ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಜ್ಞಾನ ಆರ್ಥಿಕತೆಯಾಗಿ ಭಾರತವನ್ನು ಸ್ಥಾಪಿಸಲು ಎನ್.ಇ.ಪಿ.ಯು ಹಾದಿಯನ್ನು ರೂಪಿಸಲಿದೆ - ಶ್ರೀ ಧರ್ಮೇಂದ್ರ ಪ್ರಸಾದ್


ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ಕಾರ್ಯಾರಂಭದಲ್ಲಿ ವರ್ಚುವಲ್ ಭಾಷಣ ಮಾಡಿದ ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್

Posted On: 23 AUG 2021 7:06PM by PIB Bengaluru

ರಾಷ್ಟ್ರೀಯ ಶಿಕ್ಷಣ ನೀತಿ-2020 ಭಾರತವನ್ನು ಜ್ಞಾನಾಧಾರಿತ ಆರ್ಥಿಕತೆಯನ್ನಾಗಿ ಸ್ಥಾಪಿಸಲು ಹಾದಿಯನ್ನು ನಿರ್ಮಾಣ ಮಾಡಲಿದೆ ಮತ್ತು ಜಾಗತಿಕ ನಾಗರಿಕರ ನಿರ್ಮಾಣಕ್ಕೂ ಸಹಾಯ ಮಾಡಲಿದೆ ಎಂದು ಕೇಂದ್ರ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಹಾಗು ಉದ್ಯಮಶೀಲತೆ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಹೇಳಿದರು. ಕರ್ನಾಟಕ ಸರಕಾರ ಇಂದು ಆಯೋಜಿಸಿದ್ದ ಎನ್.ಇ.ಪಿ. ಕರ್ನಾಟಕ ಮತ್ತು ಶಿಕ್ಷಣ ಸಂಬಂಧಿ ಉಪಕ್ರಮಗಳ ಕಾರ್ಯಾರಂಭ ಸಮಾರಂಭದಲ್ಲಿ ಅವರು ಮಾತನಾಡಿದರು.

 

ಸಮಾರಂಭದಲ್ಲಿ ಪಾಲ್ಗೊಂಡವರನ್ನುದ್ದೇಶಿಸಿ ಮಾತನಾಡಿದ ಶ್ರೀ ಪ್ರಧಾನ್ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನುಷ್ಠಾನದಿಂದ ಶಿಕ್ಷಣದ ವ್ಯಾಪ್ತಿಯನ್ನು ಬದಲಾಯಿಸುವ ನಿಟ್ಟಿನಲ್ಲಿ ಕರ್ನಾಟಕ ದಾಪುಗಾಲಿಕ್ಕಿದೆ ಎಂದರು. ಎನ್.ಇ.ಪಿ.2020ನ್ನು ಕನ್ನಡಕ್ಕೆ ಅನುವಾದಿಸುವುದರಿಂದ ಹಿಡಿದು ಎನ್.ಇ.ಪಿ. ಕಾರ್ಯಪಡೆ ರಚನೆ ಮತ್ತು ಅದರ ಅನುಷ್ಠಾನಕ್ಕೆ ಹಾದಿಯನ್ನು ರೂಪಿಸುವ  ಮೂಲಕ  ಕರ್ನಾಟಕವು ಎನ್.ಇ.ಪಿ. 2020ರ  ಚಿಂತನೆಯನ್ನು ಅನುಷ್ಠಾನ ಮಾಡಿದ ಭಾರತದ ಮೊದಲ ರಾಜ್ಯವಾಗಿದೆ ಎಂದೂ ಅವರು ಹೇಳಿದರು. ರಾಜ್ಯದಲ್ಲಿ ಎನ್.ಇ.ಪಿ. ಅನುಷ್ಠಾನದಿಂದ ಕರ್ನಾಟಕವು ಇತರ ರಾಜ್ಯಗಳಿಗೆ ಅನುಸರಣೆಗೆ ಮಾದರಿಯನ್ನು ರೂಪಿಸಿದೆ ಎಂದರು.

