ನಾಗರೀಕ ವಿಮಾನಯಾನ ಸಚಿವಾಲಯ

ನಾಗರಿಕ ವಿಮಾನಯಾನ ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಅವರು ಉಡಾನ್ ಯೋಜನೆಯಡಿಯಲ್ಲಿ ಜಾಮ್ ನಗರ-ಬೆಂಗಳೂರು-ಹೈದರಾಬಾದ್ ಮಾರ್ಗದಲ್ಲಿ ಮೊದಲ ನೇರ ವಿಮಾನ ಸೇವೆಯನ್ನು ಉದ್ಘಾಟಿಸಿದರು

Posted On: 26 AUG 2021 7:30PM by PIB Bengaluru

ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ, ನಾಗರಿಕ ವಿಮಾನಯಾನ ರಾಜ್ಯ ಸಚಿವರು ​​ಮತ್ತು ಜನರಲ್ ಡಾ. ವಿಕೆ ಸಿಂಗ್ (ನಿವೃತ್ತ) ಅವರು ವರ್ಚುವಲ್ ಆಗಿ ಭಾರತ ಸರ್ಕಾರದ ಆರ್ ಸಿ ಎಸ್-ಯುಡಿಎಎನ್ ಉಡಾನ್  (ಪ್ರಾದೇಶಿಕ ಸಂಪರ್ಕ ಯೋಜನೆ- ದೇಶದ ಸಾಮಾನ್ಯ ನಾಗರಿಕರೂ ವಿಮಾನದಲ್ಲಿ ಪಯಣಿಸಲಿ) ಅಡಿಯಲ್ಲಿ. ಜಾಮ್ ನಗರ (ಗುಜರಾತ್), ಬೆಂಗಳೂರು (ಕರ್ನಾಟಕ) ಮತ್ತು ಹೈದರಾಬಾದ್ (ತೆಲಂಗಾಣ) ನಡುವಿನ ಮೊದಲ ನೇರ ವಿಮಾನ ಹಾರಾಟಕ್ಕೆ ಚಾಲನೆ ನೀಡಿದರು. ಶ್ರೀ ಜವಾಹರಬಾಯಿ ಚಾವ್ಡಾ - ಗುಜರಾತ್ ಪ್ರವಾಸೋದ್ಯಮ ಸಚಿವ, ಶ್ರೀ ಭೂಪೇಂದ್ರಸಿಂಹ ಚೂಡಾಸಮ, ನಾಗರಿಕ ವಿಮಾನಯಾನ ಸಚಿವ, ಗುಜರಾತ್, ಶ್ರೀಮತಿ. ಪೂನಂಬೆನ್ ಹೇಮತಭಾಯಿ ಮಾದಮ್, ಸಂಸತ್ತಿನ ಸದಸ್ಯ, ಜಾಮ್‌ನಗರ, ಶ್ರೀ ಆರ್ ಸಿ ಫಾಲ್ಡು, ಶಾಸಕಾಂಗ ಸದಸ್ಯ (ಎಂಎಲ್‌ಎ), ಶ್ರೀ ರಾಘವಜಿಭಾಯಿ ಹಂಸರಾಜ್‌ಭಾಯ್ ಪಟೇಲ್, ಶಾಸಕರು ಕೂಡ  ಉಪಸ್ಥಿತರಿದ್ದರು.

ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ, ಶ್ರೀಮತಿ ಉಷಾ ಪಧಿ ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ)ದ ಹಿರಿಯ ಅಧಿಕಾರಿಗಳು ಸಹ ವಿಮಾನ ಸಮಾರಂಭದಲ್ಲಿ ಹಾಜರಿದ್ದರು. ಈ ಮಾರ್ಗದ ಕಾರ್ಯಾಚರಣೆಯು ಮುಂಬೈ (ಮಹಾರಾಷ್ಟ್ರ), ಬೆಂಗಳೂರು ಮತ್ತು ಹೈದರಾಬಾದ್ ಅನ್ನು ಒಳಗೊಂಡಂತೆ ಭಾರತದ 3 ಪ್ರಮುಖ ನಗರಗಳಿಗೆ ಜಾಮ್ ನಗರದ ವೈಮಾನಿಕ ಸಂಪರ್ಕವನ್ನು ವಿಸ್ತರಿಸುತ್ತದೆ.

ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು, "ಉಡಾನ್ ಅಡಿಯಲ್ಲಿ ಜಾಮ್ ನಗರದಿಂದ ಪ್ರಾದೇಶಿಕ ಸಂಪರ್ಕಕ್ಕೆ ಚಾಲನೆ ನೀಡಲು ನನಗೆ ಸಂತೋಷವಾಗುತ್ತಿದೆ. ಇಂದಿನಿಂದ,   ಉಡಾನ್   ಅಡಿಯಲ್ಲಿ ಸ್ಟಾರ್ ಏರ್ ಮೊದಲ ಬಾರಿಗೆ ಜಾಮ್‌ನಗರ ಮತ್ತು ಬೆಂಗಳೂರು ನಡುವೆ ನೇರ ವಿಮಾನ ಸೇವೆಯನ್ನು ಜೊತೆಗೆ ಜಾಮ್‌ನಗರ ಮತ್ತು ಹೈದರಾಬಾದ್ ನಡುವಿನ ವಿಮಾನಸೇವೆಯನ್ನು  ನಿರ್ವಹಿಸಲಿದೆ. ಜಾಮ್ ನಗರವು ವ್ಯಾಪಾರ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕೇಂದ್ರಗಳ ಪರಿಪೂರ್ಣ ಮಿಶ್ರಣವಾಗಿದೆ. ಇದಲ್ಲದೆ, ನಾವು ಉಡಾನ್ ಅಡಿಯಲ್ಲಿ ಗುಜರಾತ್‌ನಿಂದ 10 ಹೆಚ್ಚುವರಿ ವಿಮಾನಗಳನ್ನು ಆರಂಭಿಸಲು ಯೋಜಿಸುತ್ತಿದ್ದೇವೆ ಎಂದು ಘೋಷಿಸಲು ನನಗೆ ಸಂತೋಷವಾಗುತ್ತಿದೆ. ನಮ್ಮ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕಲ್ಪಿಸಿದ ಉಡಾನ್ ಯೋಜನೆಯು ದೇಶದ ನಾಗರಿಕ ವಿಮಾನಯಾನ ವಲಯಕ್ಕೆ ಒಂದು ಮಹತ್ತರ  ಬದಲಾವಣೆಯಾಗಿದೆ.

ಜಾಮ್ ನಗರವನ್ನು "ಛೋಟಿ ಕಾಶಿ", ಸಣ್ಣ ಕಾಶಿ ಎಂದೂ ಕರೆಯುತ್ತಾರೆ ಏಕೆಂದರೆ ಇಲ್ಲಿ 100 ಕ್ಕೂ ಹೆಚ್ಚು ದೇವಸ್ಥಾನಗಳಿವೆ. ಜಾಮ್ ನಗರವು ನಾಲ್ಕು ಅಮೃತಶಿಲೆಯ ಜೈನ ದೇವಾಲಯಗಳಿಗೆ ಹೆಸರುವಾಸಿಯಾಗಿದೆ: ವರ್ಧಮಾನ್ ಶಾ ದೇವಸ್ಥಾನ, ರೈಸಿ ಶಾ ದೇವಸ್ಥಾನ, ಶೇತ್ ದೇವಸ್ಥಾನ ಮತ್ತು ವಸುಪೂಜ್ಯ ಸ್ವಾಮಿ ದೇವಸ್ಥಾನ; ಎಲ್ಲವನ್ನೂ 1574 ಮತ್ತು 1622 ರ ನಡುವೆ ನಿರ್ಮಿಸಲಾಗಿದೆ. ಇದಲ್ಲದೆ, ಜಾಮ್‌ನಗರವನ್ನು  ಚಾರ್ ಧಾಮಗಳಲ್ಲಿ ಒಂದಾದ - ಮೋಕ್ಷಪುರಿ ನಗರ,  ದ್ವಾರಕಾದ ಗೇಟ್‌ವೇ ನಗರ ಎಂದೂ ಕರೆಯುತ್ತಾರೆ

