ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಖಾದ್ಯ ತೈಲ ಬೆಲೆಗಳನ್ನು ಕಡಿಮೆ ಮಾಡುವ ಸಲುವಾಗಿ ಕಚ್ಚಾ ತಾಳೆ ಎಣ್ಣೆ, ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ  ಎಣ್ಣೆಯ ಮೇಲಿನ  ಸುಂಕವನ್ನು 2.5%ಗೆ ಇಳಿಸಿದ  ಕೇಂದ್ರ ಸರಕಾರ


ಸಂಸ್ಕರಿಸಿದ ತಾಳೆ ಎಣ್ಣೆ, ಸಂಸ್ಕರಿಸಿದ ಸೋಯಾಬೀನ್ ಎಣ್ಣೆ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ ಮೇಲಿನ  ಸುಂಕವನ್ನು 32.5%ಗೆ ಇಳಿಸಲಾಗಿದೆ 

ಸರಕಾರ ಸುಂಕಗಳ ಇಳಿಕೆಯ ನಷ್ಟವನ್ನು ಭರಿಸುವ ಮೂಲಕ 4600 ಕೋಟಿ ರೂ. ಮೌಲ್ಯದ ಪ್ರಯೋಜನಗಳನ್ನು ನೇರವಾಗಿ ಗ್ರಾಹಕರಿಗೆ ವರ್ಗಾಯಿಸಿದೆ

Posted On: 11 SEP 2021 6:26PM by PIB Bengaluru

ಗ್ರಾಹಕರಿಗೆ ನ್ಯಾಯಯುತ ಬೆಲೆಯಲ್ಲಿ ಖಾದ್ಯ ತೈಲ ಲಭ್ಯತೆಯನ್ನು ಖಾತರಿಪಡಿಸುವ ಸಲುವಾಗಿ, ಭಾರತ ಸರಕಾರವು ದಿನಾಂಕ 10 ಸೆಪ್ಟೆಂಬರ್ 2021ರ ಅಧಿಸೂಚನೆ ಸಂಖ್ಯೆ 42/2021(ಕಸ್ಟಮ್ಸ್) ಮೂಲಕ (i) ಕಚ್ಚಾ ತಾಳೆ ಎಣ್ಣೆ, ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿನ  ಸುಂಕವನ್ನು 11.09.2021ರಿಂದ ಜಾರಿಗೆ ಬರುವಂತೆ 2.5%ಗೆ ಹಾಗೂ (ii) ಸಂಸ್ಕರಿಸಿದ ತಾಳೆ ಎಣ್ಣೆ, ಸಂಸ್ಕರಿಸಿದ ಸೋಯಾಬೀನ್ ಎಣಣೆ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ ಮೇಲಿನ  ಸುಂಕವನ್ನು 11.09.2021ರಿಂದ ಜಾರಿಗೆ ಬರುವಂತೆ 32.5% ಗೆ ಇಳಿಸಿದೆ.

ಇದೇ ಅಧಿಸೂಚನೆಯಲ್ಲಿ ಕಚ್ಚಾ ತಾಳೆ ಎಣ್ಣೆಯ ಮೇಲಿನ ಕೃಷಿ ಸೆಸ್ ಅನ್ನು ಶೇ.17.5ರಿಂದ ಶೇ.20ಕ್ಕೆ ಹೆಚ್ಚಿಸಲಾಗಿದೆ.

ಸರಕಾರವು  ದಿನಾಂಕ 10 ಸೆಪ್ಟೆಂಬರ್ 2021ರ ಅಧಿಸೂಚನೆ ಸಂಖ್ಯೆ 43/2021(ಕಸ್ಟಮ್ಸ್)  ಮೂಲಕ ಹಣಕಾಸು ಸಚಿವಾಲಯದ  (ಕಂದಾಯ ಇಲಾಖೆ) ಜೂನ್ 29, 2021ರ ಅಧಿಸೂಚನೆ ಸಂಖ್ಯೆ 34/2021( ಕಸ್ಟಮ್ಸ್) ಅನ್ನು ರದ್ದುಗೊಳಿಸಿದೆ. ಆದರೆ, ಈ ರದ್ದತಿಗೆ ಮೊದಲು ಮಾಡಲಾದ ಅಥವಾ ಕೈಬಿಡಲಾದ ಅಂಶಗಳಿಗೆ ಇದು ಅನ್ವಯವಾಗುವುದಿಲ್ಲ. ಆ ಮೂಲಕ ಇತ್ತೀಚಿನ ಆಮದು ಸುಂಕ (11.09.2021ರಿಂದ ಅನ್ವಯವಾಗುವಂತೆ) ಮುಂದಿನ ಆದೇಶಗಳವರೆಗೆ ಇನ್ನೂ ಜಾರಿಯಲ್ಲಿರಲಿದೆ.

