ಇಂಧನ ಸಚಿವಾಲಯ
765 ಕೆವಿ ಡಬಲ್-ಸರ್ಕ್ಯೂಟ್ (ಡಿ/ಸಿ) ವಿಂಧ್ಯಾಚಲ-ವಾರಣಸಿ ಟ್ರಾನ್ಸ್‌ಮಿಷನ್ ಲೈನ್ ಅನ್ನು ಕಾರ್ಯಗತಗೊಳಿಸಲಾಯಿತು
ಈ ಪ್ರಸರಣ ಮಾರ್ಗದ ಕಾರಿಡಾರ್ ಉತ್ತರದ ಪ್ರದೇಶ ಮತ್ತು ಪಶ್ಚಿಮದ ಪ್ರದೇಶದ ನಡುವೆ ಬಲವಾದ ಸಂಪರ್ಕವನ್ನು ಒದಗಿಸುತ್ತದೆ
ರಾಷ್ಟ್ರೀಯ ಗ್ರಿಡ್‌ನ ಅಂತರ - ಪ್ರಾದೇಶಿಕ ವಿದ್ಯುತ್ ವರ್ಗಾವಣೆ ಸಾಮರ್ಥ್ಯವು 4200 ಮೆಗಾವ್ಯಾಟ್ ಹೆಚ್ಚಾಗಿದೆ ಹಾಗು 110750 ಮೆಗಾವ್ಯಾಟ್ ತಲುಪುತ್ತದೆ
Posted On:
25 AUG 2021 12:43PM by PIB Bengaluru
ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ 765 ಕಿಲೋ ವೋಲ್ಟ್ (ಕೆವಿ) ಡಬಲ್ ಸರ್ಕ್ಯೂಟ್ (ಡಿ/ಸಿ) ವಿಂಧ್ಯಾಚಲ – ವಾರಣಸಿ ಟ್ರಾನ್ಸ್‌ಮಿಷನ್ ಲೈನ್ ಅನ್ನು ಕಾರ್ಯಗತಗೊಳಿಸಿದೆ . ಇದನ್ನು ನಿಗದಿತ ಗುರಿಯಂತೆ ಅಂಗಸಂಸ್ಥೆಯಾದ ಪಿವಿಟಿಎಸ್‌ಎಲ್ ಮಾಡಿದೆ.
ಈ ಟ್ರಾನ್ಸ್ಮಿಷನ್ ಲೈನ್ ಕಾರಿಡಾರ್ ಉತ್ತರದ ಪ್ರದೇಶ (NR) ಮತ್ತು ಪಶ್ಚಿಮದ ಪ್ರದೇಶ (WR) ಗಳ ನಡುವೆ ಬಲವಾದ ಸಂಪರ್ಕವನ್ನು ಒದಗಿಸುತ್ತದೆ ಮತ್ತು ಖಾತರಿಯಾದ ವಿದ್ಯುತ್ ಹರಿವನ್ನು ಸುಗಮಗೊಳಿಸುತ್ತದೆ, ಉತ್ತರದ ಮತ್ತು ಪಶ್ಚಿಮದ ಪ್ರದೇಶ ಹಾಗು ಇಡೀ ದೇಶದ ಕೈಗಾರಿಕೆಗಳು ಮತ್ತು ಮನೆಗಳಿಗೆ ಖಾತರಿಯಾದ ವಿದ್ಯುತ್ ಪ್ರಸರಣವನ್ನು ಸಕ್ರಿಯಗೊಳಿಸುತ್ತದೆ. ಒಟ್ಟಾರೆ ಇದು ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಗೆ ಪ್ರಯೋಜನವನ್ನು ನೀಡುತ್ತದೆ. ಈ ಸಂಪರ್ಕವನ್ನು ಕಾರ್ಯಗತಗೊಳಿಸುವುದರೊಂದಿಗೆ, ರಾಷ್ಟ್ರೀಯ ಗ್ರಿಡ್‌ನ ಅಂತರ -ಪ್ರಾದೇಶಿಕ ವಿದ್ಯುತ್ ವರ್ಗಾವಣೆ ಸಾಮರ್ಥ್ಯವು 4200 ಮೆಗಾವ್ಯಾಟ್ ನಷ್ಟು ಹೆಚ್ಚಾಗಿದೆ, ಇದರಿಂದಾಗಿ ದೇಶದಲ್ಲಿ ಒಟ್ಟು ಸಾಮರ್ಥ್ಯ 110750 ಮೆಗಾವ್ಯಾಟ್ ಆಗಿದೆ.