ಮೋತಿ ಖವಡಿ ಹಳ್ಳಿಯ ಬಳಿ ವಿಶ್ವದ ಅತಿದೊಡ್ಡ ತೈಲ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ಸ್ ಕಾಂಪ್ಲೆಕ್ಸ್ ಮತ್ತು ಹತ್ತಿರದ ವಾಡಿನಾರ್‌ನಲ್ಲಿರುವ ಭಾರತದ ಎರಡನೇ ಅತಿದೊಡ್ಡ ಖಾಸಗಿ ಸಂಸ್ಕರಣಾಗಾರದಿಂದಾಗಿ ಜಾಮ್‌ನಗರವನ್ನು ವಿಶ್ವದ ತೈಲ ನಗರ ಎಂದೂ ಕರೆಯುತ್ತಾರೆ. 5,000 ಕ್ಕಿಂತಲೂ ಹೆಚ್ಚಿನ ದೊಡ್ಡ ಪ್ರಮಾಣದ ಮತ್ತು 10,000 ಸಣ್ಣ ಪ್ರಮಾಣದ ವರ್ಕ್ ಶಾಪ್ ಗಳು ಹಿತ್ತಾಳೆಯ ವಸ್ತುಗಳನ್ನು ತಯಾರಿಸುವುದರಿಂದ ಜಾಮ್‌ನಗರವನ್ನು ಹಿಂದೆ ದೇಶದ 'ಬ್ರಾಸ್ ಸಿಟಿ' ಎಂದು ಕರೆಯಲಾಗುತ್ತಿತ್ತು. ಈ ಪ್ರದೇಶದಲ್ಲಿ ದೇಶದಲ್ಲಿ ಹಿತ್ತಾಳೆಯ ವಸ್ತುಗಳ ಅತಿ ಹೆಚ್ಚು ಉತ್ಪಾದನೆಯಾಗುತ್ತದೆ. 

ಯಾವುದೇ ನೇರ ವಿಮಾನ ಅಥವಾ ರೈಲು ಸಂಪರ್ಕ ಲಭ್ಯವಿಲ್ಲದ ಕಾರಣ, ಜನರು ಈ ನಗರಗಳನ್ನು ತಲುಪಲು ದೀರ್ಘ ಪ್ರಯಾಣದ ಸಮಯವನ್ನು ಕಳೆಯಬೇಕಾಯಿತು. ಜಾಮ್‌ನಗರ ಮತ್ತು ಬೆಂಗಳೂರು ನಡುವೆ ನೇರ ವಿಮಾನದ ಲಭ್ಯತೆಯು ಮುಂಬೈ ಮೂಲಕ ಸಂಪರ್ಕಿಸುವ ವಿಮಾನಗಳನ್ನು ಬಳಸಿಕೊಂಡು ವಿಮಾನ ಪ್ರಯಾಣಕ್ಕೆ ತೆಗೆದುಕೊಳ್ಳುವ 7 ಗಂಟೆಗಳ ಹಿಂದಿನ ಪ್ರಯಾಣದ ಸಮಯವನ್ನು 135 ನಿಮಿಷಗಳಿಗೆ ಕಡಿತಗೊಳಿಸುತ್ತದೆ. ಈ ಎರಡು ನಗರಗಳ ನಡುವಿನ ರಸ್ತೆ ಪ್ರಯಾಣದ ಪರ್ಯಾಯ ಆಯ್ಕೆಯು 30 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಹಾಗು ರೈಲು ಪ್ರಯಾಣವು ಸುಮಾರು 20 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಹಾಗಯೇ, ಇಡೀ ಪ್ರಯಾಣದ ಪೂರ್ಣಗೊಳಿಸುವಿಕೆಯು ಜಾಮ್ ನಗರದಿಂದ ಹೋಗಲು ಮತ್ತು ಬರಲು ರೈಲು ಮತ್ತು ರಸ್ತೆ ಪ್ರಯಾಣ ಅಥವಾ ಹೈದರಾಬಾದ್ ತಲುಪಲು 1 ದಿನಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಈ ಎರಡು ನಗರಗಳ ನಡುವೆ ನೇರ ವಿಮಾನಗಳ ಸಂಪರ್ಕವಿಲ್ಲದ ಕಾರಣ, ಸಂಪರ್ಕಿಸುವ ವಿಮಾನಗಳನ್ನು ಬಳಸಿಕೊಂಡು ವಿಮಾನ ಪ್ರಯಾಣಕ್ಕೆ 6 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಈಗ, ಸ್ಥಳೀಯರು ಕೇವಲ 130 ನಿಮಿಷಗಳ ವಿಮಾನ ಸೇವೆಯನ್ನು ಆಯ್ಕೆ ಮಾಡುವ ಮೂಲಕ ಎರಡು ನಗರಗಳ ನಡುವೆ ಸುಲಭವಾಗಿ ಪ್ರಯಾಣಿಸಬಲ್ಲರು.

