ಗೃಹ ವ್ಯವಹಾರಗಳ ಸಚಿವಾಲಯ

ಕರ್ನಾಟಕದ ದಾವಣಗೆರೆಯಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ

ಸ್ವಾತಂತ್ರ್ಯ ಯೋಧರನ್ನು ಸನ್ಮಾನಿಸಿ, ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಗೆ ಅವರಿಗೆ ಕೃತಜ್ಞತೆ ಸಲ್ಲಿಸಿದ ಶ್ರೀ ಅಮಿತ್ ಶಾ

ಕಳೆದ ಎರಡು ವರ್ಷದಿಂದ ಭಾರತ ಮತ್ತು ವಿಶ್ವ ಸಾಂಕ್ರಾಮಿಕವನ್ನು ಎದುರಿಸುತ್ತಿದೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಕೋವಿಡ್ -19 ವಿರುದ್ಧ ಅತ್ಯುತ್ತಮವಾಗಿ ಮತ್ತು ಬಲದೊಂದಿಗೆ ಹೋರಾಡುತ್ತಿದೆ, ಅದರಿಂದಾಗಿಯೇ ಇಂದು ನಾವು ಬಹುತೇಕ ಅದರಿಂದ ಹೊರಬರುತ್ತಿದ್ದೇವೆ.

ಹಲವು ಕೋವಿಡ್- 19 ಯೋಧರು, ಭದ್ರತಾ ಸಿಬ್ಬಂದಿ, ನೈರ್ಮಲ್ಯ ಕಾರ್ಮಿಕರು ತಮ್ಮ ಜೀವವನ್ನೇ ಪಣಕ್ಕಿಟ್ಟು, ಸಮಾಜಕ್ಕೆ ಹೋರಾಡುವ ಶಕ್ತಿ ನೀಡಿದರು, ಹಲವು ಜನರು ತಮ್ಮ ಜೀವವನ್ನೇ ತ್ಯಾಗ ಮಾಡಿದರು, ಅವರೆಲ್ಲರಿಗೂ ನನ್ನ ನಮನಗಳು

ಭಾರತದಲ್ಲಿ ಸಂಪೂರ್ಣ ಸಮರ್ಥವಾಗಿ ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನ ನಡೆಯುತ್ತಿದೆ

ಕರ್ನಾಟಕ ಸರ್ಕಾರ ಕೋವಿಡ್ -19 ವಿರುದ್ಧ ಉತ್ತಮವಾಗಿ ಹೋರಾಡಿದೆ ಮತ್ತು ಈವರೆಗೆ, ಸುಮಾರು 5 ಕೋಟಿ 20 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ.

ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರ ನಾಯಕತ್ವದಲ್ಲಿ ಸೆಪ್ಟೆಂಬರ್ ಅಂತ್ಯದ ವೇಳೆಗೆ ಶೇ.90ರಷ್ಟು ಜನಸಂಖ್ಯೆಗೆ ಲಸಿಕೆ ನೀಡಿಕೆ ಪೂರ್ಣಗೊಳ್ಳಲಿದೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸದಾ ಬಡವರು, ಹಿಂದುಳಿದವರು ಮತ್ತು ಬುಡಕಟ್ಟು ಜನರ ಬಗ್ಗೆ ಚಿಂತಿಸುತ್ತಾರೆ

ಕೋವಿಡ್ -19 ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಸರ್ಕಾರ ಯಾವುದೇ ಅವಕಾಶವನ್ನೂ ಕೈಚೆಲ್ಲಿಲ್ಲ, ಜೊತೆಗೆ ಯಾವುದೇ ಮನೆಯಲ್ಲೂ ಮಹಿಳೆಯರು ಮತ್ತು ಮಕ್ಕಳು ಹಸಿದ ಹೊಟ್ಟೆಯಲ್ಲಿ ಮಲಗದಂತೆ ಖಾತ್ರಿಪಡಿಸಿದೆ.