2021-22ರ ಅವಧಿಯಲ್ಲಿ ಅಂತರರಾಷ್ಟ್ರೀಯ ಖಾದ್ಯ ತೈಲಗಳ  ಬೆಲೆಗಳು ಗಗನಕ್ಕೇರಿದ್ದು, ಆ ಮೂಲಕ ಖಾದ್ಯ ತೈಲಗಳ ದೇಶೀಯ ಬೆಲೆಗಳ ಹೆಚ್ಚಳಕ್ಕೂ ಕಾರಣವಾಗಿದ್ದು ಗಮನಾರ್ಹ. ಇದು ಹಣದುಬ್ಬರ ಮತ್ತು ಗ್ರಾಹಕರ ದೃಷ್ಟಿಕೋನದಿಂದ ಗಂಭೀರ ಕಳವಳಕ್ಕೆ ಕಾರಣವಾಯಿತು. ಖಾದ್ಯ ತೈಲಗಳ ಮೇಲಿನ ಆಮದು ಸುಂಕವು ಖಾದ್ಯ ತೈಲಗಳ ವೆಚ್ಚದ ಮೇಲೆ ಮತ್ತು ಆ ಮೂಲಕ ಮೂಲಕ ದೇಶೀಯ ಬೆಲೆಯ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.

ಈ ಬೆಲೆಗಳ ಏರಿಕೆಯನ್ನು ನಿಯಂತ್ರಿಸುವ ಸಲುವಾಗಿ, ಭಾರತ ಸರಕಾರವು ಫೆಬ್ರವರಿ 2021 ಮತ್ತು ಆಗಸ್ಟ್ 2021ರ ನಡುವೆ ಸರಣಿ ಕ್ರಮಗಳನ್ನು ಕೈಗೊಂಡಿತ್ತು. ಅವುಗಳಲ್ಲಿ ಈ ಕೆಲವು ಸೇರಿವೆ:

1. ಆಮದು ಸುಂಕದ ಪುನರ್‌ವ್ಯವಸ್ಥೆ (ಸುಧಾರಣೆ)

• ಸರ್ಕಾರವು  ದಿನಾಂಕ 29 ಜೂನ್, 2021ರ ಅಧಿಸೂಚನೆ ಸಂಖ್ಯೆ 34/2021 (ಕಸ್ಟಮ್ಸ್) ಮೂಲಕ ಕಚ್ಚಾ ತಾಳೆ ಎಣ್ಣೆಯ ಮೇಲಿನ  ಸುಂಕವನ್ನು 30.06.2021ರಿಂದ 10%ಗೆ ಇಳಿಸಿದೆ . ಇದು 30 ಸೆಪ್ಟೆಂಬರ್, 2021ರವರೆಗೆ ಅನ್ವಯವಾಗಲಿದೆ.

2) ಸರಕಾರವು, 2021ರ ಜೂನ್ 30ರ  ʻಡಿಜಿಎಫ್‌ಟಿʼಯ ಅಧಿಸೂಚನೆ ಸಂಖ್ಯೆ 10/2015-2020 ಮೂಲಕ ಸಂಸ್ಕರಿತ ತಾಳೆ ಎಣ್ಣೆಯ ಆಮದು ನೀತಿಯನ್ನು ತಿದ್ದುಪಡಿ ಮಾಡಿತು. ತಕ್ಷಣದಿಂದ ಜಾರಿಗೆ  ಬರುವಂತೆ  ತಾಳೆ ಎಣ್ಣೆಯ ಆಮದನ್ನು "ನಿರ್ಬಂಧಿತ" ಸ್ಥಿತಿಯಿಂದ "ಮುಕ್ತ" ಸ್ಥಿತಿಗೆ ಬದಲಾಯಿಸಲಾಯಿತು. ಇದು 31.12.2021ರ ವರೆಗೆ ಜಾರಿಯಲ್ಲಿರಲಿದೆ.

ಇದಲ್ಲದೆ, ಸಂಸ್ಕರಿಸಿದ ತಾಳೆ ಎಣ್ಣೆಯನ್ನು ಕೇರಳದ ಯಾವುದೇ ಬಂದರಿನ ಆಮದು ಮಾಡಿಕೊಳ್ಳುವುದನ್ನು ನಿರ್ಬಂಧಿಸಲಾಗಿದೆ.

3) ಸರಕಾರವು ದಿನಾಂಕ 19 ಆಗಸ್ಟ್ 2021ರ ಅಧಿಸೂಚನೆ ಸಂಖ್ಯೆ 40/2021- (ಕಸ್ಟಮ್ಸ್) ಮೂಲಕ  ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿನ  ಸುಂಕವನ್ನು ಶೇ.7.5ಕ್ಕೆ ಮತ್ತು ಸಂಸ್ಕರಿಸಿದ ಸೋಯಾಬೀನ್ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲಿನ

ಸುಂಕವನ್ನು20.08.2021ರಿಂದ ಜಾರಿಗೆ ಬರುವಂತೆ ಶೇ.37.5ಕ್ಕೆ ಇಳಿಸಿದೆ. ದಿನಾಂಕ ಜೂನ್ 29, 2021ರ  ಹಣಕಾಸು ಸಚಿವಾಲಯದ (ಕಂದಾಯ ಇಲಾಖೆ) ಅಧಿಸೂಚನೆಗೆ(ಸಂಖ್ಯೆ: 34/2021-ಕಸ್ಟಮ್ಸ್‌) ತಿದ್ದುಪಡಿ ಮೂಲಕ ಈ ಇಳಿಕೆ ಮಾಡಲಾಗಿದೆ.

