ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿ, ಸಿಬ್ಬಂದಿ ಮತ್ತು ವಿಜ್ಞಾನ ಸಚಿವಾಲಯಗಳಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚಿಸಿದರು
Posted On:
08 SEP 2021 7:14PM by PIB Bengaluru
ಪ್ರಸ್ತುತ ದೆಹಲಿಯ ಭೇಟಿಯಲ್ಲಿರುವ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ (ಸ್ವತಂತ್ರ ನಿರ್ವಹಣೆ) ಸಚಿವರು; ಭೂ ವಿಜ್ಞಾನ ಖಾತೆ (ಸ್ವತಂತ್ರ ನಿರ್ವಹಣೆ) ಸಚಿವರು; ಪ್ರಧಾನಮಂತ್ರಿಗಳ ಕಾರ್ಯಾಲಯದ ರಾಜ್ಯ ಸಚಿವರು; ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆ ರಾಜ್ಯ ಸಚಿವರು; ಅಣು ಇಂಧನ ಖಾತೆ ರಾಜ್ಯ ಸಚಿವರು; ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿ ಅರ್ಧಗಂಟೆಗಳ ಕಾಲ ಸಭೆ ನಡೆಸಿ, ಸಿಬ್ಬಂದಿ ಮತ್ತು ವಿಜ್ಞಾನ ಸಚಿವಾಲಯಗಳಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚಿಸಿದರು.
ಈ ಚರ್ಚೆಯ ವೇಳೆ, ಮುಖ್ಯಮಂತ್ರಿಯವರು ರಾಜ್ಯ ಸರ್ಕಾರ ಮಾಡಿದ ಎಲ್ಲ ಮನವಿಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಓಪಿಟಿ)ಯನ್ನು ಪ್ರಶಂಸಿಸಿದರು. ಅವರು ರಾಜ್ಯ ಕೇಡರ್ ಪರಿಶೀಲನೆ ನಡೆಸಲು ನೆರವು ಕೋರಿದರು. ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಗಳನ್ನು ಐ.ಎ.ಎಸ್.ಗೆ ಸೇರ್ಪಡೆಮಾಡಿಕೊಳ್ಳುವ ವಿಚಾರ ಕುರಿತಂತೆಯೂ ಬೊಮ್ಮಾಯಿ ಅವರು ಚರ್ಚಿಸಿದರು.