ಭಾರತದ ನೈತಿಕತೆಯೊಂದಿಗೆ  ಆಳವಾದ ಬೇರುಗಳನ್ನು ಹೊಂದಿರುವ ಆದರೆ ಅಷ್ಟೇ ಆಧುನಿಕವೂ ಆಗಿರುವ ಭಾರತದ ಎನ್.ಇ.ಪಿ. ಯು-ಅದರ ನೀತಿ ಚೌಕಟ್ಟಿನಲ್ಲಿ, ಅನುಷ್ಠಾನ ತಂತ್ರದಲ್ಲಿ, ಫಲಿತಾಂಶಗಳಲ್ಲಿ ಮತ್ತು ಮಾನವ ಸಮಾಜದ ಒಳಿತಿನಲ್ಲಿ ವಹಿಸುವ ಪಾತ್ರದಲ್ಲಿ ಜಾಗತಿಕ ನೀತಿ ನಿರೂಪಕರಿಗೆ ಒಂದು ಅಧ್ಯಯನ ಪ್ರಕರಣವಾಗಿ ಒದಗಿ ಬರಲಿದೆ. ಇಂದು 3-23 ವರ್ಷ ವಯೋಮಿತಿಯಲ್ಲಿರುವ  ತಲೆಮಾರು ಎನ್.ಇ.ಪಿ.ಯ ಪ್ರಯೋಜನಗಳನ್ನು ಪಡೆಯಲಿದೆ. ಮತ್ತು ಅದು ಭಾರತದ ಭವಿಷ್ಯವನ್ನು ರೂಪಿಸಲಿದೆ, ಆದರೆ ನಮ್ಮೆದುರು ಇರುವ ಸವಾಲೆಂದರೆ ಭಾರತದ ಬೆಳೆಯುತ್ತಿರುವ ಜನಸಂಖ್ಯೆಯನ್ನು ಸಾಧ್ಯವಾದಷ್ಟು ಬೇಗ ಹೊಸ ಶಿಕ್ಷಣ ನೀತಿಯಡಿ ತರುವುದು ಎಂದವರು ಹೇಳಿದರು.

ಎನ್.ಇ.ಪಿ.ಯು ಭಾರತವನ್ನು ಹೊಸ ಜಾಗತಿಕ ವ್ಯವಸ್ಥೆಯಲ್ಲಿ ಸ್ಥಾಪಿಸುವಲ್ಲಿ ಕವಣೆಯಂತ್ರವಾಗಲಿದೆ ಎಂದ ಅವರು ಎಲ್ಲಾ ಭಾಗೀದಾರರು ಭಾರತವನ್ನು ಚಲನಶೀಲ  ಜ್ಞಾನಾಧಾರಿತ ಆರ್ಥಿಕತೆಯನ್ನಾಗಿ ಮಾಡುವ ನಮ್ಮ ರಾಷ್ಟ್ರೀಯ ಮಹತ್ವಾಕಾಂಕ್ಷೆಯನ್ನು ಈಡೆರಿಸುವ ನಿಟ್ಟಿನಲ್ಲಿ ಒಗ್ಗೂಡಿ ಕೆಲಸ ಮಾಡಬೇಕು ಎಂದೂ ನುಡಿದರು.

ಕರ್ನಾಟಕ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ , ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಎನ್.ಇ.ಪಿ. ಕರಡು ರಚನಾ ಸಮಿತಿಯ ಅಧ್ಯಕ್ಷ   ಡಾ. ಕೆ. ಕಸ್ತೂರಿರಂಗನ್ ಮತ್ತು ಇತರ ಗಣ್ಯರು ಸಮಾರಂಭದಲ್ಲಿದ್ದರು.

***


(Release ID: 1748413) Visitor Counter : 201