೂಗಿಸಲು ಆಟೋ ವಲಯದ ಪಿಎಲ್ ಯೋಜನೆ ಯೋಜಿಸಲಾಗಿದೆ. ಪ್ರೋತ್ಸಾಹಧನ ಯೋಜನೆಯು ಸುಧಾರಿತ ಆಟೋಮೋಟಿವ್ ತಂತ್ರಜ್ಞಾನ ಉತ್ಪನ್ನಗಳ ಸ್ಥಳೀಯ ಜಾಗತಿಕ ಪೂರೈಕೆ ಸರಪಳಿಯಲ್ಲಿ ಹೊಸ ಹೂಡಿಕೆಗೆ ಉದ್ಯಮವನ್ನು ಉತ್ತೇಜಿಸುತ್ತದೆ. ಆಟೋಮೊಬೈಲ್ ಮತ್ತು ಆಟೋ ಬಿಡಿಭಾಗಳ ಉದ್ಯಮದ ಪಿಎಲ್ ಯೋಜನೆಯು ಐದು ವರ್ಷಗಳ ಅವಧಿಯಲ್ಲಿ 42,500 ಕೋಟಿ ರೂ.ಗಳಷ್ಟು ಹೊಸ ಹೂಡಿಕೆಗೆ ಕಾರಣವಾಗುತ್ತದೆ, 2.3 ಲಕ್ಷ ಕೋಟಿಗೂ ಅಧಿಕ ಹೆಚ್ಚುವರಿ ಉತ್ಪಾದನೆ ಮತ್ತು 7.5 ಲಕ್ಷ ಹೆಚ್ಚುವರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅಂದಾಜಿಸಲಾಗಿದೆ. ಇದು ಜಾಗತಿಕ ವಾಹನ ವಹಿವಾಟಿನಲ್ಲಿ ಭಾರತದ ಪಾಲನ್ನು ಹೆಚ್ಚಿಸುತ್ತದೆ.

ಆಟೋ ವಲಯದ ಪಿಎಲ್ ಯೋಜನೆಯು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಆಟೋಮೋಟಿವ್ ಕಂಪನಿಗಳಿಗೆ ಮತ್ತು ಪ್ರಸ್ತುತ ಆಟೋಮೊಬೈಲ್ ಅಥವಾ ಆಟೋ ಬಿಡಿಭಾಗಗಳ ಉತ್ಪಾದನಾ ವ್ಯವಹಾರದಲ್ಲಿ ಇಲ್ಲದ ಹೊಸ ಹೂಡಿಕೆದಾರರಿಗೆ ಮುಕ್ತವಾಗಿದೆ. ಯೋಜನೆಯು ಚಾಂಪಿಯನ್ ಒಇಎಂ ಪ್ರೋತ್ಸಾಹಕ ಯೋಜನೆ ಮತ್ತು ಬಿಡಿಭಾಗಗಳ ಚಾಂಪಿಯನ್ ಪ್ರೋತ್ಸಾಹಕ ಯೋಜನೆ ಎಂಬ ಎರಡು ಘಟಕಗಳನ್ನು ಹೊಂದಿದೆ. ಚಾಂಪಿಯನ್ ಒಇಎಂ ಪ್ರೋತ್ಸಾಹಕ ಯೋಜನೆ ಒಂದುಮಾರಾಟ ಮೌಲ್ಯ ಆಧಾರಿತ ಯೋಜನೆಯಾಗಿದೆ.  ಇದು ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳು ಮತ್ತು ಎಲ್ಲಾ ವಿಭಾಗಗಳ ಹೈಡ್ರೋಜನ್ ಇಂಧನ ಕೋಶ ವಾಹನಗಳಿಗೆ ಅನ್ವಯಿಸುತ್ತದೆ. ಬಿಡಿಭಾಗಗಳಚಾಂಪಿಯನ್ ಪ್ರೋತ್ಸಾಹಕ ಯೋಜನೆ ಸಹಮಾರಾಟ ಮೌಲ್ಯ ಆಧಾರಿತ ಯೋಜನೆಯಾಗಿದೆ.  ಇದು ಸಂಪೂರ್ಣ ನಾಕ್ ಡೌನ್ (ಸಿಕೆಡಿ)/ ಸೆಮಿ ನಾಕ್ಡ್ ಡೌನ್ (ಎಸ್ಕೆಡಿ) ಕಿಟ್ಗಳು, ದ್ವಿಚಕ್ರ ವಾಹನಗಳ ಸಮಗ್ರ ಭಾಗಗಳು, ತ್ರಿಚಕ್ರ ವಾಹನಗಳ, ಪ್ರಯಾಣಿಕರು ವಾಹನಗಳು, ವಾಣಿಜ್ಯ ವಾಹನಗಳು ಮತ್ತು ಟ್ರಾಕ್ಟರುಗಳು ಇತ್ಯಾದಿ ವಾಹನಗಳ ಸುಧಾರಿತ ಆಟೋಮೋಟಿವ್ ತಂತ್ರಜ್ಞಾನ ಬಿಡಿಭಾಗಗಳಿಗೆ ಸಂಬಂಧಿಸಿದೆ.