190 ಕಿಮೀ ಉದ್ದದ ಪ್ರಸರಣ ಮಾರ್ಗವು ಕಠಿಣ ಭೌಗೋಳಿಕ ಪ್ರದೇಶಗಳನ್ನು ಹಾದುಹೋಗುತ್ತದೆ ಮತ್ತು ನಾಲ್ಕು ನದಿಗಳಾದ ಗಂಗಾ, ಗೋಪಾಡ್, ಮೆಯಾರ್ ಮತ್ತು ಸೋನೆಯನ್ನು ದಾಟುತ್ತದೆ. ಈ ಪ್ರಸರಣ ಮಾರ್ಗದ 92 ಕಿಮೀ ಭಾಗವು ಮಧ್ಯಪ್ರದೇಶದ ಮೂಲಕ ಹಾದುಹೋಗುತ್ತದೆ ಮತ್ತು ಉಳಿದ 98-ಕಿಮೀ ಉತ್ತರ ಪ್ರದೇಶದ ಮೂಲಕ ಹಾದುಹೋಗುತ್ತದೆ. ಈ ಯೋಜನೆಯನ್ನು ಶುಲ್ಕ ಆಧಾರಿತ ಸ್ಪರ್ಧಾತ್ಮಕ ಬಿಡ್ಡಿಂಗ್ (TBCB) ಅಡಿಯಲ್ಲಿ ಪವರ್ ಗ್ರಿಡ್ ಸ್ವಾಧೀನಪಡಿಸಿಕೊಂಡಿದೆ.
ಇತ್ತೀಚೆಗೆ, ಪವರ್ ಗ್ರಿಡ್ ತನ್ನ ಅಂಗಸಂಸ್ಥೆಯಾದ ಪವರ್ ಗ್ರಿಡ್ ಜವಾಹರಪುರ ಫಿರೋಜಾಬಾದ್ ಟ್ರಾನ್ಸ್ಮಿಷನ್ ಲಿಮಿಟೆಡ್ ಮೂಲಕ 2x660 MW ಜವಾಹರ್ ಪುರ್ ಥರ್ಮಲ್ ಪವರ್ ಪ್ರಾಜೆಕ್ಟ್ ನಿಂದ ವಿದ್ಯುತ್ ಸ್ಥಳಾಂತರಕ್ಕೆ ಟ್ರಾನ್ಸ್ಮಿಷನ್ ಸಿಸ್ಟಮ್ ಅನ್ನು ನಿಯೋಜಿಸಿದೆ ಮತ್ತು ಫಿರೋಜಾಬಾದ್ ನಲ್ಲಿ 400 ಕೆವಿ ಸಬ್ ಸ್ಟೇಷನ್ ಅನ್ನು ಸಂಬಂಧಿತ ಟ್ರಾನ್ಸ್ಮಿಷನ್ ಲೈನ್ ಗಳೊಂದಿಗೆ ನಿರ್ಮಿಸಿದೆ.
ಪವರ್ ಗ್ರಿಡ್ ಪ್ರಸ್ತುತ 172,154 ಸಿಕೆಎಮ್ ಪ್ರಸರಣ ಮಾರ್ಗಗಳು, 262 ಉಪ ಕೇಂದ್ರಗಳು ಮತ್ತು 446,940 ಎಮ್ ವಿಎ ಗಿಂತ ಹೆಚ್ಚು ಪ್ರಸರಣ ಸಾಮರ್ಥ್ಯವನ್ನು ಹೊಂದಿದೆ. ಇತ್ತೀಚಿನ ತಾಂತ್ರಿಕ ಉಪಕರಣಗಳು ಮತ್ತು ತಂತ್ರಗಳ ಅಳವಡಿಕೆಯೊಂದಿಗೆ, ಯಾಂತ್ರೀಕೃತಗೊಂಡ ಮತ್ತು ಡಿಜಿಟಲ್ ಪರಿಹಾರಗಳ ಹೆಚ್ಚಿನ ಬಳಕೆಯಿಂದಾಗಿ ಪವರ್‌ಗ್ರೀಡ್ ಸಂಸ್ಥೆಯು ಸರಾಸರಿ ಪ್ರಸರಣ ವ್ಯವಸ್ಥೆಯ ಲಭ್ಯತೆಯನ್ನು >99% ನಿರ್ವಹಿಸಲು ಸಾಧ್ಯವಾಗಿದೆ.
***
(Release ID: 1748924)
Visitor Counter : 302