ಇಂಧನ ಸಚಿವಾಲಯ

ಮೇಘಾಲಯದಲ್ಲಿ ಎಲೆಕ್ಟ್ರಿಕ್ ವಾಹನದ ಮೊದಲ ಚಾರ್ಜಿಂಗ್ ಕೇಂದ್ರಕ್ಕೆ ಶಿಲಾನ್ಯಾಸ: ಈಶಾನ್ಯದಲ್ಲಿ ಹಸಿರು ಇಂಧನ ಭವಿಷ್ಯ ಸಾಕಾರಗೊಳಿಸಲು ಪವರ್ ಗ್ರಿಡ್ ನಿಂದ ಪುಷ್ಟಿ


ಮೇಘಾಲಯದ ಶಿಲ್ಲಾಂಗ್ ನ ಲ್ಯಾಪಲಂಗ್ ಕಚೇರಿ ಆವರಣದಲ್ಲಿ ರಾಜ್ಯದ ಮೊದಲ ಎಲೆಕ್ಟ್ರಿಕ್ ವಾಹನದ ಚಾರ್ಜಿಂಗ್ ಕೇಂದ್ರ [ಇ.ವಿ.ಸಿ.ಎಸ್]ಕ್ಕೆ ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾದಿಂದ [ಪವರ್ ಗ್ರಿಡ್] ನಿನ್ನೆ ಶಿಲಾನ್ಯಾಸ ನೆರವೇರಿಸಲಾಗಿದೆ 

Posted On: 04 SEP 2021 3:43PM by PIB Bengaluru

ಭಾರತದ ಎರಡನೇ ಹಂತದ ಎಲೆಕ್ಟ್ರಿಕ್ ವಾಹನಗಳು ಮತ್ತು ಉತ್ಪಾದನೆ [ಹೈಬ್ರಿಡ್] ಯೋಜನೆಯಡಿ ತ್ವರಿತವಾಗಿ ಚಾರ್ಜ್ ಆಗುವ ಇ.ವಿ.ಸಿ.ಎಸ್ ಕೇಂದ್ರಗಳನ್ನು ಪವರ್ ಗ್ರಿಡ್ ಅಭಿವೃದ್ಧಿಪಡಿಸಿದೆ. ಶಿಲ್ಲಾಂಗ್  ನಲ್ಲಿ 11 ಇ.ವಿ.ಸಿ.ಎಸ್ ಅನ್ನು [5 ಸಾರ್ವಜನಿಕ ಮತ್ತು 6 ಸರ್ಕಾರಿ ಸಂಸ್ಥೆಗಳ ಆವರಣದಲ್ಲಿ] ಸ್ಥಾಪಿಸಲಾಗುತ್ತಿದೆ. ಪ್ರತಿಯೊಂದು ಚಾರ್ಜಿಂಗ್ ಕೇಂದ್ರದಲ್ಲಿ 15 ಕಿಲೋವ್ಯಾಟ್ ಸಿಸಿಎಸ್-2/ಚಾಡೆಮೊ ಚಾರ್ಜರ್ ಗಳನ್ನು [ಎರಡು ಗನ್ ಗಳನ್ನು ಹೊಂದಿರುವ] 66 ಚಾರ್ಜಿಂಗ್ ಪಾಯಿಂಟ್ ಗಳನ್ನು ಅಳವಡಿಸಲಾಗುತ್ತಿದೆ. 11 ಪ್ರದೇಶಗಳ ಪೈಕಿ 4 ಲ್ಯಾಪಲಂಗ್ ನ ಪವರ್ ಗ್ರಿಡ್ ಕಚೇರಿ ಆವರಣ,  ಡೆಮ್ಟ್ರಿಂಗ್  ಪೊಲೀಸ್ ಬಜಾರ್, ಎಂ.ಟಿ.ಸಿ. ವೇರ್ ಹೌಸ್ ನ ಬಜಾರ್ ನ ಪಾರ್ಕಿಂಗ್ ಪ್ರದೇಶ, ಪೊಲೋದ ಪೊಲೋ ಪಾರ್ಕಿಂಗ್ ಪ್ರದೇಶದಲ್ಲಿ ಇವುಗಳನ್ನು ಸ್ಥಾಪಿಸಲಾಗುತ್ತಿದೆ. ಈ ಸಂಬಂಧ ತಿಳಿವಳಿಕೆ [ಎಂ.ಒ.ಯು] ಒಪ್ಪಂದಕ್ಕೆ ಸಹಿ ಮಾಡಲಾಗಿದೆ. 

ಪವರ್ ಗ್ರಿಡ್ ತನ್ನ ಮಾರುಕಟ್ಟೆ ನಾಯಕರ ಜತೆಗೂಡಿ ಬೆಂಗಳೂರು, ಹೈದರಾಬಾದ್, ಅಹ್ಮದಾಬಾದ್, ದೆಹಲಿ, ಗುರುಗ್ರಾಮ ಮತ್ತು ಕೊಚಿಯಲ್ಲಿ ಇ.ವಿ.ಸಿ.ಎಸ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. 

ಪವರ್ ಗ್ರಿಡ್ ಪ್ರಸ್ತುತ 172,154 ಕಿಲೋಮೀಟರ್ ವಿದ್ಯುತ್ ಮಾರ್ಗ, 262 ಉಪ ಕೇಂದ್ರಗಳು ಮತ್ತು 446,940 ಕ್ಕೂ ಹೆಚ್ಚು ಎಂ.ವಿ.ಎ ಕೇಂದ್ರಗಳ ಸಾಮರ್ಥ್ಯವನ್ನು ಹೊಂದಿದೆ. ಇದು  ಆಧುನಿಕ ಸಾಧನ, ತಂತ್ರಜ್ಞಾನ ಮತ್ತು ನಿಪುಣತೆಯನ್ನು ಅಳವಡಿಸಿಕೊಂಡಿದ್ದು, ಆಟೋಮೇಷನ್, ಡಿಜಿಟಲ್ ಪರಿಹಾರಗಳ ವರ್ಧನೆಯಂತಹ ಕ್ರಮಗಳಿಂದ ಪವರ್ ಗ್ರಿಡ್ ತನ್ನ ಪ್ರಸರಣ ವ್ಯವಸ್ಥೆಯಲ್ಲಿ ಶೇ 99 ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ.

***(Release ID: 1752060) Visitor Counter : 235