4) ಅಬಕಾರಿ, ʻಎಫ್.ಎಸ್.ಎಸ್ʼ, ʻಎ.ಐ, ಪಿಪಿ&ಕ್ಯೂʼ, ʻಡಿ.ಎಫ್.ಪಿ.ಡಿʼ ಮತ್ತು ʻಡಿ.ಒ.ಸಿ.ಎʼಗಳಿಂದ ವಿವಿಧ ಬಂದರಿನಲ್ಲಿ ಹಲವು ಸೌಲಭ್ಯಗಳ ಒದಗಣೆ

5) ಕೋವಿಡ್-19  ಕಾರಣದಿಂದಾಗಿ  ಆಮದು ಮಾಡಿಕೊಂಡ ಖಾದ್ಯ ತೈಲಗಳ  ಸಾಗಣೆಯಲ್ಲಿಆಗಿರುವ ವಿಳಂಬವನ್ನು ಸರಿಪಡಿಸಿ, ಸರಬರಾಜು ತ್ವರಿತಗೊಳಿಸಲು ಸಮಿತಿಯೊಂದನ್ನು ರಚಿಸಲಾಗಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ), ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯ ʻಪ್ಲಾಂಟ್‌ ಕ್ವಾರಂಟೈನ್‌ʼ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಗ್ರಾಹಕ ವ್ಯವಹಾರಗಳು ಮತ್ತು ಅಬಕಾರಿ ಇಲಾಖೆಗಳು ಈ ಸಮಿತಿಯ ಭಾಗವಾಗಿವೆ. ಈ ಸಮಿತಿಯು ವಾರಕ್ಕೊಮ್ಮೆ ಆಮದು ಮಾಡಿದ ಖಾದ್ಯ ತೈಲಗಳ ಸರಕುಗಳನ್ನು ಪರಿಶೀಲಿಸಿ, ಕಾರ್ಯದರ್ಶಿ (ಆಹಾರ) ಅಧ್ಯಕ್ಷತೆಯ ʻಕೃಷಿ ಸರಕುಗಳ ಅಂತರ ಸಚಿವಾಲಯ ಸಮಿತಿʼಗೆ ವರದಿ ನೀಡುತ್ತದೆ.

ಖಾದ್ಯ ತೈಲಗಳ ಆಮದನ್ನು ತ್ವರಿತವಾಗಿ ಅನುಮತಿಸಲು ಪ್ರಮಾಣಿತ ಕಾರ್ಯವಿಧಾನವನ್ನು  ತಯಾರಿಸಲಾಗಿದೆ. ಖಾದ್ಯ ತೈಲಗಳ ವಿಷಯದಲ್ಲಿಸರಕುಗಳ ಅನುಮತಿಗಾಗಿ ಸರಾಸರಿ ʻನಿಲುಗಡೆʼ

ಸಮಯವು 3.4 ದಿನಗಳಿಗೆ ಕಡಿಮೆಯಾಗಿದೆ.

ನೂತನ ಅಧಿಸೂಚನೆಯ ಪ್ರಕಾರ ಹಿಂದಿನ ಮತ್ತು ಪ್ರಸ್ತುತ ಆಮದು ಸುಂಕಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ:

ಪೂರ್ಣ ವರ್ಷದಲ್ಲಿ ಸುಂಕ ಕಡಿತವು ಈಗಾಗಲೇ ಅಂದಾಜು 3500 ಕೋಟಿ ರೂ.ಗಳಷ್ಟಿದೆ. ಪ್ರಸಕ್ತ/ಇತ್ತೀಚಿನ ಆಮದು ಸುಂಕವು ಇಳಿಕೆಯು ಪೂರ್ಣ ವರ್ಷದಲ್ಲಿ ರೂ.1100 ಕೋಟಿಗಳಾಗಿದ್ದು,  ಸರಕಾರವು ಗ್ರಾಹಕರ ನೇರ ಪ್ರಯೋಜನಕ್ಕಾಗಿ ಬಿಟ್ಟು ಕೊಟ್ಟ ಸುಂಕು ರೂಪದ ಆದಾಯದ ಒಟ್ಟು ಮೌಲ್ಯ 4600 ಕೋಟಿ ರೂ. ಗೆ ತಲುಪಿದೆ.

***


(Release ID: 1754205) Visitor Counter : 301