ಉಡಾನ್ 3 ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಸ್ಟಾರ್ ಏರ್ ಗೆ ಮೇಲಿನ ಮಾರ್ಗಗಳನ್ನು ನೀಡಲಾಯಿತು. ದರಗಳನ್ನು ಕೈಗೆಟುಕುವಂತೆ ಮತ್ತು ಸಾಮಾನ್ಯ ಜನರಿಗೆ ತಲುಪುವಂತೆ ಮಾಡಲು ವಿಮಾನಯಾನ ಸಂಸ್ಥೆಗಳಿಗೆ ಉಡಾನ್ ಯೋಜನೆಯಡಿ ವಯಬಿಲಿಟಿ ಗ್ಯಾಪ್ ಫಂಡಿಂಗ್ (VGF) ಅನ್ನು ಒದಗಿಸಲಾಗುತ್ತಿದೆ.   ಸ್ಟಾರ್ ಏರ್  ಈ ಮಾರ್ಗದಲ್ಲಿ ವಾರಕ್ಕೆ ಮೂರು ಬಾರಿ ಹಾರಾಟ ನಡೆಸಲಿದೆ ಮತ್ತು ತನ್ನ 50 ಆಸನಗಳ ಎಂಬ್ರೇರ್ ಇಆರ್‌ಜೆ -145 ವಿಮಾನಗಳನ್ನು ನಿಯೋಜಿಸಲಿದೆ. ಈ ಮಾರ್ಗವು ವಿಮಾನಸೇವೆಯ 32 ನೇ ಉಡಾನ್ ಮಾರ್ಗದ ಆರಂಭವವಾಗಿದೆ.

ಇಲ್ಲಿಯವರೆಗೆ, 369 ಮಾರ್ಗಗಳು ಮತ್ತು 60 ವಿಮಾನ ನಿಲ್ದಾಣಗಳು (5 ಹೆಲಿಪೋರ್ಟ್‌ಗಳು ಮತ್ತು 2 ವಾಟರ್ ಏರೋಡ್ರೋಮ್‌ಗಳನ್ನು ಒಳಗೊಂಡಂತೆ) ಉಡಾನ್ ಯೋಜನೆಯಡಿ ಕಾರ್ಯನಿರ್ವಹಿಸುತ್ತಿವೆ.

ವಿಮಾನ ಸೇವೆಯ ವೇಳಾಪಟ್ಟಿಯು ಈ ಕೆಳಗಿನಂತಿವೆ :

ಫ್ಲೈಟ್ ಸಂಖ್ಯೆ:

ವಲಯ

ನಿರ್ಗಮನ

ಆಗಮನ

ಸೇವೆಯ ದಿನಗಳು

ಏರ್ ಕ್ರಾಫ್ಟ್

OG131

ಬೆಂಗಳೂರು - ಜಾಮ್ ನಗರ

06:35

08:50

ಮಂಗಳವಾರ, ಗುರುವಾರ ಮತ್ತು ಶನಿವಾರ

ERJ145

OG149

ಜಾಮ್ ನಗರ - ಹೈದರಾಬಾದ್

09:15

11:30

ಮಂಗಳವಾರ, ಗುರುವಾರ ಮತ್ತು ಶನಿವಾರ

ERJ145

OG150

ಹೈದರಾಬಾದ್ - ಜಾಮ್ ನಗರ

15:15

17:20

ಮಂಗಳವಾರ, ಗುರುವಾರ ಮತ್ತು ಶನಿವಾರ

ERJ145

OG132

ಜಾಮ್ ನಗರ - ಬೆಂಗಳೂರು

17:45

20:00

ಮಂಗಳವಾರ, ಗುರುವಾರ ಮತ್ತು ಶನಿವಾರ

ERJ145

***

 



(Release ID: 1749412) Visitor Counter : 209


Read this release in: English , Urdu , Hindi , Telugu