ಶ್ರೀ ನರೇಂದ್ರ ಮೋದಿ ಅವರ ಸರ್ಕಾರ ಮೊದಲ ಮತ್ತು ಎರಡನೇ ಅಲೆಯ ವೇಳೆ ಪ್ರತಿಯೊಬ್ಬ ವ್ಯಕ್ತಿಗೂ ಮೇ ತಿಂಗಳಿಂದ ನವೆಂಬರ್ ವರೆಗೆ ತಲಾ 5 ಕೆ.ಜಿ. ಆಹಾರ ಧಾನ್ಯವನ್ನು ಉಚಿತವಾಗಿ ಪೂರೈಸಿದೆ

ಶ್ರೀ ನರೇಂದ್ರ ಮೋದಿ ಅವರ ಸರ್ಕಾರದಿಂದ ದೇಶದ 80 ಕೋಟಿ ಜನರು ತಲಾ 5 ಕೆ.ಜಿ. ಆಹಾರ ಧಾನ್ಯವನ್ನು ಉಚಿತವಾಗಿ 10 ತಿಂಗಳುಗಳ ಕಾಲ ಪಡೆದುಕೊಂಡಿದ್ದಾರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಶೀಘ್ರವೇ ಆತ್ಮನಿರ್ಭರವಾಗಲಿದೆ

ಕರ್ನಾಟಕದಲ್ಲಿ ಅಭಿವೃದ್ಧಿಯ ಶಕೆ ನಮ್ಮ ಪಕ್ಷ ಮತ್ತು ಶ್ರೀ ಯಡಿಯೂರಪ್ಪ ಅವರ ಆಡಳಿತದಿಂದ ಆರಂಭವಾಗಿದೆ

ಶ್ರೀ ಬೊಮ್ಮಾಯಿ ಅವರ ನೇತೃತ್ವದಲ್ಲಿ ತಮ್ಮ ಪಕ್ಷ ಪೂರ್ಣ ಬಹುಮತದೊಂದಿಗೆ ಮತ್ತೊಮ್ಮೆ ಸರ್ಕಾರ ರಚಿಸಲಿದೆ

