ರಕ್ಷಣಾ ಸಚಿವಾಲಯ
azadi ka amrit mahotsav

ಬೆಂಗಳೂರಿಗೆ ಭೇಟಿ ನೀಡಿದ ಸಿ.ಎ.ಎಸ್

Posted On: 25 AUG 2021 9:16AM by PIB Bengaluru

ವಾಯುಪಡೆ ಸಿಬ್ಬಂದಿ ಮುಖ್ಯಸ್ಥ, ಪಿ.ವಿ.ಎಸ್.ಎಂ, .ವಿ.ಎಸ್.ಎಂ, ವಿ.ಎಂ.ಡಿ.ಸಿ ಏರ್ ಚೀಪ್ ಮಾರ್ಷಲ್ ಆರ್.ಕೆ.ಎಸ್. ಬದೌರಿಯಾ ಅವರು ಆಗಸ್ಟ್ 21, 23 ಮತ್ತು 24 ರಂದು ಬೆಂಗಳೂರಿನ ಡಿ.ಆರ್.ಡಿ.ಒನ ..ಎಫ್ ಘಟಕಗಳು ಮತ್ತು ವಿಮಾನ ಪರೀಕ್ಷಾ ಸಂಸ್ಥೆಗಳು/ ಸೌಲಭ್ಯಗಳು ಮತ್ತು ಎಚ್..ಎಲ್ ಗೆ ಭೇಟಿ ನೀಡಿದ್ದರು. ಬೆಂಗಳೂರಿಗೆ ಆಗಮಿಸಿದ ಸಿ..ಎಸ್ ಅವರನ್ನು ಏರ್ ಕ್ರಾಪ್ಟ್ ಕಮಾಂಡೆಂಟ್ ಮತ್ತು  ಸಿಸ್ಟಂ ಟೆಸ್ಟಿಂಗ್ ಎಸ್ಟಾಬ್ಲಿಷ್ಮೆಂಟ್ [.ಎಸ್.ಟಿ.] .ವಿ.ಎಂ ಜಿತೇಂದ್ರ ಮಿಶ‍್ರಾ ಸ್ವಾಗತಿಸಿದರು.

.ಎಸ್.ಟಿ.ಇಗೆ ಭೇಟಿ ನೀಡಿದ ವಾಯುಪಡೆ ಸಿಬ್ಬಂದಿ ಮುಖ್ಯಸ್ಥರಿಗೆ ಪ್ರಗತಿ ಹಂತದಲ್ಲಿರುವ ಯೋಜನೆಗಳು ಮತ್ತು ಕಾರ್ಯಾಚರಣೆಯ ಪ್ರಯೋಗಗಳ ಪ್ರಗತಿ ಕುರಿತು ಮಾಹಿತಿ ನೀಡಲಾಯಿತು. ಸಿಬ್ಬಂದಿ ಜತೆ ಸಿ..ಎಸ್ ಅವರು ಸಂವಾದ ನಡೆಸಿದ ಸಂದರ್ಭದಲ್ಲಿ ಸಿ..ಎಸ್ ಅವರು .ಎಸ್.ಟಿ.ಇನ ಸವಾಲುಗಳು ಮತ್ತು ಅಸಾಧಾರಣ ಪಾತ್ರಗಳ ಬಗ್ಗೆ ಮಾತನಾಡಿ ಇವುಗಳ ಸಾಧನೆಗಳ ಬಗ್ಗೆ ಮೆಚ್ಚುಗೆ ದಾಖಲಿಸಿದರು. ..ಎಫ‍್ ಕಾರ್ಯಾಚರಣೆ ಘಟಕಗಳ ಅವಶ್ಯಕತೆಗಳನ್ನು ಪೂರೈಸುವ, ಅದರ ನೈಪುಣ್ಯವನ್ನು ಸುಸ್ಥಿತಿಯಲ್ಲಿಡುವ ಅಗತ್ಯವನ್ನು ಪುನರುಚ್ಚರಿಸಿದರು

ವಾಯುಪಡೆ ಸಿಬ್ಬಂದಿ ಮುಖ್ಯಸ್ಥರು ತಂತ್ರಾಂಶ ಅಭಿವೃಧ‍್ಧಿ ಸಂಸ್ಥೆ [ಎಸ್.ಡಿ.]ಗೂ ಭೇಟಿ ನೀಡಿದ್ದು ಘಟಕ ಏವಿಯಾನಿಕ್ಸ್ ತಂತ್ರಾಂಶ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿದೆ ಸಂಸ್ಥೆ ..ಎಫ್ ಕಾರ್ಯನಿರ್ವಹಣೆಯ ಸಾಮರ್ಥ್ಯ ಮತ್ತು ಕಾರ್ಯಾಚರಣೆಯನ್ನು ಗಣನೀಯವಾಗಿ ಹೆಚ್ಚಿಸಲು ಕೊಡುಗೆ ನೀಡುತ್ತಿದೆ ಮತ್ತು ನಿರ್ಣಾಯಕ ಯೋಜನೆಗಳ ಮೇಲೆ ನಿರಂತರ ನಿಗಾ ವ್ಯವಸ್ಥೆ ಹೊಂದಿರುವುದನ್ನು ಅವರು ವಿಶೇಷವಾಗಿ ಗಮನಿಸಿದರು. ..ಎಫ್ ಯುದ್ಧ ವಿಮಾನಗಳ ವಿವಿಧ ಶಸ್ತ್ರಾಸ್ತ್ರಗಳ ವಲಯದಲ್ಲಿ ದೇಶೀಯ ತಂತ್ರಾಂಶದ ದೃಷ್ಟಿಕೋನದ ಬಗ್ಗೆ ಮೆಚ್ಚುಗೆ ಸೂಚಿಸಿದರು ಮತ್ತು ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಸ್ವಾವಲಂಬನೆ ಸಾಧಿಸಲು ಇದು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ತಮ್ಮ ಭೇಟಿಯ ಭಾಗವಾಗಿ ಸಿ..ಎಸ್ ಅವರು ಏರೋನಾಟಿಕಲ್ ಡವಲಪ್ ಮೆಂಟ್ ಏಜನ್ಸಿ [.ಡಿ.], ಡಿ.ಆರ್.ಡಿ. ಮತ್ತು ಹಿಂದೂಸ್ಥಾನ್ ಏರೋನಾಟಿಕಲ್ ಲಿಮಿಟೆಡ್ [ಎಚ್..ಎಲ್] ನಲ್ಲಿ ಪರೀಕ್ಷಾ ಸಿಬ್ಬಂದಿ ಮತ್ತು ತಂತ್ರಜ್ಞರನ್ನು ಭೇಟಿ ಮಾಡಿ ಸಂವಾದ ನಡೆಸಿದರು. ಭವಿಷ್ಯದ ಅವಶ್ಯಕತೆಗಳನ್ನು ಪೂರೈಸಲು, ದೇಶೀಯ ವಿಮಾನಯಾನ ಉದ್ಯಮದ ಸಾಮರ್ಥ್ಯ ವೃದ್ಧಿಸುವ ಗುರಿ ಸಾಧನೆಯಲ್ಲಿ ಎರಡೂ ಸಂಸ್ಥೆಗಳ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದರು.

ವಾಯುಪಡೆ ಸಿಬ್ಬಂದಿ ಮುಖ್ಯಸ್ಥರು ಬೆಂಗಳೂರಿನ ..ಸಿ ಎಲ್.ಸಿ. ತೇಜಸ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ

***


(Release ID: 1748778) Visitor Counter : 297