ಉಪರಾಷ್ಟ್ರಪತಿಗಳ ಕಾರ್ಯಾಲಯ

ಜಾನಪದ ಕಲೆ, ಸಂಪ್ರದಾಯಗಳನ್ನು ಪುನರುಜ್ಜೀವಗೊಳಿಸಿ ಅವುಗಳನ್ನು ಸಾಮಾಜಿಕ ಬದಲಾವಣೆಯ ಸಾಧನಗಳನ್ನಾಗಿ ಬಳಸಿ: ಉಪರಾಷ್ಟ್ರಪತಿ ಶ್ರೀ ಎಂ.ವೆಂಕಯ್ಯ ನಾಯ್ಡು


ಭಾರತೀಯ ಜನಪದದ ವ್ಯಾಪಕ ದಾಖಲೀಕರಣ ಮತ್ತು ದತ್ತಾಂಶ ಸಂಗ್ರಹಕ್ಕೆ ಉಪರಾಷ್ಟ್ರಪತಿ ಕರೆ

‘ಜನಪದ ಜನಸಾಮಾನ್ಯರ ಸಾಹಿತ್ಯವಾಗಿದ್ದು, ಅದನ್ನು ಗ್ರಾಮೀಣ ಭಾರತದಿಂದ ಬೇರ್ಪಡಿಸಲಾಗದು’

ಶಾಲೆ ಮತ್ತು ಕಾಲೇಜುಗಳಲ್ಲಿ ನಡೆಸುವ ವಾರ್ಷಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಮತ್ತು ಎಲ್ಲ ಬಗೆಯ ಜಾನಪದ ಪ್ರಕಾರಗಳಿಗೆ ಒತ್ತು ನೀಡಬೇಕು: ಶ್ರೀ ಎಂ.ವೆಂಕಯ್ಯ ನಾಯ್ಡು

ಭಾರತೀಯ ಜಾನಪದ ಸಂಪ್ರದಾಯಗಳ ಆಚರಣೆಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶ್ರೀ ಎಂ.ವೆಂಕಯ್ಯ ನಾಯ್ಡು

Posted On: 23 AUG 2021 3:17PM by PIB Bengaluru

ಜಾನಪದ ಕಲೆ, ಸಂಪ್ರದಾಯಗಳನ್ನು ಪುನರುಜ್ಜೀವಗೊಳಿಸುವಂತೆ ಮತ್ತು ಅವುಗಳನ್ನು ಲಿಂಗ ತಾರತಮ್ಯ ನಿವಾರಣೆ ಮತ್ತು ಹೆಣ್ಣು ಮಕ್ಕಳ ರಕ್ಷಣೆಯಂತಹ ಸಾಮಾಜಿಕ ಕಾರಣಗಳನ್ನು ಪ್ರತಿಪಾದಿಸುವಂತೆ  ಅದರ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕು ಎಂದು ಉಪರಾಷ್ಟ್ರಪತಿ ಶ್ರೀ ಎಂ.ವೆಂಕಯ್ಯ ನಾಯ್ಡು ಇಂದು ಕರೆ ನೀಡಿದರು

ಹಲವು ಬಗೆಯ ಜಾನಪದ ಕಲಾ ಪ್ರಕಾರಗಳ ಜನಪ್ರಿಯತೆ ಕ್ರಮೇಣ ಕುಸಿಯುತ್ತಿರುವ ಬಗ್ಗೆ ತೀವ್ರ ಕಳಕಳಿ ವ್ಯಕ್ತಪಡಿಸಿದ ಅವರು, ಒಂದು ಕಾಲದಲ್ಲಿ ಜಾನಪದ ಕಲೆಗಳನ್ನು ರೂಢಿಸಿಕೊಂಡಿದ್ದ ಸಮುದಾಯಗಳು ಇಂದು ಕಣ್ಮರೆಯಾಗುತ್ತಿವೆ ಎಂದರು. ಅಂತಹ ಸಮುದಾಯಗಳ ಯುವಕರಿಗೆ ಕೌಶಲ್ಯ ಮತ್ತು ತರಬೇತಿ ನೀಡುವ ಮೂಲಕ ಕಲೆಗಳನ್ನು ಪುನಃಶ್ಚೇತನಗೊಳಿಸ ಬಹುದು ಮತ್ತು ಯುವಕರು ಜಾನಪದ ಮಾಧ್ಯಮಗಳನ್ನು ಸಾಮಾಜಿಕ ಬದಲಾವಣೆ ಮತ್ತು ವಿಚಾರ ಪ್ರತಿಪಾದನೆಗಳಿಗೆ ಸಾಧನಗಳನ್ನಾಗಿ ಬಳಸಿಕೊಳ್ಳಬೇಕು ಎಂದರು.