Posted On: 02 SEP 2021 7:18PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಕರ್ನಾಟಕದ ದಾವಣಗೆರೆಯಲ್ಲಿಂದು ಒಟ್ಟು 50 ಕೋಟಿ ರೂ. ವೆಚ್ಚದ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಶ್ರೀ ಶಾ ಅವರು ದಾವಣಗೆರೆಯಲ್ಲಿ ಗಾಂಧಿ ಭವನ, ಪೊಲೀಸ್ ಪಬ್ಲಿಕ್ ಶಾಲೆ ಮತ್ತು ಜಿಎಂ ತಾಂತ್ರಿಕ ಸಂಸ್ಥೆಯ ಕೇಂದ್ರೀಯ ಗ್ರಂಥಾಲಯವನ್ನು ಉದ್ಘಾಟಿಸಿದರು. ಸ್ವಾತಂತ್ರ್ಯ ಯೋಧರನ್ನು ಸನ್ಮಾನಿಸಿದ ಅವರು, ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಗೆ ಕೃತಜ್ಞತೆ ಸಲ್ಲಿಸಿದರು.  ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಎಸ್ ಬೊಮ್ಮಾಯಿ ಮತ್ತು ಇತರ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 
ಕೇಂದ್ರ ಗೃಹ ಸಚಿವರು ತಮ್ಮ ಭಾಷಣದಲ್ಲಿ, ಭಾರತ ಮತ್ತು ವಿಶ್ವ ಕಳೆದ ಎರಡು ವರ್ಷಗಳಿಂದ ಸಾಂಕ್ರಾಮಿಕವನ್ನು ಎದುರಿಸುತ್ತಿವೆ ಎಂದರು. ಇಡೀ ಮಾನವ ಕುಲಕ್ಕೆ ಕೋವಿಡ್ -19 ದೊಡ್ಡ ಸವಾಲು ಒಡ್ಡಿದೆ, ಭಾರತವು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೋವಿಡ್ -19 ವಿರುದ್ಧದ ತನ್ನ ಹೋರಾಟವನ್ನು ಉತ್ತಮವಾಗಿ ಮತ್ತು ಬಲದೊಂದಿಗೆ ಮಾಡುತ್ತಿದೆ, ಅದರಿಂದಾಗಿಯೇ ಇಂದು ನಾವು ಅದರಿಂದ ಬಹುತೇಕ ಹೊರಬರುತ್ತಿದ್ದೇವೆ ಎಂದರು. 
ತಮ್ಮ ಜೀವವನ್ನು ಪಣಕ್ಕಿಟ್ಟು ಸಮಾಜಕ್ಕೆ ಹೋರಾಡಲು ಶಕ್ತಿ ನೀಡಿದ ಮತ್ತು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಹಲವಾರು ಕೋವಿಡ್ -19 ಯೋಧರು, ಭದ್ರತಾ ಸಿಬ್ಬಂದಿ, ನೈರ್ಮಲ್ಯ ಕಾರ್ಯಕರ್ತರನ್ನು ಕೇಂದ್ರ ಗೃಹ ಸಚಿವರು ಸ್ಮರಿಸಿದರು. ಭಾರತ ಮತ್ತು ಅದರ 130 ಕೋಟಿ ಜನರಿಗೆ ಕೋವಿಡ್ -19 ವಿರುದ್ಧ ಹೋರಾಡುವುದು ಎಷ್ಟು ದೊಡ್ಡ ಸವಾಲಾಗಿತ್ತು ಎಂಬುದನ್ನು ಇಡೀ ಜಗತ್ತು ಮತ್ತು ತಜ್ಞರು ನೋಡಿದ್ದಾರೆ ಎಂದು ಶ್ರೀ ಶಾ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನವನ್ನು ಭಾರತದಲ್ಲಿ ಸಾಕಷ್ಟು ಸಮರ್ಥವಾಗಿ ನಡೆಸುತ್ತಿದೆ ಮತ್ತು ಇಂದು ಭಾರತವು ಹೆಚ್ಚಿನ ಜನರಿಗೆ ಲಸಿಕೆ ಹಾಕಿದೆ ಎಂದು ನಾವು ಹೆಮ್ಮೆಯಿಂದ ಹೇಳಬಹುದು ಎಂದು ಅವರು ಹೇಳಿದರು.
