ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ರಾಜ್ಯಗಳು /ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್ -19 ಲಸಿಕೆ ಲಭ್ಯತೆಯ ಹೊಸ ಮಾಹಿತಿ


ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 63.09 ಕೋಟಿಗೂ ಹೆಚ್ಚು ಲಸಿಕೆ
ಡೋಸ್ ಗಳನ್ನು ಒದಗಿಸಲಾಗಿದೆ

ಸಿಗಬೇಕಾದ 21.76 ಲಕ್ಷ ಡೋಸ್ಗಳು ಹಾಗು ಉಳಿದ ಮತ್ತು ಬಳಕೆಯಾಗದ 4.87 ಕೋಟಿಗಿಂತಲೂ ಹೆಚ್ಚು ಲಸಿಕೆ ಡೋಸ್ಗಳು ಹಾಗು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ ಲಭ್ಯವಿವೆ

Posted On: 30 AUG 2021 10:36AM by PIB Bengaluru

ಕೇಂದ್ರ ಸರ್ಕಾರವು ದೇಶಾದ್ಯಂತ ಕೋವಿಡ್-19 ಲಸಿಕೆ ನೀಡಿಕೆಯ ವೇಗವನ್ನು ಹೆಚ್ಚಿಸಲು ಮತ್ತು ವ್ಯಾಪ್ತಿಯನ್ನು ವಿಸ್ತರಿಸಲು ಬದ್ಧವಾಗಿದೆ. ಕೋವಿಡ್ -19 ಲಸಿಕೆ ನೀಡಿಕೆಯ ಸಾರ್ವತ್ರಿಕರಣದ ಹೊಸ ಹಂತವು 21 ನೇ ಜೂನ್ 2021 ರಿಂದ ಆರಂಭವಾಯಿತು. ಹೆಚ್ಚಿನ ಲಸಿಕೆಗಳ ಲಭ್ಯತೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆ ಲಭ್ಯತೆಯ ಮುಂಗಡ ಸೂಚನೆ ಮತ್ತು ಅದರಿಂದ ಉತ್ತಮ ಯೋಜನೆಯನ್ನು ಸಕ್ರಿಯಗೊಳಿಸಲು ಮತ್ತು ಲಸಿಕೆ ಪೂರೈಕೆ ಸರಪಳಿಯನ್ನು ಸುಗಮಗೊಳಿಸುವುದರ ಮೂಲಕ ಲಸಿಕೆ ನೀಡುವಿಕೆಯನ್ನು ಹೆಚ್ಚಿಸಲಾಗಿದೆ.

ರಾಷ್ಟ್ರವ್ಯಾಪಿ ಲಸಿಕೆ ನೀಡುವಿಕೆಯ ಭಾಗವಾಗಿ, ಭಾರತ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ಲಸಿಕೆಗಳನ್ನು ಉಚಿತವಾಗಿ ನೀಡುವ ಮೂಲಕ ಬೆಂಬಲಿಸುತ್ತಿದೆ. ಕೋವಿಡ್ 19 ಲಸಿಕೆ ಅಭಿಯಾನದ ಸಾರ್ವತ್ರಿಕರಣದ ಹೊಸ ಹಂತದಲ್ಲಿ, ಕೇಂದ್ರ ಸರ್ಕಾರವು ದೇಶದಲ್ಲಿ ಲಸಿಕೆ ತಯಾರಕರು ಉತ್ಪಾದಿಸುವ ಲಸಿಕೆಗಳ 75% ರಷ್ಟನ್ನು ಖರೀದಿಸುತ್ತದೆ ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಪೂರೈಸುತ್ತಿದೆ.

 

  ವ್ಯಾಕ್ಸಿನ್ ಡೋಸ್ ಗಳು

(30 ಆಗಸ್ಟ್ 2021 ರಂತೆ)

ಸರಬರಾಜು ಮಾಡಿರುವುದು

63,09,30,270

ಸಾಗಿಸಲು ಸಿದ್ಧವಾಗಿರುವವು

21,76,930

ಉಳಿದವುಗಳು

4,87,39,946

 

63.09 ಕೋಟಿ (63,09,30,270) ಗಿಂತಲೂ ಹೆಚ್ಚು ಲಸಿಕೆ ಡೋಸ್‌ಗಳನ್ನು ರಾಜ್ಯ ಸರ್ಕಾರ/ಕೇಂದ್ರಾಡಳಿತ ಪ್ರದೇಶಗಳಿಗೆ ಇದುವರೆಗೆ ಭಾರತ ಸರ್ಕಾರದ ಮೂಲಕ (ಉಚಿತ ಚಾನೆಲ್) ಮತ್ತು ನೇರ ರಾಜ್ಯ ಖರೀದಿ ವರ್ಗದ ಮೂಲಕ ಒದಗಿಸಲಾಗಿದೆ.  ಇದಲ್ಲದೆ, 21.76 ಲಕ್ಷಕ್ಕಿಂತ ಹೆಚ್ಚು ಡೋಸ್‌ಗಳು (21,76,930) ಸಾಗಿಸಲು ಸಿದ್ಧವಾಗಿವೆ.

ಉಳಿದ  ಮತ್ತು ಬಳಕೆಯಾಗದ 4.87 ಕ್ಕಿಂತ ಹೆಚ್ಚು (4,87,39,946) ಕೋವಿಡ್ ಲಸಿಕೆ ಡೋಸ್‌ ಗಳು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಆಡಳಿತದಲ್ಲಿ ಇನ್ನೂ ಲಭ್ಯವಿವೆ.

****



(Release ID: 1750444) Visitor Counter : 249