ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಬೆಂಗಳೂರಿನ ಎಸ್ಎಐ ಪ್ರಾದೇಶಿಕ ಕೇಂದ್ರದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಕೇಂದ್ರ ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಭಾಗಿ


“ಭಾರತದ ಕ್ರೀಡಾಪಟುಗಳ ಭವಿಷ್ಯ ತರಬೇತುದಾರರ ಕೈಯಲ್ಲಿದೆ’’: ಕೇಂದ್ರ ಕ್ರೀಡಾ ಸಚಿವರು

Posted On: 05 SEP 2021 4:46PM by PIB Bengaluru

ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಇಂದು ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ನೇತಾಜಿ ಸುಭಾಷ್ ಸದರನ್ ಕೇಂದ್ರಕ್ಕೆ ಭೇಟಿ ನೀಡಿದ್ದರು ಮತ್ತು ಅಲ್ಲಿ ಕ್ರೀಡಾ ತರಬೇತಿಯಲ್ಲಿ ಎನ್ ಐಎಸ್ ಡಿಪ್ಲೊಮಾದ 58ನೇ ಬ್ಯಾಚ್ನ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಸ್ಎಐನ ಮಹಾನಿರ್ದೇಶಕರಾದ ಶ್ರೀ ಸಂದೀಪ್ ಪ್ರಧಾನ್ ಮತ್ತು ಎಸ್ಎಐ ಬೆಂಗಳೂರು ಕೇಂದ್ರದ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ರಿತು ಪಾಠಿಕ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ತರಬೇತುದಾರರು ಮತ್ತು ಅಥ್ಲೀಟ್ ಗಳನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಕ್ರೀಡಾ ಸಚಿವರು, ಕೇಂದ್ರ ಸರ್ಕಾರ ಕ್ರೀಡೆಗೆ ಹೆಚ್ಚಿನ ಒತ್ತು ನೀಡಿರುವುದನ್ನು ಪುನರುಚ್ಛರಿಸಿ, ಇತ್ತೀಚೆಗೆ ಮುಕ್ತಾಯವಾದ ಟೋಕಿಯೊ ಬೇಸಿಗೆ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಉತ್ಸಾಹಪೂರ್ಣ ಸಾಧನೆ ಪ್ರದರ್ಶನ ನಮಗೆ ಮತ್ತಷ್ಟು ಪುಷ್ಟಿ ನೀಡಿದೆ ಎಂದು ಹೇಳಿದರು. “ಭಾರತದ ಕ್ರೀಡೆಯ ಭವಿಷ್ಯ ತರಬೇತುದಾರರ ಕೈಯಲ್ಲಿದೆ. ಶಿಕ್ಷಕರ ದಿನಾಚರಣೆಯ ಈ ಸಂದರ್ಭದಲ್ಲಿ ಅಥ್ಲೀಟ್ ಗಳಿಗೆ ಉತ್ತಮ ತರಬೇತಿ ನೀಡಿ ಪೋಷಿಸುವ ಸಂಕಲ್ಪ ಮಾಡೋಣ ಮತ್ತು ಒಲಿಂಪಿಯನ್ ಮಾನದಂಡದಂತೆ ತಾರಾ ಅಥ್ಲೀಟ್ ಗಳನ್ನು ರೂಪಿಸುವುದುನ್ನು ಖಾತ್ರಿಪಡಿಸೋಣ” ಎಂದು ಹೇಳಿದರು.

ಬೆಂಗಳೂರಿನ ಎಸ್ಎಐ ಕೇಂದ್ರದಲ್ಲಿ ಸದ್ಯ ಎನ್ ಸಿಒಇ ಯೋಜನೆ ಅಡಿ ಐದು ವಿಭಾಗಗಳಲ್ಲಿ 160 ಅಥ್ಲೀಟ್ ಗಳು ಉತ್ತಮ ಸಾಧನೆಗಾಗಿ ತರಬೇತಿ ಪಡೆಯುತ್ತಿದ್ದಾರೆ; ಅಲ್ಲದೆ 168 ತರಬೇತಿ ಪಡೆಯುತ್ತಿರುವ ಕೋಚ್ ಗಳು 9 ಕ್ರೀಡಾವಿಭಾಗಗಳಲ್ಲಿ ಕ್ರೀಡಾ ತರಬೇತಿಯ ಡಿಪ್ಲೊಮಾ ಕೋರ್ಸ್ ಗಳನ್ನು ಮಾಡುತ್ತಿದ್ದಾರೆ ಮತ್ತು ಸದ್ಯದಲ್ಲೇ ಅವರು ತರಬೇತಿಯನ್ನು ಪೂರ್ಣಗೊಳಿಸಿ, ಯುವ ಕೋಚ್ ಗಳಾಗಿ ಕೇಂದ್ರದಿಂದ ಹೊರಬರಲಿದ್ದಾರೆ. ಆಧುನಿಕ, ವೈಜ್ಞಾನಿಕ ವಿಧಾನ ಮತ್ತು ಇತ್ತೀಚಿನ ಸಂಶೋಧನೆಗಳೊಂದಿಗೆ ತರಬೇತಿ ಪ್ರಕ್ರಿಯೆಗಳನ್ನು ಬೆಂಬಲಿಸಲು ಯುವ ಕ್ರೀಡಾ ವಿಜ್ಞಾನಿಗಳ ತಂಡವನ್ನು ಇತ್ತೀಚೆಗೆ ಸೇರ್ಪಡೆ ಮಾಡಿಕೊಂಡಿರುವುದು ಉನ್ನತ ಕಾರ್ಯಕ್ಷಮತೆಯ ತರಬೇತಿಯಲ್ಲಿ ಎಸ್ ಎಐಗೆ ಕ್ರೀಡಾ ವಿಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದನ್ನೂ ತೋರ್ಪಡಿಸುತ್ತದೆ.

ಇದಕ್ಕೂ ಮುನ್ನ ಸಚಿವರ ಭೇಟಿ ಬೆಂಗಳೂರು ಎಸ್ಎಐನ ಆಡಳಿತ ಕಚೇರಿಯಲ್ಲಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಆರಂಭವಾಯಿತು. ಕಾರ್ಯಕ್ರಮ ಸಚಿವರು, ಅಥ್ಲೀಟ್ ಗಳೊಂದಿಗೆ ಸಂವಾದ ನಡೆಸುವ ಮೂಲಕ ಮತ್ತು ವಿಶ್ವಮಟ್ಟದಲ್ಲಿ ಅಗ್ರ ಸಾಧನೆ ಮಾಡಲು ಶ್ರಮಿಸುವಂತೆ ಅಥ್ಲೀಟ್ ಗಳನ್ನು ಪ್ರೇರೇಪಿಸುವುದರೊಂದಿಗೆ ಮುಕ್ತಾಯವಾಯಿತು.

***



(Release ID: 1752344) Visitor Counter : 284