ಕರ್ನಾಟಕ ಸರ್ಕಾರ ಕೋವಿಡ್ -19 ವಿರುದ್ಧ ತುಂಬಾ ಉತ್ತಮವಾಗಿ ಹೋರಾಡಿದೆ. ಈವರೆಗೆ ಸುಮಾರು 5 ಕೋಟಿ 20 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ. ಈ ಪೈಕಿ 4 ಕೋಟಿ ಜನರಿಗೆ ಪ್ರಥಮ ಡೋಸ್ ನೀಡಲಾಗಿದ್ದರೆ, 1 ಕೋಟಿ 16 ಲಕ್ಷ ಜನರಿಗೆ 2ನೇ ಡೋಸ್ ನೀಡಲಾಗಿದೆ ಎಂದರು. ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ, ಸೆಪ್ಟೆಂಬರ್ ಅಂತ್ಯದ ವೇಳೆಗೆ ಬಹುತೇಕ ಶೇ.90ರಷ್ಟು ಜನಸಂಖ್ಯೆಗೆ ಲಸಿಕೆ ಹಾಕುವ ಕಾರ್ಯ ಪೂರ್ಣಗೊಳಿಸಲಾಗುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇದು ಅತಿ ದೊಡ್ಡ ಸಾಧನೆಯಾಗಿದ್ದು, ಸರ್ಕಾರ ಜನರೊಂದಿಗೆ ಸಹಯೋಗದಿಂದ ಕೆಲಸ ಮಾಡಿದರೆ ಅದ್ಭುತ ಮಾಡಬಹುದು ಎಂಬುದಕ್ಕೆ ಉದಾಹರಣೆಯಾಗಿದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸದಾ ಬಡವರು, ಹಿಂದುಳಿದವರು ಮತ್ತು ಬುಡಕಟ್ಟು ಜನರ ಬಗ್ಗೆ ಚಿಂತಿಸುತ್ತಾರೆ ಎಂದು ಗೃಹ ಸಚಿವರು ತಿಳಿಸಿದರು. ಕೋವಿಡ್ -19 ಸಾಂಕ್ರಾಮಿಕ ದೇಶದ ಬಡಜನರನ್ನು ತೀವ್ರವಾಗಿ ಬಾಧಿಸಿದೆ. ದಿನಗೂಲಿ ಕಾರ್ಮಿಕರು ಒಂದು ಊಟವನ್ನು ಸಂಪಾದಿಸುವುದು ಕಷ್ಟಕರವಾಗಿತ್ತು. ಶ್ರೀ ನರೇಂದ್ರ ಮೋದಿಯವರ ಸರ್ಕಾರವು ಮೊದಲ ಅಲೆ ಮತ್ತು ಎರಡನೇ ಅಲೆಯ ವೇಳೆ ಮೇಯಿಂದ ನವೆಂಬರ್ ವರೆಗೆ- ದೀಪಾವಳಿಯವರೆಗೆ, ಪ್ರತಿ ವ್ಯಕ್ತಿಗೆ ತಲಾ 5 ಕೆಜಿ ಆಹಾರ ಧಾನ್ಯವನ್ನು ಉಚಿತವಾಗಿ ವಿತರಿಸಿತು. ಮೋದಿ ಸರ್ಕಾರ ದೇಶದ 80 ಕೋಟಿ ಜನರಿಗೆ 5 ಕಿಲೋ ಗ್ರಾಂಗಳಷ್ಟು ಆಹಾರ ಧಾನ್ಯವನ್ನು 10 ತಿಂಗಳವರೆಗೆ ಉಚಿತವಾಗಿ ನೀಡಿದೆ ಎಂದು ನೀವು ಊಹಿಸಬಲ್ಲಿರಾ ಎಂದು ಶ್ರೀ ಶಾ ಕೇಳಿದರು.
ಸಾಂಕ್ರಾಮಿಕದ ಹೋರಾಟದಲ್ಲಿ ಸರ್ಕಾರ ಯಾವುದೇ ಅವಕಾಶವನ್ನೂ ಕೈಚೆಲ್ಲಿಲ್ಲ ಎಂದು ಅವರು, ಪ್ರಧಾನಮಂತ್ರಿಯವರು, ಯಾವುದೇ ಮನೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಹಸಿದ ಹೊಟ್ಟೆಯಲ್ಲಿ ಮಲಗದಂತೆ ಖಾತ್ರಿಪಡಿಸಿದ್ದಾರೆ. ಮೂರನೇ ಅಲೆಯ ಸಂಭಾವ್ಯತೆಯ ಸನ್ನಿವೇಶದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕೋವಿಡ್ -19 ವಿರುದ್ಧ ಹೋರಾಡಲು ಪ್ರತಿಯೊಂದು ರಾಜ್ಯ, ನಗರ, ಪಟ್ಟಣಕ್ಕೆ ಕೋಟ್ಯಂತರ ರೂಪಾಯಿಗಳ ಪ್ಯಾಕೇಜ್ ಪ್ರಕಟಿಸಿದ್ದಾರೆ ಎಂದು ತಿಳಿಸಿದರು. 