ಆಟೋ ವಲಯದ ಪಿಎಲ್ ಯೋಜನೆಯ ಜೊತೆಗೆ ಈಗಾಗಲೇ ಸುಧಾರಿತ ಕೆಮಿಸ್ಟ್ರಿ ಸೆಲ್ (ಎಸಿಸಿ) (18,100 ಕೋಟಿ ರೂ.) ಮತ್ತು ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯ ತ್ವರಿತ ಅಳವಡಿಕೆಯ (10,000 ಕೋಟಿ) ಪಿಎಲ್ ಯೋಜನೆಯು ಭಾರತವು  ಸಾಂಪ್ರದಾಯಿಕ ಪಳೆಯುಳಿಕೆ ಇಂಧನದಿಂದ ಪರಿಸರ ಸ್ವಚ್ಛ, ಸುಸ್ಥಿರ, ಸುಧಾರಿತ ಮತ್ತು ಹೆಚ್ಚು ದಕ್ಷ ವಿದ್ಯುತ್ ವಾಹನ (ಇವಿ) ಆಧಾರಿತ ಆಟೋಮೊಬೈಲ್ ಸಾರಿಗೆ ವ್ಯವಸ್ಥೆಗೆ ಜಿಗಿಯಲು ಅನುವು ಮಾಡಿಕೊಡುತ್ತದೆ.

ಡ್ರೋನ್ ಮತ್ತು ಡ್ರೋನ್ ಬಿಡಿಭಾಗಗಳ ಉದ್ಯಮದ ಪಿಎಲ್ ಯೋಜನೆಯು ಕ್ರಾಂತಿಕಾರಿ ತಂತ್ರಜ್ಞಾನದ ಕಾರ್ಯತಂತ್ರದ ಮತ್ತು ಕಾರ್ಯಾಚರಣೆಯ ಉಪಯೋಗಗಳನ್ನು ಬಳಕೆ ಮಾಡಲು ನೆರವಾಗುತ್ತದೆ. ಸ್ಪಷ್ಟ ಆದಾಯದ ಗುರಿಗಳನ್ನು ಹೊಂದಿರುವ ಮತ್ತು ದೇಶೀಯ ಮೌಲ್ಯವರ್ಧನೆಯ ಮೇಲೆ ಗಮನ ಕೇಂದ್ರೀಕರಿಸುವುದರೊಂದಿಗೆ ಸಾಮರ್ಥ್ಯ ವೃದ್ಧಿಗೆ ಮತ್ತು ಭಾರತದ ಬೆಳವಣಿಗೆಯ ಕಾರ್ಯತಂತ್ರದ ಡ್ರೋನ್ಗಳಿಗಾಗಿ ಉತ್ಪನ್ನ ನಿರ್ದಿಷ್ಟ ಪಿಎಲ್ ಯೋಜನೆಯು ಪ್ರಮುಖ ಚಾಲಕ ಶಕ್ತಿಯಾಗಲಿದೆ. ಡ್ರೋನ್ ಮತ್ತು ಡ್ರೋನ್ ಬಿಡಿಭಾಗಗಳ ಉದ್ಯಮದ ಕ್ಕಾಗಿ ಪಿಎಲ್ ಯೋಜನೆಯು, ಮೂರು ವರ್ಷಗಳ ಅವಧಿಯಲ್ಲಿ, 5,000 ಕೋಟಿ ರೂ.ಮೌಲ್ಯದ ಹೂಡಿಕೆಗಳಿಗೆ ಕಾರಣವಾಗುತ್ತದೆ, ಮಾರಾಟದಲ್ಲಿ 1500 ಕೋಟಿ ರೂ.ಗಳ ಹೆಚ್ಚಳ ಮತ್ತು ಸುಮಾರು 10,000 ಹೆಚ್ಚುವರಿ ಉದ್ಯೋಗವನ್ನು ಸೃಷ್ಟಿಸುತ್ತದೆ.

***


(Release ID: 1755117) Visitor Counter : 263