ನಮ್ಮ ದೇಶದ ಶ್ರೀಮಂತ ಜಾನಪದ ಪರಂಪರೆಯ ದತ್ತಾಂಶವನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಶ್ರೀ ಎಂ.ವೆಂಕಯ್ಯನಾಯ್ಡು ಬಲವಾಗಿ ಪ್ರತಿಪಾದಿಸಿದರು. “ಶ್ರವಣ- ದೃಶ್ಯ ಮಾಧ್ಯಮಗಳನ್ನು ಬಳಸಿ ವ್ಯಾಪಕ ದಾಖಲೀಕರಣ ಪ್ರಕ್ರಿಯೆ ಆಗಬೇಕು ಮತ್ತು ಆಧುನಿಕ ವಿಧಾನಕ್ಕೆ ಅದನ್ನು ಅನುವಾದಿಸುವ ಪ್ರಕ್ರಿಯೆಯಲ್ಲಿ ಅದರ ಮೂಲ ಸಾರ ಕಳೆದುಹೋಗದಂತೆ ಎಚ್ಚರಿಕೆ ವಹಿಸಬೇಕು’’ಎಂದು ಅವರು ಹೇಳಿದರು.

ಭಾರತೀಯ ಜನಪದ ಪರಂಪರೆಯ ಸಂಭ್ರಮಾಚರಣೆಯ ಕಾರ್ಯಕ್ರಮ ಉದ್ದೇಶಿಸಿ ವರ್ಚುವಲ್ ಮೂಲಕ ಮಾತನಾಡಿದ ಉಪರಾಷ್ಟ್ರಪತಿ ಅವರು, ಭಾರತದಲ್ಲಿ ಜನಪದ ಕಲೆ ಮತ್ತು ಮೌಖಿಕ ಸಂಪ್ರದಾಯಗಳ ಶ್ರೇಷ್ಠ ಇತಿಹಾಸ ಮತ್ತು ಶ್ರೀಮಂತ ವೈವಿಧ್ಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು ಮತ್ತು ಅವುಗಳನ್ನು ಜನಪ್ರಿಯಗೊಳಿಸಬೇಕಿದೆ ಎಂದು ಕರೆ ನೀಡಿದರು.  “ನಮ್ಮ ಭಾಷೆಯ ಸೂಕ್ಷ್ಮತೆ ಗಳುನಮ್ಮ ಸಾಂಪ್ರದಾಯಿಕ ಆಚರಣೆಗಳ ಸಮಗ್ರತೆ ಮತ್ತು ನಮ್ಮ ಪೂರ್ವಜರ  ಬುದ್ದಿವಂತಿಕೆ ಮೂಲತಃ ಜನಪದ ಕಲೆಗಿಳಿಂದ ಹರಿದುಬಂದಿದೆ. ಸ್ವಾತಂತ್ರ್ಯ ಹೋರಾಟದ ವೇಳೆ ನಮ್ಮ ಜನಸಮೂಹದಲ್ಲಿ ರಾಜಕೀಯ ಮತ್ತು ಸಾಮಾಜಿಕ ಜಾಗೃತಿಯನ್ನು ಮೂಡಿಸುವಲ್ಲಿ ಜಾನಪದ ಕಲೆಗಳು ಅತ್ಯಂತ ನಿರ್ಣಾಯಕವಾಗಿದ್ದವು. ಜನಪದ ಕಲೆ ನಿಜ ಅರ್ಥದಲ್ಲಿ ಜನ ಸಾಮಾನ್ಯರ ಸಾಹಿತ್ಯವಾಗಿದೆ’’ಎಂದು ಶ್ರೀ ಎಂ.ವೆಂಕಯ್ಯ ನಾಯ್ಡು ಹೇಳಿದರು.