ಕೋವಿಡ್ -19 ಸಾಂಕ್ರಾಮಿಕದ ಎರಡನೇ ಅಲೆಯ ಬಗ್ಗೆ ಮಾತನಾಡಿದ ಶ್ರೀ ಶಾ, ಆಗ ದೇಶ ಆಮ್ಲಜನಕದ ತೀವ್ರ ಕೊರತೆಯನ್ನು ಎದುರಿಸಿತು, ಸಾವಿರಾರು ಆಮ್ಲಜನಕ ಘಟಕಗಳು ತಲೆಎತ್ತಲಾರಂಭಿಸಿದವು ಎಂದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಆಮ್ಲಜನಕದಲ್ಲಿ ದೇಶ ಅತಿ ಶೀಘ್ರವೇ ಸ್ವಾವಲಂಬಿಯಾಗಲಿದೆ ಎಂದರು. 
ತಮ್ಮ ಪಕ್ಷ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಕರ್ನಾಟಕದ ನೂತನ ಮುಖ್ಯಮಂತ್ರಿಯ ಜವಾಬ್ದಾರಿಯನ್ನು ನೀಡಲು ನಿರ್ಧರಿಸಿತು. ಆದರೆ, ಶ್ರೀ ಯಡಿಯೂರಪ್ಪ ಅವರು ತಮ್ಮ ಎರಡೂ ಅವಧಿಯಲ್ಲಿ ಕರ್ನಾಟಕದ ಅಭಿವೃದ್ಧಿಗೆ, ಅದರಲ್ಲೂ ಗ್ರಾಮಗಳ ಮತ್ತು ರೈತರ ಅಭಿವೃದ್ಧಿಗೆ ಯಾವುದೇ ಅವಕಾಶ ಕೈಬಿಡಲಿಲ್ಲ ಎಂದರು. ಕರ್ನಾಟಕದಲ್ಲಿ ಅಭಿವೃದ್ಧಿಯ ಶಕೆ ತಮ್ಮ ಪಕ್ಷ ಮತ್ತು ಶ್ರೀ ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ಆರಂಭವಾಯಿತು ಎಂದರು. ಶ್ರೀ ಬೊಮ್ಮಾಯಿ ಅವರ ನೇತೃತ್ವದಲ್ಲಿ, ನಮ್ಮ ಪಕ್ಷ ಮತ್ತೊಮ್ಮೆ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದರು. ಶ್ರೀ ಬೊಮ್ಮಾಯಿ ಅವರು ಕೆಲವು ಸಣ್ಣ ಆದರೆ ಮಹತ್ವದ ಉಪಕ್ರಮಗಳನ್ನು ಅಂದರೆ, ಪೊಲೀಸರಿಂದ ಗೌರವರಕ್ಷೆ ಸೇರಿದಂತೆ ವಿವಿಐಪಿ ಸಂಸ್ಕೃತಿಗೆ ಸಂಬಂಧಿಸಿದ ಹಲವು ಕಟ್ಟಳೆಗಳನ್ನು ತೆಗೆದುಹಾಕುವ ನಿರ್ಧಾರ ಕೈಗೊಂಡಿದ್ದಾರೆ ಎಂದರು. ಪಾರದರ್ಶಕತೆ ತರಲು ಅವರು ಹಲವು ಕ್ರಮ ಕೈಗೊಂಡಿದ್ದಾರೆಂದರು.
ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಜನರ ಬೆಂಬಲ ಅಗತ್ಯ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದರು. ಕೆಲವು ಸ್ಥಳಗಳಲ್ಲಿ, ಕೆಲವು ಜಿಲ್ಲೆಗಳಲ್ಲಿ ಮತ್ತು ಕೆಲವು ವರ್ಗಗಳಲ್ಲಿ, ಲಸಿಕೆಯ ಕುರಿತಂತೆ ಉಪೇಕ್ಷೆ ಇದೆ ಎಂದು ಅವರು ಹೇಳಿದರು. ನಮ್ಮ ಸುತ್ತಮುತ್ತಲಿನ, ಕುಟುಂಬದ ಅಥವಾ ಸ್ನೇಹಿತರ ವಲಯಗಳಲ್ಲಿ, ಯಾರೂ ಲಸಿಕೆ ಪಡೆಯದೆ ಉಳಿದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕೋವಿಡ್ -19 ನಿಗ್ರಹಕ್ಕೆ ನೂರಕ್ಕೆ ನೂರರಷ್ಟು ಲಸಿಕೆಯೊಂದೇ ಮಂತ್ರವಾಗಿದೆ ಮತ್ತು ಭಾರತ ಸರ್ಕಾರವು ಲಸಿಕೆಗಳ ಸಾಕಷ್ಟು ಪೂರೈಕೆಯನ್ನು ಖಾತ್ರಿಪಡಿಸಿದೆ ಎಂದು ಶ್ರೀ ಶಾ ಹೇಳಿದರು.

***(Release ID: 1751570) Visitor Counter : 103


Read this release in: English , Urdu , Tamil , Telugu