ಭಾರತದಲ್ಲಿ ಜಾನಪದ ಇತಿಹಾಸವು ಹೇಗೆ ಬೆಳೆಯಿತು ಎಂಬುದನ್ನು ಗಮನಿಸಿದರೆ, ಗ್ರಾಮೀಣ ಪ್ರದೇಶದಲ್ಲಿ ಅದಕ್ಕೆ ಸಿಕ್ಕ ಪ್ರೋತ್ಸಾಹದಿಂದಾಗಿ ಎಂದ ಉಪರಾಷ್ಟ್ರಪತಿಗಳುಗ್ರಾಮೀಣ ಭಾರತ ಮತ್ತು ಜನಪದ ಕಲೆ ಒಂದನ್ನೊಂದು ಬೇರ್ಪಡಿಸಲಾಗದುಎಂದು ಹೇಳಿದರು. ನಮ್ಮ ನಾಗರಿಕ ಮೌಲ್ಯಗಳು ಮತ್ತು ಸಾಂಸ್ಕೃತಿಕ ಪರಂಪರೆ ಗ್ರಾಮೀಣ ಜೀವನದಲ್ಲಿ ಅಂತರ್ಗತವಾಗಿ ಬೆಸೆದುಕೊಂಡಿವೆ ’’ಎಂದು ಅವರು ಹೇಳಿದರು.

ಜನಪದ ಕಲೆ ನಮ್ಮ ಸಂಸ್ಕೃತಿಯ ಬಹುಮುಖ್ಯ ವೃತ್ತಿ ಎಂದು ಬಣ್ಣಿಸಿದ ಶ್ರೀ ವೆಂಕಯ್ಯ ನಾಯ್ಡು ಅವರು, ಹೆಚ್ಚಿನ ಮನ್ನಣೆ ಇಲ್ಲದ ಅಥವಾ ಪೋಷಣೆ ಇಲ್ಲದ ಕಾರಣ ನಮ್ಮ ಮೌಖಿಕ ಸಂಪ್ರದಾಯಗಳು ಅಳಿಸಿಹೋಗುತ್ತಿರುವುದರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.

ಜಾಗತೀಕರಣ ಮತ್ತು ಸಮೂಹ ಮಾಧ್ಯಮ ವಾಣಿಜ್ಯಗೊಂಡಿರುವುದರಿಂದ ಮುಖ್ಯವಾಹಿನಿಯಲ್ಲಿದ್ದ  ಕಲೆಗಳ ಅವನತಿಗೆ ಸಂಭವನೀಯ ಕಾರಣಗಳೆಂದು ಅವರು ಉಲ್ಲೇಖಿಸಿದರು. ‘ ಸಾಂಸ್ಕೃತಿಕ ಬೇರುಗಳನ್ನು ನಾವು ಶಾಶ್ವತವಾಗಿ ಕಳೆದುಕೊಂಡರೆ ಮತ್ತು ಮರಳಿ ಪಡೆಯಲಾಗದು’’ಎಂದು ಅವರು ಎಚ್ಚರಿಸಿದರು.

ನಮ್ಮ ಜಾನಪದ ಕಲೆಯನ್ನು ಪುನರುಜ್ಜೀವಗೊಳಿಸಲು ಮತ್ತು ಯುವ ಪೀಳಿಗೆಯನ್ನು ಜಾಗೃತಗೊಳಿಸಲು ಉಪರಾಷ್ಟ್ರಪತಿಗಳು ವಾರ್ಷಿಕ ಕಾರ್ಯಕ್ರಮಗಳಲ್ಲಿ ವಿಶೇಷವಾಗಿ ಶಾಲೆ ಮತ್ತು ಕಾಲೇಜುಗಳಲ್ಲಿ ಸ್ಥಳೀಯ ಮತ್ತು ಜನಪದ ಕಲಾ ಪ್ರಕಾರಗಳಿಗೆ ಹೆಚ್ಚಿನ ಒತ್ತು ನೀಡಬೇಕೆಂದರು. ಸಿನಿಮಾ, ಟಿವಿ ಮತ್ತು ರೇಡಿಯೋ ಮುಂತಾದ ಸಮೂಹ ಮಾಧ್ಯಮಗಳೂ ಸಹ ತಮ್ಮ ವಿಧಾನಕ್ಕೆ ಸೂಕ್ತವಾಗಿ ನಮ್ಮ ಜನಪದ ಕಲಾ ಪ್ರಕಾರದ ಆಯಾಮಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಮೂಲಕ ತಮ್ಮ ಪ್ರೇಕ್ಷಕರನ್ನು ತಲುಪಬಹುದು ಎಂದು ಹೇಳಿದರು.

ನಮ್ಮ ಜಾನಪದ ಕಲಾ ಪ್ರಕಾರಗಳನ್ನು ಪುನರುಜ್ಜೀವಗೊಳಿಸಲು ಮತ್ತು ಜನಪ್ರಿಯಗೊಳಿಸಲು ಆನ್ ಲೈನ್ ಮತ್ತು ಡಿಜಿಟಲ್ ವೇದಿಕೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಶ್ರೀ ಎಂ.ವೆಂಕಯ್ಯನಾಯ್ಡು ಸಲಹೆ ನೀಡಿದರು. ದೂರದರ್ಶನ ಮತ್ತು ಆಕಾಶವಾಣಿಯಂತಹ ಸಾರ್ವಜನಿಕ ಪ್ರಸಾರ ಸಂಸ್ಥೆಗಳು ತಮ್ಮ ಕಾರ್ಯಕ್ರಮಗಳಲ್ಲಿ ಜನಪದ ಕಲೆಗಳಿಗೆ ಹೆಚ್ಚಿನ ಪ್ರಾಮುಖ್ಯ ನೀಡಬೇಕೆಂದು ಅವರು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಉಪರಾಷ್ಟ್ರಪತಿಗಳು, ಜಾನಪದ ಕಲೆಯ ಅಧ್ಯಯನ ಮತ್ತು ಸಂಶೋಧನೆಗೆ ಮೀಸಲಾದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಹೆಸರಿನಲ್ಲಿ ಕರ್ನಾಟಕ ಜನಪದ ವಿಶ್ವವಿದ್ಯಾಲಯ ಸ್ಥಾಪಿಸಿರುವ ಕರ್ನಾಟಕ ಸರ್ಕಾರದ ಕ್ರಮವನ್ನು ಶ್ಲಾಘಿಸಿದರು. “ಇದು ನಮ್ಮ ಜಾನಪದ ಕಲಾ ಪ್ರಕಾರಗಳ ಬಗ್ಗೆ ಅತ್ಯಗತ್ಯವಾಗಿರುವ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಇದು ಮಾಡಲಿದೆ’’ ಎಂದು ಹೇಳಿದರು.

ಇತ್ತೀಚೆಗೆ ರಾಜ್ಯ ಸಂಸ್ಕೃತಿ ಇಲಾಖೆ ಮತ್ತು ಬಳ್ಳಾರಿ ಜಿಲ್ಲಾಡಳಿತ ತಮ್ಮ ಗೌರವಾರ್ಥ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪದರ್ಶನ ನೀಡಿದ ಕಲಾವಿದರ ಬಗ್ಗೆ ಉಪರಾಷ್ಟ್ರಪತಿ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷವಾಗಿ, ಹೊಸಪೇಟೆಯ 15ವರ್ಷದ ಮೀರಾ ಅವರ ಜನಪದ ಗೀತೆಗಳ ಗಾಯನ ಮತ್ತು ಶ್ರೀ ಸತ್ಯನಾರಾಯಣ ಮತ್ತು ತಂಡದ ಕರ್ನಾಟಕ ಜನಪದ ನೃತ್ಯ ಕಾರ್ಯಕ್ರಮಗಳನ್ನು ಅವರು ಶ್ಲಾಘಿಸಿದರು.

ಖ್ಯಾತ ಜಾನಪದ ಗಾಯಕ ಶ್ರೀ ದಾಮೋದರಂ ಗಣಪತಿ ರಾವ್, ಜಾನಪದ ಸಂಶೋಧಕ ಡಾ.ಸಗಿಲಿ ಸುಧಾರಾಣಿ, ಜಾನಪದ ಗಾಯಕ ಡಾ.ಲಿಂಗ ಶ್ರೀನಿವಾಸ್ ಮತ್ತು ಇತರೆ ಜನಪದ ಕಲಾವಿರುವ ಮತ್ತು ಉತ್ಸಾಹಿಗಳು ಕಾರ್ಯಕ್ರಮದಲ್ಲಿ ವರ್ಚುವಲ್ ರೂಪದಲ್ಲಿ ಭಾಗವಹಿಸಿದ್ದರು.

***



(Release ID: 1748284) Visitor Counter : 518